POLICE BHAVAN KALABURAGI

POLICE BHAVAN KALABURAGI

18 August 2011

GULBARGA DIST REPORTED CRIMES

ಮನೆ ಕಳ್ಳತನ ಪ್ರಕರಣ

ಸೇಡಂ ಪೊಲೀಸ್ ಠಾಣೆ: ಕೃಷ್ಣಾ ರೆಡ್ಡಿ ತಂದೆ ದೇವಿಂದ್ರಪ್ಪಾ ನಾಯಕೊಡಿ ಸಾ|| ಬಾಲಾಜಿ ನಗರ ಸೇಡಂ ರವರು ನಾನು ನನ್ನ ಮಗಳ ಜೋತೆಯಲ್ಲಿ ಬಾಂಬೆಗೆ ಹೋಗುತ್ತಿರುವಾಗ ಮನೆ ಕಳ್ಳತನ ಆಗಿದೆ ಅಂತಾ ತಿಳಿಸಿದ್ದರಿಂದ ನಾನು ಮರ್ಗ ಮಧ್ಯದಲ್ಲಿ ಮರಳಿ ಬಂದು ನೊಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಇರಲಿಲ್ಲ ಬಟ್ಟೆ ಬರೆ ಮತ್ತು ಬಂಗಾರ ಆಭರಣಗಳು ಇಟ್ಟಿದ್ದ ಸೂಟಕೇಸ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ ಪ್ರಕರಣ :
ಶಹಾಬಾದ ನಗರ ಠಾಣೆ:

ದಿನಾಂಕ:18/08/2011
 ರಂದು ಪಿ.ಎಸ.ಐ ಮತ್ತು ಪಿಸಿ  ರವರು ರಾತ್ರಿ ಗಸ್ತು ಚೆಕ್ಕಿಂಗ ಇದ್ದಿದರಿಂದ ಶಹಾಬಾದ ನಗರ ರೈಲ್ವೆ ಸ್ಷೇಷನ ಹತ್ತಿರ ಇರುವ ಸರೋಜಾ ವೈನ ಶಾಪದ ಹತ್ತಿರ ಬಂದಾಗ ಅದರ ಮುಂದುಗಡೆ ಲೈಟಿನ ನೆರಳಲ್ಲಿ ಇಬ್ಬರು ಹುಡಗರು ನಿಂತಿದ್ದು ಕೇಳಲು ತಪ್ಪಿಸಿ ಕೊಳ್ಳಲು ಪ್ರಯತ್ಮಿಸುತ್ತಿದ್ದರಿಂದ ಹಿಡಿದು ವಿಚಾರಿಸಲಾಗಿ ರಘು ತಂದೆ ಪ್ಕಕಾಶ ಕಾಂಬಳೆ ಮತ್ತು ಕೃಷ್ಟಾ ತಂದೆ ಬಂದಗೇಪ್ಪಾ ಮಿಂಚನ್ ಸಾ:  ಸುಂದರ ನಗರ  ಗುಲ್ಬರ್ಗಾ ಅಂತಾ ತಿಳಿಸಿದರು. ಅವರನ್ನು ಸ್ಥಳದಲ್ಲಿಯೇ ಬಿಟ್ಟರೆ ಯಾವುಧಾದರರೂ ಸ್ವತ್ತಿನ ಅಪರಾಧಗಳು ಮಾಡಬಹುದೆಂದು ತಿಳಿದು ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಟಕಾ ಪ್ರಕರಣ :
ಶಹಾಬಾದ ನಗರ ಠಾಣೆ:
ಸುಭಾಸ ಚೌಕದಲ್ಲಿ ಹತ್ತಿರ ಒಬ್ಬನು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ರಾಮು ತಂದೆ ಹೊಸರಪ್ಪಾ ಚೌದರಿ ಇತನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮಟಕಾ ಚೀಟಿ ಮತ್ತು ನಗದು ಹಣ 850/- ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ನಿಂದನೆ ಪ್ರಕರಣ

