POLICE BHAVAN KALABURAGI

POLICE BHAVAN KALABURAGI

31 October 2011

GULBARGA DIST REPORTED CRIME

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಅನಂತ @ ಆನಂದ ತಂದೆ ಕಿಶನರಾವ ಉಟಗಿ ರವರು ಮೋಟಾರ ಸೈಕಲ್ ನಂ: ಕೆಎ 32 ಕ್ಯೂ 1208 ನೇದ್ದರ ಮೇಲೆ ರಾತ್ರಿ 10-15 ಗಂಟೆ ಸುಮಾರಿಗೆ ರೈಲ್ವೆ ಅಂಡರ ಬ್ರೀಜ್ದಿಂದ ರಾಮ ಮಂದಿರ ರೋಡಿನ ಮಧ್ಯ ಕ್ರಿಷ್ಣಾ ಕಾನ್ವೆಂಟ ಶಾಲೆ ಹತ್ತಿರ ರೈಲ್ವೆ ಅಂಡರ ಬ್ರೀಜ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಹಂಪಿನ ಮೇಲೆ ತನ್ನಿಂದ ತಾನೆ ನಿಯಂತ್ರಣ ತಪ್ಪಿ ಬಿದ್ದು ಭಾರಿ ಗಾಯಗೊಳಿಸಿಕೊಂಡಿರುತ್ತಾನೆ ಅಂತಾ ಶ್ರೀ ಕೀಶನರಾವ ತಂದೆ ಶ್ರೀನಾರಾಯಣರಾವ ಉಟಗಿ ಸಾ: ಗಾಬರೆ ಲೇಔಟ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 138/2011 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಮತಿ ಸರುಬಾಯಿ ಗಂಡ ಶಿವಲಿಂಗಪ್ಪ ಗುಡ್ಡಡಗಿ ಉ: ಕೂಲಿ ಕೆಲಸ ಸಾ: ಜಗತ ಗುಲಬರ್ಗಾ ರವರು ನಾನು ರಾತ್ರಿ 8 -00 ಸುಮಾರಿಗೆ ಮಹಾ ನಗರ ಪಾಲಿಕೆ ಎದುರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ CHESSI NO:MD2DHDKZUCF43902 ENGINE NO: DKGBUF58923 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 137/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಗುರುಪುತ್ರ ತಂದೆ ಮಹಾಂತಪ್ಪ ಯರಗಲ್ ಸಾ|| ಜೀವನ ಪ್ರಕಾಶ ಶಾಲೆ ಹತ್ತಿರ ಹಳೆ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ:29/10/2011 ರಂದು ರಾತ್ರಿ 9:00 ಗಂಟೆಯವರೆಗೆ ವೆಲ್ಡಿಂಗ ವರ್ಕ ಶಾಪ ಕೆಲಸ ಮುಗಿಸಿಕೊಂಡು ಅಂಗಡಿಗೆ ಕೀಲಿ ಹಾಕಿಕೊಂಡು ಹೋಗಿರುತ್ತೇನೆ ದಿನಾಂಕ:30/10/2011 ರಂದು ಬೆಳಿಗ್ಗೆ ಬಂದು ನೋಡಲಾಗಿ ಅಂಗಡಿಯ ಕೀಲಿ ಮುರಿದಿದ್ದು ಅಂಡಿಯಲ್ಲಿದ್ದ ಕಟಾರ ಮಶೀನ್, ವೆಲ್ಡಿಂಗ ಮಶೀನ್, ಕಬ್ಬಿಣದ ತುಕಡಿಗಳು, ಗ್ರಾಂಡರ್ ಮಶೀನ್ ಹೀಗೆ ಸುಮಾರು ಸುಮಾರು 10,750/- ಬೆಲೆ ಬಾಳುವ ಸಾಮಾನುಗಳು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಲತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:118/2011 ಕಲಂ:457,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ ಸುಭಾಶ್ಚಂದ್ರ ತಂದೆ ಶಾಂತಪ್ಪಾ ಮೂಲಗೆ ಸಾಃ ಬೆಳಕೋಟಾ ಪುರ್ನವಸತಿ ಕೇಂದ್ರ ಕಮಲಾಪೂರ ರವರು ನನ್ನ ಅಣ್ಣನ ಮಗಳಾದ ಸಂಗೀತಾ ಇವಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೈದ್ರಾಬಾದ ದಿಂದ ನಮ್ಮೂರಿಗೆ ಬಂದು ಹಬ್ಬ ಮುಗಿಸಿಕೊಂಡು ಹೊಗುತ್ತಿದ್ದಾಗ ನಾನು, ನನ್ನ ಅಣ್ಣನ ಹೆಂಡತಿಯಾದ ನಾಗಮ್ಮಾ ಇಬ್ಬರು ಕೂಡಿಕೊಂಡು ಸಂಗೀತಾ ಇವಳಿಗೆ ಹೈದ್ರಾಬಾದಕ್ಕೆ ಕಳುಹಿಸಲು ಕಮಲಾಪೂರ ಬಸ್ಸ ಸ್ಟ್ಯಾಂಡಕ್ಕೆ ಬಂದು ಬಸ್ಸ ಹತ್ತಿಸಿ ಮರಳಿ ಮನೆಗೆ ಬರುತ್ತಿರುವಾಗ ಸರಕಾರಿ ಪದವಿ ಪೂರ್ವ ಕಾಲೇಜಿನ ಹನುಮಾನದ ದೇವರ ಗುಡಿಯ ಹತ್ತಿರ ಕಾರ ನಂ. ಕೆಎ:32, ಎಂ:5513 ನೇದ್ದರ ಚಾಲಕನಾದ ಶಿವರಾಜ ತಂದೆ ಚೋಳಪ್ಪಾ ನಂದಿ ವಯ: 51 ವರ್ಷ ಸಾಃ ವಿದ್ಯಾ ನಗರ ಗುಲಬರ್ಗಾ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಅತ್ತಿಗೆ ನಾಗಮ್ಮಾ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 134/2011 ಕಲಂ. 279, 337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ. ದತ್ತಾತ್ರೀ ತಂದೆ ಮಾಣಿಕರಾವ ಶ್ರೀಮಾಳೆ ಸಾಃ ಹಲಬರ್ಗಾ ತಾಃ ಭಾಲ್ಕಿ ಜಿಃ ಬೀದರ ರವರು ನಾವು ಹೊಸ ಹುಂಡಾಯಿ ಸ್ಯಾಂಟ್ರೋ ಕಾರ ನಂ. ಎಂಹೆಚ್:24, ವಿಃ4415 ನೇದ್ದನ್ನು ಖರಿದಿ ಮಾಡಿರುವದರಿಂದ ಪೂಜೆ ಮಾಡಿಸಲು ದೇವಲ ಗಾಣಗಾಪೂರಕ್ಕೆ ನಾನು, ನನ್ನ ಹೆಂಡತಿ, ಮಕ್ಕಳು ಹಾಗು ನನ್ನ ಭಾವನ ಮಗ ಮಚೇಂದ್ರ ಎಲ್ಲರೂ ಕೂಡಿಕೊಂಡು ಹೋಗಿ ಮರಳಿ ನಮ್ಮೂರಿಗೆ ಬರುತ್ತಿರುವಾಗ ಕಿಣ್ಣಿಸಡಕ ಗ್ರಾಮದ ಮುಲ್ಲಾ ಮಾರಿ ಸೇತುವೆ ದಾಟುತ್ತಿರುವಾಗ ನಮ್ಮ ಎದುರುಗಡೆಯಿಂದ ಟಾಟಾ ಇಂಡಿಗೋ ಕಾರ ನಂ.ಎಪಿ:10,ಎಕೆ:6517ನೇದ್ದು ಇದ್ದು ಅದರ ಚಾಲಕನ ಹೆಸರು ಡಾ|| ಜಯವಂತ ತಂದೆ ದತ್ತಾತ್ರೇಯರಾವ ಗುತ್ತೇದಾರ ಸಾಃಚಿಟಗುಪ್ಪಾ ತಾಃಹುಮನಾಬಾದ ಜಿಃಬೀದರ ಹಾಃವಃಸಿಕಿಂದ್ರಾಬಾದ (ಎಪಿ) ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ . ನನಗೆ ಮತ್ತು ನನ್ನ ಹೆಂಡತಿಗೆ ಗಾಯಗಳಾಗಿರುತ್ತವೆ . ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 135/2011 ಕಲಂ 279, 337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

30 October 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಶಂಕರರಾವ ತಂದೆ ಬುದಪ್ಪ ಹುಲಿ ಸಾ|| ಪ್ಲಾಟ ನಂ 44 ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಗುಲಬರ್ಗಾರವರು ನಾನು ದಿ:29.10.11 ರಂದು ಬೆಳಗ್ಗೆ 1000 ಗಂಟೆಗೆ ಕೊರಂಟಿ ಹನುಮಾನ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋಗಿದ್ದು ದೇವಸ್ಥಾನದ ಹತ್ತಿರ ಮೋಟಾರ ಸೈಕಲ್ ನಂ: ಕೆ.ಎ 38 ಜೆ 7887 ಸ್ಪೆಲೆಂಡರ್ ಅಕಿ 25000 ನೇದ್ದನ್ನು ನಿಲ್ಲಿಸಿ ದರ್ಶನ ಮಾಡಿಕೊಂಡು ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 193/11 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಶ್ರೀ ರೇವಣಸಿದ್ದಪ್ಪ ತಂದೆ ರಾಮಚಂದ್ರ ಬಿರಾದರ ಉಃ ಮಾಡಬೂಳ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಅಂತ ಕರ್ತವ್ಯ ಸಾಃ ಹಣಮಂತ ಪೂಜಾರಿ ಇವರ ಬಾಡಿಗೆ ಮನೆ ಅಣ್ಣೆಮ್ಮ ನಗರ ಗುಲಬರ್ಗಾ ನಾವು ದಿಪಾವಳಿ ಹಬ್ಬದ ಪ್ರಯುಕ್ತ ಇದ್ದರಿಂದ ನನ್ನ ಹೆಂಡತಿ ಮಕ್ಕಳು ಊರಿಗೆ ಹೊಗಿದ್ದರು ನಾನು ನಿನ್ನೆ ದಿನಾಂಕ.28/10/2011 ರಾತ್ರಿ 09-00 ಗಂಟೆ ಸೂಮಾರಿಗೆ ಕರ್ತವ್ಯದಿಂದ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಅಲಮಾರಿಯ ಕೀಲಿ ಮುರಿದು ಅಲಮಾರಿಯಲ್ಲಿದ್ದ 10 ಗ್ರಾಂ ಬಂಗಾರದ ಚೈನ್ ಅ.ಕಿ. 23,000/- ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ 151/2011 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ: ಡಾಃ ಸೈಯದ ಹುಸೇನ ಖಾದ್ರಿ ತಂದೆ ಸೈಯದ ಸುಲ್ತಾನ ಮೈನೋದ್ದಿನ ಖಾದ್ರಿ ಸಾಃ ಮಹಿಬೂಬ ನಗರ ಗುಲಬರ್ಗಾ ರವರು ನಾನು ನನ್ನ ಹಿರೋ ಹೊಂಡಾ ಮೋರಾಟ ಸೈಕಲ ನಂ. ಕೆ.ಎ 32 ಎಸ್. 2332 ನೇದ್ದನ್ನು ರಿಂಗ್ ರೋಡ ಖರ್ಗೆ ಪೆಟ್ರೋಲ್ ಪಂಪ ಹತ್ತಿರ ದಿನಾಂಕಃ 30/01/2011 ರಂದು ರಾತ್ರಿ 07:30 ಗಂಟೆಗೆ ನಿಲ್ಲಿಸಿ ನನ್ನ ಕೆಲಸ ಮುಗಿಸಿಕೊಂಡು ಮರಳಿ 9:30 ಪಿ.ಎಂ. ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕಃ 02/09/2011 ರಂದು ಎಂ.ಬಿ ನಗರ ಪೊಲೀಸ ಠಾಣೆಯಲ್ಲಿ ದ್ವಿ ಚಕ್ರ ವಾಹನಗಳು ಪತ್ತೆಯಾದ ಬಗ್ಗೆ ವಿಚಾರಿಸಲಾಗಿ ನನ್ನ ದ್ವಿಚಕ್ರ ವಾಹನ ಆರೀಪ್, ಮಹ್ಮದ ಶಫೀ ಹಾಗು ಅಸ್ಮತ ಅಲಿ ಇವರು ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:152/2011 ಕಲಂ 379 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶರಣಮ್ಮ ಗಂಡ ದಿ:ರೇವಣಸಿದ್ದಪ್ಪ ಪೂಜಾರಿ ಸಾ: ವೀರಭದ್ರೇಶ್ವರ ಕಾಲನಿ ಉದನೂರ ರೋಡ ಗುಲಬರ್ಗಾ ರವರು ನನ್ನ ಎಮ್ಮೆಯನ್ನು ಉದನೂರ ಕ್ರಾಸ ಹತ್ತಿರದಿಂದ ಹೊಡೆದುಕೊಂಡು ಹೊರಟಾಗ ಹೈಕೋರ್ಟ ಕಡೆಯಿಂದ ಕೆಎ 32 ಬಿ-4944 ಕಾರು ಚಾಲಕ ತನ್ನ ಕಾರನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಎಮ್ಮೆಗೆ ಜೋರಾಗಿ ಡಿಕ್ಕಿ ಹೋಡೆದನು. ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಮ್ಮ: 321/2011 ಕಲಂ. 279, 429 ಐಪಿಸಿ ಸಂ/ 187 ಐಎಂವಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

29 October 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ಮರೆಮ್ಮ ಗಂಡ ಸಣ್ಣಮರೆಪ್ಪ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮ ದೇವಸ್ಥಾನದ ಹತ್ತಿರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಪೋಚಪ್ಪ ತಂದೆ ಮರೆಯಪ್ಪ, ಮರೆಪ್ಪ ತಂದೆ ಪೋಷಪ್ಪ, ಮುತ್ತಮ್ಮ ಗಂಡ ಪೋಚಪ್ಪ, ನಾಗಮ್ಮ ಗಂಡ ಸಾಮಿ ಅಮಲಪ್ಪ ತಂದೆ ಮರೆಯಪ್ಪ ಯಲ್ಲಮ್ಮ ತಂದೆ ಅಮಲಪ್ಪ, ದೊಡ್ಡ ನಾಗಮ್ಮ ಗಂಡ ಅಮಲಪ್ಪ, ಹಾಗೂ ಸೌರಮ್ಮ ಗಂಡ ಬಿಚ್ಚಪ್ಪ ಇವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಗಂಡ ಮತ್ತು ನನ್ನ ಮಗ ಯಾಕೇ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಪೋಚಪ್ಪ ತಂದೆ ಮರೆಪ್ಪ ಹಾಗೂ ಮತ್ತಮ್ಮ ಇವರು ನನಗೆ ತಲೆಗೆ ಬೆನ್ನಿಗೆ, ಬಡಿಗೆಯಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿದರು. ಬಿಡಿಸಲು ಬಂದ ನನ್ನ ಗಂಡನಿಗೆ ಮತ್ತು ಮಗನಿಗೂ ಸಹ ಬೆನ್ನಿನ ಮೇಲೆ, ತಲೆಯ ಮೇಲೆ ಬಡಿಗೆಯಿಂದ ಹೊಡೆದು ಅಲ್ಲದೇ ಕೈಯಿಂದ ಕಲ್ಲಿನಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 191/2011 ಕಲಂ :143, 147, 354, 323, 324, 506, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ನಾಗಮ್ಮ ಗಂಡ ಸಾಮಿ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ ಗುಲಬರ್ಗಾ ರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮನ ಗುಡಿ ಮುಂದಿನ ಜಾಗೆಯಲ್ಲಿ ನಿಂತಾಗ ದುರ್ಗಪ್ಪ ತಂದೆ ಯರ್ರಪ್ಪ ಪೊತರಾಜ ಸಂಗಡ ಇನ್ನೂ 4 ಜನರು ಕೂಡಿ ಬಂದವರೇ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿದ್ದು ಆಗ ಅಮಲಪ್ಪ ತಂದೆ ಮರೆಪ್ಪ ನನಗೆ ಮತ್ತು ನನ್ನ ಗಂಡನಿಗೆ ಮತ್ತು ಪೋಚಪ್ಪ ತಂದೆ ಮರೆಪ್ಪ ಇವರು ಬಿಡಿಸಲು ಬಂದಾಗ ಇವರಿಗೂ ಸಹ ಕೈಯಿಂದ, ಬಡಿಗೆಯಿಂದ, ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 192/2011 ಕಲಂ :143, 147, 504, 354, 323, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ 22/10/11 ರಂದು ಮದ್ಯಾನ್ನ ಸುಮಾರಿಗೆ ಶ್ರೀ ಭೀಮರಾವ ತಂದೆ ಸಿದ್ರಾಮ ಹಿಟಕರ್ ವ:40 ಜಾ: ವಡ್ಡರ ಉ:ಖಣಿ ಕೆಲಸ ಸಾ: ಮದಕಲ್ ತಾ:ಸೇಡಂ ಮನೆಯಿಂದ ಮದಗಲ್ ಗ್ರಾಮಕ್ಕೆ ಹೊಗುತ್ತೇನೆ ಅಂತಾ ಶಹಾಬಾದದ ಮನೆಯಿಂದ ಹೊದವನು ಮದಗಲ್ ಗ್ರಾಮಕ್ಕೆ ಹೋಗದೇ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾನೆ ಅಂತಾ ಶ್ರೀ ಬಾಬು ತಂದೆ ಸಿದ್ರಾಮ ಹಿಟಕರ್ ಸಾ:ಶಿಬರಕಟ್ಟಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 160/11 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಿದ ಬಗ್ಗೆ :

ಚೌಕ ಪೊಲೀಸ್ ಠಾಣೆ : ಪಾಪುಲರ ಪ್ರಂಟ ಆಫ ಇಂಡಿಯಾ ಸಂಘಟನೆಯ ಗುಲಬರ್ಗಾ ಜಿಲ್ಲಾ ಅಧ್ಯಕ್ಷರಾದ ನಾಸೀರ ಹುಸೇನ ರವರ ನೇತೃತ್ವದಲ್ಲಿ 100-150 ಜನರು ಕೂಡಿಕೊಂಡು ಇಲಾಖೆಯ ಯಾವುದೇ ಪೂರ್ವಾನುಮತಿ ಇಲ್ಲದೆ ಬಸ್ ಮತ್ತು ಕ್ರೂಷರ ಜೀಪ ತೆಗೆದುಕೊಂಡು ಬಹುಮನಿ ಕೋಟೆಯ ಮುಖ್ಯ ಆವರಣದಲ್ಲಿ ಅಕ್ರಮ ಕೂಟ ರಚಿಸಿಕೊಂಡು ಅತಿಕ್ರಮಣ ಪ್ರವೇಶ ಮಾಡಿ ಜಮಾಯಿಸಿ, ರಸ್ತೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಡೆದು ಅಡ್ಡಿ ಪಡಿಸಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ಭಿಮಾಶಂಕರ ಕಣ್ಣಿ ಸಾಃ ಭಾರತ ಪುರಾತತ್ವ ಇಲಾಖೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 224/2011 ಕಲಂ 143,147,447,283,341,149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಓಂಪ್ರಕಾಶ ತಂದೆ ನೂರಂದಪ್ಪNN ಮಲಕೊಡ ಸಾ|| ನೇರು ಚೌಕ ಆರ್,ಬಿ.ರೋಡ ಶಾಹಾಬಾದ ತಾ|| ಚಿತ್ತಾಪೂರ ರವರು ನಾನು ದಿನಾಂಕ: 20/08/2011 ರಂದು 1900 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟದಲ್ಲಿರುವ ಕಾಮತ ಹೊಟೇಲ ಎದುರುಗಡೆ ನನ್ನ ಮೋಟರ ಸೈಕಲ ನಂ: ಕೆಎ 32 ಎಲ್ 4264 ಅ||ಕಿ|| 30,000/- ನೇದ್ದನ್ನು ನಿಲ್ಲಿಸಿ ಕಾಮತ ಹೊಟೇಲ ಒಳಗಡೆ ಹೊಗಿ ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 204/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಪ್ರೇಮನಾಥ ತಂದೆ ಶಿವಶರಣಪ್ಪಾ ಕಾಮಶೆಟ್ಟಿ ಉದ್ಯೋಗ; ಶಿಕ್ಷಕ ಸರಕಾರಿ ನೌಕರ ವಿಳಾಸ;-ಅವರಾದ (ಬಿ) ತಾ;ಜಿ;ಗುಲಬರ್ಗಾ ಸದ್ಯ|| ವಿಠಲರಾವ ಜೈಶಟ್ಟಿ ರೇವಣಸಿದ್ದೇಶ್ವರ ಕಾಲೂನಿ ಹುಮನಾಬಾದ ರೋಡ ಗುಲಬರ್ಗಾ ರವರು ನಾನು ದಿನಾಂಕ.27-10-2011 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಮನೆಯ ಕೀಲಿ ಹಾಕಿಕೊಂಡು ಅವರಾದ (ಬಿ) ಗ್ರಾಮಕ್ಕೆ ಹೋಗಿರುತ್ತೆನೆ. ದಿನಾಂಕ. 28-10-2011 ರಂದು ನಮ್ಮ ಪಕ್ಕದ ಮನೆಯವರಾದ ಸಿದ್ರಾಮಪ್ಪಾ ತಂದೆ ಗುರುಬಸ್ಸಪ್ಪಾ ಪಾಟೀಲ್ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಿಮ್ಮ ಮನೆಯ ಬಾಗಿಲ ಕೊಂಡಿ ಮುರಿದಿದ್ದು, ಬಾಗಿಲು ತೆರೆದಿರುತ್ತದೆ. ಮನೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾಣು ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಆಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 320/2011 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಳಾಗಿದೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಬಸವಣ್ಣಪ್ಪ ಲೆಂಡೆ ಸಾ: ಜವಳಗಾ ಗ್ರಾಮ ರವರು ನಾನು ಉಮರ್ಗಾ ತಾಲೂಕಿನ ಖಸಗಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಮರಳಿ ಬಸ್ಸಿನಲ್ಲಿ ಬರುತ್ತಿರುವಾಗ ನಾವು ಕುಳಿತ ಬಸ್ಸು ಲಿಂಗಣ್ಣ ತಂದೆ ಸೈಬಣ್ನ ಡಿಗ್ಗಿ ಇವರ ಹೋಲದ ಹತ್ತಿರ ರೋಡಿನ ಮೇಲೆ ಬಸ್ಸ ಬಂದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಅತೀ ವೇಗದಿಂದ ಹಾಗು ಅಲಕ್ಷತನದಿಂದ ಬಂದು ಬಜಾಜ ಎಂ80 ಸವಾರನಿಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದನು ನಾವು ಬಸ್ಸಿನಿಂದ ಕೆಳಗೆ ಇಳಿದು ನೋಡಲಾಗಿ ಬಜಾಜ ಎಂ80 ವಾಹನ ನಂ ಎಂಹೆಚ್-12 ವಿ.ಎ-1397 ಇದ್ದು ಅದರ ಸವಾರ ಪರಮೇಶ್ವರ ತಡಕಲೆ ಇದ್ದು ಅಪಗಾತದಿಂದ ಅವನಿಗೆ ಭಾರಿ ತಕರ ಗಾಯವಾಗಿತ್ತು ಅಪಘಾತ ಪಡಿಸಿದ ಹೀರೊ ಹೊಂಡಾ ಸ್ಪ್ಲೆಂಡರ ಮೋಟರ ಸೈಕಲ ನಂ ಕೆ.ಎ-32, ಎಕ್ಸ್- 6096 ಇದ್ದು ಅದರ ಮೇಲಿದ್ದ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿರರುತ್ತವೆ. ಉಪಚಾರ ಫಲಕಾರಿಯಾಗದೇ ಪರಮೇಶ್ವರನು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನನೆ ನಂ: 250/2011 ಕಲಂ 279, 337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

28 October 2011

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಸುಮಾರು 1 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ ವಗೈರೆ ವಶ ಓರ್ವ ಕಳ್ಳನ ಬಂದನ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೇಡಂ ರೋಡಿನ ಗೋಪಾಲ ಪ್ಯಾಕ್ಟರಿ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಓರ್ವ ಮನೆ ಕಳವು ಮಾಡುವ ವ್ಯಕ್ತಿಯನ್ನು ಬಂದಿಸಿರುತ್ತಾರೆ. ಆರೊಪಿತನಿಂದ ಬಂಗಾರದ ಆಭರಣಗಳು, ತಾಮ್ರದ ಸಾಮಾನುಗಳು ಕೇಬಲ್ ವಾಯರ ವಗೈರೆ ಹೀಗೆ ಸುಮಾರು 1 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಸದರಿಯವನು ಕಳೆದ ಒಂದು ವರ್ಷದಿಂದ ಗುಲಬರ್ಗಾದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

     ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೊಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಅಸ್ಲಂ ಬಾಷಾ ಪಿಐ ಡಿ.ಎಸ್.ಬಿ ಘಟಕ ಗುಲಬರ್ಗಾ ಹಾಗೂ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಗುರುಶರಣ ಹೆಚ್.ಸಿ, ಶಿವಪುತ್ರ ಸ್ವಾಮಿ, ಅಶೋಕ, ಪ್ರಭಾಕರ, ಅರ್ಜುನ, ಮಶಾಕ, ಚಂದ್ರಕಾಂತ ಮುರುಡ, ಬಲರಾಮ ರಜಪುತ ರವರು ಖಚತಿ ಭಾತ್ಮಿ ಮೇರೆಗೆ ಇಂದು ದಿನಾಂಕ 28/10/2011 ರಂದು ಬೆಳಿಗ್ಗೆ 6-30 ಗಂಟೆಗೆ ಸೇಡಂ ರೋಡಿನ ಗೊಪಾಲ ಪ್ಯಾಕ್ಟರಿ ಹತ್ತಿರ ಮಿಂಚಿನ ದಾಳಿ ಮಾಡಿ ಬಿಗ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಅರವಿಂದ ತಂದೆ ಶಾಹೀರ ಉಪಾಧ್ಯಯ ವಃ 18 ವರ್ಷ ಸಾ|| ಬಾಪು ನಗರ ಗುಲಬರ್ಗಾ ಇತನನ್ನು ಹಿಡಿದುಕೊಂಡು ಠಾಣೆಗೆ ತಂದು ಕೂಲಂಕೂಶವಾಗಿ ವಿಚಾರಣೆ ಮಾಡಲಾಗಿ ಆರೊಪಿತನು ಈಗ ಸುಮಾರು 3 ತಿಂಗಳಿಂದ ಗುಲಬರ್ಗಾ ನಗರದ ಬಸವೇಶ್ವರ ಕಾಲೋನಿ, ಆದರ್ಶ ನಗರ, ಪ್ರಗತಿ ಕಾಲೋನಿ, ರಾಜಾಪುರ ಜಿಡಿಎ ಪ್ರಶಾಂತ ನಗರ (ಬಿ) ಬಡಾವಣೆಗಳಲ್ಲಿಯ ಬೀಗ ಹಾಕಿದ ಮನೆಗಳನ್ನು ಹಾಗೂ ಭೂಪಾಲ ತೆಗನೂರ ಸಿಮಾಂತರದಲ್ಲಿ ಕೇಬಲ್ ಕಳ್ಳತನ ಮಾಡಿದ ಬಗ್ಗೆ ತನಿಖೆ ಕಾಲದಲ್ಲಿ ಒಪ್ಪಿಕೊಂಡಿದ್ದು. ಸದರಿ ಆರೊಪಿತನಿಂದ ಸುಮಾರು 1 ಲಕ್ಷ ಮೌಲ್ಯದ ಬಂಗಾರ\ ಆಭರಣಗಳು, ತಾಮ್ರದ ಬಾಂಡೆ ಸಾಮಾನುಗಳು, ಕೇಬಲ್ ವಾಯರ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನ ಒಪ್ಪಿಸಲಾಗುತ್ತಿದ್ದು. ಮತ್ತು ಈ ಬಗ್ಗೆ ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ

ಮುಧೋಳ ಪೊಲೀಸ್ ಠಾಣೆ : ಶ್ರೀ ದೇವಿಂದ್ರಪ್ಪಾ ಶಾಖಾಧಿಕಾರಿಗಳು ಜೆಸ್ಕಂ ಮುಧೋಳ ಗ್ರಾಮ ರವರು ರಾಮಚಂದ್ರಪ್ಪಾ ತಂದೆ ಬುಗ್ಗೋಜಿ ಇತನು ದಿನಾಂಕ: 27-10-2011 ರಂದು ರಾತ್ರಿ 8-00 ಗಂಟೆಗೆ ಮುಧೋಳ ಗ್ರಾಮದಲ್ಲಿರುವ ಜೆಸ್ಕಾಂ ಆಫೀಸಿನ ಶೇಟರ ಕೀಲಿ ಮುರಿದು ಓಳಗೆ ಇದ್ದ ಆಲಮಾರಿಯ ಕೀಲಿಮುರಿದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2011 ಕಲಂ 454, 380 511 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ರಸ್ತೆಗೆ ಅಡೆ ತಡೆ ಮಾಡಿದ ಬಗ್ಗೆ

ಆಳಂದ ಪೊಲೀಸ ಠಾಣೆ: ಶ್ರೀ ವಿಜಯಕುಮಾರ ಪಿ.ಎಸ್.ಐ (ಕಾ&ಸು) ಆಳಂದ ರವರು ದಿನಾಂಕ: 28/10/2011 ರಂದು ಆಳಂದ ಪಟ್ಟಣದಲ್ಲಿ ತಾಲೂಕ ಪಂಚಾಯತಿಯ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆ ಮುಗಿಸಿಕೊಂಡು ಠಾಣಾ ಜೀಪಿನಲ್ಲಿ ಸಿಬ್ಬಂದಿಯವರಾದ ಪಿ.ಸಿ 1289 ಶೇಖ ಮಹಿಬೂಬ, ಪಿ.ಸಿ 61 ಸಿದ್ದಾರಾಮ, ಪಿ.ಸಿ 1280 ಗುರುಶಾಂತ,ಪಿ.ಸಿ 731 ಶಬ್ಬೀರ ಮೀಯ್ಯ ಇವರನ್ನು ಜೊತೆಯಾಗಿಸಿಕೊಂಡು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗು ರಸ್ತೆ ಸಂಚಾರಿ ಸುರಕ್ಷತಾ ನಿಮಿತ್ಯ ಪೆಟ್ರೋಲಿಂಗ ಮಾಡುತ್ತಾ ರಜವಿ ರೋಡ ಕಡೆಯಿಂದ ದರ್ಗಾ ಕ್ರಾಸ ಕಡೆ ಹೋರಟಾಗ 12.30 ಪಿ.ಎಂಕ್ಕೆ ಬಸ-ಸ್ಟ್ಯಾಂಡ ಎದರುಗಡೆ ಮುಖ್ಯ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳು ದಟ್ಟಣೆಯಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದನ್ನು ಕಂಡು ಸಿಬ್ಬಂದಿ ಸಹಿತ ಕೆಳಗಿಳಿದು ನೋಡಲಾಗಿ ಒಂದು ಲಾರಿ ನಂ ಕೆ.ಎ-39-1350 ನಿಂತಿದ್ದು ಸದರ ಲಾರಿಯು ರಸ್ತೆಯಿಂದ ಹೋಗಿ ಬರುವ ವಾಹನಗಳಿಗೆ ಅಡೆತಡೆ ಮಾಡುವಂತೆ ನಿಲ್ಲಿಸಿ ಅದರ ಚಾಲಕ ಎಲ್ಲಿಯೋ ಹೊರಟು ಹೋಗಿದ್ದನು ಚಾಲಕನ ಹೆಸರು ಯಶ್ವಂತ ತಂದೆ ಭೀಮಶಾ ಸಜ್ಜನ ವ:- 51 ವರ್ಷ ಉ;- ಲಾರಿ ಚಾಲಕ ಜಾ:- ಹರಿಜನ ಸಾ:- ನಾಗನಳ್ಳಿ (ಪಿ.ಟಿ.ಸಿ) ಗುಲ್ಬರ್ಗಾ ರವರ ಮೇಲೆ ಠಾಣೆ ಗುನ್ನೆ ನಂ 249/2011 ಕಲಂ 283 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಗ್ರತೆ ಕ್ರಮ :
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಆಳಂದ ರವರು ಶ್ರೀಮತಿ ಕಲ್ಲುಬಾಯಿ ಗಂಡ ರಮೇಶ ಆಡೆ ಸಾ:ತೀರ್ಥ ತಾಂಡಾ ರವರ ತನ್ನ ಮಗಳಾದ ಜ್ಯೋತಿ ಇವಳಿಗೆ ಹೊಲಕ್ಕೆ ಕೆಲಸಕ್ಕೆ ಹೊಗಿ ಮರಳಿ ಬರುವಾಗ ತಾಂಡಾದ ಪೊರಮನ್ನ ತಂದೆ ಸೋಮ್ಲು ಪವಾರ ಇತನು ಅಪಹರಿಸಿಕೊಂಡು ಹೊಗಿದನ್ನು ಕೇಳಲು ಹೊದಾಗ ಪೊರಮನ್ನ ಕಡೆಯವರಾದ ಸಂಜು ಪವಾರ, ರಾಜು ಪವಾರ, ಅನೀಲ ಪವಾರ , ಶಾಂತಾಬಾಯಿ ಪವಾರ, ಸುನಿತಾ ಪವಾರ ಜಗುಬಾಯಿ ಪವಾರ ಸುರೇಖಾ ಪವಾರ ಶಿವಬಾಯಿ ಪವಾರ ಸೋಮು ಪವಾರ ಎಲ್ಲರು ಕುಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೋಡೆಬಡೆ ಮಾಡಿ ಗಾಯಗೋಳಿಸಿ ಜೀವದ ಭಯ ಹಾಕಿ ಸದರಿ ಪ್ರಕರಣದಲ್ಲಿ ಅಫಹರಣಕ್ಕೊಳಗಾದ ಜ್ಯೋತಿ ಇವಳ ಕೊಲೆಯಲ್ಲಿ ಅಂತ್ಯಾಗೊಂಡಿದ್ದು ಈ ಬಗ್ಗೆ ಆಳಂದ ಪೊಲೀಸ್ ಠಾಣೆ 238/11 ಕಲಂ 143,147,148,323,324,341,504, 506,363.366[ಎ]ಸಂಗಡ 149 ಐಪಿಸಿ ಮತ್ತು 302 ಐಪಿಸಿ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ನಂತರ ಸದರ ತಾಂಡಾದಲ್ಲಿ ನರ್ಸಿಂಗ ಅಲಿಯಾಸ ಪೊರಮಿನ ತಂದೆ ಸೊಮ್ಲು ಪವಾರ ಇವರು ಅದೆ ದಿನ ದಿನಾಂಕ 08/10/2011 ರಂದು ಮೊದಲಿನ ಪ್ರಕರಣದ ಫಿರ್ಯಾದಿಯವರ ಕಡೆಯಾದ ಮಾನು ಆಡೆ, ಸಂತೊಶ ಆಡೆ, ಚಂದು ಆಡೆ, ಶಂಕರ ಆಡೆ, ಇವರಲ್ಲರು ಸೇರಿ ಕೊಲೆ ಪ್ರಕರಣದ ಕೊಲೆ ವಿಷಯದ ದ್ವೇಶದಲ್ಲಿ ತನಗೆ ಮತ್ತು ತನ್ನ ತಮ್ಮ ಸಂಜು ಇತನಿಗೆ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಕೊಟ್ಟ ದೂರಿನ ಅನ್ವಯ ಆಳಂದ ಠಾಣೆ ಗು.ನಂ 239/11 ಕಲಂ 323,324,504,ಸಂಗಡ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ಪ್ರಕರಣದಲ್ಲಿನ ಆರೋಪಿತರು ಒಬ್ಬರ ಮೇಲೊಬ್ಬರು ಕೊಲೆಯ ಮತ್ತು ಅಪಹರಣದ ಮತ್ತು ಅದೆ ವಿಷಯದಲ್ಲಿ ತಕರಾರದಲ್ಲಿ ಎರಡು ಪಂಗಡದವರು ದ್ವೇಶ ಭಾವನೆ ಹೊಂದಿದ್ದು ಕಂಡು ಬರುತ್ತದೆ. ಕಾರಣ ಮೇಲೆ ಧಾಖಲಾದ ಎರಡು ಪ್ರಕರಣಗಳು ಒಂದೆ ಗ್ರಾಮದ ತಾಂಡಾದಲ್ಲಿ ಘಟಿಸಿದ್ದು ಈ ಕೆಳಗೆ ನಮೂದಿಸಿದ ಎರಡು ಪಂಗಡದವರು ಒಬ್ಬರ ಮೇಲೊಬ್ಬರು ದ್ವೇಶಬಾವನೆ ಸಾದಿಸುತ್ತಾ ಒಬ್ಬರ ಮೇಲೊಬ್ಬರು ದೂರು ಧಾಖಲಿಸುವ ರೂಢಿಗತ ಮಾಡಿಕೋಂಡಂತೆ ಕಂಡುಬಂದ್ದಿದ್ದು ಗ್ರಾಮದ ತಾಂಡಾದಲ್ಲಿ ಯಾವದೆ ಸಮಯದಲ್ಲಿ ಶಾಂತತೆ ಭಂಗ ಉಂಟಾಗಿ ಎರಡು ಪಂಗಡಗಳ ಮದ್ಯದಲ್ಲಿ ಕಲಹ ಉಂಟಾಗಿ ಆಸ್ತಿ ಹಾಗು ಪ್ರಾಣ ಹಾನಿವಾಗುವ ಎಲ್ಲ ಸಾಧ್ಯತೆಗಳು ಕಂಡು ಬಂದಿದ್ದು ಕಾರಣ ಈ ಕೆಳಗೆ ನಮೂದಿಸಿದ ಎರಡು ಪಂಗಡದವರಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕುರಿತು ಠಾಣಿ ಗು.ನಂ 248/11 ಕಲಂ 107,ಸಿ.ಆರ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಅಫಘಾತ ಪ್ರಕರಣ:

ಕಮಲಾಫೂರ ಠಾಣೆ : ಶ್ರೀ ಪ್ರಶಾಂತ ತಂದೆ ಕುಮಾರ ಛಾತರ ಸಾ; ವೆಂಕಟೇಶ ನಗರ ಗುಲಬರ್ಗಾ ರವರು ನಾನು ನನ್ನ ಗೆಳೆಯರಾದ ಪ್ರವೀಣ ತಂದೆ ಕಲ್ಯಾಣರಾವ ಗಾವಡೆ ಸಾಃ ಕೊಠಾರಿ ಭವನ ಹಿಂದುಗಡ ಗುಲಬರ್ಗಾ ಅತುಲ ತಂದೆ ಭರತ ರತ್ನಾಕರ ಸಾಃ ಆರ್.ಟಿ.ಓ ಕ್ರಾಸ ಗುಲಬರ್ಗಾ ಎಲ್ಲರೂ ಕೂಡಿಕೊಂಡು ದಿನಾಂಕ: 27/10/2011 ರಂದು ಬೀದರದಲ್ಲಿ ನಮ್ಮ ಸಂಬಂಧಿಕರ ಅಂಗಡಿಯ ಪೂಜೆಯಿದ್ದ ಪ್ರಯುಕ್ತ ಪ್ರವೀಣ ಈತನ ಇಂಡಿಕಾ ಕಾರ ನಂ. ಕೆಎ:32, ಎಂ:8066 ನೇದ್ದರಲ್ಲಿ ಕುಳಿತುಕೊಂಡು ಬೀದರಕ್ಕೆ ಹೋರಟಿದ್ದು. ಈ ಕಾರನ್ನು ಪ್ರವೀಣ ಈತನೆ ಚಲಾಯಿಸುತ್ತಿದ್ದನು. ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಕಮಲಾಪೂರ ದಾಟಿ ಪ್ರವೀಣ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತ ಬೈಲದಾರ ಇವರ ಹೊಲದ ಹತ್ತಿರ ಬಂದಾರಿಯ ತಗ್ಗಿನಲ್ಲಿ ಪಲ್ಟಿ ಮಾಡಿ, ಅಪಘಾತ ಪಡಿಸಿದನು. ನಮಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ಕಾರಿನ ಹಿಂದಿನ ಸೈಲೆನ್ಸರ ಕಟ್ಟಾಗಿ ಅಲ್ಲಲ್ಲಿ ಹಾನಿಯಾಗಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 132/2011 ಕಲಂ 279 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಫಘಾತ ಪ್ರಕರಣ:

