POLICE BHAVAN KALABURAGI

POLICE BHAVAN KALABURAGI

21 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ನರಸಪ್ಪಾ ತಂದೆ ಕಲ್ಲಪ್ಪಾ ದೋಟಿಕೊಳ ಸಾಃ ಶಾಂತಲಿಂಗೇಶ್ವರ ಗುಡಿಯ ಹತ್ತಿರ ಗಂಜ ಏರಿಯಾ ಜಡಿಮಠ ರೋಜಾ ಗುಲಬರ್ಗಾ ರವರು ನಾನು  ನಿನ್ನೆ ದಿನಾಂಕ:20-09-2012 ರಂದು 11-15 ಗಂಟೆಗೆ ಸೋಮೇಶ್ವರ ಟ್ರೇಡಿಂಗ ಕಂಪನಿಯ ಎದುರುಗಡೆ ಮಲಗಿಕೊಂಡಾಗ  ಇನೊವಾ ಕಾರ ನಂ. ಕೆಎ-32 ಎನ್-1399 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮಲಗಿಕೊಂಡಿದ್ದ ನನ್ನ ತಲೆಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ದರೋಡೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಬಂದೆನವಾಜ ತಂದೆ ಫತ್ರುಸಾಬ ಕಟಬಾಣ ಸಾ||ಸಿಗರಥಹಳ್ಳಿ ರವರು ನಾನು ದಿನಾಂಕ: 19/09/2012 ರಂದು ಸಾಯಂಕಾಲ 6-45 ಗಂಟೆಗೆ ಯಾಳವಾರ ಗ್ರಾಮ ಕುಂಬಾರ ಇವರ ಹೊಲದ ರೋಡಿನಲ್ಲಿ ನನ್ನ ಮೋಟಾರ ಸೈಕಲ ನಂಬರ ಕೆಎ-33 ಹೆಚ್.ಸಿ-2464 ನೇದ್ದರ ಮೇಲೆ ಬರುತ್ತಿದ್ದಾಗ ಎದುರುಗಡೆಯಿಂದ ನಾಲ್ಕು ಜನ ಯಾರೋ ದುಷ್ಕರ್ಮಿಗಳು ಮೋಟಾರ ಸೈಕಲ ಮೇಲೆ ಬಂದು ನನ್ನನ್ನು ನಿಲ್ಲಿಸಿ  ನನ್ನ ಹತ್ತಿರವಿರುವ  ನಗದು 1500/- ರೂ , ಒಂದು ಕೈಗಡಿಯಾರ ಅ.ಕಿ 500-00 ರೂ ಒಂದು ಮೈಕ್ರೋಮಾಕ್ಸ ಮೋಬೈಲ ಅ.ಕಿ 1000-00 ಹೀಗೆ ಜಬರ ದಸ್ತಿಯಿಂದ ಕಸಿದುಕೊಂಡು ಚಾಕುವಿನಿಂದ ಹಲ್ಲೆ ಮಾಡಿ ಓಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂಬರ:142/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಪೊಲೀಸ್ ಠಾಣೆ:ದಿನಾಂಕ:20-09-2012 ರಂದು 7-00 ಪಿ.ಎಮ್.ದ ಸುಮಾರಿಗೆ ವಿಶ್ವನಾಥ ತಂದೆ ಶರಣಪ್ಪಾ ಗಾಣಿಗೇರ ವ||30 ಸಾ|| ಆಡಕಿ ಗ್ರಾಮ ಇತನು ಆಡಕಿ ಗ್ರಾಮದ ಕಡೆಗೆ ಬರುವುದಕ್ಕಾಗಿ ಮುಧೋಳ ಮೇನ ಗೇಟ್ ಹತ್ತಿರ ಇರುವ ರಾಜು ಅನ್ನುವವರ ದಾಬಾದ ಎದರುಗಡೆ ಎಡಭಾಗಕ್ಕೆ ನಿಂತಾಗ ರಿಬ್ಬನಪಲ್ಲಿಯ ಕಡೆಯಿಂದ ಟ್ಯಾಂಕರ ನಂ ಎಪಿ-28 ಟಿ.ಇ-0820 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ವಿಶ್ವನಾಥನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಾಗ ಸದರಿಯವನಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಟ್ಯಾಂಕರ ಚಾಲಕನಾದ ರಾಜಪ್ಪಾ ತಂದೆ ಭೀಮಶಪ್ಪಾ ಇತನು ಓಡಿ ಹೋಗಿದ್ದು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ ಶ್ರೀ ಶಿವಾನಂದ @ ಶಿವಕುಮಾರ ತಂದೆ ಶರಣಪ್ಪಾ ಗಾಣಿಗೇರ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:108/2012 ಕಲಂ, 279, 304  (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ        ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.