POLICE BHAVAN KALABURAGI

POLICE BHAVAN KALABURAGI

20 September 2012

GULBARGA DISTRICT REPORTED CRIMES


6 ವರ್ಷದ ಹಸುಳೆಯ ಮೇಲೆ ಅತ್ಯಾಚಾರ:
ಚಿತ್ತಾಪೂರ ಪೊಲೀಸ್ ಠಾಣೆ: ದಿನಾಂಕ:18/09/2012 ರಂದು ಮುಂಜಾನೆ 9-30 ಗಂಟೆಗೆ 6 ವರ್ಷದ ನನ್ನ ಮಗಳು ಶಾಲೆಗೆ ಹೋಗಿದ್ದಳು , ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನನ್ನ ಮಗಳು ಅದೇ ಶಾಲೆಯ ಮಕ್ಕಳು ಮನೆಗೆ ಕರೆದುಕೊಂಡು ಬಂದು ಅಳುತ್ತಿದ್ದಾಳೆ ಅಂತಾ ಮನೆಗೆ ಬಿಟ್ಟು ಹೋದರು, ನನ್ನ ಮಗಳಿಗೆ ವಿಚಾರಿಸಿದ್ದು ಬಡಾ ಆದ್ಮಿ ಮಾರೇ ಅಂತ ಸಂಸಾರದ ಜಾಗೆಯಲ್ಲಿ ಹೊಡೆದ ಬಗ್ಗೆ ತೋರಿಸಿದಳು. ನಾನು ನೋಡಿದ್ದು ಸಂಸಾರದಿಂಧ ರಕ್ತ ಬರುತ್ತಿತ್ತು. ಈ ಬಗ್ಗೆ ಅವಳನ್ನು ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯ ಮಕ್ಕಳಿಗೆ  ವಿಚಾರಿಸಲಾಗಿ ರಾಜ ಅಹ್ಮದ ತಂದೆ ಅಬ್ದುಲ ರಹಿಮ ನಾಗಾವಿ ವಾಲೆ ಸಾ||ಬಾಹರಪೇಟ ಚಿತ್ತಾಪುರ ಅಂತ ಗೊತ್ತಾಗಿದ್ದು ಅಪ್ರಾಪ್ತ ನನ್ನ ಮಗಳಿಗೆ ಶಾಲೆಯ ಏಕಿ ಮಾಡುವ ಕೋಣೆಯಲ್ಲಿ ಕರೆದುಕೊಂಡು ಹೋಗಿ ಬಲಾತ ಸಂಭೋಗ ಮಾಡಿದ್ದಾನೆ ಅವಳಿಗೆ ಸಂಸಾರದಿಂದ ರಕ್ತ ಬರುತ್ತಿದೆ. ಅತನ ಮೇಲೆ ಕಾನೂನು ಕ್ರಮ ಜರೂಗಿಸಬೇಕು  ಅಂತಾ ಹುಡಗಿಯ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ 376 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:19-9-2012 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ. 20-09-2012 ರ ಬೆಳಿಗ್ಗೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಗುಲಬರ್ಗಾ ಆಳಂದ ರೋಡಿನ  ಪಟ್ಟಣ ಕ್ರಾಸ ಸಮೀಪ ಶಿವಲಿಂಗಪ್ಪಾ ಶಾಸ್ತ್ರೀ ಇವರ ಹೊಲದ ಎದುರಿನ ಮುಖ್ಯ  ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಿ ಜಿತನದಿಂದ ನಡೆಯಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಡಿಕ್ಕಿ ಹೊಡೆದು ಭಾರಿ ಗಾಯಗೊಳಿಸಿದ್ದರಿಂದ, ಆ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಸದರಿ ರಸ್ತೆಯು ಮುಖ್ಯ ರಸ್ತೆಯಾಗಿರುವದರಿಂದ ಇನ್ನೂ ಬೇರೆ ವಾಹನಗಳು ಆತನ ಶವದ ಮೇಲಿಂದ ಹಾಯಿದು ಹೋಗಿದ್ದರಿಂದ ಮೃತ ವ್ಯಕ್ತಿಯ ಶವವು ಎಳೆದಾಡಿ ಗುರ್ತು ಸಿಗದ ಹಾಗೆ ಆಗಿ ಮಾಂಸ ಖಂಡಗಳ ಮುದ್ದೆಯಾಗಿ ಬಿದ್ದಿರುತ್ತವೆ. ಮತ್ತು  ಬಲಗಾಲದ  ಪಾದ ,ಮತ್ತು ಬಲಗೈ ಮುಂಬಾಗ ಕಾಣಿಸುತ್ತಿದ್ದು ಶರೀರ ಪೂರ್ತಿ ಜಜ್ಜಿ ಹೋಗಿದ್ದು ಗುರ್ತು ಸಿಗುತ್ತಿಲ್ಲಾ, ಹೀಗಾಗಿ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಅಪಘಾತ ಪಡಿಸಿದ  ವಾಹನ ಚಾಲಕ ತನ್ನ ವಾಹನವನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಕಂಡು ಬರುತ್ತದೆ ಅಂತಾ ಶ್ರೀ  ಮಹಮ್ಮದ ಗೌಸ ತಂದೆ ರುಕುಮಸಾಬ ನದಾಫ ಸಾ; ಪಟ್ಟಣ ತಾ||ಜಿ|| ಗುಲಬರ್ಗಾರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ: 299/2012  ಕಲಂ. 279,304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಸಾವು:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಓಮನಾಥ ತಂದೆ ರೇವಣು ಪವಾರ ಸಾಃನಾಗಾ ಇದಲಾಯಿ ತಾಂಡಾ ತಾಃಚಿಂಚೋಳಿ ಜಿಃಗುಲಬರ್ಗಾ ದಿನಾಂಕ:19/09/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮೃತ ಧನ್ನುಬಾಯಿ @ ಜ್ಯೋತಿಬಾಯಿ ಇವಳ ಗಂಡ ಓಮನಾಥ ಮತ್ತು ಮಾವ ರಾಮಚಂದ್ರ ಇಬ್ಬರು ಕೂಡಿಕೊಂಡು ನಿನ್ನ ತವರು ಮನೆಯಿಂದ ಇನ್ನೂ ಒಂದು ಲಕ್ಷ್ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಸೀಮೆ ಎಣ್ಣೆ ಹಾಕಿ ಸುಟ್ಟಿ ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:101/2012 ಕಲಂ. 498 (ಎ), 304 (ಬಿ) ಸಂಗಡ 34 ಐಪಿಸಿ ಮತ್ತು  3 & 4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಚಂದ್ರಕಾಂತ  ತಂದೆ ನಾಗೇಂದ್ರಪ್ಪ ಗಿರೆಪ್ಪಗೋಳ ಸಾ: ಕಣ್ಣಿ  ತಾ||ಜಿ||ಗುಲಬರ್ಗಾರವರು  ನಮ್ಮ  ಅಣ್ಣ ತಮ್ಮಕಿಯವರು ಹಾಗೂ ಮ್ಮ ಗ್ರಾಮದವರೊಂದಿಗೆ ಕಾಯಿಪಲ್ಲೆ ವ್ಯಾಪಾರ ಕುರಿತು ಗುಲಬರ್ಗಾಕ್ಕೆ ಹೋಗುವಾಗ ಶರಣಸಿರಸಗಿ ಮಡ್ಡಿ ಹತ್ತಿರ ಪೆಟ್ರೋಲ ಪಂಪ ಹತ್ತಿರ ಸಂತೋಷ ತಂದೆ ಶರಣಬಸಪ್ಪ ಚನ್ನಪ್ಪಗೋಳ ಸಾ: ಕಣ್ಣಿ ಗ್ರಾಮ ಮಹೇಂದ್ರ ಮಾಕ್ಸ ಪಿಕ್‌ಅಪ್‌‌ ಗಾಡಿ  ಕೆಎ 23 9383 ನೇದ್ದರ ಚಾಲಕ ಮತ್ತು ಟಂಟಂ ನಂಬರ ಕೆಎ  32 ಬಿ 3192 ನೇದ್ದರ ಚಾಲಕರು ತಮ್ಮ ವಾಹನಗಳನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಡಿಕ್ಕಿ ಪಡೆಯಿಸಿಕೊಂಡಿದ್ದರಿಂದ ಚಂದ್ರಕಾಂತ  ತಂದೆ ನಾಗೇಂದ್ರಪ್ಪ ಗಿರೆಪ್ಪಗೋಳ,ಶಿವರಾಯ ತಂದೆ ಹಣಮಂತ ರಾಯ ಗಿರೆಪ್ಪಗೋಳ, ಭೀಮಾಶಂಕರ ತಂದೆ ಶಿವಶರಣಪ್ಪ ಬಾಗಲಕೋಟ,ಶಿವ ಲಿಂಗಯ್ಯ ತಂದೆ ಶಿವಶರಣಯ್ಯ ಹಿರೇಮಠ,ಉಮೇಶ ತಂದೆ ಶಿವಯೋಗಪ್ಪ ಗಿರೆಪ್ಪ ಗೋಳ,ಸಂತೋಷ ತಂದೆ  ಗುಂಡಪ್ಪ ಅವರಾದ,ಶಬ್ಬೀರ ತಂದೆ ರುಕ್ಕಮೋದ್ದಿನ ಮಾಸಿಲದಾರ ಸಾ: ಎಲ್ಲರೂ ಕಣ್ಣಿ ಗ್ರಾಮದವರಿಗೆ ಸಾದಾ ಹಾಗೂ ಭಾರಿಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 296/2012 ಕಲಂ 279 337 338 ಐಪಿಸಿ ಸಂ/ 187 ಐಎಂವಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಅಂಬವ್ವ ಗಂಡ  ರಾಣಪ್ಪಾ  ಕಾಳನೂರ  ಸಾ|| ಉಪಳಾಂವ ತಾ|| ಜಿ|| ಗುಲಬರ್ಗಾ ರವರು ನಾನು ಮತ್ತು ಶಾಂತಬಾಯಿ ಗಂಡ ಪ್ರಕಾಶ  ಕಾಳನೂರ ವಯ;26 ವರ್ಷ ಸಾ; ಉಪಳಾಂವ ರವರು ಕೂಡಿಕೊಂಡು  ದಿನಾಂಕ: 19/09/2012 ರಂದು ಮುಂಜಾನೆ ಗಂಟೆಗೆ ಕ್ರೋಜರ ನಂ.ಕೆಎ.39-7260 ನೇದ್ದರಲ್ಲಿ ಉಪಳಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಬರುತಿರುವಾಗ ಗುಲಬರ್ಗಾ ಹುಮನಾಬಾದ ರೋಡನ ಕಪನೂರ ಹತ್ತಿರ ಚಕ್ಕಪೋಸ್ಟ  ಎದರುಗಡೆ ಕ್ರೋಜರ ಜೀಪ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಲಾರಿ ನಂ.ಎಪಿ.13-ಡಬ್ಲೂ.6759 ನೇದ್ದಕ್ಕೆ  ಡಿಕ್ಕಿ ಹೊಡೆದಿದ್ದರಿಂದ ಕ್ರೋಜರದಲ್ಲಿ ಕುಳಿತವರಿಗೆ ಗಾಯಗೊಳಿಸಿ  ತನ್ನ ಕ್ರೋಜರ ಜೀಪನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:297/12 ಕಲಂ 279,337.