ಕಮಲಾಫೂರ ಠಾಣೆ : ಶ್ರೀ. ವಿನೋದಕುಮಾರ ತಂದೆ ಕೃಷ್ಣಾ ಉಡಬಾಳ ಸಾ: ಕಮಲಾಪೂರ ರವರು ನಮ್ಮ ಹೊಲ ಕಮಲಾಪೂರ ಸೀಮಾಂತರದಲ್ಲಿ ಸರ್ವೆ ನಂ:169 ನೇದ್ದು ಬರುತ್ತಿದ್ದು, ಒಕ್ಕಲುತನ ಕೆಲಸಕ್ಕಾಗಿ ನಮ್ಮ ಹೊಲದಲ್ಲಿ ರೇವಣಸಿದ್ದಪ್ಪ ತಂದೆ ಇಸ್ಮಾಯಿಲಪ್ಪ ಸಿಂಗೇನೋರ ವ: 45 ವರ್ಷ ಸಾ; ಕಮಲಾಪೂರ, ಪರಮೇಶ್ವರ ಸಾ: ಭೂಂಯ್ಯಾರ ಅಂತಾ ಇಬ್ಬರು ಆಳು ಮಕ್ಕಳನ್ನು ಇಟ್ಟುಕೊಂಡಿರುತ್ತೇವೆ. ದಿನಾಂಕ: 27/10/2011 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು, ರೇವಣಸಿದ್ದಪ್ಪ ಮತ್ತು ಪರಮೇಶ್ವರ ಕೂಡಿಕೊಂಡು ನಮ್ಮ ದನಗಳನ್ನು ಹೊಡೆದುಕೊಂಡು ಹುಮನಾಬಾದ-ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ರಾಜನಾಳ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಹುಮನಾಬಾದ ಕಡೆಯಿಂದ ಕಾರ ನಂ: ಎಪಿ-09-ಬಿ.ಝೇಡ್-2788 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ರೇವಣಸಿದ್ದಪ್ಪ ಸಿಂಗೆನೂರ ಈತನಿಗೆ ಹಿಂದಿನಿಂದ ಒಮ್ಮಿಲೇ ಡಿಕ್ಕಿ ಹೊಡೆದು ಅಪಘಾತ ಪಡಿಸಿ ರೋಡಿನ ಕೆಳಗೆ ತಗ್ಗಿನಲ್ಲಿ ಎಳೆದುಕೊಂಡು ಹೋದನು. ಆಗ ನಾನು ಮತ್ತು ಪರಮೇಶ್ವರ ಕೂಡಿಕೊಂಡು ಚಿರುತ್ತಾ ರೋಡಿನ ಕೆಳಗೆ ಬಿದ್ದಿದ್ದ ರೇವಣಸಿದ್ದಪ್ಪನಿಗೆ ಹೋಗಿ ನೋಡಲಾಗಿ ಆತನಿಗೆ ಎಡಗೈ ಮೊಳಕೈಗೆ, ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬೆನ್ನಿಗೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಭಾರಿ ಗುಪ್ತಗಾಯವಾಗಿದ್ದು, ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 133/2011 ಕಲಂ 279.304[ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀಮತಿ.ಉಮಾದೇವಿ ಗಂಡ ರಾಜಸಿಂಗ ಟಾಕ, ಸಾ|| ಮೇತಾರಗಲ್ಲಿ ಗಾಜೀಪೂರ ಗುಲಬರ್ಗಾ ರವರು ನಾನು ಹಾಗೂ ನಮ್ಮ ಪಕ್ಕದ ಮನೆಯ ಸುನೀತಾ ಗಂಡ ರಾಜೇಶ ಟಾಕ ಇಬ್ಬರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತ್ತಿರುವಾಗ ನಮ್ಮ ಓಣಿಯವರಾದ ಅನೀತಾ ಗಂಡ ರಾಮಚಂಧ್ರ ಬಿರ್ಲಾ, ಮಧು ಗಂಡ ವಿನೋದ ಬಿರ್ಲಾ, ದೀಪಕ ತಂದೆ ಪ್ರಕಾಶ ಬಿರ್ಲಾ, ಟಾಪಲಿ ತಂದೆ ಪ್ರಕಾಶ ಬಿರ್ಲಾ ಎಲ್ಲರೂ ಸಾ|| ಮೇತಾರಗಲ್ಲಿ ಗಾಜೀಫೂರ ಗುಲಬರ್ಗಾ ಇವರೆಲ್ಲರೂ ಕೂಡಿಕೊಂಡು ಮನೆಯ ಹತ್ತಿರ ಬಂದು ಸುನೀತಾ ಇವಳು ನನ್ನೊಂದಿಗೆ ಜಗಳಕ್ಕೆ ಬಿದ್ದು, ಏ ರಂಡಿ ನಿನ್ನ ಮಗ ವಿಶಾಲ ಮತ್ತು ನಿನ್ನ ಸೊಸೆ ಮಮತಾ ಇಬ್ಬರೂ ಕೂಡಿ ನಿನ್ನೆ ರಾತ್ರಿ ನಮ್ಮೊಂದಿಗೆ ಜಗಳಕ್ಕೆ ಬಿದ್ದು, ನಮಗೆ ಹೊಡೆಬಡೆ ಮಾಡಿದ್ದು ಅಲ್ಲದೆ ಪುನಃ ನಮ್ಮ ಮೇಲೆ ಕೇಸು ಮಾಡಿಸಲು ಪೊಲೀಸ ಠಾಣೆಗೆ ಹೋಗಿದ್ದಾರೆ ಅವರಿಬ್ಬರು ಎಲ್ಲಿ ಇದ್ದಾರೆ ಅಂತಾ ಅನ್ನುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿದ್ದು ಅಲ್ಲದೆ ಕೈಯಿಂದ ಮುಖದ ಮೇಲೆ ಹೊಡೆದಿರುತ್ತಾಳೆ. ಮಧು ಬಿರ್ಲಾ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಟೊಂಕಕ್ಕೆ ಹೊಡೆದಿದ್ದು, ದೀಪಕ ಮತ್ತು ಟಾಪಲಿ ಇವರು ಕೂಡ ಬಿಡಬೇಡಾ ಅವಳಿಗೆ ಹೊಡೆ ಅಂತಾ ಮಧು ಇವಳೀಗೆ ಪ್ರಚೋದನೆ ಮಾಡುತ್ತಿದ್ದರು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:203/2011 ಕಲಂ: 323, 324, 114, 504, 506, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೊಲೆ ಪ್ರಯತ್ನ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ನರಸಿಂಗ ತಂದೆ ಬಾಬು ಭೋವಿ ಸಾ: ಕುನ್ನೂರ ತಾ: ಚಿತ್ತಾಪೂರ ಹಾ:ವ: ರಾಮ ನಗರ ಗುಲಬರ್ಗಾ ರವರು ನಾನು ನನ್ನ ಮಗ ಯಲ್ಲಪ್ಪ ವ:3 ವರ್ಷ ಇವನಿಗೆ ಜೊತೆಯಲ್ಲಿ ಕರೆದುಕೊಂಡು ಹುಮನಾಬಾದ ರಿಂಗ ರೋಡಿನ ಹತ್ತಿರ ಇರುವ ಭಾಲ್ಕೇಶ್ವರ ವೈನಶಾಪಗೆ ಹೋಗಿ ಸರಾಯಿ ಕುಡಿದು ವಾಪಸ್ಸು ಮನೆಯ ಕಡೆಗೆ ರಾಮನಗರದ ಬಾಂಬೆ ಗ್ಯಾರೇಜ ಹತ್ತಿರ ಖುಲ್ಲಾ ಜಾಗೆಯಲ್ಲಿ ನಡೆದುಕೊಂಡು ಹೊರಟಾಗ ಹಿಂದಿನಿಂದ ಯಾರೋ ಮೂರು ಜನರು ಬಂದವರೇ ಅವರಲ್ಲಿ ಒಬ್ಬನು ಚಾಕುವಿನಿಂದ ಎಡ & ಬಲಭಾಗ ಕುತ್ತಿಗೆ ಮತ್ತು ಕುತ್ತಿಗೆ ಹಿಂಭಾಗಕ್ಕೆ ಬಲಹಣೆಯ ಮೇಲೆ ಮತ್ತು ಬಲಗೈ ಮತ್ತು ಎಡಗೈ ಮುಂಗೈ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಇರುತ್ತದೆ. ಇನ್ನಿಬ್ಬರು ಕೈಯಿಂದ ಮೈಮೇಲೆ ಹೊಡೆದಿದ್ದು, ತನಗೆ ಹೊಡೆದ ಮೂರು ಜನರು 25 ರಿಂದ 30 ವಯಸ್ಸಿನವರಿದ್ದು ಅವರನ್ನು ನೋಡಿದರೆ ಗುರುತಿಸುತ್ತೇನೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 319/11 ಕಲಂ 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೆ.ಇ.ಬಿ ನೌಕರನ ಕರ್ತವ್ಯಕ್ಕೆ ಅಡೆ ತಡೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ದೇವಿಂದ್ರ ತಂದೆ ಅಂಬಣ್ಣ ಪೂಜಾರಿ ಸಾ: ತಾಜಸುಲ್ತಾನಪೂರ ರವರು ನಾನು ಬೇಲೂರ ಕ್ರಾಸ ಬಳಿ ವಿದ್ಯತ್ತ ಬಾಕಿ ಸಂದಾಯ ಮಾಡಲಾರದ ಗ್ರಾಹಕರ ಸ್ಧಾವರವನ್ನು ವಿದ್ಯುತ್ತ ಸಂಪರ್ಕ ಕಡಿತಗೊಳಿಸುವ ಸಮಯದಲ್ಲಿ ಬಸವರಾಜ ತಂದೆ ವಿಶ್ವನಾಥ ಮೂಲಗೆ ಸಾ:ಬೇಲೂರ (ಜೆ) ತಾ: ಗುಲ್ಬರ್ಗಾ ಇತನು ನನಗೆ ಅವಾಚ್ಚ ಶಬ್ದಗಳಿಂದ ಬೈದು ಚಪ್ಪಲಿಯಿಂದ ಹೊಡೆದು ಬಾಯಿಗೆ ಬಂದಂತೆ ಬೈಯಿದಿತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 317/2011 ಕಲಂ. 332, 355, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶ್ರೀದೇವಿ ಗಂಡ ಮಲ್ಲಯ್ಯ ಚಟ್ನಳ್ಳಿ ಸಾ: ಆಶ್ರಯ ಕಾಲನಿ ರಾಣೇಶ ಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ: 27/10/11 ರಂದು ಮದ್ಯಾಹ್ನ 12 ಸುಮಾರಿಗೆ ನನ್ನ ಮನೆಯ ಬಾಜು ಮಂಜುಳಾ ಸಾ: ಆಶ್ರಯ ಕಾಲನಿ ರಾಣೇಶ ಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ಕಸವನ್ನು ಚೆಲ್ಲಿದ್ದು ಅದನ್ನು ಇಲ್ಲಿ ಏಕೆ ಚೆಲ್ಲುತ್ತಿ ಅಂತ ಕೇಳಿದ್ದಕ್ಕೆ ಮಂಜುಳಾ ಇವಳು ತಲೆ ಕೂದಲು ಹಿಡಿದು ಜಗ್ಗಾಡಿ ಅವ್ಯಾಚ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 318/2011 ಕಲಂ. 341 323 504

ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

27 October 2011

GULBARGA DIST REPORTED CRIME

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀ.ರಾಮಚಂದ್ರ ತಂದೆ ಧೂಪಸಿಂಗ ಬಿರ್ಲಾ, ಸಾ|| ಗಾಜಿಪುರ ಗುಲಬರ್ಗಾ ರವರು ನಾನು ಹಾಗೂ ನನ್ನ ಹೆಂಡತಿ ಇಬ್ಬರು ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತ್ತಿರುವಾಗ ನಮ್ಮ ಓಣಿಯವರಾದ ವಿಶಾಲ ತಂದೆ ರಾಜ ಟಾಕ, ಹಾಗೂ ಆತನ ಹೆಂಡತಿಯಾದ ಮಮತಾ ಗಂಡ ವಿಶಾಲ ಟಾಕ ಇಬ್ಬರು ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ವಿಶಾಲ ಈತನು ನನ್ನೊಂದಿಗೆ ಜಗಳಕ್ಕೆ ಬಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಮುಖದ ಮೇಲೆ ಹೊಡೆದಿದ್ದು ಜಗಳ ಬಿಡಿಸಲು ಬಂದ ನನ್ನ ಹೆಂಡತಿಗೂ ವಿಶಾಲನ ಹೆಂಡತಿಯಾದ ಮಮತಾ ಇವಳು ಕೂದಲು ಹಿಡಿದು ಮುಖದ ಮೇಲೆ ಹೊಡೆಯುತ್ತಿರುವಾಗ ನಮ್ಮ ಓಣಿಯ ಸತೀಷ ಮತ್ತು ರಮೇಶ ಇವರು ಇಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:202/2011 ಕಲಂ: 341, 323, 504, 506 ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES


ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ : ಶಿವರಾಯ ತಂದೆ ಭೀಮಶ್ಯಾ ಭಾಗೋಡಿ ಸಾಃಬಡಾರೋಜಾ ಗುಲಬರ್ಗಾ ರವರು ನನನ್ ಮಗನಾದ ಪ್ರಜ್ವಲ ಇತನು ಬಯಲು ಕಡೆಗೆ ಹೋದಾಗ ಬೀಬಿ ರೋಜಾ ಶಾಲೆಯ ಎದುರಿಗೆ ಜೀಪ ನಂ ಎಪಿ 29 ಬಿ.ಎಲ್ 786 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಸಿ ತನ್ನ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 66/2011 ಕಲಂ 279, 337, ಐಪಿಸಿ & 187 ಐ,ಎಮ,ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ ಕಾಶಿನಾಥ ತಂದೆ ಈರಣ್ಣಾ ವರನಾಳ ಸಾ: ಶೆಳ್ಳಗಿ ಗ್ರಾಮ ತಾ:ಚಿತ್ತಾಪೂರ ರವರು ನಾನು ನನ್ನ ತಂಗಿ ರಾಜಶ್ರೀ ಶೆಳ್ಳಗಿ ಗ್ರಾಮದಿಂದ ಹಿರೋ ಹೊಂಡಾ ಸ್ಪೆಂಡರ ಕೆಎ 51 ಕ್ಯೂ 2167 ಮೇಲೆ ದೀಪಾವಳಿ ಹಬ್ಬ ಸಂತೆ ಕುರಿತು ಗುಲಬರ್ಗಾಕ್ಕೆ ಬಂದು ಸಂತೆ ಮುಗಿಸಿಕೊಂಡು ಮರಳಿ ಶೆಳ್ಳಗಿ ಹೊರಟಿದ್ದು ಮಧ್ಯಾಹ್ನ ಸುಮಾರಿಗೆ ತಾವರಗೇರಾ ಕ್ರಾಸ ಹತ್ತಿರ ಹಿಂದಿನಿಂದ ಕಾರ ನಂಬರ ಕೆಎ 32 ಬಿ 3361 ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಅಡ್ಡಾ ತಿಡ್ಡಿ ನಡೆಸುತ್ತಾ ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಹಾಗೇ ಕಾರ ಹುಮನಾಬಾದ ಕಡೆ ಓಡಿಸಿಕೊಂಡು ಹೋಗಿದ್ದು ನನಗೆ ಮತ್ತು ಮತ್ತು ರಾಜಶ್ರೀ ಇಬ್ಬರಿಗೆ ತಲೆ ಹಿಂದೆ ರಕ್ತಗಾಯ ಮತ್ತು ಅಲ್ಲಿಲ್ಲಿ ಮೈಮೇಲೆ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 316/2011 ಕಲಂ. 279, 337 ಐಪಿಸಿ ಸಂ.187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಜಾಗ್ರತೆ ಪ್ರಕರಣ:

ಗ್ರಾಮೀಣ ಠಾಣೆ: ಹಣಮಂತ ತಂದೆ ನಾಗಪ್ಪ ಕಟ್ಟಿಮನಿ ಸಾ: ತಾಜಸುಲ್ತಾನಪೂರ ರವರು ದಿನಾಂಕ 26-10-11 ರಂದು ಸಾಯಂಕಾಲ್ ಸುಮಾರಿಗೆ ತಾಜಸುಲ್ತಾನಪೂರ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರುವ ಹೋಗುವ ಜನರಿಗೆ ತೊಂದರೆ ಕೊಡುತ್ತಾ ಸಾರ್ವಜನಿಕ ಶಾಂತತೆ ಭಂಗವುಂಟು ಮಾಡುತ್ತಿರುವದರಿಂದ ಮುಂಜಾಗೃತ ಕ್ರಮ ಅಡಿಯಲ್ಲಿ ಠಾಣೆ ಗುನ್ನೆ ನಂ: 315/2011 ಕಲಂ 110 ಇ&ಜಿ ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣೆ :

ಚಿಂಚೋಳಿ ಪೊಲೀಸ ಠಾಣೆ:
ಸುಶೀಲಬಾಯಿ ಗಂಡ ಅಮರಸಿಂಗ್ ಪವಾರ ಸಾ: ಬಗದಲ್ ತಾಂಡಾ(ಎ) ತಾ:ಜಿ: ಬೀದರ ರವರು ನನ್ನ ಹಿರಿಯ ಮಗಳಾದ ಅನಿತಾಬಾಯಿ ಇವಳಿಗೆ ಪುಂಡಲೀಕ ತಂದೆ ಬಾಜೀರಾಮ ರಾಠೋಡ ಸಾ: ಪಾಲತ್ಯಾನ ತಾಂಡಾ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು. ನನ್ನ ಅಳಿಯ ಪುಂಡಲೀಕ ಇತನು ಕುಡಿಯುವ ಮತ್ತು ಜೂಜಾಟ ಆಡುವ ಚಟಕ್ಕೆ ಅಂಟಿಕೊಂಡಿದ್ದು ನನ್ನ ಮಗಳಿಗೆ ಹಣ ಕೊಡು ಅಂತಾ ಜಗಳ ಮಾಡುತ್ತಿದ್ದು ಹಣ ಕೊಡದಿದ್ದರೆ ಹೋಡಿ ಬಡಿ ಮಾಡುತ್ತಿದ್ದನು. ನಿನ್ನೆ ದಿನಾಂಕ: 25.10.2011 ರಂದು ರಾತ್ರಿ 11.00 ಗಂಟೆಗೆ ನನ್ನ ಅಳಿಯ ಪುಂಡಲೀಕ ಇತನು ನನ್ನ ಮಗಳಿಗೆ 200/- ರೂಪಾಯಿ ಕೊಡು ಅಂತಾ ಕೇಳಿದಕ್ಕೆ ನನ್ನ ಮಗಳು ಹಣ ಕೊಡದ ಕಾರಣ ಪುಂಡಲೀಕ ಇತನು ನನ್ನ ಮಗಳ ಜೋತೆ ಜಗಳ ಮಾಡಿ ಹೋಡೆ ಬಡೆ ಮಾಡಿದ್ದು ಅದಕ್ಕೆ ನನ್ನ ಮಗಳು ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈ ಸುಟ್ಟಿಕೊಂಡಿರುತ್ತಾಳೆ ಆಸ್ಪತ್ರೆಯಲ್ಲಿ ಉಪಚಾರ ಪಡೆಯುವ ಕಾಲಕ್ಕೆ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಠಾಣೆ ಗುನ್ನೆ ನಂ: 129/2011 ಕಲಂ 498 (ಎ) 306 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


