POLICE BHAVAN KALABURAGI

POLICE BHAVAN KALABURAGI

29 January 2020

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ: 27/01/2020 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಕಮಲಾನಗರ ಗ್ರಾಮದಲ್ಲಿರುವ  ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ,  ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಕಮಲಾನಗರ ಗ್ರಾಮದಲ್ಲಿರುವ  ಮಲ್ಲಿಕಾರ್ಜುನ ದೆವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಲ್ಲಿಕಾರ್ಜುನ ದೇವಸ್ಥಾನದ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸರಾಜ ತಂದೆ ಶಿವಪುತ್ರಪ್ಪಾ ಪೊಲೀಸ್ ಬಿರಾದಾರ, ಸಾ:ಕಮಲಾನಗರ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 2140/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಸಿದ್ದಪ್ಪ ಬಾಗೇವಾಡಿ ಸಾ|| ಯೋಗಾಪೂರ ಕಾಲೋನಿ ವಿಜಯಪೂರ, ರವರ ತಂದೆಯವರು ಸುಮಾರು ವರ್ಷಗಳಿಂದ ನಮ್ಮೊಣಿಯ ಕಿಶೋರ ತಂದೆ ರಾಮರಾವ ಪಾಟೀಲ ರವರ ಲಾರಿ ಟ್ಯಾಂಕರ ನಂ ಕೆ.-28/ಡಿ-4555 ನೇದ್ದರ ಮೇಲೆ ಕಿನ್ನರಾಗಿ ಕೆಲಸ ಮಾಡಿಕೊಂಡಿರುತ್ತಾರೆ, ಟ್ಯಾಂಕರನಲ್ಲಿ ಡಾಂಬರ ಸರಬರಾಜು ಮಾಡುತ್ತಿದ್ದರು, ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ರೋಡಿನ ಕಾಂಟ್ರ್ಯಾಕ್ಟಗಳು ನಮ್ಮ ಮಾಲಿಕರಿಗೆ ಒಂದು ಟ್ಯಾಂಕ ಡಾಂಬರ ಕಳುಹಿಸಿಕೊಡಲು ಕೇಳಿಕೋಂಡು ಮೇರೆಗೆ ನಮ್ಮ ಟ್ಯಾಂಕರ ಮಾಲಿಕರು ಒಂದು ಟ್ಯಾಂಕ ಡಾಂಬರನ್ನು ಬಳಬಟ್ಟಿ ಗ್ರಾಮಕ್ಕೆ ಕಳುಹಿಸಿಕೊಟ್ಟಿರುತ್ತಾರೆ, ಟ್ಯಾಂಕರ ಮೇಲೆ ನಮ್ಮ ತಂದೆಯವರು ಕಿನ್ನರಾಗಿ ಹೋಗಿರುತ್ತಾರೆ, ದಿನಾಂಕ 26-01-2020 ರಂದು ಬೆಳಿಗ್ಗೆ 10;30 ಗಂಟೆ ಸುಮಾರಿಗೆ ಬಳಬಟ್ಟಿ ಗ್ರಾಮದ ರಾಜಕುಮಾರ ಮುಕ್ಕಾಣಿ ಎಂಬುವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 10;00 ಗಂಟೆ ಸುಮಾರಿಗೆ ನಿಮ್ಮ ತಂದೆಯವರು ನಮ್ಮೂರಲ್ಲಿದ್ದ ನಮ್ಮ ಪ್ಲಾಂಟನಲ್ಲಿ ನಿಲ್ಲಿಸಿದ ಟ್ಯಾಂಕನಿಂದ ಡಾಂಬರ ಖಾಲೆ ಮಾಡುತ್ತಿದ್ದಾಗ ನಿಮ್ಮ ತಂದೆಯವರು ಕೊರಳಲ್ಲಿ ಟಾವೆಲನ್ನು ಹಾಕಿಕೊಂಡು ಟ್ಯಾಂಕರ ಕೆಳಗೆ ವಾಲ ಗರಮ ಮಾಡುತಿದ್ದಾಗ ಟ್ಯಾಂಕರ ಚಾಲಕನು ಅಲಕ್ಷತನದಿಂದ ಟ್ಯಾಂಕರನ್ನು ಒಮ್ಮೇಲೆ ಚಾಲು ಮಾಡಿದಾಗ ವಾಹನದ ಕೆಳಗೆ ಇದ್ದ ನಿಮ್ಮ ತಂದೆಯ ಕೊರಳಲ್ಲಿನ ಟಾವೇಲನ್ನು ಎಕ್ಸಲ್ ಜೇಂಟಿಗ ತಾಕಿದ್ದರಿಂದ ಟಾವೆಲ ಎಕ್ಸಲಿಗೆ ಸುತ್ತಿಕಿಕೊಂಡಾಗ ನಿಮ್ಮ ತಂದೆಯ ತಲೆಯು ಎಕ್ಸಲಗೆ ಬಡಿದು ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಕೊರಳಲ್ಲಿನ ಟಾವೇಲು ಕುತ್ತಿಗೆಗೆ ಸುತ್ತಿಕೊಂಡಿತ್ತು, ನಂತರ ನಾನು ಮತ್ತು ಅಲ್ಲೆ ಕೆಲಸ ಮಾಡುತ್ತಿದ್ದ ಬಸವರಾಜ ಉಕ್ಕಿನಾಳ, ಗೊಲ್ಲಾಳಪ್ಪ ಮುಕ್ಕಾಣಿ ರವರು ಕೂಡಿ ಟಾವೇಲನ್ನು ಕಟ್ಟ ಮಾಡಿ ನಿಮ್ಮ ತಂದೆಯವರಿಗೆ ಹೊರಗೆ ತೆಗೆದು ಅವರನ್ನು ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೋಂಡು ಶಹಾಪೂರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ, ಟ್ಯಾಂಕರ ಚಾಲಕ ಓಡಿ ಹೋಗಿರುತ್ತಾನೆ ನೀವು ಬನ್ನಿ ಅಂತಾ ಹೇಳಿದರು, ನಂತರ ನಾನು ಮತ್ತು ನಮ್ಮ ಮಾವ ಮಲ್ಲಿಕಾರ್ಜುನ ಕಾಖಂಡಕಿ ರವರು ಕೂಡಿ ಶಹಾಪುರಕ್ಕೆ ಹೋಗುತ್ತಿದ್ದಾಗ ರಾಜಕುಮಾರ ಇವರು ಪುನಹ ಫೋನ ಮಾಡಿ ಹೇಳಿದ್ದೇನೆಂದರೆ, ನಿಮ್ಮ ತಂದೆಯವರಿಗೆ ನಾವು ಶಹಾಪೂರದಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗುವಾಗ ಮಾರ್ಗಮದ್ಯ 11-30 .ಎಂ ಕ್ಕೆ ನಿಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ, ಅವರ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತರುತ್ತಿದ್ದೇವೇ ನೀವು ಅಲ್ಲಿಗೆ ಬನ್ನಿ ಅಂತಾ ಹೇಳಿದ್ದರಿಂದ ನಾವು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ನಮ್ಮ ತಂದೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಕೊರಳಲ್ಲಿ ಕಂದು ಗಟ್ಟಿದ ಗಾಯವಾಗಿದ್ದು ನಮ್ಮ ತಂದೆಯವರು ಟ್ಯಾಂಕರ ಕೆಳಗೆ ಕೆಲಸ ಮಾಡುತ್ತಿದ್ದಾಗ ಟ್ಯಾಂಕರ ಚಾಲಕನು ದುಡುಕಿನಿಂದ ಮತ್ತು ಅಲಕ್ಷತನದಿಂದ ಟ್ಯಾಂಕರ ಚಾಲು ಮಾಡಿದ್ದರಿಂದ ಈ ಅಪಘಾತವಾಗಿ ನಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ,  ಕಾರಣ ಮೇಲ್ಕಂಡ ಟ್ಯಾಕರ್ ನಂ ಕೆ.