POLICE BHAVAN KALABURAGI

POLICE BHAVAN KALABURAGI

31 May 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:30/05/2013 ರಂದು ಬೆಳಿಗ್ಗೆ 11-30 ಗಂಟೆಗೆನಾನುಮತ್ತು ಶರಣಪ್ಪ ಇಬ್ಬರು ಕೂಡಿಕೊಂಡು ಊರಿಗೆ ಹೋಗುವ ಕುರಿತು ಕೇಂದ್ರ ಬಸ್ಸ್ ನಿಲ್ದಾಣದ ಎಡಭಾಗದಲ್ಲಿರುವ ಖಾಸಗಿ ಬಸ್ ಜೀಪ ನಿಲ್ಲುವ ಸ್ಥಳಕ್ಕೆ ಹೋದಾಗ ಎಲ್ಲಿ ಊರಿಗೆ ಹೋಗುವ ವಾಹನ ಇರದೆ ಇದ್ದುದರಿಂದ ಸ್ವಲ್ಪ ಕುಡಿಯೊಣ ಅಂತ ಇಬ್ಬರು ಕೂಡಿಕೊಂಡುವಿನಾಯಕ ಬಾರ ಹತ್ತಿರ ಹೊಗುವಷ್ಟರಲ್ಲಿ 20-25 ವರ್ಷದವರು ಇಬ್ಬರು ಅದರಲ್ಲಿ ಒಬ್ಬ ಕಪ್ಪಾಗಿದ್ದು ಉದ್ದನೆ ಕುದಲು ಇನ್ನೊಬ್ಬ ಕಪ್ಪಾಗಿದ್ದು ಸಣ್ಣ ಕುದಲು ಇದ್ದವರು ನಮ್ಮನ್ನು ನೋಡಿ ಏ ಭೋಸಡಿ ಮಕ್ಕಳ್ಯಾ ಇಲ್ಲಿ ಬರ್ರಿ ಅಂತ ಕಪ್ಪಾಗಿರುವ ಸಣ್ಣ ಕುದಲಿನವನು ಕರೆದ ನಾವು ಏನು ಅಂತ ಅವರ ಹತ್ತಿರ ಹೋಗುವಷ್ಟರಲ್ಲಿ ಅವರಲ್ಲಿಯ ಇನ್ನೊಬ್ಬನು ಅವಾಚ್ಯವಾಗಿ ಬೈದು ಬೋಸಡಿ ಮಕ್ಕಳೆ ಏಲ್ಲಿಯವರು ನೀವು ಈ ಗುಲಬರ್ಗಾ ನಿಮ್ಮಪ್ಪಂದು ಯಾಕ ತಿರುಗ್ಯಾಡುತ್ತಿರಿ ನಮಗೆ ಮಧ್ಯ ಕುಡಿಸಿ ಅಂತ ನನ್ನ ಅಂಗಿ ಹಿಡಿದಿದ್ದು ಆಗ ನಾನು ಯಾಕೆ ಅಂತ ಅನ್ನುವಷ್ಟರಲ್ಲಿ ಉದ್ದ ಕೂದಲಿದ್ದವನು ಮರ್ಯಾದಿ ಇಂದ ಕೂಡಿಸು ಇಲ್ಲದಿದ್ದರೆ ಈ ಬ್ಲೇಡಚಾಕುವಿನಿಂದ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂದವನೆ ನನ್ನ ಮೇಲೆ ಹೊಡೆಯಲು ಬಂದಿದ್ದು ಆಗ ಶರಣಪ್ಪ ಇತನು ಬಿಡಿಸಿಕೊಳ್ಳಲು ಬಂದಾಗ ಅವನಿಗೂ ಸಹ ಹೊಡೆದು ನೂಕಿಕೊಟ್ಟು ಬ್ಲೇಡಚಾಕುವಿನಿಂದ ನನ್ನ ಕುತ್ತಿಗೆ ನಳ್ಳಿ ಹತ್ತಿ ಎಡಭಾಗದಲ್ಲಿ ಜೋರಾಗಿ ಹೊಡೆದು ಅದರಿಂದ ನನಗೆ ಭಾರಿ ಗಾಯವಾಗಿ ರಕ್ತ ಸೊರಹತ್ತಿದ್ದು ಆಗ ಅಂಗಡಿಯವರು ಮತ್ತು ಇತರರನ್ನುನೋಡಿ ನನ್ನನ್ನು ಬಿಟ್ಟು ಓಡಿಹೋಗಿರುತ್ತಾರೆ.ವಿನಾಕಾರಣ ತಂಟೆ ಕತರಾರು ಮಾಡಿ ಮಧ್ಯ ಕುಡಿಸು ಅಂತ ಬ್ಲೇಡಚಾಕುವಿನಿಂದ ಹೊಡೆದಿರುವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಯ್ಯ ತಂದೆ ಸಿದ್ದಯ್ಯ ಮಠಪತಿ ಸಾ|| ವಜ್ಜರಗಾವಂ ತಾ|| ಚಿಂಚೋಳಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2013 ಕಲಂ. 323, 324, 307, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:

ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ, ಮೇರಾಬಿ ಗಂಡ ಉಸ್ಮಾನಸಾಬ ಮೇಲ್ದಾರ್ ಸಾ|| ಆಲ್ಲೂರ (ಬಿ) ರವರು ನಿನ್ನ ದಿವಸ ನಾವು ನಿನ್ನಗೆ  ಹೋಡೆದಿದ್ದವಿ ಅಂತಾ ನಮ್ಮ ವಿರುದ್ಧ  ಪೋಲಿಸ್ ಠಾಣೆಯಲ್ಲಿ  ಕೇಸು ಮಾಡಿದ್ದಿ ಅಯ್ಯುಬ ಖಾನ  ತಂದೆ ಮೈಹಿಬೂಬ ಅಲಿ ಮೇಲ್ದಾರ್ ಸಾ|| ಅಲ್ಲೂರ (ಬಿ) ಮತ್ತು ಅವನ ಹೆಂಡತ್ತಿ ಶಬಾನ ಬೇಗಂ ಗಂಡ ಅಯ್ಯುಬ ಖಾನ  ಮೇಲ್ದಾರ್ ಸಾ|| ಅಲ್ಲೂರ (ಬಿ)    ರವರು ಅವಾಚ್ಯ ಶಬ್ದಗಳಿಂದ  ಬೈಯುತ್ತಾ ಅಯ್ಯುಬ ಖಾನ  ಇತನು ನನಗೆ ಬೆನ್ನ ಮೇಲೆ .ಹೊಟ್ಟೆಯ ಮೇಲೆ ಹೊಡೆದಿದ್ದು, ಶಬಾನ ಬೇಗಂ ಇವಳು  ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದು ಅಯ್ಯುಬ ಖಾನ  ಇತನು ನೆಲಕ್ಕೆ ಹಾಕಿ ಕುಳಿತು ಕುತ್ತಿಗೆ ಒತ್ತಿ ಹಿಡಿದು ಖಲಾಸ ಮಾಡಿಯೇ ಬಿಡುತ್ತನೆ ಅಂತಾ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತಾ ಶ್ರೀಮತಿ ಮೇರಾಬಿ ರವರು ದೂರ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:77/2013 ಕಲಂ, 323, 324, 354, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

29 May 2013

GULBARGA DISTRICT REPORTED CRIME

ಕೊಲೆಗೆ ಪ್ರಯತ್ನ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸೈಯದ ಅಮೀರ ತಂದೆ ಚಾಂದಪಾಶಾ ವಯ:22 ಉ:ವಿದ್ಯಾರ್ಥಿ ಸಾ:ಇಕ್ಬಾಲ ಕಾಲೋನಿ ಗುಬಲರ್ಗಾ ಇತನು ನನ್ನ ಗೆಳೆಯ ಶರೀಫ ಇತನೊಂದಿಗೆ ತಿಂಗಳ ಹಿಂದೆ ಝಿಬರಾನ ಇತನು ಕ್ರಿಕೆಟ ಆಡುತ್ತಿರುವಾಗ ಜಗಳ ತೆಗೆದು ಹೊಡೆಬಡೆ ಮಾಡಿದ್ದರು. ಅದಕ್ಕೆ ಅಮೀರ ಇತನು ಏಕೆ ಹೊಡೆದಿರುತ್ತಿರಿ ಅಂತ ಕೇಳಿದಕ್ಕೆ ಅವನು ನಿನಗೂ ಮುಂದೆ ನನಗೆ ನೋಡಿಕೊಳ್ಳುತ್ತೆನೆ ಅಂತ ಹೇಳಿದ್ದನು. ದಿನಾಂಕ:27-05-13 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ಸಲಾಉದ್ದಿನ ಮತ್ತು ಬಾಬ ಇವರೊಂದಿಗೆ ಮದೀನಾ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಜಿಬರಾನ ಇತನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ತಲವಾರ ತೆಗೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ತಲವಾರದಿಂದ ನನ್ನ ಎಡಕಿವಿಯ ಹಿಂದಿನ ಭಾಗದ ತಲೆಯ ಮೇಲೆ, ಬಲಗೈಯ ಅಂಗೈಯ ಮೇಲೆ ಹೊಡೆದು ಭಾರಿರಕ್ತಗಾಯಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:69/2013 ಕಲಂ 341 307 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 May 2013

GULBARGA DISTRICT REPORTED CRIME

ಹಲ್ಲೆ ಪ್ರಕರಣ:

