POLICE BHAVAN KALABURAGI

POLICE BHAVAN KALABURAGI

04 September 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಮಳಖೇಡ ಪೊಲೀಸ ಠಾಣೆ:
ಶ್ರೀ ದಶರಥ ತಂದೆ ಅಂಬಾಜಿರಾವ ಕದಮ ಉ|| ಆರ್.ಸಿ.ಎಫ್ ನಲ್ಲಿ ಕೆಲಸ ಸಾ|| ಲಕ್ಷ್ಮಣ ತಾಂಡಾ ಮಳಖೇಡ ರವರು ನಾನು ನನ್ನ ಹೀರೊ ಹೊಂಡಾ ಮೋಟಾರ ಸೈಕಲ್ ನಂ ಕೆಎ 32 ವಿ 0476 ನೇದ್ದನ್ನು ದಿನಾಂಕ 02/09/2011 ರಂದು ಸಾಯಂಕಾಲ ಮನೆಯ ಕಂಪೌಂಡ ಒಳಗಡೆ ನಿಲ್ಲಿಸಿದ್ದು ಬೆಳಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದ ಹೆಣ್ಣು ಮಗಳನ್ನು ಅಪಹರಿಸಿಕೊಂಡು ಹೋಗಿ ಜಭರಿ ಸಂಭೋಗ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀಮತಿ ನಾಗಮ್ಮಾ ಗಂಡ ಬೂದಯ್ಯಾ ಸ್ವಾಮಿ ಹಿರೇಮಠ ವಯ:19 ಸಾ: ರಾಂಪೂರ ತಾ: ಜೇವರ್ಗಿ ತವರೂರು ತೊಳನವಾಡಿ ತಾ: ಆಳಂದ ಜಿಲ್ಲಾ ಗುಲಬರ್ಗಾ ರವರನ್ನು ಹೆಚಸಿ 156, ಪಿಸಿ 27 ಮತ್ತು ಮಹಿಳಾ ಪಿಸಿ 188 ರವರು ಹೆಣ್ಣು ಮಗಳು ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ನಾಗಮ್ಮ ಗಂಡ ಬೂದಯ್ಯ ಸ್ವಾಮಿ ಇವಳನ್ನು ಪತ್ತೆ ಮಾಡಿ ಠಾಣೆಗೆ ತಂದು ಹಾಜರಪಡಿಸಿದಾಗ ಸದರಿಯವಳಿಗೆ ವಿಚಾರಣೆಗೆ ಒಳಪಡಿಸಿದಾಗ ಅವಳು ಹೇಳಿಕೆ ನೀಡಿದ್ದು ಸಾರಾಂಶ ಏನೆಂದರೆ ನನ್ನ ಮದುವೆ ಜೆವರ್ಗಿ ತಾಲೂಕಿನ ರಾಂಪೂರ ಗ್ರಾಮದ ಬೂದಯ್ಯ ಸ್ವಾಮಿಗೆ ಮದುವೆ ಮಾಡಿಕೊಟ್ಟಿದ್ದು 5 ದಿವಸಗಳ ನಂತರ ತವರು ಮನೆಗೆ ಬಂದಾಗ ನಾಗರಪಂಚಮಿ ಹಬ್ಬಕ್ಕೆಂದು ನನ್ನ ಸೊದರತ್ತೆ ಬೊದನ ಗ್ರಾಮಕ್ಕೆ ಕರೆದುಕೊಂಡು ಹೊಗಿದ್ದು ಅಲ್ಲಿ ಗಣಪತಿ ತಂದೆ ಶರಣಪ್ಪ ಕಾಂದೆ ನನಗೆ ಮಾತಾಡಿಸುವದು ಮಾಡುತ್ತಿದ್ದ ದಿನಾಂಕ 07/08/2011 ರಂದು ಬೊದನ ಗ್ರಾಮದಿಂದ ತವರು ಮನೆಗೆ ಹೊದಾಗ ನನ್ನ ಗಂಡ ಕರೆಯಲು ಬಂದಿದ್ದು ದಿನಾಂಕ 08/08/2011 ರಂದು ನನ್ನ ಗಂಡನೊಂದಿಗೆ ಗುಲಬರ್ಗಾಕ್ಕೆ ಬಂದಾಗ ಬಸ್ ನಿಲ್ದಾಣದಲ್ಲಿ ಬಸ್ ನೊಡಲು ಹೊದಾಗ ಗಣಪತಿ ಇತನು ನನ್ನ ಕೈ ಇಡಿದು ಜಗ್ಗಾಡಿ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಪುಸಲಾಯಿಸಿ ಕಲ್ಲಂಗರಗಾ ಗ್ರಾಮದ ನಾಗಣ್ಣ ಕೊಳ್ಳುರು ಇವರ ಹೊಟೆಲದಲ್ಲಿ ಒಯ್ದು 7-8 ದಿವಸ ಅಲ್ಲೆ ಇಟ್ಟು ಜಬರ ದಸ್ತಿಯಿಂದ ರಾತ್ರಿ ವೇಳೆಯಲ್ಲಿ ಸಂಭೋಗ ಮಾಡಿರುತ್ತಾನೆ. ನಾನು ಕಾಣೆಯಾಗಿರುತ್ತೆನೆ ಅಂತಾ ನಮ್ಮ ಅಣ್ಣ ಕೇಸ ಮಾಡಿಸಿರುವ ವಿಷಯ ಗೊತ್ತಾಗಿ ಗಣಪತಿ ಕಾಂದೆ ಇತನು ನನ್ನನ್ನು ದಿ: 22/08/2011 ರಂದು ಬೆಂಗಳೂರಕ್ಕೆ ಕರೆದುಕೊಂಡು ಹೊಗಿ ಅಲ್ಲಿ ಒಂದು ಆಫೀಸ ಮುಂದೆ ನಿಲ್ಲಿಸಿ ತಿನ್ನಲು ಎನಾದರು ತರುತ್ತೆನೆ ಅಂತಾ ಹೇಳಿ ಹೊದವನು ಇಲ್ಲಿಯವರೆಗೆ ಬಂದಿಲ್ಲ. ನಾನು ಅಳುತ್ತಿರುವದನ್ನು ನೊಡಿ ಅನಾಥ ಹೆಣ್ಣು ಮಕ್ಕಳ ಕೇಂದ್ರದವರು ನನ್ನನ್ನು ಕರೆದುಕೊಂಡು ಹೊಗಿದ್ದು, ಅಶೋಕ ನಗರ ಪೊಲೀಸ್ ರವರು ಗುಲಬರ್ಗಾಕ್ಕೆ ಕರೆದುಕೊಂದು ಬಂದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ ಮಹ್ಮದ ಹಪೀಜ ತಂದೆ ಮಹ್ಮ ಅನ್ವರ ಮಗರಬ ವ: 26 ವರ್ಷ ಉ:ಳ ಆಟೋ ಚಾಲಕ ಸಾ; ಮನೆ ನಂ 9-907-ಎ ಕಂಗಜಪೂರ ಶಹಾಬಜಾರ ಗುಲಬರ್ಗಾ ರವರು ನನ್ನ ಆಟೋ ನಂ ಕೆಎ 32 ಬಿ-3848 ನೇದ್ದರಲ್ಲಿ ಆಳಂದ ಚೆಕ್ಕ ಪೋಸ್ಟ್‌ ಹತ್ತಿರ ನಿಂತಾಗ ಒಬ್ಬಳು ಪ್ಯಾಸೆಂಜರ್‌ ವಯಸ್ಸಾದ ಹೆಣ್ಣು ಮಗಳು ಮಲ್ಲಿಕಾರ್ಜುನ ನಗರಕ್ಕೆ ಹೋಗಬೇಕು ಅಂತಾ ಕೇಳಿದಾಗ ಅವರನ್ನು ಕರೆದುಕೊಂಡು ಹುಮನಾಬಾದ ರಿಂಗ ರೋಡ ಕಡೆಗೆ ಹೊರಟಾಗ ಹಿಂದಿನಿಂದ ಟೆಂಪೊ 407 ವಾಹನ ನಂಬರ ಕೆಎ 41 7367 ನೇದ್ದ ಚಾಲಕ ತನ್ನ ವಾಹನವನ್ನು ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ಅಟೋದಲ್ಲಿದ್ದ ಹೆಣ್ನು ಮಗಳಗೆ ರಕ್ತಗಾಯವಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಗಜೇಂದ್ರ ಸಿ.ಪಿ.ಸಿ 549 ಬ್ರಹ್ಮಪೂರ ಠಾಣೆರವರು ನಾನು ಮತ್ತು ದೇವಿಂದ್ರ ಪಿಸಿ ದಿನಾಂಕ:03/09/11 ರಂದು ಸಾಯಂಕಾಲ ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋರಟಾಗ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರುಗಡೆ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅಕ್ಷಯ ತಂದೆ ಜೇಲರ ಕಾಂಬಳೆ, ವಯ|| 19 ವರ್ಷ, ಸಾ|| ಮಾಂಗರವಾಡಿ ಗಲ್ಲಿ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ

ಅಶೋಕ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಶ್ಯಾಮರಾವ ಬಾಳದೆ ಕಪಿಲಾ ಲಾಡ್ಜದಲ್ಲಿ ರಿಸಿಪ್ಸನ್ ಮ್ಯಾನೆಜರ್ ಸಾ|| ಟೆಂಗಳಿ ಹಾ.ವ : ಬನಶಂಕರಿ ಲೇಔಟ ಬ್ರಹ್ಮಪೂರ ಗುಲಬರ್ಗಾ ರವರು ನಮ್ಮ ಲಾಡ್ಜಗೆ ದಿನಾಂಕ 31/08/2011 ರಂದು ಬೆಳಿಗ್ಗೆ ಮಹ್ಮದ ಮೈಸಾದ ತಂದೆ ಅಬ್ದುಲ ಖಾದರ ಸಾ: ಕಲ್ಲಗುಂಡಿ ಹೌಸ ಪೊಸ್ಟ ಸಂಪಾಜಿ ಗ್ರಾಮ ಸುಳ್ಯಾ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಎನ್ನುವವರು ಬಂದು ರೂಮ ಕೇಳಿದ್ದರಿಂದ ನಮ್ಮ ಲಾಡ್ಜಿನ 3ನೇ ಅಂತಸ್ತಿನಲ್ಲಿರುವ ರೂಮ ನಂ.606 ನೇದ್ದನ್ನು ಕೊಟ್ಟಿರುತ್ತೆನೆ. ಎರಡು ದಿವಸದಿಂದ ರೂಮಿನ ಬಾಗಿಲು ತೆರೆಯುವಂತೆ ನಾನು ಮತ್ತು ನಮ್ಮ ಲಾಡ್ಜ ಹುಡುಗರಾದ ಶ್ರೀನಿವಾಸ ಹಾಗು ಅನೀಲ ಎಲ್ಲರೂ ಸಪ್ಪಳ ಮಾಡಿದರು ಸಹ ಬಾಗಿಲು ತೆರೆಯಲಿಲ್ಲ ಮತ್ತು ರೂಮಿನಿಂದ ವಾಸನೆ ಬರುತ್ತಿದ್ದರಿಂದ ಈ ಬಗ್ಗೆ ನಮ್ಮ ಲಾಡ್ಜ ಮಾಲಿಕ ರಮಾನಂದ ಭಂಡಾರಿ ರವರಿಗೆ ವಿಷಯ ತಿಳಿಸಿರುತ್ತೆವೆ. ಅವರು ಬಂದ ನಂತರ ಪೊಲೀಸರ ಸಮಕ್ಷಮದಲ್ಲಿ ಬಾಗಿಲು ಮುರಿದು ನೊಡಲಾಗಿ, ಸದರಿ ವ್ಯಕ್ತಿ ರೂಮಿನ ಒಳಗಡೆ ಛತ್ತಿಗೆ ಇರುವ ಫ್ಯಾನಿಗೆ ಬೇಡ ಶೀಟದಿಂದ ನೇಣು ಹಾಕಿಕೊಂಡು ಸತ್ತಿರುತ್ತಾನೆ. ಬಾಡಿ ಡಿಕಂಪೊಜ ಆಗಿರುತ್ತದೆ. ರೂಮಿನಲ್ಲಿ ಮೃತ ಮಹ್ಮದ ಮೈಶಾದ ಇತನು ತನ್ನ ಸಾವಿನ ಬಗ್ಗೆ "ಡೇತ್‌‌ ನೋಟ" ದಲ್ಲಿ ಪ್ರೇಮ ವೈಫಲ್ಯದಿಂದ ಆತ್ಮ ಹತ್ಯೆ ಮಾಡಿದ್ದ ಬಗ್ಗೆ ಬರೆದು ಇಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಯು.ಡಿ.ಅರ್ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

