POLICE BHAVAN KALABURAGI

POLICE BHAVAN KALABURAGI

09 April 2014

Gulbarga District Reported Crimes

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಶಿವೂರ ಗ್ರಾಮದಲ್ಲಿರುವ ಅಂಬಿಗರ ಚೌಡಯ್ಯನವರ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವೂರ  ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯನವರ ಕಟ್ಟೆಯಿಂದ ಸ್ವಲ್ಪ ದೂರು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ನೀಜಶರಣ ಅಂಬಿಗರ ಚೌಡಯ್ಯನವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಹಿಡಿದುಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 60 ಓರಿಜನಲ ಚೌಯ್ಸ ಕಂಪನಿಯ 90 ಎಮ್ ಎಲ್ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲಕಣ್ಣ ತಂದೆ ತುಕಾರಾಮ ಜಮಾದಾರ ಸಾ: ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 60 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳು  ಒಟ್ಟು ಅಂದಾಜು 1449/- ರೂ ಆಗುತ್ತದೆ. ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಬೆಳಿಗ್ಗೆ ಶಿವೂರ ಗ್ರಾಮದಲ್ಲಿರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿ ಹಾಗು ಪಂಚರೊಂದಿಗೆ ಹನುಮಾನ ಗುಡಿಯಿಂದ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ್ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ದಾಳಿ ಮಾಡಿ, ಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 31 ಓರಿಜನಲ ಚೌಯ್ಸ ಕಂಪನಿಯ 180 ಎಮ್ ಎಲ್ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಂಜುನಾಥ ತಂದೆ ವಿಠ್ಠಲ ಸುರಗಳ್ಳಿ ಸಾ|| ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 31 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳ  ಒಟ್ಟು ಅಂದಾಜು 1497/- ರೂ ಆಗುತ್ತದೆ. ಸದರಿ ಜಪ್ತ ಮಾಡಿಕೊಂಡ ಮುದ್ದೆ ಮಾಲು ಮತ್ತು  ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ  : ದಿನಾಂಕ 08-04-14 ರಂದು  ಸಂತೋಷಕುಮಾರ  ಇತನು ಟವೇರಾ ಕಾರ ನಂಬರ ಕೆಎ 32 ಬಿ 7186  ನೇದ್ದರ ಚಾಲನೆ ಮಾಡುತ್ತಾ  ಗುಲಬರ್ಗಾದಿಂದ ಕಮಲಾಪೂರಕ್ಕೆ ಹೋಗಿ ಜಂಬಗಾ ಸ್ವಾಮಿಗೆ ಬಿಟ್ಟು ವಾಪಸ್ಸು  ಗುಲಬಗಾಕ್ಕೆ ಬರುತ್ತಿದ್ದಾಗ ನಾವದಗಿ ಗ್ರಾಮದ ಹತ್ತಿರ 5-30 ಪಿಎಂಕ್ಕೆ ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬ್ರೀಡ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಅಪಘಾತ ದಿಂದ ಅತನ ತಲೆಗೆ ಮತ್ತು ಇತರೇ ಕಡೆ ಭಾರಿ ರಕ್ತಗಾಯಗಳಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಮೃತನ ತಂದೆ ಶ್ರೀ ಬಸವರಾಜ ತಂದೆ ಬಂಡೆಪ್ಪ ಪಾಟೀಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ಶ್ರೀ ಅಲ್ಲಾವುದಿನ್ ಶೇಖ ಸಾ|| ಇಂದಿರಾನಗರ ಅಫಜಲಪೂರ ಇವರು ದಿನಾಂಕ: 09-03-2014 ರಂದು ಸಾಯಂಕಾಲ 5-30 ಗಂಟೆಗೆ ನನ್ನ ಮಗ ಸದ್ದಾಮನು ಗುಲಬರ್ಗಾದಿಂದ ಸೈಕಲ ಮೋಟಾರ ನಂ. ಎಮ್.ಹೆಚ್.-13 ಬಿಕೆ-3697 ನೇದ್ದರ ಮೇಲೆ ಅಫಜಲಪೂರಕ್ಕೆ ಬರುತ್ತಿರುವಾಗ ಗೊಬ್ಬೂರ[ಬಿ] ಗ್ರಾಮದ ಬ್ಯಾಂಕ ಹತ್ತಿರ ಸೈಕಲ ಮೋಟಾರ ಸ್ಕೀಡ ಆಗಿ ರಸ್ತೆಯ ಮೇಲೆ ಬಿದ್ದು ತೆಲೆಗೆ ಬಾರಿ ಒಳಪೆಟ್ಟಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 10-03-2014 ರಂದು ಅಶ್ವಿನಿ ಆಸ್ಪತ್ರೆ ಸೋಲಾಪೂರದಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಆಗದೆ ಸದ್ದಾಮಹುಸೇನ ಶೇಖ ಇವನು ದಿನಾಂಕ: 11-03-2014 ರಂದು ಬೆಳಗು ಮುಂಜಾನೆ 03-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಮಲ್ಲಿಕಾರ್ಜುನ್‌ ತಂದೆ ಶಿವರಾಯ ಹೊನ್ನೂರ ಸಾ:ಹೇರೂರ (ಬಿ) ತಾಜಿ:ಗುಲಬರ್ಗಾ  ರವರು ದಿನಾಂಕ 07-04-2014  ರಂದು ಮದ್ಯಾನ್ಹ 3 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂದಿ ಅಮೃತ ತೊರಾದಿ ಸಾ:ಕೊಟನೂರ ಇಬ್ಬರು ಕೂಡಿಕೊಂಡು ಬಸನಾಳ ಗ್ರಾಮದಲ್ಲಿರುವ ನಮ್ಮ ಬಿಗನಾದ ಮಾರುತಿ ಇವರಿಗೆ ಬೇಟಿಯಾಗಿ ಹಣವನ್ನು ಕೇಳಿ ಬಂದರಾಯಿತು ಅಂತಾ ವಿಚಾರ ಮಾಡಿ ಹೊಗಿರುತ್ತೆವೆ. ಅಲ್ಲಿಗೆ ಹೋಗಿ ಮರಳಿ ಅದೆ ದಿನ ನಡೆದುಕೊಂಡು ಸಾಯಂಕಾಲ 5:45 ಗಂಟೆಯ ಸುಮಾರಿಗೆ ಹೊರಟಿದ್ದು ಇರುತ್ತದೆ.ಹಿಗಿದ್ದು ಸಾಯಂಕಾಲ 6 ಗಂಟೆಯ ಸುಮಾರಿಗೆ ಬಸನಾಳ ಗ್ರಾಮ  ದಾಟಿ ಸ್ವಲ್ಪ ದೂರದಲ್ಲಿ  ಕವಲಗಾ(ಬಿ) ಕಡೆಗೆ ನಡೆದುಕೊಂಡು ಬರುತ್ತಿರುವಾಗ ನಮ್ಮ ಹಿಂದಗಡೆಯಲ್ಲಿ ಒಬ್ಬ ಮೊಟರ್‌ ಚಾಲಕನು ತನ್ನ ಮೋಟರ್‌ ಸೈಕಲ್‌ನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಾನು ರೋಡಿನ ಮೇಲೆ ಮುಂದೆ ಮುಖಮಾಡಿ ಕೆಳಗೆ ಬಿದ್ದಿದ್ದರಿಂದ ನನಗೆ ಹಣೆಗೆ, ತಲೆಗೆ ರಕ್ತಗಾಯವಾಗಿರುತ್ತದೆ. ನಂತರ ಮೋಟರ್‌ ಸೈಕಲ್‌ ನಂ ನೋಡಲಾಗಿ ಕೆಎ 56 ಇ-1728 ಅಂತಾ ಇದ್ದು ಅದರ ಚಾಲಕನು ಡಿಕ್ಕಿ ಪಡಿಸಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ :  ಶ್ರೀಮತಿ ರುಕ್ಮೀಣಿ ಗಂಡ ಚಂದ್ರಕಾಂತ ಕಲಾಲ ಸಾ:ಕಕ್ಕಳಮೈಲಿ ತಾ:ಸಿಂದಗಿ ಜಿ:ಬಿಜಾಪೂರ ರವರು ತನ್ನ ತವರು ಮನೆಯಾದ ಯಲಗೋಡದಲ್ಲಿ ಶಾಹುಸೇನ ಮುತ್ಯಾನ ಜಾತ್ರೆ ಇರುವದರಿಂದ ನಮ್ಮ ತಮ್ಮ ಮನೋಜ ಇತನು ದಿಡ ನಮಸ್ಕಾರ ಹಾಕುತ್ತಿರುವದಿರಿಂದ ಎಲ್ಲರೂ ಕೂಡಿಕೊಂಡು ಪುನಾದಿಂದ ನಿನ್ನೆ ದಿನಾಂಕ 07-04-2014  ರಂದು