26 October 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ನವೀನ ಕುಮಾರ ತಂದೆ ಶಿವಶರಣಪ್ಪ ರಾಜೆ ಸಾಃ ಎಲ್.ಐ.ಜಿ 4, 03 ನೇ ಹಂತ ಆದರ್ಶ ನಗರ ಗುಲಬರ್ಗಾ ರವರು ನನ್ನ ಹಿರೋ ಹೊಂಡಾ ಸಿ.ಬಿ.ಝಡ್ ನಂ. ಟಿ. ಕೆ.ಎ 32 ಟಿ.ಆರ 1167 ಅಃಕಿ 45,000/- ರೂ. ನೇದ್ದನ್ನು ಗಣೇಶ ನಗರದಲ್ಲಿರುವ ನನ್ನ ಸ್ನೇಹಿತನಾದ ಅಜಯ ತಂದೆ ಬಾಬುರಾವ ಚವ್ಹಾಣ ಇವರ ಮನೆಯ ಮುಂದೆ ದಿನಾಂಕಃ 04/10/2011 ರಂದು ಮದ್ಯಾಹ್ನ ನಿಲ್ಲಿಸಿ ನಾನು ಮತ್ತು ನನ್ನ ಸ್ನೇಹಿತರಾದ ಅಜಯ, ಮಹ್ಮದ ಅಲಿ, ಮಜರೋದ್ದಿನ ಎಲ್ಲರೂ ಕೂಡಿಕೊಂಡು ಹುಮನಾಬಾದ ರಿಂಗ್ ರೋಡ ಕಡೆಗೆ ನನ್ನ ಸ್ನೇಹಿತನ ಕಾರಿನಲ್ಲಿ ಹೋದೆವು. ಅಲ್ಲಿ ನಮ್ಮ ಕಾರು ಅಪಘಾತ ಹೊಂದಿದ್ದು, ಅಪಘಾತದಲ್ಲಿ ನನ್ನ ಬಲಗಾಲು ಮುರಿದಂತೆ ಆಗಿ ನಾನು ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆಯಾಗಿದ್ದು ನಂತರ ದಿನಾಂಕಃ 05/10/2011 ರಂದು ಸಾಯಂಕಾಲ 05:00 ಗಂಟೆಗೆ ನನ್ನ ತಮ್ಮ ಹರೀಷ ತಂದೆ ಪರಮೇಶ್ವರ ಇತನು ನನ್ನ ಮೋಟಾರ ಸೈಕಲ ತರಲು ಹೋದಾಗ ಸದರಿ ಮೋಟಾರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲಾ. ನಾನು ಉಪಚಾರ ಕುರಿತು ಆಸ್ಪತ್ರೆಯಲ್ಲಿದ್ದ ಕಾರಣ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ
ಗುನ್ನೆ ನಂ. 150/2011 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಭೀಮರಾವ ತಂದೆ ಭೀಮಶಪ್ಪ ರಾಮನಹಳ್ಳಿ ಸಾಃ 13 ನೇ ಕ್ರಾಸ್ ತಾರಫೇಲ್ ಗುಲಬರ್ಗಾ ರವರು ನಾನು ದಿನಾಂಕಃ 23/10/2011 ರಂದು ಬೆಳಗ್ಗೆ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.ಎ 35 ಕೆ. 8849 ಅಃಕಿಃ 22,000/- ರೂ. ನೇದ್ದನ್ನು ಬಸವೇಶ್ವರ ಆವರಣದಲ್ಲಿ ನಾನು ಪ್ರತಿ ದಿನದಂತೆ ನಿಲ್ಲಿಸಿದ್ದು ನನ್ನ ಕೆಲಸ ಮುಗಿಸಿಕೊಂಡು ಮದ್ಯಾಹ್ನ ಊಟಕ್ಕೆ ಮನೆಗೆ ಹೋಗಲು ಹೊರಗಡೆ ಬಂದಾಗ ನಾನು ನಿಲ್ಲಿಸಿ ಸ್ಥಳದಲ್ಲಿ ವಾಹನ ಇರಲಿಲ್ಲಾ. ಸುತ್ತ ಮುತ್ತ ಹುಡುಕಾಡಲಾಗಿ ಸಿಗಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 149/2011 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಫರಹತಾಬಾದ ಠಾಣೆ
:
ಶ್ರೀ
ಖಾಜಾ ಮೈನೋದ್ದೀನ ತಂದೆ ಪತ್ತೆ ಅಹ್ಮದ ಸಾ: ಜೆಂಡೆ ಗಲ್ಲಿ ಎಮ್.ಎಸ್.ಕೆ.ಮಿಲ್ಲ ಗುಲಬರ್ಗಾ ರವರು ನಮ್ಮ ಲಾರಿಯ ಚಾಲಕನು ಸುರೇಶ ಇತನು ದಿನಾಂಕ: 17-9-2011 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ಲಾರಿ ನಂ: ಎಮ್.ಹೆಚ್-38 ಡಿ-170 ನೇದ್ದರಲ್ಲಿ ಸಿಮೆಂಟ ಲೋಡ ಮಾಡಿಕೊಂಡು ಗುಲಬರ್ಗಾದಿಂದ ಸುರಪೂರಕ್ಕೆ ಹೋಗುವ ಕುರಿತು ಚಲಾಯಿಸಿಕೊಂಡು ಫರಹತಾಬಾದ ದಾಟಿ ಸರಡಗಿ(ಬಿ) ಪೆಟ್ರೊಲ್ ಬಂಕ ಹತ್ತಿರ ನಮ್ಮ ಲಾರಿ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ
, ಅಲಕ್ಷನದಿಂದ ನಡೆಯಿಸಿಕೊಂಡು ಹೋಗಿ ಪಲ್ಟಿ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 201/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ವೈದ್ಯರ ನಿರ್ಲಕ್ಷತನದಿಂದ 4 ದಿವಸದ ಮಗು ಸಾವು :
ಬ್ರಹ್ಮಪೂರ ಠಾಣೆ :
ಶ್ರೀಮತಿ.ರೇಣುಕಾ ಗಂಡ ಸದಾಶಿವ ಕೂಡಿ, ಸಾ||ಗಂಗಾನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ: 22/10/2011 ರಂದು ಹೆರಿಗೆ ಸಲುವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಹೆರಿಗೆ ಕಾಲದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಕರ್ತವ್ಯ ನಿರತ ವೈದ್ಯರಾದ ಡಾ|| ಸಂಯೋಜಿತಾ ಕುಲಕರ್ಣಿ ಹಾಗೂ ಅವರ ಸಹಾಯಕರು ಸರಿಯಾದ ಸುರಕ್ಷತಾ ಕ್ರಮ ಕೈಕೊಳ್ಳದೆ ನಿರ್ಲಕ್ಷತನದಿಂದ ವ್ಯಾಕುಮ ಮಷೀನ ಸಹಾಯದಿಂದ ಹೆರಿಗೆ ಮಾಡಿಸಿದ್ದು, ಹೆರಿಗೆ ಸಮಯದಲ್ಲಿ ಜನಿಸಿದ ಗಂಡು ಮಗುವಿಗೆ ತೊಂದರೆಯಾಗಿರುವದರಿಂದ ಹೆಚ್ಚಿನ ಉಪಚಾರ ಕುರಿತು ವಾತ್ಸಲ್ಯ ಆಸ್ಪತ್ರೆಗೆ ಸೇರಿಕೆಯಾಗಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 26/10/2011 ರಂದು ಬೆಳಿಗ್ಗೆ 0630 ಗಂಟೆಗೆ ನನ್ನ 4 ದಿವಸದ ಗಂಡು ಮಗು ಮೃತಪಟ್ಟಿದ್ದು, ಮಗುವಿನ ಮರಣಕ್ಕೆ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 201/11 ಕಲಂ:304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

ಅಶೋಕ ನಗರ ಠಾಣೆ
:ಶ್ರೀ ಸಿದ್ದು @ ಸಿದ್ದಯ್ಯ ತಂದೆ ಬಸಯ್ಯ ಸ್ವಾಮಿ ಸಾ|| ಮೆಳಕುಂದಾ ತಾ||ಜಿ|| ಗುಲಬರ್ಗಾ ಹಾ.ವ|| ಕೇಂದ್ರ ಬಸ್ ನಿಲ್ದಾಣ ಕ್ಯಾಂಟಿನ ಗುಲಬರ್ಗಾ ರವರು ನಾನು ಕೇಂದ್ರ ಬಸ್ ನಿಲ್ದಾಣದಲ್ಲಿ ಸುಮಾರು 1 ವರ್ಷದಿಂದ ಅಡುಗೆ ಕೆಲಸ ಮಾಡಿಕೊಂಡು ಇರುತ್ತೆನೆ. ದಿನಾಂಕ 25/10/2011 ರಂದು ರಾತ್ರಿ 8 ಗಂಟೆಗೆ ನನ್ನ ಕೆಲಸ ಮುಗಿದ ನಂತರ ಬಸ್ ನಿಲ್ದಾಣದ ಎದುರುಗಡೆ ತಿರುಗಾಡುತ್ತಾ ಕಪಿಲಾ ಲಾಡ್ಜ ಹತ್ತಿರ 9-30 ಪಿ.ಎಂ ಕ್ಕೆ ಬಂದಾಗ ಬಸವರಾಜ ಮತ್ತು ರಾಜು ಹಾಗು ಇನ್ನೂ ಇಬ್ಬರೂ ಕೂಡಿಕೊಂಡು ಹಣ ಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬೆನ್ನಿಗೆ ಅಲ್ಲಲ್ಲಿ ಹೊಡೆದು ಗಾಯಪಡಿಸಿದಲ್ಲದೆ ಹಣ ಕೊಡದಕ್ಕೆ ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 115/2011 ಕಲಂ 323, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIME


ಮೊಟಾರ ಸೈಕಲ ಕಳ್ಳ ಬಂಧನ, 8 ಮೊಟಾರ ಸೈಕಲಗ ವಶ

ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಇಬ್ಬರೂ ಮೊಟಾರ ಸೈಕಲ ಕಳ್ಳರನ್ನು ಬಂಧಿಸಿ ಸದರಿಯವರಿಂದ ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಹಮೀದ ಹುಸೇನ @ ಅಬ್ದುಲ ಹಮೀದ ತಂದೆ ಅಬ್ದುಲ ರಶೀಧ ಸಾ|| ಹುಸೇನಿ ಆಲಂ ಮಜ್ಜಿದ ಹತ್ತಿರ ಮಹಿಬೂಬ ನಗರ ಗುಲಬರ್ಗಾ ಶಮೀರಖಾನ ತಂದೆ ಹಯ್ಯಾಜಖಾನ ಸಾ|| ಮಹಿಬೂಬ ನಗರ ಗುಲಬರ್ಗಾ ನೇದ್ದವರನ್ನು ಮೊಟಾರ ಸೈಕಲ ಕಳವಿನ ಪ್ರಕರಣದಲ್ಲಿ ಬಂಧಿಸಿ ತನಿಖೆಗೆ ಒಳ ಪಡಿಸಿದ ಕಾಲಕ್ಕೆ ನಗರದ ವಿವಿಧ ಸ್ಥಳಗಳಲ್ಲಿ ಒಟ್ಟು ವಿವಿಧ ಕಂಪನಿಯ 3 ಲಕ್ಷ ಮೌಲ್ಯದ ಮೊಟಾರ ಸೈಕಲಗಳನ್ನು ಕಳ್ಳತನ ಮಾಡಿರುತ್ತಾರೆ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

GULBARGA DIST REPORTED CRIMES

ಜಾನುವಾರುಗಳು ಸಾಗಿಸುತ್ತಿದ್ದ ಬಗ್ಗೆ :

ಜೇವರ್ಗಿ ಪೋಲಿಸ ಠಾಣೆ : ಶ್ರೀ ಸಿದ್ದಲಿಂಗಯ್ಯ ಸ್ವಾಮಿ ತಂದೆ ಕರಣಯ್ಯ ಸ್ವಾಮಿ ಸಾ: ಅಂದೋಲ ರವರು ನಾನು ಮತ್ತು ಜೈಪಾಲ ಅಂಗಡಿ , ಮಲ್ಲಿಕಾರ್ಜುನ ನಾಯಕೊಡಿ , ಮೂವರು ಚಿಗರಳ್ಳಿ ಕ್ರಾಸ ಹತ್ತಿರ ದಿನಾಂಕ: 25/10/2011 ರಂದು ಮುಂಜಾನೆ ನಿಂತಿರುವಾಗ ಶರಣಪ್ಪ ತಂದೆ ಗುಂಡಪ್ಪ ಪೂಜಾರಿ ಸಾ: ಗೌನಳ್ಳಿ ಸಂಗಡ ಇನ್ನೋಬ ಸಾ || ಗೋಗಿ ಇವರು 5 ಎತ್ತುಗಳನ್ನು ನೀರು ಆಹಾರ ನೀಡದೆ ಹಿಂಸೆಕೊಡುತ್ತಾ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 186/2011 ಕಲಂ 8, 9, 11, ಕರ್ನಾಟಕ ಪ್ರೇವೆನೆಶನ ಅಫ ಕೌವ ಸ್ಲಾಟರ ಅಂಡ್ಯ ಕಾಟಲ್ ಪ್ರವೇನಶನ ಅಕ್ಟ 1964 ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಭೀಮರಾವ ತಂದೆ ಭೀಮಶಪ್ಪ ರಾಮನಹಳ್ಳಿ ಸಾಃ 13 ನೇ ಕ್ರಾಸ್ ತಾರಫೇಲ್ ಗುಲಬರ್ಗಾ ರವರು ನಾನು ದಿನಾಂಕಃ 23/10/2011 ರಂದು ಬೆಳಗ್ಗೆ 09:00 ಗಂಟೆಗೆ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.ಎ 35 ಕೆ. 8849 ಅಃಕಿಃ 22,000/- ರೂ. ನೇದ್ದನ್ನು ಬಸವೇಶ್ವರ ಆವರಣದಲ್ಲಿ ಪ್ರತಿ ದಿನದಂತೆ ನಿಲ್ಲಿಸಿದ್ದು ನನ್ನ ಕೆಲಸ ಮುಗಿಸಿಕೊಂಡು ಮದ್ಯಾಹ್ನ 01:00 ಗಂಟೆಗೆ ಊಟಕ್ಕೆ ಮನೆಗೆ ಹೋಗಲು ಹೊರಗಡೆ ಬಂದಾಗ ನಾನು ನಿಲ್ಲಿಸಿ ಸ್ಥಳದಲ್ಲಿ ವಾಹನ ಇರಲಿಲ್ಲಾ. ಸುತ್ತ ಮುತ್ತ ಹುಡುಕಾಡಲಾಗಿ ಸಿಗಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 149/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ.ಶರಣಕುಮಾರ ತಂದೆ ವೀರಣ್ಣ ಬಿರಾದಾರ ಸಾ; ಬೇಲೂರ [ಕೆ] ತಾ;ಜಿ: ಗುಲಬರ್ಗಾ ರವರು ನಾನು ಹೊಲದಲ್ಲಿ ಕಬ್ಬಿನ ಬೆಳೆಗೆ ನೀರು ಹಾಯಿಸಲು ಬಂದಾರಿಗೊಂಟ ನೀರಿನ ಕಾಲುವೆ ಮಾಡಿದ್ದು, ಕಾಲುವೆಯಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ನೀರು ಸರಿಯಾಗಿ ಹೋಗುತ್ತಿಲ್ಲವಾದ್ದರಿಂದ ಕಾಲುವೆಯಲ್ಲಿ ಬೆಳೆದ ಹುಲ್ಲು ಕಿತ್ತಿ ಗಿಡಗಂಟಿಗಳನ್ನು ಕಡಿಯುತ್ತಿದ್ದಾಗ ಮಲ್ಲಣ್ಣನು ನನಗೆ ಬಂದಾರಿಯಲ್ಲಿ ಬೆಳೆದ ಗಿಡ ಯಾಕೆ ಕಡಿಯುತ್ತಿ ಸೂಳೆ ಮಗನೆ ಅಂತಾ ಬೈಯ್ದು ಜಗಳ ತೆಗೆದಿದ್ದು, ನಾಣು ಮನೆಗೆ ಬಂದು ತಿಳಿಸಿದ್ದು ದಿನಾಂಕ:25/10/2011 ರಂದು ಬೆಳೆಗ್ಗೆ 6-30 ಗಂಟೆಗೆ ನಾನು ಕಿರಾಣಾ ಅಂಗಡಿಗೆ ಹೋದಾಗ ಮಲ್ಲಣ್ಣ ಈತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತೆಕ್ಕಿ ಕುಸ್ತಿ ಬಿದ್ದು ಕಲ್ಲಿನಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಬಿಡಿಸಲು ಬಂದ ವೀರಣ್ಣ ಬಿರಾದಾರ ಮತ್ತು ಅಣ್ಣ ರೇವಪ್ಪ ಇವರಿಗೂ ಸಹ ಮಲ್ಲಣ್ಣನ ಹೆಂಡತಿ ಭಾಗೀರಥಿ ಮತ್ತು ಹಣಮಂತರಾಯ ಕೂಡಿ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 129/2011 ಕಲಂ 341.323.324.504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

