POLICE BHAVAN KALABURAGI

POLICE BHAVAN KALABURAGI

01 October 2011

Gulbarga District reported Crimes

ಗೃಹಿಣಿಗೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ :
ಶ್ರೀ ಅರುಣ ತಂದೆ ಗೌರಿ ಶಂಕರ ತಿವಾರಿ ಸಾ:ನಾಗರಸುಗಾ ತಾ:ಅವುಸಾ ಜಿ:ಲಾತೂರ ರಾಜ್ಯ ಮಹಾರಾಷ್ಟ್ರ ಇವರು ಮಗಳಾದ ಅಶ್ವಿನಿ ಇವಳಿಗೆ ಗುಲಬರ್ಗಾದ ದೀಪಕ ತಿವಾರಿ ಇತನಿಗೆ ಹಿಂದೂ ಸಂಪ್ರದಾಯದಂತೆ ಈಗ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲಕ್ಕೆನಾವು ಸ್ವಖುಷಿಯಿಂದ 5 ತೊಲೆ ಬಂಗಾರ ಹಾಗೂ 65,000-00 ಹುಂಡಾ ಮತ್ತು ಗೃಹಬಳಕೆಯ ವಸ್ತುಗಳನ್ನು ಕೊಟ್ಟು ನಾವೇ ಮದುವೆ ಮಾಡಿಕೊಟ್ಟಿರುತ್ತೇವೆ. ಮುಂದೆ ಗಂಡ ಹೆಂಡತಿ ಒಂದು ವರ್ಷ ಮಾತ್ರ ಇಬ್ಬರೂ ಅನ್ಯೂನ್ಯವಾಗಿ ಸಂಸಾರ ಮಾಡಿರುತ್ತಾರೆ. ಮುಂದೆ ಅಳಿಯ ದೀಪಕ ಇತನು ದಿನಾಲೂ ಕುಡಿದು ಬಂದು ನನ್ನ ಮಗಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದನು. ಮತ್ತು ಮಗಳು ಗರ್ಭಿಣಿಯಾಗಿದ್ದಾಗ ಅಳಿಯನು ಕುಡಿದು ಬಂದು ಮಗಳ ಹೊಟ್ಟೆಗೆ ಹೊಡೆದಿದ್ದರಿಂದ ಮಗಳ ಗರ್ಭಕೋಶಕ್ಕೆ ಪರಿಣಾಮವಾಗಿ ಅವಳಿಗೆ ಮಕ್ಕಳಾಗಿರುವುದಿಲ್ಲ. ಮತ್ತು ಅತ್ತೆ, ಮಾವ, ನಾದಿನಿ ಇವರೆಲ್ಲರೂ ಸೇರಿ ನೀನು ಬಂಜಿ ಇದ್ದಿ, ಅಂತಾ ಹೊಡೆಯುವುದು, ಮಗಳಿಗೆ ಊಟ ಕೊಡದೇ ಉಪವಾಸ ಕೆಡುವಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರು. ತನ್ನ ಅಳಿಯ ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದರು. ತನ್ನ ಮಗಳು ದಿನಾಂಕ 30-09-11 ಮಧ್ಯ ರಾತ್ರಿ 2-00 ಗಂಟೆಗೆ ಮಗಳು ಫೋನ ಮಾಡಿ ನನಗೆ ನನ್ನ ಗಂಡನು ಬಹಳ ಹೊಡೆ ಬಡೆ ಮಾಡುತ್ತಿದ್ದಾನೆ. ನೀವು ಬಂದು ನನಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿ ನನ್ನ ಮಗನಿಗೆ ತಿಳಿಸಿದಳು. ಮುಂಜಾನೆ 9-30 ಗಂಟೆಯ ಸುಮಾರಿಗೆ ಅವರ ಕಡೆಯಿಂದ ಯಾರೋ ಒಬ್ಬರು ಫೋನ್ ಮಾಡಿ ನಿಮ್ಮ ಮಗಳು ಸತ್ತಿರುತ್ತಾಳೆ ಅಂತಾ ಹೇಳಿದರು.