POLICE BHAVAN KALABURAGI

POLICE BHAVAN KALABURAGI

26 November 2011

GULBARGA DIST REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಠಾಣೆ : ಶ್ರೀ ಅನೀಲ ತಂದೆ ವಾಲ್ಮೀಕ ಚವ್ಹಾಣ ವಯ: 21 ವರ್ಷ ಉ: ಕ್ಲಿನರ್ ಸಾ: ಖಾನಾಪೂರ ತಾಂಡಾ ತಾ: ಬಾಲ್ಕಿ ಜಿ: ಬೀದರ ರವರು ನಮ್ಮ ಸ್ವಂತ ಲಾರಿ ನಂ: ಕೆಎ-36 / 2216 ನೇದ್ದು ಈಗ ಕಳೇದ 4-5 ದಿನಗಳಿಂದ ಭೋಪಾಲ ತೆಗನೂರ ಗ್ರಾಮದಿಂದ ಯಾದಗಿರಿಗೆ ಕಿರಾಯಿ ಮುಖಾಂತರ ಕಬ್ಬಿನ ಲೋಡ ಹಾಕಿಕೊಂಡು ಹೋಗಿ ಬಂದು ಮಾಡುತ್ತಿದ್ದೇವು. ದಿನಾಂಕ: 25-11-2011 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಮ್ಮ ಲಾರಿಯಲ್ಲಿ ಭೋಪಾಲ ತೆಗನೂರ ಗ್ರಾಮದಿಂದ ಕಬ್ಬಿನ ಲೋಡ್ ಮಾಡಿಕೊಂಡು ಯಾದಗಿರಿಗೆ ಹೊರಟ್ಟಿದ್ದೇವು. ಲಾರಿಯನ್ನು ಮೆಹಿಬೂಬ ತಂದೆ ಗಫೂರ ಸಾಬ ಮುಲ್ಲಾವಾಲೆ ಈತನು ಚಲಾಯಿಸುತ್ತಿದ್ದು ಸರಡಗಿ ಖಣಿ ಹತ್ತಿರ ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗಿತ್ತಿದ್ದರಿಂದ ಲಾರಿಯ ಹಿಂದುಗಡೆ ಎಡಗಡೆಯ ಟಾಯರ್ ಒಡೆದು ಲಾರಿ ವೇಗದ ಹತೋಟಿ ತಪ್ಪಿ ರಸ್ತೆಯ ಮೇಲೆ ಬೊರಲಾಗಿ ಪಲ್ಟಿಯಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 210/2011 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಸಿದ್ದಪ್ಪ ತಂದೆ ಬಸಪ್ಪ ಕೆಮಣ್ಣನವರ ಸಾ|| ಸನ್ನಾಳ ತಾ|| ಜಮಖಂಡಿ ಜಿ|| ಭಾಗಲಕೋಟ ರವರು ನಾನು ಘತ್ತರಗಾ ದೇವಿ ದರ್ಶನಕ್ಕಾಗಿ ಬಂದು ದರ್ಶನಕ್ಕಾಗಿ ಸಾಲಿನಲ್ಲಿ ನಿಂತಾಗ ನನ್ನ ಕೀಸೆಯಲ್ಲಿನ 11,000/- ರೂ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದಠಾಣೆ ಗುನ್ನೆ ನಂ. 194/11 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಎಸ್.ನರಸಿಂಹಲು ತಂದೆ ಲಕ್ಷ್ಮಣ ಸಾ|| ತಾಂಡೂರ ಜಿ|| ರಂಗಾರೆಡ್ಡಿ ರಾಜ್ಯ : ಆಂದ್ರ ಪ್ರದೇಶ ರವರು ನಾನು ಮತ್ತು ಸಂಜು ರಚೋಳ್ಳಿ, ಶಿವಪ್ಪಾ ಹರಿಜನ ಮೂರು ಜನರು ದೇವಿಗೆ ನಮಸ್ಕಾರ ಮಾಡುತ್ತಿದ್ದಾಗ ಯಾರೋ ಕಳ್ಳರು ನನ್ನಲ್ಲಿರುವ ನಗದು ಹಣ 4000/- ರೂ. ಸಂಜೀವನ ಹತ್ತಿರದಿಂದ 400/- ರೂ. ಹಾಗು ಶಿವಪ್ಪನ ಹತ್ತಿರದಿಂದ 400/- ರೂ. ಹೀಗೆ ಒಟ್ಟು 4800/- ರೂ. ಯಾರೋ ಕಳ್ಳರು ಜೇಬಿನಿಂದ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 193/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಜಕ್ಕು ತಂದೆ ದರೆಪ್ಪ ತೇಲಸಂಗಿ ಸಾ|| ಹಿರೆಬೆಣ್ಣೂರ ತಾ|| ಇಂಡಿ ಜಿ|| ಬಜಾಪೂರ ರವರು ನಾನು ದಿನಾಂಕ 25/11/2011 ರಂದು ಮಧ್ಯಾಹ್ನ ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ನದಿಯ ದಡದಲ್ಲಿ ಬಟ್ಟೆ, ಬಂಗಾರದ ಆಭರಣ, ಒಂದು ಮೋಬೈಲ ಹಾಗೂ ನಗದು ಹಣವನ್ನು ಬಟ್ಟೆಯಲ್ಲಿ ಇಟ್ಟು ಸ್ನಾನವನ್ನು ಮಾಡಲು ನೀರಿಗೆ ಇಳಿದಾಗ ಬಟ್ಟೆಯ ಮೇಲೆ ಇಟ್ಟಿದ್ದ ಆಭರಣ ನಗದು ಹಣ ಮತ್ತು ಮೋಬೆಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 195/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮನೆ ಎದುರು ನಿಲ್ಲಿಸಿದ ಮೋಟಾರ ಸೈಕಲ ಕಳ್ಳತನ:

ರಾಘವೇಂದ್ರ ನಗರ ಠಾಣೆ: ಶ್ರೀ ಭಗವಂತಪ್ಪ ತಂದೆ ಶ್ರೀಮಂತಪ್ಪ ರವರು ನಾನು ದಿನಾಂಕ 14-11-2011 ರಂದು ರಾತ್ರಿ ಮಹಾಲಕ್ಷ್ಮಿ ನಗರದಲ್ಲಿರುವ ನನ್ನ ಮನೆಯ ಮುಂದೆ ನಿಲ್ಲಿಸಿದ ಹೀರೊ ಹೊಂಡಾ ಸಿಡಿ-100 ಮೊಟಾರ್ ಸೈಕಲ್ ನಂ ಕೆಎ-32/ಕೆ-5106 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 November 2011

Gulbarga Dist Reported Crime

ಹಲ್ಲೆ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಕಾಂತಾಬಾಯಿ ಗಂಡ ಗೌರಿಶಂಕರ ದೇಶಟ್ಟಿ ಸಾ|| ದೇವಂತಗಿ ರವರು ನಮ್ಮ ಮನೆಗೆ ಪಕ್ಕದಲ್ಲಿ ಶರಣಬಸಪ್ಪ ತಂದೆ ತಿಪ್ಪಣ್ಣಾ ದೇಶಟ್ಟಿ ಮನೆ ಇದ್ದು ಇಬ್ಬರೂ ಅಣ್ಣತಮ್ಮಂದಿರಾಗಬೇಕು ಮನೆಯ ಮುಂದಿನ ಕಟ್ಟೆಯು ಇಬ್ಬರ ಮಧ್ಯದಲ್ಲಿದ್ದು ಮಹಾದೇವಿ ಗಂಡ ತಿಪ್ಪಣ್ಣಾ ಇವಳು ಬಟ್ಟೆ ಒಗೆದ ನೀರು ಕಟ್ಟೆಯ ಮೇಲೆ ಚೆಲ್ಲಿದ್ದು, ಚೆಲ್ಲಿದ್ದ ನೀರು ನಮ್ಮ ಮನೆಯ ಒಳಗೆ ಹೋಗಿದ್ದರಿಂದ ಕೇಳಿದ್ದಕ್ಕೆ ಶರಣಬಸಪ್ಪನು ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬಲಗೈ ಹಸ್ತದ ಹತ್ತಿರ, ಮುಂಗೈ ಹತ್ತಿರ ಮತ್ತು ಬಲಗೈ ಮುಂಡೆಗೆ ಹೊಡೆದು ಸಾದಾ ಮತ್ತು ಭಾರಿ ಗುಪ್ತ ಗಾಯಪಡಿಸಿದ್ದು ಮತ್ತು ಮಾನ ಭಂಗ ಮಾಡುವ ಉದ್ದೇಶದಿಂದ ಅವರ ತಲೆಯ ಕೂಡಲು ಹಿಡಿದ್ದು ಬಗ್ಗಿಸಿ ಬೆನ್ನ ಮೇಲೆ ಹೊಡೆದಿದ್ದು, ಮತ್ತು ಮಹಾದೇವಿ ಇವಳು ಸಹ ಹೊಡೆದು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 123/2011 ಕಲಂ.323, 324,354, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Gulbarga Dist Reported Crime

ಮಟಕಾ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 24/11/2011 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಮಟಕಾ ಆಡಿರಿ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಜೋತೆ ಪಿ.ಎಸ.ಐ ಶ್ರೀ ಎಸ್.ಎಸ್ ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯರಾದ ದೇವಿಂದ್ರಪ್ಪ ಎ.ಎಸ್.ಐ. ನಿಸಾರ ಅಹಮದ ಸಿಪಿಸಿ, ಶಿವರಾಯ ಸಿಪಿಸಿ ರವರು ಕುಡಿಕೊಂಡು ಮಟಾಕಾ ಬರೆಡುಕೊಳ್ಳುತ್ತಿದ್ದ ಶ್ರೀ ರಾಜಶೇಖರ ತಂದೆ ಶಂಕರ ಹೊನಗುಂಡ ಸಾ|| ನಿಂಬರ್ಗಾ ಮತ್ತು ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ|| ನಿಂಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 570/- ರೂ, ಪೆನ್ನು, ಹಾಗೂ ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಅಲ್ಲದೇ ಮಟಕಾ ಚೀಟಿ ತೆಗೆದುಕೊಳ್ಳುವರಾದ ರಪೀಕ ಸಾ|| ಬೈರಾಮಡಗಿ ಮತ್ತು ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇವರ ಮೇಲೆ ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ. 122/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.