POLICE BHAVAN KALABURAGI

POLICE BHAVAN KALABURAGI

29 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಉತ್ತುಮ್ಮಬಾಯಿ ಗಂಡ ಹುಸನಪ್ಪಾ ಬಡಿಗೇರ ಸಾ: ಬೇಲೂರ (ಜೆ) ತಾ:ಜಿ: ಕಲಬುರಗಿ ರವರ ಗಂಡ ಹುಸನಪ್ಪ ಇತನು KIDB ದಲ್ಲಿ ವೈರ ಮೇನ ಅಂತ ಸುಮಾರು 18 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಸಲ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 28/11/2018 ರಂದು ನನ್ನ ಗಂಡ ಎಂದಿನಂತೆ KIDB ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕೆಲಸ ಮಾಡಲು ಹೋಗಿದ್ದು  ಮಧ್ಯಾಹ್ನ 02-30 ಘಂಟೆ ಸುಮಾರಿಗೆ ಇವನೊಂದಿಗೆ ಇದ್ದ ಬಾಬು ತಂದೆ ಅರ್ಜುನ ಕ್ಷೇತ್ರಿ ಇವರು ತಿಳಿಸಿದ್ದೆನೆಂದೆರೆ, ನಿಮ್ಮ ಗಂಡ ಹುಸನಪ್ಪ ಹಾಗೂ ನಾವು ಕೂಡಿಕೊಂಡು ಸಹರ ದಾಲಮಿಲ್ಲ ಹತ್ತಿರ ಇರುವ  ಒಂದು ವಿದ್ಯುತ ಕಂಬದ ಕೆಲಸ ಮಾಡುವಾಗ ಹುಸನಪ್ಪಾ ಇತನು ಭಾರವಾದ ಸಲಕರಣೆ ತೆಗೆದುಕೊಂಡು ಸಿಡಿ ಏರುವಾಗ  ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬೇಹೋಸ ಆಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದಾಗ ನಾನು ಹಾಗೂ ನನ್ನ ಮೈದನ ಹಾಗೂ ಇತರರು ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲು ಘಟನೆ ನಿಜ ಇದ್ದು, ನನ್ನ ಗಂಡನಿಗೆ ತಲೆಗೆ ರಕ್ತಗಾಯವಾಗಿ  ರಕ್ತ ಬರುತ್ತಿದ್ದು ಮತ್ತು ಬಲಗೈ ಅಂಗೈ ಮೇಲ್ಬಾಗದಲ್ಲಿ ಬಡೆದು ಗಾಯವಾಗಿದ್ದು ಇದಕ್ಕೆ KIDB ಅಧಿಕಾರಿಗಳಾದ ಸುಭಾಷ ನಾಯ್ಕ AW DO   ಪ್ರಕಾಶ ಗುತ್ತಿಗೆದಾರ ನಾಗಪ್ಪ ಬಿದಿರಿ ಇವರು ನನ್ನ ಗಂಡ ದಲಿತನಾಗಿದ್ದರಿಂದ ಅವನನ್ನು ಯಾವುದೇ ಸಲಕರಣೆಗಳು ಕೊಡದೇ ಮುಂಜಾಗ್ತುತೆ ವಹಿಸದೇ ಹಾಗೂ LC  ತೆಗೆದುಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿರುತ್ತದೆ. ನಂತರ ನಾವು ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 03-40 ಗಂಟೆಗೆ ಮೃತಪಟ್ಟಿರುತ್ತಾನೆ.      