ಸೇಡಂ ಪೊಲೀಸ್ ಠಾಣೆ: ಶ್ರೀ. ಸಾಯಬಣ್ಣ ತಂದೆ ದೇವಿಂದ್ರಪ್ಪ ನಾಯ್ಕೋಡಿ, ವಯ:67 ವರ್ಷ, ಜಾತಿ:ಬೇಡರ, ಉ:ನಿವೃತ್ತ ನೌಕರರು, ಸಾ:ಶೆಟ್ಟಿ ಹೂಡಾ, ತಾ:ಸೇಡಂ ರವರು ನನಗೆ ಚಂದ್ರಕಾಂತ ಮತ್ತು ದೇವಿಂದ್ರಪ್ಪ ಅಂತ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆ ಆಗಿದ್ದು ಬೇರೆ-ಬೇರೆ ಮನೆಯಲ್ಲಿ ವಾಸವಾಗಿರುತ್ತಾರೆ, ನನ್ನ ಹಿರಿಯ ಮಗನಾದ ಚಂದ್ರಕಾಂತ ಇತನು ನನಗೆ ಆಸ್ತಿಯಲ್ಲಿ ಪಾಲು ಸರಿಯಾಗಿ ಕೊಟ್ಟಿಲ್ಲ ಅಂತಾ 2-3 ವರ್ಷಗಳಿಂದ ನನ್ನೊಂದಿಗೆ ಜಗಳ ಮಾಡುತ್ತಿದ್ದು ಈ ವಿಷಯದಲ್ಲಿ ಜಗಳವಾಗಿ ಹೊಡೆಬಡೆ ಆಗಿದ್ದರಿಂದ ಈ ಮೊದಲು ಪ್ರಕರಣ ದಾಖಲಾಗಿದೆ. ಅದೇ ವೈಮನಸ್ಸು ಇಟ್ಟುಕೊಂಡು ದಿನಾಂಕ:19-05-2013 ರಂದು ಮಧ್ಯಾಹ್ನ 12 ಗಂಟೆಗೆ ಶೆಟ್ಟಿ ಹುಡಾದ ವಾಲ್ಮಿಕಿ ನಗರದ ಮನೆಯಲ್ಲಿರುವಾಗ ಚಂದ್ರಕಾಂತನ ಮಗನಾದ ಗಣೇಶ ನಾಯ್ಕೋಡಿ ಇತನು ಮನೆಯೊಳಗೆ ಬಂದು  ಮನೆಯಲ್ಲಿದ್ದ ಮಂಚ, ಪ್ಲಾಸ್ಟಿಕ್ ಕುರ್ಚಿಗೆ ಮತ್ತು ಇತರೆ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಒಡೆದು ಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೊಡೆದು ಬಲಗಾಲಿಗೆ ಗುಪ್ತಗಾಯ ಪಡಿಸಿರುತ್ತಾನೆ. ಈ ಘಟನೆಗೆ ಚಂದ್ರಕಾಂತ, ಭಾಗ್ಯಲಕ್ಷ್ಮೀ ಮತ್ತು ಅವರ ತಾಯಿಯ ಸಂಬಂಧಿಯಾದ ಭದ್ರಿ ಇವರ ಪ್ರಚೋದನೆಯೇ ಕಾರಣವಾಗಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2013 ಕಲಂ,448, 324, 504, 506, 109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 May 2013

GULBARGA DISTRICT REPORTED CRIME

ಮನುಷ್ಯ ಕಾಣೆಯಾದ ಪ್ರಕರಣ:

ಫರತಬಾದ ಪೊಲೀಸ್ ಠಾಣೆ:ದಿನಾಂಕ:15-05-2013 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಜೋಗುರ ಗ್ರಾಮದಲ್ಲಿ ವಕೀಲ ಎಂಬುವವರ ಹೊಲದಲ್ಲಿ ಮನೆ ಕಟ್ಟುವ ಸಲುವಾಗಿ ನನ್ನ ಗಂಡ ನಾಗು @ ನಾಗರಾಜ, ಆನಂದ, ರವಿ, ಶಂಕರ, ಮತ್ತು ಸೈದಪ್ಪ ಮಾನಕರ ಇವರೆಲ್ಲರೂ ಜೋಗೂರು ಗ್ರಾಮದಲ್ಲಿ ಕೆಲಸಕ್ಕೆ ಹೋಗಿತ್ತಿದ್ದರು. 15 ನೇ ತಾರಿಖಿನ ರಾತ್ರಿಯಿಂದ ನನ್ನ ಗಂಡ ಮನೆಗೆ ಬಾರದೆ ಇರುವುದರಿಂದ ದಿನಾಂಕ:21-05-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಫೊನ ಮಾಡಿ ನನ್ನ ಗಂಡ ನಾಗರಾಜ ಇತನು ಮನೆಗೆ ಬಂದಿರುವುದಿಲ್ಲಾ ಅಲ್ಲೆ ಇದ್ದಾನೆ ಹೇಗೆ ಅಂತಾ ಕೇಳಲು ಅವರು ದಿನಾಂಕ:20-05-2013 ರಂದು ಬೆಳಿಗ್ಗೆ 6-00 ಗಂಟೆಗೆ ನಮ್ಮ ಹತ್ತಿರದ ಒಂದು ಅಂಗಿಯನ್ನು ತೆಗೆದುಕೊಂಡು ಗುಲಬರ್ಗಾಕ್ಕೆ ಹೋಗುತ್ತೆನೆ ಅಂತಾ ಹೋಗಿರುತ್ತಾನೆ, ಆದರೆ ಅವನ ಜೊತೆಗೆ ಕೆಲಸ ಮಾಡುವವರು ಇಲ್ಲೆ ಇದ್ದಾರೆ ಅಂತಾ ತಿಳಿಸಿದನು. ನಾನು ಮತ್ತು ನಮ್ಮ ಅತ್ತೆ ಕಲ್ಪನಾ ಇಬ್ಬರೂ ಜೋಗುರು ಗ್ರಾಮದ ಹೋಲಕ್ಕೆ ಹೋಗಿ ಕೆಲಸ ಮಾಡುವವರೆಗೆ ಕೇಳಲು ಸೈದಪ್ಪಾ ಅನ್ನುವವನು ನಾವೆಲ್ಲರೂ ದಿನಾಂಕ:19-05-2013 ರಂದು ಊಟ ಮಾಡಿ ಮಲಗಿದ್ದು, ಶಂಕರ ಇತನು ಬೇರೆ ಕಡೆಗೆ ಮಲಗಿದನು. ಬೆಳಿಗ್ಗೆ 5-00 ಗಂಟೆಗೆ ಎದ್ದು ನೋಡಲು ನಾಗರಾಜ ಇತನು ಕಾಣಲಿಲ್ಲಾ ಆಗ ನಾನು ನನ್ನ ಜೋತೆ ಇರುವ ಶಂಕರನಿಗೆ ಕೇಳಲು ರಾತ್ರಿ ನನ್ನ ಹತ್ತಿರ ಬೀಡಿ ಇಸಿದುಕೊಂಡು ಸೇದಿ ಹೋಗಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನಾದ ನಾಗು @ ನಾಗರಾಜ ತಂದೆ ಶಿವಕುಮಾರ ಜಾಧವ ವಯ: 30 ವರ್ಷ ಜಾ: ವಡ್ಡರ ಉ: ಗೌಂಡಿಕೆಲಸ ಸಾ: ವಡ್ಡರ ಗಲ್ಲಿ ಬ್ರಹ್ಮಪೂರ ಗುಲಬರ್ಗಾ  ಇತನು ನಾವು ಹುಡಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ ಶ್ರೀಮತಿ ಮಲ್ಲಮ್ಮ ಗಂಡ ನಾಗು @ ನಾಗರಾಜ ಜಾಧವ ವಯಾ||25 ವರ್ಷ ಜಾ: ವಡ್ಡರ ಸಾ:ವಡ್ಡರ ಗಲ್ಲಿ ಬ್ರಹ್ಮಪೂರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:74/2013 ಕಲಂ, ಮನುಷ್ಯ ಕಾಣೆ ಬಗ್ಗೆ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

24 May 2013

GULBARGA DISTRICT REPORTED CRIMES

ಕೊಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:23/05/2013 ರಂದು  ಜೇರಟಗಿ ಗ್ರಾಮದಲ್ಲಿ ಇದ್ದಾಗ ಜೆರಟಗಿ ಗ್ರಾಮದ ಯುಕೆಪಿ ಕ್ಯಾಂಪಿನ ಹತ್ತಿರ ಒಬ್ಬ ಹೆಣ್ಣು ಮಗಳು ಮೃತ ಪಟ್ಟಿರುತ್ತಾಳೆ ಅಂತಾ ವಿಷಯ ತಿಳಿದುಕೊಂಡು ಹೋಗಿ ನೋಡಲು 15 ದಿವಸಗಳ ಹಿಂದೆ ನಮ್ಮೂರಿಗೆ ಗೂರ್ಖಾ ಕೆಲಸ ಮಾಡಲು ನೇಪಾಳದಿಂದ ಧನಸಿಂಗ್ ತಂದೆ ದೇಬಿಸಿಂಗ್ ವಯಾ||26 ಉ:ಗೂಖಾ ಕೆಲಸ ಸಾ:ನೇಪಾಳಿ ಹಾ:ವ:                                                           ಜೆರಟಗಿ ಎಂಬುವವನು ತನ್ನ ಹೆಂಡತಿ ಮಕ್ಕಳೊಂದಿಗೆ ಬಂದು ಯುಕೆಪಿ ಕ್ಯಾಂಪಿನ ಹತ್ತಿರ ನನ್ನ ಚಪ್ಪರದ ಮನೆಯಲ್ಲಿ ಬಾಡಿಗೆ ಹಿಡಿದುಕೊಂಡು ವಾಸವಾಗಿದ್ದನು. 2-3 ದಿವಸಗಳ ಹಿಂದಿನಿಂದಲೂ ಧನಸಿಂಗ್ ಇತನು ಮಧ್ಯ ಕುಡಿದು ಬಂದು ತನ್ನ ಹೆಂಡತಿಯ ಸಂಗಡ ಜಗಳ ಮಾಡುತ್ತಾ ಬಂದಿದ್ದನು, ದಿನಾಂಕ:23/05/2013 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ತನ್ನ ಹೆಂಡತಿಯಾದ ರಾಮಕಲಾ ಇವಳೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿ ತನ್ನ ಹೆಂಡತಿಯ ಕುತ್ತಿಗೆಗೆ ನೂಲಿನಿಂದ ಬಿಗಿದು ಕೊಲೆ ಮಾಡಿ ಶವವು ಮನೆಯ ಅಡ್ಡಿ ಕಟ್ಟಿಗೆಗೆ ತೂಗಿ ಹಾಕಿ ಓಡಿ ಹೋಗಿರುತ್ತಾನೆ ಅಂತ ಶ್ರೀ ಅಲ್ಲಾಭಕ್ಷ ತಂದೆ ನಬೀಸಾಬ ಯಂಕಂಚಿ ಸಾ: ಜೇರಟಗಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:79/2013 ಕಲಂ,302, 201  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀವಿಠ್ಠಲ ತಂದೆ ಮದರಪ್ಪಾ ಜಮಾದಾರ ಸಾ||ಧರ್ಮವಾಡಿ ರವರು ನಾವು ದಿನಾಂಕ:23-05-2013 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಟಮ್ ಟಮ್  ನಂಬರ ಕೆಎ-32 ಎಬಿ-5029 ನಮ್ಮ ಸಂಭಂಧಿಕರಾದ ವಿಮಲಾಬಾಯಿ ಗಂಡ ಶಿವಾನಂದ ಜಮಾದಾರ ಸಾ|| ಕಡಗಂಚಿ ಹಾಗೂ ಪರಮೇಶ್ವರ, ವೈಶಾಲಿ ಮತ್ತಿತರರು ಕೂಡಿಕೊಂಡು ಟಮ್ ಟಮ್ ದಲ್ಲಿ ಕಡಗಂಚಿ ಗ್ರಾಮದಿಂದ ಭಟ್ಟರ್ಗಾ ಗ್ರಾಮಕ್ಕೆ ದೇವರ ಕಾರ್ಯಕ್ರಮಕ್ಕೆ ಹೊಗುತ್ತಿರುವಾಗ ನಿಂಬರ್ಗಾ ತಾಂಡಾದ ಸಮೀಪ ರೋಡಿನ ಮೇಲೆ ಟಮ್ ಟಮ್ ಚಾಲಕನಾದ ಶ್ರೀಶೈಲ ತಂದೆ ಪರಮೇಶ್ವರ ಜಮಾದಾರ ಸಾ|| ಕಡಗಂಚಿ ಇತನು ತನ್ನ ವಾಹನವನ್ನು ಅತೀ ವೇಗ ಮತ್ತು  ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತಪಡಿಸಿದನು. ಅದರಿಂದ ನಮ್ಮೆಲ್ಲರಿಗೆ ಹಾಗೂ ಚಾಲಕನಿಗೆ ಭಾರಿಗಾಯ ಮತ್ತು ಸಾದಾಗಾಯಗಳಾದವು. ಭಾರಿವಾಗಿರುವ ವಿಮಲಾಬಾಯಿ ಗಂಡ ಶಿವಾನಂದ ಜಮಾದಾರ ಇವಳಿಗೆ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿಳು ಕಾರನ ಟಂಟಂ ಚಾಲಕನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ, 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಕೊಲೆ ಪ್ರಕರಣ:

