POLICE BHAVAN KALABURAGI

POLICE BHAVAN KALABURAGI

31 January 2013

GULBARGA DISTRICT REPORTED CRIMES


ಮಹಿಳಾ ಪೊಲೀಸ್ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ.ನ್ಯಾಯಾಲಯದಿಂದ ಖಾಸಗಿ ದೂರು ಪತ್ರ ನಂ.383/2013 ದಿನಾಂಕ:17.01.2013  ನೇದ್ದರ ಆದೇಶದ ಸಾರಂಶದವೇನೆಂದರೆ, ಶ್ರೀಮತಿ  ಶೀತಲ ಗಂಡ ರಾಘವೇಂದ್ರ ಶಿಂತರೆ, ಸಾ||ಪ್ರಗತಿ  ಕಾಲೋನಿ ಗುಲಬರ್ಗಾರವರು ನನಗೆ ದಿನಾಂಕ:12-06-2011 ರಂದು ರಾಘವೇಂದ್ರ ತಂದೆ ಲಕ್ಷ್ಮಣರಾವ ಸಿಂತ್ರೆ ಜೆ.ಸಿ.ನಗರ ಬೆಂಗಳೂರು ಇತನೊಂದಿಗೆ ಸಂಪ್ರದಾಯದಂತೆ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ನಗದು ಹಣ ಬಂಗಾರ ಇತರೆ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ತವರು ಮನೆಯಿಂದ ಮನೆ ಖರೀದಿಸಲು 10 ಲಕ್ಷ ರೂಪಾಯಿಗಳು ತೆಗೆದುಕೊಂಡು ಬರಬೇಕು ಅಂತಾ ಹೊಡೆಬಡೆ ಮಾಡಿದ್ದರು, ಈ ವಿಷಯ ತನ್ನ ತಂದೆ ತಾಯಿಗೆ ತಿಳಿಸಿ, ಮೊದಲನೇ ದೀಪಾವಳಿ ಹಬ್ಬಕ್ಕೆ ನನ್ನ ಗಂಡ ನನ್ನ ತವರು ಮನೆಗೆ ಬಂದಿರುವಾಗ 2 ಲಕ್ಷ ರೂಪಾಯಿ ಕೊಟ್ಟು, ಇನ್ನೂ ಮುಂದೆ ಹಣ ಕೊಡುವದು ಆಗುವದಿಲ್ಲ ಅಂತಾ ನನ್ನ ತವರು ಮನೆಯವರು ತಿಳಿಸಿದ್ದರು. ನಂತರ ನಮಗೆ ಒಂದು ಗಂಡು ಮಗು ಒಂದು ಹೆಣ್ಣು ಮಗು ಅವಳಿ ಮಕ್ಕಳಾಗಿರುತ್ತವೆ. ನನ್ನ ಮಕ್ಕಳೊಂದಿಗೆ ಗಂಡನ ಮನೆ ಬೆಂಗಳೂರಿಗೆ ಹೋಗಿದ್ದಾಗ ಆವಾಗಲೂ ಸಹ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದರೂ. ನನ್ನ ತಂದೆ ತಾಯಿ ಬೆಂಗಳೂರಿಗೆ ಬಂದು ಮಾವ ಲಕ್ಷಣ ಇತನಿಗೆ ಸಾದ್ಯವಾದಷ್ಟು ಬೇಗ ಹಣ ತಂದೆ ಕೊಡುತ್ತೇವೆ. ನಮ್ಮ ಮಗಳಿಗೆ ಇಟ್ಟುಕೊಳ್ಳಿರಿ ಅಂತಾ ಹೇಳಿದ್ದರಿಂದ ಒಂದು ತಿಂಗಳವರೆಗೆ ಇಟ್ಟುಕೊಂಡಿದ್ದರು. ನನ್ನ ತಂದೆ ತಾಯಿಗೆ ಹಣ ತಂದು ಕೊಡಲು ಆಗದೇ ಇದ್ದುದರಿಂದ, ಮತ್ತೆ ಹೊಡೆ ಬಡೆ ಮಾಡಿರುತ್ತಾರೆ. ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿದ್ದರು ಸಹ ನನ್ನ ಗಂಡ  ಮನೆಗೆ ಕರೆದುಕೊಂಡು ಹೋಗಿರುವದಿಲ್ಲ. ಅನ್ನುವ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:04/2013 ಕಲಂ 498 (ಎ). 323. 506. 511 ಐಪಿಸಿ ಮತ್ತು 3 & 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:29-01-2013 ರಂದು ಮಧ್ಯಾಹ್ನ ನನ್ನ ತಂಗಿಯಾದ ನಂದಿತಾ  (ಹೆಸರು ಬದಲಾಯಿಸಿದೆ) 19 ವರ್ಷ ಇವಳು ಹೊಲದಿಂದ ಬರುತ್ತಿರುವಾಗ ಶಾಮರಾವ ತಂದೆ ಮಲಕಾಜಪ್ಪ ಸಾತನೂರ ಮತ್ತು ಬಸವರಾಜ ಬಸ್ಸು @ ತಂದೆ ಪರಮೇಶ್ವರ ಡೊಳ್ಳಾ ಸಾ:ಇಬ್ಬರೂ ಹೊಸಳ್ಳಿ ಗ್ರಾಮದವರು ಹಾಗೂ ಇನ್ನಿಬ್ಬರು ಹೆಸರು ಗೊತ್ತಿರದವರು ಕೂಡಿಕೊಂಡು ಜಬರದಸ್ತಿಯಿಂದ ಬುಲೆರೋ ಜೀಪಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದು, ಅಪಹರಣ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಿಬೇಕು ಅಂತ ಹುಡಗಿಯ ಅಣ್ಣ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ 366 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಹಲ್ಲೆಗೊಳಗಾದ ವ್ಯಕ್ತಿ ಮೃತ ಪಟ್ಟ ಬಗ್ಗೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ:ನನ್ನ ಅಣ್ಣನ ಮಗನಾದ ಗಣೇಶ ತಂದೆ ಮಲ್ಲಿಕಾರ್ಜುನ ಕಡೆಹಳ್ಳಿ ವಯಾ||16 ವರ್ಷ ಸಾ||ಬೋರಾಭಾಯಿ ನಗರ ಗುಲಬರ್ಗಾ ಇತನ ಜೋತೆ ಕಾಶಿನಾಥ ಬೇಕರಿ @ ಕಾಶಿನಾಥ ಹಾದಿಮನಿ ಸಾ|| ಬೋರಾಬಾಯಿ ಬಡಾವಣೆಯವನ ಜೋತೆ ದಿನಾಂಕ:30-01-2013 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಬಾಯಿ ಮಾತಿನ ತಕರಾರು ಆಗಿತ್ತು, ಗಣೇಶನು ನಮ್ಮ ಬಡಾವಣೆಯ ಶಂಕ್ರೆಪ್ಪಾ ಬಂದರವಾಡ ಇವರ ಮನೆಯ ಮುಂದೆ ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ಕುಳಿತಾಗ, ಕಾಶಿನಾಥ ಬೇಕರಿ @ ಕಾಶಿನಾಥ ಹಾದಿಮನಿ ಇತನು ಬಂದು, ಕೊಲೆ ಮಾಡುವ ಉದ್ದೇಶದಿಂದ ತಲವಾರದಿಂದ ಗಣೇಶನ ಹಣೆಯ ಮೇಲೆ, ತುಟಿಯ ಮೇಲೆ, ಎರಡು ಕೈಗಳ ಮೇಲೆ ಹೊಡೆದು ಭಾರಿ ರಕ್ತಗಾಯದಿಂದ ಬೇಹುಶ್ ಇರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹಣಮಂತ ತಂದೆ ಶಿವಶರಣಪ್ಫಾ ಕಡೆಹಳ್ಳಿ ಸಾ|| ಭೊರಾಭಾಯಿ ನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:9/2013 ಕಲಂ 307, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿತ್ತು. ದಿನಾಂಕ 30-01-2013 ರಂದು ರಾತ್ರಿ 11-00  ಗಂಟೆಗೆ ಹೆಚ್ಚಿನ ಉಪಚಾರಕ್ಕಾಗಿ ಸೋಲಾಪೂರಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರಿಂದ ಕಲಂ 302 ಐಪಿಸಿ ಅಳವಡಿಸಿಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:ಮಾನ್ಯ ನ್ಯಾಯಾಲಯದ ಖಾಸಗಿ ದೂರು ನಂ:01/2013 ನೇದ್ದು ವಸೂಲಾಗಿದ್ದರ ಅರ್ಜಿ ಸಾರಾಂಶವೆನೆಂದರೆ. ಶ್ರೀ,ಭಗವಂತ ತಂದೆ ಅಪ್ಪಣ್ಣಾ ಕಂದಾರೆ ವಯಾ|| 41 ವರ್ಷ ಉ|| ಪತ್ರಕರ್ತ  ಸಾ|| ತೆಲಸಂಗ  ತಾ|| ಅಥಣಿ ಜಿ|| ಬೆಳಗಾಂವ ರವರಿಗೆ, ಶ್ರೀ ಸಂಗಪ್ಪ ತಂದೆ ನಾಗಪ್ಪಾ ಶಿವಣಗಿ ವಯ|| 56 ವರ್ಷ ಉ|| ಅಧಿಕ್ಷಕರು  ಕೈಗಾರಿಕಾ ಮತ್ತು ವಾಣಿಜ್ಯ  ಕೇಂದ್ರ  ಗುಲಬರ್ಗಾ ಸಾ|| ಐ.ಟಿ.ಐ ಕಾಲೇಜ ಪಕ್ಕದಲ್ಲಿ ಜೇವರ್ಗಿ  ಕ್ರಾಸ್ ಗುಲಬರ್ಗಾರವರು  ದೂರುದಾರರಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿರುತ್ತಾರೆ.ಅಂತಾ ನ್ಯಾಯಾಲಯದಿಂದ ಖಾಸಗಿ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:22/2013, ಕಲಂ 323, 341, 504, 506  ಐಪಿಸಿ & 3(1)(10) ಎಸ್‌.ಸಿ/ಎಸ್‌.ಟಿ ಪಿ.ಎ ಆಕ್ಟ್ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಮಲಕಪ್ಪ ತಂದೆ ಯಮನಪ್ಪ ಕಟ್ಟಿಮನಿ ಸಾ: ಎಸ್ ಮಳ್ಳಿ ರವರು ನನ್ನ ಮಗನಾದ ಯಮನಪ್ಪಾ ಇತನು ದಿನಾಂಕ:28-01-2013 ರಂದು ಮುಂಜಾನೆ 10-30 ಗಂಟೆಗೆ ಮಳ್ಳಿ ಸರಕಾರಿ ಪ್ರೌಡ ಶಾಲೆಯ ಎದುರಿನಿಂದ ನಡೆದುಕೊಂಡು ಬರುವಾಗ ಟಾಟಾ-ಎಸಿ ನಂ ಕೆಎ-28-ಎ-4415 ನೇದ್ದರ ಚಾಲಕನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಯಮನಪ್ಪನಿಗೆ ಡಿಕ್ಕಿ ಪಡಿಸಿದ್ದರಿಂದ ಅವನ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಹಾಗೂ ಡೊಂಕಕ್ಕೆ, ಎದೆಗೆ, ಭಾರಿ ಗುಪ್ತ ಪೆಟ್ಟಾಗಿದ್ದು, ವಾಹನ ಚಾಲಕನು ಅವನಿಗೆ ಎಬ್ಬಿಸಿ  ಅವನಿಗೆ ಆದ ಗಾಯವನ್ನು ನೋಡಿ ತನ್ನ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಯಮನಪ್ಪ ಇತನಿಗೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂತಾ ಆತನ ತಂದೆಯಾದ ಮಲಕಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:19/2013,ಕಲಂ,279, 304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 January 2013

GULBARGA DISTRICT REPORTED CRIME


ಜೂಜಾಟ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ:ನಿಂಬರ್ಗಾ ಪೊಲೀಸ್ ಠಾಣೆಯ ಪಿ.ಎಸ.ಐ ರವರಾದ ಶ್ರೀ ರವೀಂದ್ರನಾಥ ಮತ್ತು ಠಾಣೆಯ ಸಿಬ್ಬಂದಿಯವರು ದಿನಾಂಕ 30/01/2013 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಹಿತ್ತಲ ಶಿರೂರ ಗ್ರಾಮದ ದೇವಸ್ಥಾನದ ಮುಂದೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿರುವವರ ಮೇಲೆ  ದಾಳಿ ಮಾಡಿ ಬಸಲಿಂಗಪ್ಪ ತಂದೆ ಕಲ್ಯಾಣಪ್ಪ ಉಳ್ಳೆ ವ|| 52 ವರ್ಷ|| ಕೂಲಿಜಾ|| ಹಟಗಾರಸಾ||ಹಿತ್ತಲಶಿರೂರ, ಶರಣಪ್ಪ ತಂದೆ ಹಾವಣ್ಣಾ ಪೂಜಾರಿ ವ|| 45 ವರ್ಷಜಾ|| ಕುರುಬ|| ಕೂಲಿ ಕೆಲಸಸಾ|| ಹಿತ್ತಲ ಶಿರೂರ, ಶಿವರಾಯ ತಂದೆ ಕಲ್ಲಪ್ಪ ಭದ್ರೆ ವ|| 35 ವರ್ಷಜಾ|| ಪರಿಶಿಷ್ಟ, ||ಕೂಲಿ ಕೆಲಸಸಾ|| ಹಿತ್ತಲ ಶಿರೂರ,  ಉಮಾಕಾಂತ ತಂದೆ ಲಕ್ಷ್ಮಣ ವಡ್ಡರ ವ|| 24 ವರ್ಷ,ಜಾ|| ವಡ್ಡರ|| ಕೂಲಿಕೆಲಸ, ಸಾ|| ಹಿತ್ತಲ ಶಿರೂರ,ರಾಮಚಂದ್ರ ತಂದೆ ಶರಣಪ್ಪ ಜಮಾದಾರ ವ|| 68 ವರ್ಷಜಾ|| ಕಬ್ಬಲಿಗ, || ಕೂಲಿಕೆಲಸಸಾ|| ಹಿತ್ತಲ ಶಿರೂರ,  ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂ: 08/2013 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 

29 January 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
7 ಜನ ದರೋಡೆಕೋರರ ಬಂಧನ, ಬಂಧಿತರಿಂದ 1 ನಾಡ ಪಿಸ್ತೂಲ್,       9 ಮಾರಕ ಆಯುಧಗಳು, ಇಂಡಿಕಾ ಕಾರ, ನಗದು ಹಣ, ಮೋಟಾರ ಸೈಕಲಗಳು ವಶ.