25 October 2011

GULBARGA DIST REPORTED CRIME





ಕುಖ್ಯಾತ 6 ಜನ ಸರಗಳ್ಳರ ಬಂದನ, ಸುಮಾರು 12 ಲಕ್ಷ ರೂ ಬೆಲೆಬಾಳುವಬಂಗಾರ,ಆಭರಗಳು, ನಗದು,ಮೊಟಾರ ಸೈಕಲ ಮತ್ತು ಮೊಬಾಯಿಲಗಳ ವಶ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 6 ಜನ ಕುಖ್ಯಾತ ಸರಗಳ್ಳತನ ಮಾಡುವ ಜನರನ್ನು ಬಂಧಿಸಿದ್ದಾರೆ. ಸದರಿಯವರಿಂದ ಬಂಗಾರದ ಆಭರಣಗಳು ಸರಗಳ್ಳತನ ಮಾಡಲು ಬಳಸುತ್ತಿದ್ದು ಮೊಟಾರ ಸೈಕಲಗಳು, ಮೊಬಾಯಿಲ್ ಪೊನಗಳು, ಸಿಮ್ ಕಾರ್ಡ, ಚಾಕು, ವಗೈರೆ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 24/10/2011 ರಂದು ಮದ್ಯ ರಾತ್ರಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಐಗಳಾದ 1) ಶ್ರೀ ಬಿ.ಬಿ ಪಟೇಲ ಮತ್ತು 2) ಶ್ರೀ ರಾಜಣ್ಣ 3) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 4) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 5) ಶ್ರೀ ಸಂಗಮೇಶ ಪಿ.ಎಸ್.ಐ ಜೇವರಗಿ 6) ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಸಿದ್ರಾಮ ಹೆಚ್.ಸಿ, ಶಿವಪುತ್ರ ಸ್ವಾಮಿ ಹೆಚ್.ಸಿ, ಪ್ರಭಾಕರ ಪಿಸಿ, ಅಶೋಕ ಪಿಸಿ, ವೇದರತ್ನಂ ಪಿಸಿ, ಗಂಗಾಧರ ಪಿಸಿ, ಲೈಕೋದ್ದಿನ ಪಿಸಿ, ಇಮ್ತಿಯಾಜ ಎಪಿಸಿ, ಅರ್ಜುನ ಎಪಿಸಿ ಚಂದ್ರಕಾಂತ ಮುರುಡ ಪಿಸಿ, ಬಲರಾಮ ರಜಪುತ ಪಿಸಿ, ಮಶಾಕ ಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಸೈಯದ ಫಯಾಜ ತಂದೆ ಬಾಶುಮಿಯಾ ವಯ: 24 ವರ್ಷ ಗುಲಬರ್ಗಾ ಟಿಪ್ಪು @ ಇರ್ಫಾನ ತಂದೆ ಅಯೂಬ ಪಟೇಲ ಮಚಲಿವಾಲೆ ವಯ : 21 ವರ್ಷ ಉ: ಅಲೂಮಿನಿಯಂ ಸಾ|| ಖುಲ್ಲಾ ಬನಿ ಮಜೀದ ಹತ್ತಿರ ಗುಲಬರ್ಗಾ :ಮಹ್ಮದ ರಫೀಕ ತಂದೆ ಸಲೀಂ ಮಿಯಾ ಶೇಖ ವಯ: 20 ವರ್ಷ ಉ:: ವೆಲ್ಡಿಂಗ್ ಕೆಲಸ ಸಾ|| ನಯಾ ಮೊಹಲ್ಲಾ ಶಾಲೆ ಹಿಂದುಗಡೆ ಗುಲಬರ್ಗಾ ಮಹ್ಮದ ಅಖೀಲ್ ತಂದೆ ಮಹ್ಮದ ಜಾಫರ ಚುವೆವಾಲೆ ವಯ: 22 ವರ್ಷ ಉ:: ಮೇಕ್ಯಾನಿಕ ಸಾ|| ಲಾಲಗೇರಿ ಗುಲಬರ್ಗಾ ಮಹ್ಮದ ಅನ್ವರ ತಂದೆ ಮಹ್ಮದ ಹುಸೇನಿ ಖುರೆಸಿ ವಯ: 23 ವರ್ಷ ಉ: ಚಿಕನ ಅಂಗಡಿ ಸಾ: ಮಿಲನ್ ಚೌಕ ಗಾಜಿಫುರ ಗುಲಬರ್ಗಾ 6) ಶೇಖ್ ಜಾಫರ ತಂದೆ ಶೇಖ್ ಫರೀದ್ ವಯ: 19 ವರ್ಷ ಉ: ಪೆಂಟಿಂಗ ಕೆಲಸ ಸಾ: ಶಹಬಾಜ ಸ್ಕೂಲ್ ಹತ್ತಿರ ಇಸ್ಲಾಮಬಾದ ಕಾಲೋನಿ ಗುಲಬರ್ಗಾ ರವರನ್ನು ಹಿಡಿದುಕೊಂಡು ಠಾಣೆಗೆ ತಂದು ತನಿಖೆಗೆ ಒಳಪಡಿಸಿದಾಗ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ವಿಭೂತಿ ಕಾಲೋನಿ, ಜಿಡಿಎ ಕಾಲೋನಿ ಹನುಮಾನ ಮಂದಿರ ಹತ್ತಿರ, ಪ್ರಗತಿ ಕಾಲೋನಿ, ಡಾಕ್ಟರ್ಸ ಕಾಲೋನಿ ಬಸವೇಶ್ವರ ಕಾಲೋನಿ, ಗುಬ್ಬಿ ಕಾಲೋನಿ, ಪ್ರಶಾಂತ ನಗರ, ಬ್ಯಾಂಕ ಕಾಲೋನಿ ಮತ್ತು ಜಗತ ವೃತ್ತ ಬಳಿ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದು. ಸದರಿ ಆರೊಪಿತರಿಂದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ನಗದು, ಮೊಬಾಯಿಲ್ ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು. ಒಂದು ಚಾಕು, ಸಿಮ್ ಕಾರ್ಡಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಸಿದ್ದು ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

GULBARGA DISTRICT REPORTED CRIMES

ಕಳ್ಳತನ ಪ್ರಕರಣ:

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಡಾಃ ಹನುಮಂತಪ್ಪ ತಂದೆ ಬಸವಣಪ್ಪಾ ಕಲಾಸಗಿ ಸಾಃ ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ 19/10/2011 ರಂದು ರಂದು ಮಧ್ಯಾಹ್ನ ನನ್ನ ಹಿರೊ ಹೊಂಡಾ ಸ್ಪೆಂಡರ್ ಪ್ಲಸ್ (ಕಪ್ಪು ಬಣ್ಣದ್ದು) ಮೋಟಾರ ಸೈಕಲ ನಂ. ಕೆ.ಎ 32 ಎಸ್ 7012 ನೇದ್ದನ್ನು ಸಿಂಡಿಕೇಟ್ ಬ್ಯಾಂಕ್ ಹತ್ತಿರ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 148/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದುಲ್ ರಹಿಮ ತಂದೆ ಅಬ್ದುಲ ಅಲೀಮ ಸಾ: ಮನೆ 9-566/11 ವಿಜಯ ನಗರ ರವರು ನಾನು ದಿನಾಂಕ 24.10.11 ರಂದು ಸಾಯಂಕಾಲ್ ಎಸ್.ವಿ.ಪಿ.ಸರ್ಕಲ್ ದಿಂದ ಪಿ.ಡಿ.ಎ.ಕಾಲೇಜ ರೋಡಿನಲ್ಲಿ ಬರುವ ಸಪ್ನಾ ಝೆರಾಕ್ಸ ಅಂಗಡಿ ಎದುರುಗಡೆಯಿಂದ ನನ್ನ ಮೋಟಾರ್ ಸೈಕಲ್ ನಂ: ಕೆಎ 32 ಎಲ್ 3103 ನೇದರ ಮೇಲೆ ಹೋಗುತ್ತಿದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಮೋಟರ ಸೈಕಲ ನಂ ಕೆ.ಎ 32 ಡಬ್ಲೂ 8700 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಫಾತ ಮಾಡಿ ಗಾಯಗೂಳಿಸಿರುತ್ತಾನೆ ಅಂತಾ ದೂಋಉ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 135/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀಮತಿ ಶೋಭಾ ಗಂಡ ಅಂಬಾರಾಯ ಅಂಬಲಗಿ ಉ:ಸ.ಹಿ.ಪ್ರಾ.ಶಾಲೆ ಹಲೇ ಶಾಬಾದದಲ್ಲಿ ಸಹ ಶಿಕ್ಷಕಿ ಸಾ: ರಾಜಾಪೂರ ಬಡೇಪೂರ ಬಡಾವಣೆ ಜಿಡಿಎ ಪ್ರಶಾಂತ ನಗರ (ಬಿ) ಗುಲಬರ್ಗಾ ರವರು ನಾನು ಮತ್ತು ನಮ್ಮ ಅತ್ತೆ ಗಂಗಮ್ಮ ಇಬ್ಬರೂ ಮದ್ಯಾಹ್ನ ಕೆನರಾ ಬ್ಯಾಂಕ್ ಗೆ ಹಣ ತರುವ ಕುರಿತು ಹೋಗುವಾಗ, ನನ್ನ ಮಗನಿಗೆ ಎದುರು ಮನೆಯಲ್ಲಿ ಬಿಟ್ಟು ಹೋಗಿದ್ದು, ಒಂದೂವರೆ ಗಂಟೆಯ ನಂತರ ಎದುರು ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ದ್ವಾರದ ಕೀಲಿ ಮುರಿದಿದೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿ ಮನೆಗೆ ಬಂದು ನೋಡಲಾಗಿ ಬೆಡ್ ರೂಮ್ ದಲ್ಲಿದ್ದ ಅಲಮಾರಿ ಮುರಿದಿದ್ದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಅಂದಾಜ ಕಿಮ್ಮತ್ತು 65.000/- ರೂ ಮೌಲ್ಯದ ಕಳವುವಾ್ಇದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 244/2011 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಕಳ್ಳತನ ಪ್ರಕರಣ :

ಸ್ಟೇಷನ ಬಜಾರ ಪೊಲೀಸ ಠಾಣೆ: ಪಾಲರಾಜ ತಂದೆ ಮಣಿಕರಾವ ವ|| 37 ವರ್ಷ ವೈದ್ಯಕೀಯ ಟೆಕ್ನಾಲೊಜಿಸ್ಟ್ ಸರಕಾರಿ ಆಸ್ಪತ್ರೆ ಗುಲಬರ್ಗಾ ಸಾ|| ಮನೆ ನಂ 125/2/ಸಿ/ಪಿಡಬ್ಲುಡಿ ಕ್ವಾಟರ್ಸ ಐವಾನ-ಇ-ಶಾಹಿ ಕಾಲೊನಿ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಇಬ್ಬರು ಸರಕಾರಿ ನೌಕರರಿದ್ದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ನಮಗೆ ಒಂದೇ ಹೆಣ್ಣು ಮಗು ಇದ್ದು ಅವಳು ಮಧ್ಯಾನ 4.00 ಗಂಟೆಗೆ ಮನೆಗೆ ಶಾಲಯಿಂದ ಮನೆಗೆ ಬರುತಿದ್ದು ಅವಳ ಯೋಗಕ್ಷೇಮ ನೋಡಿಕೊಳ್ಳಲು ಕು. ಸುನೀತಾ ಎನ್ನುವವಳಿಗೆ ತಿಂಗಳಿಗೆ 400/- ರೂ ಸಂಬಳ ಕೊಡುತಿದ್ದು ಅವಳು ಸುಮಾರು 3 ವರ್ಷದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ದಿನಾಂಕ 21.10.2011 ರಂದು ನನ್ನ ಹೆಂಡತಿ ತನ್ನ ಕರ್ತವ್ಯ ಮುಗಿಸಿಕೊಂಡು ಸಂಜೆ 4.30 ಗಂಟೆಗೆ ಮನೆಗೆ ಬಂದು ಸುನೀತಾಳಿಗೆ ಕೊಡಬೇಕಾದ ಸಂಬಳ 400/- ರೂ ತೆಗೆದುಕೊಳ್ಳುವಂತೆ ಡೈನಿಂಗ್ ಟೇಬಲ್ ಮೇಲೆ ಇಟ್ಟು ಅಲ್ಲಿಂದ ನೇರವಾಗಿ ಬೆಡ್ ರೂಮಿಗೆ ಹೋಗಿ ಕೊರಳಲ್ಲಿಯ ಮಂಗಳಸೂತ್ರ ಮತ್ತು ಬಳೆ ಗಡಿಯಾರ ಅಲ್ಲಿಯೇ ಇಟ್ಟು ಮುಖ ತೊಳೆದುಕೊಳ್ಳಲು ಹೋಗುವಾಗ ಕು.ಸುನೀತಾಳಿಗೆ ಮಗುವಿಗೆ ಮ್ಯಾಗಿ ತಯ್ಯಾರ ಮಾಡು ಅಂತಾ ಹೇಳಿ ಒಳಗೆ ಹೋಗಿದ್ದು ಸುನೀತಾ ಇವಳು ಮ್ಯಾಗಿ ತಯ್ಯಾರಿಸಲು ಅಡುಗೆ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಡೈನಬಿಂಗ್ ಟೇಬಲ್ ಮೇಲೆ ಇಟ್ಟ 400/- ರೂ ಗಡಿಯಾರ ಹಾಗೂ ಬಂಗಾರದ ಬಳೆ, ಮಂಗಳಸೂತ್ರ ಒಟ್ಟು 5,1/2 ತೊಲೆ ಬಂಗಾರದವುಗಳು ಅ.ಕಿ. 1,50,000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 189/11 ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಹಣಮಂತ ತಂದೆ ರಾಮಣ್ಣ ನವಲೇಕಾರ ಸಾ; ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ದಿನಾಂಕ.24-10-2011 ರಂದು ಅಶೋಕ ಅಟ್ಟೂರ ಇವರ ಮನೆಯ ಎದರುಗಡೆ ಬರುತ್ತಿರುವಾಗ ಶರಣಪ್ಪಾ ಮದನಕರ , ಕೃಷ್ಣಾ ತಂದೆ ಶರಣಪ್ಪ ಮದನಕರ, ವಿಠಲ ತಂದೆ ಶರಣಪ್ಪ ಮದನಕರ ಸಾ: ತಾಜಸುಲ್ತಾನಪೂರ ರವರು ಅವ್ಯಾಚ್ಛ ಶಬ್ದಗಳಿಂದ ಬೈದು ಬಡಿಗೆಯಿಂದ ನನ್ನ ಬಲಗಾಲು ತೊಡೆಗೆ ಜೋರಾಗಿ ಹೋಡೆದಿರುತ್ತಾರೆ ವಿಠಲ ಇತನು ಬ್ಲೇಡ (ರೇಜರ) ದಿಂದ ನನ್ನ ಎದೆಯ ಮೇಲೆ ಹೊಡೆದನು ರಕ್ತ ಗಾಯ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 312/2011 ಕಲಂ. 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೇಹಿಬೂಬ ಅಲಂ ತಂದೆ ಮಹಮ್ಮದ ಹುಸೇನ ಖಾಜಿ ವಯಾ:45 ವರ್ಷ ಜಾ: ಮುಸ್ಲಿಂ ಉ: ಕಿರಾಣಿ ಅಂಗಡಿ ಸಾ: ತಾಜನಗರ ಗುಲಬರ್ಗಾ ನಾನು ರವರು ದಿನಾಂಕ, 24/10/2011 ರಂದು ಮದ್ಯಾಹ್ನ ಸುಮಾರಿಗೆ ಹುಮನಾಬಾದ ರಿಂಗ ರೋಡ ಮೇಲೆ ನನ್ನ ಮಗಳು ನಡೆದುಕೊಂಡು ಹೊರಟಾಗ ಹಿಂದಿನಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಲಗಾಲಿಗೆ ಬಾರಿ ಗುಪ್ತಗಾಯ, ಬಲ ಮೇಲಕಿನ ಹತ್ತಿರ ಗುಪ್ತಗಾಯಗಳು ಪಡಿಸಿ ತನ್ನ ವಾಹನವನ್ನು ಹಾಗೇ ಒಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 313/11 ಕಲಂ 279 338 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅನಧಿಕೃತವಾಗಿ ಅಕ್ಕಿ ಸಾಗಾಣೆ ಮಾಡುತ್ತಿದ್ದ ಬಗ್ಗೆ :

ಫರಹತಾಬಾದ ಠಾಣೆ : ಶ್ರೀ ಎ.ಟಿ ಜಯಪ್ಪಾ ಉಪ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಗುಲಬರ್ಗಾ ರವರು ನಾನು ಮತ್ತು ಸಿಬ್ಬಂದಿಯವರಾದ ವಿಜಯಾನಂದ, ಡಿ.ಬಿ ಪಾಟೀಲ, ರವಿ, ಹುಸೇನ ಭಾಷಾ ಇವರೊಂದಿಗೆ ಭಾತ್ಮಿ ಬಂದಿದ್ದ ಮೇರೆಗೆ ಹೋಗಿದ್ದು ಗುಲಬರ್ಗಾ – ಜೇವರ್ಗಿ ಹೆದ್ದಾರಿ ಮೇಲೆ ಫರಹತಾಬಾದ ಸಮೀಪ 7-00 ಪಿಎಮ್‌ಕ್ಕೆ ಲಾರಿ ನಂ: ಜಿಜೆ-25 ಟಿ- 5393 ನೇದ್ದನ್ನು ನಿಲ್ಲಿಸಿ ಚೆಕ್ ಮಾಡಲಾಗಿ ಚಾಲಕನ ಹೆಸರು ಕೃಷನಬಾಯಿ ತಂದೆ ಕಾನಾಬಾಯಿ ಸಾ: ರಾಸಾಬಾವು ತಾ:ಜಿ: ಪೂರಬಂದರ (ಗುಜರಾತ) ಅಂತಾ ತಿಳಿಸಿದ್ದು ಸದರಿ ಲಾರಿಯಲ್ಲಿ ಗುಲಬರ್ಗಾದ ಕೆ.ಎಮ್.ಜಿ ಟಾನ್ಸಪೋರ್ಟದಲ್ಲಿ 50 ಕೆ. ಜಿ ಯ 440 ಚೀಲಗಳ ಅಕ್ಕಿಯನ್ನು ಅಂದರೆ 220 ಕ್ವಿಂಟಾಲ ಪಡಿತರ ಅಕ್ಕಿಯ ಅ.ಕಿ. 2,06,800=00 ರೂ. ಯಾವುದೇ ದಾಖಲಾತಿ ಇಲ್ಲದೆ ಗುಲಬರ್ಗಾದಿಂದ ಜೇವರ್ಗಿ ಕಡೆಗೆ ಹೊರಟ್ಟಿದ್ದು ಅವುಗಳನ್ನು ಇಬ್ಬರ ಪಂಚರ ಸಮಕ್ಷಮದಲ್ಲಿ 7-30 ಪಿ.ಎಮ್‌ದಿಂದ 8-30 ಪಿಎಮ್‌ ದ ವರೆಗೆ ಪಂಚನಾಮೆ ಮಾಡಿಕೊಂಡು ಹೀಗೆ ಲಾರಿ ಸಮೇತ ಅ.ಕಿ. ಒಟ್ಟು 12,06,800=00 ರೂ. ನೇದ್ದು ಜಪ್ತಿ ಪಡಿಸಿಕೊಂಡಿಸಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 200/2011 ಕಲಂ 3 & 7 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

24 October 2011

GULBARGA DIST REPORTED CRIME

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ:ಶ್ರೀ ಮೌಲಾಲಿ ತಂದೆ ಖಾಜಾಮಿಯಾ ಹಾಜಿ ರವರು ನಾನು ಜೀಪ ಖರಿದಿ ಮಾಡಲು ರಶೀದ ತಂದೆ ಹುಸೇನ ಪಟೇಲ್ ಇತನಿಗೆ ಹಣ ಕೊಟ್ಟಿದ್ದು, ಹಣ ಕೊಡು ಅಂತಾ ಕೇಳಿದಾಗ ರಶೀದ ಮತ್ತು ಆತನ ಹೆಂಡತಿ ಮಗ ಕೂಡಿಕೊಂಡು ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 102/2011 ಕಲಂ.341,323,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