-28/ಡಿ-4555  ನೇದ್ದರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ :    ಶ್ರೀ ಗುರುನಾಥ ತಂದೆ ಹಣಮಂತರಾಯ ಹೀರಾ  ಸಾ: ರುದ್ರವಾಡಿ ತಾ: ಆಳಂದ ರವರು ದಿನಾಂಕ:12/01/2020 ರಂದು ಲಾತೂರಕ್ಕೆ ಹೋಗುವ ಸಂಬಂಧ ನನ್ನ ಮೋಟರ್ ಸೈಕಲವನ್ನು ಹಳೇಯ ಆರ್.ಟಿ.ಓ.ಚೆಕ್ಕಪೊಸ್ಟ್ ಹತ್ತಿರ ಇರುವ ನಮ್ಮ ಸಂಬಂಧಿಕರಾದ ಶ್ರೀ.ಸಾತಣ್ಣಾ ತಂದೆ ಶಿವಣ್ಣಾ ಶೆಟ್ಟಿ ಸಾಃಆಳಂದ ಇವರ ಮನೆಯ ಕಂಪೌಂಡದಲ್ಲಿ ಸಾಯಂಕಾಲ 05:00 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ ನಂಬರ  ಕೆಎ-32 ಇ.ಡಿ-8378 ನೇದ್ದನ್ನು ನಿಲ್ಲಿಸಿ ಲಾತೂರಕ್ಕೆ ಹೋಗಿ ದಿನಾಂಕ:15/01/2020 ರಂದು ಬೇಳಗ್ಗೆ 11:00 ಗಂಟೆಯ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಕಾಣಲಿಲ್ಲಾ. ಆಗ ನಾನು ನಮ್ಮ ಸಂಬಂಧಿಕರಾದ ಸಾತಣ್ಣಾ ಶೆಟ್ಟಿಇವರಿಗೆ ವಿಚಾರಿಸಲಾಗಿ ನಾನು ಸಹ ಕಲಬುರಗಿಯಲ್ಲಿರುವ ಮನೆಗೆ ಹೋಗಿದ್ದು ಇಂದು ಬೆಳಗ್ಗೆ ಬಂದಿರುತ್ತೇನೆ ನನಗೂ ಸಹ ಮೋಟರ್ ಸೈಕಲ ಬಗ್ಗೆ ಗೊತ್ತಿರುವುದಿಲ್ಲಾ  ಅಂತಾ ತಿಳಿಸಿದಾಗ ಈ ವಿಷಯವನ್ನು ನನ್ನ ಮಕ್ಕಳಾದ ಓಂಪ್ರಕಾಶ & ಶಿವಪ್ರಕಾಶ ರವರಿಗೆ ತಿಳಿಸಿ ಎಲ್ಲರೂ ಕೂಡಿ ಇಷ್ಟು ದಿವಸ ಆಳಂದ ಪಟ್ಟಣ ಹಾಗೂ ಅಲ್ಲಲ್ಲಿ ಹುಡುಕಾಡಿ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ನನ್ನ ಮೋಟಾರ್ ಸೈಕಲ ನಂ.ಕೆಎ-32 ಇ.ಡಿ-8378 ಅದರ ಚೆಸ್ಸಿ ನಂಬರ.MBLHA10ASDHF70331.ಇಂಜಿನ್ ನಂ.HA10ELDHF26185 ಅಂತಾ ಇದ್ದು  ಅದರ ಅಂದಾಜು ಕಿಮ್ಮತ್ತು 35,000/- ರೂಪಾಯಿ ಇದ್ದು ನನ್ನ ಮೋಟರ್ ಸೈಕಲವನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 12/01/2020 ರ ಸಾಯಂಕಾಲ 06:00 ಗಂಟೆಯಿಂದ ದಿನಾಂಕ:15/01/2020 ರ ಬೆಳಗಿನ 11-00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.