ಆಗ ನಾನು ಗುಲಬರ್ಗಾದ ನನ್ನ ಮಗಳ ಮನೆಗೆ ಬಂದು ನೋಡಲಾಗಿ ನನ್ನ ಮಗಳು ಅಶ್ವಿನಿ ಮೃತ ಪಟ್ಟಿದ್ದು, ನನ್ನ ಮಗಳ ಸಾವಿಗೆ ಅವಳ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲರೂ ಕಾರಣರಾಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾಶರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ದಿನಾಂಕ 29-09-2011 ರಿಂದ 30-09-2011 ರ ಮುಂಜನೆ 6-00 ಪಿ.ಎಮ ದ ಮಧ್ಯದ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಶ್ರೀ ಕೆ. ಚಕ್ಕರಪಾಣಿ ತಂದೆ ಪುಲ್ಲಯ್ಯಾ ಚೌಧರಿ ಸಾ: ರಾಣೇಶ ಪೀರ ದರ್ಗಾ ರಸ್ತೆ ಗುಲಬರ್ಗಾ ರವರ ಮನೆಯ ಹಿತ್ತಲದ ಬಾಗಿಲದ ಕೊಂಡಿ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 16000/ರೂ ಒಂದು ಮೊಬೈಲ್, ಅ.ಕಿ 2000/ರೂ, ಒಂದು ರೈಬಾನ್ ಕಂಪನಿಯ ಕನ್ನಡಕ ಅ.ಕಿ 2000/ರೂ, ಒಂದು ಟೈಟನ್ ಕಂಪನಿಯ ಕೈ ಗಡಿಯಾರ ಅ.ಕಿ 2000/ರೂ, ಒಂದು ಎ.ಟಿ.ಎಮ್. ಕಾರ್ಡ, ಒಂದು ಟಾಟಾ ಪೂರ್ಟಾನ ನೆಟ್ ಕಾರ್ಡ ಒಟ್ಟು ಅ.ಕಿ 22000/ರೂ ಬೆಲೆ ಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ ; ದಿನಾಂಕ 30-09-2011 ರಂದು ಮಧ್ಯಾಹ್ನ ಟಾಟಾ ಎ.ಸಿ.ಇ ಕೆ.ಎ-32 ಬಿ 1846 ನೇದ್ದರ ಚಾಲಕ ಶಿವಶರಣ @ ಶರಣು ತಂದೆ ಲಕ್ಷ್ಮಣ ಮಾದರ ಸಾ: ಸಾತಖೇಡ ಇತನು ಹೀರಾಪೂರ ಕ್ರಾಸ ರಿಮಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಮುಂದೆ ಹೊರಟ ಯಾವುದೋ ಒಂದು ಲಾರಿಗೆ ಓವರ ಟೇಕ ಮಾಡಿ ಹೋಗುವಾಗ ಟಾಟಾ ಎಸಿಇ ಟ್ರಾಲಿಯ ಮೇಲಿದ್ದ ಕಟ್ಟಿಗೆ ಬೆಲಗು ಹೋಗುವ ಲಾರಿಗೆ ತಗಲಿದ್ದರಿಂದ ವೇಗದಲ್ಲಿದ್ದ ಟಾಟಾ ಎಸಿಇ ಚಾಲಕ ಮಿಜಾಜ ನಗರ ಕ್ರಾಸಿನ ಹತ್ತಿರ ಇರುವ ರಿಂಗ ರೋಡಿನ ಮಧ್ಯೆ ಡಿವಾಡರದಲ್ಲಿ ಇದ್ದಂತಹ ಲೈಟಿನ ಕಂಬಕ್ಕೆ ಜೋರಗಿ ಡಿಕ್ಕಿ ಹೊಡೆದು ನಿಂತಿದ್ದು. ಲಾರಿ ಹಾಗೇ ಹೋಗಿದ್ದರಿಂದ ನಂಬರ ಕಂಡಿರುವುದಿಲ್ಲಾ. ಇದರಿಂದಾಗಿ ಚಾಲಕನಿಗೆ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು ಮತ್ತು ಲೈಟಿನ ಕಂಬದ ಸಿಮೆಂಟ ಕಟ್ಟೆ ಹೊಡೆದಿದ್ದು ಮತ್ತು ಲೈಟಿನ ಕಂಬ ಸ್ವಲ್ಪ ಬೆಂಡಾಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮಾರಣಾಂತಿಕ ಹಲ್ಲೆ ಪ್ರಕರಣ :
ನರೋಣಾ ಠಾಣೆ :ಶ್ರೀ. ವಿಜಯಕುಮಾರ ತಂದೆ ಸೋಮಶೇಖರ ಪಾಟೀಲ ಸಾ: ಕೊಟ್ಟರ್ಗಾ ಇವರು 30-09-2011 ರಂದು ಮುಂಜಾನೆ ಮನೆಯ ಮುಂದೆ ಇರುವ ಪಡಸಾಲಿಯ ಕಟ್ಟೆಯ ಮೇಲೆ ಕುಳಿತುಕೊಂಡು ಚಾಹಾ ಕುಡಿಯುತ್ತಿರುವಾಗ ನಮ್ಮೂರಿನ ರಾಜಪ್ಪ @ ರಾಜಕುಮಾರ ತಂದೆ ದೇವಿಂದ್ರಪ್ಪ ಹರಿಜನ ಸಾ: ಕೊಟ್ಟರ್ಗಾ ಹಾಗೂ ಅವನ ತಮ್ಮನಾದ ಅಮೃತ ತಂದೆ ದೇವಿಂದ್ರಪ್ಪ ಹರಿಜನ ಸಾ: ಕೊಟ್ಟರ್ಗಾ ಇಬ್ಬರು ಕೂಡಿಕೊಂಡು ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಹೊಲಕ್ಕೆ ಹೋಗುವ ದಾರಿಗೆ ಏಕೆ ಮುಳ್ಳ ಹೆಚ್ಚಿದಿ ಮುಳ್ಳ ತೆಗೆ ಅಂತಾ ಅಂದಾಗ ನಾನು ನನ್ನ ಹೊಲದಲ್ಲಿ ನಾನು ಮುಳ್ಳ ಹಚ್ಚಿದ್ದೇ ನೆ ನಾನೆಕೆ ತೆಗೆಯಬೇಕು ನಿನ್ನ ಹೊಲಕ್ಕೆ ದಾರಿ ಎಲ್ಲಿಂದ ಇದೆ ಅಲ್ಲಂದ ಹೋಗು ಅಂತಾ ಅಂದಿದಕ್ಕೆ ಕಲ್ಲಿನಿಂದ ಕೈಯಿಂದ ಬಡಿಗೆಯಿಂದ ಹೊಡೆದು ರಕ್ತಗಾಯ ಗುಪ್ತಗಾಯ ಮಾಡಿದ್ದು ಜಗಳ ಬಿಡಿಸಲು ಬಂದ ನನ್ನ ತಾಯಿ ತಾರಾಬಾಯಿ ಮತ್ತು ತಂಗಿ ಜಗದೇವಿ ಇವರಿಗು ಹೊಡೆದು ರಕ್ತಗಾ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕ್ರಣಗಳು :
ಫರತಾಬಾದ ಠಾಣೆ :
ಶ್ರೀ ರೇವಣಸಿದ್ದಪ್ಪಾ ತಂದೆ ಮಲ್ಲೇಶಪ್ಪಾ ಸಜ್ಜನ ಸಾ: ಹಾಗರಗುಂಡಗಿ ಇವರು ದಿನಾಂಕ: 30-9-2011 ರಂದು ಬೆಳಗ್ಗೆ ತಮ್ಮ ಹೊಲಕ್ಕೆ ಹೋಗಿದ್ದಾಗ ಅಲ್ಲಿ ಭೀಮಶಾ ಖನ್ನಾ ಹಾಗರಗುಂಡಗಿ ಈತನು 10 ಜೊತೆ ಎತ್ತುಗಳು ತಗೆದುಕೊಂಡು 11 ಆಳುಗಳ ಸಹಾಯದಿಂದ ಗಳೆ ಹೊಡೆಯುತ್ತಿದ್ದನು. ಆಗ ನಾನು ಭೀಮಶಾ ಖನ್ನಾ ಈತನಿಗೆ ಯಾಕಪ್ಪಾ ನನ್ನ ಸರ್ವೆ ನಂ: 15 ರಲ್ಲಿ 10 ಜೊತೆ ಎತ್ತುಗಳ ಸಹಾಯದಿಂದ ನನ್ನ ಹೊಲ ಬಿತ್ತನೆ ಮಾಡುತ್ತಿದ್ದಿ ಅಂದರೆ ಭೀಮಶಾ ಈತನು ನಾನು ಮಲ್ಲಿಕಾರ್ಜುನ ಸಜ್ಜನ ಈತನ ಜೊತೆ ಒಪ್ಪಂದ ಆಗಿದೆ ನಾನು ಈ ಹೊಲವನ್ನು ಲಿಸ ಮೇಲೆ ತೆಗೆದುಕೊಂಡಿದ್ದೇನೆ ನೀನು ಮುದುಕ ಮನುಷ್ಯ ಸುಮ್ನೆ ಹೋಗು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೊಡಲೆಯಿಂದ ಹೊಡೆಯಲಿಕೆ ಬಂದಿದ ಅವನ ಜೊತೆ ಇನ್ನೊಬ್ಬ ಬಾಬು ಬೈಜಾಪೂರ ಈತನು ಚಾಕು ತೆಗೆದುಕೊಂಡು ಬಂದಿದ್ದು ಅವರ ಆಳುಗಳಾದ 1.ರಾಮು ವೈಜಾಪೂರ, 2ಚೆನ್ನಪ್ಪಾ ವೈಜಾಪೂರ, 3.ರಾಣೋಜಿ ವೈಜಾಪೂರ, 4.ರಮೇಶ ವೈಜಾಪೂರ, 5.ಶಿವಶರಣಪ್ಪಾ ಅಡಕಿ, 6.ನಾಗಪ್ಪಾ ವೈಜಾಪೂರ, 7.ನಾಗಪ್ಪಾ ಕಂಟಿಕರ್ 8.ಶರಣಪ್ಪಾ ಕುದರಿಗಡ್ಡಿ, 9.ಶಿವಶರಣಪ್ಪಾ ಕುದರಿಗಡ್ಡಿ, 10.ನಾಗಪ್ಪ ಕಂಟಿಕರ್ ಕೆಳಗಿನಮನಿ 11.ಶರಣಮ್ಮ ಶಿವಶರಣಪ್ಪಾ ಅಡಕಿ ಎಲ್ಲರೂ ಸಾ: ಹಾಗರಗುಂಡಗಿ ಇವರುಗಳ ಸಹಾಯದಿಂದ ಕಾನೂನು ಬಾಹಿರವಾಗಿ ಹೊಲ ಬಿತ್ತನೆ ಮಾಡುತ್ತಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದನ ಹಿಪ್ಪರಗಾ ಠಾಣೆ :ಶ್ರೀ. ಶಿವಪುತ್ರಪ್ಪ ತಂದೆ ಹೊನ್ನಪ್ಪ ಮುಲಗೆ ಸಾ: ಸಕ್ಕರಗಾ ದಿನಾಂಕ 30-09-2011 ರಂದು ಮುಂಜಾನೆ ಪರಮೇಶ್ವರಮುಲಗೆ ಈತನು ತನ್ನ ಹೊಲದ ಕಂಪಿಯ ಮುಂದೆ ಪರಮೇಶ್ವರ ಮತ್ತು ಅವನ ತಮ್ಮಂದಿರಾದ ಸಿಧ್ದೇಶ್ವರ ಬಸವೇಶ್ವರ ತಂದೆಯಾದ ಚಾಂದರಾವ ನಿಂತಿದರು ನಾನು ನನ್ನ ಅಣ್ಣತಮ್ಮಂದಿರಾದ ಸಂಜುಕುಮಾರ ಶಶಿಕಾಂತ ಮಲ್ಲಿನಾಥ ಕೊಡಿಕೋಂಡು ಕೊಂಪಿಯ ಹತ್ತಿರ ಹೋಗಿ ನಾಣು ಪರಮೇಶ್ವರ ಈತನಿಗೆ ನೀನು ಯಾಕೆ ಬಂದಾರಿಯ ಮೇಲಿನ ಕಂಟಿಗಳ್ಳನ್ನು ಕಡಿದು ಕಲ್ಲು ಕಿತ್ತಿದ್ದಿಯ್ಯಾ ಅಂತಾ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳೀಂದ ಬೈದು ಕಲ್ಲಿನಿಂದ ಕೈಯಿಂದ ಹೋಡೆದು ರಕ್ತಗಾಯ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾದನ ಹಿಪ್ಪರಗಾ ಠಾಣೆ :ಶ್ರೀಪರಮೇಶ್ವರ ತಂದೆ ಚಾಂದರಾವ ಮುಲಗೆ ಸಾ: ಸಕ್ಕರಗಾ ದಿನಾಂಕ 30-09-2011 ರಂದು ಮುಂಜಾನೆ ಪರಮೇಶ್ವರ ಮತ್ತು ನನ್ನ ಅಣ್ಣ ತಮ್ಮಂದಿರಾದ ಸಿಧ್ದೇಶ್ವರ ಬಸವೇಶ್ವರ ತಂದೆಯಾದ ಚಾಂದರಾವ ಕೂಡಿ ನನ್ನ ಕೊಂಪಿಯ ಎದರು ನಿಂತಾಗ ಅಷ್ಟರಲ್ಲಿ ನಮ್ಮ ಎರಡನೇ ಅಣ್ಣತಮ್ಮಂದಿರಾದ ಸಂಜುಕುಮಾರ ಶಶಿಕಾಂತ ಮಲ್ಲಿನಾಥ ಶಿವಪುತ್ರ ಶಿವಕಾಂತ ಎಲ್ಲರೋ ಕೂಡಿ ಕೈಯಲ್ಲಿ ಬಡಿಗೆ ಕಲ್ಲು ಹಿಡಿದು ಆಕ್ರಮ ಕೂಟ ರಚಿಸಿಕೊಂಡು ನನ್ನ ಕೊಂಪಿಯ ಮುಂದೆ ಬಂದು ನೀನು ಏಕೆ ನನ್ನ ಬಂದಾರಿಯ ಕಂಟಿಗಳ್ಳನ್ನು ಕಡಿದಿರುತ್ತಿ ಅಂದಿಕ್ಕೆ ಅದಕ್ಕೆ ನಾನು ನನ್ನ ಬಂದಾರಿ ಕಂಟಿಗಳ್ಳನ್ನು ಕಡದಿರುತ್ತನೆ ಅಂದಿದಕ್ಕೆ ಅವನು ನನಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಕಲ್ಲಿನಿಂದ ಕೈಯಿಂದ ಹೋಡೆದು ರಕ್ತಗಾಯಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ಹೋದಿ ಕ್ರೀಮಿ ನಾಶಕ ಕುಡಿದು ಆತ್ಮ ಜತ್ಯೆ ಮಾಡಿಕೊಂಡ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ :
ಶ್ರೀ.ದೇವಿಂದ್ರ ತಂದೆ ನಾಗಪ್ಪ ಪೂಜಾರಿ ಸಾ: ಮೋಘಾ (ಬಿ) ರವರ ಹೆಂಡತಿ ಮಹಾದೇವಿ ಗಂಡ ನಾಗಪ್ಪ ಪೂಜಾರಿ ವಯ;48 ವರ್ಷ ಇವಳಿಗೆ ಸುಮಾರು 14 ರಿಂದ 15 ವರ್ಷಗಳಿಂದ ಹೊಟ್ಟೆ ನೊವು ದಮ್ಮು ಕೇಮ್ಮು ನೊವು ಇದ್ದು ಖಾಸಗಿ ಆಸ್ಪತ್ರಯಲ್ಲಿ ತೋರಿಸದರೂ ಆರಾಮವಾಗಿರುವದಿಲ್ಲಾ ದಿನಾಂಕ
29-09-2011 ರಂದು ನೊವು ಹೆಚ್ಚಾಗಿ ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಮದ್ಯಾನ 1 ಗಂಟೆಗೆ ಮೊಘಾ(ಬಿ) ಗ್ರಾಮದಲ್ಲಿ ತನ್ನ ಮನೆಯಲ್ಲಿ ಮನೆಯಲ್ಲಿದ್ದ ತೊಗರಿ ಬೇಳೆಗೆ ಹೊಡೆಯುವ ಕ್ರೀಮಿನಾಶಕ ಔಷದ ಕುಡಿದಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ಧುರು ಸಾರಾಂಶದ ಂಏಲಿಂದ ಮಾನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 September 2011

GULBARGA DIST REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ :ಶ್ರೀ ವೀರಣ್ಣ ತಂದೆ ಚನ್ನಬಸಪ್ಪಾ ಪಾಟೀಲ ಸಾ:ಆಳಂದ ಕಾಲೂನಿ ಗುಲಬರ್ಗಾ ರವರ ಮೋಮ್ಮಗಳಾದ ಕುಮಾರಿ ಸುಶೀಳಾ ತಂದೆ ಶರಣಪ್ಪ ಸಾ: ಅಂಕೇರಾ ತಾ: ಚಿತ್ತಾಪೂರ ಇವಳು 5 ವರ್ಷಗಳಿಂದ ನಮ್ಮ ಹತ್ತಿರ ಇರುತ್ತಾಳೆ ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಶಿವಾನಂದ ಹಡವೆ ಇವನು ನನ್ನ ಮಮ್ಮಗಳೋಂದಿ ಸಲುಗೆಯಿಂದ ಇದ್ದು ಅವಳನ್ನು ಹಿಂಬಾಲಿಸುವುದನ್ನು ಮಾಡುತ್ತಿದ್ದು ಇದಕ್ಕೆ ಬಸವರಾಜ ಪ್ರೋತ್ಸಾಹಿಸುತ್ತಿದ್ದು ಇದು ನಮಗೆ ಗೊತ್ತಾಗಿ ಸದರಿಯವರನ್ನು ಮನೆ ಬಿಡಿಸಿದ್ದು ನಮ್ಮ ಮನೆಯ ಹತ್ತಿರ ಬಾಡಿಗೆ ಮನೆ ಮಾಡಿಕೊಂಡು ಇದ್ದು ದಿನಾಂಕ 28-09-2011 ರಂದು 11 ಗಂಟೆಯ ಸುಮಾರಿಗೆ ಸುಶೀಲಾ ಇವಳು ಮನೆಯಿಂದ ಹೋದವಳು ಮರಳಿ ಬಂದಿರುವುದಿಲ್ಲಾ ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನನ್ನ ಮಮ್ಮಗಳನ್ನು ಶಿವಾನಂದ ಇತನು ಬಸವರಾಜನ ಕುಮ್ಮಕ್ಕಿನಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :

ನರೋಣಾ ಠಾಣೆ :ಶ್ರೀ ತಾಜೋದ್ದಿನ ತಂ ಮಹಿಬೂಬಸಾಬ ಮುಲ್ಲಾ ಸಾ:ಧಮ್ಮೂರ ಇವರ ಮಗನಾದ ನಸಿರೊದ್ದೀನ ಇದ್ದು, ನಸೀರೊದ್ದೀನ ಇತನು ಒಂದು ತರದ ಸಿಟ್ಟಿನ ಸ್ವಭಾವದವನು ಇದ್ದು ದಿನಾಂಕ 28-09-2011 ರಂದು ಬೆಳಿಗ್ಗೆ ಮನೆಯಲ್ಲಿ ನನ್ನ ಮಗ ಮತ್ತು ಸೋಸೆ ಇಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ವಿಷಯ ಗೊತ್ತಾಗಿ ನಾನು ಇಬ್ಬರಿಗೆ ಕೂಡಿಸಿಕೊಂಡು ಬುದ್ದಿ ಹೇಳಿದ್ದೆ, ದಿನಾಂಕ 29-09-2011 ರಂದು ಬೆಳಿಗ್ಗೆ 09 ಗಂಟೆಗೆ ನಾನು ಮತ್ತು ಮಗನಾದ ಮಶಾಖ ಹಾಗೂ ಮಾಲಾನಬಿ ಸೋಸೆಯಂದಿರು ಇಬ್ಬರು ಕೂಡಿಕೊಂಡು ಹೋಲದಲ್ಲಿ ಕಲಸಕ್ಕೆ ಹೋಗಿದೆವು. ಮನೆಯಲ್ಲಿ ನನ್ನ ಹೆಂಡತಿ ಜೋತೆಯಲ್ಲಿ ಮಗನಾದ ಖಮರೋದ್ದಿನ ಬಿಟ್ಟು ಹೋಗಿರುತ್ತೇನೆ. ನನ್ನ ಮಗ ನಸಿರೋದ್ದಿನ ಮನೆಗೆ ಬಂದು ಒಂದು ವರಿ ಗಂಟೆಗೆ ನಮಾಜ ಮಾಡಿಕೊಂಡು ತನ್ನ ಮಗನಿಗೆ ಕರೆದುಕೊಂಡು ಹೋರಗೆ ಹೋಗಿರುತ್ತಾನೆ. 02-45 ಗಂಟೆಗೆ ತನ್ನ ಫೊನದಿಂದ ನನ್ನ ಹಿರಿಯ ಮಗನ ಫೊನಿಗೆ ಇದು ಲಾಷ್ಟ ನಮಸ್ತೆ ಎಂದು ಹೇಳಿ ಪೋನ ಕಟ್ ಮಾಡಿದನು. ನಾನು ಮತ್ತು ಸೋಸೆಯಂದಿರು, ಮಕ್ಕಳು ಬಂದು ನೋಡಲು ತನ್ನ ಹೆಂಡತಿ ತಿಳಿಸಿದೆನೇಂದರೆ ಮಗ ಮಮ್ಮಗನಿಗೆ ಕರೆದುಕೊಂಡು ಹೋಗಿರುತ್ತಾನೆಂದು ಹೇಳಿದ್ದು ನಾವೆಲ್ಲರು ಊರಲ್ಲಿ ನೋಡಲು ಕಾಣಲಿಲ್ಲ ಹಾಗೆ ನಮ್ಮ ಹೋಲ ಸರ್ವೇ ನಂ 52 ರಲ್ಲಿ ಹೋಗಿ ನೋಡಲು ಬೆವಿನ ಗಿಡದಲ್ಲಿ ಮನುಷನ ಕಾಲು ಕಾಣುತ್ತಿದ್ದವು ಗೀಡದ ಹತ್ತಿರ ನೋಡಲಾಗಿ ನನ್ನ ಮಗ ನಸಿರೋದ್ದಿನ ಮಮ್ಮಗ ಖಮರೊದಿನ ಇಬ್ಬರು ಹಗ್ಗದಿಂದ ಕುತ್ತಿಗೆಗೆ ಉರಿಲು ಹಾಕಿಕೊಂಡಿದ್ದು ನೋಡಿದೇವು ನನ್ನ ಮಗನು ಮಮ್ಮಗನಿಗೆ ಕೋಲೆ ಮಾಡುವ ಇರಾದೆಯಿಂದ ಕುತ್ತಿಗೆಗೆ ಹಗ್ಗದಿಂದ ಉರಿಲು ಹಾಕಿ ಸಾಯಿಸಿ ತಾನು ಕೂಡಾ ಅದೆ ಹಗ್ಗದಿಂದ ಊರಿಲು ಹಾಕಿಕೊಂಡು ಆತ್ಮ ಹತ್ಯಾ ಮಾಡಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಹರಣ ಪ್ರಕರಣ ;