ವಾಡಿ ಪೊಲೀಸ್ ಠಾಣೆ:ದಿನಾಂಕ:22-05-2013 ರಂದು ರಾತ್ರಿ ಬಸಪ್ಪನ ಖಣಿಯ ಏರಿಯಾದಲ್ಲಿಯ ಮುದುಕಪ್ಪನ ಮಗಳ ಮದುವೆ ನಿಶ್ಚಿತಾರ್ಥ ಕಾರಣದ ಊಟಕ್ಕೆ ನನ್ನ ಮಗ ಲಚ್ಚಮಯ್ಯ ಇತನು ತನ್ನ ಗೆಳೆಯರೊಂದಿಗೆ ಹೋಗಿ ಊಟ ಮುಗಿಸಿಕೊಂಡು ಮರಳಿ 1.30 ಗಂಟೆಯ ಸುಮಾರಿಗೆ ಸಂತೋಷ ತಂದೆ ರಾಮು, ಸುಂಕಪ್ಪ ತಂದೆ ನಾಗಪ್ಪ, ಸುಭಾಶ ತಂದೆ ಯಂಕಟೇಶ ಎಲ್ಲರೂ ಕೂಡಿಕೊಂಡು ಹನುಮಾನ ಗುಡಿಯ ಕಡೆಗೆ ಹೊರಟಾಗ ನಮ್ಮ ಓಣಿಯ ಸತ್ಯಪ್ಪ ತಂದೆ ರಾಮಯ್ಯ ಬಂಡಿ ಒಡ್ಡರ ಇತನು ಬಂದು ಅವಾಚ್ಯವಾಗಿ ಬೈದು ಇಷ್ಟು ರಾತ್ರಿ ಆಗಿದೆ ಮನೆಗೆ ಹೋಗಿ ಮಲಗಿರಿ ಅಂತಾ ಬೈದು ತನ್ನ ಮನೆಯ ಕಡೆಗೆ ಹೊರಟು ಹೋದನು. ಲಚ್ಚಮಯ್ಯ ಹಾಗೂ ಇತರರು ಕೂಡಿಕೊಂಡು ಹನುಮಾನ ದೇವರ ಕಟ್ಟೆಯ ಹತ್ತಿರ ಬಂದು ಕುಳಿತುಕೊಂಡರು. ದಿನಾಂಕ:23-05-2013 ರಂದು 3-00  ಗಂಟೆಯ ಸುಮಾರಿಗೆ ಸತ್ಯಪ್ಪ ಈತನು ತನ್ನ ಕೈಯಲ್ಲಿ ಪ್ಲಾಸ್ಟಿಕ ಪೈಪ ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಪ್ಲಾಸ್ಟಿ ಪೈಪದಿಂದ ಲಚ್ಚಮಯ್ಯನ ತಲೆಯ ಹಿಂದಗಡೆ ಹೊಡೆದಿದ್ದು ಅಲ್ಲದೆ ಕೈಯಿಂದ ಎಡ ಕಪಾಲೆಗೆ ಹೊಡೆದಿದ್ದರಿಂದ ಲಚ್ಚಮಯ್ಯ ಕೆಳಗಡೆ ಬಿದ್ದು ಬೇವೋಸ ಆದನು. ಆತನಿಗೆ ಕಿವಿಯಲ್ಲಿ ಮೂಗಿನಲ್ಲಿ ಬೀಡಿ ಊದಿ ಎಬ್ಬಸಿದರೂ ಸಹ ಏಳದೇ ಇರುವುದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗ ಲಚಮಯ್ಯಾ ಇತನಿಗೆ ಡಾಕ್ಟರ ಹತ್ತಿರ ತೋರಿಸಲು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವದಾಗಿ ತಿಳಿಸಿದರು. ನನ್ನ ಮಗನಿಗೆ ಪ್ಲಾಸ್ಟಿಕ ಪೈಪದಿಂದ ಹೊಡೆದು ಕೊಲೆ ಮಾಡಿದ ಸತ್ಯಪ್ಪನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಹಣಮಂತಾ ತಂದೆ ತಮ್ಮಣ್ಣ ಬಂಡಿ ಒಡ್ಡರ ಸಾ||ಬಸ್ಸಪ್ಪನ ಖಣಿ ವಾಡಿ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:96/2013 ಕಲಂ 504,302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಸುನೀತಾ ಗಂಡ ರವಿ ಗುಂಜಿ ಸಾ: ಧುತ್ತರಗಾಂವ ಗ್ರಾಮ ತಾ: ಆಳಂದ ರವರುದಿನಾಂಕ:22-05-2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನೀರಿನ ಟ್ಯಾಂಕರದಿಂದ ನೀರು ಸಪ್ಲಾಯ ಮಾಡುತ್ತಿದ್ದಾಗ ನಾನು ನೀರಿನ ಕೊಡದೊಂದಿಗೆ ಪಾಳಿಯಲ್ಲಿ ನಿಂತಿರುವಾಗ ಗಣಪತಿ ಮರಗು ವಡ್ಡರ ಇತನು ಅವಾಚ್ಯವಾಗಿ ಬೈದು ನಿನ್ಯಾಕೇ ನೀರು ತುಂಬುತ್ತಿ ಅಂತಾ ಕೈಯಿಂದ ಬೆನ್ನ ಮೇಲೆ ಹೊಡೆದು ಕೈ ಮುಷ್ಠಿ ಮಾಡಿ ಹೊಟ್ಟೆಗೆ ಗುದ್ದಿದನು. ಆತನ ತಮ್ಮ ರವಿ ಇತನು ಬಂದು ನನ್ನ ಕೆಳ ಹೊಟ್ಟೆಗೆ ಒದ್ದನು ಅವನ ತಂದೆ ಮರಗು ಇತನು ಸಹ ನೀನು ಊರು ಬಿಟ್ಟು ಹೋಗು ಅಂತಾ ಬಡಿಗೆಯಿಂದ ಹೊಟ್ಟೆಯ ಮೇಲೆ ಹೊಡೆದಿದ್ದರಿಂದ ಒಳ ಪೆಟ್ಟಾಗಿರುತ್ತದೆ.ಈರಮ್ಮ ಗಂಡ ಮರಗು ಇವಳು  ಸಹ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ 57/2013 ಕಲಂ, 323, 324, 354, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ ಠಾಣೆ: ಶ್ರೀಮತಿ. ಮಲ್ಲಮ್ಮಾ ಗಂಡ ಕ್ರೀಷ್ಣಾ ಸಕ್ಕರಗಿ ಸಾ:ಚಲಗೇರಾ  ತಾ:ಆಳಂದ ರವರು ನಾನು ದಿನಾಂಕ:22/05/2013 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಶಿವಲಿಂಗಪ್ಪ ಸಕ್ಕರಗಿ ಇತನು ಶಾಲೆಯ ಹತ್ತಿರ ನಿಂತಾಗ ಭೀಮಾಶಂಕರ ಪಂಡರಿ,ಚಂದ್ರಕಾಂತ ತಂದೆ ಭೀಮಶ್ಯಾ ಪಂಡರಿ,ಯಲ್ಲಪ್ಪಾ ತಂದೆ ಚಂದ್ರಕಾಂತ ಪಂಡರಿ,ಶಿವಕುಮಾರ ತಂದೆ ಚಂದ್ರಕಾಂತ ಪಂಡರಿ,ದಯ್ಯವ್ವಾ ಗಂಡ ಚಂದ್ರಕಾಂತ ಪಂಡರಿ,ಕಾವೇರಿ ತಂದೆ ಚಂದ್ರಕಾಂತ ಪಂಡರಿ,ಕಮಲಾಬಾಯಿ ತಂದೆ ಭೀಮಶ್ಯಾ ಪಂಡರಿ,ಮಹಾಪುರವ್ವಾ ತಾಯಿ ಕಮಲಾಬಾಯಿ ಪಂಡರಿ  ಸಾ:ಚಲಗೇರಾ  ರವರೆಲ್ಲರೂ ಕಾರಣವಿಲ್ಲದೇ ನನ್ನ ತಮ್ಮನಿಗೆ ಅವಾಚ್ಯ ಶಬ್ಬಗಳಿಂದ ಶಬ್ಬಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ:46/2013 ಕಲಂ:143.147.323.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ರಟಕಲ್ ಪೊಲೀಸ್ ಠಾಣೆ:ದಿನಾಂಕ:23-05-2013 ರಂದು ರಾತ್ರಿ  9-30 ಗಂಟೆ ಸುಮಾರಿಗೆ ಟ್ರಾಕ್ಟರ ನಂಬರ ಕೆಎ-38 ಟಿ-1588 ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮೊಘಾ ಗ್ರಾಮದ ಹತ್ತಿರ ಟ್ರಾಕ್ಟರ ಪಲ್ಟಿ ಮಾಡಿಸಿದ್ದರಿಂದ ಟ್ರಾಕ್ಟರನಲ್ಲಿ ಕುಳಿತ ಬಸವರಾಜ ತಂದೆ ಗುಂಡಪ್ಪ ಹಣಮಗುಂಡ ಸಾ:ಚಂದನಕೇರಾ ಇತನ ಮೈಮೇಲೆ ಟ್ರಾಕ್ಟರನಲ್ಲಿದ್ದ ಪರ್ಸಿಗಳು ಬಿದ್ದಿರುವದರಿಂದ ಬಸವರಾಜ ಇತನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಪ್ಪಣ್ಣ ತಂದೆ ಸಾಯಿಬಣ್ಣ ಜಿಡಗಿ ಸಾ|| ಮೋಘಾ ತಾ|| ಚಿಂಚೋಳಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಇಂದು ದಿನಾಂಕ 24-05-2013 ರಂದು 12-30 ಎ.ಎಮಕ್ಕೆ ಠಾಣಾ ಗುನ್ನೆ ನಂ 54/2013 ಕಲಂ 279, 304 (ಎ) ಐಪಿಸಿ ಹಾಗೂ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

