POLICE BHAVAN KALABURAGI

POLICE BHAVAN KALABURAGI

26 October 2011

GULBARGA DIST REPORTED CRIME


ಮೊಟಾರ ಸೈಕಲ ಕಳ್ಳ ಬಂಧನ, 8 ಮೊಟಾರ ಸೈಕಲಗ ವಶ

ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಇಬ್ಬರೂ ಮೊಟಾರ ಸೈಕಲ ಕಳ್ಳರನ್ನು ಬಂಧಿಸಿ ಸದರಿಯವರಿಂದ ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಹಮೀದ ಹುಸೇನ @ ಅಬ್ದುಲ ಹಮೀದ ತಂದೆ ಅಬ್ದುಲ ರಶೀಧ ಸಾ|| ಹುಸೇನಿ ಆಲಂ ಮಜ್ಜಿದ ಹತ್ತಿರ ಮಹಿಬೂಬ ನಗರ ಗುಲಬರ್ಗಾ ಶಮೀರಖಾನ ತಂದೆ ಹಯ್ಯಾಜಖಾನ ಸಾ|| ಮಹಿಬೂಬ ನಗರ ಗುಲಬರ್ಗಾ ನೇದ್ದವರನ್ನು ಮೊಟಾರ ಸೈಕಲ ಕಳವಿನ ಪ್ರಕರಣದಲ್ಲಿ ಬಂಧಿಸಿ ತನಿಖೆಗೆ ಒಳ ಪಡಿಸಿದ ಕಾಲಕ್ಕೆ ನಗರದ ವಿವಿಧ ಸ್ಥಳಗಳಲ್ಲಿ ಒಟ್ಟು ವಿವಿಧ ಕಂಪನಿಯ 3 ಲಕ್ಷ ಮೌಲ್ಯದ ಮೊಟಾರ ಸೈಕಲಗಳನ್ನು ಕಳ್ಳತನ ಮಾಡಿರುತ್ತಾರೆ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

GULBARGA DIST REPORTED CRIMES

ಜಾನುವಾರುಗಳು ಸಾಗಿಸುತ್ತಿದ್ದ ಬಗ್ಗೆ :

