POLICE BHAVAN KALABURAGI

POLICE BHAVAN KALABURAGI

24 October 2015

Kalaburagi District Reported Crimes

ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ದೇವಿಬಾಯಿ ಗಂಡ ರಾಮಚಂದ್ರ ಚವ್ಹಾಣ ಸಾ;ನಾಲವಾರ ಸ್ಟೇಷನ  ಇವರು ದಿನಾಂಕ 21-10-2015 ರಂದು ರಾತ್ರಿ ನಾನು ಮತ್ತು ನಮ್ಮ ಓಣಿಯ ಅನಿತಾಬಾಯಿ ರಾಠೋಡ ,ರತೀಬಾಯಿ ಚವ್ಹಾಣ ಮಗ ಅಶೋಕ ಹಾಗೂ ಇತರರು ಕೂಡಿಕೊಂಡು ಸಕ್ಕುನಾಯಕ ತಾಂಡಾಕ್ಕೆ ಹೋಗಿ ದೇವಿ ಉತ್ಸವ ಕಾರ್ಯಾಕ್ರಮದಲ್ಲಿ ಕೋಲಾಟವನ್ನು ಆಡುವ ಕಾಲಕ್ಕೆ ನನ್ನ ಮಗ ಅಶೋಕ ಇತನು ನೀರು ಕುಡಿದು ಚೆಲ್ಲುವ ಕಾಲಕ್ಕೆ ನಾಲವಾರ ಸ್ಟೇಷನ ದ ಖಯಬ್ ಎನ್ನುವವರ  ಮೈ ಮೇಲೆ ಬಿದ್ದಿದ್ದರಿಂದ ಖಯಬ್ ಮತ್ತು ಆತನ ಸಂಗಡಿಗರು ಕೂಡಿಕೊಂಡು ನನ್ನ ಮಗನ ಸಂಗಡ ತಕರಾರು ಮಾಡಿದ್ದು ಅಲ್ಲದೇ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಬರುವ ಕಾಲಕ್ಕೆ ನಾಲವಾರ ಸ್ಟೇಷನದ ಸುಲ್ತಾನ ಹಿಟ್ಟಿನ ಗಿರಣಿ ಸಮೀಪ ಬಂದಾಗ ಹಿಂದಿನಿಂದ ಖಯಬ್ ತಂದೆ ಸಲೀಂ , ಅಮಜತ್ ತಂದೆ ಇಸ್ಮಾಯಿಲ್ ಖಾನ , ಅಫಜಲ್ ತಂದೆ ರಸೀದ , ಮುಜಾಯಿದ್ , ಯಾಸೀನ ತಂದೆ ಹಾಜೀ , ನದೀಂ , ಎಲ್ಲರೂ ಕೂಡಿಕೊಂಡು ಬಂದವರೇ ಅಮಜದ ಇತನು ನನ್ನ ಮಗನಿಗೆ ತಡೆದು ನಿಲ್ಲಿಸಿ ‘’ಖಯಾಬ್ ಕೆ ಉಪ್ಪರ ಪಾನಿ ಫೇಖತೆ ತುಮಾರಾ ಮಸ್ತಿ ಬಹುತ್ ಹೋಗಯಾ’’ ಅಂತಾ  ಬೈಯ್ದು ಕೈಯಿಂದ ಹೊಡೆಬಡೆ ಮಾಡಿದ್ದು ವಿಚಾರಿಸಲು ಹೋದ ನನಗೆ ಅಪಜಲ್ ಮತ್ತು ಮುಜಾಯಿದ್ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ, ಖಯಾಬ್ ‘’ ತುಮ್ ಲಂಬಾಡೋಕೊ ನಹಿ ಛೋಡನಾ’’ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೇ ಯಾಸೀನ ಮತ್ತು ನದೀಮ್  ಇವರು ಮಗ ಅಶೋಕ ಇತನಿಗೆ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ,ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅನೀಲ ತಂದೆ ಶಾಂತಪ್ಪ ಮಲಘಾಣ ಸಾ : ಕರಜಗಿ ರವರು  ದಿನಾಂಕ 23/10/2015 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಾನು ನಮ್ಮ ಗ್ರಾಮದ ಬಸ ನಿಲ್ದಾಣದ ಹತ್ತಿರ ಇರುವ ನನ್ನ ಮೊಬೈಲ ಅಂಗಡಿ ಬಂದ ಮಾಡಿಕೊಂಡು ನಮ್ಮ ಗ್ರಾಮದ ಅಂಬಿಗರ ಚವಡಯ್ಯ ವೃತ್ತದ ಹತ್ತಿರ ಇರುವ ನಮ್ಮ ಅಣ್ಣನ ಮೊಬೈಲ ಅಂಗಡಿ  ಹಾಗೂ ನಮ್ಮ ತಮ್ಮ ಹಣಮಂತ ಇತನ ಪಾನಶಾಪ್ ಗೆ ನಾನು ಬಂದು ನಮ್ಮ ತಮ್ಮನ ಪಾನ ಶಾಪದಲ್ಲಿ ಸ್ವಲ್ಪ ಅಲ್ಲೆ ಕುಳಿತುಕೊಂಡು ನಾನು ದಿನಾಲು ನಮ್ಮ ಪಾನ ಶಾಪ್ ಹತ್ತಿರ ಯಲ್ಲಾಲಿಂಗ ಗುಡಿಯ ಕಟ್ಟೆಗೆ ಮಲಗುತಿದ್ದು  ನಮ್ಮ ತಮ್ಮನಿಗೆ ನಾನು ಇಲ್ಲೆ ಕಟ್ಟೆಯ ಮೇಲೆ ಮಲಗುತ್ತೇನೆ ನೀನು ನಿನ್ನ ಪಾನ ಶಾಪ್ ಬಂದ ಮಾಡಿ ಬಾ ಅಂತ ಹೇಳಿ ನಾನು ಕಟ್ಟೆಯ ಮೇಲೆ ಮಲಗಿಕೊಂಡ ಸ್ವಲ್ಪ ಸಮಯದಲ್ಲಿ  ಯಾರೋ ನಾಲ್ಕು ಜನರು ತಮ್ಮ ಮೋಟಾರ ಸೈಕಲ್ ನ್ನು  ಹೆಚ್ಚಿಗೆ ರೇಸ ಮಾಡಿಕೊಂಡು ಅಲ್ಲೆ ರೋಡಿನ ಮೇಲೆ ತಿರುಗಾಡುತ್ತಾ ನಮ್ಮ ಶಾಪ ಮುಂದೆ ನಿಂತು ನಮ್ಮ ತಮ್ಮನ ಸಂಗಡ ಬಾಯಿ ಮಾಡುತಿದ್ದಾಗ ನಾನು ಎದ್ದು ನಮ್ಮ ಪಾನ ಶಾಪ ಹತ್ತಿರ ಹೋಗಿ ನೋಡಿದಾಗ ನಮ್ಮ ಗ್ರಾಮದ ಮೌಲಾನಾ ತಂದೆ ಜಾಫರ ಚಂದನ ಹಾಗೂ ಮುಬಾರಕ ಹೇಳಕರ ಇವರು ಇದ್ದು ಮೌಲಾನ ಇತನ ಕೈಯಲ್ಲಿ ಬಿದರಿನ ಬಡಿಗೆ ಇದ್ದಿದ್ದು  ಹಾಗೂ ಇನ್ನೊಂದು ಮೋಟಾರ ಸೈಕಲ್ ಮೇಲೆ ಇನ್ನೂ ಇಬ್ಬರಿದ್ದು ನನಗೆ ಅವರ ಹೆಸರು ಗೊತ್ತಿರುವುದಿಲ್ಲ ನಾನು ಸದರಿಯವರಿಗೆ ಎನಾಗಿದೆ ಯಾಕೆ ನಮ್ಮ ತಮ್ಮನೊಂದಿಗೆ ಬಾಯಿ ಮಾಡುಕತ್ತಿರಿ ಅಂತ ಕೇಳಿದಾಗ ಮೌಲಾನನು ನನಗೆ ರಂಡಿಮಕ್ಕಳ್ಯಾ ಈ ರೋಡ ಏನು ನಿಮ್ದು ಅದಾ ನಾಳೆ ನಮ್ಮ ಮೊಹರಂ ಹಬ್ಬ ಇರುವದರಿಂದ  ನಮ್ಮ ಮೋಟಾರ ಸೈಕಲ್ ರೇಸ್ ಮಾಡಿಕೊಂಡು ತಿರುಗಾಡುತಿದ್ದರೆ ನಿಮ್ಮ ತಮ್ಮ ಬೋಸಡಿ ಮಗ ನಮಗ ಕೇಳುಕ್ಕ ಬರ್ತಾನ ಅಂತ ಅನ್ನುತಿದ್ದಾಗ ಅಲ್ಲೆ  ಮೊಬೈಲ್ ಶಾಪ್ ದಲ್ಲಿದ್ದ ನಮ್ಮ ಅಣ್ಣನಾದ ಗೊಲ್ಲಾಳ ಹಾಗೂ ಅಲ್ಲೆ ಆಜು ಬಾಜು ಇದ್ದ ಹೊಟೇಲ್ ಹಾಗೂ ಅಂಗಡಿಯವರಾದ ನಮ್ಮ ಗ್ರಾಮದ ಹಣಮಂತ ನಡಗೇರಿ, ಹಣಮಂತ ವಾಂಗಿ, ಪ್ರದೀಪ ಸುದಾಮ ಹಾಗೂ ನಮ್ಮ ದೊಡ್ಡಪ್ಪನಾದ ಶರಣಪ್ಪ ಮಲಘಾಣ ಇವರು ಬಂದಿದ್ದು ನಾವೇಲ್ಲರು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ನಮ್ಮ ತಮ್ಮನಾದ ಹಣಮಂತ ಇತನು ಮೌಲಾನನಿಗೆ ಜನರು ಮಲಗಿದ್ದಾರೆ ನಿನ್ನ ಮೋಟಾರ ಸೈಕಲ್ ಸೌಂಡ ಮಾಡಿ ತೊಂದರೆ ಮಾಡ್ತಿ  ಹೋಗು ಸುಮ್ನೆ ಮನೆಗೆ ಅಂತ ಅನ್ನುತಿದ್ದಾಗ  ಮೌಲಾನ ಇತನು ನಮ್ಮ ತಮ್ಮನಿಗೆ ರಂಡಿ ಮಗನ ಇವತ್ತ ನಿನಗ ಬಿಡಲ್ಲಾ ಅಂತ ತನ್ನ ಕೈಯಲಿದ್ದ ಬಿದರಿನ ಬಡಿಗೆಯಿಂದ ನಮ್ಮ ತಮ್ಮನ ತಲೆಯ ಮೇಲೆ ಜೋರಾಡಿ ಹೊಡೆದಾಗ ನಮ್ಮ ತಮ್ಮ ಚಿರಾಡುತ್ತಾ ಕೆಳಗೆ ಬಿದ್ದನ್ನು ಆಗ  ನಮ್ಮ ತಮ್ಮನ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ರಕ್ತ ಬರುತಿದ್ದು ನಾವೇಲ್ಲರು ಸದರಿಯವನಿಗೆ ಬಿಡಿಸಲು ಹೋದರೆ ನನಗೆ ಮುಬಾರಕ ಇತನು ಮೌಲಾನ ಇತನ ಕೈಯಲ್ಲಿನ ಬಡಿಗೆಯಿಂದ ನನ್ನ ಎರಡು ಮೊಳಕಾಲಿಗೆ ಹಾಗೂ ಬಲಗೈಗೆ ಹೊಡೆಯುತಿದ್ದಾಗ ಇನ್ನೂ ಇಬ್ಬರು ನಮಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತಮ್ಮ ಕೈಯಿಂದ ಕಾಲಿನಿಂದ ನನಗೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಗುರುಪಾದಪ್ಪ ತಂದೆ ಶಂಕರ ಸಿಂಗೆ ಉ||ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೌರ(ಬಿ) ನಾನು ಈಗ ಐದು  ವರ್ಷದಿಂದ  ಗೌರ(ಬಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯಾನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದು, ನಮ್ಮ ಕಾರ್ಯಾಲಯವು ಗೌರ(ಬಿ) ಗ್ರಾಮ ಪಂಚಾಯತ ಕಟ್ಟಡದ ಹೆಚ್ಚುವರಿ ಕೋಣೆಯಲ್ಲಿ ಕಾರ್ಯ ನಿರ್ವಹಿಸುತಿದ್ದು ಸದರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಹಿಂದಿನ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು ಅನುಮತಿ ನೀಡಿರುತ್ತಾರೆ.