23 May 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಭೀಮಾಶಂಕರ ಪಂಡರಿ ವಯಾ:26 ವರ್ಷ ಉ: ಡ್ರೈವರ್   ಸಾ:ಚಲಗೇರಾ  ರವರು ನಾನು ದಿನಾಂಕ:22/05/2013 ರಂದು  ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಶಾಲೆಯ ಹತ್ತಿರ ಸೋಮಣ್ಣಾ ತಂದೆ ಬಸವಂತ ಸಕ್ಕರಗಿ ಇತನು ಶಾಲೆಯ ಹತ್ತಿರ ಸಾರಾಯಿ ಮಾರಟ ಮಾಡುತ್ತಿದ್ದಾಗ. ಶಾಲೆಯ  ಹತ್ತಿರ ಸಾರಾಯಿ ಮಾರಟ ಮಾಡಬೇಡ ಎಲ್ಲರೂ ಇಲ್ಲಿಯೆ ಕುಳಿತು ಕುಡಿಯುತ್ತಾರೆ ಅಂತಾ ಅಂದಿದಕ್ಕೆ ಸೋಮಣ್ಣಾ ಸಕ್ಕರಗಿ,ಲಕ್ಷ್ಮೀಬಾಯಿ ಗಂಡ ಸೋಮಣ್ಣಾ ಸಕ್ಕರಗಿ,ಶಿವಲಿಂಗಪ್ಪ ತಂದೆ ಸೊಮಣ್ಣಾ ಸಕ್ಕರಗಿ, ಶ್ರೀಕಾಂತ ತಂದೆ ಮಾರುತಿ ಸಕ್ಕರಗಿ, ಶ್ರೀಶೈಲ ತಂದೆ ಸೋಮಣ್ಣಾ ಸಕ್ಕರಗಿ, ಸಿದ್ದರಾಮ ತಂದೆ ಸೊಮಣ್ಣಾ ಸಕ್ಕರಗಿ ರವರೆಲ್ಲರೂ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ.ನಂ:45/2013 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:21/05/2013 ರಂದು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ಮಧ್ಯದವಧಿಯಲ್ಲಿ ಭೀಮಪೂರ ಗ್ರಾಮ ಸೀಮಾಂತರದ ನನ್ನ ಅಣಿಹೊಲದಲ್ಲಿ ಯಾರೋ ಒಬ್ಬ ಅಪರಿಚಿತ ಅಂದಾಜು ವಯ|| 50 ರಿಂದ 60 ವರ್ಷ ವಯಸ್ಸಿನ ವಾರಸುದಾರರು ಇಲ್ಲದ ಗಂಡು ಮನುಷ್ಯನು ನಮ್ಮ ಹೊಲದ ಬಂದಾರಿಯ ಬೇವಿನ ಗಿಡದ ಪಕ್ಕದಲ್ಲಿ ಬೇಸಿಗೆ ಬಿಸಿಲಿನಿಂದ ನೀರಡಿಕೆಯಾಗಿ ಅಥವಾ ಹಸಿವೆಯಿಂದ ಬಳಲಿ ಸತ್ತಿರಬಹುದು ಅವನ ಮರಣದಲ್ಲಿ ಸಂಶಯವಿರುತ್ತದೆ. ಅಂತಾ ಸೈಬಣ್ಣಾ ತಂದೆ ಹೊನ್ನಪ್ಪ ದಿಗಸಂಗ್ಗಿ ವಯಾ||65 ವರ್ಷ ಉ:ಒಕ್ಕಲುತನ ಸಾ:ಕಾಮನಳ್ಳಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲೆ ಠಾಣೆ ಯು.ಡಿ.ಆರ್.ನಂ:03/2013 ಕಲಂ: 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಭೀಮಾಶಂಕರ ಪಂಡರಿ ವಯಾ:26 ವರ್ಷ ಉ: ಡ್ರೈವರ್   ಸಾ:ಚಲಗೇರಾ  ರವರು ನಾನು ದಿನಾಂಕ:22/05/2013 ರಂದು  ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಶಾಲೆಯ ಹತ್ತಿರ ಸೋಮಣ್ಣಾ ತಂದೆ ಬಸವಂತ ಸಕ್ಕರಗಿ ಇತನು ಶಾಲೆಯ ಹತ್ತಿರ ಸಾರಾಯಿ ಮಾರಟ ಮಾಡುತ್ತಿದ್ದಾಗ. ಶಾಲೆಯ  ಹತ್ತಿರ ಸಾರಾಯಿ ಮಾರಟ ಮಾಡಬೇಡ ಎಲ್ಲರೂ ಇಲ್ಲಿಯೆ ಕುಳಿತು ಕುಡಿಯುತ್ತಾರೆ ಅಂತಾ ಅಂದಿದಕ್ಕೆ ಸೋಮಣ್ಣಾ ಸಕ್ಕರಗಿ,ಲಕ್ಷ್ಮೀಬಾಯಿ ಗಂಡ ಸೋಮಣ್ಣಾ ಸಕ್ಕರಗಿ,ಶಿವಲಿಂಗಪ್ಪ ತಂದೆ ಸೊಮಣ್ಣಾ ಸಕ್ಕರಗಿ, ಶ್ರೀಕಾಂತ ತಂದೆ ಮಾರುತಿ ಸಕ್ಕರಗಿ, ಶ್ರೀಶೈಲ ತಂದೆ ಸೋಮಣ್ಣಾ ಸಕ್ಕರಗಿ, ಸಿದ್ದರಾಮ ತಂದೆ ಸೊಮಣ್ಣಾ ಸಕ್ಕರಗಿ ರವರೆಲ್ಲರೂ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ.ನಂ:45/2013 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

