POLICE BHAVAN KALABURAGI

POLICE BHAVAN KALABURAGI

25 February 2017

Kalaburagi District Reported Crimes

ವಕ್ಪ ಬೋರ್ಡ ಸಂಸ್ಥೆಯ ಆಸ್ತಿ ಕಬಳಿಕೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಖಜಾತ (ಸುನ್ನಿ) ಅಫಜಲಪೂರ, ತಾಲೂಕ ಅಫಜಲಪೂರವು ಅಧಿಸೂಚಿತ ವಕ್ಪ ಸಂಸ್ಥೆಯಾಗಿದ್ದು, ಅಫಜಲಪೂರದ ಗೆಜೆಟ್ ಕ್ರಮ ಸಂಖ್ಯೆ:21 ರಲ್ಲಿ ನಮೂದಾಗಿರುತ್ತದೆ. ಹಾಗೂ ಈ ವಕ್ಪ ಸಂಸ್ಥೆಗೆಗಿರುವ ಜಮೀನಿನಲ್ಲಿ ಅನದಿಕೃತವಾಗಿ ಮರು ಒತ್ತುವರಿ ಮಾಡಿಕೊಂಡಿರುವವರ ಮೇಲೆ ವಕ್ಪ ಕಾಯ್ದೆ 1995 ಅಧಿನಿಯಮ 52ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಎಫ್..ಆರ್ ದಾಖಲಿಸಿ ಕಾನೂನು ಕ್ರಮ ಜರೂಗಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಪ ಮಂಡಳಿ ಬೆಂಗಳೂರ ರವರು ರಾಜಶೇಖರ ಸಂಗಡ 5 ಜನರು ಸಾ : ಎಲ್ಲರು ಬೊಳ್ಳುರಗಿ ರವರು ಸರ್ವೆ ನಂಬರ  217, 427/2, 120,  15,  677/2/3 ರಲ್ಲಿ ಕಬ್ಜೆ ಇರುವುದಾಗಿ ಹೇಳುತ್ತಿದ್ದು. ಆದರೆ ಸದರಿಯವರು ಈ ಆಸ್ತಿಗಳ ಮೇಲೆ ಯಾವುದೆ ರೀತಿಯ ಕಾನೂನು  ಬದ್ದ ಅಧಿಕಾರ ಹೊಂದಿರುವುದಿಲ್ಲ. ಸದರಿ ಆಸ್ತಿಯು ವಕ್ಪ ಬೋರ್ಡಿಗೆ ಸಂಭಂದಿಸಿದ್ದು ಇರುತ್ತದೆ. ಈ ಆಸ್ತಿಗೆ ಸಂಭಂದಿಸಿದಂತೆ ತಹಸಿಲ್ದಾರ ಅಫಜಲಪೂರ ರವರು ದಿನಾಂಕ 06-05-2014 ರಂದು ಪಂಚನಾಮೆ ಮಾಡಿ ಈಗಾಗಲೆ ಸದರಿಯವರನ್ನು ಕಬ್ಜೆಯಿಂದ ತೆರವುಗೊಳಿಸಿರುತ್ತಾರೆ. ಆದರೆ ಆರೋಪಿತರು ಮರು ಒತ್ತುವರಿ ಮಾಡಿ ವಕ್ಪ ಕಾಯ್ದೆ 1995 ಅಧಿನಿಯಮ 52 ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಅಫರಾದ ಮಾಡಿರುತ್ತಾರೆಈ ವಿಷಯವನ್ನು ಗಂಬಿರವಾಗಿ ಪರಿಗಣಿಸಿ ಅನದಿಕೃತ ಮರು ಒತ್ತುವರಿದಾರರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಗುಲಾಮ ಸಮದಾನಿ ಜಿಲ್ಲಾ ವಕ್ಪ ಅಧಿಕಾರಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ : 23.02.17 ರಂದು ಸಾಯಂಕಾಲ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯ ಗೋಲ್ಲಾಳಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ ಇಬ್ಬರು ನನ್ನ ಮೊಟಾರ ಸೈಕಲದ ಮೇಲೆ ಮತ್ತು ನಮ್ಮೂರ ಕಡೆಗೆ ನಡೆದಿದ್ದೆವು. ಅಲ್ಲದೆ ನಮ್ಮೂರ ಸಂತೋಷ ತಂದೆ ಮಲ್ಲಪ್ಪ ತಳವಾರ ಮತ್ತು ಸೈಯದ ಹಬೀಬ ತಂದೆ ಅಹೇಮದ ಸಾಬ ಜಮಾದಾರ. ಇವರು ಕೂಡಾ ತಮ್ಮ ಮೊಟಾರ ಸೈಕಲ ಮೇಲೆ ನಮ್ಮೂರ ಕಡೆಗೆ ನಡೆದಿದ್ದರು. ಸಾಯಾಂಕಾಲ 5.30 ಗಂಟೆ ಸುಮಾರಿಗೆ ನಾವು ಅವರಾದ ಕ್ರಾಸ ಹತ್ತಿರ ಹೋಗುತ್ತಿರುವಾಗ ಅವರಾದ ಕ್ರಾಸ ಹತ್ತಿರ ನಮ್ಮ ಮಾವ ತುಳಜಾರಾಮ ತಂದೆ ಶಂಕರ ರಾಠೋಡ ಇತನು ಕೂಡಾ ತನ್ನ ಮೊಟಾರ ಸೈಕಲ ನಂ ಕೆಎ-32-ಇಜಿ-5146 ನೇದ್ದರ ಮೇಲೆ ಕುಳಿತಕೊಂಡು ಊರ ಕಡೆಗೆ ನಡೆದಿದ್ದನು. ಅದೆ ವೇಳೆಗೆ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಟ್ಯಾಂಕರ ಚಾಲಕನು ತನ್ನ ಟ್ಯಾಂಕರ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮುಂದೆ ರೋಡಿನ ಸೈಡಿನಿಂದ ನಿದಾನವಾಗಿ ಹೋಗುತ್ತಿದ್ದ ನಮ್ಮ ಮಾವನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಚಾಲಕನು ತನ್ನ ಟ್ಯಾಂಕರ್ ಅನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದನು. ನಾವು ನಮ್ಮ ಮೊಟಾರ ಸೈಕಲಗಳನ್ನು ನಿಲ್ಲಿಸಿ ಓಡಿ ಹೋಗಿ ನೋಡಲು ನಮ್ಮ ಮಾವನ ಬಲಬಾಗದ ಮೇಲಕಿನ ಹತ್ತಿರ, ತಲೆಗೆ, ಹಣೆಗೆ, ಬಾಯಿಗೆ ಹಾಗೂ ಎಡಗೈ ಅಂಗೈಗೆ ಭಾರಿ ರಕ್ತಗಾಯವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಂತರ ಟ್ಯಾಂಕರ್ ನಂ ನೋಡಲಾಗಿ ಕೆ.ಎ03-ಎಎ-1194 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೇಳಲಾಗಿ ಅನೀಲ ತಂದೆ ಮಚೇಂದ್ರ ಕಾರಂಜೆ ಸಾ|| ಕೂಡ್ಲಿ ಎಂದು ಹೇಳಿ ಸ್ಥಳದಲ್ಲಿ ಜನರು ಸೇರುವುದನ್ನು ನೋಡಿ ಅವನು ಟ್ಯಾಂಕರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 23-02-2017 ರಂದು ಶ್ರೀ ಚಂದ್ರಶೇಖರ ತಂದೆ ದಾಸಪ್ಪಾ ರಾಗಿ ಸಾ: ಓಕಳಿ ಕ್ಯಾಂಪ ಸೇಡಂ ರೋಡ ಕಲಬುರಗಿ ರವರಿಗೆ ಪೋನ ಮೂಲಕ  ಯಾರೋ ನನ್ನ ಮಗ ಅವಿನಾಶನ ಕಾರು ಹಡಗಿಲ ಹಾರುತಿ ಕ್ರಾಸ ಹತ್ತಿರ ಇರುವ ಕೆಇ ಬಿ ಮುಂದಿನ ರೋಡ ಮೇಲೆ ಕಾರ ನ ಕೆಎ 32 ಎನ್ 3685 ನೇದ್ದು ಪಲ್ಟಿಯಾಗಿದ್ದು ಅವನಿಗೆ ಯುನೇಟೆಡ್ ಆಸ್ಪತ್ರೆಗೆ ತೆಗೆದು ಕೊಂಡು ಬರುತ್ತಿದ್ದೇವೆ ಅಂತಾ ಹೇಳಿದ್ದರಿಂದ ಆಸ್ಪತ್ರೆಗೆ ಬಂದು ನೋಡಲಾಗಿ ಅವಿನಾ ಶನಿಗೆ ಬಲಹಣೆಗೆ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಬಲ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಕಾರು ಅತಿವೇಗವಾಗಿ ಅಲಕ್ಷತನದಿಂದ  ಚಲಾಯಿಸಿ ದ್ದರಿಂದ ಕಾರಿನ ಮುಂದಿನ ಎಕ್ಸ್ಲ್ ಕಟ್ ಆಗಿಪಲ್ಟಿಯಾಗಿದ್ದು ಘಟನೆಯು ಮದ್ಯಾಹ್ನ 2:45 ಗಂಟೆಯ ಸುಮಾರಿಗೆ ಜರುಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.