ದಿನಾಂಕ:29-01-2013 ರಂದು 00-30 ಗಂಟೆಗೆ ಗುಲಬರ್ಗಾ-ಸೇಡಂ ರಸ್ತೆಯಲ್ಲಿರುವ ಜಿ.ವ್ಹಿ.ಆರ್. ಶೈನ್ ಬೋರ್ಡ ಹತ್ತಿರ ರೋಡಿನ ಮೇಲೆ 7 ಜನರು ಹೋಗಿ ಬರುವ ಸಾರ್ವಜನಿಕರಿಗೆ ತಡೆದು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಶ್ರೀ, ಎನ್. ಸತೀಶಕುಮಾರ ಐ.ಪಿ.ಎಸ್,. ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಎಸ್. ಅಸ್ಲಾಂ ಭಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ,ಎಸ್.ಎಸ್. ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿ.ಐ. ಬ್ರಹ್ಮಪೂರ ಠಾಣೆ, ಶ್ರೀ ಶ್ರೀಮಂತ ಇಲ್ಹಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಶ್ರೀ, ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವಿದ್ಯಾಲಯ ಠಾಣೆ, ಪ್ರದೀಪಕುಮಾರ ಭಿಸೆ ಪಿ.ಎಸ್.ಐ (ಅ.ವಿ) ವಿವಿ ಠಾಣೆ ಮತ್ತು ವಿ.ವಿ.ಠಾಣೆ, ಎಂ.ಬಿ ನಗರ ಠಾಣೆ ಸಿಬ್ಬಂದಿಯವರಾದ ರಾಜಶೇಖರ, ಸುರೇಶ, ಮಶಾಕ, ಯಲ್ಲಪ್ಪ, ಸುರೇಶ, ಅಜರುದ್ದೀನ್, ಅಣ್ಣಪ್ಪಾ, ಮಲ್ಲಿನಾಥ, ವೇದರತ್ನಂ, ವೀರಶೇಟ್ಟಿ, ಬಲರಾಮ, ಪ್ರಭಾಕರ, ಶಂಕರ, ಶ್ರೀನಿವಾಸ ರೆಡ್ಡಿ, ಸಿದ್ರಾಮಯ್ಯ, ಗಂಗಾಧರ, ನದಾಫ, ತಾರಾಸಿಂಗ, ಸಂಜೀವಕುಮಾರ, ಪಂಡಿತ ಮತ್ತು ಶಿವಪ್ಪ ಮುಖ್ಯ ಪೇದೆಗಳು ಡಿ.ಎಸ್.ಬಿ ಘಟಕ, ರವರು ಎಲ್ಲರೂ ಕೂಡಿಕೊಂಡು 7 ಜನ ದರೋಡೆಕೋರರ ಮೇಲೆ ದಾಳಿ ಮಾಡಿ,  1) ಗಜಾನಂದ ತಂದೆ ಅರುಣಕುಮಾರ ದೇಶಪಾಂಡೆ ವ:25ವರ್ಷ ಉ:ವಿದ್ಯಾರ್ಥಿ, ಸಾ|| ರಾಮನಗರ ಹತ್ತಿರ ಗುಲಬರ್ಗಾ,  2) ಪ್ರಶಾಂತ @ ಸೋನು  ಡಾಬರ ತಂದೆ ಮಹೇಶ ಹಳ್ಳಿ ವ:19 ವರ್ಷ ಜ್ಯಾತಿ:ಲಿಂಗಾಯತ ಉ: ವಿದ್ಯಾರ್ಥಿ, ಸಾ:ಕೆ.ಎಚ್.ಬಿ ಕಾಲೋನಿ ಗುಲಬರ್ಗಾ, 3) ಮಹ್ಮದ ಇಸಾಮುದ್ದೀನ್ ತಂದೆ ಮಹ್ಮದ ದಸ್ತಗೀರ ಶೇಖ್ ವ:19 ವರ್ಷ ಜ್ಯಾತಿ:ಮುಸ್ಲಿಂ ಉ:ವಿಧ್ಯಾರ್ಥಿ, ಸಾ:ವಿದ್ಯಾ ನಗರ ಗುಲಬರ್ಗಾ, 4) ಅಭಿಶೇಕ @ ಅಭಿ ತಂದೆ ಪ್ರಭುರಾವ ಹೊಸಮನಿ ವ:18 ವರ್ಷ ಜ್ಯಾತಿ: ಎಸ್.ಸಿ ಉ:ವಿಧ್ಯಾರ್ಥಿ, ಸಾ:ಕೋಟನೂರ (ಡಿ) ಗುಲಬರ್ಗಾ, 5) ರಾಜಶೇಖರ @ ರಾಜು ತಂದೆ ಧಾನಪ್ಪ ಮಾಳಗಿ ವ:25 ವರ್ಷ ಜ್ಯಾತಿ: ಲಿಂಗಾಯತ ಉ:ವಿಧ್ಯಾರ್ಥಿ, ಸಾ:ಎನ್.ಜಿ.ಓ ಕಾಲೋನಿ ಗುಲಬರ್ಗಾ, 6) ನಾಗರಾಜ ತಂದೆ ವೆಂಕಟೇಶ ಯಾಧವ ವ:19 ವರ್ಷ ಜ್ಯಾತಿ:ಯಾಧವ ಸಾ:ಜಿ.ಡಿ.ಎ ಕಾಲೋನಿ ಗುಲಬರ್ಗಾ, 7) ಜಗತಸಿಂಗ ತಂದೆ ಸುರೇಂದ್ರಸಿಂಗ  ವ:30 ವರ್ಷ ಸಾ:ಪಂಚಶೀಲ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು, ಅವರ ವಶದಿಂದ 1 ನಾಡ ಪಿಸ್ತುಲು, 9 ತಲವಾರಗಳು, 1 ಟಾಟಾ ಇಂಡಿಕಾ ವಿಸ್ತಾ ಕಾರ ನಂ.ಕೆಎ:33 ಎಮ್-1759, 3 ಮೋಟಾರ ಸೈಕಲಗಳು, 3 ಬಡಿಗೆಗಳು ಹಾಗೂ 39,000/-ರೂ ನಗದು ಹಣ ಹೀಗೆ ಒಟ್ಟು 4,00,000/- ರೂಪಾಯಿಗಳ  ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.  ಈ ಆರೋಪಿತರು ಗುಲಬರ್ಗಾ ನಗರದ ನಿರ್ಜನ ಪ್ರದೇಶದಲ್ಲಿ ಮತ್ತು ಹೊರ ವಲಯದಲ್ಲಿ ತಿರುಗಾಡುತ್ತಿದ್ದ ಸಾರ್ವಜನಿಕರನ್ನು ಲಾಂಗ, ಮಚ್ಚುಗಳಿಂದ ಹೆದರಿಸಿ ಹಣ ಲೂಟಿ ಮಾಡುವುದು ಮತ್ತು ಹೊಲ ಮತ್ತು ಪ್ಲಾಟಗಳಿಗೆ ಸಂಬಂಧಪಟ್ಟಂತೆ ವ್ಯಾಜ್ಯಗಳನ್ನು ನಾವೇ ಬಗೆಹರಿಸುತ್ತೇವೆ ಅಂತಾ ಹೆದರಿಸಿ ಹಣ ವಸೂಲು ಮಾಡುವುದು, ಮತ್ತು ವಾಯು ವಿಹಾರಕ್ಕೆ ದಂಪತಿಗಳು ಹೋದಾಗ ಅವರನ್ನು ಹೆದರಿಸಿ ಹಣ ವಸೂಲು ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಮಾನ್ಯ ಶ್ರೀ ಎನ್.ಸತೀಶಕುಮಾರ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು, ಈ ತನಿಖಾ ತಂಡಗಳ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

GULBARGA DISTRICT REPORTED CRIME


ಜಬರದಸ್ತಿಯಿಂದ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ್ ಠಾಣೆ ಗುಲಬರ್ಗಾ: ಶ್ರೀ ಮಹಮ್ಮದ ಇಲಿಯಾಸ ತಂದೆ ತಂದೆ ಮಹಮ್ಮದ ಅಬ್ದುಲ ಕರೀಮ ಶೇಖ ವಯಾ:47 ವರ್ಷ ಉ:ಒಕ್ಕಲುತನ ಸಾ:ಖಾದ್ರಿ ಚೌಕ ಆಳಂದ ರೋಡ ಗುಲಬರ್ಗಾರವರು ನನ್ನದು ಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ: 186/4 ನೇದ್ದರ ಹೋಲವಿದ್ದು, ಅದರಲ್ಲಿ 2 ಎಕರೆ ಜಮೀನು ನನ್ನ ಒಡತಕ್ಕೆ ಸೇರಿರುತ್ತದೆ. ದಿನಾಂಕ-01/09/2012 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು ಹೋಲದಲ್ಲಿದ್ದಾಗ ಅಸ್ಲಾಂ ತಂದೆ ಮಹಮ್ಮದ ಬಾಸೀರ ಸಾಬ ಸಾ:ಮಿಜಗುರಿ ಮೋಮಿನಪುರ ಗುಲಬರ್ಗಾಶೇಖ ಜಾಫರ ಹುಸೇನ ತಂದೆ ಮಹಮ್ಮದ ಹುಸೇನ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾಸೈಯ್ಯದ ಸರ್ವರ ಅಲಿ ತಂದೆ ಸೈಯ್ಯದ ಮೌಲಾ ಅಲಿ ಸಾ:ಬಸವೇಶ್ವರ ಕಾಲೋನಿ ಗುಲಬರ್ಗಾ ಇವರು ನಮ್ಮ ಹೋಲದಲ್ಲಿ ಬಂದು ಜಬರದಸ್ತಿಯಿಂದ ನನಗೆ ಟವೇರಾ ಕಾರ ನಂ ಕೆಎ-32/ಎಂ-7888 ನೇದ್ದರಲ್ಲಿ ಹಾಕಿಕೊಂಡು, ಗುಲಬರ್ಗಾ ಸಬ್ ರಿಜಿಸ್ಟರ ಆಫೀಸಗೆ ಸಾಯಾಂಕಾಲ 4:00 ಗಂಟೆ ಸುಮಾರಿಗೆ ಸ್ಟಾಂಪ ಪೇಪರ ಮೇಲೆ ಸಹಿ ಮತ್ತು ರುಜು ಮಾಡಿಸಿಕೊಂಡಿರುತ್ತಾರೆ. ಅಲ್ಲದೇ ಈ ವಿಷಯ ಯಾರಿಗಾದರು ಹೇಳಿದರೆ ಮತ್ತು ಕೇಸು ಮಾಡಿದರೇ ನಿನಗೇ ಮತ್ತು ನಿನ್ನ ಮಗ, ಮತ್ತು ಮಗಳಿಗೆ ಜೀವ ಸಹಿತ ಬೀಡುವುದಿಲ್ಲಾ ಅಂತಾ ಮಾರಕ ಅಸ್ತ್ರಗಳು ತೋರಿಸಿ ಹೇದರಿಸಿರುತ್ತಾರೆ. ಕಾರಣ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಆಂತಾ ಮಹಮ್ಮದ ಇಲಿಯಾಸ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 447 364 (ಎ), 420, 504 506 (2) ಸಂಗಡ 34 ಐ.