22 May 2013

GULBARGA DISTRICT REPORTED CRIMES


ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಸೌತ್ ಇಂಡಿಯಾ ಸಿಮೆಂಟ್ ಕಂಪನಿ ಮಳಖೇಡ ಇವರು ಮಳಖೇಡ ಗ್ರಾಮದ ಸರ್ವೆ ನಂಬರ 370 ರಲ್ಲಿ ದಿನಾಂಕ:04/05/2013 ರಿಂದ ಇಲ್ಲಿಯವರೆಗೆ 1) ಬಿ.ಸಿತಾರಾಮಯ್ಯ ತಂದೆ ಕೋಟೆಶ್ವ್ರ ರಾವ್ ಡಿ.ಇ.ಎಂ, 2) ಬಿ. ಧನಿಮರೆಡ್ಡಿ ತಂದೆ ತಿಮ್ಮಾ ರೆಡ್ಡಿ ಮೈನ್ಸ ಮ್ಯಾನೇಜರ್ ಸಾ|| ಇಬ್ಬರು ಸೌತ್ ಇಂಡಿಯಾ ಮಳಖೇಡ ತಾ|| ಮಳಖೇಡ ರವರು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿ ಸುಮಾರು 11,360 ಮೆಗಾ ಟನ್ ಸುಣ್ಣದ ಕಲ್ಲು ಸಿಮೆಂಟ್ ತಯ್ಯಾರಿಕೆ ಮಾಡುವ ಉದ್ದೇಶದಿಂದ ತೆಗೆದು ಅಂದಾಜು ಕಿಮ್ಮತ್ತು 41,23,680/- ರೂಪಾಯಿಗಳ ಮೌಲ್ಯಗಳಷ್ಟು ಕಳ್ಳತನ ಮಾಡಿರುತ್ತಾರೆ ಅಂತಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಾದ ಶ್ರೀ.ಈ.ಶೇಖರಪ್ಪ ರವರು ದೂರು ಸಲ್ಲಿಸಿದ ಮೇರೆಗೆ ಮಳಖೆಡ ಠಾಣೆ ಗುನ್ನೆ ನಂ:54/2013 4(1-ಎ) ಗಣಿ ಮತ್ತು ಭೂ ವಿಜ್ಞಾನ (M.M (D&R) Act) ಕಾಯಿದೆ 1957 ಸಂಗಡ 379  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ. 
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ದಿನಾಂಕ:19.07.2009 ರಂದು ಸಂಪ್ರದಾಯದಂತೆ ಅಬ್ದುಲ ಸಾಜೀದ ತಂದೆ ಅಬ್ದುಲ ಹಮೀದ ಇತನೊಂದಿಗೆ ನನಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ 1.51.000 ವರದಕ್ಷಿಣೆ, ಹೀರೊಹೊಂಡಾ ಮೋಟಾರ ಸೈಕಲ್ 6.5 ತೊಲೆ ಬಂಗಾರ ಹಾಗೂ ಇನ್ನಿತರ ಸಾಮಾನುಗಳು ನೀಡಿರುತ್ತಾರೆ. ಮದುವೆಯಾದ 2 ವರ್ಷಗಳ ನಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಹೊಡೆ ಬಡೆ ಮಾಡಲು ಪ್ರಾರಂಬಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬಂದಿರುತ್ತಾರೆ. 2011 ನೇ ಸಾಲಿನಲ್ಲಿ ನಮಗೆ ಹೆಣ್ಣು ಮಗು ಜನಿಸಿದ್ದು ಮಗುವಿಗು  ನೋಡಲು ಅಥವಾ ತೊಟ್ಟಿಲು ಕಾರ್ಯಕ್ರಮಕ್ಕೂ ಸಹ ನನ್ನ ಗಂಡ ಅಥವಾ ಗಂಡನ ಮನೆಯವರು ಬಂದಿರುವುದಿಲ್ಲಾ. 2 ತಿಂಗಳು ನಂತರ ನನ್ನ  ತಂದೆ ನನಗೆ ಹಾಗೂ ನನ್ನ ಮಗುವಿಗೆ ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟು ಬಂದರು. ಈಗ ಸುಮಾರು 8 ದಿವಸಗಳ ಹಿಂದೆ ನನ್ನ ಗಂಡ ಅಬ್ದುಲ್ ಸಾಜೀದ ಅತ್ತೆ ಖುರಷೀದ ಬೇಗಂ ,ಮೈದುನ ಸೈಯದ ಅಬ್ದುಲ್ ಹಮೀದ, ಗೌಸ ಶಫೀ, ಸಾಬೀರ ಮತ್ತು ನಾದಿನಿಯರಾದ ಆಷ್ರಾ, ಅಸ್ಮಾ ಇವರೆಲ್ಲರೂ ಕೂಡಿ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲಾವಾದರೆ ಬೇರೆ ಮದುವೆ ಮಾಡುತ್ತೇವೆ ಅಂತಾ ಮನೆಯಿಂದ ಹೊರಗೆ ಹಾಕಿರುತ್ತಾರೆ ಅಂತಾ ಶ್ರೀಮತಿ  ಆಯಿಷಾ ಸಿದ್ದಿಕಿ ಗಂಡ ಅಬ್ದುಲ ಸಾಜೀದ ಲಂಬು ವಯಾ||22 ವರ್ಷ ಸಾ;ರಂಗೀನ ಮಜೀದ ಪುಟಾಣಿ ಗಲ್ಲಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:30/2013 ಕಲಂ 498(ಎ),323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ದೌವಲಸಾಬ ತಂದೆ ವೆಂಕಟಪ್ಪಾ ಗುರಗಂಟಿ ಸಾ:ಗೊಲ್ಲರ ಕಾಲೊನಿ ಸುಂದರ ನಗರ ಗುಲಬರ್ಗಾ ರವರು ನಮ್ಮ ಸಂಬಂಧಿಕರಾದ ಗೊವಿಂದ ಶಿವರಾಲ ಯಾದವ ಇವರ ಮಗನ ಜವಳ ಕಾರ್ಯಕ್ರಮವು ಹೊನ್ನಕಿರಣಗಿಯಲ್ಲಿರುವದರಿಂದ ನಾನು ಮತ್ತು ಕಾಂತಮ್ಮ ಯಾದವ, ಗೊವಿಂದ ವರಗಂಟಿ, ಸ್ವಾಮಿ ಕರಂಟಿ, ಪಾರ್ವತಿ ಕರಂಟಿ, ಅಲಿಸಾಬ ವರಗಂಟಿ, ಇಸ್ಮಾಯಿಲ್ ವರಗಂಟಿ ಹಾಗೂ ಸಂಬಂಧಿಕರು ಮಕ್ಕಳು ಹೀಗೆ 30-35 ಜನರು ಹೊನ್ನಕಿರಣಗಿ ಗ್ರಾಮಕ್ಕೆ ಲಾರಿ ನಂ ಕೆಎ 32 ಎ 5269 ನೇದ್ದರಲ್ಲಿ ಹೋಗಿರುತ್ತೆವೆ. ಜವಳ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ಗುಲಬರ್ಗಾಕ್ಕೆ ಬರುವಾಗ ಲಾರಿ ಕ್ಯಾಬಿನಿನಲ್ಲಿ ನಾನು ಮತ್ತು ಯಲ್ಲಪ್ಪಾ. ಗೋವಿಂದ. ಸ್ವಾಮಿ ಮತ್ತು  ಅಲೀಸಾಬ. ಕುಳಿತಿದ್ದೆವು. ಕೇಂದ್ರ ಕಾರಾಗೃಹದ ನಂತರ ಗುಲಬರ್ಗಾ ಕಡೆಯಿಂದ ಕೆಎ-32 ಬಿ-9384 ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಒಮ್ಮಲೇ ನಿರ್ಲಕ್ಷತನದಿಂದ ಯಾವುದೇ ಇಂಡಿಕೇಟರ ಹಾಕದೇ ಬಲಗಡೆಗೆ ತಿರುಗಿಸಿದ್ದರಿಂದ ನಾವು ಕುಳಿತ ಲಾರಿಗೆ ಟಿಪ್ಪರದ ಹಿಂದಿನ ಭಾಗಕ್ಕೆ ಬಡೆದು ಅಪಘಾತವಾಯಿತು. ನನಗೆ ಮತ್ತು ಯಲ್ಲಪ್ಪ ಹಾಗೂ ಗೊವಿಂದ ನಮ್ಮೆಲ್ಲರಿಗೆ ಕಾಲುಗಳ ಹತ್ತಿರ  ಭಾರಿ ರಕ್ತಗಾಯ ಮತ್ತು  ಗುಪ್ತಗಾಯ ಆಗಿರುತ್ತವೆ. ಸ್ವಾಮಿ ಕರಂಟಿ ಇತನಿಗೆ ಎರಡು ಕಾಲುಗಳ ಕಪಗಂಡ ಹತ್ತಿರ ಮುರಿದು ಭಾರಿ,ಬಲಗೈಗೆ ಮುಂಗೈ ಹತ್ತಿರ ರಕ್ತಗಾಯವಾಗಿ ಹೊಟ್ಟೆಯ ಭಾಗಕ್ಕೆ  ಭಾರಿ ಗುಪ್ತಗಾಯವಾಗಿರುತ್ತದೆ. ಆಲೀಸಾಬ ಇತನಿಗೆ ಮೂಗಿಗೆ  ರಕ್ತಗಾಯ ಆಗಿರುತ್ತದೆ. ಲಾರಿಯಲ್ಲಿ ಹಿಂದೆ ಕುಳಿತ ಕೆಲವರಿಗೆ ಸಣ್ಣಪುಟ್ಟ ಸಾದಾ ಗಾಯಗಳಾಗಿರುತ್ತವೆ. ಟಿಪ್ಟರ ಚಾಲಕ ಅಪಘಾತವಾದ ನಂತರ ಟಿಪ್ಪರ ಬಿಟ್ಟು ಓಡಿ ಹೋದನು. ನಾವೆಲ್ಲರೂ 108 ವಾಹನ ಮತ್ತು ಖಾಸಗಿ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಬಂದು ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೇವೆ. ಭಾರಿಗಾಯ ಹೊಂದಿದ್ದ ಸ್ವಾಮಿ ಇತನು ಉಪಚಾರ ಹೊಂದುತ್ತಾ ಸಾಯಂಕಾಲ 7-30 ಗಂಟೆಗೆ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಗಾಯಾಳು ದೌವಲಸಾಬ ಇತನ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2013 ಕಲಂ, 279,337,338 304(ಎ) ಐಪಿಸಿ ಮತ್ತು 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ಥಾರೆ. 

21 May 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಖಾಜಪ್ಪ ತಂದೆ ಶರಣಪ್ಪ ನಡುವಿನಕೇರಿ  ವಯ:55 ವರ್ಷ ಸಾ:ನಿಂಬಾಳ ತಾ:ಆಳಂದ ನಾವು ಊಟ ಮಾಡಿಕೊಂಡು ದಿನಾಂಕ:19/05/2013 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಮಲಗಿಕೊಂಡಿರುವಾಗ ಮಧ್ಯರಾತ್ರಿ 1 -00 ಗಂಟೆಯ ಸುಮಾರಿಗೆ ಮನೆಯಲ್ಲಿರುವ ಪೆಟ್ಟಿಗೆಗೆಳನ್ನು ಯಾರೋ ತೆಗೆದುಕೊಂಡು ಹೋಗಿದ್ದು, ಅದರಲಿಟ್ಟಿದ್ದ ನಗದು ಹಣ 14,000/- ರೂಪಾಯಿಗಳು ಕಳ್ಳತನವಾಗಿದ್ದು, ಮತ್ತು  ನಮ್ಮ ಗ್ರಾಮದ ಶಿವರಾಯ ಪಟೇದ ಇವರ ಮನೆಯಲ್ಲಿನ ಅರ್ಧ ತೊಲೆ ಬಂಗಾರ ಅ.ಕಿ.10,500/- ಬಂಗಾರ ಕಳ್ಳತನ ಮಾಡಿದ್ದು ಹೀಗೆ ಒಟ್ಟು 24,500/- ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:43/2013 ಕಲಂ: 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆ ಮೇಲೆ ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:20/05/2013 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಇರುವಾಗ ಶಾಂತಪ್ಪ ತಂದೆ ನಿಂಗಣ್ಣಾ ಜಿಡ್ಡಿಮನಿ ಇತನು ನನ್ನ ಮನೆಯೊಳಗೆ ಬಂದು ಅವಾಚ್ಯವಾಗಿ ಬೈದು ನನ್ನ ಅಂಗಾಂಗಳಿಗೆ ಮುಟ್ಟಿ ಮೈಮೇಲಿನ ಕುಪ್ಪಸ ಹರಿದಿರುತ್ತಾನೆ.ನಾನು ಬಿಡಿಸಿಕೊಂಡು ಚಿರಾಡುತ್ತಾ ಮನೆಯಿಂದ ಹೊರಗೆ ಬರುತ್ತಿರುವಾಗ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಹಾಗೂ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅವನ ಹೆಂಡತಿ ಶ್ರೀದೇವಿ ಬಂದು ನನ್ನ ಗಂಡನ ಮಾನ ಹಾಳ ಮಾಡುತಿ ಅಂತಾ ಬೈದಿರುತ್ತಾಳೆ. ಅವನ ತಮ್ಮನಾದ ಮಲ್ಲಪ್ಪ ಜಿಡ್ಡಿಮನಿ ಇತನು ಸಹ ಬಂದು ಬೇದರಿಕೆ ಹಾಕಿರುತ್ತಾನೆ. ಕಾರಣ ಅವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೊಂದ 30 ವರ್ಷದ ಹೆಣ್ಣು ಮಗಳು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:44/2013 ಕಲಂ: 323,341,354,448,504,506(2),509 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