03 September 2011

GULBARGA DIST REPORTED CRIMES

ತಂದೆಯ ಮೇಲೆ ಹಲ್ಲೆ :
ಅಶೋಕ ನಗರ ಠಾಣೆ :
ಶ್ರೀ ರಾಮಚಂದ್ರ ತಂದೆ ತಿಪ್ಪಣ್ಣ ಬೋಲಾ ಸಾ: ಮನೆ ನಂ. 193 ಕಾಂತಾ ಕಾಲೋನಿ ಗುಲಬರ್ಗಾ ರವರು ನನಗೆ ಸಂತೋಷ ಎಂಬುವ ಮಗನಿದ್ದು ರಾತ್ರಿ ಸರಾಯಿ ಕುಡಿದು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಯಾಕೇ ಬಯ್ಯುತ್ತಿ ಅಂತಾ ಕೇಳಿದಕ್ಕೆ, ನನಗೆ ಕುಡಿಯಲಿಕ್ಕೆ ಹಣ ಕೊಡಲು ಕೇಳಿದ್ದು, ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದಕ್ಕೆ, ಮನೆಯಲ್ಲಿದ್ದ ಹತೋಡಿಯಿಂದ ನನ್ನ ಎಡಗಡೆ ಕೈ ಮೇಲೆ ಹೊಡೆದು ರಕ್ತ ಗಾಯ ಪಡಿಸಿದ್ದು, ನನ್ನ ಹೆಂಡತಿ ಬಿಡಿಸಲು ಬಂದಾಗ ಅವಳಿಗೂ ಕೂಡಾ ಅವಾಚ್ಯವಾಗಿ ಬೈಯುತ್ತಿದ್ದಾಗ ನನ್ನ ಹೆಂಡತಿ ಚಿರಾಡಿದಾಗ ನನಗೆ ಹೊಡೆಯುವುದನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ನೇತಾಕಿ ಪ್ಯಾಂಟ ನಲ್ಲಿಟ್ಟಿದ್ದ 17,500-00 ರೂ ಕಳ್ಳತನ :
ರಾಘವೇಂದ್ರ ನಗರ ಠಾಣೆ:
ನ್ಯೂ ರಾಘವೇಂದ್ರ ಕಾಲೋನಿಯ ರವಿಕುಮಾರ ಬಬಲಾದಿ ಇವರು ನನ್ನ ಮನೆಯಲ್ಲಿ ಹ್ಯಾಂಗರಕ್ಕೆ ಪ್ಯಾಂಟ್ ಹಾಕಿ ಮಲಗಿಕೊಂಡಿದ್ದು, ದಿನಾಂಕ 03-09-2011 ರ ಮಧ್ಯ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಕಿಟಕಿಗೆ ಹಾಕಿದ ಜಾಲಿ ಹರಿದು, ಕಟ್ಟಿಗೆಯಿಂದ ಪ್ಯಾಂಟ್ ಹೊರಗೆ ತೆಗೆದುಕೊಂಡು ಪ್ಯಾಂಟನಲ್ಲಿದ್ದ 17,500/-ರೂಪಾಯಿ ಕಳುವು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸೇಡಂ ಠಾಣೆ : ಶ್ರೀಮತಿ. ಶಾಂತಾಬಾತಿ ಗಂಡ ದಿ. ಶಾಮರಾವ ಹಂಗನಳ್ಳಿಕರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರುವಾರ ರವರು ನಮ್ಮ ಶಾಲೆಯ ವ್ಯಾಸಾಂಗ ಕೋಣೆಯ ಕೀಲಿ ಮುರಿದು ಕಟ್ಟಿಗೆ ಅಲಮಾರಿಯಿಂದ ಸಾಮಸ್ಯಾಂಗ ಕಲರ್ ಟೀವಿ 29 ಇಂಚ್ ಅಂ.ಕಿ. 18000/- ರೂಪಾಯಿ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಹಲ್ಲೆ ಮಾಡಿ, ಮಾನಭಂಗಕ್ಕೆ ಪ್ರಯತ್ನ