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 January 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಮ್ಮನಾದ ದೇವಿದಾಸ ಮತ್ತು ಅವನ ಮಗನಾದ ಕಮಲ ಇಬ್ಬರೂ ಕೂಡಿಕೊಂಡು ಹೋಲದಲ್ಲಿಯ ಜೋಳ ಕಾಯಲು ಹೋದಾಗ ಶಂಕರ ತಂದೆ ರಾಮಚಂದ್ರ ಚವ್ಹಾಣ, ಗೋವಿಂದ ತಂದೆ ಲಚ್ಚು ರಾಠೋಡ, ಈಶ್ವರ ತಂದೆ ಬದ್ದು ರಾಠೋಡ, ರವರು ನಮ್ಮ ಹೋಲದಲ್ಲಿದ್ದ ನನ್ನ ತಮ್ಮನಾದ ದೇವಿದಾಸನಿಗೆ, ಗೋವಿಂದ ತಂದೆ ಲಚ್ಚು ರಾಠೋಡ ಇತನು ತಮ್ಮ ಹೋಲಕ್ಕೆ ಕರೆದುಕೊಂಡು ಹೋಗಿ,ಈಶ್ವರ ತಂದೆ ಬದ್ದು ರಾಠೋಡ ಎನ್ನುವವನ ಹೆಂಡತಿಯಾದ ಮೈನಾಬಾಯಿ ಎಂಬುವವಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಂಶಯ ಮಾಡಿಕೊಂಡು ಗೋವಿಂದನ ಹೋಲದ ಬದಿಗಿರುವ ಕರೆಂಟ್ ವೈರಿನ ಮೇಲೆ ನೂಕಿಸಿಕೊಟ್ಟು ಕೊಲೆ ಮಾಡಿರುತ್ತಾರೆ, ಶವದ ಸಾಕ್ಷಿ ನಾಶ ಮಾಡುವ ಕುರಿತು ಮೃತ ದೇಹವನ್ನು ಮಾಣಿಕೂರ ಸೀಮಾಂತರದ ಗುಡ್ಡದ ಮೇಲಿಂದ ಸುಮಾರು 150 ಪೀಟ್ ಆಳವಾದ ಕಂದಕದಲ್ಲಿ ಬಿಸಾಡಿ ಬಂದಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸೀತಾರಾಮ ತಂದೆ ತುಳಿಸಿರಾಮ ರಾಠೋಡ ವ:50 ವರ್ಷ, ಜಾ:ಲಂಬಾಣಿ ಉ:ಒಕ್ಕಲುತನ ಸಾ:ಕುಸರಂಪಳ್ಳಿತಾಂಡಾ  ತಾ:ಚಿಂಚೋಳಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:12/2013 ಕಲಂ.302, 201, ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀಮತಿ ತಾಯವ್ವ ಗಂಡ ಮರೇಪ್ಪಾ ಹುರಸಗುಂಡಗಿ ವಯಾ:35 ವರ್ಷ, ಉ:ಕೂಲಿ ಕೆಲಸ  ಸಾ:ಸುಣ್ಣದ ಭಟ್ಟಿ ಶಾಹಾಬಾದ ರವರು ನಾನು ಮತ್ತು ನಮ್ಮೂರಿನ ಪಾರ್ವತಿ, ನಾದಿನಿಯಾದ ಹೇಮಾವತಿ ಎಲ್ಲರೂ ಕೂಡಿಕೊಂಡು ದಿನಾಂಕ:25-01-2013 ರಂದು  ಮಧ್ಯಾಹ್ನ 3=30 ಗಂಟೆಗೆ  ಶಾಹಾಬಾದಕ್ಕೆ ಹೋಗುವ ಕುರಿತು ಹೀರಾಪೂರ ಕ್ರಾಸ್ ದಿಂದ ಕಣ್ಣಿ ಮಾರ್ಕೆಟ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ  ಹಿಂದಿನಿಂದ ಒಬ್ಬ ಮೋಟಾರ ಸೈಕಲ್  ನಂ:ಕೆಎ-32 ಇಎ-2926 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ  ಭಾರಿ ಗಾಯಗೊಳಿಸಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:06/2013 ಕಲಂ: 279, 338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಎರಡು ಮೋಟಾರ ಸೈಕಲಗಳು ಜಪ್ತಿ:
ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆ:ದಿನಾಂಕ:26/01/2013 ರಂದು ಸಾಯಂಕಾಲ 5.00 ಗಂಟೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯ ಪಿಎಸ.ಐ ರವರಾದ ಶ್ರೀಮಂತ ಇಲ್ಲಾಳ ತಮ್ಮ ಸಿಬ್ಬಂದಿಯೊಂದಿಗೆ, ಗುಲಬರ್ಗಾ ನಗರದ ಸ್ವಸ್ತಿಕ ನಗರದಲ್ಲಿರುವ ಲಕ್ಷ್ಮಿ ಗುಡಿ ಹತ್ತಿರ ಮೋಟಾರ ಸೈಕಲಗಳ್ನು ಚೆಕ್ ಮಾಡುತ್ತಿರುವಾಗ ಇಬ್ಬರು ಮೋಟಾರ ಸೈಕಲ ಸವಾರರು ತಮ್ಮ ಮೋಟಾರ ಸೈಕಲಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ, ಸದರಿಯವರನ್ನು ವಿಚಾರಣೆ ಮಾಡುತ್ತಿದ್ದಾಗ ಸದರಿ ಮೋಟಾರ ಸೈಕಲಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇರುವದರಿಂದ ಅವರ ಬಗ್ಗೆ ಕೂಲಕೂಂಶವಾಗಿ ವಿಚಾರಿಸಲು ತಮ್ಮ ಹೆಸರು ಮಜರ ಅಲಿ ತಂದೆ ಮಹ್ಮದ ಅಬ್ದುಲ ಹಫೀಜ್ ಶೇಕ್ ವಯಃ 32 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಮನೆ ನಂ. 5-261, ರೋಜಾ (ಬಿ) ಗುಲಬರ್ಗಾ, ಮತ್ತು  ರಮೇಶ ತಂದೆ ಮಲ್ಲಪ್ಪ ಪೂಜಾರಿ ವಯಃ 22 ವರ್ಷ ಉಃ ಕ್ರೂಸರ್ ಡ್ರೈವರ ಜಾತಿಃ ಕುರುಬ ಸಾಃಸೂಗೂರ ಗ್ರಾಮ ತಾಃ ಚಿತ್ತಾಪೂರ ಜಿಃಗುಲಬರ್ಗಾ, ತಿಳಿದುಕೊಂಡು ಸದರಿಯವರ ಹತ್ತಿರವಿದ್ದ ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ. ನೀವು ಇವುಗಳನ್ನು ಎಲ್ಲಿಂದ ತಂದಿರುತ್ತಿರಿ, ಎಲ್ಲಿಗೆ  ತೆಗೆದುಕೊಂಡು ಹೋಗುತ್ತಿದ್ದೀರಿ ಅಂತಾ ವಿಚಾರಿಸಲು ರಮೇಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ ನಂ:ಕೆಎ-33 ಕೆ-8075 ನೇದ್ದನ್ನು ಬೀದರದಿಂದ ಕಳುವು ಮಾಡಿಕೊಂಡು ತಂದಿರುವುದಾಗಿ ತಿಳಿಸಿದನು. ಮಜರಅಲಿ ಇತನು ತನ್ನ ಹತ್ತಿರವಿರುವ ಮೋಟಾರ ಸೈಕಲ ನಂ:ಕೆಎ-32 ವಿ-8971 ನೇದ್ದನ್ನು ಸುಪರ ಮಾರ್ಕೆಟ ಗುಲಬರ್ಗಾದಿಂದ ಕಳುವು ಮಾಡಿರುವದಾಗಿ ತಿಳಿಸಿದನು. ಆ ಎರಡು ಜನರನ್ನು ವಶಕ್ಕೆ ತೆಗೆದುಕೊಂಡು ಹಾಗೂ ಅವರಲ್ಲಿದ್ದ Hero Honda Splender Silver Colour M/c No. KA 33 K 8075, Chassis No. 01B20107521, Engine No. 01B18M07256 ಅಃಕಿಃ 25,000/- ರೂ. ಹಾಗು 2) Hero Honda Splender M/c No. KA 32 V 8971, Chassis No. MBLHA10EJ9HJ08596, Engine No. HA10EA9HJ57640 ಅಃಕಿಃ 20,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಸರ್ಕಾರಿ ತರ್ಪೆಯಾಗಿ ಶ್ರೀ ಶ್ರೀಮಂತ ಇಲ್ಲಾಳ ರವರು ಠಾಣೆ ಗುನ್ನೆ ನಂ: 13/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಸುಮಾರು 35-40 ವರ್ಷ ವಯಸ್ಸಿನನಿಗೆ ಗಂಡು ಮನುಷ್ಯನಿಗೆ 3-4 ದಿವಸಗಳ ಹಿಂದೆ  ಯಾರೋ ಕೊಲೆ ಮಾಡಿ ಮಾಡಿ ಗೋಣಿ ಚೀಲದಲ್ಲಿ ಹಾಕಿ, ಕಲ್ಲು ಕಟ್ಟಿ ಶವ ಗೊತ್ತಾಗದಂತೆ ಸಾಕ್ಷಿ ನಾಶ ಪಡಿಸಿ ಮಣೂರ-ಅಗರಖೇಡ ಗ್ರಾಮದ ಭೀಮಾ ಬ್ರೀಡ್ಜ ಕೆಳಗಡೆ ನೀರಿನಲ್ಲಿ ಶವ ಬಿಸಾಕಿ ಹೋಗಿರುತ್ತಾರೆ ಮೃತನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಸದರಿಯವರ ಶವದ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರಾಮ ತಂದೆ ಬೂತಾಳಿ ನಡವಿನಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಾ|| ಮಣೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:20/2013 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   

26 January 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸ್ ಭವನದಲ್ಲಿ, ಮಾನ್ಯ ಶ್ರೀ ಮಹಮದ್ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾರವರಿಂದ 64 ನೇ ಗಣರಾಜ್ಯೋತ್ಸವ ದ್ವಜಾರೋಹಣಾ ನೇರವೇರಿಸಿದ ಬಗ್ಗೆ..