ಜೇವರ್ಗಿ ಪೋಲಿಸ ಠಾಣೆ : ಶ್ರೀ ಸಿದ್ದಲಿಂಗಯ್ಯ ಸ್ವಾಮಿ ತಂದೆ ಕರಣಯ್ಯ ಸ್ವಾಮಿ ಸಾ: ಅಂದೋಲ ರವರು ನಾನು ಮತ್ತು ಜೈಪಾಲ ಅಂಗಡಿ , ಮಲ್ಲಿಕಾರ್ಜುನ ನಾಯಕೊಡಿ , ಮೂವರು ಚಿಗರಳ್ಳಿ ಕ್ರಾಸ ಹತ್ತಿರ ದಿನಾಂಕ: 25/10/2011 ರಂದು ಮುಂಜಾನೆ ನಿಂತಿರುವಾಗ ಶರಣಪ್ಪ ತಂದೆ ಗುಂಡಪ್ಪ ಪೂಜಾರಿ ಸಾ: ಗೌನಳ್ಳಿ ಸಂಗಡ ಇನ್ನೋಬ ಸಾ || ಗೋಗಿ ಇವರು 5 ಎತ್ತುಗಳನ್ನು ನೀರು ಆಹಾರ ನೀಡದೆ ಹಿಂಸೆಕೊಡುತ್ತಾ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 186/2011 ಕಲಂ 8, 9, 11, ಕರ್ನಾಟಕ ಪ್ರೇವೆನೆಶನ ಅಫ ಕೌವ ಸ್ಲಾಟರ ಅಂಡ್ಯ ಕಾಟಲ್ ಪ್ರವೇನಶನ ಅಕ್ಟ 1964 ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಭೀಮರಾವ ತಂದೆ ಭೀಮಶಪ್ಪ ರಾಮನಹಳ್ಳಿ ಸಾಃ 13 ನೇ ಕ್ರಾಸ್ ತಾರಫೇಲ್ ಗುಲಬರ್ಗಾ ರವರು ನಾನು ದಿನಾಂಕಃ 23/10/2011 ರಂದು ಬೆಳಗ್ಗೆ 09:00 ಗಂಟೆಗೆ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.ಎ 35 ಕೆ. 8849 ಅಃಕಿಃ 22,000/- ರೂ. ನೇದ್ದನ್ನು ಬಸವೇಶ್ವರ ಆವರಣದಲ್ಲಿ ಪ್ರತಿ ದಿನದಂತೆ ನಿಲ್ಲಿಸಿದ್ದು ನನ್ನ ಕೆಲಸ ಮುಗಿಸಿಕೊಂಡು ಮದ್ಯಾಹ್ನ 01:00 ಗಂಟೆಗೆ ಊಟಕ್ಕೆ ಮನೆಗೆ ಹೋಗಲು ಹೊರಗಡೆ ಬಂದಾಗ ನಾನು ನಿಲ್ಲಿಸಿ ಸ್ಥಳದಲ್ಲಿ ವಾಹನ ಇರಲಿಲ್ಲಾ. ಸುತ್ತ ಮುತ್ತ ಹುಡುಕಾಡಲಾಗಿ ಸಿಗಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 149/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ.ಶರಣಕುಮಾರ ತಂದೆ ವೀರಣ್ಣ ಬಿರಾದಾರ ಸಾ; ಬೇಲೂರ [ಕೆ] ತಾ;ಜಿ: ಗುಲಬರ್ಗಾ ರವರು ನಾನು ಹೊಲದಲ್ಲಿ ಕಬ್ಬಿನ ಬೆಳೆಗೆ ನೀರು ಹಾಯಿಸಲು ಬಂದಾರಿಗೊಂಟ ನೀರಿನ ಕಾಲುವೆ ಮಾಡಿದ್ದು, ಕಾಲುವೆಯಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ನೀರು ಸರಿಯಾಗಿ ಹೋಗುತ್ತಿಲ್ಲವಾದ್ದರಿಂದ ಕಾಲುವೆಯಲ್ಲಿ ಬೆಳೆದ ಹುಲ್ಲು ಕಿತ್ತಿ ಗಿಡಗಂಟಿಗಳನ್ನು ಕಡಿಯುತ್ತಿದ್ದಾಗ ಮಲ್ಲಣ್ಣನು ನನಗೆ ಬಂದಾರಿಯಲ್ಲಿ ಬೆಳೆದ ಗಿಡ ಯಾಕೆ ಕಡಿಯುತ್ತಿ ಸೂಳೆ ಮಗನೆ ಅಂತಾ ಬೈಯ್ದು ಜಗಳ ತೆಗೆದಿದ್ದು, ನಾಣು ಮನೆಗೆ ಬಂದು ತಿಳಿಸಿದ್ದು ದಿನಾಂಕ:25/10/2011 ರಂದು ಬೆಳೆಗ್ಗೆ 6-30 ಗಂಟೆಗೆ ನಾನು ಕಿರಾಣಾ ಅಂಗಡಿಗೆ ಹೋದಾಗ ಮಲ್ಲಣ್ಣ ಈತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತೆಕ್ಕಿ ಕುಸ್ತಿ ಬಿದ್ದು ಕಲ್ಲಿನಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಬಿಡಿಸಲು ಬಂದ ವೀರಣ್ಣ ಬಿರಾದಾರ ಮತ್ತು ಅಣ್ಣ ರೇವಪ್ಪ ಇವರಿಗೂ ಸಹ ಮಲ್ಲಣ್ಣನ ಹೆಂಡತಿ ಭಾಗೀರಥಿ ಮತ್ತು ಹಣಮಂತರಾಯ ಕೂಡಿ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 129/2011 ಕಲಂ 341.323.324.504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

