POLICE BHAVAN KALABURAGI

POLICE BHAVAN KALABURAGI

06 March 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 05/03/2014 ರಂದು 04:30 ಪಿ.ಎಂ ಕ್ಕೆ ಖಚಿತವಾದ ಬಾತ್ಮಿ ದೊರೆತ್ತಿದ್ದೆನೆಂದೆರೆ, ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಆದರ್ಶ ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಕಂಪೌಂಡ ಆವರಣದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದವರ ಮೇಲೆ ಸಿಬ್ಬಂದಿಯವರೊಂದಿಗೆ 05:00 ಪಿ.ಎಂ. ಕ್ಕೆ ದಾಳಿ ಮಾಡಿ 05 ಜನ ಆರೋಪಿತರಾದ 1. ವಿಜಯಕುಮಾರ ತಂದೆ ಮನೋಹರ ಪುಗಾಳೆ ಸಾಃ ರಂಗೀನ್ ಮಜೀದ್ ಮೋಮಿನಪೂರ ಗುಲಬರ್ಗಾ 2. ಶಂಭುಲಿಂಗಪ್ಪ ತಂದೆ ಶಿವಶರಣಪ್ಪಾ ಪೊಲೀಸ್ ಬಿರಾದಾರ  ಸಾಃ ಭೂಸಣಗಿ 3. ಮಹಾಂತಗೌಡ ತಂದೆ ಮಲ್ಲಣ್ಣಗೌಡ ಪಾಟೀಲ ಸಾಃ ಆದರ್ಶ ನಗರ ಗುಲಬರ್ಗಾ 4. ದಿಗಂಬರ ತಂದೆ ಬಾಲಚಂದ್ರರಾವ ಕುಲಕರ್ಣಿ  ಸಾಃ ಆದರ್ಶ ನಗರ ಗುಲಬರ್ಗಾ 5. ಪರಮೇಶ್ವರ ತಂದೆ ಶರಣಪ್ಪ ಶೇಖರ  ಸಾಃ ಸಂಜೀವ ನಗರ ಗುಲಬರ್ಗಾ ಇವರುಗಳನ್ನು ಹಿಡಿದು ಸದರಿಯವರಿಂದ  ಒಟ್ಟು 44,000/- ರೂ. ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿತ್ತಾಪೂರ ಠಾಣೆ : ಅರುಣಕುಮಾರ ತಂದೆ ಅಯ್ಯಣ್ಣ ಸಾ|| ಗುಂಡಗುರ್ತ್ತಿ ತಾ||ಚಿತ್ತಾಪೂರ ಇವರು ದಿನಾಂಕ 11-02-2014 ರಂದು 12 ಗಂಟೆ ಸುಮಾರಿಗೆ ನನ್ನ ಅಕ್ಕನವರಿಗೆ ಆರಾಮ ಇಲ್ಲದ ಕಾರಣ ನನ್ನ ಭಾವ ಸುರೇಶ್ ಇವರು ತನ್ನ ಮೋಟರ್ ಸೈಕಲ್ ನಂ ಕೆ.ಎ 32 ಇ.ಡಿ 2745 ನೇದ್ದರ ಮೇಲೆ ಕೂಡಿಸಿಕೊಂಡು ಚಿತ್ತಾಪೂರ ದಿಂದ ಗುಲಬರ್ಗಾಕ್ಕೆ ಕರೆದುಕೊಂಡು ಬರುವಾಗ ಚಿತ್ತಾಪೂರ ಬಸ್ಸ ಡಿಪೊ ಮುಖ್ಯರಸ್ತೆಯಲ್ಲಿ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸುಕೊಂಡು ಹೊಗುವಾಗ ನಮ್ಮ ಅಕ್ಕ ಈಕೆಯು ಮೋಟರ್ ಸೈಕಲ್ ಮೇಲಿಂದ ಬಿದ್ದಿರುತ್ತಾರೆ ಅಂತ ನನ್ನ ಭಾವ  ಪೋನ್ ಮುಖಾಂತರ ತಿಳಿಸಿದ್ದಾಕ್ಕಾಗಿ ನಾನು ಮತ್ತು ನಮ್ಮ ತಂದೆ ತಾಯಿ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದೇವು ನಾವು ಬರುವುದಕಿಂತ ಮುಂಚೆ ಯಾವುದೋ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಾವೆಲ್ಲರು ಬಂದು ನೋಡಲಾಗಿ ನಮ್ಮ ಅಕ್ಕನಿಗೆ ತಲೆಯ ಹಿಂಭಾಗಕ್ಕೆ ಬಾರಿ ರಕ್ತಗಾಯ ಮತ್ತು ಒಳಪೆಟ್ಟು ಗಾಯ ಆಗಿರುತ್ತದ. ನನ್ನ ಅಕ್ಕ ಮೋಟರ ಸೈಕಲ್ ಮೇಲಿಂದ ಬಿದ್ದಾಗ 12:30 ಗಂಟೆ ಆಗಿರುತ್ತದೆ. ಸದರಿ ಉಪಚಾರ ಹೊಂದುತ್ತಾ ಇದ್ದ ಕಾರಣ ಅರಾಮ ಆಗಬಹುದೆಂದು ನಾವು ಯಾವುದೆ ಪಿಯರ್ಾಧಿ ಕೊಟ್ಟಿರುವುದಿಲ್ಲ. ಅಂತಾ ಉಪಚಾರ ಹೊಂದುತ್ತ ಇಂದು ದಿನಾಂಕ 04-03-2014 ಮಧ್ಯಾಹ್ನ 13-00 ಗಂಟೆಗೆ ಮೃತ ಪಟ್ಟಿರುತ್ತರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಪೀರಪ್ಪಾ ಕಟ್ಟಿಮನಿ, ಸಾಃ ಸಂಜೀವ ನಗರ ಗುಲಬರ್ಗಾ ಇವರು ದಿನಾಂಕ 27-12-2013 ರಂದು 7-30 ಪಿ.ಎಮ್ ಕ್ಕೆ ಗಾಯಾಳು ಲಕ್ಷ್ಮಿಬಾಯಿ ಇವಳು ಗಂಜ ಬಸ್ ನಿಲ್ದಾಣ ಹತ್ತಿರ ಇರುವ ಲಾಹೋಟಿ ಕಲ್ಯಾಣ ಮಂಟಪದ ಎದರುಗಡೆ ರೋಡಿನ ರಸ್ತೆ ದಾಟುತ್ತಿದ್ದಾಗ ಯಾವುದೊ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ತಲೆಗೆ ಭಾರಿ ಗುಪ್ತ ಪೆಟ್ಟಾಗಿ ಕೈಗಳಿಗೆ ತರಚಿದ ಅಂತ ವಗೈರೆ ಫಿರ್ಯಾದು ಸಾರಂಶದ ಮೇಲಿಂದ ಪ್ರಕರಣ ದಾಖಲಾಗಿದ್ದು ನಂತರ ಇಂದು ದಿನಾಂಕ 05-03-2014 ರಂದು 07-15 ಪಿ.ಎಮ್ ಕ್ಕೆ ಪ್ರಕರಣದ ಫಿರ್ಯಾದಿ ಚಂದ್ರಕಾಂತ ತಂದೆ ಪೀರಪ್ಪಾ ಕಟ್ಟಿಮನಿ, ಇವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದು ಸಾರಂಶವೆನಂದರೆ ದಿನಾಂಕ 27-12-2013 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿತ ತನ್ನ ತಾಯಿ ಲಕ್ಷ್ಮಿಬಾಯಿ ಇವಳನ್ನು ದಿನಾಂಕ 02-01-2014 ರಂದು ಹೆಚ್ಚಿನ ಉಪಚಾರಕ್ಕೆ ಸೋಲಾಪೂರಕ್ಕೆ ಕರೆದುಕೊಂಡು ಹೋಗಿ ಅಶ್ವಿನಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ದಿನಾಂಕ 04-01-2014 ರವರೆಗೆ ಚಿಕಿತ್ಸೆ ನೀಡಿದರು ಸಹ ತನ್ನ ತಾಯಿ ಲಕ್ಷ್ಮಿಬಾಯಿ ಇವಳಿಗೆ ಪ್ರಜ್ಞೆ ಬಂದಿರಲಿಲ್ಲ. ನಂತರ ಲಕ್ಷ್ಮಿಬಾಯಿ ಮುಂದಿನ ಚಿಕಿತ್ಸೆಗೆ ಹಣ ಕಟ್ಟುವಂತೆ ತಿಳಿಸಿದಾಗ ಫಿರ್ಯಾದಿ ಹತ್ತಿರ ಹಣ ಇರದೆ ಇರುವುದರಿಂದ ದಿನಾಂಕ 05-01-2014 ರಂದು ಲಕ್ಷ್ಮಿಬಾಯಿ ಇವಳನ್ನು ಸೋಲಾಪೂರದಿಂದ ಗುಲಬರ್ಗಾಕ್ಕೆ ತಂದು ಫಿರ್ಯಾದಿ ಮನೆಯಲ್ಲಿ ಹಾಕಿದಾಗ ಅದೇ ದಿನ ಸಂಚೆ 07-45 ಗಂಟೆಯ ಸುಮಾರಿಗೆ ಲಕ್ಷ್ಮಿಬಾಯಿ ಇವಳು ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣಿ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಶ್ರುತಿ ಗಂಡ ಗುರುರಾಜ ದೇಶಪಾಂಡೆ  ಸಾ;ಧನಗರಗಲ್ಲಿ ಬ್ರಹ್ಮಪೂರ ಗುಲಬರ್ಗಾ ಇವರನ್ನು  ದಿನಾಂಕ 19.11.2013 ರಂದು ಗುರು ಹಿರಿಯರೆಲ್ಲರೂ ಸೇರಿ ಗುರುರಾಜ ಕುಲಕರ್ಣಿಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿದ್ದು ಮದುವೆ ಆದ 1 ತಿಂಗಳು ನನ್ನೊಂದಿಗೆ ನನ್ನ ಗಂಡ ಚೆನ್ನಾಗಿದ್ದು ನಂತರ ನನ್ನ ಶೀಲದ ಮೇಲೆ ಸಂಶಯ ಪಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ  ದಿನಾಲು ಹೊಡೆಬಡೆ ಮಾಡಿ ಶಾರೀರಿಕವಾಗಿ ಹಿಂಸೆ ಕೊಡುತ್ತಿದ್ದರು. ಅಲ್ಲದೇ ನನ್ನ ತಂದೆ ತಾಯಿಯವರಿಗೂ ಕೂಡ ಸೂಳೇ ಮಕ್ಕಳೇ,ಬೋಸಡಿ ಮಕ್ಕಳೆ ಅಂತಾ ಬೈಯ್ಯುತ್ತಾನೆ. ಮತ್ತು ತವರು ಮನೆಯಿಂದ 3 ಲಕ್ಷ ವರದಕ್ಷಿಣೆ ಹಣ ತರುವಂತೆ ಹಿಂಸೆ ಕೊಡುತ್ತಿರುತ್ತಾನೆ. ದಿನಾಂಕ 28.02.2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ನನ್ನ ನಾದಿನಿ ರಮಾ ಇವರ ಮನೆ ಇರುವ  ವಿಠ್ಠಲ ನಗರಕ್ಕೆ ನನ್ನ ಗಂಡ ಗುರುರಾಜ ಇತನಿಗೆ ಕರೆಯಲು ಹೋದಾಗ ನಾದಿನಿ ರಮಾ ನನಗೆ ಒಳಗೆ ಕರೆದುಕೊಂಡು ಹೋಗಿ ನಮ್ಮ ತಂದೆಗೆ ಹೊರಗೆ ನಿಲ್ಲಿಸಿ ನನ್ನ ಗಂಡ ಗುರುರಾಜ ಬಾವ ಪ್ರಸನ್ನ್,  ನನ್ನ ನಾದಿನಿ ರಮಾ ಅವಳ ಗಂಡ ಲಕ್ಷ್ಮಿಕಾಂತ ಇವರೆಲ್ಲರೂ ಸೇರಿ ನನಗೆ ಬಾಯಿ ಮುಚ್ಚಿ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಕುರ್ಚಿಯನ್ನು ಮೈಮೇಲೆ ಎಸೆದಿದ್ದಾರೆ ನನ್ನ ತಂದೆಯ ಶರ್ಟ ಹಿಡಿದು ಎಳೆದಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಗೀತಾ ಗಂಡ ಶಿವಮೂರ್ತಿ ಹಯ್ಯಾಳಕರ ಸಾ; ಮನೆ ನಂ 20 ಜಿ.