ಗುಲಬರ್ಗಾ ಜಿಲ್ಲೆಯ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ ಮಹಮದ ವಜೀರ್ ಅಹಮದ ಪೊಲೀಸ್ ಮಹಾ ನಿರೀಕ್ಷಕರು, ಈಶಾನ್ಯ ವಲಯ ಗುಲಬರ್ಗಾರವರು, ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಗುಲಬರ್ಗಾರವರಿಂದ ವಂದನೆಗಳನ್ನು ಸ್ವೀಕರಿಸಿಕೊಂಡು, 64 ನೇ ಗಣರಾಜ್ಯೋತ್ಸವದ ದ್ವಜಾರೋಹಣಾವನ್ನು ಬೆಳಿಗ್ಗೆ 08-00 ಗಂಟೆಗೆ ಗುಲಬರ್ಗಾ ಜಿಲ್ಲಾ  ಪೊಲೀಸ್ ಭವನದಲ್ಲಿ ದ್ವಜಾರೋಹಣಾ ಕಾರ್ಯಕ್ರಮ ನೇರವೇರಿಸಿದರು, ದ್ವಜಾರೋಹಣಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು.  

25 January 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳದಿಂದ ಮಹಿಳೆ ಸಾವು:
ವಾಡಿ ಪೊಲೀಸ್ ಠಾಣೆ:ಶ್ರೀ ಮಲ್ಲಣಗೌಡ ತಂದೆ ಶಿವರಾಯಪ್ಪಗೌಡ ಪೊಲೀಸ್ ಪಾಟಿಲ್ ಸಾ|| ಮಳ್ಳಳ್ಳಿ ತಾ|| ಶಹಾಪೂರ ಜಿ|| ಯಾದಗಿರ ರವರು ನನ್ನ  ಮಗಳು ನಿಂಗಮ್ಮ ಇವಳಿಗೆ  ಎರಡೂವರೆ ವರ್ಷಗಳ ಹಿಂದೆ ಕೊಲ್ಲೂರು ಗ್ರಾಮದ ವಿಜಯಕುಮಾರ ದೇಸಾಯಿ ಇವರ ಜೋತೆ ಮದುವೆ ಮಾಡಿಕೊಟ್ಟಿರುತ್ತೆನೆ. ಮಗಳ ಮದುವೆಯಲ್ಲಿ 4 ತೊಲಿ ಬಂಗಾರ, 50 ಸಾವಿರ ರೂಪಾಯಿಗಳು ವರದಕ್ಷಿಣೆ ಕೊಟ್ಟಿರುತ್ತೆನೆ. ಮದುವೆಯಾದ ಒಂದೂವರೆ ವರ್ಷದ ನಂತರ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ ಇನ್ನೂ ಹಣ ತೆಗೆದುಕೊಂಡು ಬಾ ಅಂತಾ  ಅತ್ತೆ ಕಮಲಮ್ಮ, ನಾದಿನಿ ಸರಮ್ಮ, ಗಂಡ ವಿಜಯಕುಮಾರ ಹೇಳುತ್ತಾ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಿದ್ದರು. ಸದರಿಯವರ ಕಿರುಕುಳ ತಾಳಲಾರದೇ ದಿನಾಂಕ:25/01/13 ರಂದು ಮುಂಜಾನೆ 6-00  ಗಂಟೆಗೆ ಸುಮಾರಿಗೆ ತನ್ನ ಮಗಳು ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ, ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 12/2013 ಕಲಂ 504, 323, 498(ಎ), 306 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಶ್ರೀಮತಿ, ಸಾವಿತ್ರಿ ಗಂಡ ಹಣಮಂತರಾಯ ಬಿರಾದಾರ ವ||30 ವರ್ಷ ಸಾ||ಬೋಸಗಾ ರವರು ನನಗೆ  ಬೋಸಗಾ ಗ್ರಾಮದ ಹಣಮಂತರಾಯ ಬಿರಾದಾರ ಈತನ ಜೊತೆಗೆ 2005 ನೇ ಸಾಲಿನಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2-3 ವರ್ಷ ಚೆನ್ನಾಗಿದ್ದೆವು, ನಂತರ ಮದುವೆ ಕಾಲಕ್ಕೆ ವರದಕ್ಷಿಣೆ ಕಡಿಮೆ ಕೊಟ್ಟಿರಿತ್ತಿರಿ, ನಾನು ಕಿರಾಣಿ ಅಂಗಡಿ ಇಡುತ್ತೇನೆ ನಿನ್ನ ತವರು ಮನೆಯಿಂದ 50,000/- ರೂ ತೆಗೆದುಕೊಂಡು ಬರಬೇಕು ಅಂತಾ ನನ್ನ ಗಂಡ ಹೇಳಿರುತ್ತಾರೆ. ನನ್ನ ಗಂಡ ಅಲದೇ , ಅತ್ತೆ, ಮಾವಮೈದುನರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು ಸದರಿಯವರ ಕಿರುಕುಳ ತಾಪ ತಾಳಲಾರದೆ ಬಳೂಂಡಗಿ ಗ್ರಾಮದ ತವರು ಮನೆಗೆ ಬಂದಿರುತ್ತೆನೆ. ದಿನಾಂಕ:13-01-2013 ರಂದು ಮಧ್ಯಾಹ್ನ 2-00  ಗಂಟೆಗೆ ಗಂಡಅತ್ತೆಮಾವನಾದನಿಭಾವಮೈದುನರು ಬಳೂಂಡಗಿ ಗ್ರಾಮಕ್ಕೆ ಬಂದು, ಅವಾಚ್ಯವಾಗಿ ಬೈದು ಎಷ್ಟು ದಿವಸ ತವರು ಮನೆಯಲ್ಲಿ ಇರುತ್ತಿ ಅಂತಾ ತಲೆಯ ಮೇಲಿನ ಕೂದಲು ಎಳೆದಾಡಿ ಬೇದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 19/2013 ಕಲಂ 498 (ಎ) 504 506 ಸಂ. 149 ಐ ಪಿ ಸಿ ಮತ್ತು 3, 4. ಡಿ ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಮೋಟಾರ ಸೈಕಲ ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಹಾಗು ಮಾನ್ಯ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ಮಾರ್ಗದರ್ಶದಲ್ಲಿ ದಿನಾಂಕ:24/01/2013 ರಂದು ಮಧ್ಯಾಹ್ನ 3-30 ಗಂಟೆಗೆ ಪಿ.ಎಸ.ಐ ಮಹಾತ್ಮ ಬಸವೇಶ್ವರ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ.ಐ (ಕಾ.ಸು) ಮತ್ತು ಸಿಬ್ಬಂದಿಯವರು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಗಣೇಶ ನಗರ ಮಾರ್ಗವಾಗಿ ಜಿ.ಡಿ.ಎ ಹೌಸಿಂಗ ಬೋರ್ಡ ಕಾಲೋನಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಗ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನನ್ನು ತೆಗೆದುಕೊಂಡು ಹೋಗುತ್ತಿರುವಾಗ ಸದರಿಯವನನ್ನು ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಯ್ಯ ಗುತ್ತೆದಾರ ವಯಃ 28 ವರ್ಷ ಜಾತಿಃ ಈಳಿಗ ಉಃ ಡ್ರೈವಿಂಗ್ ಕೆಲಸ ಸಾಃ ಕಲ್ಲಬೆನ್ನೂರ ಗ್ರಾಮ ತಾಃಜಿಃ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನ ಹತ್ತಿರವಿದ್ದ ಮೋಟಾರ ಸೈಕಲನ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ. ಮೋಟಾರ ಸೈಕಲ ಬಗ್ಗೆ ಸರಿಯಾದ ಉತ್ತರ ನೀಡದೇ ಇರುವದರಿಂದ, ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರುಬಹುದು ಅಂತಾ ಬಲವಾದ ಸಂಶಯ ಮೇಲಿಂದ ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು  ಆತನ ಹತ್ತಿರವಿದ್ದ Hero Honda Passion Pro Red Colour M/c No. KA 37 W 4296, Chassis No. 0202IC03239, Engine No. 02C21M03750 ಅಃಕಿಃ 25,000/- ರೂ. ನೇದ್ದು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 11/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  

24 January 2013

GULBARGA DISTRICT REPORTED CRIMES


ಗರ್ಭಪಾತದಿಂದ ಮಹಿಳೆ ಸಾವು:
ವಾಡಿ ಪೊಲೀಸ್ ಠಾಣೆ:ಶ್ರೀ ಶೇಕ್ ವಾಹಿದ ತಂದೆ ಶೇಖ ಮಹೆಬೂಬ ಶೇಖ ಸಾ||ಜಾಮಿಯಾ ಮಜೀದ ರೋಡ ಮರಾಠಾ ಗಲ್ಲಿ ವಾಡಿ ರವರು ನನಗೆ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳಿರುತ್ತಾರೆ. ನನ್ನ ಹೆಂಡತಿ ಪರ್ವಿನ ಇವಳು ಸಧ್ಯ 4 ತಿಂಗಳ ಗರ್ಭಾವತಿಯಾಗಿದ್ದಳು, ಒಂದು ವಾರದಿಂದ ನನ್ನ ಹೆಂಡತಿ ಪರ್ವಿನ ಬೇಗಂ ಇವಳಿಗೆ ಆರಾಮ ಇಲ್ಲದ ಕಾರಣ ವಾಡಿಯಲ್ಲಿಯೇ ಇರುವ ಅರ್.ಎಮ್.ಪಿ ಡಾಕ್ಟರ ಯಾಸ್ಮಿನ ಬತೂಲ ಇವರ ಹತ್ತಿರ ಉಪಚರಿಸುತ್ತಿದ್ದವು, ದಿನಾಂಕ: 20-01-2013 ರಂದು ರವಿವಾರ ಮುಂಜಾನೆ  10-30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಹೆಚ್ಚಿಗೆ ವಾಂತಿ ಆಗುತಿದ್ದರಿಂದ ಹಾಗೂ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಡಾ||ಆಸ್ಮಿನ ಬತೂಲ ಇವರ ಹತ್ತಿರ ಕರೆದುಕೊಂಡು ಹೋಗಿದ್ದೆನು.   ಡಾ||ಯಾಸ್ಮೀನ ಬತೂಲ ಇವರು ನನ್ನ ಹೆಂಡತಿಗೆ ಉಪಚರಿಸಿ ನಿನ್ನ ಹೆಂಡತಿಗೆ ಗರ್ಭಪಾತ (ಅಬಾರ್ಷನ) ಮಾಡಿಸಬೇಕು ಇಲ್ಲದಿದ್ದರೆ ನಿನ್ನ ಹೆಂಡತಿ ಜೀವಕ್ಕೆ ಅಪಾಯ ಇದೆ ಅಂತಾ ಹೇಳಿದರು. ನನಗೆ ಕಾನೂನಿನ ಅರಿವು ಇಲ್ಲದ ಕಾರಣ ನನಗೆ ಮಕ್ಕಳಿದ್ದಾರೆ ನನಗೆ ನನ್ನ ಹೆಂಡತಿ ಮುಖ್ಯ ಅಂತಾ ಗರ್ಭಪಾತ ಮಾಡು ಅಂತಾ ಹೇಳಿದೆ. ನನ್ನ ಹೆಂಡತಿಯ ಗರ್ಭಪಾತ ಮಾಡಿದಳು ನನ್ನ ಹೆಂಡತಿ ಗರ್ಭ ಪಾತ ಮಾಡಿದ ಜಗೆ ಬಹಳ ನೋವು ಆಗುತ್ತಿದೆ ಅಂತಾ ಹೇಳಿದಳು ಮಂಗಳವಾರ ದಿವಸ ಮತ್ತೆ ನಾನು ನನ್ನ ಹೆಂಡತಿಗೆ ಕರೆದುಕೊಂಡು ಆಸ್ಪತ್ರೆಗೆ ಹೋದೆನು ಇಂಜಕ್ಷನ ಗುಳಿಗಿ ಕೊಟ್ಟು  ಗರ್ಭಪಾತ ಮಾಡಿದ್ದೇನೆ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿ ಸ್ಕಾನಿಂಗ ಮಾಡಿಕೊಂಡು ಬಾ ಅಂತಾ ಡಾಕ್ಟರ ಹೇಳಿದರು. ದಿನಾಂಕ:23-01-2013 ರಂದು ನನ್ನ ಹೆಂಡತಿಗೆ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೆನು ಅವರು ಉಪಚರಿಸಿ ಯಾರು ಉಪಚರಿಸಿದ್ದಾರೆ ಅಂತಾ ಕೇಳಿದರು ನಾನು ವಾಡಿಯಲ್ಲಿ ಆರ್.ಎಮ್.ಪಿ. ಡಾ||ಯಾಸ್ಮಿನ ಬತೂಲ ಇವರು ಉಪಚರಿಸಿದ್ದಾರೆ, ಅವರೆ ಅವರೆ ಅಬಾಶನ ಮಾಡಿದ್ದಾರೆ ಅಂತಾ ಹೇಳಿದೆ, ಸದರಿ  ವೈದ್ಯರು  ಹೆಚ್ಚಿನ ಉಪಚಾರ ಕುರಿತು ಬಸವೆಶ್ವರ ಆಸ್ಪತ್ರೆಗೆ ಸೇರಿಕೆ ಮಾಡಲು ತಿಳಿಸಿದ ಪ್ರಕಾರ ನಾನು ನನ್ನ ಹೆಂಡತಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದೆನು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:24-01-2013 ರಂದು ಮುಂಜಾನೆ 8-30 ಗಂಟೆಗೆ ನನ್ನ ಹೆಂಡತಿ ಮರಣ ಹೊಂದಿದ್ದಳು. ನನ್ನ ಹೆಂಡತಿ ಸಾವಿಗೆ ಕಾರಣಳಾದ ಡಾ||ಯಾಸ್ಮಿನ ಬತೂಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ, 314, 304(ಎ) 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಕುಮಾರಿ ತೋಟಮ್ಮ ತಂದೆ ಶರಣಪ್ಪ ಯಮನೂರ ವಯ:15 ವರ್ಷ ಜಾ:ಬೇಡರ ಉ: ಕೂಲಿ ಕೆಲಸ ಸಾ: ವಡಗೇರಾ ರವರು ನಾನು ಮತ್ತು ನನ್ನ ತಾಯಿಯಾದ ರೇಣುಕಾ ಗಂಡ ಶರಣಪ್ಪಾ ಯಮನೂರ ವಯಾ|| 40 ವರ್ಷ ಇಬ್ಬರೂ ದಿನಾಂಕ:23-01-2013 ರಂದು ರಾತ್ರಿ 8-00 ಗಂಟೆಗೆ ಊಟ ಮಾಡಿದೆವು. ನಾನು ರಾತ್ರಿ ತನ್ನ ಅಣ್ಣನ ಮನೆಗೆ ಮಲಗಿಕೊಳ್ಳಲು ಹೋಗಿದ್ದು ಮನೆಯಲ್ಲಿ ತನ್ನ ತಾಯಿ ಒಬ್ಬಳೆ ಮನೆ ಬಾಗಿಲು ಮುಂದೆ ಮಾಡಿಕೊಂಡು ಮಲಗಿರುತ್ತಾಳೆ. ದಿನಾಂಕ:23,24-01-2013 ರ ರಾತ್ರಿ ವೇಳೆಯಲ್ಲಿ ಯಾರೋ ದುಶ್ಕರ್ಮಿಗಳು ಮನೆಯ ಒಳೆಗೆ ಪ್ರವೇಶ ಮಾಡಿ ಯಾವುದೋ ಒಂದು ಬಲವಾದ ಕಾರಣದಿಂದ ತನ್ನ ತಾಯಿಗೆ ಕುತ್ತಿಗೆಗೆ ಹಗ್ಗದಿಂದ ಅಥವಾ ಇನ್ಯಾವದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ:14/2013  ಕಲಂ, 448, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಕಾಣೆಯಾದ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀಮತಿ ಸೀತಾಬಾಯಿ ಗಂಡ ಪೀರಪ್ಪಾ ಕೆರಮಗಿ ವಯ: 70 ವರ್ಷ, ಉ: ಮನೆ ಕೆಲಸ ಜಾ: ಎಸ್.ಸಿ ಸಾ: ಶ್ರೀ ಮಾಳಪ್ಪಾ ಸುರಪೂರ ರವರ ಮನೆಯ ಎದುರುಗಡೆ ರಾಮಜೀ ನಗರ ರೋಜಾ [ಕೆ] ಗುಲಬರ್ಗಾ ರವರು ನಾನು ಮನೆಕೆಲಸ ಮಾಡಿಕೊಂಡು ಮಗಳು ಮತ್ತು ಮಮ್ಮೊಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಎರಡನೇ ಮಗಳಾದ ಭಾರತಿಬಾಯಿ ಇವಳು ತೀರಿಕೊಂಡಿದ್ದು ಇವಳ ಮಗ ಚಂದ್ರಕಾಂತ ತಂದೆ ಬಾಬುರಾವ ಮಂಠಾಳಕರ ವಯ: 18 ವರ್ಷ ವಯಸ್ಸಿನ ಮೊಮ್ಮಗನಿರುತ್ತಾನೆ.