20 May 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ;ದಿನಾಂಕ:19-05-2013 ರಂದು ರಾತ್ರಿ 11-15 ಗಂಟೆಗೆ ರಿಬ್ಬನಲ್ಲಿ-ವಾಘ್ದಾರಿ ರಾಜ್ಯ ಹೆದ್ದಾರಿಯ ಸೇಡಂನ ಹೆಚ್.ಡಿ.ಎಫ್.ಸಿ. ಬ್ಯಾಂಕ ಹತ್ತಿರ ಒಬ್ಬ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ ಚಾಲಕನಾದ ಮುರಗೇಂದ್ರ ತಂದೆ ಮಲ್ಲಣ್ಣ ನಾಯ್ಕೊಡಿ ವಯ:30 ವರ್ಷ, ಉ:ಒಕ್ಕಲುತನ, ಜಾ:ಕಬ್ಬಲಿಗೇರ, ಸಾ:ಊಡಗಿ ಗ್ರಾಮದವನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಸೇಡಂ ಬಸ್ ನಿಲ್ದಾಣದ ಕಡೆಯಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಭಾಗಕ್ಕೆ ಇರುವ ಬ್ರಿಡ್ಜ್ ಗೆ ಡಿಕ್ಕಿ ಪಡಿಸಿ ಮೋಟಾರು ಸೈಕಲದೊಂದಿಗೆ ಬಿದ್ದಿದ್ದರಿಂದ ಭಾರಿರಕ್ತಗಾಯವಾಗಿರುತ್ತದೆ. ಸದರಿ ಮೋಟಾರು ಸೈಕಲ್ ನಂಬರ್ ನೋಡಲು ಅದು ಹೊಸದಾಗಿ ಇರುವದರಿಂದ ಪಾಸಿಂಗ್ ನಂಬರ್ ಬಿದ್ದಿರುವದಿಲ್ಲ. ಅದರ ಚೆಸ್ಸಿ ನಂಬರ್ ನೋಡಲು MBLHA10AMDHB08897 ನೇದ್ದಾಗಿರುತ್ತದೆ. ಕಾರಣ ಮೋಟಾರು ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀ, ದೇವಿಂದ್ರಕುಮಾರ ಹೆಚ್.ಸಿ ಸೇಡಂ ಪೊಲೀಸ್ ಠಾಣೆ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-127-2012 ಕಲಂ-279, 338 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ಶ್ರೀ ಶಕೀಲಪಟೇಲ ತಂದೆ ಬೂರಾನ ಪಟೇಲ ವಯಾ|| 36 ವರ್ಷ ಉ:ಲಾರಿ ಚಾಲಕ ಸಾ:ಮುಗಟಾ ತಾ;ಚಿತ್ತಾಪೂರ ಹಾ:ವ:ಅಂದೇರಿ ವೀರದೇಸಾಯಿ ರೋಡ ಶಾಮನಗರ ಮುಂಬೈ ನಗರ ಮಹಾರಾಷ್ಟ್ರ ರಾಜ್ಯ ರವರು ನಾವು ದಿನಾಂಕ:19-05-2013 ರಂದು ಮಧ್ಯಾಹ್ನ 4-00 ಗಂಟೆ ಸುಮಾರಿಗೆ ಗುಲಬರ್ಗಾ ಆಳಂದ ಮುಖ್ಯ ರಸ್ತೆಯ ಭೀಮ್ಮಳ್ಳಿ ಕ್ರಾಸ ಸಮೀಪ ಹೋಗುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಲಾರಿ ನಂಬರ ಎಮ್‌ಹೆಚ್‌ 11 ಎಎಲ್‌ 1386  ನೇದ್ದರ ಚಾಲಕ ಅಮೀರ ಪಟೇಲ ಮತ್ತು ಆಳಂದ ಕಡೆಯಿಂದ ಬಸ್ಸ ನಂಬರ ಕೆಎ 32 ಎಫ 1860 ಚಾಲಕ ಚಾಂದಸಾಬ  ಇವರಿಬ್ಬರು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ತಮ್ಮ ಸೈಡಿಗೆ ಹೋಗದೇ ಮುಖಾ ಮುಖಿ ಡಿಕ್ಕಿ ಹೊಡೆದಿದ್ದರಿಂದ ಲಾರಿ ಮತ್ತು ಬಸ್ಸು ಎರಡು ವಾಹನಗಳ  ಡ್ರೈವರ  ಸೈಡಿಗೆ  ಡಿಕ್ಕಿಯಾಗಿದ್ದರಿಂದ ಲಾರಿ ಮತ್ತು ಬಸ್ಸು  ಮುಂಭಾಗ ಚಪ್ಪಟೆಯಾಗಿದ್ದು, ಲಾರಿಯಲ್ಲಿ  ಡ್ರೈವರನ ಹಿಂದೆ ಕುಳಿತ ಕುಮಾರಿ ಆಪ್ರೀನ ತಂದೆ ಶಕೀಲಪಟೇಲ ವಯಾ:12, ಸಾ: ಸಾ:ಮುಗಟಾ ತಾ;ಚಿತ್ತಾಪೂರ ಹಾ:ವ:ಅಂದೇರಿ ವೀರದೇಸಾಯಿ ರೋಟ ಶಾಮನಗರ ಮುಂಬೈ ನಗರ ಇವರಿಗೆ ಇವಳಿಗೆ ಬಲಗಾಲ ಮೊಳಕಾಲ ಮುರಿದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿ  ಮೃತಪಟ್ಟಿದ್ದು. ಲಾರಿಯಲ್ಲಿದ್ದ ನನಗೆ ಮತ್ತು ಚಾಲಕನಿಗೆ ಹಾಗೂ ಬಸ್ಸ ಚಾಲಕ ಒಳಗಿದ್ದ ಪ್ಯಾಸೆಂಜರ ರವರಿಗೆ ಭಾರಿ ರಕ್ತಗಾಯ ಗುಪ್ತಗಾಯವಾಗಿರುತ್ತವೆ. ಕಾರಣ ಎರಡು ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ:248/2013 ಕಲಂ 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನಾಲ್ಕು ವರ್ಷದ ಕಂದಮ್ಮನ ಮೇಲೆ ಅತ್ಯಚಾರ:
ಶಹಾಬಾದ ನಗರ ಪೊಲೀಸ್ ಠಾಣೆ:ದಿನಾಂಕ:18/05/2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾಲ್ಕುವರ್ಷದನನ್ನಮಗಳು ಮನೆಯ ಎದುರಗಡೆ ಆಟ ಆಡುತ್ತಿರುವಾಗ ಪಕ್ಕದಮನೆಯ ಐಸಕ್ರಿಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೌಲಾಶಾ @ ಬಬ್ಲು ತಂದೆ ಮಹಮದಶಾ ಮಕಾನದಾರ ಸಾ:ರಾಮಾಮೊಹಲ್ಲಾ ಶಹಾಬಾದ ಇತನು ಐಸಕ್ರಿಂ ಕೊಡಿಸುತ್ತೇನೆಂದು ನನ್ನಮಗಳಿಗೆ ಎತ್ತುಕೊಂಡು ಐಸಕ್ರೀಂ ಪ್ಯಾಕ್ಟರಿಯೊಳಗೆ ಹೋಗಿ ಜಬರಿ ಸಂಬೋಗ ಮಾಡಿರುತ್ತಾನೆ ಅಂತಾ ನಾಲ್ಕು ವರ್ಷದ ಹಸುಳೆಯ ತಾಯಿಯವರು ನೀಡಿದ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/2013 ಕಲಂ, 376, 2 (ಎಪ್) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ:19/05/2013 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಅಣ್ಣನಾದ ರಾಮ ಇತನು ನಮ್ಮ ಓಣಿಯ ವಾಸು ತಂದೆ ಅಶೋಕ ರಾಠೋಡ ಇತನ ಜೊತೆಗೆ ಅಂಬಾ ಭವಾನಿ ಗುಡಿಯ ಎದರುಗಡೆ ಹಳೆ ವೈಷಮ್ಯ ಇಟ್ಟುಕೊಂಡು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು, ನನ್ನ ಅಣ್ಣನಿಗೆ ವಾಸು ಇತನು ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು, ಬಿಡಿಸಲು ಹೋಗಿದ್ದ ನನಗೆ ಮತ್ತು ನನ್ನ ತಾಯಿ ಸಾಜನಾಬಾಯಿಗೆ ಅಶೋಕ ಇತನು ಮಾನಭಂಗ ಮಾಡಲು ಪ್ರಯತ್ನ ಮಾಡಿದ್ದು ಅಲ್ಲದೇ ಅರ್ಜುನ ಇತನು ನನ್ನ ಅಣ್ಣ ರಾಮ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಟ್ಟಿಗೆಯನ್ನು ಹಿಡಿದು ತಲೆಯ ಮೇಲೆ ಹೊಡೆದು ಕಲ್ಲನ್ನು ತಲೆಯ ಮೇಲೆ ಹಾಕುವಷ್ಟರಲ್ಲಿ ನನ್ನ ಅಣ್ಣನನ್ನು ಹಿಡಿದು ಪಕ್ಕಕ್ಕೆ ತಳ್ಳಿದನು. ಶಿವು ಮತ್ತು ಅರ್ಜುನ ಇವರು ಹೊಡೆದರಿಂದ ರಕ್ತಗಾಯವಾಗಿರುತ್ತದೆ ಅಂತಾ ಶ್ರೀ ಧನರಾಜ ತಂದೆ ದೇವಾ ರಾಠೋಡ ಜಾ:ಲಂಬಾಣಿ ಉ:ಮಳಖೇಡ ಕಂಪನಿಯಲ್ಲಿ ಸೆಕ್ಯೂರಿಟಿ ಸುಪ್ರವೈಜರ ಸಾ:ಇಂದಿರಾ ನಗರ ಮಡ್ಡಿ.ನಂ.2 ಶಹಾಬಾದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 108/2013 ಕಲಂ:324,504,506,354,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 19-05-2013 ರಂದು ಮಧ್ಯಾಹ್ನ 1-30 ಗಂಟೆಗೆ ನನ್ನ ಅಟೋರಿಕ್ಷಾದಲ್ಲಿ ನನ್ನ ಮಾವನಾದ ಮಹಾಂತೇಶ ತಂದೆ ಸುಭಾಶ್ಚಂದ್ರ ಇವರನ್ನು ಕೂಡಿಸಿಕೊಂಡು ಸಿಟಿ ಬಸ್ ನಿಲ್ದಾಣ ದಿಂದ ದರೋಡಿನ ಮುಖಾಂತರವಾಗಿ ಪ್ರಕಾಶ ಟಾಕೀಸ ಕಡೆ ಹೋಗುತ್ತಿದ್ದಾಗ ಡಬರಿಪೀರ ದರ್ಗಾ ಹತ್ತಿರ ಅಟೋರಿಕ್ಷಾ ನಿಲ್ಲಿಸಿ ಇಳಿದು ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆಎ 32 ವಿ 2748 ನೇದ್ದರ ಚಾಲಕನಾದ ಶೇಖ ಆರೀಫ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ಪವನಕುಮಾರ ತಂದೆ ವಿಶ್ವನಾಥ ಮೇಕರವಃ 23 ವರ್ಷಉಃ ಅಟೋಚಾಲಕಸಾಃ ಮಹಾದೇವ ಗುಡಿ ಹತ್ತಿರ ಅಯ್ಯರವಾಡಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013 ಕಲಂ 279,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 May 