POLICE BHAVAN KALABURAGI

POLICE BHAVAN KALABURAGI

27 July 2015

Kalaburagi District Reported Crimes

ದೇವರ ಮೂರ್ತಿ ಹಾಗು ಕಿರಿಟ ಕಳವು ಮಾಡಿದ ಕಳ್ಳನ ಬಂಧನ :
ನಿಂಬರ್ಗಾ ಠಾಣೆ : ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿಯ ಬೆಳ್ಳಿಯ ಮೂರ್ತಿಗಳು ಹಾಗೂ ಕಲಬುರಗಿಯ ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ ಕಳ್ಳತನ ಪತ್ತೆ  ಮಾನ್ಯ ಶ್ರೀ ಅಮೀತಸಿಂಗ್‌ ಐ.ಪಿ.ಎಸ್‌. ಪೊಲೀಸ ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಶ್ರೀ ಎಸ್‌.ಎಲ್‌. ಝಂಡೆಕರ ಡಿ.ಎಸ್‌.ಪಿ ಆಳಂದ ಉಪ ವಿಭಾಗ ಮತ್ತು  ಮಾನ್ಯ ಶ್ರೀ ಮಾಹಾನಿಂಗಪ್ಪ ನಂದಗಾಂವಿ ಡಿ.ಎಸ್‌.ಪಿ.( ಎ ) ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ  ಶ್ರೀ ಬಾಸು ಚವ್ಹಾಣ ಸಿ.ಪಿ.ಐ ಆಳಂದ , ಶ್ರೀ ಸಂತೋಷ ರಾಠೋಡ  ಪಿ.ಎಸ್.ಐ ನಿಂಬರ್ಗಾ, ಶ್ರೀ ಮಾಹದೇವ ಪಂಚಮುಖಿ ಪಿ.ಎಸ್‌.ಐ ಆಳಂದ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಮಹ್ಮದ ಇಸ್ಮಾಯಿಲ್ ಹೆಚ್‌.ಸಿ. 75., ಸಿರಾಜೊದ್ದಿನ ಪಟೇಲ ಹೆಚ್.ಸಿ. 138, ಭದ್ರಪ್ಪ ಹೆಚ್.ಸಿ. 295, ಅಂಬಾರಾಯ ಪಿ.ಸಿ. 395  ಚಂದ್ರಶೇಖರ ಪಿ.ಸಿ 670 , ,ಸೈಬಣ್ಣಾ ಪಿ.ಸಿ. 835, ಶ್ರೀಶೈಲ ಪಿ.ಸಿ. 362 , ಕಲ್ಯಾಣಿ  ಪಿ.ಸಿ. 265, ದಶರಥ ಎಪಿಸಿ 23, ಗುರುರಾಜ ಪಿ.ಸಿ. 1087, ರವರ ತಂಡವು  ಆರೋಪಿ ಚಿನ್ನು @ ಚಿನ್ನಪ್ಪ ತಂದೆ ಮುಗಲಪ್ಪ ಕಲ್ಲೆಮೂಡ ಸಾ: ವಡ್ಡರ ಕಾಲೂನಿ ಮೈಲೂರ ರೋಡ ಬೀದರ ಇತನಿಗೆ ಹಿಡಿದು ಆರೋಪಿಯಿಂದ ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿ ಬೆಳ್ಳಿಯ ಮೂರ್ತಿಗಳು ಮತ್ತು ಗುಲಬರ್ಗಾ ಪಟ್ಟಣದ ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ  ಹಾಗೂ ಬೀದರ ಜಿಲ್ಲೆಯ ಮಂಠಾಳ ಗ್ರಾಮದ ಚೌಕಿ ಮಠದ ಗುರುಲಿಂಗೇಶ್ವರ ದೇವರ ಬೆಳ್ಳಿಯ ಕಿರೀಟ ಹೀಗೆ ಒಟ್ಟು 20 ಕೆ.