ರಾಘವೇಂದ್ರ ನಗರ ಪೊಲೀಸ್ ಠಾಣೆ

ಫಿರ್ಯಾದಿ ಶ್ರೀಮತಿ ಶ್ರೀದೇವಿ ಗಂಡ ಶಿವಶರಣಪ್ಪ ಬೆಳಮಗಿ ರವರು ನಾನು ಸುಮಾರು 15 ದಿವಸಗಳ ಹಿಂದೆ ಯಂಕವ್ವನ ಮಾರ್ಕೆಟದಲ್ಲಿರುವ ಸಂಜು ಸೋನಾರ ಎಂಬುವವನ ಬಂಗಾರದ ಅಂಗಡಿಯಲ್ಲಿ ಬೆಳ್ಳಿಯ 9 ಹರಳು ಇದ್ದ ಬ್ರಾಸಲೆಟ್ ನಮೂನೆಯ ಕೈ ಮೇಲೆ ಕಟ್ಟಿಕೊಳ್ಳುವಗೋಸ್ಕರ ನನ್ನ ಮಗನ ಸಲುವಾಗಿ 5000/-ರೂ ರೂಪಾಯಿಗೆ ಖರಿದಿಸಿದ್ದು, ಅದನ್ನು ತನ್ನ ಮಗ ಕಟ್ಟಿಕೊಳ್ಳುವದಿಲ್ಲಾ ಅಂತ ಹೇಳಿದ್ದಕ್ಕೆ, ಮರಳಿ ದಿನಾಂಕ 02-09-2011 ರಂದು ಬೆಳಿಗ್ಗೆ ಬಂಗಾರದ ಅಂಗಡಿಯ ಸಂಜು ಈತನಿಗೆ ಬೆಳ್ಳಿಯ ಬ್ರಾಸಲೆಟ್ ಮರಳಿ ಕೊಡಲು ಹೋದಾಗ, ಅವಾಚ್ಯವಾಗಿ ಬೈದು ಕೈ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದದ್ದರಿಂದ ಮೇಲಿನ ತುಟಿ ಒಡೆದು ರಕ್ತ ಸೋರುತ್ತಿದ್ದು, ಸದರಿ ಫಿರ್ಯಾದಿದಾರಳಿಗೆ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :
ಆಳಂದ ಪೊಲೀಸ ಠಾಣೆ:
ದಿನಾಂಕ; 02-09-2011 ರಂದು ಮಧ್ಯಾಹ್ನ ದರ್ಗಾ ಬೇಸದಲ್ಲಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಪಿಐ ಆಳಂ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಲ್ಲಪ್ಪಾ ತಂದೆ ತಿಪ್ಪಣ್ಣ ಇತನನ್ನು ವಶಕ್ಕೆ ತೆಗೆದುಕೊಂಡು ನೋಡಲಾಗಿ 1 ರೂ ಗೆ 80 ರೂ ಬರುತ್ತದೆ ಅಂತಾ ಜನರಿಗೆ ಮೋಸ ಮಾಡುತ್ತಾ ಚೀಟಿಗಳನ್ನು ಬರೆದುಕೊಂಡಿದ್ದವುಗಳನ್ನು ವಶಪಡಿಸಿ ನಗದು ಹಣ 400-0 ರೂ ಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ರೋಜಾ ಪೊಲೀಸ್ ಠಾಣೆ :
