POLICE BHAVAN KALABURAGI

POLICE BHAVAN KALABURAGI

20 September 2011

Gulbarga district reported crimes

ಕೊಲೆ ಮಾಡುವುದಾಗಿ ಹೆದರಿಸಿ, ಮೊಟಾರ್ ಸೈಕಲ್ ಕಿತ್ತುಕೊಂಡ ಬಗ್ಗೆ :-

ರಾಘವೇಂದ್ರ ನಗರ ಠಾಣೆ :ಸುಮಾರು 6 ತಿಂಗಳ ಹಿಂದೆ ಶ್ರೀ ದಯಾಸಾಗರ ತಂದೆ ಅಮ್ರತರಾವ ಶಹಾಬಾದಿ ಇವರು ಯಂಕವ್ವ ಮಾರ್ಕೆಟನಲ್ಲಿ ನಿಂತಾಗ, ಅಲ್ಲಿಗೆ ಬಂದ ಬಸವ ನಗರದ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ಕಟ್ಟಿಮನಿ, ಸಂಗಡ 3 – 4 ಜನರು ಕೂಡಿಕೊಂಡು ಬಂದು ದಯಾಸಾಗರ ಇವರ ಹೊಂಡಾ ಆ್ಯಕ್ಟಿವ್ ಮೊಟಾರ್ ಸೈಕಲ್ ನಂ ಕೆಎ-32 / ವಿ-3771 ನೇದ್ದು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೆ ಕೊಲೆ ಮಾಡುತ್ತವೆ ಅಂತ ಹೆದರಿಸಿರುತ್ತಾರೆ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಮುಧೋಳ ಠಾಣೆ :
ದಿನಾಂಕ 15-09-2011ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ಕುಮಾರಿ ಬುಜ್ಜಮ್ಮಾ ತಂದೆ ಮಲ್ಲಪ್ಪಾ ವಯಾ 4 ವರ್ಷ ಇವಳು ಬುರಗಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿನ ದರ್ಗಾದ ಹತ್ತಿರ ಆಟವಾಡುತ್ತಾ ಬಂದವಳು ಮರಳಿ ಮನೆಗೆ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಶ್ರೀ ನಾಗಪ್ಪಾ ತಂದೆ ಆಶಪ್ಪಾ ಸಾ:ಬುರಗಪಲ್ಲಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿದ ಚಾಲಕನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 19-09-2011 ರಂದು ಸಾಯಂಕಾಲ ಸಿಂದಗಿ ಕ್ರಾಸ ಹತ್ತಿರ ಹುಸೇನ ಪಟೇಲ ತಂದೆ ಖಾಜಾ ಪಟೇಲ ಸಾ: ಕಟ್ಟಿಸಂಗಾವಿ ಇತನು ತನ್ನ ಲಾರಿಯನ್ನು ಕುಡಿದ ಅಮಲಿನಲ್ಲಿ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ಅಲಕ್ಷತನದಿಂದ ಅಜಾಗುರುಕತೆಯಿಂದ ಅಡ್ಡಾ ದಿಡ್ಡಿಯಾಗಿ ನಡೆಸುತ್ತಿದ್ದರಿಂದ ಸದರಿ ವಾನ ಚಾಲಕನ್ನು ವಾಹನ ಸಮೇತ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.

ನಗರಸಭೆ ಅನುದಾನದ ಹಣ ದುರುಪಯೋಗ ಪಡಿಕೊಂಡ ಪ್ರಕರಣ :
ಆಳಂದ ಠಾಣೆ :
1.ಸೈಯ್ಯದ ನಾಸೀರ ಅಲಿ ಹಿಂದಿನ ಮುಖ್ಯಾಧಿಕಾರಿಗಳು ಪುರಸಭೆ ಆಳಂದ 2.ಬಸಣ್ಣಗೌಳಿ ಹಿಂದಿನ ಅಧ್ಯಕ್ಷಕರು ಪುರಸಭೆ ಆಳಂದ 3. ರಾಜಶೇಖರ ಅಧ್ಯಕ್ಷಕರು ಸ್ಥಾಯಿ ಸಮೀತಿ ಪುರಸಭೆ ಆಳಂದ 4.ಪೀರಶೇಟ್ಟಿ ಪುರಸಭೆ ಆಳಂದ 5.ಅಣ್ಣಪ್ಪಾ ಎಫ್‌‌.ಡಿ.ಎ ಪುರಸಭೆ ಆಳಂದ ಇವರುಗಳು 2009-10 ನೇ ಸಾಲಿನ ಪುರಸಭೆ ಅನುದಾನದಲ್ಲಿ ತಮ್ಮ ಅಧಿಕಾರವದಿಯಲ್ಲಿ ಹಣ ದೂರುಪಯೋಗ ಮಾಡಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.