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ  ಪರವೀನ ಗಂಡ ಮಹ್ಮದ ಗೌಸ ವ: 35 ವರ್ಷ ಸಾ:ಮುಸ್ಲಿಂ  ಉ: ಮನೆ ಕೆಲಸ ಸಾ: ಕಾಳಮ್ಮ  ಟೆಂಪಲ್ ಹತ್ತಿರ  ಸಂತ್ರಾಸವಾಡಿ ಗುಲಬರ್ಗಾರವರು ನಾನು ಮಹ್ಮದ ಗೌಸ ನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಾದಾಗಿನಿಂದಲು ನನ್ನ ಗಂಡನು ದಿನಾಲು ಕುಡಿದ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಹಾಗೂ  ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡುತ್ತಾ ಹೋಡೆ- ಬಡೆ  ಮಾಡುವುದು ಮಾಡುತ್ತಿರುತ್ತಾನೆ. ತವರು ಮನೆಯಿಂದ ಹಣ ತೆಗೆದುಕೊಂಡು  ಬರಲು ಕಿರುಕುಳ ನೀಡುತ್ತಿದ್ದಾನೆ. ಇಲ್ಲಿಯವರೆಗೆ ನನ್ನ ತಂದೆಯವರು ನನ್ನ ಗಂಡಿನಿಗೆ  ಒಂದು ಲಕ್ಷ ರೂಪಾಯಿ ನೀಡಿರುತ್ತಾರೆ ಇದಲ್ಲದೆ ಮದುವೆಯಲ್ಲಿ ಕೊಟ್ಟ ಬಂಗಾರವನ್ನು ಮಾರಿರುತ್ತಾನೆ ಮತ್ತು  ನನ್ನಗೆ  ಇನ್ನೂ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬರಬೇಕೆಂದು ಇಲ್ಲವಾದರೆ ನನ್ನನ್ನು ಮತ್ತು  ನನ್ನ ಮಕ್ಕಳು ಕೊಲ್ಲುವುದಾಗಿ ಹೇಳಿರುತ್ತಾನೆ. ದಿನಾಂಕ:14.05.2013 ರಂದು ಮುಂಜಾನೆ ಸುಮಾರು 9.00 ಗಂಟೆಗೆ ನನ್ನ ಗಂಡನು ನಾನು ತವರು ಮನೆಯಲ್ಲಿರುವಾಗ  ನನಗೆ ಹಾಗೂ ನನ್ನ ತವರು ಮನೆಯವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ಬೈದು  ಹಲ್ಲೆ ಮಾಡಿರುತ್ತಾನೆ. ಕಾರಣ ನನ್ನ ಗಂಡನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:28/2013 ಕಲಂ 498(ಎ).323.504.506 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:18/6/2013 ರಂದು ಸಾಯಂಕಾಲ 6-00 ಗಂಟೆಗೆ ಕಲ್ಲಹಂಗರಗಾ ಗ್ರಾಮದ  ಸೀಮೆಯಲ್ಲಿ ಈಗಾಗಲೇ  ಲೈಟಿನ  ಕಂಬಗಳಿಗೆ ಮೂರು (ತ್ರೀಫೇಸ) ಅಲ್ಯುಮಿನಿಯಂ ವೈಯರ ಅಳವಡಿಸಿದ್ದು ದಿನಾಂಕ:14-05-2013 ರಂದು ನಾನು ಮತ್ತು ನನ್ನ ಸಹ ಪಾಠಿಯಾದ  ಪ್ರಕಾಶ ಇಬ್ಬರು ಕೂಡಿ ಕಲ್ಲಹಂಗರಗಾ ಗ್ರಾಮದಿಂದ ಕೆರೆ ಅಂಬಲಗಾ ಗ್ರಾಮಕ್ಕೆ ಹೋಗುವ ಕಂಬಗಳ ನಿರೀಕ್ಷಣೆ ಮಾಡುತ್ತಿದ್ದಾಗ  ಕಂಬಗಳಿಗೆ ಅಳವಡಿಸಿದ್ದ ಅಲ್ಯುಮಿನಿಯಂ ವಾಯರ ಇರಲಿಲ್ಲಾ. ಯಾರೋ ಕಳ್ಳರು  ಕಳ್ಳರು ರಾತ್ರಿ ವೇಳೆಯಲ್ಲಿ  22 ಕಂಬಕ್ಕೆ ಅಳವಡಿಸಿದ  ವೈರ ಕಳ್ಳತನ ಮಾಡಿ ಜೆಸ್ಕಾಂ ಕಂಪನಿಗೆ ಅಂದಾಜ 92,000/-ರೂ.ಯಷ್ಟು ಹಾನಿ ಮಾಡಿರುತ್ತಾರೆ ಅಂತಾ ಶ್ರೀ ದೇವೆಂದ್ರ ತಂದೆ ಯಲ್ಲಪ್ಪ  ಕುಪ್ಪಿಗೌಡ್ರ ಉ: ಸಹಾಯಕ ಅಭಿಯಂತರರು (ಉ) ಸಾ : ನಿಡಗುಂದಿ ತಾ: ಬಸವನ ಬಾಗೇವಾಡಿ ಜಿ: ಬಿಜಾಪೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:243/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ನನ್ನ ತಮ್ಮ ಶ್ರೀಮಂತ ಇತನು ಹೋಲಕ್ಕೆ ಹೋಗಿ ಬರುವ ಸಲುವಾಗಿ ಒಂದು ತಿಂಗಳ ಹಿಂದೆ ಹೊಂಡಾ ಸೈನ್ ಮೋಟರ ಸೈಕಲನ್ನು ಖರೀದಿ ಮಾಡಿದ್ದನು. ದಿನಾಂಕ:18/05/2013 ಬೆಳ್ಳಿಗೆ 7:00 ಗಂಟೆಯ ಸುಮಾರಿಗೆ ಶ್ರೀಮಂತ ಇತನು ತನ್ನ ಮೋಟಾರ ಸೈಕಲಿನ ನಂಬರ ಮತ್ತು ಕಾಗದ ಪತ್ರಗಳು ಮಾಡಿಕೊಂಡು ಬರಲು ಗುಲಬರ್ಗಾದ ಆರ್.ಟಿ.ಓ ಕಾರ್ಯಾಲಯಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ಮದ್ಯಾಹ್ನ 1:40 ಗಂಟೆಯ ಸುಮಾರಿಗೆ ನಮಗೆ ಪರಿಚಯ ಇದ್ದ ಬಸಯ್ಯಾ ಹೀರೆಮಠ ಇವರು ನನಗೆ ಫೋನ ಮಾಡಿ ನಿಮ್ಮ ತಮ್ಮ ಶ್ರೀಮಂತ ಇತನಿಗೆ ಫೀರೋಜಾಬಾದ ದರ್ಗಾ ಹತ್ತಿರ ರಸ್ತೆಯ ಮೇಲೆ ಒಂದು ಬಸ್ಸ ಚಾಲಕನು ಅತಿವೇಗವಾಗಿ ಮತ್ತು ಅಲ್ಷ್ಯತನದಿಂದ ಚಲಾಯಿಸಿ ನಿಮ್ಮ ತಮ್ಮನ ಮೋಟರ ಸೈಕಲ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಮ್ಮ ಶ್ರೀಮಂತ ಇತನು ಬಸ್ಸಿನ ಟೈಯರಿನ ಕೆಳಗೆ ಬಿದ್ದು ತಲೆ ಪೂರ್ತಿ ಒಡೆದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಸ್ಥಳಕ್ಕೆ ಬಂದು ನೋಡಲು ಶ್ರೀಮಂತ ಇತನ ತಲೆಯ ಭಾಗ ಪೂರ್ತಿಯಾಗಿ ಒಡೆದು ಮೌಂಸ ಖಂಡ ಹೊರಗೆ ಬಂದಿದ್ದು ಮತ್ತು ಎಡಗೈ, ಬಲಗಾಲಿನ ಮೊಳಕಾಲ, ಬಲಗೈ ರಟ್ಟೆಯ ಹತ್ತಿರ ಮುರಿದಿದ್ದು ಮತ್ತು ಹೊಟ್ಟೆ ಒಡೆದು ಕರಳುಗಳು ಹೋರಗೆ ಬಂದಿರುತ್ತವೆ. ಅಪಘಾತ ಪಡಿಸಿದ ಬಸ ನಂಬರ ನೋಡಲಾಗಿ ಕೆಎ-36 ಎಫ್-761 ಇದ್ದು ಚಾಲಕನ ಹೆಸರು ಅಮೀನ ಪಟೇಲ ಅಂತಾ ತಿಳಿದು ಬಂದಿರುತ್ತದೆ. ನನ್ನ ತಮ್ಮನ ಹೆಂಡತಿ ಕಾಶಿಬಾಯಿ ಇವಳು ಮೃತ ದೇಹ ನೋಡಿದ ಕೂಡಲೆ ಬೇಹುಶ ಆಗಿರುತ್ತಾಳೆ. ಕಾರಣ ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಬಸವಂತರಾಯ ತಂದೆ ಮಲ್ಲಪ್ಪಾ ಬೂದಿಹಾಳ ವಯ:55 ವರ್ಷ ಉ:ಒಕ್ಕಲುತನ ಜಾ:ಗಾಣಿಗ ಸಾ:ಬಳೂಂಡಗಿ ತಾ:ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 72/2013 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಅಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆನಾರೋಗ್ಯದಿಂದ ವಿಚಾರಣೆ ಬಂದಿ ಸಾವು :
ಫರತಬಾದ ಪೊಲೀಸ್ ಠಾಣೆ: ಗುಲಬರ್ಗಾ ಕೇಂದ್ರ ಕಾರಾಗೃಹದ  ವಿಚಾರಣಾ ಬಂದಿ ಗುರುಸಿದ್ದಪ್ಪಾ ತಂದೆ ಕಲ್ಲಪ್ಪಾ ವಯ: 70  ವರ್ಷ ಸಾ:ದೆಸಣಗಿ ತಾ:ಜೇವರ್ಗಿ ಜಿ:ಗುಲಬರ್ಗಾ ಎಂಬಾತನು 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುಲಬರ್ಗಾದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದನು. ಸದರಿ ಬಂಧಿಯು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದಿನಾಂಕ:14/5/2013 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾಗಿ ದಿನಾಂಕ:18/5/2013 ರಂದು ಮದ್ಯಾಹ್ನ 2-30 ಗಂಟೆಗೆ ಕಾರಾಗೃಹದಲ್ಲಿ ದಾಖಲಾಗಿರುತ್ತಾನೆ. ಸದರಿ ಬಂಧಿಯು ಮೇಲ್ನೊಟಕ್ಕೆ ತೀವ್ರ ತೆರನಾದ ಅನಾರೋಗ್ಯದಿಂದ ಬಳಲುತ್ತಿರುವದು ಕಂಡು ಬರುತ್ತಿದ್ದರಿಂದ ಆತನನ್ನು ಪುನಃ 2-45 ಗಂಟೆಗೆ ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನನ್ನು ಪರೀಕ್ಷಿಸಿ ಅಲ್ಲಿನ ವೈದ್ಯಾಧಿಕಾರಿಗಳು ಸದರಿ ಬಂಧಿಯನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ಸದರಿ ಬಂಧಿಯು ದಿನಾಂಕ:18/5/2013 ರಂದು ಸಮಯ 4-30 ಗಂಟೆಗೆ ಮೃತಪಟ್ಟಿರುವುದಾಗಿ ವೈಧ್ಯಾಧಿಕಾರಿಳು ತಿಳಿಸಿರುತ್ತಾರೆ. ಅಂತಾ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2013 ಕಲಂ, 176 (ಬಿ) ಸಿ.ಅರ್. ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

