POLICE BHAVAN KALABURAGI

POLICE BHAVAN KALABURAGI

28 May 2011

ಗುಲಬರ್ಗಾ ಜಿಲ್ಲೆ ಅಪರಾದಗಳ ಮಾಹಿತಿ

ಚಿಂಚೋಳಿ ಪೊಲೀಸ್‌ ಠಾಣೆ .

ಲಕ್ಷ್ಮ ಗಂಡ ಜಗನ್ನಾಥ ಅವಂಟಗಿ ಐನ್ನೋಳಿರವರ ಮಗಳಾದ ಮಿನಾಕ್ಷಿ ವಯಸ್ಸು 16 ಪಕ್ಕದ ಮನೆಯವನಾದ ಸುರೇಶ ತಂದೆ ನರಸಪ್ಪಾ ಕೊರವೆಯರ ಇತನು ಮದುವೆ ಆಗುತ್ತೇನೆ ಅಂತಾ ನಂಬಿಸಿ ಮಿನಾಕ್ಷಿಯನ್ನು ದಿನಾಂಕ 24/05/2011 ರಂದು ಅಪಹರಿಸಿಕೊಂಡು ಹೋಗಿರುತ್ತಾನೆ ಅಪ್ರಾಪ್ತ ವಯಸ್ಸಿನವಳಾದ ಮಿನಾಕ್ಷಿ ಇವಳಿಗೆ ಕಳೆದ 24/05/2011 ರಿಂದ ಮನೆಯವರು ಹುಡುಕಾಡಿರುತ್ತಾರೆ. ಅವಳಿಗೆ ಅಪಹರಿಸಿಕೊಂಡು ಹೋಗಿರುವ ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇಲೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೇವರ್ಗಿ ಪೊಲೀಸ್ ಠಾಣೆ

ಜೇವರ್ಗಿ ತಾಲೂಕಿನ್ ಮುದಬಾಳ (ಬಿ) ಗ್ರಾಮದ ಹತ್ತಿರ ಯಾವುದೋ ವಾಹನವು ರಾತ್ರಿ ವೇಳೆಯಲ್ಲಿ ಸಂತೋಷ ಕುಮಾರ ತಂದೆ ಮೋಹನರಾವ ಪತ್ತಾರ ಆಳಂದ ಇವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹಾಗೇಯೇ ಹೋಗಿದ್ದು ಪರಿಣಾಮ ಸಂತೊಷ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸ್ಟೇಷನ ಬಜಾರ ಪೊಲಿಸ್ ಠಾಣೆ

ಸ್ಟೇಷನ ಬಜಾರ ಹತ್ತಿರ ಚಿಕನ ಫುಡ್ ಸೆಂಟರ ಮುಂದೆ ಶಿವು ತಂದೆ ಸಂಗಣ್ಣ ಮತ್ತುಕೊ ಅವನ ಜೊತೆ ಎರಡು ಜನರು ಕುಡಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಜಗಳತೆಗೆದು ಆನಂದನಿಗೆ ಹೊಡೆದು ಗಾಯಪಡಿಸಿದ್ದ ಕಾರಣ ಅನಂದ ಈತನು ಬಸವೇಶ್ವರ ಆಸ್ಪತ್ರೆ ಯಲ್ಲಿ ಉಪಚಾರ ಪಡೆದುತ್ತಿರುತ್ತಾನೆ ಮತ್ತು ಜೀವಕ್ಕೆ ಭಯ ಹಾಕಿರುತ್ತಾರೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

27 May 2011

GULBARGA DISTRICT REPORTED CRIMES

ಕೊಲೆ ಮಾಡಲು ಪ್ರಯತ್ನ ;
ಮಾಹಾಂಗಾವ ಠಾಣೆ ;
ಶ್ರೀ ಶರಣು @ ಶರಣಬಸಪ್ಪ ತಂ, ಲಾಲಪ್ಪ ಮೇಲಿನಮನಿ, ಸಾ||ಬೇಲೂರು ಜೆ. ರವರು ದಿನಾಂಕ 25-05-2011 ರಂದು ಬೆಳಿಗ್ಗೆ ಕಮಲಾಪೂರಕ್ಕೆ ತನ್ನ ಹಿರೋ ಹೊಂಡಾ ಮೋಟಾರ ಸೈಕಲ್ ನಂ: ಕೆ,ಎ-39-8414 ನೇದ್ದರ ಮೇಲೆ ಕಮಲಾಪೂರಕ್ಕೆ ಮದುವೆಗೆ ಹೋಗಿ ಮರಳಿ ಮಧ್ಯಾಹ್ನ ಹಳೆಯ ಅಂಕಲಗಿ ಕ್ರಾಸ್ ಹತ್ತಿರ ಹೋದಾಗ ಅಲ್ಲಿ 4 ಜನ ಅಪರಿಚಿತರು ತಡೆದು ನಿಲ್ಲಿಸಿ ಬಿಗಿಯಾಗಿ ಹಿಡಿದು ವಿಷವನ್ನು ಬಾಯಿಯಲ್ಲಿ ಹಾಕಿ ಕುಡಿಸಿದ್ದು ಅವರು ಅಂದಾಜು 25-30 ವರ್ಷದ ವಯಸ್ಸಿನವರಾಗಿರುತ್ತಾರೆ ನಂತರ ಉಪಚಾರ ಕುರಿತು ಡಾ||ಚಿಂಚೋಳ್ಳಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಬಿಗಿಯಾಗಿ ಹಿಡಿದು ಬಾಯಿಯಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ದ್ವೀಚಕ್ರ ವಾಹನ ಕಳವು ಪ್ರಕರಣ ;
ಬ್ರಹ್ಮಪೂರ ಠಾಣೆ :
ಶ್ರೀ ಅಂಬರೀಶ ತಂದೆ ವಿಜಯಕುಮಾರ ಚಿಂಚೋಳಿ ಸಾ; ಮಾಹಾಗಾಂವವಾಡಿ ರವರು ದಿನಾಂಕ 26-05-2011 ರಂದು ಮಧ್ಯಾಹ್ನ 12 ರಿಂದ 1 ಗಂಟೆಯ ಅವಧಿಯಲ್ಲಿ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ನಂ ಕೆಎ 32 ಆರ್ 1727 ಅ.ಕಿ. 20000/- ನೇದ್ದನ್ನು ಸುಪರ ಮಾರ್ಕೆಟದ ಅಮಾನತ್ ಬ್ಯಾಂಕಿನ ಎದುರುಗಡೆ ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 May 2011