ಜಿ ಯಷ್ಟು ಬೆಳ್ಳಿಯ ವಸ್ತುಗಳು ಇವುಗಳ ಒಟ್ಟು ಕಿಮ್ಮತ್ತು ಸುಮಾರು 7,00,000 /- ರೂ. ಬೆಲೆಯ  ಬಾಳುವ  ಮಾಲನ್ನು ಜಪ್ತಿ ಪಡಿಸಿಕೊಂಡು ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯಮಾಡಿಕೊಳ್ಳುವಂತೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಅರ್ಜುನ ತಂದೆ ಶರಣಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ ಇವರ ಮಗಳಾದ ಶರಣಮ್ಮಾ ಇವಳು ಮಹಾಗಾಂವ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಈಗ ಸುಮಾರು 6 ತಿಂಗಳಿಂದ ನಮ್ಮ ಓಣಿಯ ರಾಹುಲ ತಂದೆ ಬಾಬುರಾವ ಜನವಾಡ ಈತನು ನನ್ನ ಮಗಳಾದ ಶರಣಮ್ಮ ಇವಳು ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮರಳಿ ಮನೆಗೆ ಬರುವಾಗ ಅವಳಿಗೆ ಹಿಂಬಾಲಿಸುವುದು, ಚುಡಾಯಿಸುವುದು. ಮಾಡುತ್ತಾ ಬಂದು ನಿನ್ನೆ ದಿನಾಂಕ: 26-07-2015 ರಂದು ಮಧ್ಯಾಹ್ನ ರಾಹುಲ ಈತನು ನನ್ನ ಮಗಳು ಮನೆಯಲ್ಲಿ ಒಬ್ಬಳೇ ಇರುವದನ್ನು ನೋಡಿ, ಮನೆಗೆ ಹೋಗಿ ಅವಳ ಹೆಸರಿನಿಂದ ಕೂಗುವುದು ಮತ್ತು ಬಾಗಿಲು ಬಡಿಯುವುದು ಇತ್ಯಾದಿ ಮಾಡಿದ್ದರಿಂದ ನಮ್ಮ ಓಣಿಯವರು ಇದನ್ನು ನೋಡಿದ್ದರಿಂದ ಶರಣಮ್ಮಾ ಇವಳು ತನಗೆ ಓಣಿಯವರ ಮುಂದೆ ಆದ ಅವಮಾನವನ್ನು ನೊಂದುಕೊಂಡು ಮತ್ತು ರಾಹುಲ ಈತನು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಮನೆಯಲ್ಲಿ ಸಮೀಪದಲ್ಲಿರುವ ಅಕ್ಕ ಮಹಾದೇವಿ ಹಳ್ಳದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ. ಆಕೆಯ ಸಾವಿಗೆ ರಾಹುಲ ಈತನು ನೀಡಿದ ಕಿರುಕುಳವೇ ಕಾರಣ ಆದ್ದರಿಂದ ಸದರಿ ರಾಹುಲ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೊಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಆಳಂದ ಠಾಣೆ : ದಿನಾಂಕ 26/07/2015 ರಂದು ಆಳಂದ-ತೆಲೆಕುಣಿ ರೋಡಿನ ಚಡಾವದಲ್ಲಿ ಗುಲಾಮ ಮುಲ್ಲಾರವರ ಹೊಲದಲ್ಲಿ ಇದ್ದ ದರ್ಗಾದ ಸಮೀಪ ರೋಡಿನ ಮೇಲೆ ಯಾರೋ ಕೆಲವು ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳದಿಂದ ದೂರದಲ್ಲಿ ಜೀಪ್‌ ನಿಲ್ಲಿಸಿ ಸಾವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ರೋಡಿಗೆ ಎರಡು ಮೋಟರ ಸೈಕಲ ಅಡ್ಡ ನಿಲ್ಲಿಸಿ ಇಬ್ಬರು ರೋಡಿನ ಎರಡು ಬದಿಗೆ ಹಗ್ಗ  ಹಿಡಿದು ನಿಂತಿದ್ದು ಇಬ್ಬರು ರೋಡಿನ ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ ರಾಡುಗಳನ್ನು ಹಿಡಿದುಕೊಂಡಿದ್ದು ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ ವಾಹನಗಳಿಗೆ ತಡೆದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 1) ಉಮೇಶ ತಂದೆ ದತ್ತು ಪವಾರ ಸಾ: ದರ್ಗಾಶಿರೂರ 2) ರಾಮು ತಂದೆ ದಾದು ಕಾಳೆ ಸಾ: ರಾಜವಾಳ 3) ಸೋಮನಾಥ ತಂದೆ ಬಗ್ಗು ಚವ್ಹಾಣ ಸಾ: ಕಮಸೂರ ನಾಯಕ ತಾಂಡಾ  4) ಬೈರು ತಂದೆ ಕಲ್ಲು ಪವಾರ ಸಾ: ದರ್ಗಾ ಶಿರೂರ  5) ಕಲ್ಯಾಣಿ ತಂದೆ ಸಾಲು ಪವಾರ ಸಾ: ದರ್ಗಾ ಶಿರೂರ 6) ಜಗನಾಥ ತಂದೆ ರತನು ಪವಾರ ಸಾ: ಕಮಸೂರ ನಾಯಕ ತಾಂಡ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ದರೊಡೆ ಮಾಡಲು ಬಳಸಲು ತಂದಿದ್ದ ಬಜಾಜ ಪ್ಲಾಟಿನಮ್‌ ಮೋ.ಸೈಕಲ: ನಂ ಕೆಎ 32 ಯ 6916 ಮತ್ತು  ಡಿಸ್ಕೋವರಿ ರೆಡ್‌ & ಸಿಲ್ವರ್‌ ಕಲರ್‌ ಮೋ.ಸೈಕಲ ನಂಬರ ಕೆಎ 32 ಇಇ 4668 ಮೊಟಾರ ಸೈಕಲ್ಗಳನ್ನು ಮತ್ತು ಕಬ್ಬಿಣದ ರಾಡಗಳು, ಕಾರದ  ಪುಡಿ, ನೂಲಿನ ಹಗ್ಗ ಮತ್ತು ಕಲ್ಲುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಳಂದ ಠಾಣೆ : ದಿನಾಂಕ 26-07-2015 ರಂದು ಆಳಂದ-ಖಜೂರಿ ರೋಡಿನ ಚಿತಲಿ ಚೆಡೌನ ಹತ್ತಿರ ಇರುವ ವಿಶ್ವನಾಥ ಜಾದವ ಸಾ:ಚಿತಲಿ ಇವರ ಲಿಂಬಿ ತೋಟದ ಹೊಲಕ್ಕೆ ಹತ್ತಿಕೊಂಡಿದ್ದ ರೋಡಿಗೆ ಯಾರೋ ಕೆಲವು ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳದಿಂದ 100 ಪೀಟ ದೂರದಲ್ಲಿ ಜೀಪ್‌ ನಿಲ್ಲಿಸಿ ಸವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ರೋಡಿಗೆ ಒಂದು ಜೀಪ ಹಾಗು ಒಂದು ಮೋಟರ ಸೈಕಲ ಅಡ್ಡ ನಿಲ್ಲಿಸಿ ಇಬ್ಬರು ರೋಡಿನ ಎರಡು ಬದಿಗೆ ಹಗ್ಗ  ಹಿಡಿದು ನಿಂತಿದ್ದು ಇಬ್ಬರು ರೋಡಿನ ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ ರಾಡುಗಳನ್ನು ಹಿಡಿದುಕೊಂಡಿದ್ದು ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ ವಾಹನಗಳಿಗೆ ತಡೆದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳೀ ಮಾಡಿ  1) ಬಾಹಾದ್ದೂರ ತಂದೆ ಗೌನು ಕಾಳೆ ಸಾ: ಶೆಕಾಪೂರ 2) ಅಂತ್ಯಾ ತಂದೆ ಗೊವಿಂದ ಚವ್ಹಾಣ ಸಾ: ಮೋಘಾ (ಬಿ) 3) ನರಸಿಂಗ ತಂದೆ ಹರಿಶ್ಚಂದ್ರ ಪವಾರ ಸಾ; ಶೆಕಾಪೂರ 4) ಬೆಸ್ಯಾ ತಂದೆ ಸುನೀಲ ಪವಾರ ಸಾ: ಶೆಕಾಪೂರ ಇತನ ಕೈಯಲ್ಲಿ 5) ಸುರೇಶ ತಂದೆ ಪದ್ಮು ಕಾಳೆ ಸಾ: ರಾಜೋಳ  6) ಬಿಕ್ಕು ತಂದೆ ರಘುನಾಥ ಪವಾರ ಸಾ: ಶೆಕಾಪೂರ ರವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರು ದರೋಡೆ ಮಾಡಲು ಬಂದಿದ್ದ ಬಗ್ಗೆ ತಿಳಿಸಿದ್ದರಿಂದ ಕೃತ್ಯಕ್ಕೆ ಬಳಸಿದ  ಮಹೇಂದ್ರ ಕಂಪನಿಯ ಜೀಪ ನಂ ಎಮ್‌ಎಚ್‌ 24 ಸಿ 1463 ಮತ್ತು  ಹಿರೋ ಸ್ಲೆಂಡರ್‌ ಮೋ.ಸೈಕಲ ನಂಬರ ಕೆಎ 32 ಇಜಿ 5424 ಸದರಿಯವರಿಂದ ಒಂದು 3 ಪೀಟ ಉದ್ದದ ಎರಡು ರಾಡು, ಹಿಡಿ ಗಾತ್ರದ ಕಲ್ಲು ಒಂದು ನೂಲಿನ ಹಗ್ಗ ಅಂದಾಜು 40 ಪೀಟ ಉದ್ದವುಳ್ಳದ್ದು, 250 ಗ್ರಾಂದಷ್ಟು ಖಾರದ ಪುಡಿ ವಶಪಡಿಸಿಕೊಂಡು ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

26 July 2015

Kalaburagi District Press Note

ಪತ್ರಿಕಾ ಪ್ರಕಟಣೆ
       ದಿನಾಂಕ 28-07-2015 ರಂದು ಕಲಬುರಗಿ ನಗರಕ್ಕೆ ಗಣ್ಯಾತೀಗಣ್ಯರು ಆಗಮಿಸುತ್ತಲಿದ್ದು ಅವರ ಸುರಕ್ಷತೆಯ ಹಿತ ದೃಷ್ಠಿಯಿಂದ ಕಲಬುರಗಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಕಂಡ ಮಾರ್ಗಗಳನ್ನು ಬದಲಾಯಿಸಲಾಗಿರುತ್ತದೆ.    
      ಕಲಬುರಗಿ ಮಹಾ ನಗರ ಸಾರ್ವಜನಕರಲ್ಲಿ ಕೋರುವದೇನೆಂದರೆ ದಿನಾಂಕ: 28-07-2015 ರಂದು ಕಲಬುರಗಿ ನಗರಕ್ಕೆ ಗಣ್ಯಾತೀಗಣ್ಯರು  ಆಗಮಸುತ್ತಲಿದ್ದು ಅವರ ಸುರಕ್ಷತೆ ಹಿತದೃಷ್ಠಿಯಿಂದ ನಗರದ ಈ ಕೆಳಕಂಡ ಮಾರ್ಗಗಳಲ್ಲಿನ ಸಂಚಾರವನ್ನು ಬದಲಾಯಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿರುತ್ತದೆ.
      ಸಾರ್ವಜನಿಕರು ಈ ಕೆಳಕಂಡ ಮಾರ್ಗಗಳಲ್ಲಿ ದಿನಾಂಕ 27-07-2015 ರಂದು ಬೆಳಗ್ಗೆ 10 ಗಂಟೆಯಿಂದ 12-30 ಗಂಟೆಯವರೆಗೆ ಮತ್ತು ದಿನಾಂಕ 28-07-2015 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟಯವರೆಗೆ  ಸಂಚರಿಸಿ ಪೊಲೀಸ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.
1. ಹಳೆ ಎಸ್.ಪಿ. ಆಫೀಸ  ಮಾರ್ಗದಿಂದ ಸರಕಾರಿ ಆಸ್ಪತ್ರೆ ಕ್ರಾಸ ಮಾರ್ಗದಲ್ಲಿ ಸಂಚರಿಸುವವರು ಹಳೆ ಎಸ್.ಪಿ. ಆಫಿಸ, ಕುಳಗೇರಿ ಕ್ರಾಸ  ಬಿಗ್ ಬಜಾರ ಮುಖಾಂತರವಾಗಿ  ಸಂಚರಿಸುವದು  
2.  ಸರಕಾರಿ ಆಸ್ಪತ್ರೆಯ ಕ್ರಾಸ್ ದಿಂದ ಆರ್.ಟಿ.ಓ ಕ್ರಾಸ್ ದಿಂದ ರಾಜಾಪೂರ ಕಡೆಗೆ ಹೋಗುವವರು  ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಪಕ್ಕದಲ್ಲಿರುವ ಮಾರ್ಗದ ಮುಖಾಂತರವಾಗಿ ಸಂಚರಿಸಿ ರಾಜಾಪೂರ ಮತ್ತು ಶಹಾಬಾದಗಳ ಕಡೆಗೆ ಹೋಗಲು ಸೂಚಿಸಿದೆ. 
