POLICE BHAVAN KALABURAGI

POLICE BHAVAN KALABURAGI

26 August 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ.ಮಾರುತಿ ತಂದೆ ಚಂದಪ್ಪ ಹೋಟ್ಕರ, ಸಾ|| ಸುಂದರ ನಗರ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಶಾರದಾಬಾಯಿ ಇಬ್ಬರೂ ಕುಡಿ ಕಿರಣಾ ಅಂಗಡಿಯ ಹತ್ತಿರ ಕುಳಿತ್ತಿರುವಾಗ ನಮ್ಮ ಮಕ್ಕಳಾದ ಪ್ರಕಾಶ ಮತ್ತು ಪ್ರವೀಣ ಇವರು ಹೊರಗಿನಿಂದ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ನೀನು ಮಾಂಗರವಾಡಿಯ ಓಣಿಯಲ್ಲಿ ಹೋಗಿ ಸಿಂಧಿ ಕುಡಿದು ಮನೆಗೆ ಬಂದು ಮನೆ ಹಾಳು ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಬೆನ್ನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರಯತ್ನ ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀ ರಾಜಕುಮಾರ ತಂದೆ ಚಂದ್ರಕಾಂತ ಕಾಂಬಳೆ ಪ್ರೇರಣಾ ಎಜೂಕೇಷನ್ ಟ್ರಸ್ಟ ಅಧ್ಯಕ್ಚ ಸಾ: ಶಕ್ತಿ ನಗರ ಗುಲಬರ್ಗಾ ರವರು ನಾನು ನನ್ನ ಮನೆಯ ಮುಂದೆ ದಿನಾಂಕ 25/08/2011 ರಂದು ಬೆಳಿಗ್ಗೆ 5 ಗಂಟೆಗೆ ವಾಕಿಂಗ ಮಾಡುತ್ತಿರುವಾಗ ವಿ.ಎಲ್. ಗುಡಿಯಪ್ಪ ಮತ್ತು ಸಂಗನಗೌಡ ಪಾಟೀಲ ಇನ್ನೂ 4 ಜನರು ಕೈಯಲ್ಲಿ ಬಡಿಗೆ ಮತ್ತು ರಾಡು ಹಿಡಿದುಕೊಂಡು ಅದರಲ್ಲಿ ವಿ.ಎಲ್. ಗುಡಿಯಪ್ಪ ಇತನು ಜಾತಿ ಏತ್ತಿ ಬೈದು ನಮಗೆ ನೀನು ಸಪ್ಸೆಂಡ್ ಮಾಡಿದಿಯಾ ಅಂತಾ ರಾಡಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಗ್ರಾಮೀಣ ಠಾಣೆ: ಶ್ರೀಮತಿ ಹೇಮಾಬಾಯಿ ಗಂಡ ಬಸವರಾಜ @ ಬಸಣ್ಣ ಬೋರಖಡೇ ಸಾ: ಸೈಯದ ಚಿಂಚೋಳಿ ತಾ: ಗುಲಬರ್ಗಾ ರವರು ಬಸವರಾಜ ಇತನು ದಿನಾಂಕ 24/8/11 ರಂದು ರಾತ್ರಿ ಸುಮಾರಿಗೆ ಮನೆಯ ಸಿಡಿಗಳನ್ನು ಏರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಬಾರಿ ಪೆಟ್ಟಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗ ಸೇರಿಕೆಯಾಗಿದ್ದು ಉಪಚಾರದಲ್ಲಿ ಗುಣಮುಖವಾಗದೆ ದಿನಾಂಕ 25/8/11 ರಂದು ಸಾಯಂಕಾಲ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಪ್ರಕರಣ :

ಗ್ರಾಮೀಣ ಠಾಣೆ: ಪಿ.ಎಸ.ಐ ರವರು ದಿನಾಂಕ 25/8/11 ರಂದು ಉದನೂರ ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮದಲ್ಲಿ ರಾಮು ಚವಾಣ ಇತನು ತನ್ನ ಸಂಗಡ ಇನ್ನೂ 9 ಜನರನ್ನು ಗುಂಪು ಕಟ್ಟಿಕೊಂಡು ಜೈಬೀಮ ಕೋರಳ್ಳಿ ಇತನ ಗುಂಪಿನ ಮೇಲೆ ದ್ವೇಷವನ್ನು ಬೆಳಸಿಕೊಂಡು ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದು ಎರಡು ಪಾರ್ಟಿ ಜನರು ಎದುರು ಬದರು ಆದಲ್ಲಿ ಗ್ರಾಮದಲ್ಲಿ ಗಲಾಟೆ ಸಂಭವಿಸಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಅವರುಗಳ ಮೇಲೆ ಮುಂಜಾಗ್ರತೆ ಅಡಿಯಲ್ಲಿ ಕ್ರಮ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

25 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ನರೋಣಾ ಠಾಣೆ : ಶ್ರೀ ಹಣಮಂತ ತಂದೆ ಶೆಣೆಪ್ಪ ಬಸನಾಕರ ಸಾ: ಬೆಳಮಗಿ ರವರು ನಮ್ಮ ಮನೆ ಮತ್ತು ನಮ್ಮ ಮನೆಯ ಎದುರುಗಡೆ ಇರುವ ಶ್ರೀಮತಿ ರೇಖಾ ಗಂಡ ಬಸವರಾಜ ಸಿಂಗೆ ರವರ ಮನೆಯಲ್ಲಿ ಯಾರೋ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರ ಆಭರಣಗಳು ಮತ್ತು ನಗದು ಹಣ 35,000 ರೂ ಹೀಗೆ ಒಟ್ಟು 68,400=00 ಮತ್ತು ಶ್ರೀರೇಖಾ ಗಂಡ ಬಸವರಾಜ ಇವರ ಮನೆಯಲ್ಲಿಂದ ಬಂಗಾರದ ಅಭರಣಗಳು ಮತ್ತು ನಗದು ಹಣ 3,000 ರೂಪಾಯಿ ಒಂದು ನೋಕಿಯಾ ಮೋಬೈಲ್ ಒಟ್ಟು 60,000 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :

ಸಂಚಾರಿ ಪೊಲೀಸ್ ಠಾಣೆ : ರೂಪಸಿಂಗ್ ತಂದೆ ದೇವಜೀ ಚವಾಣ ಸಾ: ಆರ್.ಟಿ.ಓ ಕ್ರಾಸ್ ಸೇಡಂ ರೋಡ ಗುಲಬರ್ಗಾ ರವರು ನಾನು ನನ್ನ ಅಳಿಯ ಸಂತೋಷ ಇಬ್ಬರು ಕೂಡಿಕೊಂಡು ಗಂಜ ರೋಡಿಗೆ ಇರುವ ಸುಜುಕಿ ಶೋ ರೂಮ ಮುಂದೆ ನಡೆದುಕೊಂಡು ಹೋಗುವಾಗ ಹುಮ್ನಾಬಾದ ರಿಂಗ್ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ.32- ವಾಯ್ 7716 ನೇದ್ದರ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ :

ಕಮಲಾಪೂರ ಠಾಣೆ : ಇಂದು ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಠಾಣೆ ಗುನ್ನೆ ನಂ. 104/2011 ನೇದ್ದರಲ್ಲಿ ತನಿಖೆ ಮುಗಿಸಿಕೊಂಡು ಮರಳಿ ಕಮಲಾಪೂರಕ್ಕೆ ಬರುತ್ತಿರುವಾಗ ಕಮಲಾಪೂರ ಗ್ರಾಮದ ಓಕಳಿ ಕ್ರಾಸ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಚಂದ್ರಕಾಂತ ತಂದೆ ಬಾವುಸಿಂಗ್ ರಾಠೋಡ , ಬಸವರಾಜ ತಂದೆ ಧನಸಿಂಗ್ ರಾಠೋಡ್, ಪ್ರೇಮಸಿಂಗ್ ತಂದೆ ಟೀಕು ರಾಠೋಡ್ ಸಾ|| ಎಲ್ಲರೂ ಕಮಲಾಪೂರ ದೇವಲಾ ತಾಂಡಾ ಇವರು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ  ಚಿರಾಡುವುದು ಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗ, ಇವರನ್ನು ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಮುಂಜಾಗ್ರತವಾಗಿ ಕ್ರಮ ಕೈಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ: ಶ್ರೀ ರಾಜಶೇಖರ ತಂದೆ ಗುಂಡಪ್ಪ ಬಿರಾದಾರ ಸಾ: ಬಬಲಾದ ಮಠದ ಪಕ್ಕದಲ್ಲಿ ಭವಾನಿ ನಗರ ಗುಲಬರ್ಗಾ ರವರು ನನ್ನ ಮಗ ಕುಮಾರ ಇತನಿಗೆ ಮುಸ್ಲಿಂ ಸಂಘಕ್ಕೆ ಹೋಗಿ ಕಾಯಿ ಪಲ್ಲೆ ಖರೀದಿ ಮಾಡಿಕೊಂಡು ಬಾ ಅಂತಾ ಹೇಳಲು ನನ್ನ ಮಗ ತನ್ನ ಸೈಕಲ ತೆಗೆದುಕೊಂಡು ಕಾಯಿ ಪಲ್ಲೆ ತರಲು ಮನೆಯಿಂದ ಹೋದನು. ನಮ್ಮ ಪೇಪರನಲ್ಲಿ ಬಿಲ್ಲ ಕಲೆಕ್ಟರ ಅಂತಾ ಕೆಲಸ ಮಾಡುತ್ತಿದ್ದ ಕರುಣೇಶ ಈತನು ಜೋತೆ ಲಂಗರ ಹನುಮಾನ ಗುಡಿ ರಿಂಗ ರೋಡ ಕ್ರಾಸಿನ ಮೇಲೆ ರಸ್ತೆ ಬದಿಯಿಂದ ಹೊರಟ ಕುಮಾರ ಇತನಿಗೆ ಎದುರುನಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಎಚ 4445 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಕುಳ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀಮತಿ ಮಹಾದೇವಿ ಗಂಡ ಕಲ್ಯಾಣಿ ನೇಲ್ಲೂರ ಸಾ: ಕಪನೂರ ತಾ: ಗುಲಬರ್ಗಾ ರವರು
ನಾನು ದಿನಾಂಕ 24-8-11 ರಂದು ಸಾಯಂಕಾಲ ತಾಯಿಯ ಮನೆಯ ಅಂಗಳದಲ್ಲಿ ಮಾತನಾಡುತ್ತಾ ನನ್ನ ಮಗಳೊಂದಿಗೆ ಕುಳಿತಿರುವಾಗ ನನ್ನ ಗಂಡ ಕಲ್ಯಾಣೀ ಮತ್ತು ಅತ್ತೆ ನೀಲಮ್ಮ ಇವರು ಬಂದು ನನ್ನ ತಾಯಿ ಹೆಳಿದಂತೆ ಕೇಳು ಇಲ್ಲದಿದ್ದರೆ ನಿನ್ನನ್ನು ಸುಮ್ನನೆ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.