ಕಾರಣ ನನ್ನ ಗಂಡ ಹುಸನಪ್ಪ ಇತನು ವಿದ್ಯುತ ಕಂಬಕ್ಕೆ ಹತ್ತಿ ಕೆಲಸ ಮಾಡಲು ಹೋಗಿ ಸಿಡಿಯಿಂದ ಬಿದ್ದು ಭಾರಿ ಗಾಯ ಹೊಂದಿ ಮರಣ ಹೊಂದಲು ಯಾವುದೇ ಸೂಕ್ತ ಸಲಕರಣೆಗಳು ಕೊಡದೇ ಮುಂಜಾಗ್ರತೆ ವಹಿಸದೇ ದಲಿತನ ಮೇಲೆ ದೌರ್ಜನ್ಯ ಎಸಗಿದ್ದರಿಂದ ಸದರಿ 3 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶರಣಮ್ಮ ಗಂಡ ಗೋವಿಂದಪ್ಪ ಅರಳಗುಂಡಗಿ ಸಾ|| ಜಂಬೇರಾಳ ಗ್ರಾಮ ತಾ|| ಜೇವರ್ಗಿ ರವರು ಊರ ಸಿಮಾಂತರದಲ್ಲಿ ನಮ್ಮ ಮಾವ ಶರಣಪ್ಪ ರವರ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 48 ನೇದ್ದರಲ್ಲಿ 3 ಎಕರೆ 30 ಗುಂಟೆ ಜಮೀನು ಇರುತ್ತದೆ, ಆ ಹೊಲವನ್ನು ನಮ್ಮ ಪಾಲಿಗೆ ಬಂದಿದ್ದು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಹೊಲದ ಸಲುವಾಗಿ ಮತ್ತು ಮಕ್ಕಳ ಮದುವೆ ಸಲುವಾಗಿ ನನ್ನ ಗಂಡ ಅರಳಗುಂಡಗಿ ಕೆ.ಜಿ.ಬಿ ಬ್ಯಾಂಕನಲ್ಲಿ ಅಂದಾಜು 40,000/-ರೂ, ಹಾಗು ಖಾಸಗಿಯಾಗಿ 10 ಲಕ್ಷ ರೂಪಾಯಿಗಳು ಸಾಲ ಮಾಡಿಕೊಂಡಿದ್ದನು, ನನ್ನ ಗಂಡ ಆಗಾಗ ನನಗೆ ಸಾಲ ಬಹಳಾಗಿದೆ, ನಾನು ಜನರಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲಾ ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಈ ಬಗ್ಗೆ ನನ್ನ ಗಂಡನಿಗೆ ನಾನು ಸಮಾಧಾನ ಹೇಳುತ್ತಾ ಬಂದಿರುತ್ತೇನೆ. ದಿನಾಂಕ 26-11-2018 ರಂದು ರಾತ್ರಿ 9;00 ಗಂಟೆಗೆ ನಾನು ನನ್ನ ಗಂಡ ಇಬ್ಬರು ಊಟ ಮಾಡಿ ಮಲಗಿಕೊಂಡೆವು, ನಂತರ 10;00 ಪಿ.ಎಂ ಸುಮಾರಿಗೆ ಯಾರೋ ಚೀರಿದ ಸಪ್ಪಳ ಕೇಳ ಎದ್ದು ನೋಡಿದಾಗ ನನ್ನ ಗಂಡ ನೇಣು ಹಾಕಿಕೊಂಡಿದ್ದನು, ನಾನು ಜೋರಾಗಿ ಚಿರಾಡಿದ್ದರಿಂದ ಅಲ್ಲೇ ಬಾಜು ಇದ್ದ ನಮ್ಮ ಅಣ್ಣತಮ್ಮಂದಿರಾದ ಶಂಕ್ರೆಪ್ಪ ತಂದೆ ಶರಣಪ್ಪ ಅರಳಗುಂಡಗಿ, ಮಲ್ಲನಗೌಡ ತಂದೆ ಮಡಿವಾಳಪ್ಪಗೌಡ ಪೊಲೀಸ ಪಾಟೀಲ, ಏಸಪ್ಪ ತಂದೆ ಚಂದಪ್ಪ ಅರಳಗುಂಡಗಿ ರವರು ಬಂದು ನನ್ನ ಗಂಡನಿಗೆ ಕೇಳಗೆ ಇಳಿಸಿ ನಂತರ ಉಪಚಾರ ಕುರಿತು ಆಸ್ಪತ್ರೆಗೆ ಒಯುವಾಗ ಮಾರ್ಗಮದ್ಯದಲ್ಲಿ ಕಡಕೋಳ ಹತ್ತಿರ 10;30 ಪಿ.ಎಂ ಕ್ಕೆ ನನ್ನ ಗಂಡ ಮೃತ ಪಟ್ಟನು, ನಂತರ ನನ್ನ ಗಂಡನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಕಿರುತ್ತೇವೆ, ನನ್ನ ಗಂಡ ಸಾಲದ ಬಾಧೇಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  26-10-2018 ರಂದು 10;00 ಪಿ.