POLICE BHAVAN KALABURAGI

POLICE BHAVAN KALABURAGI

20 May 2019

KALABURAGI DIST REPORTED CRIMES


ನರೋಣಾ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ದಿನಾಂಕ:19/05/2019 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಡೆತ್ ಎಂ.ಎಲ್.ಸಿ ವಸೂಲಾದ ಮೇರೆಗೆ ಜಿ.ಜಿ.ಹೆಚ್ ಕಲಬುರಗಿಗೆ ಭೇಟಿಕೊಟ್ಟು ವಿಚಾರಿಸಲಾಗಿ ಮೃತ ಕಾಶಿಬಾಯಿ ಇವಳ ಮಗನಾದ ಶರಣಬಸ್ಪಪಾ ತಂದೆ ಬೀರಣ್ಣಾ ಖಟೆಗೆ ಸಾ:ಮುನ್ನಳ್ಳಿ ಲಿಖಿತ ದೂರು ಸಲ್ಲಿಸಿದ್ದು ಅದರಲ್ಲಿ  ದಿನಾಂಕ:18/05/2019 ರಂದು  ರಾತ್ರಿ ಸುಮಾರು 10-00 ಗಂಟೆಗೆ ನಾವೆಲ್ಲರೂ ಊಟಮಾಡಿ ನಾನು ಮಗಲಗಿಕೊಳ್ಳಲು ಮನೆಯೆ ಹತ್ತಿರ ಇರುವ ಕುರಿ ದೊಡ್ಡಿ ಪ್ಲಾಟಿಗೆ ಹೋಗಿದ್ದು. ರಾತ್ರಿ  ಅಂದಾಜು 01-30 ಎ.ಎಂ ಗಂಟೆ ಸುಮಾರಿಗೆ ನಮ್ಮ ಮನಯ ಹತ್ತಿರ ಚಿರಾಡುವ ಸಪ್ಪಳ ಕೇಳಿ ನಾನು ಗಾಬರಿಯಾಗಿ ಹೋಗಿ ನೋಡಲಾಗಿ ನನ್ನ ತಾಯಿ ಕಾಶಿಬಾಯಿಗೆ ಬೆಂಕಿ ತಗುಲಿ ಚೀರಾಡುತ್ತಿದ್ದು . ಇದನ್ನು ನೋಡಿ ಗುಂಡಪ್ಪಾ ನಮ್ಮ ಕಾಕಾ ರೇವಣಸಿದ್ದಪ್ಪಾ ರಾಜಾ, ಚಂದ್ರಕಲಾ ಹಾಗೂ ನಮ್ಮ ಸಂಬಂಧಿಕರಾದ ಗುರುಬಾಯಿ ಶ್ರೀದೇವಿ ಎಲ್ಲರೂ ಆರಿಸಿ ನನ್ನ ತಾಯಿಯ ಉಪಚಾರ ಸಲುವಾಗಿ ಒಂದು ಖಾಸಗಿ ವಾಹನದಲ್ಲಿ ಆಳಂದದ ಡಾ||ಪಿ.ಎನ್.ಶಾ ಆಸ್ಪತ್ರೆಗೆ ಒಯ್ದು ಅಲ್ಲಿಂದ ಅದೇ ಕಾರಿನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಮಾಡಿರುತ್ತೇವೆ. ಈ ಬಗ್ಗೆ ನನ್ನ ತಾಯಿಗೆ ವಿಚಾರಿಸಿದಾಗ ತಾನು ಮತ್ತು ಗುಂಡಪ್ಪಾ ಇಬ್ಬರು ಮನೆಯ ಮುಂದಿನ ಫತ್ರಾ ಖೊಲ್ಲಿಯಲ್ಲಿ ಮಲಗಿದ್ದಾಗ ರಾತ್ರಿ ಯಾರೋ ಬಂದು ನನ್ನ ಮೈಮೇಲೆ ಗಾಸ್ಲೇಟ್ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋದರು ಅಂತಾ ತಿಳಿಸಿದ್ದು. ನನ್ನ ತಾಯಿಯವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಹೊಂದುತ್ತಾ ದಿನಾಂಕ:19/05/2019 ರಂದು ಬೆಳಿಗ್ಗೆ 0700 ಗಂಟೆಗೆ ಮೃತ ಪಟ್ಟಿರುತ್ತಾಳೆ. ನನ್ನ ತಾಯಿಗೆ ಯಾರೋ ದುರುದ್ದೇಶದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದ ಮೈಗೆ ಬೆಂಕಿ ಹಚ್ಚಿದ್ದು . ನನ್ನ ತಾಯಿ ಭಾರಿ ಸುಟ್ಟಗಾಯಗಳಿಂದ ಮೃತಪಟ್ಟಿರುತ್ತಾಳೆ ಕಾರಣ ತಾವು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ: ದಿನಾಂಕ:19/05/2019 ರಂದು 2ಶ್ರೀ ಸೂರ್ಯಕಾಂತ ತಂ ಸಿದ್ರಾಮಪ್ಪ ಸಾ: ಬೆಳಮಗಿ 1ರವರು ಠಾಣೆಗೆ ಹಾಜರಾಗಿ ನನ್ನ ಮಗ ಶರಣಬಸಪ್ಪನು ನಮ್ಮೂರಿನಲ್ಲಿ ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ:19/05/2019 ರಂದು ಸಾಯಂಕಾ 7-00 ಗಂಟೆ ಸುಮಾರಿಗೆ ವ್ಹಿ.ಕೆ ಸಲಗರ ಗ್ರಾಮದಲ್ಲಿ ಕೆಲಸವಿದೆ ಅಂತಾ ನಮಗೆ ಹೇಳಿ ಮೊಟಾರ್ ಸೈಕಲ್ ನಂಬರ್ ಕೆಎ32-ಇಡಿ3280 ನೇದ್ದರ ಮೇಲೆ ತನ್ನ ಗೆಳೆಯನಾದ ಶೌಕತಲಿ ತಂದೆ ಲಾಲಸಬ ನಾಗೂರೆ ಇವರ ಸಂಗಡ ಹೋಗಿದ್ದು. ಸಾಯಂಕಾಲ 7-20 ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ತಂದೆ ರೇವಣಸಿದ್ದಯ್ಯ ಜಂಗಿನಮಠ ಇವರು ನನ್ನ ಮೊಬೈಲಗೆ ಫೋನ ಮಾಡಿ ನಮ್ಮೂರಿನ ನಂದುಸ್ವಾಮಿ ಹೊಲದ ಹತ್ತಿರ ವ್ಹಿ.ಕೆ ಸಲಗರ ಕಡೆ ಹೋಗುವ ರೋಡಿನ ಮೇಲೆ ಶರಣಬಸಪ್ಪಾ ಹಾಗೂ ಶಾಕತಲಿ ಇಬ್ಬರಿಗೂ ಅಪಘಾತವಾಗಿದೆ ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ನಮ್ಮೂರಿನ ರಾಮು ಡೋಲೆ, ಚಂದ್ರಕಾಂತ ಹೇಡೆ, ಸಾಯಬಣ್ಣಾ ಡೋಲೆ, ಶೌಕತಲಿ ತಂದೆಯಾದ ಲಾಲಸಾಬ ನಾಗೂರೆ, ವಸೀಮ್ ನಾಗೂರೆ ಎಲ್ಲರೂ ಸೇರಿ ಒಂದು ಖಾಸಗಿ ಜೀಪನಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಾದ ಶರಣಪ್ಪ @ ಶರಣಬಸಪ್ಪನಿಗೆ ತಲೆಗೆ ಬಾರಿಒಳಪೆಟ್ಟಾಗಿ ಮೂಗಿನಿಂದ ಕಿವಿಯಿಂದ ಬಾಯಿ ಯಿಂದ ರಕ್ತ ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಹಾಗೂ ಶೌಕತಲಿ ಇತನಿಗೆ  ತೆಲೆಗೆ ಭಾರಿ ರಕ್ತಗಾಯ  ಮತ್ತು ಗುಪ್ತಗಾಯ ಹಾಗೂ ಎರಡು ಕಾಳುಗಳಿಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಅವನಿಗೆ ಆತನ ತಂದೆ ಲಾಲಸಾಬ ನಾಗೂರೆ ವಸೀಮ್ ಜಾಗಿರದಾರ ಇವರು ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಸದರಿ ಘಟನೆಯ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ಜಂಗಿನಮಠ ಇವರಿಗೆ ವಿಚಾರಿಸಲಾಗಿ ವ್ಹಿ.