GULBARGA DISTRICT REPORTED CRIMES

ಅಪಘಾತ ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 25-05-2011 ರಂದು ಶ್ರೀಮತಿ ಜಯಶ್ರೀ ಗಂಡ ಅಮೃತ ಪೊಲೀಸ ಪಾಟೀಲ ಸಾ: ನಿಪ್ಪಣಿ ತಾ: ಚಿತ್ತಾಪೂರ ಹಾ:ವ: ಎಸ್‌ಬಿ ಪಾಟೀಲ ಕಂಪನಿ ಕಪನೂರ ಗುಲಬರ್ಗಾ ಇವರು ತಮ್ಮ ಮಗಳಾದ ರೇಷ್ಮ ಇವಳ ಮದುವೆ ಪ್ರಯುಕ್ತ ಪಿರ್ಯಾದಿದಾರಳು ಹಾಗೂ ಅಮೃತ ಇಬ್ಬರು ಮಾಸಾಪ್ತಿ ದರ್ಗಾಕ್ಕೆ ದೀನ ನಮಸ್ಕಾರದ ಹರಕೆಯನ್ನು ಹೊತ್ತಿದ್ದು. ಅದರಂತೆ ಸಂಬಂದಿಕರೊಂದಿಗೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ದೀನ ನಮಸ್ಕಾರ ಹಾಕುತ್ತಾ ಮುಖ್ಯ ರಸ್ತೆಯ ಏರಲೈನ್ಸ್‌ ಧಾಬಾದ ಮುಂದಿನ ರಸ್ತೆಯ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 4689 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಎಲ್ಲರಿಗೆ ಡಿಕ್ಕಿ ಹೊಡೆದುಕೊಂಡು ಸೈಡಿಗೆ ನಿಲ್ಲಿಸಿರುವದರಿಂದ ಪಿರ್ಯಾದಿಯ ಗಂಡ ಹಾಗೂ ಸಂಬಂದಿಕರಾದ ಶಿವಕಾಂತಮ್ಮ ತೆಲಂಗಾಣ ಹಾಗೂ ಇತರರೆಲ್ಲರಿಗೂ ಸಾದಾ & ಬಾರಿಗಾಯವಾಗಿದ್ದು ಅಮೃತ ಇತನು ಬೇಹುಷ ಆಗಿದ್ದು ಅವನನ್ನು 108 ಅಂಬುಲೈನ್ಸ್‌ದಲ್ಲಿ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ ;
ಎಮ್ ಬಿ ನಗರ ಠಾಣೆ ;ಶ್ರೀ ವಾಯ.ಎಂ.ಜಯರಾಜ ಪ್ರೋಫೆಸರ ಮೈಕ್ರೋಬಯಾಲಜಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಸಾ; " ವಿನಾಯಕ "ಪ್ಲಾಟ ನಂ.20 ನಿಯರ ಹನುಮಾನ ಟೆಂಪಲ್ ಜಯನಗರ ಕಾಲೂನಿ ಸೇಡಂ ರೋಡ ಗುಲಬರ್ಗಾರವರ ಮಗನಾದ ಸಂತೋಷಕುಮಾರ ಇವನ ಹೆಂಡತಿ ಶ್ರೀಮತಿ ಶಿಲ್ಪಾ ಇವಳು ದಿನಾಂಕ ದಿನಾಂಕ.23-5-2011 ರಂದು 12-00 ಗಂಟೆಯಿಂದ 1-45 ಪಿ.ಎಂ.ದ ಮದ್ಯದ ಅವಧಿಯಲ್ಲಿ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಲಗೇಜ ತೆಗೆದುಕೊಂಡು ಹೋಗಿದ್ದು ದಿನಾಂಕ. 23-5-2011 ರಿಂದ ಇವತ್ತಿನವರೆಗೆ ಅಂದರೆ 25-5-2011 ವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಹಿಳೆಯ ಚಹರೆ ಪಟ್ಟಿ;- ಎತ್ತರ 4'8" ಗುಂಡನೆಯ ಮುಖ ,ಸದೃಡ ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ , ಕಣ್ಣುಗಳ ಕೆಳ ರೆಪ್ಪೆ ಕಪ್ಪಾಗಿರುತ್ತವೆ , ಸ್ಪೀಡಾಗಿ ಮಾತನಾಡುತ್ತಾಳೆ, ಕನ್ನಡ , ಹಿಂದಿ , ಇಂಗ್ಲೀಷ ಬರೆಯಲು , ಮಾತನಾಡಲು , ಓದಲು ಬರುತ್ತದೆ. ಡಾರ್ಕ ಕಲರನ ಚುಡಿದಾರ , ಕುರತ ಸೆಲವಾರ ಬಟ್ಟೆಗಳು ಧರಿಸಿರಬಹುದು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.