ಎಂ ಸುಮಾರಿಗೆ ನಮ್ಮ ಮನೆಯಲ್ಲಿ ಕಬ್ಬಿಣದ ಪೈಪಿನ ಅಡ್ಡಿಗೆ ಪ್ಲಾಸ್ಟೀಕ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 24-11-2018 ರಂದು ನಮ್ಮೂರ ದಯಾನಂದ ತಂದೆ ಸಿದ್ರಾಮಯ್ಯಾ ಹಿರೇಮಠ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಮ್ಮೂರ ಕಾಶಿಮ ಕುಕ್ಕನೂರ ರವರು ಕೂಡಿ ಸಿಂದಗಿಯಿಂದ ಬರುವಾಗ ಅಲ್ಲಾಪೂರ ದಾಟಿ ನಿಮ್ಮ ಅಣ್ಣತಮ್ಮಕಿಯ ಅನೀಲ ತಂದೆ ಮರೆಪ್ಪ ದೇವರಮನಿ ಈತನು ತನ್ನ ಮೋಟರಸೈಕಲನ್ನು ನಮ್ಮ ವಾಹನಕ್ಕೆ ಸೈಡ ಹೊಡೆದು ಜೋರಾಗಿ ಹೋದನು, ನಮ್ಮ ಮುಂದೆ ಹೋಗುತ್ತಿದ್ದಂತೆ, ದಸದ್ತಗೀರಸಾಬ ಗಡಾಗಂಜ ರವರ ಹೊಲದ ಹತ್ತಿರ ಎದುರುಗಡೆ ರೋಡಿನ ಎಡಗಡೆ ಒಂದು ಟ್ರಾಲಿ ನಿಂತಿದ್ದು, ಅದಕ್ಕೆ ನೋಡದೇ ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ  ಮೋಟರ ಸೈಕಲನ್ನು ಚಲಾಯಿಸಿ ಟ್ರಾಲಿ ಹಿಂದೆ ಡಿಕ್ಕಿಹೊಡೆದನು, ನಂತರ ನಾವು ಹೋಗಿ ನೋಡಲಾಗಿ ಅನೀಲ ಈತನಿಗೆ ಹಣೆಗೆ, ಮತ್ತು ಬಾಯಿಗೆ ಭಾರಿ ರಕ್ತಗಾಯವಾಗಿದ್ದು, ಎಡರಟ್ಟೆಗೆ ಭಾರಿ ಒಳಪೆಟ್ಟಾಗಿ ಮುರದಿರುತ್ತದೆ ಹಾಗು ಎರಡು  ಮೊಳಕಾಲಿಗೆ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿದ್ದನು, ಮೋಟರ ಸೈಕಲ್ ಹಿಂದೆ ಕುಳಿತ ಸಲೀಮ ತಂದೆ ಕಮಲಸಾಬ ಅಸ್ಕಿ ಈತನಿಗೆ ತಲೆಗೆ  ರಕ್ತಗಾಯವಾಗಿದ್ದು, ಮೈ ಕೈಗೆ ಭಾರಿ ಒಳಪೆಟ್ಟಾಗಿರುತ್ತದೆ, ಬೇಗನೆ ಸ್ಥಳಕ್ಕೆ ಬರಲು ಹೇಳಿದ್ದರಿಂದ ನಾವು ಹಾಗು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ಅನೀಲ ಈತನು ಸ್ಥಳದಲ್ಲೆ ಮೃತ ಪಟ್ಟಿ ಬಿದ್ದಿದ್ದನು, ಸಲೀಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆ, ನಂತರ ಟ್ರಾಯಲಿ ನೋಡಲಾಗಿ ಅದನ್ನು ಕಬ್ಬಿನ ಟ್ರಾಯಲಿ ಇದ್ದು, ಅದು ಮೊದಲು ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತ್ತು ನಂತರ ಅದನ್ನು ಅದರ ಚಾಲಕ ಮತ್ತು ಮಾಲಿಕರು ಸೇರಿಕೊಂಡು ಟ್ರಾಯಲಿಯನ್ನು ಎತ್ತಿ ರೋಡಿನ ಮೇಲೆ ಯಾವುದೇ ಮುಂಜಾಗ್ರತ ಕ್ರಮಕೈಗೊಳ್ಳದೆ ಅಪಾಯಕಾರಿಯಾಗಿ ನಿಲ್ಲಿಸಿದ್ದರು, ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ಮೋಟರ ಸೈಕಲ ನಂ ಕೆ.-28/.