3.  ಸೇಡಂ, ಚಿತ್ತಾಪೂರ, ಮಳಖೇಡ ಕಡೆ ಸಂಚರಿಸುವ ವಾಹನಗಳು ಸಂತ್ರಾಸ ವಾಡಿ  ಎಮ್.ಜಿ. ರೋಡ, ರಿಂಗ ರೋಡ ಹಾಗರಗಾ ಕ್ರಾಸ್ ಮುಖಾಂತರವಾಗಿ ಸಂಚರಿಸಲು ಸೂಚಿಸಿದೆ.
4.  ಗುಬ್ಬಿ ಕಾಲೋನಿ,  ಆದರ್ಶ ನಗರ , ಬಡೆಪೂರ, ಸುಂದರ ನಗರ, ಭರತ ನಗರ ತಾಂಡಾ ನಿವಾಸಿಗಳು ಎಮ್.ಜಿ. ರೋಡ  ಮತ್ತು ದರ್ಗಾ ರೋಡ ಮುಖಾಂತರವಾಗಿ ಸಂಚರಿಸುವದು.
5.  ಜಯ ನಗರ , ಓಕಳಿ ಕ್ಯಾಂಪ್, ಭಾಗ್ಯ ನಗರ, ಪೂಜಾ ಕಾಲೋನಿ ಕುಸನೂರ ರಾಜಾಪೂರ ಮತ್ತು  ಕ್ರೀಡಾಂಗಣದ ಪಕ್ಕದಲ್ಲಿರುವ ರೋಡ ಮುಖಾಂತರವಾಗಿ ನಗರದೊಳಗೆ ಸಂಚರಿಸುವದು.

 ಬದಲಾಯಿಸಿದ ಮಾರ್ಗಗಳು ತುರ್ತುವಾಹನಗಳಾದ ಅಗ್ನಿ ಶಾಮಕ ಮತ್ತು ಅಂಬುಲೇನ್ಸಗಳಿಗೆ ಹೊರತು 

 ಪಡಿಸಿ ಇರುತ್ತದೆ

Kalaburagi District Reported Crimes

ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮಾಹಾದೇವಯ್ಯ ತಂದೆ ಶಿವಯ್ಯ ಮಠಪತಿ ಇವರು ತಮ್ಮ ಅಧಿಕಾರದ ಅವದಿಯಲ್ಲಿ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಕಾಣಿಯಾಗಿ ಕೊಟ್ಟ 15 ಕೆಜಿ ಚಿನ್ನವನ್ನು ಹಾಗೂ 21 ಕೆಜಿ ಬೆಳ್ಳಿಯನ್ನು ಕಳ್ಳತನದಿಂದ ತಗೆದುಕೊಂಡು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ಭಾಗ್ಯವಂತಿ ದೇವಸ್ಥಾನಕ್ಕೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೂ ಮತ್ತು ಸರ್ಕಾರಕ್ಕು ಮೋಸ ಮಾಡಿದ್ದಾರೆ ಎಂದು ಘತ್ತರಗಾ ಗ್ರಾಮದ 1) ಸಿದ್ದನಗೌಡ ತಂದೆ ಗೆಡ್ಡಪ್ಪಗೌಡ ಪಾಟೀಲ  2) ಸಿದ್ದಪ್ಪ ತಂದೆ ದುಂಡಪ್ಪ ಗುಡೇದ 3) ದಿಲೀಪ ತಂದೆ ದತ್ತಾತ್ರೇಯ ರಾವ ಕುಲಕರ್ಣಿ 4) ಬಸವರಾಜ ತಂದೆ ಪ್ರಭು ಅಮ್ಮಣ್ಣಿ 5) ಚಂದ್ರಕಾಂತ ತಂದೆ ಮಲ್ಲೇಶಪ್ಪ ಬೇಲೂರ 6) ಲಕ್ಕಪ್ಪ ತಂದೆ ಮೌಲಾಲಿ ನಿಂಬರ್ಗಿ 7) ಚಂದಪ್ಪ ತಂದೆ ಶೆಟ್ಟೆಪ್ಪ ಬಟ್ಟರ್ಕಿ 8) ಶಿವಕಾಂತ ತಂದೆ ಭೀಮಶಾ ಸಿಂಗೆ 9) ಚಂದ್ರಕಾಂತ ತಂದೆ ಕಲ್ಲಪ್ಪ ನಾವಡಗಿ 10) ನಾರಾಯಣರಾವ ತಂದೆ ವೇಂಕಟರಾವ ಕುಲಕರ್ಣಿ ಇವರುಗಳು ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ, ಅದರಂತೆ ಮಾನ್ಯ ನ್ಯಾಯಾಲಯವು ಯಾವುದೆ ದಾಖಲಾತಿಗಳು ಲಬ್ಯವಿಲ್ಲದ ಕಾರಣ ಸದರಿ ನಡೆದ ಅವ್ಯವ್ಯೆಹಾರದ ಬಗ್ಗೆ ಇಲಾಖೆ ವಿಚಾರಣೆಯನ್ನು