25 October 2011

GULBARGA DIST REPORTED CRIME





ಕುಖ್ಯಾತ 6 ಜನ ಸರಗಳ್ಳರ ಬಂದನ, ಸುಮಾರು 12 ಲಕ್ಷ ರೂ ಬೆಲೆಬಾಳುವಬಂಗಾರ,ಆಭರಗಳು, ನಗದು,ಮೊಟಾರ ಸೈಕಲ ಮತ್ತು ಮೊಬಾಯಿಲಗಳ ವಶ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 6 ಜನ ಕುಖ್ಯಾತ ಸರಗಳ್ಳತನ ಮಾಡುವ ಜನರನ್ನು ಬಂಧಿಸಿದ್ದಾರೆ. ಸದರಿಯವರಿಂದ ಬಂಗಾರದ ಆಭರಣಗಳು ಸರಗಳ್ಳತನ ಮಾಡಲು ಬಳಸುತ್ತಿದ್ದು ಮೊಟಾರ ಸೈಕಲಗಳು, ಮೊಬಾಯಿಲ್ ಪೊನಗಳು, ಸಿಮ್ ಕಾರ್ಡ, ಚಾಕು, ವಗೈರೆ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 24/10/2011 ರಂದು ಮದ್ಯ ರಾತ್ರಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಐಗಳಾದ 1) ಶ್ರೀ ಬಿ.ಬಿ ಪಟೇಲ ಮತ್ತು 2) ಶ್ರೀ ರಾಜಣ್ಣ 3) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 4) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 5) ಶ್ರೀ ಸಂಗಮೇಶ ಪಿ.ಎಸ್.ಐ ಜೇವರಗಿ 6) ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಸಿದ್ರಾಮ ಹೆಚ್.ಸಿ, ಶಿವಪುತ್ರ ಸ್ವಾಮಿ ಹೆಚ್.ಸಿ, ಪ್ರಭಾಕರ ಪಿಸಿ, ಅಶೋಕ ಪಿಸಿ, ವೇದರತ್ನಂ ಪಿಸಿ, ಗಂಗಾಧರ ಪಿಸಿ, ಲೈಕೋದ್ದಿನ ಪಿಸಿ, ಇಮ್ತಿಯಾಜ ಎಪಿಸಿ, ಅರ್ಜುನ ಎಪಿಸಿ ಚಂದ್ರಕಾಂತ ಮುರುಡ ಪಿಸಿ, ಬಲರಾಮ ರಜಪುತ ಪಿಸಿ, ಮಶಾಕ ಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಸೈಯದ ಫಯಾಜ ತಂದೆ ಬಾಶುಮಿಯಾ ವಯ: 24 ವರ್ಷ ಗುಲಬರ್ಗಾ ಟಿಪ್ಪು @ ಇರ್ಫಾನ ತಂದೆ ಅಯೂಬ ಪಟೇಲ ಮಚಲಿವಾಲೆ ವಯ : 21 ವರ್ಷ ಉ: ಅಲೂಮಿನಿಯಂ ಸಾ|| ಖುಲ್ಲಾ ಬನಿ ಮಜೀದ ಹತ್ತಿರ ಗುಲಬರ್ಗಾ :ಮಹ್ಮದ ರಫೀಕ ತಂದೆ ಸಲೀಂ ಮಿಯಾ ಶೇಖ ವಯ: 20 ವರ್ಷ ಉ:: ವೆಲ್ಡಿಂಗ್ ಕೆಲಸ ಸಾ|| ನಯಾ ಮೊಹಲ್ಲಾ ಶಾಲೆ ಹಿಂದುಗಡೆ ಗುಲಬರ್ಗಾ ಮಹ್ಮದ ಅಖೀಲ್ ತಂದೆ ಮಹ್ಮದ ಜಾಫರ ಚುವೆವಾಲೆ ವಯ: 22 ವರ್ಷ ಉ:: ಮೇಕ್ಯಾನಿಕ ಸಾ|| ಲಾಲಗೇರಿ ಗುಲಬರ್ಗಾ ಮಹ್ಮದ ಅನ್ವರ ತಂದೆ ಮಹ್ಮದ ಹುಸೇನಿ ಖುರೆಸಿ ವಯ: 23 ವರ್ಷ ಉ: ಚಿಕನ ಅಂಗಡಿ ಸಾ: ಮಿಲನ್ ಚೌಕ ಗಾಜಿಫುರ ಗುಲಬರ್ಗಾ 6) ಶೇಖ್ ಜಾಫರ ತಂದೆ ಶೇಖ್ ಫರೀದ್ ವಯ: 19 ವರ್ಷ ಉ: ಪೆಂಟಿಂಗ ಕೆಲಸ ಸಾ: ಶಹಬಾಜ ಸ್ಕೂಲ್ ಹತ್ತಿರ ಇಸ್ಲಾಮಬಾದ ಕಾಲೋನಿ ಗುಲಬರ್ಗಾ ರವರನ್ನು ಹಿಡಿದುಕೊಂಡು ಠಾಣೆಗೆ ತಂದು ತನಿಖೆಗೆ ಒಳಪಡಿಸಿದಾಗ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ವಿಭೂತಿ ಕಾಲೋನಿ, ಜಿಡಿಎ ಕಾಲೋನಿ ಹನುಮಾನ ಮಂದಿರ ಹತ್ತಿರ, ಪ್ರಗತಿ ಕಾಲೋನಿ, ಡಾಕ್ಟರ್ಸ ಕಾಲೋನಿ ಬಸವೇಶ್ವರ ಕಾಲೋನಿ, ಗುಬ್ಬಿ ಕಾಲೋನಿ, ಪ್ರಶಾಂತ ನಗರ, ಬ್ಯಾಂಕ ಕಾಲೋನಿ ಮತ್ತು ಜಗತ ವೃತ್ತ ಬಳಿ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದು. ಸದರಿ ಆರೊಪಿತರಿಂದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ನಗದು, ಮೊಬಾಯಿಲ್ ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು. ಒಂದು ಚಾಕು, ಸಿಮ್ ಕಾರ್ಡಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಸಿದ್ದು ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.