ಚಿಂಚೋಳಿ ಠಾಣೆ :
ಶ್ರೀ ತಿಮ್ಮಯ್ಯಾ ತಂದೆ ತಿಪ್ಪಯ್ಯಾ ವಡ್ಡರ ಸಾಃ ಚಂದಾಪೂರ ಇವರ ಮಗಳಾದ ಕು. ಸುಜಾತ ವ: 15ವರ್ಷ, ಇವಳಿಗೆ ದಿನಾಂಕ: 26-09-2011 ರಂದು ಮಧ್ಯಾಹ್ನ 1.ಸುಶೀಲಾಬಾಯಿ ಗಂಡ ಕಾಶು ಜಾ: ಲಂಬಾಣಿ 2.ಅನುಶಾ ಬಾಯಿ ತಂದೆ ಕಾಶು 3.ರೇಣುಕಾ ತಂದೆ ಮೋನು ಜಾ: ಲಂಬಾಣಿ 4. ಅಂಬು ತಂದೆ ಕಾಶು ಸಾ: ಎಲ್ಲರು ಗಂಗೂ ನಾಯಕ ತಾಂಡಾ ಚಂದಾಪೂರ ಕೂಡಿಕೊಂಡು ಮಗಳಿಗೆ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಅಪಹರಿಸಿಕೊಂಡು ಹೊಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಗೃಹಿಣಿ ಸಾವು :
ಗ್ರಾಮೀಣ ಠಾಣೆ :
ಶ್ರೀಮತಿ ಶರಣಮ್ಮ ಗಂಡ ಶಿವಕುಮಾರ ದುತ್ತರಗಾಂವ ಸಾ: ಶರಣ ಶಿರಸಗಿ ಗುಲಬರ್ಗಾ ಇವಳು ಮಾನಸಿಕ ಅಸ್ಥವಸ್ಥಳಿದ್ದು ದಿನಾಂಕ 17-9-11 ರಂದು ಮುಂಜಾನೆ ತನ್ನ ಮನೆಯಲ್ಲಿ ಅಡುಗೆ ಮಾಡುವ ಕಾಲಕ್ಕೆ ಆಕಸ್ಮಿಕ ಸ್ಟೋದ ಬೆಂಕಿ ಅವಳು ತೊಟ್ಟ ಬಟ್ಟೆಗೆ ಹತ್ತಿ ಮುಖಕ್ಕೆ ಕೈಗೆ ಎದೆಗೆ ಬೆನ್ನಿಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿದ್ದು ಅದರ ಉಪಚಾರ ಕುರಿತು ಅವಳನ್ನು ಬಸವೇಶ್ವರ ಆಸ್ಪತ್ರಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ, ಗುಣ ಮುಖ ಹೊಂದದೆ ಇಂದು ದಿನಾಂಕ 29-9-11 ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ನಾಗಮ್ಮ ಗಂಡ ಶಿವಕುಮಾರ ಮೂಲಗೆ ಸಾ: ಅಂಕಲಗಾ ತಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.