ಮಾಡಿ ವರದಿ ಕೊಡುವಂತೆ ಆದೇಶಿಸಿದ ಮೇರೆಗೆ, ದಾರ್ಮಿಕ ದತ್ತಿ ಇಲಾಖೆ ಸದರಿ ಅವ್ಯವಹಾರದ ಬಗ್ಗೆ ವಿಚಾರಣೆಯನ್ನು ಕೈಕೊಂಡು ದಿನಾಂಕ 15-06-2013 ರಂದು ಈ ಹಿಂದೆ ಇದ್ದ ಸದರಿ ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ ಗ್ರಾಮ ಲೆಕ್ಕಿಗ ಮತ್ತು ಕಾರ್ಯದರ್ಶಿ ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ಇವರ ಮೇಲೆ ಕ್ರಮೀನಲ್ ಮೋಕದ್ದಮೆ ದಾಖಲಿಸುವಂತೆ ಹಾಗೂ ಸದರಿ ಅವದಿಯಲ್ಲಿ ಕರ್ತವ್ಯ ನಿರ್ವಹಿಸಿದ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ವಿಚಾರಣೆಗೆ ಒಳಪಡಿಸಬೇಕು ಅಂತಾ ಘೋಷಿಸಿರುತ್ತಾರೆ. ಅದರಂತೆ ಸದರಿ ಆದೇಶದ ಮೇಲಿಂದ ಸದರಿ ಅವ್ಯವಹಾರದ ವಿಷಯವಾಗಿ ನಮ್ಮ ಇಲಾಖೆ ಸರ್ಕಾರದೊಂದಿಗೆ ಹಾಗೂ ಸಂಭಂದಪಟ್ಟ ಇಲಾಖೆಯವರೊಂದಿಗೆ ಪತ್ರ ವ್ಯವಹಾರ ಮಾಡಿ ಸೂಕ್ತ ಕ್ರಮ ಕೈಕೊಳ್ಳಲು ಪ್ರಕರಣ ದಾಖಲಿಸಲು ತಡವಾಗಿರುತ್ತದೆ. ಅದರಂತೆ ಇಂದು ದಿನಾಂಕ 25-07-2015 ರಂದು ನಮ್ಮ ಮೇಲಾದಿಕಾರಿಗಳು ನನಗೆ ಸದರಿ ನಡೆದ ಅವ್ಯವಹಾರದ ಬಗ್ಗೆ ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ ಗ್ರಾಮ ಲೆಕ್ಕಿಗ ಮತ್ತು ಕಾರ್ಯದರ್ಶಿ ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ಇವರ ಮೇಲೆ ಕ್ರೀಮಿನಲ್ ಮೋಕದ್ದಮೆ ದಾಖಲಿಸಲು ಆದೇಶಿಸಿದ ಮೇರೆಗೆ ನಾನು ಇಂದು  ಠಾಣೆಗೆ ಬಂದಿರುತ್ತೆನೆ. ಸದರಿ ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ ಇವರು ದಿನಾಂಕ 17-09-2001 ರಿಂದ ದಿನಾಂಕ 21-06-2007 ರವರೆಗೆ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ, ದೇವಸ್ಥಾನದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಸದರಿಯವರು ತಮ್ಮ ಅದಿಕಾರದ ಅವದಿಯಲ್ಲಿ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಕಾಣಿಕೆಯಾಗಿ ಕೊಟ್ಟ 15 ಕೆಜಿ ಚಿನ್ನ ( ಈ ಹಿಂದೆ ಇದ್ದ ಅಂದಾಜು ಕಿಮ್ಮತ್ತು 75,00,000/- ರೂ) ಹಾಗೂ 21 ಕೆಜಿ ಬೆಳ್ಳಿ (ಈ ಹಿಂದೆ ಇದ್ದ ಅಂದಾಜು ಕಿಮ್ಮತ್ತು 1,47,000/- ರೂ) ಯನ್ನು ಕಳ್ಳತನದಿಂದ ತಗೆದುಕೊಂಡು