ಹೆಚ್-4535 ಅಂತಾ ಇದ್ದು ಸದರಿ ಮೋಟರ ಸೈಕಲ ಸಲೀಮ ಅಸ್ಕಿ ಈತನಿಗೆ ಸೇರಿದ್ದು ಇರುತ್ತದೆ. ಟ್ರಾಯಲಿ ಮಾಲಿಕ ಮತ್ತು ಚಾಲಕ ಸೇರಿಕೊಂಡು ತಮ್ಮ ಟ್ರಾಯಲಿಯನ್ನು ಅಪಾಯಕಾರಿಯಾಗಿ ರೋಡಿನ ಮೇಲೆ ನಿಲ್ಲಿಸಿದ್ದರಿಂದ ಮತ್ತು ಅನೀಲ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತದಿಂದ ಚಲಾಯಿಸಿದ್ದರಿಂದ ರಸ್ತೆ ಅಪಘಾತ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ವಿಶ್ವನಾಥ ಮುಗಳಿ ವಿಳಾಸ; ಮರಗುತ್ತಿ  ತಾ;ಜಿ;ಕಲಬುರಗಿ ರವರ ಗಂಡನಾಧ ವಿಶ್ವನಾಥ ಮುಗಳಿ ಇವರು ಒಕ್ಕಲುತನ ಮಾಡಿಕೊಂಡಿದ್ದು ನನ್ನ  ತವರೂರಾದ ಗುಂಡಗುರ್ತಿಯಲ್ಲಿ ನಮ್ಮ ಅಜ್ಜಿಯಾದ ನಾಗಮ್ಮ ಹಿಟ್ಟಿನ ಇವರಿಗೆ ಆರೋಗ್ಯ ಸರಿ ಇಲ್ಲದಕಾರಣ ಅವರನ್ನು ವಿಚಾರಿಸಿಕೊಂಡು ಬರಲು ಕಳೆದ ಹದಿನೈದು ದಿವಸಗಳಿಂದ ನಾನು ಗುಂಡಗುರ್ತಿ ಗ್ರಾಮದಲ್ಲಿ ಇರುತ್ತೇನೆ. ನನ್ನ ಅಜ್ಜಿ ನಾಗಮ್ಮ ಹಿಟ್ಟಿನ ಇವಳಿಗೆ ಹೆಚ್ಚಿನ ಉಪಚಾರ ಕುರಿತು  ಸೋಲಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿತ್ತು ಅದಕ್ಕಾಗಿ ನನ್ನ ಗಂಡ ವಿಶ್ವನಾಥ ಮುಗಳಿ ಇವರಿಗೆ ಗುಂಡಗುರ್ತಿಗೆ ಬರಲು ತಿಳಿಸಿದ್ದೆ.  ದಿನಾಂಕ. 25-11-2018 ರಂದು ಸಮಯ ಸಂಜೆ. 7-00 ಗಂಟೆ ಸುಮಾರಿಗೆ ನನ್ನ ಗಂಡ ವಿಶ್ವನಾಥ ಇವರು ನನಗೆ ಫೋನ ಮಾಡಿ ಮರಗುತ್ತಿಯಿಂದ ನನ್ನ ಮಗ ಸಮರ್ಥಗೆ ಕರೆದುಕೊಂಡು ನಮ್ಮ ಮೋಟಾರ ಸೈಕಲ್ ಹೀರ ಸ್ಪ್ಲೆಂಡರ ನಂ.ಕೆ.ಎ.32.ಕ್ಯೂ.4459 ಇದರೆ ಮೇಲೆ ಗುಂಡಗುರ್ತಿಗೆ ಬರುತ್ತೇವೆ ಎಂದು ತಿಳಿಸಿದರು. ರಾತ್ರಿ 8-45 ಗಂಟೆ ಸುಮಾರಿಗೆ ಯಾರೋ ನನ್ನ ಗಂಡನ  ಮೋಬಾಯಿಲ್ ದಿಂದ ನನ್ನ ತಮ್ಮ ನಾಗರಾಜ  ಹಿಟ್ಟಿನ ಇವರಿಗೆ ಫೋನ ಮಾಡಿ ತಾವರಗೇರಾ ಕ್ರಾಸ ಹತ್ತಿರ ಹುಮನಾಬಾದ ರೋಡಿಗೆ ನನ್ನ ಗಂಡ ವಿಶ್ವನಾಥ ಮುಗಳಿ ಇವರ ಮೊಟಾರ ಸೈಕಲಕ್ಕೆ ಒಂದು ಟ್ರ್ಯಾಕ್ಟರ ಅಪಘಾತ ಪಡಿಸಿರುತ್ತದೆ . ವಿಶ್ವನಾಥ ಮತ್ತು ನನ್ನ ಮಗ ಸಮರ್ಥ ಇವರಿಗೆ ಗಾಯಗಳಾಗಿರುತ್ತವೆ. ಉಪಚಾರ ಕುರಿತು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗುತಿದ್ದೇವೆ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿದರು . ಆಗ  ಗಾಬರಿಗೊಂಡು ನಾನು ಮತ್ತು ನನ್ನ ತಮ್ಮ ನಾಗರಾಜ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು  ಸ್ಟೇಚ್ಚರ ಮೇಲೆ ನೋಡಲಾಗಿ ನನ್ನ ಗಂಡನಿಗೆ ತಲೆಗೆ ಗುಪ್ತಪೆಟು, ಎದೆಗೆ ,ಹೊಟ್ಟೆಗೆ ಹಾಗೂ ಎರಡು ಪಕ್ಕೆಗಳಿಗೆ ಭಾರಿಗುಪ್ತ ಪೆಟ್ಟಾಗಿದ್ದು ಹಾಗೂ ಎಡಕಿವಿಯಿಂದ ರಕ್ತಸ್ರಾವವಾಗುತಿತ್ತು ಹಾಗೂ ಎಡಗಾಲು ಹಿಮ್ಮಡಿ ಪಾದದ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸ್ರಾವವಾಗುತಿತ್ತು  ನನ್ನ ಗಂಡ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಹಾಗೂ ನನ್ನ ಮಗ ಸಮರ್ಥನಿಗೆ ನೋಡಲು ಆತನಿಗೆ ಮೂಗಿಗೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ ಹಾಗೂ ಎದೆಗೆ ಹಾಗೂ ಮಗ್ಗಲಿಗೆ ಗುಪ್ತಪೆಟ್ಟಾಗಿರುತ್ತದೆ. ನಂತರ ಅಷ್ಟರಲ್ಲಿ ನಮ್ಮ ಅತ್ತೆ ಜಯಮ್ಮಾ ಹಾಗೂ ಮಲ್ಲಣ್ಣಾ ಹಲಚೇರಿ ಇವರು ಕೂಡಾ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನ್ನ ಗಂಡ ಮತ್ತು ನನ್ನ ಮಗ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತವೆ. ಆಗ ಮಲ್ಲಣ್ಣ ಹಲಚೇರಿ ತಿಳಿಸಿದ್ದೇನೆಂದರೆ ನನ್ನ ಗಂಡ ವಿಶ್ವನಾಥ ಇವರು ಮೋಟಾರ ಸೈಕಲ ಮೇಲೆ ಬರುತ್ತಿರುವಾಗ ರಾತ್ರಿ 8-30 ಗಂಟೆ ಸುಮಾರಿಗೆ ಹುಮನಾಬಾದ ರೋಡಿನ ತಾವರಗೇರಾ ಕ್ರಾಸ ಹತ್ತಿರ ಇವರ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಟ್ಯಾಕ್ಟರ ನಂ.ಕೆ.ಎ.32. ಟಿ-777 ಇದರ ಚಾಲಕನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಮಾಡಿ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ. ಅಂತಾ ಘಟನಾ ಸ್ಥಳದಲ್ಲಿ ಜನರು ಹೇಳಿದ್ದು ಗೊತ್ತಾಗಿರುತ್ತದೆ ಅಂತಾ ತಿಳಿಸಿರುತ್ತಾನೆ. ನನ್ನ ಗಂಡ ವಿಶ್ವನಾಥ ಇವರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಮೇಶ್ವರ ತಂದೆ ಮೌನೇಶ ಸುತಾರ ಸಾ|| ಘತ್ತರಗಾ ಗ್ರಾಮ ತಾ|| ಅಫಜಲಪೂರ ಇವರು ದಿನಾಂಕ 24/11/2018 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ತಮ್ಮ ತಂಗಿ ಎಲ್ಲರೂ ಕೂಡಿ ನಮ್ಮೂರಿಗೆ ಹೊಗಬೇಕೆಂದು ಸೊಲ್ಲಾಪೂರದಿಂದ ನೇರವಾಗಿ ಅಫಜಲಪೂರಕ್ಕೆ ಬಸ್ಸು ಇಲ್ಲದ ಕಾರಣ ಅಕ್ಕಲಕೋಟ ವರೆಗೆ ಬಸ್ಸಿನಲ್ಲಿ ಬಂದು, ಅಕ್ಕಲಕೋಟದಿಂದ ಅಫಜಲಪೂರಕ್ಕೆ ಹೋಗುತ್ತಿದ್ದ ಒಂದು ಅಶೋಕ ಲೈಲೆಂಡ್ ಮಿನಿ ಗೂಡ್ಸ ಹಾಲಿನ ವಾಹನ ನಂ ಎಮ್.