POLICE BHAVAN KALABURAGI

POLICE BHAVAN KALABURAGI

08 April 2019

KALABURAGI DISTRICT REPORTED CRIMES

ಅಪಹರಣ ಪ್ರಕರಣ ;
ಗ್ರಾಮೀಣ ಠಾಣೆ : ದಿನಾಂಕ 04/04/2019 ರಂದು ಬೆಳಿಗ್ಗೆ 08-00 ಗಂಟೆಗೆ ಶ್ರೀ ರೇವಣಸಿದ್ದಪ್ಪ ತಂದೆ ಮಾಧುರಾಯ ಕೋಟಿ ಸಾ : ಅಷ್ಟಗಾ ತಾ : ಜಿ : ಗುಲಬರ್ಗಾ ರವರ  ಮಗ ಮಹೇಶ ಇತನು ನಮ್ಮ ಅಣ್ಣನ ಮನೆಯಾದ ಕಲಬುರಗಿ ನಗರದ ಕಾಟನ ಮಾರ್ಕೆಟದಿಂದ ಎಸ್.ಎಸ್.ಎಲ್.ಸಿ. ಕೊನೆ ಪೇಪರಾದ ಹಿಂದಿ ಪೇಪರ ಬರೆಯಲು ಭೀಮಳ್ಳಿ ಶಾಲೆಗೆ ಹೋಗಿದ್ದು. ಸಂಜೆ 05-00 ಗಂಟೆಯಾದರೂ ನನ್ನ ಮಗ ಮಹೇಶ ಮರಳಿ ಮನೆಗೆ ಬರದ ಕಾರಣ ನಮ್ಮ ಅಣ್ಣ ಬಸಲಿಂಗಪ್ಪ ಇವರು ನನಗೆ ಪೋನ ಮಾಡಿ ಮಹೇಶ ಅಷ್ಟಗಾಕ್ಕೆ ಬಂದಿರುತ್ತಾನೆ ಹೇಗೆ ಎಂದು ವಿಚಾರಿಸಲೂ ಬಂದಿರುವುದಿಲ್ಲಾ ಅಂತಾ ತಿಳಿಸಿದಾಗ ಗಾಬರಿಗೊಂಡು ನಾನು ಮತ್ತು ನಮ್ಮ ಅಣ್ಣ  ಬಸಲಿಂಗಪ್ಪ ಇಬ್ಬರು ಭೀಮಳ್ಳಿ ಗ್ರಾಮಕ್ಕೆ ಹೋಗಿ ಊರಲ್ಲಿ ಮತ್ತು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಲೂ ಅವನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲಾ. ಮರುದಿನ  05/04/2019 ರಂದು ಮತ್ತೆ ಭೀಮಳ್ಳಿ  ಶಾಲೆಗೆ ಹೋಗಿ ಮುಖ್ಯೋಪಾಧ್ಯಯರನ್ನು ಭೇಟ್ಟಿಯಾಗಿ ನನ್ನ ಮಗನ ಬಗ್ಗೆ ವಿಚಾರಿಸಲೂ ಅವರು ನನ್ನ ಮಗ ಮಹೇಶ ದಿನಾಂಕ 04/04/19 ರಂದು 12-30  ಪಿಎಂ ವರೆಗೆ  ಪೇಪರ ಬರೆದಿರುತ್ತಾನೆ ಎಂದು ತಿಳಿಸಿದರು. ತದನಂತರ ನನ್ನ ಮಗನಿಗೆ ನಾನು ಮತ್ತು ಅಣ್ಣ ಬಸಲಿಂಗಪ್ಪ ಇಬ್ಬರು ಕಲಬುರಗಿ ನಗರದಲ್ಲಿ  ಮತ್ತು ನಮ್ಮ ಸಂಬಂಧಿಕರ ಊರಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ನರೋಣಾ ಠಾಣೆ : ಶ್ರೀ ತಿಪ್ಪಮ್ಮಾ ಗಂಡ ಶಿವಶರಣ ಸಲಗರ ಸಾ:ಸೂಲ್ತಾನಪೂರ ತಾ:ಜಿ:ಕಲಬುರಗಿ ರವರ ಮಗಳಾದ ರುಕ್ಮಿಣಿ ಇವಳಿಗೆ ಸುಮಾರು 12 ವರ್ಷಗಳ ಹಿಂದೆ ಧರ್ಮವಾಡಿ ಗ್ರಾಮದ ನನ್ನ ಅಣ್ಣನಾದ ವಿಠಲನ ಮಗನಾದ ರಾಜು ಈತನಿಗೆ ವಿವಾಹಮಾಡಿಕೊಟ್ಟಿರುತ್ತೇವೆ. ಅವರಿಗೆ ಸುಮಾರು 12 ವರ್ಷಗಳು ಆದರು ಇನ್ನು ಮಕ್ಕಳಾಗಿಲ್ಲಾ ಸದರಿ ರುಕ್ಮಿಣಿ ಇವಳಿಗೆ ಮಕ್ಕಳ ಸಂಬಂಧ ಅನೇಕ ಕಡೆಗೆ ದವಾಖಾನೆಗಳಿಗೆ ಹಾಗೂ ದೇವರುಗಳಿಗೆ ತೋರಿಸಿರುತ್ತೇವೆ. ಆದರು ಕೂಡ ಯಾವುದೇ ಪ್ರಯೋಜನೆ ಆಗಿರುವುದಿಲ್ಲಾ. ಹೀಗಾಗಿ ನನ್ನ ಮಗಳು ಈ ವಿಷಯ ಬಹಳ ಮನಸಿಗೆ ಹಚ್ಚಿಕೊಂಡಿದಳು ದಿನಾಂಕ: 07-04-2019 ರಂದು  06 ಎ.ಎಂ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಮಗಳ ಮೈಧುನ ಸಂತೋಷನು ನನ್ನ ಮಗ ಪೀರಪ್ಪನ ಮೊಬೈಲಗೆ ಕರೆಮಾಡಿ ರುಕ್ಮಿಣಿ ಇವಳು ಮನೆಯಲ್ಲಿ ಉರಲು ಹಾಕಿಕೊಂಡು ತೀರಿಕೊಂಡಿರುತ್ತಾಳೆ ಅಂತಾ ಸುದ್ದಿ ತಿಳಿಸಿದ ಮೇರೆಗೆ ನಾನು ನನ್ನ ಮಗ ಪೀರಪ್ಪಾ ಬಾಬು, ಸೊಸೆ ರುಕ್ಕಮ್ಮಾ ಎಲ್ಲರೂ ಒಂದು ಟಂಟಂ ಬಾಡಿಗೆ ಮಾಡಿಕೊಂಡು ಧರ್ಮವಾಡಿ ಗ್ರಾಮಕ್ಕೆ ಬಂದು ನೋಡಲಾಗಿ ರುಕ್ಮಿಣಿ ಇವಳು ತನ್ನ ಮನೆಯ ದೇವರ ಖೊಲಿಯಲ್ಲಿ ಫತ್ರಾದ ಕಬ್ಬಿಣದ ಅಡ್ಡಿಗೆ ಒಂದು ಪಾಲ್ಟರ್ ಸೀರೆಯಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ದಿನಾಂಕ:06/04/2019 ರಂದು ನಮ್ಮೂರಿನಲ್ಲಿ ತೇರಿನ ಕಾರ್ಯಕ್ರಮಕ್ಕೆ ನನ್ನ ಅಳಿಯ ರಾಜು ಈತನು ಬಂದಿದ್ದು ಮನೆಯಲ್ಲಿ ಸಂತೋಷ ಹಾಗೂ ರುಕ್ಮಿಣಿ ಇಬ್ಬರೆ ಇದ್ದರು ಹೀಗಾಗಿ ನಾನು ಸಂತೋಷನಿಗೆ ವಿಚಾರ ಮಾಡಿದಾಗ ದಿನಾಂಕ:06/04/2019 ರಂದು ರಾತ್ರಿ 9-00 ಗಂಟೆಗೆ ಇಬ್ಬರು ಮನೆಯಲ್ಲಿ ಊಟಮಾಡಿ ತಾನು ಮಲಗಿಕೊಳ್ಳಲು ನಮ್ಮ ಖುಲ್ಲಾ ಪ್ಲಾಟಿಗೆ ಹೋಗಿರುತ್ತೇನೆ. ಮರಳಿ ದಿನಾಂಕ:07/04/2019 ರಂದು 0500 ಗಂಟೆಗೆ ಗಳ್ಯಾ ಕೆಲಸಕ್ಕೆ ಹೋಗಲು ಅಂತಾ ಮನೆಗೆ ಬಂದಾಗ ರುಕ್ಮಿಣಿ ಇವಳು ಉರಲು ಹಾಕಿಕೊಂಡಿದ್ದನ್ನು ನೋಡಿ ಚೀರಾಡುತ್ತಾ ಹೊರಗೆ ಬಂದು ಓಣಿಯವರಿಗೆ ವಿಷಯ ತಿಳಿಸಿರುತ್ತೇನೆ ಅಂತ ತಿಳಿಕಸಿರುತ್ತಾನೆ. ನನ್ನ ಮಗಳು ತನಗೆ ಮದುವೆಯಾಗಿ 12 ವರ್ಷ ಆದರೂ ಇನ್ನು ಮಕ್ಕಳು ಆಗಿಲ್ಲಾ ಅಂತಾ ಮನಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಬೇಸತ್ತು ದಿನಾಂಕ:06/04/2019 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:07/04/2019 ರ ಬೆಳಿಗ್ಗೆ 0500 ಮಧ್ಯದ ಅವಧಿಯಲ್ಲಿ ಮನೆಯಲ್ಲಿ ತನ್ನ ಗುತ್ತಿಗೆಗೆ ಸೀರೆಯಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ ನಿಂಗಪ್ಪಾ ತಂದೆ ಅಪ್ಪಾರಾವ ದೇವುಕರ ರವರ ಮಗಳಾದ ಲಕ್ಷ್ಮೀ ಇವಳಿಗೆ 6ವರ್ಷದ ಹಿಂದೆ ಕಡಗಂಚಿ ಗ್ರಾಮದ ಚಂದ್ರಕಾಂತ ಆಲೂರ ಇವರ ಎರಡನೆ ಮಗನಾದ ನಾಗೇಶ ಈತನೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಟ್ಟಿದ್ದು, ಅವರಿಗೆ ಮೇಘನಾ, ಹರ್ಷಾನಂದ, ಹರ್ಷಧಾರೆ ಅಂತಾ ಮಕ್ಕಳಿದ್ದು, ನನ್ನ ಮಗಳು ಮತ್ತು ಅಳಿಯ ಸಂಸಾರದಲ್ಲಿ ಅನ್ಯೊನ್ಯವಾಗಿದ್ದರು, ದಿನಾಂಕ:04/03/2019 ರಂದು ನನ್ನ ಮಗಳು ಲಕ್ಷ್ಮೀ ಇವಳು ತನ್ನ ಗಂಡನ ಮನೆಯಲ್ಲಿ ಸಾಯಂಕಾಲ 7-00 ಗಂಟೆಗೆ ಅಡುಗೆ ಮಾಡುವಾಗ ಸೀಮೆ ಎಣ್ಣೆ ಸ್ಟೋ ಬಸ್ಟಾಗಿ ಮೈಮೇಲಿನ ಬಟ್ಟೆಗೆ ಬೆಂಕಿಹತ್ತಿ ಗಾಯವಾಗಿದ್ದು ಅಂತಾ ನನ್ನ ಮಗನಾದ ಶ್ರೀನಿವಾಸ ಈತನೊಂದಿಗೆ ತಿಳುದುಬಂದ ಮೇರೆಗೆ ನಾನು ಬಸವೇಶ್ವರ ಆಸ್ಪತ್ರೆಗೆ ಬಂದು ನನ್ನ ಮಗಳನ್ನು ವಿಚಾರಿಸಲಾಗಿ ಸದರಿ ಘಟನೆಯು ಆಕಸ್ಮಿಕವಾಗಿ ಅಡುಗೆ ಮಾಡುವಾಗ ಸ್ಟೋ ಬಸ್ಟ್ ಆಗಿದ್ದರಿಂದ ಆಗಿರುತ್ತದೆ ಅಂತಾ ತಿಳಿಸಿದ್ದು ಉಪಚಾರ ಹೊಂದುತ್ತಾ ಇಂದು ದಿನಾಂಕ:07/04/2019 ರಂದು 0100 ಗಂಟೆಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾಳೆ ನನ್ನ ಮಗಳ ಸಾವಿನ ಬಗ್ಗೆ ನನಗೆ ಯಾರ ಮೇಲು ಸಂಶಯ ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.