ಹೋಗಿ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು ಹಾಗೂ ಅದಕ್ಕೆ ಸಂಬಂದಪಟ್ಟ ದಾಖಲೆಗಳನ್ನು ತಗೆಂದುಕೊಂಡು ಹೋಗಿ ತಮ್ಮ ಅದಿಕಾರ ದುರುಪಯೋಗ ಮಾಡಿಕೊಂಡಿದ್ದು ಇಲಾಖಾ ವಿಚಾರಣೆಯಿಂದ ದೃಡ ಪಟ್ಟಿರುತ್ತದೆ ಸದರಿ ಮಾಹಾದೇವಯ್ಯ ಇವರು ಒಟ್ಟು 76,47,000/- ರೂ ಕಿಮ್ಮತ್ತಿನ ಚಿನ್ನ ಮತ್ತು ಬೆಳ್ಳಿಯನ್ನು ತಮ್ಮ ಸ್ವಂತಕ್ಕೆ ತಗೆದುಕೊಂಡು ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೂ ಹಾಗೂ ದಾರ್ಮಿಕ ದತ್ತಿ ಇಲಾಖೆಗೂ ಮತ್ತು ಸರ್ಕಾರಕ್ಕು ಮೋಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.07.2015 ರಂದು ಸಾಯಂಕಾಲ 05:15 ಗಂಟೆಗೆ ಜೇವರಗಿ ಶಹಾಪುರ ಮೇನ್‌ ರೊಡ ಅವರಾದ್ ಕ್ರಾಸ್ ಹತ್ತಿರ ಶಹಾಪುರ ಕಡೆಗೆ ಕೆ.ಎಸ್.ಆರ್.ಟಿ.ಸಿ  ಬಸ್ ನಂ ಕೆ.ಎ33ಎಫ್0295 ನೇದ್ದನ್ನು ನಮ್ಮ ಚಾಲಕನು ನಡೆಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಟಿಪ್ಪರ್ ನಂ ಕೆ.ಎ51ಬಿ1252 ನೇದ್ದರ ಚಾಲಕನು ತನ್ನ ಟಿಪ್ಪರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಬಸ್‌ ಗೆ ಡಿಕ್ಕಿ ಪಡಿಸಿ ಹಾನಿ ಮಾಡಿ ತನ್ನ ಟಿಪ್ಪರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಪರಸಪ್ಪ ತಂದೆ ನರಸಪ್ಪ ಹಜಾರೆ ಸಾ|| ಹಂದಗಿನುರ ತಾ|| ಸಿಂದಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕನ ಮೇಲ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 27-07-2015 ರಂದು ಬೆಳಗ್ಗೆ  6 ಗಂಟೆಗೆ ತಾನು ಮತ್ತು ತನ್ನ  ಅತ್ತೆಯಾದ ಹಮೀದಾ ಇಬ್ಬರು ತನ್ನ ಮಾವ ಹೊಲ ಮಾಡಿದ ಹೊಲದಲ್ಲಿಯ ಉರುವಲು ಕಟ್ಟಿಗೆ ತರಲು ಹೊದಾಗ ಶ್ರೀಶೈಲ ತಂದೆ ದುಂಡಪ್ಪ ಹಲಕಾನವರ ಸಾ : ಕೊಣಶೀರಸಗಿ ಗ್ರಾಮ ತಾ: ಜೇವರ್ಗಿ ಇವನು ನೊಂದ ಬಾಲಕನಿಗೆ ಬಾಯಿ ಒತ್ತಿ ಹಿಡಿದು ಬಾವಿಯಲ್ಲಿ ಒಯ್ದು ಜಭರಿ ಗುದ ಸಂಭೋಗ ಮಾಡಲು ಪ್ರಯತ್ನಿಸುತ್ತಿದ್ದಾಗ ತಾನು ನಿರಾಕರಿಸಿದಾಗ ಆರೋಪಿತನು ಹೊಡೆದು ಜೀವದ ಬೆದರಿಕೆ ಹಾಕಿ ಜಭರಿ ಗುದ ಸಂಬೋಗ ಮಾಡುತ್ತಿದ್ದಾಗ ಬಾಲಕನ ಅತ್ತೆ ಹಮೀದಾ ಬರುತ್ತಿದ್ದಂತೆ ಆರೋಪಿತನು ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