POLICE BHAVAN KALABURAGI

POLICE BHAVAN KALABURAGI

18 February 2012

GULBARGA DIST REPORTED CRIMES

ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ
:ದಿನಾಂಕ 16-2-2012 ರಂದು ತಾಲೂಕಾ ಸಿಂದಗಿಯಿಂದ ನನ್ನ ಟಾಟಾ ಸುಮೋ ನಂಬರ ಕೆಎ-33 ಎಮ್-2723 ನೇದ್ದರಲ್ಲಿ ಕುಳಿತುಕೊಂಡು ನಾನು, ಮತ್ತು ನನ್ನ ತಮ್ಮ ಲತಿಪ ಇಬ್ಬರು ಕೂಡಿಕೊಂಡು ಶಹಾಪೂರಕ್ಕೆ ಹೊರಟಿದ್ದೆವು ಸಾಯಂಕಾಲ 6:45 ಪಿಮ್ ಕ್ಕೆ ಸಿಂದಗಿ ಬಿಟ್ಟು ಮಾವನೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಬರುತ್ತಿರುವಾಗ ಎದುರಿನಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆ ಎ 32 ಬಿ 2344 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಓಡಿಸುತ್ತಾ ಬಂದು ದ್ವಿ-ಚಕ್ರ ವಾಹನಕ್ಕೆ ಗಾಡಿಗೆ ಡಿಕ್ಕಿ ಹೋಡೆದಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಬದಿಯ ತೆಗ್ಗಿನಲ್ಲಿ ಹೋಗಿ ನಿಂತಿದೆ. ದ್ವಿಚಕ್ರ ವಾಹನಕ್ಕೆ ಗಾಡಿಗೆ ಡಿಕ್ಕಿ ಹೋಡೆದ ಕಾರು ಸ್ವಲ್ಪ ಮುಂದೆ ಹೋಗಿ ನಿಂತಿದೆ. ಕಾರ ಚಾಲಕನು ತನ್ನ ಕಾರನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಹೇಸರು ವಿಳಾಸ ಗೊತ್ತಿಲ್ಲಾ, ಅಂತಾ ಸುಭಾಶ ಎ.ಎಸ.ಐ ರವರು ಠಾಣೆ ಗುನ್ನೆ ನಂ:22/2012 ಕಲಂ 279 ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ದಿನಾಂಕ: 16/02/2012 ರಂದು ಬೆಳಿಗ್ಗೆ ಲಾರಿ ನಂ ಎಮ್, ಎಚ್. 12 ಎಪ್,ಸಿ 7640 ರ ಚಾಲಕ ಮಲ್ಲಿಕಾರ್ಜುನ ತಂದೆ ವಿರೇಶ ಜಮಾದಾರ ಸಾ: ನಾಗಲೇಗಾಂವ ಇತನು ಅತೀವೇಗದಿಂದ ಲಾರಿ ಚಲಾಯಿಸಿ ಸರಸಂಬಾ ಗ್ರಾಮ ಸರಕಾರಿ ಪ್ರೌಡ ಶಾಲೆಯ ಹತ್ತಿರ ರಸ್ತೆಯ ಪಕ್ಕದಲ್ಲಿನ ವಿದ್ಯತ ಕಂಬದ ವೈರಿಗೆ ಲಾರಿ ಸಿಕ್ಕಿಸಿಕೊಂಡು ಹಾಗೆ ಚಲಾಯಿಸಿಕೊಂಡು ಹೋಗಿರುವದರಿಂದ ಜೆಸ್ಕಾಂ ಕಂಪನಿಯ 3 ವಿದ್ಯತ ಕಂಬಗಳು ಮುರುದಿರುತ್ತವೆ. ಮತ್ತು ಒಂದು 25 ಕೆ,ವಿಎ (ಟಿ,ಸಿ) ಪರಿವರ್ತಕ ಹಾನಿಯಾಗಿರುತ್ತದೆ. ಮತ್ತು ಕಸ್ತೂರಿಬಾ ಬಾಲಿಕಾ ಶಾಲೆಯಲ್ಲಿನ ಕಂಪ್ಯೂಟರ ಸುಟ್ಟಿದಲ್ಲದೆ ಸರಕಾರಿ ಪ್ರೌಡ ಶಾಲೆಯಲ್ಲಿ ವಿದ್ಯೂತ ಉಪಕರಣಗಳು ಸಹ ಸುಟ್ಟು ಹೋಗಿರುತ್ತವೆ ಅಂತಾ ಶ್ರೀ ಅಶೋಕ ಕುಮಾರ ಗುಡೂರೆ ಜೆಸ್ಕಂ ಶಾಖಾಧಿಕಾರಿಗಳು ಸರಸಂಬಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 03/2012 ಕಲಂ 279, 427, ಐಪಿಸಿ ಮತ್ತು ಕೆ,ಪಿ,ಡಿ,ಎಲ್, ಎಕ್ಟ -1989 2(ಎ) (ಬಿ) ಸಂಗಡ 187 ಐ,ಎಮೆ್,ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಹರಣ ಪ್ರಕರಣ:
ಚಿತ್ತಾಪೂರ ಠಾಣೆ :
ಶ್ರೀ ಶರಣಪ್ಪ ತಂದೆ ನಿಂಗಪ್ಪ ಪುಜಾರಿ ಸಾ:ಕದ್ದರಗಿ ರವರು ನನ್ನ ಮಗಳಾದ ರೇಣುಕಾ ವಯ:15 ವರ್ಷ ಇವಳಿಗೆ ಈಗ ಒಂದು ವರ್ಷದ ಹಿಂದೆ ಅನ್ವರ ತಂದೆ ಮಹೆಬೂಬ ಪಿಂಜಾರ ಇವನು ನನ್ನ ಮಗಳಿಗೆ ಆಗಾಗ ನೀರು ತರಲು ಹೋದಾಗ ಮತ್ತು ಹೊರಗೆ ಕೆಲಸಕ್ಕೆ ಹೋಗುವಾಗ ನನ್ನ ಮಗಳಿಗೆ ನೋಡಿ ಚುಡಾಯಿಸುವದು, ಮಾಡುತ್ತಿದ್ದು ಈ ವಿಷಯ ನನಗೆ ತಿಳಿದು ಅನವರ ಇವನಿಗೆ ಮತ್ತು ಅವನ ತಂದೆ ತಾಯಿಗೆ ಈ ರೀತಿ ಮಾಡುವದು ಸರಿಯಲ್ಲ ಅಂತಾ ತಿಳಿಸಿರುತ್ತೆನೆ ಆದರೆ ಆತನ ತಂದೆ ತಾಯಿಯವರು ನನ್ನ ಮಗ ಗಂಡಸು ಇದ್ದಾನೆ ನಿನ್ನ ಮಗಳಿಗೆ ಸರಿಯಾಗಿ ಇಟ್ಟುಕೊ ಅಂತಾ ಹೇಳಿದ್ದರು ದಿನಾಂಕ 16-2-2012 ರಂದು ಸಾಯಂಕಾಲ 7-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದವಾಖಾನೆಗೆ ಹೋದಾಗ ಅನ್ವರ ಇವನು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ನನ್ನ ಮಗ ಲವಕುಶ ವ;12 ವರ್ಷ ದವನು ನೋಡಿರುತ್ತಾನೆ ಅನ್ವರ ಇತನಿಗೆ ಅವನ ತಂದೆ ತಾಯಿಗಳು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಲು ಪ್ರಚೋದನೆ ನೀಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ. 17/2012 ಕಲಂ 366 (ಎ), 109, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.