ಡಿ.ಎ ಸರ್ವೆ ನಂ 11 ಲೇಔಟ ಡಂಕಿನ ಬಾವಿ ಹಿಂದುಗಡೆ ಅಂಬಿಕಾ ನಗರ ಹತ್ತಿರ ಗುಲಬರ್ಗಾ ಹಾ;ವ; ಮನೆ ನಂ 1-972 ಪಿಲ್ಲೇಶ್ವರಿ ಮಂದಿರ ಹಿಂದುಗಡೆ 10 ನೇ ಕ್ರಾಸ ತಾರಫೈಲ ಬಡಾವಣೆ ರೈಲ್ವೆ ಸ್ಟೇಷನ ಎದುರುಗಡೆ ಗುಲಬರ್ಗಾ ಇವರಿಗೆ ದಿನಾಂಕ 22.06.2012 ರಂದು ನಮ್ಮ ಹಿರಿಯರೆಲ್ಲರೂ ಸೇರಿ ಹಿಂದೂ ಸಂಪ್ರದಾಯದಂತೆ ಶಿವಮೂರ್ತಿ ಹಯ್ಯಾಳಕರ  ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿದ್ದು ಇರುತ್ತದೆ. ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 6 ತೊಲೆ ಬಂಗಾರ ಒಂದು ಮೋಟಾರ ಸೈಕಲ ಹಿರೋ ಹೊಂಡಾ ಸ್ಲ್ಪೆಂಡರ  ಹಾಗೂ ಮನೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನ ಗಂಡ ಹಾಗೂ ಅವರ ಮನೆಯವರು ಒಂದು ವಾರದವರೆಗೆ ಚೆನ್ನಾಗಿದ್ದು ನಂತರ ನನ್ನ ಗಂಡ ಶಿವಮೂರ್ತಿ ಅತ್ತೆ ಲಕ್ಷ್ಮೀ @ ತಿಪ್ಪಮ್ಮ, ಬಾವ ರಾಜು, ನಾದಿನಿಯರಾದ ಕಮಲಾ ಗಂಡ ಶರಣಪ್ಪ ಶಿವಜ್ಯೋತಿ ನೆಗೆಣಿ ಮಲ್ಲೇಶ್ವರಿ ಇವರೆಲ್ಲರೂ ಕೂಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುವದಲ್ಲದೇ ಅಡುಗೆ ವಿಷಯದಲ್ಲಿ ಜಗಳ ತೆಗೆದು ಹೊಡೆಬಡೆ  ಮಾಡಿರುತ್ತಾರೆ. ಮತ್ತು ತವರು ಮನೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು  ಬಾ ಅಂತಾ ಹಿಂಸೆ ಕೊಟ್ಟು ದಿನಾಂಕ 23.02.2014 ರಂದು ರಾತ್ರಿ 8 ಗಂಟೆಗೆ ನನ್ನ ಗಂಡ ಶಿವಮೂರ್ತಿ ಇತನು ನನ್ನ ತವರು ಮನೆಗ ಬಂದು ನಮ್ಮ ತಾಯಿ ತಂದೆ ಹೇಳಿದ್ದಾರೆ ಮತ್ತು ನಾನು ಕೂಡ ಹೇಳುತ್ತಿದ್ದೇನೆ. ನನಗೆ 1 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ತಂದು ಕೋಡಬೇಕು ಅಂದರೆ ಮಾತ್ರ ನಮ್ಮ ಮನೆಗೆ ನಿನಗ ಕರೆದುಕೊಂಡು ಹೋಗುತ್ತೇವೆ. ಇಲ್ಲವಾದರೆ ಇಲ್ಲೆ ಬಿದ್ದು ಸಾಯಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.