ಐಪಿಸಿ  ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ದೇವೆಂದ್ರ ತಂದೆ ಭೀಮರಾವ ಬಾಲ್ಕಿ ಸಾ:ಕಾಳಗಿ ತಾ:ಚಿತ್ತಾಪುರ ಜಿ:ಗುಲಬರ್ಗಾರವರು ನಾನು ಮತ್ತು ಗೌಸ ಪಟೇಲ & ಹಣಮಂತ ಚೀಲಾ ರವರು  ದಿನಾಂಕ:-19/09/2012 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ಟಂಟಂ ಚಾಲಕ ಪಾಂಡು ತಂದೆ ಚಂದ್ರಣ್ಣಾ ಇತನು ತನ್ನ ಟಂಟಂ ದಲ್ಲಿ ಗಣೇಶನ ಮೂರ್ತಿ ತರುವ ಕುರಿತು ಗುಲಬರ್ಗಾಕ್ಕೆ ಕಾಳಗಿಯಿಂದ ಬರುವಾಗ ಹಾಗರಗಾ ಕ್ರಾಸ ದಾಟಿ ಹುಮನಾಬಾದ ರಿಂಗ ರೋಡ ಕಡೆಗೆ ಬರುವಾಗ ಟಂಟಂ ಚಾಲಕ ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ನಿಯಂತ್ರಣ ತಪ್ಪಿ ಪಲ್ಟಿ ಮಾಡಿ ಸಾದಾ & ಭಾರಿ ರಕ್ತ & ಗುಪ್ತಗಾಯ ಪಡಿಸಿ ಟಂಟಂ ತೆಗದುಕೊಂಡು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 298/12 ಕಲಂ 279 337 338 ಐಪಿಸಿ  ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ. ಸೈಫ್ ಅಲಿ ತಂದೆ ಸಫೀಕ್ ಅಲಿ ಸಾ|| ಪ್ಲಾಟ ನಂ. 22 ಘಾಟಗೇ ಲೇಔಟ ಗುಲಬರ್ಗಾರವರು ನನಗೆ ಸುಮಾರು 3 ತಿಂಗಳ ಹಿಂದೆ ರಹಿಮಾನ ಜೂಲಕರ ಇತನು ನನ್ನ ಹತ್ತಿರ ಹಣ ಕೇಳಿದ್ದು ನನ್ನ ಹತ್ತಿರ ಹಣ ಇರುವುದಿಲ್ಲಾ ಅಂತಾ ಹೇಳಿದಕ್ಕೆ  ಜಗಳ ತಂಟೆ ತಕರಾರು ಮಾಡಿದ್ದನು. ಆಗ ಕೆಲವರು ಬುದ್ದಿವಾದ ಹೇಳಿ ಇಬ್ಬರಿಗೆ ಸಮಾಧಾನ ಪಡಿಸಿದ್ದರು.ಹಣ ಕೊಡದೇ ಇರುವುದ್ದರಿಂದ ದಿನಾಂಕ:19/09/2012 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಘಾಟಗೆ ಲೇಔಟ ದಿಂದ ಎಂ.ಎಸ್‌.ಕೆ ಮೀಲಕ್ಕೆ ನನ್ನ ಗೆಳೆಯರಿಗೆ ಹತ್ತಿರ ಹೊಗುತ್ತಿರುವಾಗ  ಸಿದ್ದಾರ್ಥ ನಗರ ಬುದ್ದ ಮಂದಿರ ಹತ್ತಿರ ಎದರುಗಡೆಯಿಂದ ರಹಿಮಾನ ಜೂಲಕರ ಮತ್ತು ಸೋಹೆಲ  ಇಬ್ಬರು ಮೊಟರ ಸೈಕಲ ನಂ. ಕೆಎ 05-ಇಆರ್‌-5390 ನೇದ್ದರ ಮೇಲೆ  ಬಂದವರೇ ಮೊಟರ ಸೈಕಲ ಅಡ್ಡಗಟ್ಟಿ ನನಗೆ ಅವಾಚ್ಯವಾಗಿ ಬೈದು ಕೈಯಲ್ಲಿದ್ದ  ಕಬ್ಬಿಣದ ರಾಡನ್ನು ತೆಗೆದುಕೊಂಡು ನನ್ನ ತೆಲೆಯ ಹಿಂದೆ ಕಿವಿ ಹತ್ತಿರ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದ್ದು, ಮತ್ತು ಕೈಯಿಂದ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:80/2012 ಕಲಂ. 341, 323, 324, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.