POLICE BHAVAN KALABURAGI

POLICE BHAVAN KALABURAGI

04 January 2015

KALABURAGI DIST REPORTED CRIMES

ಸ್ಪಂದನ (ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ)  ಕೇಂದ್ರ ಕಲಬುರಗಿ ಉದ್ಘಾಟನೆ : .


       
  ಇಂದು ದಿನಾಂಕ 04-01-2014 ರಂದು ಮಹಿಳಾ ಪೊಲೀಸ ಠಾಣೆ ಕಲಬರುಗಿಯಲ್ಲಿ (ಸ್ಪಂದನ) ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ ಕೇಂದ್ರವನ್ನು ನೂತನವಾಗಿ ಮಾನ್ಯ ಶ್ರೀ ಸುರೇಶ ಮೊಹ್ಮದ ಕುನ್ನಿ   ಪೊಲೀಸ ಮಹಾ ನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು ಉದ್ಘಾಟನೆ ಮಾಡಿರುತ್ತಾರೆ ಹಾಗೂ ಮಾನ್ಯ ಶ್ರೀ ಅಮೀತ ಸಿಂಗ್ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ಹಾಗೂ ಮಾನ್ಯ ಶ್ರೀ ಮಹಾಂತೇಶ ಅಪರ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿರವರು ಮತ್ತು ಶ್ರೀ ಮಹಾನಿಂಗ .ಬಿ. ನಂದಗಾಂವಿ ಪೊಲೀಸ ಉಪಾಧೀಕ್ಷಕರು (ಎ) ಉಪ ವಿಭಾಗ ಕಲಬುರಗಿರವರು  ಸದರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಸಮಾಲೋಚನೆ ಕುರಿತು ಈ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. 
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ದಿನಾಂಕ 02-01-2015 ರಂದು ಶ್ರೀ ಪ್ರಭಾಕರ ತಂದೆ ಚಿದಾನಂದ ಹೊಸಳ್ಳಿ ಸಾ: ಝಳಕಿ[ಬಿ] ರವರು ರಸ್ತೆಯಲ್ಲಿನ ಪುಲಿನ ಮೇಲೆ ಹೋಗುತ್ತಿದ್ದಾಗ  1] ಮಲ್ಲಿನಾಥ ತಂದೆ ಬೋಗಣ್ಣಾ ಹೋಸಳ್ಳಿ 2]ಯಲ್ಲಮ್ಮ ಗಂಡ ಭೋಗಪ್ಪ ಹೊಸಳ್ಳಿ ವ: 47 ವರ್ಷ 3] ಶ್ರೀಶೈಲ ಹೋಸಳ್ಳಿ 4]ಸಿದ್ದಾರಾಮ ಹೊಸಳ್ಳಿ ರವರೆಲ್ಲರು ಕುಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಅಂಗಿ ತೋಳ ಹಿಡಿದು ಜಗ್ಗಿ ಹರಿದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಮತ್ತು ಬಿಡಿಸಲು ಬಂದ  ಅಣ್ಣ ಮಧುಕರ ಹೊಸಳ್ಳಿ, ನನ್ನ ತಂದೆ ಚಿದಾನಂದ ಇವರಿಗೂ ಮಕ್ಕಳೇ ನಿಮಗೆ ನೀಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಬೇದರಿಕೆ ಹಾಕುತ್ತಿರುವಾಗ ನಮ್ಮೂರಿನ ಪ್ರಕಾಶ ಹೊಸಳ್ಳಿ, ಶಾಂತಪ್ಪ ಹೊಸಳ್ಳಿ ಇತರರೂ ಜಗಳವನ್ನು ನೋಡಿ ಬಿಡಿಸಿರುತ್ತಾರೆ ಕಾರಣ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿ ಅವಾಚ್ಚಶಬ್ದಗಳಿಂದ ಬೈದು ಜೀವದ ಹೇದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಠಾಣೆ:- ದಿನಾಂಕ 03/01/2015  ರಂದು ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಕಲಬುರಗಿ ರವರು ಕರೆ ಮಾಡಿ ಧುತ್ತರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಇಬ್ಬರು ಪಂಚರು ನಾನು ಹಾಗೂ ಸಿಬ್ಬಂಧಿ ಶ್ರೀ ಹಜರತ ಅಲಿ ಸಿಪಿಸಿ 154, ಕೂಡಿ ಠಾಣೆಯ  ಧುತ್ತರಗಾಂವ ಗ್ರಾಮಕ್ಕೆ ಹೋಗಿ ಶ್ರೀ ಧತ್ತಾತ್ರೇಯ ಎ.ಎಸ್.ಐ ರವರನ್ನು ಬರಮಾಡಿಕೊಂಡಿದ್ದು ಅವರ ಸಂಗಡ ಡಿ.ಸಿ.ಐ.ಬಿ ಘಟಕದ ಸಿಬ್ಬಂದಿಯವರಾದ  1) ಅಣ್ಣಾರಾಯ ಹೆಚ್.ಸಿ 332,   2) ಶೀವಯೋಗಿ ಹೆಚ್.ಸಿ 220, 3) ಚಂದ್ರಕಾಂತಹೆಚ್.ಸಿ 287, 4) ಅಂಬಾರಾಯ ಹೆಚ್.ಸಿ 54, 5) ಮಲ್ಲಿಕಾರ್ಜುನ ಹೆಚ್.ಸಿ 58 ರವರು ಇವರೊಂದಿಗೆ ಪಿ.ಐ ಡಿ.ಸಿ.ಐ.ಬಿ ಕಲಬುರಗಿ ರವರ  ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆತನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಸಿದ್ದಲಿಂಗಯ್ಯ ತಂದೆ ಗುರುಮೂರ್ತಯ್ಯ ಮಠಪತಿ ಸಾ:ಧುತ್ತರಗಾಂವ ಅಂತಾ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 6550/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ 1345 ಗಂಟೆಯಿಂದ 1435 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಟ್ರ್ಯಾಕ್ಟರ ಚಾಲಕನ ಬಂಧನ:
ಜೇವರ್ಗಿ ಪೊಲೀಸ : ದಿನಾಂಕ 03.01.2015 ರಂದು ಪಿ.ಎಸ್.ಐ ಜೇವರ್ಗಿ ಪೊಲೀಸ್ ಠಾಣೆರವರು ಪಎಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಟ್ರ್ಯಾಕ್ಟರ್ ನಂ ಕೆ.ಎ32ಟಿ5642 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ನಲ್ಲಿ ಟೇಪು ರಿಕಾರ್ಡ ಹಚ್ಚಿಕೊಂಡು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಚಾಲಕನ್ನು ನಿಲ್ಲಿಸಿ ಹಾಗೆ ಬಿಟ್ಟಲ್ಲಿ ಮುಂದೆ ಅಪಘಾತಪಡಿಸುವ ಸಂಭವ ಕಂಡುಬಂದಿದ್ದರಿಂದ ಇಬ್ಬರು ಪಂಚರನ್ನು ಕರೆಯಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ್ ನ್ನು ಜಪ್ತಿ ಮಾಡಿದ್ದು ಟ್ರ್ಯಾಕ್ಟರ್ ಮತ್ತು ಚಾಲಕನ ವಿರುಧ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.