ಮನುಷ್ಯ ಕಾಣೆಯಾದ ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀಮತಿ ಆಲವೇಲು ಗಂಡ ಸಾಲಯ್ಯ ಕಾಮಶೇಟ್ಟಿ ಸಾ|| ಪುಲಿಚರಲ್ ತಾ|| ಪೆದ್ಡಾಪೂರ್ ಜಿಲ್ಲೆ || ನಲಗೊಂಡ ರಾಜ್ಯ ಆಂದ್ರ ಪ್ರದೇಶ ರವರು ನಾನು ಮತ್ತು ನನ್ನ ಗಂಡ ಸಾಲಯ್ಯ ದಿನಾಂಕ:15-07-2011 ರಂದು ಮಧ್ಯಾಹ್ನ ದೇವಲಗಾಣಗಾಫುರಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಾಗ ನನ್ನ ಗಂಡ ಕಾಣೆಯಾಗಿರುತ್ತಾನೆ ಇಲ್ಲಿಯವರೆಗೂ ಎಲ್ಲಾ ಕಡೆ ಹೂಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಮೇರೆಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI

23 July 2011
GULBARGA DIST REPORTED CRIME
22 July 2011
GULBARGA DISTRICT REPORTED CRIME
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಶೇಖ ಸದ್ದಾಂ ತಂದೆ ಶೇಖ ಮಹ್ಮದ ತಾರಫೈಲ ಸ್ಟೇಷನ ಏರಿಯಾ ಗುಲಬರ್ಗಾ
ರವರು ನಾನು ಮತ್ತು ಸೈಯದ್ ಇಮ್ರಾನ್ ಕೂಡಿಕೊಂಡು ದಿನಾಂಕ:22-07-2011 ರಂದು ಮುಂಜಾನೆ ಸಾಯಿ ಮಂದಿರ ಕ್ರಾಸ್ ಹತ್ತಿರ ರಿಂಗ ರೋಡಿನ ಮೇಲೆ ಹೋಗುತ್ತಿರುವಾಗ ಕ್ರೋಜರ ಜೀಪ ನಂ:ಕೆಎ 37-4552 ನೇದ್ದರ ಚಾಲಕ ಸಂಜೀವಕುಮಾರ ಈತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ನಂಬರ ಕೆಎ-32 ಡಬ್ಲೂ 6976 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
GULBARGA DIST REPORTED CRIMES
ಮುನ್ನೆಚ್ಚರಿಕೆ ಕ್ರಮವಾಗಿ :
ಸೇಡಂ ಪೊಲೀಸ ಠಾಣೆ : ದೇವಿಂದ್ರಪ್ಪ ತಂದೆ ಈರಪ್ಪ ಬುಡ್ಡನವರ ಸಾ|| ತೆಲ್ಕೂರ ಗ್ರಾಮ ರವರು ಸರ್ವೆ ನಂ 12 ಮತ್ತು 13 ರಲ್ಲಿ ಒಟ್ಟು 43 ಎಕರೆ ಹೊಲ ಇದ್ದು, ಈ ಹೊಲವನ್ನು ವನಮಾಲ ಗಂಡ ರಂಗಾರಾವ ದೇಸಪಾಂಡೆ ಸಾ|| ತೆಲ್ಕೂರ ಇವರ ಹೆಸರಿನಲ್ಲಿ ಇದ್ದು, ಈ ಹೊಲವನ್ನು ನಾನು ಪಾಲಿನಿಂದ ಮಾಡುತ್ತಾ ಬಂದಿರುತ್ತೇನೆ. ಆದರೆ ಸಾಬಣ್ಣ ತಂದೆ ರಾಯಪ್ಪ ಆಚಕೇರಿ ಸಾ|| ತೆಲ್ಕೂರ ಸಂಗಡ 4-5 ಜನರು ಈ ಹೊಲ ಸರಕಾರ ನಮಗೆ ಟೆನಂಟದಲ್ಲಿ ಕೊಟ್ಟಿರುತ್ತಾರೆ, ಆದ್ದರಿಂದ ಕಬ್ಜೆ ಬೀಡಲು ನನ್ನ ಸಂಗಡ ಜಗಳ ಮಾಡುತ್ತಿದ್ದಾರೆ ಅಂತಾ ಅರ್ಜಿ ನೀಡಿದ್ದರಿಂದ, ಪಿ.