ರಾತ್ರಿ 10 ಗಂಟೆಯ ಸುಮಾರಿಗೆ ಪ್ಯಾಸೆಂಜರ ರೈಲ್ವೆ ಗಾಡಿಗೆ ಹೊರಟು ಇಂದು ದಿನಾಂಕ: 08-04-2014 ರಂದು ಗುಲಬರ್ಗಾದ ರೈಲ್ವೆ ಸ್ಟೇಶನ್‌ಗೆ ಬಂದು ಅಲ್ಲಿಂದ ನಮ್ಮೂರಿಗೆ ಹೊಗುವ ಸಲುವಾಗ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸುರಪೂರ ಬಸ್ಸಿಗೆ ಹೊರಟಿದ್ದು ಬೆಳಗ್ಗೆ 7:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಶಿರನೂರ ಗ್ರಾಮ ದಾಟಿ ಗೀತಾಂಜಲಿ ಕಾರ್ಖಾನೆಯ ಹತ್ತಿರ ಹೊಗುತ್ತಿರುವಾಗ ನಮ್ಮ ಬಸ್ಸನ ಎದುರುಗಡೆಯಲ್ಲಿ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಬಸ್ಸಿನ ಎದುರುಗಡೆಯಲ್ಲಿ ಬಂದು ಒಮ್ಮೆಲೆ ಕಟ್ಟ ಮಾಡಿಕೊಂಡು ಬಸ್ಸಿನ ಬಲಭಾಗಕ್ಕೆ ಉಜ್ಜಿಕೊಂಡು ಹೊಗಿದ್ದರಿಂದ ಕಿಡಕಿಯ ಕಡೆಗೆ ಕುಳಿತ್ತಿದ್ದ ನನ್ನ ಗಂಡನಾದ ಚಂದ್ರಕಾಂತ ಇತನಿಗೆ ಬಸ್ಸಿನ ಕಿಡಕಿಯ ಕಬ್ಬೀಣದ ಪಟ್ಟಿಗಳು ತಲೆಗೆ ಮತ್ತು ಹಣೆಗೆ ಬಡೆದು ಭಾರಿ ರಕ್ತಗಯವಾಗಿರುತ್ತವೆ, ನಮ್ಮ 10 ವರ್ಷದ ಮಗಳಾದ ಅಂಕಿತಾಳಿಗೆ ತಲೆಗೆ  ಭಾರಿ ರಕ್ತಗಾಯವಾಗಿ ರುತ್ತದೆ. ನನಗೆ ಮತ್ತು ನಮ್ಮ ಇನ್ನೊಬ್ಬಳು 13 ವರ್ಷದ ಮಗಳಾದ ರೆಣುಕಾಳಿಗೆ ಅಲ್ಲಲ್ಲಿ ತರಚಿದ ಸಣ್ಣ ಪುಟ್ಟಗಾಯಗಳಾಗಿರುತ್ತದೆ. ಬಸ್ಸಿನಲ್ಲಿ ಕುಳಿತ ಬಸವರಾಜ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಮ್ಮ ತಮ್ಮ ಮನೋಜ ಈತನಿಗೆ ಯಾವುದೇ ಗಾಯವೈಗೆರೆ ಯಾಗಿರುವುದಿಲ್ಲಾ ನಂತರ ಬಸ್ಸಿಗೆ ಡಿಕ್ಕಿ ಪಡಿಸಿದ ಟಿಪ್ಪರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಶಂಕರ ನಾಶಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಸುಮಾರು 02 ತಿಂಗಳ ಹಿಂದೆ ಕಾಂತು ಬಂಟಿ ಜಗತ ಇತನ ಕಡೆಯಿಂದ ನನ್ನ ಗೆಳೆಯನಾದ ಸಚಿನ ಇತನಿಗೆ 50 ಸಾವಿರ ರೂಪಾಯಿ ಕೊಡಿಸಿದ್ದು ಅದರ ಸಂಬಂಧವಾಗಿ, ನಿನ್ನೆ ದಿನಾಂಕಃ 07-04- 2014 ರಾತ್ರಿ 09:00 ಗಂಟೆ ಸುಮಾರಿಗೆ ಮುಕ್ತಂಪೂರದಲ್ಲಿರುವ ಸೋದರ ಮಾವನ ಮನೆಗೆ ಹೋಗಿ ನಂತರ 10:30 ಪಿ.ಎಂ. ಸುಮಾರಿಗೆ ಮರಳಿ ಮನೆಗೆ ಹೋಗುತ್ತಿರುವಾಗ ಫ್ಯಾನ್ಸಿ ಕ್ರಾಸ್ ಹತ್ತಿರ 1) ಕಾಂತು 2) ಚಿದಾನಂದ ಮತ್ತು ಅವರ ಸಂಗಡ ಇನ್ನಿಬ್ಬರು ನನಗೆ ಕರೆದು 50 ಸಾವಿರ ರುಪಾಯಿ ಕೊಡಲು ಒತ್ತಾಯಿಸಿದ್ದು ಆಗ ನಾನು ಸಚಿನ ಊರಲ್ಲಿ ಇಲ್ಲ ಅವನು ಬಂದ ಬಳಿಕ ಎರಡು ದಿವಸಗಳಲ್ಲಿ ಕೊಡುವುದಾಗಿ ಹೇಳಿದರೂ ಕೇಳದೇ ಅವಾಚ್ಯ ಶಬ್ದಗಳಿಂದ ಬೈಯಿದು ಕೈಯಿಂದ ಬೆನ್ನಿಗೆ, ಹೊಟ್ಟೆಗೆ, ಎದೆಯ ಮೇಲೆ ಹಾಗು ಬೆಲ್ಟದಿಂದ ಬಲಗೈ ಮುಂಗೈಗೆ, ಬೆನ್ನಿಗೆ ಮತ್ತು ಬಲಗಡೆ ಮತ್ತು ಎಡಗಡೆ ಕಾಲುಗಳ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಅಲ್ಲದೇ ಕಾಂಪ್ಲೇಟ್ ಮಾಡಿದರೆ ಜೀವದಿಂದ ಹೊಡೆಯುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.