POLICE BHAVAN KALABURAGI

POLICE BHAVAN KALABURAGI

22 July 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಡಾ ಚಂದ್ರಶೇಖರ ತಂದೆ ದುಂಡಪ್ಪ ಕಡಗಂಚಿ ಇವರು ದಿನಾಂಕ 30.05.16 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ನಾನು  ಕೆಲಸ ಮಾಡುವ ಬಸವೇಶ್ವರ ಆಸ್ಪತ್ರೆಗೆ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆಎ32/ಇಜಿ-0372 ನೇದ್ದನ್ನು ಚಲಾಯಿಸಿಕೊಂಡು ಐವಾನ ಇ ಶಾಹಿ ರೋಡದಿಂದ ಹೋಗುವಾಗ ಏಶಿಯನ ಮಾಲ ಎದುರು  ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ32/ಎಲ-0032 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗೈ  ರಿಸ್ಟ ಹತ್ತಿರ ಭಾರಿ ಗುಪ್ತ ಪೇಟ್ಟು , ಎಡ ಮತ್ತು ಬಲ ಪೇಕ್ಕೆಲುಬಿಗೆ ಭಾರಿ ಗುಪ್ತ ಪೇಟ್ಟು ಗುಪ್ತ ಅಂಗಳಿಗೆ ಭಾರಿ ಪೇಟ್ಟು ಗೊಳಿಸಿ ತನ್ನ  ಮೋಟಾರ  ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದ ರೇವಣಸಿದ್ದಪ್ಪಾ ನಂದೇಣಿ ಇವರು ದಿನಾಂಕ 20-07-2016 ರಂದು ರಾತ್ರಿ 11-25 ಗಂಟೆ ಸುಮಾರಿಗೆ ನಾನು ನಮ್ಮ  ಮುತ್ತುತ ಪೀನ್ಕ್ರಾಪ ಪೈನಾನ್ಸ ಗಳಿಗೆ ನೇಮಿಸಿದ ಸಿಬ್ಬಂದಿ ಜನರಿಗೆ ಚೆಕ್ ಮಾಡುವ ಸಲುವಾಗಿ ನಾನು ಚಲಾಯಿಸುತ್ತಿರುವ ನಮ್ಮ ಪೈನಾನ್ಸ ಕಾರ ನಂಬರ ಕೆಎ03/ಎಮ.ಎಕ್ಷ 1747 ನೇದ್ದರಲ್ಲಿ ಸೆಕ್ಯೂರಿಟಿ ಸುಪರವೈಸರ್ ಸಿದ್ದರಾಮ ತಂದೆ ಮಹಾದೇವಪ್ಪ ಸಿರಗುಂಡೆ ಹಾಗೂ ರಾಜಶೇಖರ ತಂದೆ ಶಿವಶರಣಪ್ಪ ಹೂವಿನಬಾಯಿ ರವರನ್ನು ಕೂಡಿಸಿಕೊಂಡು ಪಸ್ತಾಪೂರ ಆಸ್ಪತ್ರೆ ಹತ್ತಿರ ಬರುವ ಹಾಗೂ ಆನಂದ ಹೋಟೆಲ ಹತ್ತಿರ ಬರುವ ಪೈನಾನ್ಸಗಳನ್ನು ಚೆಕ್ ಮಾಡಿಕೊಂಡು ಸುಪರ್ ಮಾರ್ಕೆಟನಲ್ಲಿರುವ ಪೈನಾನ್ಸ ಚೆಕ್ ಮಾಡುವ ಸಲುವಾಗಿ ಗೋವಾ ಹೋಟೆಲ ಮುಖಾಂತರ ನಾನು ಜಗತ್ ಸರ್ಕಲ್ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಶರಣಪ್ಪ ತಂದೆ ವಿಠ್ಠಲ ಪಾಟೀಲ ಸಾ: ಸಮತಾ ಕಾಲೋನಿ ಇತನು ಮೋಟಾರ ಸೈಕಲ ನಂಬರ ಕೆಎ32/ಅರ 1240 ನೇದ್ದನ್ನು ಜಗತ ಸರ್ಕಲ್ ಕಡೆಯಿಂದ ಅಡ್ಡದಿಡ್ಡಿಯಾಗಿ ಚಲಾಯಿಸುತ್ತಾ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಮ್ಮ ಕಾರ ಬಲ್ಬ ಎದುರಿನ ಲ್ಯಾಂಪ ಅದರ ವ್ಹಿಲ್ವ ಕವರ, ಬಲಗಡೆ ಸೈಡಿನ ಲ್ಯಾಂಪ ಬಲ ಸೈಡಿನ ಹೆಡ್ ಲ್ಯಾಂಪ, ಬ್ರಾಕೇಟ್ ಕವರ, ವ್ಹಿಲ್ ಹೌಸ ಕವರ ಬಂಪರ ಬಾರ ಹಾಗೂ ಇತರ ಕಡೆಗೆ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ  ಪ್ರಕರಣ ಧಾಖಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಬಸಪ್ಪ ಪೂಜಾರಿ ಸಾ: ಘೊಗ್ಗಾ ತಾ: ಬಸವಕಲ್ಯಾಣ ಜಿ: ಬೀದರ ಇವರ 2ನೇ ಮಗಳಾದ ಮುನ್ನಾಬಾಯಿ ಇವಳಿಗೆ ಈಗ 5 ವರ್ಷಗಳ ಹಿಂದೆ ಡೊರಜಂಬಗಾ ಗ್ರಾಮದ ನಮ್ಮ ಸಂಬಂದಿಕರಾದ ಅಂಬಾರಾಯ ಪೂಜಾರಿ ಇವರ ದೊಡ್ಡ ಮಗನಾದ ಮಲ್ಲಿಕಾರ್ಜುನ  ಇತನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ನನ್ನ ಮಗಳಾದ ಮುನ್ನಾಬಾಯಿ ಇವಳಿಗೆ ಅಂಬಿಕಾ ವಯ 4 ವರ್ಷ ಮತ್ತು ಅಂಜಲಿ ವಯ: 10 ತಿಂಗಳು ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು. ನನ್ನ ಮಗಳು ಆಗಾಗ ಹಬ್ಬಕ್ಕೆ ನಮ್ಮಲ್ಲಿಗೆ ಬಂದಾಗ ನಮಗೆ ತಿಳಿಸಿದ್ದೆನೆಂದರೆ ತನ್ನ ಅತ್ತೆ ರಂಗಮ್ಮ, ಅಜ್ಜಿ ರ್ಯಾವಮ್ಮ ಮತ್ತು ಗಂಡನ ಮನೆಯವರು ತನಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ತನ್ನ ಗಂಡ ಆಗಾಗ ಕುಡಿದು ಬಂದು ತನ್ನೊಂದಿಗೆ ಜಗಳ ಮಾಡಿ ತನಗೆ ಹೊಡೆಬಡೆ ಮಾಡುತ್ತಾನೆ ಮತ್ತು ಮನೆಗೆ ಸಾಮಾನುಗಳನ್ನು ಹಾಗೂ ಮಕ್ಕಳಿಗೆ ಬಟ್ಟೆ ಇತರೆ ವಸ್ತುಗಳನ್ನು ತೆಗೆದುಕೊಂಡು ಬರಲು ಹೇಳಿದರೆ ಜಗಳ ಮಾಡಿ ಹೊಡೆಬಡೆ ಮಾಡುತ್ತಾನೆ ಅಂತ ತಿಳಿಸುತ್ತಾ ಬಂದಿದ್ದು ಇರುತ್ತದೆ. ನಾನು ನನ್ನ ಅಳಿಯನಿಗೆ ಮುನ್ನಾಬಾಯಿಯೊಂದಿಗೆ ಜಗಳ ಮಾಡಬೇಡ ಅವಳಿಗೆ ತೊಂದರೆ ಕುಡಬೇಡ ಅಂತ ತಿಳಿ ಹೇಳಿದ್ದು ಇರುತ್ತದೆ. ಮತ್ತು ಅವನ ಮನೆಯವರು ಕುಡಾ ಅವನಿಗೆ ತಿಳಿ ಹೇಳಿದ್ದು ಆದರು ಕೂಡಾ ಸದರಿಯವನು ಕುಡಿದು ಬಂದು ನನ್ನ ಮಗಳ ಸಂಗಡ ಜಗಳ ಮಾಡುತ್ತಾ ಬಂದಿದ್ದು ದಿನಾಂಕ 21.07.2016 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಡೊರ ಜಂಬಗಾ ಗ್ರಾಮದ ಅಂದಪ್ಪ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಮಗಳಾದ ಮುನ್ನಾಬಾಯಿ ಇವಳು ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿದ್ದಾಳೆ ಮತ್ತು ಅವಳ ಇಬ್ಬರ ಮಕ್ಕಳಿಗೆ ಬೆಂಕಿ ಹತ್ತಿದ್ದು ಅವರಲ್ಲಿ ಅಂಬಿಕಾ ಇವಳು ಮೃತ ಪಟ್ಟಿದ್ದು ಅಂಜಲಿ ಇವಳಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ ಅಂತ ತಿಳಿಸಿದ್ದು. ಆಗ ಗಾಬರಿಗೊಂಡು ನಾನು ನನ್ನ ಮೈದುನ, ಮಲ್ಲಿಕಾರ್ಜುನ, ನೇಗೆಣಿಯರಾದ ಗೌರಮ್ಮ ದೈವಿತಾ, ನನ್ನ ಮಕ್ಕಳಾದ ಬೀರಪ್ಪ, ಶಿವರಾಮ ಮತ್ತು ನಮ್ಮ ಸಂಬಂದಿಕರಾದ ಸಾಯಿಬಣ್ಣ, ಸಂಗೀತಾ, ಸಂಪತಬಾಯಿ ಕೂಡಿಕೊಂಡು ಡೊರಜಂಬಗಾ ಗ್ರಾಮಕ್ಕೆ ಬಂದು ನೋಡಲು ನನ್ನ ಮಗಳಾದ ಮುನ್ನಾಬಾಯಿ ಮತ್ತು ಮೊಮ್ಮಗಳಾದ ಅಂಬಿಕಾ ಇಬ್ಬರು ಮನೆಯಲ್ಲಿ ಸುಟ್ಟಗಾಯಗಳಿಂದ ಮೃತ ಪಟ್ಟಿದ್ದು ಆಗ ನಾನು ರಂಗಮ್ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಮುಂಜಾನೆ ಮನೆಯಲ್ಲಿ ಎಲ್ಲರು ಹೊಲಕ್ಕೆ ಮತ್ತು ಶಾಲೆಗೆ ಹೋಗಿದ್ದು ಮನೆಯಲ್ಲಿ ನಾನು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮಾತ್ರ ಇದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಇತನು ಕುಡಿದು ಮನೆಗೆ ಬಂದಿದ್ದು ಆಗ ಮುನ್ನಾಬಾಯಿ ಇವಳು ಮಲ್ಲಿಕಾರ್ಜುನನಿಗೆ ಕುಡಿದು ಮನೆಗೆ ಬರಬೇಡ ಕುಡಿಯಲ್ಲಿಕ್ಕೆ ಎಲ್ಲಿಂದ ಹಣ ಬರುತ್ತದೆ. ಮನೆಗೆ ಯಾವುದೆ ಸಾಮಾನುಗಳು ತರುವದಿಲ್ಲ ಮತ್ತು ಮಕ್ಕಳಿಗೆ ಬಟ್ಟೆ ಬರೆ ಎನು ತಂದು ಕುಡುವದಿಲ್ಲ ಹೀಗೆ ಆದರೆ ನಾವು ಹೇಗೆ ಬದುಕಬೇಕು ಅಂತ ಕೇಳಿದ್ದು ಆಗ ಮಲ್ಲಿಕಾರ್ಜುನ ಇತನು ಮುನ್ನಾಬಾಯಿಯೊಂದಿಗೆ ಜಗಳ ಮಾಡಿ ಅವಳಿಗೆ ಹೊಡೆಬಡೆ ಮಾಡಿದ್ದು ಆಗ ನಾನು ಹೋಗಿ ಮಲ್ಲಿಕಾರ್ಜುನನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅವನು ಹೋದ ನಂತರ ನಾನು ಮನೆಯ ಅಂಗಳದಲ್ಲಿ ಕೇಲಸ ಮಾಡಿಕೊಂಡಿದ್ದು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮನೆಯ ಒಳಗೆ ಇದ್ದು. ಮಧ್ಯಾನ 3 ಗಂಟೆಯ ಸುಮಾರಿಗೆ ಮನೆಯಿಂದ ಒಮ್ಮಲೆ ಚಿರಾಡುವ ಸಪ್ಪಳ ಕೇಳಿ ಬರುತ್ತಿದ್ದು ಗಾಬರಿಗೊಂಡು ನಾನು ಮನೆಯ ಒಳಗೆ ಬಂದು ನೋಡಲು ಮುನ್ನಾಬಾಯಿ ಇವಳು ತನ್ನ ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು. ಮುನ್ನಾಬಾಯಿ ಚಿರಾಡುತ್ತಿದ್ದಾಗ ಅಂಬಿಕಾ ಮತ್ತು ಅಂಜಲಿ ಇಬ್ಬರು ಮುನ್ನಾಬಾಯಿಗೆ ಹಿಡಿದುಕೊಂಡಿದ್ದರಿಂದ ಮಕ್ಕಳಿಗು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿ ಹತ್ತಿದ್ದನ್ನು ನೋಡಿ ನಾನು ಪಕ್ಕದ ಮನೆಯರನ್ನು ಕರೆದಿದ್ದು ಎಲ್ಲರು ಕೂಡಿ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಮುನ್ನಾಬಾಯಿ, ಅಂಬಿಕಾ ಮತ್ತು ಅಂಜಲಿಗೆ ಮೈ ತುಂಬಾ ಸುಟ್ಟಗಾಯಗಳಾಗಿದ್ದು ಮುನ್ನಾಬಾಯಿ ಮತ್ತು ಅಂಬಿಕಾ ಇಬ್ಬರು ಸ್ವಲ್ಪ ಸಮಯ ನರಳಾಡುತ್ತಾ ಸ್ಥಳದಲ್ಲಿ ಮೃತ ಪಟ್ಟಿದ್ದು ಅದೆ ವೇಳೆಗೆ ರಂಗಮ್ಮ ಇವಳು ಮನೆಗೆ ಬಂದಿದ್ದು, ರಂಗಮ್ಮ ಇವಳು ಅಂಜಲಿ ಇವಳಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು. ಅಂಜಲಿ ಇವಳಿಗೆ ಕಲಬುರಗಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ ಸ್ವಲ್ಪ ಸಮಯದಲ್ಲಿ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಂಗಾವ ಠಾಣೆ : ಶ್ರೀ ಶಾಂತಕುಮಾರ ತಂದೆ ಗೌರಿಶಂಕರ ಚಕ್ಕಿ ಸಾ : ಸಿರಗಾಪೂರ ರವರ ಹೋಲವು ಸಿರಗಾಪೂರ ಗ್ರಾಮದಲ್ಲಿದ್ದು 1) ಜಗನ್ನಾಥ ತಂದೆ ಸಿದ್ರಾಮಪ್ಪಾ ಚಕ್ಕಿ 2) ಸಿದ್ರಾಮಪ್ಪಾ ತಂದೆ ಜಗನ್ನಾಥ ಚಕ್ಕಿ 3) ಪ್ರಭು ತಂದೆ ಸಿದ್ರಾಮಪ್ಪಾ ಚಕ್ಕಿ 4) ಮಹಾರುದ್ರಪ್ಪಾ ತಂದೆ ಸಿದ್ರಾಮಪ್ಪಾ ಚಕ್ಕಿ 5) ಸದಾಶಿವ ತಂದೆ ಸಿದ್ರಾಮಪ್ಪಾ ಚಕ್ಕಿ 6) ವಿರೇಶ ತಂದೆ ಸದಾಶಿವ ಚಕ್ಕಿ 7) ಶಿವಶಂಕರ ತಂದೆ ಸಿದ್ರಾಮಪ್ಪಾ ಚಕ್ಕಿ 8) ವಿಜಯಕುಮಾರ ತಂದೆ ಅಣ್ಣಾರಾವ ಚಕ್ಕಿ ಸಾ ಕಲಬುರಗಿ  ರವರು ಹೋಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೋಲದಲ್ಲಿ ಬೆಳೆಯನ್ನು ಪೂರ್ಣವಾಗಿ ಕಿತ್ತು ಹಾಕಿದ್ದು ನಾಶಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.