GULBARGA DIST REPORTED CRIMES

ಜೂಜಾಟ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ದಿನಾಂಕ: 23/10/2011 ರಂದು ಸಾಯಂಕಾಲ್ ಖಚಿತ ಬಾತ್ಮಿ ಮೇರೆಗೆ ಬಾಪೂನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತತ್ಇದ್ದ ಸ್ಥಳಕ್ಕೆ ಸಿಬ್ಬಂದಿ ಜನರೊಂದಿಗೆ ಸ್ಥಳಕ್ಕೆ ಹೋಗಿ ಜ್ಯೋತಿಬಾ ತಂದೆ ಸುಭಾಶ ಜಾಧವ, ಸಾ|| ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ, ಯಲ್ಲಾಲಿಂಗ ತಂದೆ ಭೀಮರಾವ ಸುತ್ತಾರ, ಸಾ|| ನಾಗನಹಳ್ಳಿ, ಬಸವರಾಜ ತಂದೆ ಸಿದ್ರಾಮಪ್ಪ ಶಿವಶಕ್ತಿ, ಸಾ|| ನಾಗನಹಳ್ಳಿ, ರಾಜಾಬಕ್ಷರ ತಂದೆ ಗುಡುಸಾಬ ನದಾಫ, ಸಾ|| ಗೌಡಗಾಂವ, ಪ್ರಭು ತಂದೆ ಸಿದ್ದಣ್ಣಾ ಪಾಟೀಲ, ಸಾ|| ಹನುಮಾನ ಗುಡಿಯ ಹತ್ತಿರ ಭವಾನಿ ನಗರ ಗುಲಬರ್ಗಾ, ಸುದೇಶ ತಂದೆ ರವಿದಾಸ ಉಪಾದ್ಯ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6125/-, 52 ಇಸ್ಪೇಟ ಎಲೆಗಳು, ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:197/2011 ಕಲಂ: 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಸಚಿನ ತಂದೆ ಶರಣಪ್ಪ ಸಜ್ಜನ ಸಾ|| ಬಾಪೂನಗರ ಗುಲಬರ್ಗಾ ರವರು ನಾನು ಲಿಂಗರಾಜ, ಬಾಬು, ಭರತ ನಾವೇಲ್ಲರೂ ಬಟ್ಟೆ ಖರೀದಿ ಗೋಸ್ಕರ ಮಾರ್ಕೆಟಿಗೆ ಹೋಗಿದ್ದು, ಅರುಣಕುಮಾರ ಶಹಾ ಆಸ್ಪತ್ರೆಯ ಎದುರುಗಡೆ ಭರತ ಇವನು ನನಗೆ ಯಾಕಲೆ ಮಗನೆ ಲೇಟ ಮಾಡಿ ಬಂದಿದ್ದಿಯಾ ಅಂತಾ ಹೊಡೆದಾಗ ನಾನು ಕೂಡ ಅವನಿಗೆ ಕಾಲಿನಿಂದ ಎದೆಯ ಮೇಲೆ ಹೊಡೆದಿದ್ದು ಇದರಿಂದ ಅವನು ಬೇಹುಶ ಆಗಿ ಕೆಳಗೆ ಬಿದ್ದಾಗ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಭರತನಿಗೆ ಮರಣ ಹೊಂದಿರುತ್ತಾನೆ ಅಂತಾ ಹೇಳಿದ್ದರಿಂದ ಅವನ ಸಂಬಂಧಿಕರಾದ ಲವ, ಕುಶ, ಚಿನ್ನೇಶ ಎಲ್ಲರೂ ಸಾ|| ಬಾಪೂನಗರ ಮೂರು ಜನರು ಕೂಡಿ ನಮ್ಮ ಭರತನಿಗೆ ಕೊಲೆ ಮಾಡಿದಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಾಲಿನಿಂದ, ಮೈಮೇಲೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 198/11 ಕಲಂ: 323, 504, 341, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ :
ಗುರುಬಾಳಪ್ಪ ತಂದೆ ದುಂಡಪ್ಪ ನವಲಗಿರಿ ಸಾ|| ಆನೂರು ರವರು ಆನೂರು ಸರ್ಕಾರಿ ಶಾಲೆಯ ಕಾರ್ಯಾಲಯದ ಎರಡು ಕೀಲಿಗಳು ಮುರಿದು ಹೋದ ಬಗ್ಗೆ ನಮ್ಮ ಶಾಲೆಯ ಅಡುಗೆಯವರು ಮೊಬೈಲ ಮೂಲಕ ತಿಳಿಸಿದರು ಆವಾಗ ನಾನು ನಮ್ಮ ಸಹ ಶಿಕ್ಷಕರಾದ ವಿಶ್ವನಾಥ ಇಬ್ಬರೂ ಸೇರಿಕೊಂಡು ನೋಡಿದಾಗ ಒಳಗಡೆ ಇರುವ 1 ಸಮ್ ಸಂಗ ಕಲರ ಟಿ ವಿ, 1 ಸೈಕಲ್ ಅಂಧಾಜು ಕಿಮ್ಮತ್ತು 23,000/- ರೂ ಕಿಮ್ಮತ್ತಿನ ಮಾಲು ಯಾರೊ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 173/11 ಕಲಂ 457 380 ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀ ಶ್ರೀಮಂತ ತಂದೆ ಭಗವಂತಪ್ಪ ಸೋಮಜಾಳ ಸಾ: ಸರ್ವೆ ನಂ 1/2 ಕುಸನೂರ ಗುಲಬರ್ಗಾ ರವರು ನಾನು  ದಿನಾಂಕ 23-10-2011 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಬ್ಲಾಕ ನಂ-4 ಉಪನ್ಯಾಸಕರ ಕೋಣೆ ನಂ-2 ರಲ್ಲಿ ಕೆ.ಎಸ.ಈ.ಟಿ ಪರೀಕ್ಷೆಯ ಪೇಪರ-1 ವಿದ್ಯಾರ್ಥಿಗಳಿಗೆ ನೀಡುತ್ತಾ ಮುಂದೆ ಸಾಗಿದೆ. ನೊಂದಣಿ ಸಂಖ್ಯೆ -16140052 ನೇದ್ದರ ವಿದ್ಯಾರ್ಥಿಯು ಗೈರು ಹಾಜರಾಗಿದ್ದು ಕಾರಣ ಸದರಿಯವರ ಟೇಬಲ ಮೇಲೆ ಬುಕಲೇಟ ಇಟ್ಟು ಮುಂದೆ ಸಾಗಿದೆ. ಅಷ್ಟರಲ್ಲಿ ನೊಂದಣಿ ಸಂಖ್ಯೆ ಹುಡುಕುತ್ತಾ ಬಂದಾಗ ಯಾರೂ ಒಬ್ಬ ವಿದ್ಯಾರ್ಥಿನಿ ಬಂದು ಟೇಬಲ ಮೇಲೆ ಇಟ್ಟಂತ ಬುಕಲೇಟ್ ಪೇಪರ -1 ತೆಗೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 241/11  ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

23 October 2011

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಅಲಿ ತಂದೆ ಲಾಡ್ಲೆಸಾಬ ವಗ್ದರಗಿ ಸಾ:ಜಾಫರಾಬಾದ ತಾ:ಜಿ:ಗುಲ್ಬರ್ಗಾ ರವರು,ನಮ್ಮ ಮನೆಯಲ್ಲಿ ಹೈನು ಮತ್ತು ಮನೆಯ ಉಪಯೋಗಕ್ಕಾಗಿ ಎರಡು ಎಮ್ಮೆಗಳನ್ನು ಸಾಕಿದ್ದು ಸದರಿ ಎಮ್ಮೆ ಗಳು ನಾಲು ಬೆಳಿಗ್ಗೆ ಮೇಯಿಸುವ ಮನುಷ್ಯ ಬಂದು ಮೇಯಿಸಲು ಹೊಡೆದುಕೊಂಡು ಹೋಗಿ ಸಾಯಂ ಕಾಲ ಮನೆಗೆ ತಂದು ಬಿಡುತ್ತಿದ್ದು ಅದೇ ರೀತಿ ದಿ: 9-10-11 ರಂದು ರಾತ್ರಿ ನಾವು ಊಟ ಮಾಡಿ 11 ಗಂಟೆ ಯವರೆಗೆ ಮಲಗುವಾಗ ನೋಡಲಾಗಿ ಮನೆಯ ಮುಂದೆ ಕಟ್ಟಿದ್ದು ಇದ್ದವು ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯಲ್ಲಿ ಕಟ್ಟಿದ್ದ ಎರಡು ಎಮ್ಮೆಗಳು ಇರದೆ ಬಿಚ್ಚುಕೊಂಡು ಹೋಗಿರಬಹುದೆಂದು ಎಲ್ಲ ಕಡೆಗೆ ಹುಡುಕಾಡಲಾಗಿ ಸದರಿ ನಮ್ಮ ಎಮ್ಮೆಗಳು ಸಿಗಲಿಲ್ಲ. ಸದರಿ ನಮ್ಮ ಎರಡು ಎಮ್ಮೆಗಳ ಅಂದಾಜು ಕಿಮ್ಮತ್ತು ಒಟ್ಟು 40000/- ರೂ. ಎರಡು ಎಮ್ಮೆಗಳು ದಿ: 9-10-11 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 308/2011 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಪಾಟೀಲ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ರವರು, ದಿ: 21-10-11 ರಂದು ರಾತ್ರಿ 8 ಗಂಟೆಗೆ ನನ್ನ ಕೆಲಸದಿಂದ ಮರಳಿ ಮನೆಗೆ ಬಂದು ನನ್ನ ಕಾರ ಕೆಎ 32 ಎಮ್‌‌ 9897 ಮನೆಯ ಮುಂದೆ ನಿಲ್ಲಿಸಿರುತ್ತೇನೆ. ದಿನಾಂಕ 22/10/11 ರಂದು ಮುಂಜಾನೆ 5:30 ಗಂಟೆಗೆ ಎದ್ದು ನೋಡಿದ್ದಾಗ ನನ್ನ ಕಾರು ಮನೆಯ ಮುಂದೆ ಇರಲಿಲ್ಲ. ಅದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಕಾರು ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 309/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಕುತಬೋದ್ದಿನ್ ತಂದೆ ಅಬ್ದುಲ ರಹಮನ್ ಬುಡ ಸಾ: ಬಂದರವಾಡ ಗಲ್ಲಿ ನಾನು ದಿ: 21-10-11 ರಂದು ಸಾಯಂಕಾಲ 5.30 ಪಿಎಮ್ ಕ್ಕೆ ನಮ್ಮ ಓಣಿಯಲ್ಲಿರುವ ಮೌಲಾನ ದರ್ಗಾದ ಒಳಗಡೆ ಕಂಪೌಂಡನಲ್ಲಿರುವ ಕಟ್ಟೆಯ ಮೇಲೆ ನಾನು ಮಲಗಿಕೊಂಡು ಮಾತಾಡುತ್ತಿದಾಗ ಅನ್ಸರ ಸಾಬ ಇವರ ಮಗ ಉಮರ್ ಅಲೀ ಇತನು ಬಂದು ಎಲ್ಲರಿಗೂ ಬೈಯುತ್ತ ನನ್ನ ಗಲ್ಲಕ್ಕೆ ಹೊಡೆದನು. ನನಗೆ ಯಾಕೆ ಹೊಡೆಯುತ್ತಿ? ಅಂತಾ ಕೇಳಿದ್ದಕ್ಕೆ ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆಬಡೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 246/2011 ಕಲಂ 323.324.504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

22 October 2011

GULBARGA DIST REPORTED CRIMES

ಅಶೋಕ ನಗರ ಠಾಣೆ : ಶ್ರೀ ಶಂಕರ ತಂದೆ ವೀರಣ್ಣಾ ಪೂಜಾರಿ ಉ: ಬಸ ಕಂಡಕ್ಟರ ಡಿ.ಸಿ ನಂ. 164 ಬಸ ಘಟಕ ನಂ.3 ಗುಲಬರ್ಗಾ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು, ದಿನಾಂಕ 21-10/2011 ರಂದು ಮದ್ಯಾಹ್ನ 1:30 ಗಂಟೆಗೆ ಸುಪರ ಮಾರ್ಕೆಟ ಬಸ ಸ್ಟ್ಯಾಂಡದಲ್ಲಿ ಸಿತನೂರಕ್ಕೆ ಹೊಗಲು ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಂ. ಕೆಎ 32-ಎಫ್‌-1319 ನೇದ್ದನ್ನು ನಿಲ್ಲಿಸಿದಾಗ ಒಬ್ಬ ಪ್ರಯಾಣಿಕ ಮಹಿಳೆಯರ ಸೀಟ ಮೇಲೆ ಕುಳಿತಿರುವಾಗ ಬೇರೆ ಸೀಟಿನ ಮೇಲೆ ಹೊಗುವಂತೆ ಹೇಳಿದಾಗ ಆ ವ್ಯಕ್ತಿ ನನ್ನೊಂದಿಗೆ ತಕರಾರು ಮಾಡಿದನು. ಆಗ ಅಲ್ಲಿ ಪೊಲೀಸರು ಇದ್ದುದ್ದರಿಂದ ಕೆಳಗಡೆ ಇಳಿದನು. ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಿತನೂರಕ್ಕೆ ಹೊಗಿ, ಮರಳಿ ಸುಪರ ಮಾರ್ಕೆಟಕ್ಕೆ ಬರುತ್ತಿರುವಾಗ ಮದ್ಯಾಹ್ನ 2:45 ಗಂಟೆ ಸುಮಾರಿಗೆ ಕರುಣೇಶ್ವರ ನಗರ ಬಸ ಸ್ಟಾಪ್‌ ಹತ್ತಿರ 5 ಜನ ಪ್ರಯಾಣಿಕರು ಕೈ ಮಾಡಿದ್ದರಿಂದ ಬಸ ಡ್ರೈವರ ರವಿ ರವರು ಬಸ ನಿಲ್ಲಿಸಿದ್ದು ಆಗ ಆ 5 ಜನ ಪ್ರಯಾಣಿಕರು ಒಮ್ಮೇಲೆ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಈ ಕಂಡಕ್ಟರ ನನಗೆ ಮಾರ್ಕೆಟದಲ್ಲಿ ಬಸ್ಸಿನಿಂದ ಇಳಿಸಿದಾನೆ ಅಂತಾ ಹೇಳಿ ಮಾರ್ಕೆಟ ಬಸಸ್ಟ್ಯಾಂಡದಲ್ಲಿ ತಕರಾರು ಮಾಡಿದ ವ್ಯಕ್ತಿ ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು ಮತ್ತು ಜೊತೆಗಿದ್ದ 4 ಜನ ಹೊಡೆಬಡೆ ಮಾಡಿರುತ್ತಾರೆ. ಆಗ ನಮ್ಮ ಬಸ ಚಾಲಕ ರವಿ ಹಾಗು ಕೆಲವು ಪ್ರಯಾಣಿಕರು ಜಗಳ ಬಿಡಿಸಿರುತ್ತಾರೆ. ಪಾಣೆಗಾಂವದವರು ಎಂದು ತಿಳಿದು ಬಂದಿದ್ದು ಓಡಿ ಹೊಗಿರುತ್ತಾರೆ. ನನಗೆ ಗಾಯಗಳಾಗಿರುತ್ತವೆ. ಸದರಿ ಜಗಳದಲ್ಲಿ ನನ್ನ ಹತ್ತಿರ ಇದ್ದ ಬಸ ಟಿಕೇಟ ಹಣ 535/- ರೂಪಾಯಿ ಎಲ್ಲೊ ಬಿದ್ದು ಕಳೆದಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಗುನ್ನೆ ನಂ:ನ 113/2011 ಕಲಂ:323, 353, 504 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕರ ಕಾಂಬಳೆ ಸಾತಿಲಕ ನಗರ ಜಿಡಿಎ ಕಾಲನಿ ಗುಲಬರ್ಗಾ ರವರು,ನನ್ನ ಮಗನಾದ ಜಗನ್ನಾಥ ತಂದೆ ಶಂಕರ ಕಾಂಬಳೆ ವಯ ಇತನು ಇನಾಮದಾರ ಪ್ರೀ.ಯುನಿವರ್ಸಿಟಿ ಕಾಲೇಜನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಸೈನ್ಸ ಓದುತ್ತಿದ್ದು. ದಿನಾಂಕ 15-10-2011 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಯಿಂದ ಕೈಯಲ್ಲಿ ಒಂದು ಕಾಪಿ ಹಿಡಿದುಕೊಂಡು ಹೋದವನು ಸಾಯಂಕಾಲವಾದರೂ ಮನಗೆ ಬರದೆ ಇದ್ದುದರಿಂದ ಇಲ್ಲಿಯವರೆಗೆ ನಮ್ಮ ಸಂಭಂದಿಕರಿಗೆ ಮತ್ತು ಆತನ ಮಿತ್ರರಿಗೆ ವಿಚಾರಿಸಿದರು ಮತ್ತು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗ ಜಗನ್ನಾಥನನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆ ಗುನ್ನೆ ನಂ. 240/2011 ಕಲಂ. ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.    

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪುಟ್ಟ ಸ್ವಾಮಿ ತಂದೆ ರಂಗ ಸ್ವಾಮಿ ಸಾ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ದಿನಾಂಕ 21.10.11 ರಂದು ನಾನುಬ ನಂ ಕೆ.ಎ 34 ಹೆಚ 2549 ನೇದ್ದರ ಮೇಲೆ ಹಳೇ ಜೇವರ್ಗಿ ರೋಡಿನಲ್ಲಿ ಬರುವ ಮೇಡಿಪ್ಲಸ್ ಅಂಗಡಿ ಎದುರುಗಡೆ ರೋಡಿನ ಮೇಲೆ ಜೇವರ್ಗಿ ರಿಂಗ ರೋಡ ಕಡೆ ಹೋಗುತ್ತಿದಾಗ ಮೋಟರ್ ಸೈಕಲ್ ನಂ ಕೆ.ಎ 32 ಎಸ 1812 ನೇದ್ದರ ಚಾಲಕ ಅಕ್ಬರ ಇತನು ರೇಲ್ವೆ ಅಂಡರ ಬ್ರೀಜ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ವಾಹನಕ್ಕೆ ಅಪಘಾತ ಪಡಿಸಿ ಗಾಯಗೂಳಿಸಿ ತನ್ನ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 134/11 ಕಲಂ: 279, 337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ನಿಂಬರ್ಗಾ ಠಾಣೆ :ಶ್ರೀ ರಾಜಕುಮಾರ ತಂದೆ ಗುಂಡಪ್ಪ ಆಳಂದ ಸಾ|| ದುತ್ತರಗಾಂವ ರವರು, ದಿನಾಂಕ 20/10/11 ರಂದು ನಾನು ಮತ್ತು ನಮ್ಮ ಗ್ರಾಮದ ಸಿದ್ದಾರಾಮ ಹತ್ತರಕಿ ಮತ್ತು ವೀರಣ್ಣಾ ಶಿರೂರ ಇವರು ಮಂಗಾಣೆಯವರ ಹೊಲ ಸರ್ವೆ ನಂ. 59/03 ನೇದ್ದರಲ್ಲಿ ಜೋಳ ಬಿತ್ತಣೆ ಮಾಡಿ ಅದೆ ಹೊಲದಲ್ಲಿ ಇನ್ನು ಬಿತ್ತನೆ ಮಾಡಬೇಕಾಗಿದ್ದರಿಂದ ರಾತ್ರಿ ಅದೆ ಹೊಲದಲ್ಲಿ ಎಲ್ಲರೂ ಮಲಗಿಕೊಂಡಾಗ ಮಧ್ಯ ರಾತ್ರಿ 01.00 ಗಂಟೆ ಸುಮಾರಿಗೆ ಎಲ್ಲರೂ ನಿದ್ರೆಯಲ್ಲಿದ್ದಾಗ ನನಗೆ ಯಾರೋ ಬಡಿಗೆಯಿಂದ ಹೊಡೆದಿದ್ದರಿಂದ ಚೀರಾಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದ ಎರಡು ಜನರು ಎದ್ದು ನೋಡಲು ಯಾರೋ 3 ಜನರಿದ್ದು ಅವರು ಬಡಿಗೆಯಿಂದ, ಸಿದ್ದಾರಾಮ ಹತ್ತರಕಿ ಮತ್ತು ಬೀರಣ್ಣಾ ಇವರಿಗೂ ಹೊಡೆದು ಒಳಪೆಟ್ಟು ಮಾಡಿದ್ದು, ಅವರಿಗೆ ನೀವು ಯಾರು ಇದ್ದೀರಿ ಅಂತ ಮಾಡನಾಡಿಸಿದರೂ ಸಹ ಅವರು ಮಾತನಾಡಿರುವದಿಲ್ಲಾ, ಅವರ ಹೊಡೆತಕ್ಕೆ ತಾಳದೆ ಒಂದೆ ಸವನೆ ಚೀರಾಡುತ್ತಿರುವಾಗ ಅಲ್ಲಿಂದ ಅವರು ಓಡಿಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 116/2011 ಕಲಂ 324, 34 ಐಪಿಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

21 October 2011

GULBARGA DIST REPORTED CRIMES

ರಾಘವೇಂದ್ರ ನಗರ ಠಾಣೆ : ಶ್ರೀ ಅಶೋಕ ತಂದೆ ಕಮಲಾಕರರಾವ ಕುಲಕರ್ಣಿ ಉ|| ಎಸ್.ಬಿ.ಹೆಚ್ ಸಂಗಮೇಶ್ವರ ಕಾಲೋನಿ ಬ್ರಾಂಚ ಮ್ಯಾನೇಜರ ಸಾ|| ಬ್ರಹ್ಮಪೂರ ಗುಲಬರ್ಗಾ ರವರು, ನಾನು ಸಂಗಮೇಶ್ವರ ಕಾಲೋನಿಯ ಎಸ್.ಬಿ.ಹೆಚ್ ಬ್ಯಾಂಕ್ನ ದಿನಾಂಕ 21-10-2011 ರಂದು ಸಾಯಂಕಾಲ 6-30 ಗಂಟೆಯವರೆಗೆ ಕೆಲಸ ಮುಗಿಸಿ ಬ್ಯಾಂಕ ಬೀಗ ಹಾಕಿಕೊಂಡು ಹೋಗಿದ್ದು ಇಂದು ಬೆಳಗಿನ ಜಾವ 8 ಗಂಟೆಗೆ ಬ್ಯಾಂಕಿಗೆ ಬಂದು ಬೀಗ ತೆರೆದು ಒಳಗೆ ಹೋಗಿ ನೋಡಲು ಬ್ಯಾಂಕಿನ ಗೋಡೆ ಒಡೆದು ಯಾರೋ ಅಪರಿಚಿತ ಕಳ್ಳರು ಒಳಗೆ ಪ್ರವೇಶ ಮಾಡಿ ಕಳುವು ಮಾಡಲು ಪ್ರಯತ್ನ ಮಾಡಿದ್ದು ಬ್ಯಾಂಕಿನಲ್ಲಿದ್ದ ಯಾವುದೇ ವಸ್ತುಗಳು ಕಳುವು ಆಗಿರುವುದಿಲ್ಲಾ, ಕಳುವು ಮಾಡಲು ಪ್ರಯತ್ನಸಿದ ಕಳ್ಳರ ಬಗ್ಗೆ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆ ಗುನ್ನೆ ನಂ 82/11 ಕಲಂ 457, 380, 511 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಕು|| ಡಾ|| ಲಲೀತಾ ತಂದೆ ಎಮ್.ಡಿ.ನಾಯ್ಡು ಉ: ವೈದ್ಯಕೀಯ ವಿದ್ಯಾರ್ಥಿನಿ ಸಾ: ಲಕ್ಷ್ಮಿ ಕ್ಲಿನಿಕ ವಿಶಾಖ ಪಟ್ಟಣ [ಎ.ಪಿ.] ರವರು, ನಾನು ದಿ: 19-10-11 ರಂದು 12=30 ಪಿ.ಎಮ್.ಕ್ಕೆ ನಗರದ ಆರ್.ಪಿ. ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ಕೋರ್ಟ ಕ್ರಾಸ್ ಹತ್ತಿರ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಈತನ ಮೋಟಾರ ಸೈಕಲ್ ನಂಬರ ಕೆಎ 01 ವಾಯಿ 6633 ನೇದ್ದರ ಮೇಲೆ ಕುಳಿತುಕೊಂಡು ಬರುತ್ತಿರುವಾಗ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ತನ್ನಿಂದ ತಾನೆ ಮೋಟಾರ್ ಸೈಕಲ್ ಮೇಲಿಂದ ಕೆಳಗೆ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ನನಗೂ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ. 133/11 ಕಲಂ: 279 .338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ : ಶ್ರೀ ಲಕ್ಷ್ಮಣ ತಂದೆ ಸಂಗಪ್ಪ ಕೊಡಲಗಹಂಗರಗಾ ಸಾ: ಜಮಗಾ (ಆರ್) ತಾ: ಆಳಂದ ಜಿ : ಗುಲಬರ್ಗಾ ರವರು, ನನ್ನ ಮಗಳಾದ ಅಂಬಿಕಾ ಇವಳು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ 5 ನೇ ಸೆಮಿಸ್ಟರದಲ್ಲಿ ಫೇಲಾಗಿದ್ದು ಮಾನಸಿಕ ಮಾಡಿಕೊಂಡು ಜಿಗುಪ್ಸೆಗೊಂಡು ದಿ:19-10-11 ರಂದು ವಿಷ ಸೇವನೆ ಮಾಡಿ ಉಪಚಾರ ಹೊಂದುತ್ತಾ ದಿ:20-10-11 ರಂದು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆ ಯು.ಡಿ.ಆರ್. ನಂ.14/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ಠಾಣೆ : ಶ್ರೀ ಮುನಿರಪಾಶಾ ತಂದೆ ಬಾಬಾಸಾಬ ಕಣ್ಣಿ ಸಾ|| ಸಟಪಟನಹಳ್ಳಿ ರವರು, ಹೊಸ ನೀರು ಶುದ್ದಿಕರಣ ಘಟಕ ಪ್ರಾರಂಭಗೊಂಡ ಪ್ರಯುಕ್ತ ನಾನು ಹಾಗೂ ಶಿವಯ್ಯ ಪಠಪತಿ ಇಬ್ಬರೂಕೂಡಿ ಮೋಟಾರ ಸೈಕಲ್ ನಂ. ಎಂ,ಹೆಚ್, 13/ಎ,ಸಿ 3279 ನೇದ್ದರ ಮೇಲೆ ಸೇಡಂದಿಂದ ಸಟಪಟನಹಳ್ಳಿಗೆ ಹೋಗಿ ಪಂಪ್ ಚಾಲು ಮಾಡಿ ಪೈಪಲೆನ ಲೀಕೆಜ ಚೆಕ್ ಮಾಡುತ್ತಾ ಮೋಟಾರ್ ಸೈಕಲ ಮೇಲೆ ಬರುತ್ತಿರುವಾಗ ಮುರೆಗೇಂದ್ರಪ್ಪ ಕೋಳಕುರ್ ಇವರ ಹೊಲದ ಹತ್ತಿರ ಸೇಡಂ ಕಡೆಯಿಂದ ಬರುತ್ತಿದ್ದ ಮುನವರ್ ರೋಡ ಲೈನ್ಸ್ ಟಿಪ್ಪರ ಲಾರಿ ನಂ ಕೆಎ 32 -4565 ನೇದ್ದರ ಚಾಲಕ ನರಸಾಪ್ಪ ತಂದೆ ಹಣಮಂತ ಸಾ|| ಮಳಖೇಡ ನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆಅಪಘಾತ ಪಡಿಸಿದ್ದು ನನಗೆ ಮತ್ತು ಶಿವಯ್ಯ ನಿಗೆ ಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 181/2011 ಕಲಂ 279,337,338, ಐಪಿಸಿ ಸಂಗಡ 187 ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ಠಾಣೆ : ಶ್ರೀಮತಿ ದೇವಕಿ ಗಂಡ ಶರಣಾಪ್ಪ ಇಂಗಳಗಿ ಸಾ|| ಸಾಯಿಬಾಬಾ ಕಾಲೋನಿ ಸೇಡಂ ರವರು, ಜೆ.ಕೆ ರೋಡ ಸಾಯಿಬಾಬಾ ಕಾಲೋನಿಯಲ್ಲಿ ಇರುವ ಅಂಗಡಿಯನ್ನು ರಾಮಲು ಮೇಕ್ಯಾನೀಕ ಇವರ ಮಕ್ಕಳಿಗೆ ಕೋಟ್ಟಿದ್ದು ಅವರು ಗ್ಯಾರೆಜ ಹಚ್ಚಿದ್ದು ಇತ್ತು, ಅವರಿಗೆ ನಮಗೆ ಅಗದೆ ಇದ್ದರಿಂದ ಸದರಿ ಗ್ಯಾರೆಜ ಖಾಲಿ ಮಾಡಲು ಹೇಳಿದ್ದು ಇತ್ತು. ನನ್ನ ಗಂಡ ತಾಂಡೂರಕ್ಕೆ ಹೋಗಿದ್ದು ನೋಡಿ ಅಂಗಡಿಯಲ್ಲಿ ಇವರು ಲೇಥ ಮಶಿನ ವಗೆರೆ ಕಿತ್ತುವಾಗ ಸಪ್ಪಳ ಕೇಳಿ ಬಂದು ನೋಡಲು ಲೇಥ ಮಶೀನ ಯಾಕೆ? ಕಿತ್ತುತ್ತಿರಿ ಅದು ನಮ್ಮದು ಇದೆ ಅಂತಾ ಹೇಳಿದಾಗ ಅವರಲ್ಲಿ ಮಲ್ಲು ಪೆಂಚಂಪಳ್ಳಿ ಮತ್ತು ಹಣಮಂತ ಮಕ್ಯಾನೀಕ ಇವರು ನೀನು ನಮಗೆ ಏನು ಕೇಳುತ್ತಿ ? ಇದು ನಮ್ಮ ಲೇಥ ಮಶೀನ ಇದೆ ಅಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾರೆ. ಆಗ ರಘೂ ಮೇಕ್ಯಾನಿಕ್ ಮತ್ತು ರಾಮು ಮೇಕ್ಯಾನಿಕ್ ಇವರು ತಮ್ಮ ವೆಲ್ಡಿಂಗ ಮಶೀನ ಒಡೆದುಹಾಕಿ ಹಾನಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 182/2011 ಕಲಂ 341,323,354,504,427, ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಮಳಖೇಡ ಠಾಣೆ : ಶ್ರೀ ರವಿಚಂದ್ರ ತಂದೆ ತಿಮ್ಮಯ್ಯ ಜೇಟಿ ಉ:ವಾಸವದತ್ತಾ ಸಿಮೆಂಟ ಕಂಪನಿ ಸೇಡಂದಲ್ಲಿ ಟರಬೈನ್ಆಪರೇಟರ ಕೆಲಸ ಸಾ|| ಭದ್ರಾವತಿ ಜಿ: ಶಿವಮೋಗ್ಗ ಹಾ,ವ: ವಾಸವದತ್ತಾ ಕಾಲೋನಿ ಸೇಡಂ ರವರು, ದಿ:18-10-11 ರಂದು ಗುಲಬರ್ಗಾದಿಂದ ಸೇಡಂಕ್ಕೆ ಬರುವ ಬಸ್ಸ ನಂಬರ ಕೆಎ-32 ಎಫ್-39 ನೇದ್ದರಲ್ಲಿ ಬೆಳಿಗ್ಗೆ 7-15 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಹಾಗು ನನ್ನ ಮಾವ ಮತ್ತು ನನ್ನ ಎರಡು ಮಕ್ಕಳು ಸೂಟಕೇಸ್ ಸಮೇತ ಬಸ್ಸನಲ್ಲಿ ಕುಳಿತು ಬರುವಾಗ ಮಳಖೇಡಕ್ಕೆ ಬಂದು ನನ್ನ ಸೂಟಕೇಸ್ ನೋಡಲಾಗಿ ಇರಲಿಲ್ಲಾ ಕಾರಣ ನನ್ನ ಸೂಟಕೇಸ್ದಲ್ಲಿದ್ದ ಎಟಿಎಮ್ ಕಾರ್ಡ, ಪ್ಯಾನ್ ಕಾರ್ಡ, 2 ಬಂಗಾರದ ಉಂಗುರ ನಗದು ಹಣ ಒಟ್ಟು 5.000/- ಹೀಗೆ ಹಾಗು ದಾಖಲಾತಿಗಳು ಸೇರಿದಂತೆ ಬೆಳ್ಳಿಮತ್ತು ಬಂಗಾರದ ಒಡವೆಗಳಿದ್ದ ಸೂಟಕೇಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಪತ್ತೆ ಹಚ್ಚಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆ ಗುನ್ನೆ ನಂ. 96/2011 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಸ್ಟೇಷನ ಬಜಾರ ಠಾಣೆ : ಶ್ರೀ ಮಾನಪ್ಪ ತಂದೆ ಯಲ್ಲಪ್ಪ ಕೆ.ಜಿ.ಬ್ಯಾಂಕನಲ್ಲಿ ಮ್ಯಾನೇಜರ. ಸಾ: ಮನೆ ನಂ9-82 ನಾಯ್ಡು ಲೇಔಟ ರಾಜಾಪೂರ ಕಾಲೋನಿ ಗುಲಬರ್ಗಾ ರವರು ದಿನಾಂಕ : 20/07/2010 ರಿಂದ 04/06/2011 ರ ಅವಧಿಯಲ್ಲಿ ಇದೇ ಬ್ಯಾಂಕಿನಲ್ಲಿ ಆರ್.ಡಿ.ಓ. ಅಂತಾ ಕರ್ತವ್ಯ ನಿರ್ವಹಿಸಿದ ಬಲಭೀಮ ಆರ್. ರಾಂಪೂರೆ ಸಂಗಡ ಸಾರ್ವಜನಿಕರಾದ ರಾಮೇಶ ತಂದೆ ಹಣಮಂತ ವಾಡೇಕರ್, ಬ್ರಹ್ಮಾನಂದ ತಂದೆ ಭೀಮರಾವ್ ಬುಳ್ಳಾ, ಕು : ಪ್ರತಿಭಾ ತಂದೆ ಲಕ್ಷ್ಮಣ ಬಜಂತ್ರಿ, ಬಸವರಾಜ ತಂದೆ ಚಂದ್ರಶಾ ಉಷಾರೆ ಇವರೆಲ್ಲರು ಸೇರಿ ಸರಕಾರದ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಮಂಜೂರಾದ ಸಹಾಯಧನ/ಸಬ್ಸಿಡಿ ಒಟ್ಟು ಹಣ 24,34,012=00 ರೂಪಾಯಿಗಳನ್ನು ಅವರವರ ಫಲಾನುಭವಿಗಳ ಸಹಾಯಧನವನ್ನು ಅವರ ಖಾತೆಗೆ ಜಮಾ ಮಾಡದೇ ಸಂಬಂದವಿಲ್ಲದವರ ಖಾತೆಗಳಿಗೆ ಬಲಭೀಮ ಇವರು ಸ್ವತಃ ತನ್ನ ಸಹಿಯನ್ನು ಚಕ್ ಜಮಾ ಓಚರಗಳ ಮೇಲೆ ಹಾಕಿ ಸರಕಾರಕ್ಕೆ ಮತ್ತು ಬ್ಯಾಂಕಿಗೆ ಇವರೆಲ್ಲರು ಕೂಡಿ ಅಪರಾಧಿಕ ನಂಬಿಕೆ ದ್ರೋಹ ಎಸಗಿದ್ದು ಅಲ್ಲದೇ ಮತ್ತೊಬ್ಬರಂತೆ ನಟಿಸಿ ಬಲಭೀಮ ಇತನು ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರುಗುಳನ್ನು ಕಾಗದ ಪತ್ರಗಳ ಮತ್ತು ಚಕ್ ಗಳ ಮೇಲೆಹಾಕಿ ಅಧಿಕಾರದಲ್ಲಿ ನಂಬಿಕೆದ್ರೋಹ ಎಸಗಿದ್ದು ಮತ್ತ ಬ್ಯಾಂಕ ನೌಕರರನಾಗಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ ಮಾಡಿ ಮೋಸ ವಂಚನೆ ಎಸಗಿದ್ದಲ್ಲದೆ ಸುಳ್ಳು ಸ್ಟಷ್ಟನೆ ಮಾಡಿದ್ದು ವಂಚಿಸುವ ಉದ್ದೇಶಕ್ಕಾಗಿ ದಸ್ತಾವೇಜುಗಳನ್ನು ಉಪಯೋಗಿಸಿ ಇವರೆಲ್ಲರು ಸೇರಿ ಸರಕಾರಕ್ಕೆ/ಬ್ಯಾಂಕಿಗೆ ವಂಚನೆ ಮಾಡಿ ಒಟ್ಟು ಮೊತ್ತ 24,34,012=00 ನಷ್ಟವನ್ನುಂಟು ಮಾಡಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ಸಂಖ್ಯೆ 187/11 ಕಲಂ 147, 406, 419, 408, 409, 420, 465, 468, ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

20 October 2011

GULBARGA DIST REPORTED CRIMES

ಆಳಂದ ಠಾಣೆ : ಶ್ರೀ ಶಿವಪುತ್ರಪ್ಪ ತಂದೆ ಸಿದ್ದರಾಮ ಚಿಂಚುರೆ ಸಾ: ದೇಶಮುಖ ಕಾಲೋನಿ ಆಳಂದ ರವರು, ನಾನು ಆಳಂದದ ಉಮರ್ಗಾ ರೋಡಿನ ಹನುಮಾನ ಕ್ರೇಡಿಟ ಸೋಸಾಯಿಟಿ ಕೆ..ಬಿ. ಫೀ ಹತ್ತಿರ ಮಾತನಾಡಿತ್ತಾ ಕುಳಿತಾಗ ಶಿವಲಿಂಗಪ್ಪ ತಂದೆ ಕರಬಸಪ್ಪ ಸಾ: ಸುಲ್ತಾನಪುರ ಗಲ್ಲಿ ಆಳಂದ ಈತನು ಬಂದು ನಮ್ಮ ವಿರುದ್ದ ಇದ್ದವರಿಗೆ ಕೇಸು ಯಾಕೆ ಗೆದ್ದಿಸಿಕೊಟ್ಟಿದ್ದಿ? ಎಂದು ತನ್ನ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ನನಗೆ ಮತ್ತು ಎದರಿನ ಪಾರ್ಟಿಯವರಿಗೆ ಯಾಕೆ ರಾಜಿಮಾಡಿಸಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ನನಗೆ ಹೊಡೆದು ರಕ್ತಗಾಯಗೊಳಿಸಿ ಅಂಜಿಸಿ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನಿಸಿದಾಗ ತನ್ನ ಸಂಗಡವಿದ್ದ ರಹೀಮ ಸಾಬ, ಬಸವರಾಜ ಹೂಗಾರ ಹಾಗೂ ಇತರರು ಬಿಡಿಸಿಕೊಂಡು ನನ್ನನ್ನು ಜಿ.ಜಿ ಹೆಚ್ ಆಳಂದ ಒಯ್ದು ಸೇರಿಕೆ ಮಾಡಿದ್ದು ಸದರಿ ಆರೋಪಿತನಿಂದ ತನ್ನ ಜೀವಕ್ಕೆ ಅಪಾಯವಿದೆ. ಕಾರಣ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ. 245/2011 ಕಲಂ. 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ವಾಡಿ ಠಾಣೆ : ಕು.ದೀಪಾ ತಂದೆ ಮಹಾಂತೆಶ ಚೌಹಣ ಸಾ|| ಲಕ್ಷ್ಮಿಪೂರವಾಡಿ ರವರು, ನಾನು ಖಣಿಯಲ್ಲಿ ಕೆಲಸ ಮಾಡುತ್ತಿದ್ದು ತನಗೆ ಪರಿಚಯಸ್ಥನಾದ ಶಹಬಾದದ ವಡ್ಡರ ರಾಜು ಈತನು ದಿನಾಂಕ 13-10-2011 ರಂದು 4-00 ಪಿ.ಎಮ್ ಕ್ಕೆ ತಮ್ಮ ಮನೆಯ ಹತ್ತಿರ ಬಂದು ತನಗೆ ಪುಸಲಾಯಿಸಿ ಗುಲಬರ್ಗಾದ ರಾಣೇಶ್ವರ ದರ್ಗಾಕ್ಕೆ ಕರೆದುಕೊಂಡು ಹೋಗಿ ತನಗೆ ಮದುವೆ ಆಗಿಲ್ಲ ಅಂತ ಹೇಳಿ ದಿನಾಂಕ 14-10-2011 ರಂದು ರಾತ್ರಿ 8-00 ಗಂಟೆ ಸುಮಾರಿಗೆ ರಾಣೇಶ್ವರ ದರ್ಗಾದ ಕೆಳಗೆ ತಗ್ಗಿಗೆ ಕರೆದುಕೊಂಡು ಹೋಗಿ ತನಗೆ ಜಬರಿ ಸಂಬೋಗ ಮಾಡಿ ನಂತರ ದಿನಾಂಕ 16-10-2011 ರಂದು ಪುನಾಕ್ಕೆ ಕರೆದುಕೊಂಡು ಹೋಗಿ ದಿನಾಂಕ 18-10-2011 ರಂದು ಶಹಬಾದಕ್ಕೆ ಬಂದು ಒಂದು ಮನೆಯಲ್ಲಿ ಇಟ್ಟು ಹೋದಾಗ ರಾಜುಗೆ ಮದುವೆ ಆಗಿದೆ ಅಂತ ಗೊತ್ತಾಗಿ ನಾನು ಹೇಳದೆ ಕೇಳದೆ ಮನೆಗೆ ಬಂದು ಇಂದು ತನ್ನ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ರಾಜು ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಗುನ್ನೆ ನಂ. 200/2011 ಕಲಂ 366(ಎ), 506,,376 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಸೈಯದ ಅನ್ವರ ಹುಸೇನ ತಂದೆ ಸೈಯದ ಮಹಿಬೂಬ ಸಾ:ಬುಲಂದ ಚಾಂದ ಬೀಬಿ ಬಿ.ಇಡಿ ಕಾಲೇಜ ಹತ್ತಿರ ಗುಲಬರ್ಗಾ ರವರು, ದಿನಾಂಕ 18/10/11 ರಂದು ಮದ್ಯಾಹ್ನ 4 ಗಂಟೆಯ ಸುಮಾರಿಗೆ ನಾನು ಮದುವೆಯ ಸಾಮಾನು ತರಲು ಮಾರ್ಕೆಟಿಗೆ ಹೋದಾಗ ಹಾಗೂ ಅವನ ಪತ್ನಿ ಪೂನಾಕ್ಕೆ ಲಗ್ನ ಪತ್ರ ಕೊಡಲು ಹೋದ ಸಮಯದಲ್ಲಿ ಸನಾಬೇಗಂ ಇವಳ ಮದುವೆ ನಿಶ್ಚಯವಾದ ಬೀಗರಾದ ಯದುಲ್ಲಾ ಕಾಲನಿಯ ಅತ್ತೆ ತಾಹೇರ ಬೇಗಂ ಗಂಡ ಅಲಿಸಾಬ ಸಾ: ಯದುಲ್ಲಾ ಕಾಲನಿ ಗುಲಬರ್ಗಾ ಮತ್ತು ಗಂಡ ಮೋಬಿನ ತಂದೆ ಅಲಿಸಾಬ ಸಾ: ಯದುಲ್ಲಾ ಕಾಲನಿ ಗುಲಬರ್ಗಾ ಮನೆಗೆ ಬಂದು ನನ್ನ ಮಗಳಾದ ಸನಾಬೇಗಂ ಇವಳಿಗೆ ನೀನು ಆಟೋದವನ ಸಂಗಡ ಇದ್ದಿ ನಿನ್ನ ಚರಿತ್ರೆ ಸರಿ ಇಲ್ಲ ಅಂತಾ ನಿಂದಿಸಿ ಮಾತಾಡಿದ್ದು ಹಾಗೂ ನನಗೆ ಲಗ್ನ ಮಾಡಿಕೊಳ್ಳುವುದಿಲ್ಲ ದಿನಾಂಕ 28/10/2011 ರಂದು ಮದುವೆ ನಡೆಯುವದಿಲ್ಲ ಅಂತಾ ಅವರ ಚರಿತ್ರೆಗೆ ಹೀಯಾಳಿಸಿ ಮಾತಾಡಿ ಅವಮಾನ ಮಾಡಿದ್ದರಿಂದ ನನ್ನ ಮಗಳಾದ ಸನಾಬೇಗಂ ಮಾನಸಿಕವಾಗಿ ನೊಂದು ಮನೆಯಲ್ಲಿ ಇರುವ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಉಪಚಾರದಿಂದ ಗುಣ ಮುಖ ಹೊಂದದೆ ಸನಾಬೇಗಂ ಇವಳು ದಿನಾಂಕ 19-10-11 ರಂದು 00:15 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳ ಸಾವಿಗೆ ಕಾರಣರಾದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 307/2011 ಕಲಂ. 504 306 ಸಂ/ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಠಾಣೆ : ಶ್ರೀ ಅಂಬಣ್ಣ ತಂದೆ ಸೈದಪ್ಪ ತಾಳಿಕೋಟಿ ಸಾ: ಗಾಜಿಪೂರ ಗುಲಬರ್ಗಾ ರವರು, ನನ್ನ 3 ನೇ ಮಗಳಾದ ಸುಹಾಸಿನಿ ತಾಯಿಯೊಂದಿಗೆ ಸಣ್ಣ ಪುಟ್ಟ ಜಗಳ ಮಾಡಿಕೊಂಡಿದ್ದು ದಿನಾಂಕ 11.09.11 ರಂದು ನಸುಕಿನ 3 ಗಂಟೆ ಸುಮಾರಿಗೆ ನಾವು ಮಲಗಿದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿರುತ್ತಾಳೆ. ಅವಳ ಬಗ್ಗೆ ಸಂಬಂದಿಕರ ಮನೆಗೆ ಹಾಗೂ ಸ್ನೇಹಿತರ ಮನೆಗೆ ಹೋಗಿ ಎಲ್ಲಾಕಡೆ ವಿಚಾರಿಸಿದ್ದು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗಳನ್ನು ಪತ್ತೆ ಹಚ್ಚಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ ನಂ 103/11 ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