ಈಗ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುವ ದಿಗಳಳಿರುವುದರಿಂದ  ನಾವು  ಈಗ ಕೆಲವು ದಿನಗಳಿಂದ ನಮ್ಮ ಮೇಲಾಧಿಕಾರಿಯವರ ಆದೇಶದಂತೆ ನಮ್ಮ ಕಾರ್ಯಾಲಯ ಬೆಳಿಗ್ಗೆ 8.30 ಗಂಟೆಗೆ ತರೆದು ರೈತರಿಗೆ ಬಿತ್ತನೆಯ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡುವದು ಹಾಗೂ  ನಮ್ಮ ಕಾರ್ಯಾಲಯದ ಇತರೆ ಕೆಲಸ ನಿರ್ವಹಿಸುತ್ತಾ ಬಂದಿರುತ್ತೇವೆ  ದಿನಾಂಕ 20/10/2015 ರಂದು 8.30 ಎಎಮ್ ಕ್ಕೆ ಎಂದಿನಂತೆ ನಮ್ಮ ಕಾರ್ಯಾಲಯ ತರೆದು ನಾನು ಹಾಗೂ ನಮ್ಮ ಸಂಘದ ಅಧ್ಯಕ್ಷರಾದ ಭೀಮರಾವ ಗೌರ, ಕ್ಯಾಸಿಯರ್ ರವರಾದ  ಬಸವರಾಜ ಪಾಟೀಲ  ಮುರು ಜನರು ನಮ್ಮ ಕಾರ್ಯಾಲಯದಲ್ಲಿ ಕೆಲಸ ಮಾಡುತಿದ್ದಾಗ ನಮ್ಮ ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಶಿವಪ್ಪ ತಂದೆ ಹುಚ್ಚಪ್ಪ ಆಲಮೇಲ್ ಇವರು ಕಾರ್ಯಲಯದಲ್ಲಿ ಅತಿಕ್ರಮವಾಗಿ ಪ್ರವೇಶಿಸಿ ನಮಗೆ ರಂಡಿ ಮಕ್ಕಳೆ ಇಲ್ಲಿ ನೀವು ಯಾರು ಕೆಲಸ ಮಾಡಬಾರದು ಅಂತ ಬೈಯುತ್ತಾ ಈಗ ಹೊರಗೆ ಹೋಗ್ರಿ ಇಲ್ಲಂದ್ರ ನಿಮ್ದು ಬೇರೆನೆ ಆಗ್ತಾದ ಅಂತ ಅಂದಾಗ ನಾವು ಶಿವಪ್ಪನಿಗೆ  ಹೆದರಿ ನಮ್ಮ ಕಾರ್ಯಾಲಯದಿಂದ ಹೊರಗೆ ಬಂದಾಗ ಶಿವಪ್ಪ ಇತನು ನಮ್ಮ ಕಾರ್ಯಾಲಯದ ಬಾಗಿಲು ಮುಚ್ಚಿ ಕೀಲಿ ಹಾಕಿರುತ್ತಾನೆ ನಾವು ಶಿವಪ್ಪನಿಗೆ  ಯಾಕೆ ಕೀಲಿ ಹಾಕುತ್ತಿರಿ ಅಂತ ಹೇಳುತಿದ್ದಾಗ ಶಿವಪ್ಪ ಇತನು ಒಂದು ವೇಳೆ ನೀವು ಈಲ್ಲಿ ಕೆಲಸ ಮಾಡ್ದಿರಿ ನಿಮ್ಗ ಖಲಾಸ ಮಾಡ್ತಿನಿ ಅಂತ ಅಂದು ನಮ್ಮ ಕಾರ್ಯಾಲಯಕ್ಕೆ ಕೀಲಿ ಹಾಕಿದಕ್ಕೆ ಕಾರಣ ಹೇಳದೆ ಅಲ್ಲಿಂದ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಮರೀನ ಗಂಡ ಇಮ್ರಾನಶೇಖ ಸಾ:ಶೇಖ-ಎ-ದಖನ್ ಕಾಲೋನಿ ಖಾದ್ರಿಚೌಕ ಶೇಖ  ರೋಜಾ ಕಲಬುರಗಿ ರವರಿಗೆ ದಿನಾಂಕ: 28-05-2015 ರಂದು ನಮ್ಮ ತಂದೆ ತಾಯಿಯವರು ಮುಂಬೈನ ಇಮ್ರಾನ್ ಶೇಖ ಇತನೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಎಂ.ಎಸ.ಕೆ.ಮಿಲ್ ಮೋಯಿನ್ ಗಾರ್ಡನದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ವರನಿಗೆ ಮಾತನಾಡಿದ ಪ್ರಕಾರ 11 ಸಾವಿರ ರೂಪಾಯಿ ಮತ್ತು 1 ತೊಲೆ ಬಂಗಾರ ಹಾಗೂ ಗೃಹ ಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಆದ ನಂತರ ನಾನು ನನ್ನ ಗಂಡನ ಮನೆಗೆ ಹೋಗಿದ್ದು ಸುಮಾರು 3-4 ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು ತದ ನಂತರ ನನ್ನ ಗಂಡ ನನಗೆ ನೀನು ನನ್ನ ಅಂತಸ್ತಿಗೆ ತಕ್ಕಂತೆ ವರದಕ್ಷಿಣೆ ವರೋಪಚಾರ ಕೊಟ್ಟಿರುವದಿಲ್ಲ ಮತ್ತು ನೀನು ನನಗೆ ಇಷ್ಟವಿಲ್ಲ ನನ್ನ ತಾಯಿ ಮಾತು ಕೇಳಿ ನಾನು ನಿನ್ನೊಂದಿಗೆ ಮದುವೆ ಮಾಡಿಕೊಂಡಿರುತ್ತೇನೆ. ಅಂತಾ ದಿನಾಲು ನನ್ನ ಗಂಡ ಇಮ್ರಾನ ಶೇಖ ಇತನು ಕುಡಿದು ಬಂದು ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿರುತ್ತಾನೆ ಈ ವಿಷಯವನ್ನು ನಾನು ನಮ್ಮ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ನಮ್ಮ ಸಮಾಜದ ಮುಖಂಡರೊಂದಿಗೆ ನನ್ನ ಗಂಡನಿಗೆ ಬುದ್ದಿ ಮಾತು ಹೇಳಿದ್ದು ಇರುತ್ತದೆ. ಆವಾಗಿನಿಂದ ಮತ್ತೇ ನನ್ನ ಗಂಡ ನನಗೆ ನಮ್ಮ ಮನೆಯ ವಿಷಯವನ್ನು ನೀನು ಬೇರೆಯವರ ಮುಂದೆ ಹೇಳಿದ್ದಿ ಇನ್ನು ಮುಂದೆ ನೀನು ನಿನ್ನ ತವರು ಮನೆಯಿಂದ ಇನ್ನು 1 ಲಕ್ಷ ರೂಪಾಯಿ ವರದಕ್ಷಿಣೆ ಮತ್ತು 2 ತೊಲೆ ಬಂಗಾರ ತೆಗೆದುಕೊಂಡರೆ ಮಾತ್ರ ನಾನು ನಿನಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಇಲ್ಲವಾದರೆ ನಿನಗೆ ಖಲಾಸ ಮಾಡಿ ಇನ್ನು ಹೆಚ್ಚಿನ ವರದಕ್ಷಿಣೆ ಕೊಡುವ ಹುಡುಗಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹಿಂಸಿಸುತ್ತಿದ್ದನು. ನನ್ನ ಭಾವ ಮೋಸಿನ್ ಶೇಖ, ನಾದಿನಿ ನಾಜಿಯಾ, ಅತ್ತೆ ಹಸೀನಾ ಬೇಗಂ ಇವರು ಮೂರು ಜನ ಕೂಡಿ ನೀನು ನಮ್ಮ ಮನೆಯ ವಿಷಯವೆಲ್ಲಾ ಬೇರೆಯವರು ಮುಂದೆ ಹೇಳಿ ನಮ್ಮ ಮರ್ಯಾದೆ ಹಾಳು ಮಾಡಿದ್ದಿ ಅದಕ್ಕೆ ಇಮ್ರಾನಶೇಖ ಹೇಳಿದಂತೆ ನಿನ್ನ ತವರು ಮನೆಯಿಂದ 1 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತಂದರೆ ಮಾತ್ರ ನಿನಗೆ ನಮ್ಮ ಮನೆಯಲ್ಲಿ ಜಾಗವಿದೆ ಇಲ್ಲವಾದರೆ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಹಿಂಸೆ ಕೊಟ್ಟಿದ್ದು ಅಲ್ಲದೇ ನಮ್ಮ ಮನೆಯಿಂದ ನೀನು 2 ತೊಲೆ ಬಂಗಾರ ಕಳುವು ಮಾಡಿರುತ್ತಿ ಅಂತಾ ಸುಳ್ಳು ಆರೋಪ ಮಾಡಿ ಮನೆಯಿಂದ ಹೊರಗೆ ಹಾಕಿರುವದರಿಂದ ನಾನು ಕಲಬುರಗಿಯ ನನ್ನ ತವರು ಮನೆಗೆ ಮುಂಬೈಯಿಂದ ಒಬ್ಬಳೇ ಕಲಬುರಗಿಗೆ ಬಂದು ಸುಮಾರು 1 ತಿಂಗಳಿಂದ ನನ್ನ ತವರು ಮನೆಯಲ್ಲಿಯೇ ಉಳಿದುಕೊಂಡಿರುತ್ತೇನೆ. ನನ್ನ ಇನ್ನೊಬ್ಬ ನಾದಿನಿ ಮಹೆಕ್  ತನ್ನ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯಲ್ಲಿಯೇ ಬೇರೆ ಮನೆ ಮಾಡಿಕೊಂಡಿರುತ್ತಾರೆ. ನನ್ನ ಅತ್ತೆ ಹಸೀನಾ ಬೇಗಂ ಇವಳು ಆಗಾಗ ತನ್ನ ಮಗಳ ಹತ್ತಿರ ವಾರಕೊಮ್ಮೆ ಮುಂಬೈಯಿಂದ ಕಲಬುರಗಿಗೆ ಹೋಗಿ ಬಂದು ಮಾಡುತ್ತಿರುತ್ತಾರೆ. ದಿನಾಂಕ 15-10-2015 ರಂದು ನಮ್ಮ ಅತ್ತೆ ಹಸೀನಾ ಬೇಗಂ ಇವರು ತಮ್ಮ ಮಗಳ ಹತ್ತಿರ ಕಲಬುರಗಿಗೆ ಬಂದಿರುವ ವಿಷಯ ಗೊತ್ತಾಗಿ ನಾನು ಮತ್ತು ನಮ್ಮ  ತಾಯಿ ಶಾಜಹಾಂ ಕೂಡಿ  ಮಿಲತನಗರದ ನಮ್ಮ ನಾದಿನಿ ವಾಸವಿರುವ ಮನೆಗೆ ಹೋಗಿ ನಮ್ಮ ಅತ್ತೆಗೆ ನನ್ನ ತಾಯಿ ನನ್ನ ಮಗಳಿಗೆ ಹೀಗೆಕೆ ತೊಂದರೆ ಕೋಡುತ್ತಿದ್ದರಿ ನಿಮ್ಮ ಮಗನಿಗೆ ಸರಿಯಾಗಿ ಬುದ್ದಿವಾದ ಹೇಳಿ ಅವಳಿಗೆ ಚೆನ್ನಾಗಿ ನೋಡಿಕೊಳ್ಳಿ ಅಂತಾ ಹೇಳಿದಕ್ಕೆ ನಮ್ಮ ಅತ್ತೆ ನಾನು ಏನು ಹೇಳುವದಿಲ್ಲ ನೀವು 1 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ಕೊಟ್ಟರೆಮಾತ್ರ ಅವಳಿಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಇಲ್ಲವಾದರೆ ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಹೇಳಿ ನಮಗೆ ನೀವು ಇಲ್ಲಿ ಇದ್ದರೆ ನನ್ನ ಮಗನಿಗೆ ಕರೆಯಿಸಿ ನಿಮ್ಮಬ್ಬರಿಗೆ ಇಲ್ಲೇ ಖಲಾಸ ಮಾಡುತ್ತೇವೆ ಅಂತಾ ಹೆದರಿಸಿದಳು. ದಿನಾಂಕ:16-10-2015 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ ನನ್ನ ಗಂಡ ಇಮ್ರಾನ್ ಶೇಖ, ಅತ್ತೆ ಹಸೀನಾ ಬೇಗಂ,ಮಾವ ಸಲೀಂಬಾವ ಮೋಸಿನ್ ಮತ್ತು ನನ್ನ ನಾದಿನಿಯ ಗಂಡ ಅಬ್ಬಾಸ ನಾದಿನಿ ನಾಜಿಯಾ ಇವರೆಲ್ಲರೂ ನನ್ನ ತವರು ಮನೆಗೆ ಬಂದು ನನ್ನ ಗಂಡ ನನಗೆ ರಂಡಿ ನಿನಗೆ ಎಷ್ಟು ಸೊಕ್ಕು ಇದೆ ನೀನು ನನ್ನ ತಾಯಿ ಹತ್ತಿರ ಹೋಗಿ ಅವಳೊಂದಿಗೆ ವಾದ ಮಾಡುತ್ತಿಯಾ ಎಲ್ಲಿದ್ದಾನೆ ಚಿನಾಲಕಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ನನಗೆ ಕೈಯಿಂದ ಹೊಡೆಬಡೆ ಮಾಡ ಹತ್ತಿದನು. ಕಾಲಿನಿಂದ ಹೊಟ್ಟೆಗೆ ಒದ್ದನು. ಆಗ ನಾನು ಕೆಳಗೆ ಬಿದ್ದೆನು. ಆಗ ನನ್ನ ಗಂಡ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ತನ್ನ ಕೈಯಲ್ಲಿ ತಲವಾರ ತೆಗೆದುಕೊಂಡು ನನ್ನ ತಲೆಗೆ ಹೊಡೆಯಬೆಕೆನ್ನುವಷ್ಟರಲ್ಲಿ ನಮ್ಮ ತಂದೆ ಇಸ್ಮಾಯಿಲ್ ಅಡ್ಡ ಬಂದು ತಮ್ಮ ಬಲಗೈ ಅಡ್ಡ  ತಂದಾಗ ಆ ತಲವಾರಿನ ಏಟು ನನ್ನ ತಂದೆಯ ಕೈಗೆ ಬಿದ್ದು ಭಾರಿ ರಕ್ತಗಾಯವಾಯಿತು. ಆಗ ನನ್ನ ನಾದಿನಿ ನಾಜಿಯಾ ಅತ್ತೆ ಹಸೀನಾಬೇಗಂ ಇವರು ಈ ರಂಡಿಗೆ ಖಲಾಸ ಮಾಡು ನಿನಗೆ ಮತ್ತೊಂದು ಮದುವೆ ಮಾಡಲು ಅಡ್ಡಿಯಾಗುತ್ತಿದ್ದಾಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದರು. ಆಗ ನನ್ನ ನಾದಿನಿ ಗಂಡ  ಅಬ್ಬಾಸ ನನ್ನ ತಂದೆಯ ಎದಗೆ ಹಾಕಿ ಸ್ಟೀಕ್ದಿಂದ ಹೊಡೆದನು. ಮತ್ತು ಬಾವ ಮೋಸಿನ್ ಇತನು ಕೂಡ ನನಗೆ ಕಾಲಿನಿಂದ ಒದ್ದಿರುತ್ತಾನೆ ಆಗ ನಮ್ಮ ಮನೆಯ ಅಕ್ಕಪಕ್ಕದವರು ಬಂದು ನನಗೆ ಮತ್ತು ನನ್ನ ತಂದೆಗೆ ಅವರಿಂದ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರೆಲ್ಲರೂ ಎಮ್ .ಹೆಚ್ 04. ಜಿಜೇ 5136 ನೇದ್ದರಲ್ಲಿ ಹೊರಟು ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.