POLICE BHAVAN KALABURAGI

POLICE BHAVAN KALABURAGI

02 May 2014

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 01.05.2014 ರಂದು ಶ್ರೀ ಅಪ್ಪಾಸಾಬ ತಂದೆ ಮಲ್ಲಿಕಾರ್ಜುನ ಹುಗ್ಗಿ ಸಾ: ಹಳೆ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ 30.04.14 ರಂದು ರಾತ್ರಿ 9.30 ಪಿ.ಎಮ್.ಕ್ಕೆ ನಾನು ಅಡತಿ ಮುಚ್ಚಿಕೊಂಡು ಮನೆಗೆ ಹೋಗಿದ್ದು. ದಿ:01.05.2014 ರಂದು ಬೆಳಿಗ್ಗೆ 8.30 ಎ.ಎಮ್.ಸುಮಾರಿಗೆ ನನ್ನ ಅಡತಿಗೆ ಬೆಂಕಿಹತ್ತಿ ಕಡಲೆತೊಗರಿಯಚೀಲಗಳು & ಖಾಲಿ ಚೀಲಗಳು ಸುಟ್ಟಿದ್ದು. ಈ ಬಗ್ಗೆ ಚಿತ್ತಾಪೂರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಿ.  ಬೆಂಕಿ ಹತ್ತಿದ್ದರಿಂದ ಅಡತಿಯಲ್ಲಿದ್ದ 3000/- ಬೆಲೆಯ ಖಾಲಿ ಚೀಲಗಳು,  2) ಕಡಲಕೆ ಕಾಳು ತುಂಬಿದ್ದ  20 ಚೀಲಗಳು, 3) ತೊಗರೆ ತುಂಬಿದ ಚೀಲಗಳು ಹಾಗು ಅಡಿಯಲ್ಲಿದ್ದ 2008 ರಿಂದ 2013 ನೇ ಸಾಲಿನ ಅಡತಿಯ & ನನ್ನ ಹೆಸರಿನಲ್ಲಿದ್ದ ಅಣವೀಭದ್ರೇಶ್ವರ ದಾಲಮಿಲ್ ಹಾಗೂ ಶ್ರೀ ವಿಶ್ವನಾಥ ದಾಲ ಮಿಲ್ ದಾಖಲಾತಿಗಳು ಸುಟ್ಟಿದ್ದು.  ಒಟ್ಟು ಅ.ಕಿ. 3,90,000/-ರೂ ಸುಟ್ಟು ಲುಕ್ಸಾನ ಆಗಿರುತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ : ಶ್ರೀ ಅನೀಲಕುಮಾರ ತಂದೆ ಮಹಾರುದ್ರಪ್ಪ ನಿಗ್ಗಡುಗಿ ಸಾ|| ಭೀಮನಾಳ ರವರು ಠಾಣೆಗೆ ಹಾಜರಾಗಿ ದಿನಾಂಕ 01-05-2014 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ತಮ್ಮ ಸೋದರ ಮಾವ ಹಣಮಂತರಾಯ ತಂದೆ ಶಿವಶರಣಪ್ಪ ಬಿರಾದಾರ ಮತ್ತು ಮೌನೇಶ್ವರ ತಂದೆ ಅಣ್ಣೇಪ್ಪ ಚೆಂದಿ ಇವರಿಬ್ಬರಿಗೆ ನಾವದಗಿ ಗ್ರಾಮದ ಹತ್ತೀರ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾವದಗಿ ಗ್ರಾಮಕ್ಕೆ ಹೋಗಿ ನೋಡಲಾಗಿ ಹಣಮಂತರಾಯ ಬಿರಾದಾರರಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ಮತ್ತು ಬಲಕಿವಿಯಿಂದ ರಕ್ತ ಸೋರಿ ಮೃತ ಪಟ್ಟಿದ್ದು , ಮೌನೇಶ್ವರ ಚೆಂದಿ ಈತನಿಗೆ ತಲೆಗೆ ರಕ್ತಗಾಯ ಮತ್ತು ಭಾರಿ ಗುಪ್ತ ಗಾಯವಾಗಿ ಎಡ ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿ ಮೃತ ಪಟ್ಟಿದ್ದು , ಲ್ಲಿದ ಸಾರ್ವಜನಿಕರಿಗೆ ವಿಚಾರಿಸಲಾಗಿ ಮೌನೇಶ್ವರನು ಹಿರೋ ಮೇಲೆ ಹಣಮಂತರಾಯನಿಗೆ ಹಿಂದೆ ಕೂಡಿಸಿಕೊಂಡು ಗುಲ್ಬರ್ಗಾ ಕಡೆಯಿಂದ ಕಮಲಾಪೂರ ಕಡೆಗೆ ಹೋಗುತ್ತಿರುವಾಗ ಹುಮ್ನಾಬಾದ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಟವೇರಾ ನಂ: ಕೆಎ-25-ಎನ್-5919 ನೇದ್ದರ ಚಾಲಕನು ಅತಿ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಬಂದು ಮೌನೇಶ್ವರ ನಡೆಸುತ್ತಿದ್ದ ಮೊ.ಸೈ,ಗೆ ಅಪಘಾತಪಡಿಸಿದ್ದರಿಂದ ಮೌನೇಶ್ವರ ಮತ್ತು ಹಣಮಂತರಾಯ ಇಬ್ಬರೂ ರೋಡಿನ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಸತ್ತಿರುತ್ತಾರೆ ಅಂತಾ ತಿಳಿಸಿದ್ದು. ಅಪಘಾತಪಡಿಸಿದ ನಂತರ ತವೇರಾ ಚಾಲಕ ಗಾಡಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದು. ಟವೇರಾ ಕಾರ್ ಕೆಎ-25-ಎನ್-5919 ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.