ಕೆ ಸಲಗರ ಗ್ರಾಮದಿಂದ ಬೆಳಮಗಿ ಗ್ರಾಮದ ಕಡೆಗೆ ಬರುವಾಗ ಒಂದು ಕ್ರೂಸರ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಾ ಬೆಳಮಗಿ ಕಡೆಗೆ ಹೊರಟು ನಂದುಸ್ವಾಮಿ ಹೊಲದ ಹತ್ತಿರ ಬೆಳಮಗಿ ಕಡೆಯಿಂದ ಮೊಟಾರ್ ಸೈಕಲ್ ನಂಬರ್ ಕೆಎ32ಇಡಿ3280 ನೇದ್ದಕ್ಕೆ ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನೋಡಿದಾಗ ಮೊಟಾರ್ ಸೈಕಲ್ ಸವಾರ ಶರಣಬಸಪ್ಪನಿಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಹಿಂಬದಿ ಸವಾರನಾದ ಶೌಕತಲಿ ತಲೆಗೆ ಹಾಗೂ ಎರಡು ಕಾಲುಗಳಿಗೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ತಿಳಿಸಿತ್ತಾರೆ. ಅಪಘಾತ ಪಡಿಸಿದ ಕ್ರೂಜರ್ ವಾಹನ ಸ್ಥಳದಲ್ಲಿಯೆ ಇದ್ದು ಅದರ ನಂಬರ್ ಪರಿಶೀಲಿಸಲಾಗಿ ಕೆಎ05-ಎಂಬಿ-9646 ಇದ್ದು ಅದರ ಚಾಲಕನು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ಕಾರಣ ಅಪಘಾತ ಪಡಿಸಿದ ಕ್ರೂಜರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ ಪೊಲೀಸ್ ಠಾಣೆ:
ವಾಹನ ಕಳುವು ಪ್ರಕರಣ:ದಿನಾಂಕಃ 18.05.2019 ರಂದು ಶ್ರೀ ಪಾಂಡುರಂಗ ತಂದೆ ಬೀಮರಾವ ಸಾ: ವೀರಭದ್ರೇಶ್ವರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ತನ್ನ ದ್ವಿ-ಚಕ್ರವಾಹನ ಟಿವಿಎಸ್ ಎಕ್ಸ.ಎಲ್  ವಾಹನ ಸಂಖ್ಯೆ ಕೆ.ಎ32ಇಕೆ6203 ನೇದ್ದನ್ನು ದಿನಾಂಕ 11.05.2019 ರಂದು ಮದ್ಯಾಹ್ನ ಹೆಡ್ ಪೋಷ್ಟ ಆಫೀಸ್ ಮುಂದುಗಡೆ ಗೇಟ ಹತ್ತಿರದಲ್ಲಿ ನಿಲ್ಲಿಸಿ ಆಫೀಸದಲ್ಲಿ ಹೋಗಿ ಹಣ ತುಂಬಿದ ನಂತರ ಬಂದು ನೋಡುವಷ್ಟರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇರಲಿಲ್ಲ ನಾನು ಹತ್ತಿರದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ ಇರಲಿಲ್ಲ ನನ್ನ ಮೋಟರ ಸೈಕಲ ಕಳುವು ಆಗಿರುತ್ತದೆ. ತಾವುಗಳು ಕಳುವಾದ ನನ್ನ ವಾಹನವನ್ನು ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