ಎಸ.ಐ ಸೇಡಂ ರವರು ದಿನಾಂಕ: 21-7-11 ರಂದು ಮುಂಜಾನೆ ತೆಲ್ಕೂರ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ಮಾಡಲಾಗಿ, ತೆಲ್ಕೂರ ಸಿಮಾಮತರದಲ್ಲಿರುವ ಹೊಲ ಸರ್ವೆ ನಂ 12 ಒಟ್ಟು 24 ಎಕರೆ 36 ಗುಂಟೆ ಸರ್ವೆ ನಂ 13 19 ಎಕರೆ 34 ಗುಂಟೆ ಹೊಲವಿದ್ದು ಈ ಹೊಲವನ್ನು ವನಮಾಲಬಾಯಿ ಗಂಡ ರಂಗರಾವ ದೇಶಪಾಂಡೆ ಇವರ ಹೆಸರಿನಲ್ಲಿ ಇದ್ದು ಸದರಿ ಹೊಲವನ್ನು ದೇವಿಂದ್ರಪ್ಪ ತಂದೆ ಈರಪ್ಪ ಬುಡ್ಡನವರ ಇತನು ಪಾಲಿನಿಂದ ಮಾಡುತ್ತಿದ್ದು ಈ ಹೊಲವನ್ನು ಸರಕಾರವು ಟೆನಂಟದಲ್ಲಿ ನಮ್ಮ ಹೆಸರಿಗೆ ಆಗುವುದಿದೆ ಮತ್ತು ಸರಕಾರಕ್ಕೆ ನಾವು ಹೊಲದ ಹಣ ತುಂಬಿರುತ್ತೇವೆ ತಹಸಿಲ್ದಾರರು ಈ ಹೊಲವನ್ನು ನಮ್ಮ ಹೆಸರಿ ಮಾಡುವುದಿದ್ದಾರೆ ಅಂತಾ ಸಾಬಣ್ಣ ತಂದೆ ರಾಯಪ್ಪ ಆಚಕೇರಿ ಸಾ|| ತೆಲ್ಕೂರ ಸಂಗಡ 4-5 ಜನರು ದೇವಿಂದ್ರಪ್ಪಾ ಇವರ ಜೋತೆ ತಕರಾರು ಮಾಡುತ್ತಿದ್ದು ಇರುತ್ತದೆ. ಸಧ್ಯ ಹೊಲದ ಮಾಲಿಕರು ಊರಲ್ಲಿ ಇರುವುದಿಲ್ಲಾ ಹಾಗೂ ಸಾಬಣ್ಣ ಇವರ ಹೆಸರಿನಿಂದ ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ, ಈ ಉಬಯ ಪಾರ್ಟಿ ಜನರು ಸರ್ವೆ ನಂ 12 ಮತ್ತು 13 ರಲ್ಲಿ ಹೊಲದ ಕಬ್ಜೆ ಸಂಭಂದವಾಗಿ ಊರಲ್ಲಿ ತಲಾ ಒಂದು ಗುಂಪು ಕಟ್ಟಿಕೊಂಡು ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದು ಇದರಿಂದ ಊರಲ್ಲಿ ಒಬ್ಬರಿಗೊಬ್ಬರು ಹೊಡದಾಡಿ ಜೀವ ಹಾನಿ ಮಾಡಿಕೊಳ್ಳುವ ಸಂಭವ ಇರುತ್ತದೆ. ಗ್ರಾಮದಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗುವ ಸಂಭವ ಇರುವದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ಪಾರ್ಟಿ ಜನರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಲಾಗಿದೆ .