POLICE BHAVAN KALABURAGI

POLICE BHAVAN KALABURAGI

18 July 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:  16-05-2014 ರಂದು ಸಾಯಾಂಕಾಲ 6  ಗಂಟೆಗೆ ನಮ್ಮ ಮನೆಯಲ್ಲಿದ್ದಾಗ ವಿಜಯಕುಮಾರ ಶಾಹಬಜಾರ ಗುಲಬರ್ಗಾ ಕಾರು ಚಾಲಕ ಈತನು ನರೋಣಾ ಗುರುಬಾಯಿ ಮನೆಯಲ್ಲಿ ಊಟಕ್ಕೆ ಬಂದಿರುತ್ತಾನೆ. ನೀನು ಇಲ್ಲಿಗೆ ಬಾ ಅಂತಾ ಫೋನಿನಲ್ಲಿ ತಿಳಿಸಿದಾಗ ನಾನು ಗುರುಬಾಯಿ ಮನಗೆ ಹೋಗಿ ನೋಡಲು ಅಲ್ಲಿ ರವಿರೆಡ್ಡಿ, ವಿನೋದಕುಮಾರ, ಶರಣುರೆಡ್ಡಿ, ವಿಜಯಕುಮಾರ, ಕಾತು ಚಿಂಚನಸೂರ, ಮತ್ತು ಸೀನು ಇವರೆಲ್ಲರೂ ಇದ್ದು  ಎಲ್ಲರೂ ಕೂಡಿ ಊಟ ಮಾಡಿದೇವು ಆಗ ಅಶೋಕ ಚಿತಲಿ ಮನೆಗೆ ಹೋಗುತ್ತೇನೆಂದು ಮನಗೆ ಹೇಳಿ ಹೋದನು ನನಗೆ ಈ ಮೇಲೆ ನಮೂದಿಸಿದ ಎಲ್ಲರು ನನಗೆ ಮನೆಗೆ ಬಿಟ್ಟು ಹೋಗುತ್ತೇವೆ ನಡಿ ಅಂತಾ ನನಗೆ ವಿಜಯಕುಮಾರ ಜಬರದಸ್ತಿ ಮಾಡುತ್ತಿದ್ದನು ನಾನು ಅವರೊಂದಿಗೆ ಗುರುಬಾಯಿ ಮನೆಯಿಂದ ರಾತ್ರಿ  9:30  ಗಂಟೆಗೆ ಅವರ ಮನೆಬಿಟ್ಟು ಅವರ ಮನೆಯಿಂದ ಊರಿನ ರಸ್ತೆಯ ಮೇಲೆ ಒಂದು ಇಂಡಿಕಾ ಕಾರು ನಿಲ್ಲಿಸಿದ್ದು ಜಬ್ಬರದಸ್ತಿಯಿಂದ ಕಾರಿನಲ್ಲಿ ಕೂಡಿಸಿದರು. ನಾನು ಮನೆಗೆ ನಡೆದುಕೊಂಡು ಹೋಗುತ್ತೇನೆಂದು ಹೇಳಿದರೆ ಇವರೆಲ್ಲರೂ ನನಗೆ ಹೋಗದೆ ಬಿಡದಂತೆ ಕಾರಿನಲ್ಲಿ ಕೂಡಿಸಿ ಇವರಲ್ಲಿ ಕಾರು ಸೀನು ಚಲಾಯಿಸುತ್ತಾ ನರೋಣಾ ದಿಂದ ಹೋಗುತ್ತಿದ್ದು  ಬಸ್ ಸ್ಟ್ಯಾಂಡದಲ್ಲಿ ನಾನು ಇಳಿಯುತ್ತೇನೆ ಅಂತಾ ಹೇಳಿದರೆ ಇವರಲ್ಲಿ ವಿಜಯಕುಮಾರ ಇತನು ನನ್ನ 9000  ರೂ ಕೊಡು ಮಗನೆ ಅಂದನು. ನಾನು  2-3  ದಿವಸಗಳಲ್ಲಿ ಕೊಡುತ್ತೇನೆ ಅಂತಾ ಹೇಳಿದರೆ ಬೋಸಡಿ ಮಗನೆ ಈಗ ರೂಪಾಯಿ ಕೊಡು ಅಂತಾ ಹೇಳಿದ್ದು. ನಾನು ಇಲ್ಲ ಅಂತಾ ಹೇಳಿದರೆ ತಮ್ಮ ಕಾರ ಚಾಲಕ ಸೀನುಗೆ ಕಾರು ಚಾಲು ಮಾಡಿ ನಡೆ ಅಂತಾ ವಿಜಯಕುಮಾರ ಮತ್ತು ಸಂಗಡಿಗೇರು ಹೇಳಿದಕ್ಕೆ ಕಾರು ಬಸ್ ಸ್ಟ್ಯಾಂಡದಿಂದ ಹೋದರುಇವರು ಯಾವ ಉದ್ದೇಶಕ್ಕಾಗಿ ಜಬ್ಬರದಸ್ತಿಯಿಂದ ಹೋಗುತ್ತಿದ್ದು ಗೊತ್ತಾಗಿಲ್ಲ ಕಡಗಂಚಿ ರೋಡಿಗೆ ಹೋಗಿದ್ದಾಗ  ನನಗೆ ಇವರೆಲ್ಲರೂ ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಯ ಮೇಲೆ ಬೆನ್ನ ಮೇಲೆ ಮುಖದ ಮೇಲೆ ಹೊಡೆದಿರುತ್ತಾರೆ. ಕಡಗಂಚಿ ಗುಲಬರ್ಗಾ ಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ಕಾರು ನಿಲ್ಲಿಸಿದ್ದು  ಆಗ ಸಮಯ 1030  ಪಿ ಎಂ ಆಗಿತ್ತು. ಕಾರಿನಲ್ಲಿದ್ದ ಬಡಿಗೆ ತೆಗೆದುಕೊಂಡು ವಿಜಯಕುಮಾರ ನನಗೆ ಬೆನ್ನ ಮೇಲೆ ಎರಡು ಕೈಗಳಿಗೆ ಬಲಭಾಗದಲ್ಲಿ ಹೊಡೆದಿರುತ್ತಾನೆ. ಮೈಮೇಲೆ ಕೆಂಪು ಬರೆಯಾಗಿ ಕಂದು ಗಟ್ಟಿರುತ್ತದೆ ಉಳಿದವರೆಲ್ಲರೂ ಬೋಸಡಿ ಮಗನೆ ರಂಡಿ ಮಗನೆ ಕೊಡುವ ಬಾಕಿ ಕೊಡವದಿಲ್ಲ ಅಂತಾ ಬೈಯುತ್ತಿದ್ದರು. ಎಲ್ಲರೂ ಕೂಡಿ ನನಗೆ ಜೀವ ಖಲ್ಲಾಸ್ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 17/07/2014 ರಂದು ಮಾನ್ಯ ಡಿಎಸ್ಪಿ ಸಾಹೇಬರು ಆಳಂದ ರವರು ಮಾನ್ಯ ಜೆಎಮ್ ಎಫ್ ಸಿ ನ್ಯಾಯಾಲಯ ಅಫಜಲಪೂರ ರವರ ಖಾಸಗಿ ದೂರು ಸಂ 27/2014 ನೇದ್ದು ಪ್ರಕರಣ ದಾಖಲಿಸಿಕೊಂಡು ಮರಳಿ ಸಲ್ಲಿಸುವಂತೆ ಕಳುಹಿಸಿಕೊಟ್ಟಿದ್ದು ಸದರಿ ಪಿಸಿ ರವರು ಮಲ್ಲಿಕಾರ್ಜುನ ರವರ ಮುಖಾಂತರ ಕಳುಯಿಸಿಕೊಟ್ಟಿದ್ದು ಸದರಿ ಪಿಸಿ  ರವರು 7 ಪಿಎಮ್ ಕ್ಕೆ ಖಾಸಗಿ ದೂರು ಸಂ 27/14  ನೇದ್ದು  ತಂದು ಹಾಜರ ಪಡಿಸಿದ್ದರ ಸಾರಂಶ ವೆನೆಂದರೆ ದಿನಾಂಕ 22/06/2014 ರಂದು 4.30 ಪಿಎಮ್ ದಿಂದ 7.30ಪಿಎಮ್ ದ ಅವದಿಯಲ್ಲಿ ಫಿರ್ಯಾದಿದಾರನಾದ ಮಾಹಂತೇಶ ತಂದೆ ಚಂದಪ್ಪ ವಾಹಿ ಸಾ|\ ಮಣೂರ ರವರಿಗೆ ಅಫಜಲಪೂರ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ ಬೆಂಡೆಗುಂಬಳ ಹಾಗೂ 3 ಜನ ಪೊಲೀಸರು ಸೇರಿ ಹಲ್ಲೆ ಮಾಡಿರುತ್ತಾರೆ ಅಂತ ಸಲ್ಲಿಸಿದ ಖಾಸಗಿ ದೂರಿನ ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :                             
ಸ್ಟೇಷನ ಬಜಾರ ಠಾಣೆ : ಶ್ರೀ ಮಡಿವಾಳಪ್ಪ ದ್ವಿ.ದ.ಸ ಪ್ರದಾನ ವ್ಯವಹಾರ ನ್ಯಾಯಾದೀಶ (ಕಿ.ವಿ) ಜೆ.ಎಂ.ಎಫ.ಸಿ ನ್ಯಾಯಾಲಯ ಗುಲಬರ್ಗಾ ರವರು ದಿನಾಂಕ. 09-07-2014 ರಂದು ಬೆಳಿಗ್ಗೆ 10  ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ನನ್ನ ಬಜಾಜ ಡಿಸ್ಕವರ ಮೊಟಾರ ಸೈಕಲ ನಂ. ಕೆಎ-32ಎಸ್- 6486 ಇ.ನಂ. JNGPE63314, ಚಾ.ನಂ. MD2DSJNZZPCE45019 ಅ.ಕಿ. 30,000/- ರೂ ನೆದ್ದನ್ನು ನಿಲ್ಲಿಸಿ ನಂತರ ಮರಳಿ ಬಂದು ನೋಡಲಾಗಿ ನನ್ನ ಮೊಟಾರ ಸೈಕಲ ಇರಲಿಲ್ಲ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.