ಗ್ರಾಮೀಣ ಠಾಣೆ : ಶ್ರೀ ರಾಮು ತಂದೆ ಹರಿಶ್ಚಂದ್ರ ಚವ್ಹಾಣ ಉ:ಗುತ್ತೇದಾರ ಸಾ: ಉದನೂರ ತಾ:ಜಿ: ಗುಲಬರ್ಗಾ ರವರು ನಾನು ಇಂದು ಮುಂಜಾನೆ ಉದನೂರ ಗ್ರಾಮದಿಂದ ಡಬರಾಬಾದ ಗ್ರಾಮಕ್ಕೆ ನಮ್ಮೂರಿನವರೊಂದಿಗೆ ಆಟೋದಲ್ಲಿ ಹೊರಟಾಗ ಜೈಬೀಮ ತಂದೆ ಶಿವಲಿಂಗಪ್ಪ ಕೊರಳ್ಳಿ ಸಾ|| ಉದನೂರ ದವನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ಆಟೋವನ್ನು ನಿಲ್ಲಿಸಿ ಮಗನೇ ರಾಮ್ಯಾ ಕೆಳಗೆ ಇಳಿ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಕೇಳಿದಾಗ ನಾನು ಏಕೆ ಹಣ ಕೊಡಬೇಕು ಅಂತ ಅಂದಾಗ ಅವನು ಅದಕ್ಕೆ ಹಪ್ತ ಕೋಡಬೇಕು ಅಂತಾ ಅಂದು ಅವ್ಯಾಚ್ಯವಾಗಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಮಾನಭಂಗ ಪ್ರಕರಣ :

ಗ್ರಾಮೀಣ ಠಾಣೆ: ಶ್ರೀ ಕುಮಾರಿ ಲಕ್ಷ್ಮೀ ತಂದೆ ಶಿವಲಿಂಗಪ್ಪಾ ಕೊರಳ್ಳಿ ಸಾ;ಉದನೂರ ತಾ;ಜಿ;ಗುಲಬರ್ಗಾ
ರವರು ನಾನು ಮತ್ತು ನನ್ನ ಅಣ್ಣ ಜೈಭೀಮ ಕೊರಳ್ಳಿ ಇಬ್ಬರು ಕೂಡಿಕೊಂಡು ಕಮೀಟಿ ಹಾಲ ಹತ್ತಿರ ಹೋಗು ತ್ತಿರುವಾಗ ರಾಮು ತಂದೆ ಹರಿಶ್ಚಂದ್ರ ಚವ್ಹಾಣ, ರಾಮು ತಂದೆ ಹರಿಶ್ಚಂದ್ರ ಚವ್ಹಾಣ , ವಿಠಲ ತಂದೆ ಹರಿಶ್ಚಂದ್ರ ಚವ್ಹಾಣ , ದೇಸು ತಂದೆ ಹರಿಶ್ಚಂದ್ರ ಚವ್ಹಾಣ , ಭೀಮು ಲಕ್ಷ್ಮಣ ಪೂಜಾರಿ ,ಆನಂದ ತಂದೆ ಲಕ್ಷ್ಮಣ ಪೂಜಾರಿ , ವಿಥುನ ತಂದೆ ಮಾಹಾದೇವ ಚವ್ಹಾಣ ಸಾ;ಎಲ್ಲರೂ ಉದನೂರ ದವರು ನಮಗೆ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು , ಕೈಹಿಡಿದು ಎಳೆದುಕೊಂಡು ಸೇವಲಾಲ ಗುಡಿ ಹತ್ತಿರ ಕರೆದುಕೊಂಡು ಹೋಗಿ ಗುಡಿ ಎದುರಿನ ಕಂಬಕ್ಕೆ ಹಗ್ಗದಿಂದ ಕಟ್ಟಿ ಕೈಯಿಂದ ಹೊಡೆದು, ಗುಪ್ತಗಾಯಗೊಳಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.