ಇತನು ದಿನಾಂಕ:07/11/2012 ರಂದು ಸಾಯಂಕಾಲ 17:00 ಗಂಟೆಗೆ ರಾಮಜೀ ನಗರದ ಮನೆಯಿಂದ ಹೇಳದೇ ಕೇಳದೇ ಮನೆಬಿಟ್ಟು ಹೋಗಿರುತ್ತಾನೆ. ನನ್ನ ಮೊಮ್ಮಗನ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.08/2013 ಕಲಂ ಹುಡುಗ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹುಡಗನ ಚಹರೆ: ತೆಳ್ಳನೆ ಮೈಕಟ್ಟು, ಕೆಂಪು ಮೈಬಣ್ಣ, ನೀಟಾದ ಮೂಗು, ಬಲಗಾಲದ ಹಿಮ್ಮಡಿಯ ಮೇಲೆ ಹಳೆಯ ಗಾಯದ ಗುರುತು. ಎತ್ತರ 56, ನೀಲಿ ಬಣ್ಣದ ಜೀನ್ಸಪ್ಯಾಂಟ, ನೀಲಿಬಣ್ಣದ ಪಟ್ಟಿಪಟ್ಟಿ ಟೀಶರ್ಟ , ಕರಿಬಣ್ಣದ ಬನಿಯನ್, ಬೂದಿಬಣ್ಣದ ಅಂಡರವೇರ , ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ರೋಜಾ ಪೊಲೀಸ್ ಠಾಣೆ ಗುಲಬರ್ಗಾ ದೂರವಾಣಿ ಸಂ: 08472-263623 ಅಥವಾ 9480803550 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂರವಾಣಿ ಸಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 651/12 ದಿನಾಂಕ: 28/12/2012  ನೇದ್ದು ದಿನಾಂಕ:23-01-2013 ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಅನೀಸ ಅಹ್ಮದ ತಂದೆ ವಾಹೀದ ಅಹ್ಮದ, ವಯ|| 35 ವರ್ಷ, || ಖಾಸಗಿ ಕೆಲಸ, ಸಾ|| ಮನೆ ನಂ: 11-1817/13ಎ ವಿದ್ಯಾನಗರ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ  ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ  ಪ್ರಕಟಣೆ ಮೂಲಕ ಮಾಹಿತಿ ನೀಡಿ, ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ನನ್ನ ಕಡೆಯಿಂದ ದಾಖಲಾತಿ ಮಾಡಿಕೊಳ್ಳಲು 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆ ಪತ್ರಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:08/2013 ಕಲಂ: 425, 463, 464, 383, 418, 420, 120 (ಬಿ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕ್ರಮವಾಗಿ  
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 649/12 ದಿನಾಂಕ:28/12/2012  ನೇದ್ದು ದಿನಾಂಕ:23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಸತೀಷ ತಂದೆ ಪ್ರಹ್ಲಾದರಾವ ಯಡಬೋಳೆ, ವಯ|| 35 ವರ್ಷ, ಸಾ|| ಮನೆ ನಂ: 3-900/4 ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ರವರ  ಹೈದ್ರಾಬಾಕ ಕರ್ನಾಟಕ ಒಂದು  ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸದರಿ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪೇಕೆಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 09/2013 ಕಲಂ: 425, 463, 464, 383, 418, 420, 120 (ಬಿ) ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                                            
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 650/12 ದಿನಾಂಕ: 28/12/2012  ನೇದ್ದು ದಿನಾಂಕ: 23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ,ಶ್ರೀ ಅಬ್ದುಲ ವಾಹೀದ ತಂದೆ ಮಹ್ಮದ ಖಾಜಾಮಿಯಾ, ವಯ|| 40, || ಖಾಸಗಿ ನೌಕರ, ಸಾ|| ಪ್ಲಾಟ ನಂ: 57, ನ್ಯೂ ರಾಘವೇಂದ್ರ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಆರೋಪಿತರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2013 ಕಲಂ: 425, 463, 464, 383, 418, 420, 120 (ಬಿ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                             
ಅತ್ಯಾಚಾರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:23/01/2013 ರಂದು ಸಾಯಂಕಾಲ 7-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 25/2013 ನೇದ್ದರ ಸಾರಂಶವೇನೆಂದರೆ, ನಂದಿತಾ (ಹೆಸರು ಬದಲಾಯಿಸಲಾಗಿದೆ) ನನಗೆ ಆಳಂದ ತಾಲೂಕಿನ ಬಸವನಸಂಗೋಳಗಿ ಗ್ರಾಮದ ಬಸವರಾಜ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು, ನಾನು ಅದೇ ಗ್ರಾಮದ ಈರಣ್ಣ ಎಂಬುವವನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರಿಂದ ನನ್ನ ಗಂಡ ಬಸವರಾಜು ವಿವಾಹ ವಿಚ್ಛೇದನ ಕೊಟ್ಟಿರುತ್ತಾನೆ. ನನಗೆ ಈರಣ್ಣ ಇತನು ಶಾರೀರಿಕ ಸಂಬಂಧ ಬೆಳೆಸಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಗುಲಬರ್ಗಾದ ಶಹಾಬಜಾರ ಬಡಾವಣೆಯಲ್ಲಿ ಇಟ್ಟಿದ್ದು ನನಗೆ ಮದುವೆ ಮಾಡಿಕೊಳ್ಳದೆ ಇದ್ದುದರಿಂದ ನಾನು ನನ್ನ ತಂದೆಯಾಯಿ ಮನೆಯಾದ ಮಂಕ್ತಪೂರದಲ್ಲಿದ್ದಾಗ ದಿನಾಂಕ:13/01/2013 ರಂದು ಈರಣ್ಣಾ ಇತನು ಮನೆಗೆ ಬಂದು ಜಬರಿ ಸಂಭೋಗ ಮಾಡಿದ್ದು, ಅಲ್ಲದೆ ಜೀವದ ಭಯ ಹಾಕಿರುತ್ತಾನೆ. ಈ ಕೃತ್ಯಕ್ಕೆ ಆತನ ತಂದೆಯಾದ ವಿಠಲ ಈತನು ಪ್ರೋತ್ಸಾಹ ನೀಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:13/2013 ಕಲಂ: 506, 420, 376 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಸೋಮಶೇಖರ ತಂದೆ ಶರಣಪ್ಪಾ ಮಂಗಲಗಿ ಸಾ:ಸಂತೋಷ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ಛಾಯ ಇವಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಯಲ್ಲಿಯೇ ಇದ್ದಿದ್ದು ಅವಳಿಗೆ ತನ್ನ ಗಂಡನ ಮನೆಗೆ ಬಿಟ್ಟು ಬರುವ ಕುರಿತು ನನ್ನ ಖರೀದಿಸಿದ ಇನ್ನು ನಂಬರ ಹಾಕಲಾರದ ಟಂಟಂ ಗೂಡ್ಸದಲ್ಲಿ ನಾನು, ನನ್ನ ಹೆಂಡತಿ ನೀಲಮ್ಮಾ, ಮಗಳು ಛಾಯಾ, ಮೊಮ್ಮಗಳು ವಿಜಯಲಕ್ಷ್ಮಿ , ಮಗ ರೇವಣಸಿದ್ದ , ಸಂಬಂಧಿಕರಾದ ಅಶೋಕ, ಅನೀಲಕುಮಾರ, ವಿಜಯಲಕ್ಷ್ಮಿ ಕೂಡಿ ಸ್ವಂತ ಗ್ರಾಮಕ್ಕೆ ಹೋಗಿ ಪಂಚಾಯತ ಮುಗಿಸಿಕೊಂಡು ಎಲ್ಲರೂ ಸದರಿ ಟಂ ಟಂ ಗೂಡ್ಸದಲ್ಲಿ ಮರಳಿ ರಾತ್ರಿ 00:45 ಗಂಟೆ ಸುಮಾರಿಗೆ ಆಲಗೂಡ ಕ್ರಾಸ ಹತ್ತಿರ ಗುಲಬರ್ಗಾ ಕಡೆಗೆ ಬರುವಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕಾರ ನಂ ಕೆ.ಎ -28 ಎನ್-0803 ನೇದ್ದರ ಚಾಲಕ ಮಡಿವಾಳಯ್ಯಾ ತಂದೆ ಮಳ್ಳಸಿದ್ದಯ್ಯಾ ಇಂಡಿಮಠ ಸಾ:ದೇವರ ಹಿಪ್ಪರಗಿ ಇತನು ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಅಡ್ಡಾ ತಿಡ್ಡಿಯಾಗಿ ನಡೆಸಿಕೊಂಡು ಬಂದು ನಮ್ಮ ಟಂಟಂ ಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ  ಟಂ ಟಂ ಗೂಡ್ಸ ರೋಡಿನ ಪಕಕ್ಕೆ ಇರುವ ತಗ್ಗಿನಲ್ಲಿ ಹೋಗಿ ಪಲ್ಟಿ ಆಗಿದ್ದು ಟಂಟಂ ಗೂಡ್ಸದ ಬಾಡಿ ಬಡಿದು ನೀಲಮ್ಮ ಇವಳು ಸ್ದಳದಲ್ಲಿಯೇ ಮೃತಪಟ್ಟಿದ್ದು ನನಗೆ ಹಾಗು ಟಂಟಂ ಗೂಡ್ಸದಲ್ಲಿ ಕುಳಿತವರಿಗೆ ಭಾರಿ ರಕ್ತಗಾಯ ಹಾಗು ಸಾದಾ  ಗುಪ್ತಗಾಯವಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ 279 ,337,338,304[ಎ] ಐಪಿಸಿ ಸಂ 185 ಐಎಮ್‌ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ಶಾಬ್ದುಲ್ ತಂದೆ ಬಾಲಪ್ಪ ಮೇತ್ರೆ ಸಾ||ಲೋಹಾಡ ಗ್ರಾಮ, ತಾ||ಸೇಡಂ, ಜಿಲ್ಲಾ|| ಗುಲಬರ್ಗಾರವರು ನಾನು ದಿನಾಂಕ:23-01-2013 ರಂದು ಬೆಳಿಗ್ಗೆ 08-00 ಗಂಟೆಗೆ ಹಾಬಾಳ(ಟಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೆ ಇರುವ ಕಿರಾಣಿ ಡಬ್ಬಿ ಹತ್ತಿರ ಇದ್ದಾಗ ನನ್ನ ಹಿಂದಿನಿಂದ ಒಮ್ಮೆಲೆ ಹಾಬಾಳ(ಟಿ) ಗ್ರಾಮದ ಅಂಜಲಪ್ಪ ತಂದೆ ರಾಯಪ್ಪ ತಳವಾರ, ಶಾಮು ತಂದೆ ಅಂಜಲಪ್ಪ ತಳವಾರ ಕೂಡಿಕೊಂಡು ಬಂದವರೇ ಅವರಲ್ಲಿ ಅಂಜಲಪ್ಪ ಇತನು ಅವಾಚ್ಯವಾಗಿ ಜಾತಿ ಎತ್ತಿ ಬೈದು  ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗಣ್ಣು ಹುಬ್ಬಿಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದನು. ಅವನ ಮಗ ಶಾಮು ತಂದೆ ಅಂಜಲಪ್ಪ ತಳವಾರ ಇವನು ತನ್ನ ತಂದೆಯ ಕೈಯಿಂದ ಬಡಿಗೆ ಕಸಿದುಕೊಂಡು ನನ್ನ ಎಡಗಾಲಿನ ತೊಡೆಗೆ ಮತ್ತು ಎಡ ಎದೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಾನು ಅಲ್ಲಿಂದ ಓಡುತ್ತಾ ಶಿವಕುಮಾರ ದೇಶಮುಖ ಇವರ ಮನೆಯ ಕಡೆಗೆ ಓಡಿ ಅವರ ಮನೆಯ ಮುಂದೆ ನಿಂತಾಗ ಅಲ್ಲಿಯೂ ಸಹಾ ಅಂಜಲಪ್ಪ ಮತ್ತು ಶಾಮು ತಳವಾರ ರವರು ನನಗೆ ಹೊಡೆಯಲು ಬೆನ್ನುಹತ್ತಿ ಬಂದಿದ್ದು ನನಗೆ ಹೊಡೆಯುವಷ್ಟರಲ್ಲಿ ಶಿವಕುಮಾರ ದೇಶಮುಖ  ರವರು ಮನೆಯ ಹೊರಗೆ ಬಂದು ಬಿಡಿಸಿಕೊಂಡಿರುತ್ತಾರೆ. ಕಾರಣ ನನಗೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಅವಮಾನ ಮಾಡಿ ಬಡಿಗೆಯಿಂದ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:17/2013 ಕಲಂ-324, 504 ಸಂಗಡ 34 ಐಪಿಸಿ ಮತ್ತು 3(I) (X) SC/ST P.A. Act 1989. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:                                                         
ಬ್ರಹ್ಮಪೂರ ಪೊಲೀಸ್ ಠಾಣೆ: ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಜಗಧೀಶ ಶೆಟ್ಟರ ರವರು ಗುಲಬರ್ಗಾದಲ್ಲಿ ಪ್ರವಾಸ ಕೈಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಂಡಿತ ರಂಗ ಮಂದಿರದಲ್ಲಿ ಸಂಚಾರಿ ಪಶು ವೈದ್ಯಕೀಯ ಚಿಕಿತ್ಸೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಕೆ.ಜಿ.ಪಿ ಪಕ್ಷದ ಕಾರ್ಯಕರ್ತರಾದ ಸುಭಾಷ ತಂದೆ ಶಂಕ್ರಪ್ಪ ಬಿರಾದಾರ, ಮತ್ತು ಆತನ ಸಂಗಡ ಶರಣಬಸಪ್ಪ ಕಾಡಾದಿ, ವಿವೇಕಾನಂದ ಕಟ್ಟಿಮನಿ, ಮಲ್ಲಿಕಾರ್ಜುನ,  ನಾವದಗಿ ಹಾಗೂ ಇತರರು ಗುಲಬರ್ಗಾ ಮತ್ತು ಜೇವರ್ಗಿ ತಾಲೂಕಿನಾದ್ಯಂತ ಯಾವುದೇ ತರಹದ ಪ್ರತಿಭಟನೆಗಳು, ಧರಣಿಗಳು, ಮೆರವಣಿಗೆಗಳು, ಮತ್ತು ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು ಸಹ ಕೆ.ಪಿ.ಪಿ ಕಾರ್ಯಕರ್ತರು  ಮಾನ್ಯ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡೆತಡೆ ಮಾಡಿ ಹಾಗು ಪೊಲೀಸ್ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಅಂತಾ ಪಿ.ಎಸ.ಐ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ: 143, 147, 188, 186, 341 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.