ಹೆಚ್-13 ಸಿಯು-1154 ನೇದ್ದರಲ್ಲಿ ನಾನು ಮತ್ತು ನನ್ನ ತಾಯಿಯಾದ ವಿಜಯಲಕ್ಷ್ಮೀ, ನನ್ನ ತಂಗಿಯಾದ ಮಾಲಾಶ್ರೀ, ನನ್ನ ತಮ್ಮನಾದ ಸಿದ್ದಾರಾಮ  ಮತ್ತು ನಮ್ಮಂತೆ ದೇವಣಗಾಂವ ಗ್ರಾಮದ ಶಿವಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ ಅವನ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಪ್ಪ ಪೂಜಾರಿ ಎಲ್ಲರೂ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ವಾಹನದಲ್ಲಿ ಮುಂದಿನ ಸಿಟಿನ ಡ್ರೈವರ ಪಕ್ಕದಲ್ಲಿ ನಾನು ಕುಳಿತಿರುತ್ತೇನೆ. ವಾಹನದಲ್ಲಿ ಹಿಂದೆ ಉಳಿದವರೆಲ್ಲರೂ ಕುಳಿತಿದ್ದು  ನಾವು ಸದರಿ ವಾಹನದಲ್ಲಿ ಕುಳಿತು ಹೋಗುತ್ತಿದ್ದಾಗ ಅಫಜಲಪೂರದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ಹೋಗುತ್ತಿದ್ದಾಗ ಸದರಿ ನಾವು ಕುಳಿತ ವಾಹನದ ಚಾಲಕ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ವಾಹನದಲ್ಲಿದ್ದ ನನಗೆ ಎಡ ಹೆಡಕಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿದ್ದವು. ನನ್ನ ತಾಯಿಯಾದ ವಿಜಯಲಕ್ಷ್ಮೀಗೆ ಸೊಂಟಕ್ಕೆ ಮತ್ತು ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ವಾಗಿರುತ್ತದೆ. ನನ್ನ ತಂಗಿಯಾದ ಮಾಲಾಶ್ರೀಗೆ ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ತಮ್ಮ ಸಿದ್ದಾರಾಮನಿಗೆ ಬಲಗೈ ಮುಂಗೈಗೆ ಹಾಗೂ ಬಲಗಡೆ ಪಕ್ಕೆಲುಬಿನ ಮೇಲೆ ತರಚಿದ ರಕ್ತಗಾಯಗಳು ಆಗಿರುತ್ತವೆ. ಹಾಗೂ ದೇವಣಗಾಂವ ಗ್ರಾಮದ ಶಿವಪ್ಪ ಪೂಜಾರಿಗೆ ಎರಡು ಕಾಲುಗಳಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಶಾಂತಾಬಾಯಿ ಪೂಜಾರಿ ಇವರಿಗೆ ಎದೆಗೆ ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಘಟನೆ ನಂತರ ಸದರಿ ವಾಹನದ ಚಾಲಕ ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಸದರಿ ನಾವು ಬರುತ್ತಿದ್ದ ವಾಹನದ ಚಾಲಕ ವಾಹನವನ್ನು ಟ್ಯಾಕ್ಟರಗೆ ಡಿಕ್ಕಿ ಪಡಿಸಿದ್ದು, ಸದರಿ ಟ್ಯಾಕ್ಟರಗೆ ಯಾವುದೆ ಡ್ಯಾಮೇಜ ಹಾಗೂ ಯಾರಿಗೂ ಏನು ಆಗದ ಕಾರಣ ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ತಗೆದುಕೊಂಡು ಹೋಗಿರುತ್ತಾನೆ. ಘಟನೆ ನಂತರ ನಾವೆಲ್ಲರೂ ಅಫಜಲಪೂರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನನ್ನ ತಾಯಿ ಮತ್ತು ನನ್ನ ತಂಗಿಗೆ ಹೆಚ್ಚಿನ ಗಾಯಗಳು ಆಗಿದ್ದರಿಂದ ಅವರನ್ನು ಕಲಬುರಗಿಯ ಕಾಮರೇಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.