19 October 2011

GULBARGA DIST REPORTED CRIMES


ಕುಖ್ಯಾತ ಮನೆ ಕಳವು ಮಾಡುವ ದಂಪತಿಯ ಬಂಧನ, ಸುಮಾರು 3 ಲಕ್ಷ ರೂ. ಬೆಲೆಬಾಳುವ ಬಂಗಾರ, ಬೆಳ್ಳಿ ಆಭರಣಗಳು ವಶ
ಖಚಿತ ಮಾಹಿತಿ ಆಧಾರದ ಅನ್ವಯ ಶಹಾಬಾದ ನಗರದ ಬಸ್ಸ್ ನಿಲ್ದಾಣದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಕುಖ್ಯಾತ ಮನೆ ಕಳ್ಳತನ ಮಾಡುವ ದಂಪತಿಗಳನ್ನು ಬಂಧಿಸಿ ಸದರಿಯವರಿಂದ ಗುಲಬರ್ಗಾ ನಗರದ ಎಮ್.ಬಿ. ನಗರ ಮತ್ತು ರೋಜಾ ಠಾಣೆ ವ್ಯಾಪ್ತಿಯ ಬಡಾವಣೆಯ ಮನೆಗಳಿಂದ ಕಳ್ಳತನ ಮಾಡಿದ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಮತ್ತು ವಗೈರೆ ಸುಮಾರು 3 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಜಾರಿಯಲ್ಲಿರುತ್ತದೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀಪ್ರವೀಣ ಮಧುಕರ ಪವಾರ ಎಸ್ ಪಿ ಗುಲಬರ್ಗಾ ,ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ
ಎಸ್ ಪಿ ಗುಲಬರ್ಗಾ,ಮತ್ತು ಶ್ರೀ ಹೆಚ್. ತಿಮಪ್ಪ ಡಿ.ಎಸ.ಪಿ ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಇಂದು ದಿನಾಂಕ 18-10-2011 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಶ್ರೀ ಬಿ. ಪಿ ಚಂದ್ರಶೇಖರ ಸಿಪಿಐ ಎಂಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ.ಐ ವಿಶ್ವವಿದ್ಯಾಲಯ ಠಾಣೆ 2) ಶ್ರೀ ಸಂಜೀವಕುಮಾರ ಪಿ.ಎಸ.ಐ ಎಂಬಿ ನಗರಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಶಿವಪುತ್ರ ಸ್ವಾಮಿ ಹೆಚಸಿ , ಶ್ರೀ ಅಶೋಕ ಪಿಸಿ , ಅರ್ಜುನ ಎಪಿಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ಬಲರಾಮ ಪಿಸಿ, ಮಶಾಕ ಪಿಸಿ ಮತ್ತು ಮಹಿಳಾ ಪಿಸಿ ಸುಧಾರವರು ಖಚಿತ ಬಾತ್ಮಿ ಮೇರೆಗೆ ಶಹಬಾರದ ನಗರದ ಬಸ್ ನಿಲ್ದಾಣದಲ್ಲಿ ಖಚಿತ ಬಾತ್ಮಿಯಂತೆ ಕುಖ್ಯಾತ ಮನೆ ಕಳುವು ಮಾಡುವ ಆರೋಪಿತರಾದ 1) ಜಯಶ್ರೀ ಗಂಡ ಕನ್ವರ ಉಪಾಧ್ಯಾಯ ಉ: ಕಚರಾ ಆಯುವದು ಸಾ: ಬಾಪೂ ನಗರ ಗುಲಬರ್ಗಾ 2) ಕನ್ವರ ತಂದೆ ಭಗವಾನ ಉಪಾಧ್ಯಾಯ ಉ: ಕೂಲಿ ಕೆಲಸ ಸಾ: ಬಾಪೂ ನಗರ ಗುಲಬರ್ಗಾ ಇವರನ್ನು ಓಡಿ ಹೋಗುತ್ತಿರುವಾಗ ಮಿಂಚಿನ ದಾಳಿ ಮಾಡಿ ಸದರಿಯವರ ಮೇಲೆ ಬಲವಾದ ಸಂಶಯ ಬಂದು ಠಾಣೆಗೆ ತಂದು ತನಿಖೆ ಒಳಪಡಿಸಿದಾಗ ಈಗ ಸುಮಾರು 8 ದಿವಸಗಳಿಂದ ಗುಲಬರ್ಗಾ ನಗರದ ಬಿಲಾಲಾಬಾದ ಕಾಲೋನಿ ಹಾಗೂ ಜಾಗೃತಿ ಕಾಲೋನಿಯಲ್ಲಿ ಬೀಗ ಹಾಕಿದ ಮನೆ ಬಾಗಿಲ ಕೀಲಿಗಳನ್ನು ಮುರಿದು ಒಳಗೆ ಹೋಗಿ ಟ್ರಂಕ ಮತ್ತು ಅಲಮಾರಿಗಳಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತರಿಂದ ಮನೆ ಕಳುವು ಮಾಡಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ಮಾನ್ಯ ಎಸಪಿ ಸಾಹೇಬರು ಪ್ರಕರಣವನ್ನು ಬೇಧಿಸಿದ ಅಧೀಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

GULBARGA DIST REPORTED CRIMES

ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ಮಾರುತಿ ಮೇತ್ರಿ ಸಾಃ ಮಹಾರಾಜವಾಡಿ, ತಾಃ ಔರಾದ, ಹಾ.ವ: ಕಾವೇರಿ ನಗರ ಗುಲಬರ್ಗಾ ರವರು, ನಾನು ಮತ್ತು ನರಸಿಂಗ ಡಾವರಗಾಂವೆ ಪಾನಿಪೂರಿ ವ್ಯಾಪಾರ ಮಾಡಿಕೊಂಡು ದಿನಾಂಕ 18-10-2011 ರಂದು ರಾತ್ರಿ 11-00 ಸುಮಾರಿಗೆ ಗಂಜ ರೋಡಿಗೆ ಇರುವ ಗಾಂಧಿ ನಗರ ಕ್ರಾಸ ಹತ್ತಿರ ಇರುವ ಬೊರವೆಲ್ ದಲ್ಲಿ ತಮ್ಮ ಭಾಂಡೆಗಳನ್ನು ತೊಳೆಯುತ್ತಿದ್ದಾಗ ಟಾಟಾ ಸುಮೊ ನಂ. ಕೆ.ಎ 32 ಎಮ್ 3506 ನೇದ್ದರ ಚಾಲಕನು ತನ್ನ ಟಾಟಾ ಸುಮೊವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೊರವೆಲ್ ಹತ್ತಿರ ಭಾಂಡೆ ತೊಳೆಯುತ್ತಿದ್ದ ನರಸಿಂಗ ಇತನಿಗೆ ಅಪಘಾತಪಡಿಸಿ ನಂತರ ಬೊರವೆಲ್ ಗೆ ಅಪಘಾತಪಡಿಸಿ ಹಾನಿಗೊಳಿಸಿ ತನ್ನ ಟಾಟಾ ಸುಮೊ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ನರಸಿಂಗ ಇತನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಮತ್ತು ಬೋರವೆಲ್ ಹಾನಿ ಆಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ 64/2011 ಕಲಂ 279, 337, 427 ಐಪಿಸಿ & 187 ಐ,ಎಮ,ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ನಿಂಬರ್ಗಾ ಠಾಣೆ :ಶ್ರೀಮತಿ ಮಂದಾಕಿನಿ ಗಂಡ ನಿಜಲಿಂಗಪ್ಪ ಚೌಲೆ ಸಾ|| ಭೂಸನೂರ ಗ್ರಾಮ ರವರು, ನಾವು ನಮ್ಮ ಹೊಲ ಸರ್ವೆ ನಂ. 307 , 4 ಎಕರೆ ನೇದ್ದರಲ್ಲಿ ಅದರಲ್ಲಿ ಕಬ್ಬು ಮತ್ತು ತೊಗರಿ ಬೇಳೆ ಹಾಕಿದ್ದು ತೊಗರಿ ಬೆಳೆಯಲ್ಲಿ ಸದಿ ತೆಗೆಯಲು ಹೋದಾಗ ನಮ್ಮ ಮಾವನಾದ ಶಿವಶರಣಪ್ಪ ಚೌಲ ಇವರು ನಮ್ಮ ಹೊಲದ ಬಾಂದಾರಿಯ ಹುಲ್ಲು ಕೊಯ್ಯುವಾಗ ನಮ್ಮ ಹೊಲದ ಬಾಜು ಹೊಲದವನಾದ ನಾಗರಾಜ ತಂದೆ ಸಿದ್ದಣ್ಣ ಗವಿ , ಶರಣಮ್ಮ ತಂದೆ ಸಿದ್ದಣ ಗವಿ ಮತ್ತು ಬಸಮ್ಮಾ ಗಂಡ ಸಿದ್ದಣ್ಣಾ ಗವಿ ಇವರು ಕೂಡಿಕೊಂಡು ಬಂದು ಇದು ನಮ್ಮ ಹೊಲದ ಬಾಂದಾರಿ ಇದೆ ಅಂತ ನಮ್ಮ ಸಂಗಡ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಗಾಯಪಡಿಸಿದ್ದಾರೆ. ಮತ್ತು ನಾಗರಾಜ ಈತನು ಮಾನ ಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಾಡಿ, ಎಡಗೈ ನಡುವಿನ ಕೈ ಬೆರಳಿಗೆ ಕಚ್ಚಿ ರಕ್ತಗಾಯಪಡಿಸಿತ್ತಾನೆ. ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಗುನ್ನೆ ನಂ. 115/2011, ಕಲಂ. 323, 324, 354, 504, 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಸಿದ್ದಯ್ಯಾ ಮಠಪತಿ ಸಾ: ಭಂಕೂರ ರವರು, ನಾನು ಗ್ರಾಮ ಪಂಚಾಯತದಲ್ಲಿ ಗ್ರಂಥಾಲಯದ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದು ಲಕ್ಷ್ಮಿಕಾಂತ ತಂದೆ ಮಲ್ಕಪ್ಪಾ ಕಂದಕೊಳ ಸಾ: ಭಂಕೂರ ಈತನು ಅವ್ಯಾಚವಾಗಿ ಬೈಯುವದು ಹಾಗೂ ಜೀವದ ಬೇದರಿಕೆ ಹಾಕುವದು ಮಾಡುತ್ತಿದ್ದಾನೆ ಮತ್ತು ನನಗೆ ಅಶ್ಲೀಲ ಪುಸ್ತಕಗಳನ್ನು ಓದಲಿಕ್ಕೆ ಕೊಡು ಅಂತಾ ಕೇಳುತ್ತಿದ್ದು ನನಗೆ ಅಶ್ಲೀಲವಾಗಿ ಬೈಯುವದು ಮಾಡುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ 158/2011 ಕಲಂ:    504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಗೌರಿಶಂಕರ ತಂದೆ ದತ್ತಾತ್ರೇಯ ಮೈಲಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಯಿಂದ ಬರೆದ ದೂರು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 17-10-2011 ರಂದು ಬೆಳೀಗ್ಗೆ 7-15 ಗಂಟೆಗೆ ಅವರ ಹೆಂಡತಿ ಚಿತ್ರಲೇಖಾ ಮೈಲಾಪುರ ಇವರು ಹಾಲು ತರಲು ಶೆಟ್ಟಿ ಕಾಂಪ್ಲೇಕ್ಸಗೆ ಬಂದು ಮರಳಿ ಹೋಗುವಾಗ ಯಾರೋ ಇಬ್ಬರು ಅಪರಿಚಿತ ಮೋಟಾರ ಸೈಕಲ ಸವಾರರು ಅದರಲ್ಲಿ ಒಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಅವರು ನನ್ನ ಹೆಂಡತಿ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಗುನ್ನೆ ನಂ 81/11 ಕಲಂ 392 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀಮತಿ ತೆಂಗೆಮ್ಮಾ ಗಂಡ ಮಲ್ಲಿನಾಥ ಗುತ್ತಿ ಸಾಃಗೋಗಿ(ಕೆ) ತಾಃಜಿಃ ಗುಲಬರ್ಗಾ ರವರು ದಿನಾಂಕ: 17/10/2011 ರಂದು ಬೆಳಿಗ್ಗೆ ನನ್ನ ಗಂಡ ಮಲ್ಲಿನಾಥ ಇವರು ಹೊಲದಲ್ಲಿ ಹಾಕಿರುವ ತೊಗರಿ ಬೆಳೆಗೆಳಿಗೆ ಕ್ರೀಮಿನಾಶಕ ಔಷಧವನ್ನು ಹೊಡೆಯುತ್ತಿದ್ದಾಗ ಔಷಧವು ಗಾಳಿಯ ಮೂಲಕ ಉಸಿರಾಟದೊಂದಿಗೆ ದೇಹದೊಳಗೆ ಹೋಗಿದ್ದು. ನಂತರ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನನ್ನ ಗಂಡನು ಕೈ ತೊಳೆಯದೇ ಊಟ ಮಾಡಿದ್ದರಿಂದ ಕ್ರೀಮಿನಾಶಕ ಔಷಧ ದೇಹದೊಳಗೆ ಹೋಗಿ ತಲೆ ಸುತ್ತುತ್ತಿದೆ ವಾಂತಿ ಮಾಡುತ್ತಿದ್ದರಿಂದ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 12-30 ಗಂಟೆಗೆ ತಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿದ್ದ ಮಲ್ಲಿನಾಥ ಈತನು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:18/10/2011 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಯುಡಿಆರ್ ನಂ. 10/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅಂಬಿಕಾ ತಂದೆ ಶಾಮರಾಯ ಹಲಗೆ ಸಾ: ಸುಂದರ ನಗರ ಗುಲಬರ್ಗಾ ರವರು, ನನ್ನ ಗಂಡ ಶಾಮರಾಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರು ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ್ ನಂಬರ ಕೆಎ 32 ಕ್ಯೂ 3490 ರ ಚಾಲಕ ಪ್ರವೀಣ ತಂದೆ ಅಬ್ರಾಹಮ್ ಈತನು ಜಿ.ಜಿ.,ಹೆಚ್.ಸರ್ಕಲ್ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡ ದಾಟಿ ಹೋಗುತ್ತಿದ್ದ ನನ್ನ ಗಂಡ ಶಾಮರಾಯ ಈತನಿಗೆ ಅಪಘಾತಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ 132/11 ಕಲಂ: 279 .338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಶಿವರಾಜ ತಂದೆ ಶರಣಪ್ಪ ಬಿರದಾರ ಸಾ: ಮಟಕಿ ರವರು, ದಿನಾಂಕ:17-10-2011 ಅವಧಿ 8.00 ಪಿಎಂದಿಂದ 18/10/2011 8.00ರವರಿಗೆ ಮದ್ಯದ ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶ್ರೀ ಶರಣಬಸೇಶ್ವರ ಕೃಷಿ ಕೇಂದ್ರದ ತೊಗರಿ ಔಷದ ಅಂಗಡಿಯ ಹಿಂದಿನ ಪತ್ರೆಯನ್ನು ಕೊಯ್ದು ಒಳಗೆ ನುಗ್ಗಿ ಟೇಬಲ್ ಡ್ರಾ ಕೀಲಿ ಮುರಿದು ನಗದು ಹಣ 1000=00 ರೂ ಹಾಗೂ ಇಂಪ್ಯಾಕ್ಟ ತೊಗರಿ ಎಣ್ಣೆ ಹಾಗೂ ಪ್ರೋಕ್ಲೆನ್ ತೊಗರಿ ಎಣ್ಣೆ ಅ.ಕಿ 40800=00 ರೂ ಹೀಗೆ ಒಟ್ಟು 41800=00 ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 243/2011 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.