ಶ್ರೀ ಮಹಿಬೂಬ ಶಹಾ ತಂದೆ ಮಹ್ಮದ ಶಹಾ ಸಾ:ಡಂಕಾಕ್ರಾಸ್ ಗುಲಬರ್ಗಾ ರವರು ನಾನು ಸಡಿ ಪಾಯನ ಗಲ್ಲಿ ರೋಡಿನ ಬದಿಯಲ್ಲಿ ಅಟೋ ನಂ ಕೆಎ 32 ಎ 856 ಅ.ಕಿ 80000/-ರೂಪಾಯಿ ನೇದ್ದನ್ನು ನಿಲ್ಲಿಸಿ ಹೋಟೆಲ್ ದಲ್ಲಿ ಚಹಾ ಕುಡಿದುಕೊಂಡು ಮರಳಿ ಬಂದು ನೋಡಲು ಯಾರೋ ಕಳ್ಳರು ನನ್ನ ಆಟೋ ಕಳವು ಮಾಡಿಕೊಂಡು ಹೋಗಿದ್ದು ಈ ವಿಷಯ 10:00 ಪಿಎಮ್ ಕ್ಕೆ ರೋಜಾ ಠಾಣೆಯಲ್ಲಿ ಮೌಖಿಕವಾಗಿ ತಿಳಿಸಿ 11:45 ಗಂಟೆಗೆ ಆಟೋ ಹುಡುಕಾಡುತ್ತ ಡಂಕಾಕ್ರಾಸ್ ಹತ್ತಿರ ಬಂದು ನಿಂತಾಗ ಕಳುವಾದ ನನ್ನ ಆಟೋ ಒಬ್ಬನು ತೆಗೆದುಕೊಂಡು ಹೋಗುತ್ತಿದ್ದು ಬೆನ್ನು ಹತ್ತಿ ಹಿಡಿದುಕೊಳ್ಳುವಷ್ಟರಲ್ಲಿ ಕಳುವು ಮಾಡಿದ ಕಳ್ಳ ಆಟೋದಿಂದ ಓಡಿಹೋಗಲು ಯತ್ನಿಸಿದಾಗ ಆಟೋದ ರಾಡ್ ತಲೆಗೆ ಬಡೆದು ಮತ್ತು ರೋಡಿನ ಮೇಲೆ ಬೋರಲಾಗಿ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾನೆ. ಕಳವು ಮಾಡಿದ ವ್ಯಕ್ತಿಯ ಹೆಸರು ಅಯ್ಯುಬ ತಂದೆ ಖಾಜಾಸಾಬ ಅಂತಾ ಹೆಸರು ಗೊತ್ತಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜಭರಿ ಸಂಭೋಗ :

ವಾಡಿ ಠಾಣೆ:ಶ್ರೀಮತಿ ಸಾವಿತ್ರ ಗಂಡ ಸುರೇಶ ಕೋಂಡಯ್ಯ ಸಾ|| ಇಂಗಳಗಿ ಗ್ರಾಮ ರವರು ನಾನು ನನ್ನ ಗ್ರಾಮದ ಮಲ್ಲು ತಂದೆ ಹಣಮಂತ ನಾಲವಾರ ಇತನ ಹತ್ತಿರ ಖಣಿ ಕೆಲಸಕ್ಕೆ ಹೋಗುತ್ತಿದ್ದು ಆತನ ಸ್ನೇಹ ಬೆಳೆದು ಆತನು ಸಲುಗೆಯಿಂದ ಮಾತನಾಡಿ ನಿನ್ನನ್ನು ಪ್ರತಿ ಮಾಡುತ್ತೆನೆ ಅಂತಾ ಹೇಳಿ ನಂಬಿಸಿ ಖಣಿ ಕೆಲಸಕ್ಕೆ ಹೋದಾಗ ಜಭ ರಿ ಸಂಭೋಗ ಮಾಡಿರುತ್ತಾನೆ. ನಂತರ ಒಂದು ವರ್ಷದ ಹಿಂದೆ ಹಲಕಟ್ಟಾ ಗ್ರಾಮದ ಸುರೇಶ ಇತನೊಂದಿಗೆ ಮದುವೆ ಮಾಡಿದ್ದು. ನನ್ನ ಗಂಡನು ಸಂಶಯ ಬಂದು ನನಗೆ ತವರು ಮನೆಗೆ ಕಳುಹಿಸಿ ಕೊಟ್ಟಿದ್ದು , ಇಂಗಳಗಿ ಗ್ರಾಮದಲ್ಲಿರುವ ಗಿರಿ ಪವಾರ ಸ್ಟೋನ ಪಾಲಿಶ ಮಶಿನದ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಮಲ್ಲು ಇತನು ಬಾಯಿ ಒತ್ತಿ ಹಿಡಿದು ಅಂಜಿಕೆ ಹಾಕಿ ಜಬದಿ ಸಂಭೋಗ ಮಾಡಿರುತ್ತಾನೆ. ಇತನಿಗೆ ತಂದೆಯಾದ ಹಣಮಂತ, ತಾಯಿಯಾದ ದುರ್ಗಮ್ಮ, ಹಾಗು ಅಣ್ಣ ಅಯ್ಯಣ್ನ ಇವರ ಪ್ರಚೋದನೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