18 May 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ, ರಾಜಕುಮಾರ ತಂದೆ ಮಾರುತಿ ಭಜಂತ್ರಿ ಜಾತಿ; ಭಜಂತ್ರಿ ಸಾ|| ಚೌಡಾಫೂರ ತಾ|| ಅಫಜಲಪೂರ ರವರು ನಾನು ಮತ್ತು ಮಹಾಂತಪ್ಪ ತಳಕೇರಿ ಪಂಚಾತ ಸದಸ್ಯ ಇಬ್ಬರು ಕೂಡಿ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ಪ್ರಮೋದ ಮೋರೆ ಇವರಿಗೆ ಫೋನ ಮಾಡಿ 8 ತಿಂಗಗಳಿಂದ ಪಂಚಾಯತ ಸದಸ್ಯರ ಸಭೆ ಕರೆದಿರುವುದಿಲ್ಲ. ಹಾಗು ಅಭಿವೃದ್ದಿ ಕೆಲಸದ ಬಗ್ಗೆ ಮಾಹಿತಿ ಸಹ ಕೊಟ್ಟಿರುವದೆ ಇರುವದರಿಂದ ಬೇಗನೆ ಸಭೆ ಕರೆಯುವಂತೆ ಅಧ್ಯಕ್ಷರಿಗೆ ತಿಳಿಸಿದೆವು. ದಿನಾಂಕ:16-05-2013 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ಚೌಡಾಪೂರ ಗ್ರಾಮದಲ್ಲಿ ಅಂಬಾರಾಯ ಜಮದಾರ ಸಾ|| ಬಾದನಳ್ಳಿ ಇವರ ಮನೆಯ ಮಾರ್ಕ ಔಟ ಹಾಕಲು ನಮ್ಮೂರ ರೇವಣಪ್ಪಾ ವಾಡೇದ ನಾವು ಇಬ್ಬರೂ ಕೂಡಿಕೊಂಡು ಮಾರ್ಕ ಔಟ ಮಾಡುತ್ತಿದ್ದಾಗ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಲ್ಲಿನಾಥ ಜಮಾದಾರ ಇತನು ತನ್ನ ಸಂಗಡ ನಾಗಪ್ಪ ಜಮಾದರ ಮತ್ತು ಆತನ ತಮ್ಮ ಮೂಕುಂದ ಜಮಾದಾರ ರೊಂದಿಗೆ ಬಂದು ನಿನ್ನೆ ಪಿ.ಡಿ.ಓ ಅಧಿಕಾರಿಗಳಿಗೆ ಏಕೆ ಪೋನ ಮಾಡಿ ಏನು ಹೇಳಿರುವಿ ಅಂತಾ ಕೇಳಿದಾಗ ನಾನು ಪಂಚಾಯತಿ ಸಭೆ ಕರೆದು ಆಗು ಹೋಗುಗಳ ಬಗ್ಗೆ ಮಾಹಿತಿ ಕೊಡಲು ಹೇಳಿರುವುದಾಗಿ ಹೇಳಿದೆನು. ಆಗ ಮಲ್ಲಿನಾಥ ಇತನು ನಾನು ಎಂಟು ಲಕ್ಷ ಖರ್ಚು ಮಾಡಿ ಅಧ್ಯಕ್ಚ ಆಗಿರುವೆನು. ನನಗ ಲೆಕ್ಕ ಪತ್ರ ಕೇಳತೀಯಾ ಅಂತಾ ಬೈದು ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ರಾಜುಕಮಾರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:56/2013 ಕಲಂ 323,324,355,504,506 ಸಂ 34 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ; ಶ್ರೀ, ಉಸ್ಮಾನ ತಂದೆ ಹನೀಫ ಮುಲ್ಲಾ ಸಾ: ಖಾನಾಪೂರ ರವರು ನಾನು ನನ್ನ ಮಾವನಾದ (ಹೆಂಡತಿಯ ತಂದೆ) ಖಾಜಾಬಾಯಿ ತಂದೆ ಬಾಷಾಸಾಬ ಮುಲ್ಲಾ ವಯಾ: 50 ವರ್ಷ ಸಾ: ಖಾನಾಪೂರ ಇತನು ಶ್ರೀ ಮುಸ್ತಫಾ ತಂದೆ ಬಾಬುಮೀಯಾ ಖುರೇಷಿ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ.ದಿನಾಂಕ:16/05/2013 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಿಮ್ಮ ಮಾವನಿಗೆ ಆಳಂದ ವಾಗ್ದರಿ ರೋಡಿನ ರಜಾ ಅನ್ಸಾರಿ ಇವರ ಹೊಲದ ಹತ್ತಿರ ಯಾವುದೋ ಒಂದು ವಾಹನ ಅಪಘಾತದಿಂದ ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದುಕೊಂಡು ನಾನು ಹಾಗೂ ನಮ್ಮೂರಿನ ಜನರು ಕೂಡಿಕೊಂಡು ಆ ಸ್ಥಳಕ್ಕೆ ಹೋಗಿ ನೋಡಲು ನಮ್ಮ ಮಾವನ ಶವವು ಎರಡು ಕಾಲುಗಳ ಕಪಗಂಡ ಮುರಿದು ಭಾರಿ ರಕ್ತಗಾಯವಾಗಿದ್ದಲ್ಲದೆ ಬಲಗೈ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ  ರಕ್ತ ಸೋರಿದ್ದು, ಕುತ್ತಿಗೆಗೆ ರಕ್ತಗಾಯವಾಗಿದ್ದು ಸದರಿ ನಮ್ಮ ಮಾವನಿಗೆ ಕೆಎ-32 ಎಂ-4882 ವಾಹನದ ಚಾಲಕನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ಚಲಾಯಿಸಿ ನಮ್ಮ ಮಾವನಿಗೆ ಡಿಕ್ಕಿ ಪಡಿಸಿದ್ದರಿಂದ ಆ  ಸ್ಥಳದಿಂದ 50 ಫೀಟ್ ವರೆಗೆ ಎಳೆದುಕೊಂಡು ಹೋಗಿರುತ್ತದೆ. ಸದರಿ ಘಟನೆಗೆ ಕಾರಣನಾದ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:146/2013 ಕಲಂ 279 304 (ಎ)  ಐಪಿಸಿ ಸಂ 187 ಐಎಮ್‌ವಿ ಆಕ್ಟ್‌  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:16/05/2013 ರಂದು ಸಾಯಂಕಾಲ 7:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ದತ್ತಾ ತಂದೆ ಉಮ್ಮಣ್ಣಾ ಪೂಲಾರಿ,ಇತನ ಹೆಂಡತಿ ಕಾಶಿಬಾಯಿ ಗಂಡ ದತ್ತಾ ಪೂಲಾರಿ ಹಾಗೂ ಈತನ ಅಣ್ಣನ ಹೆಂಡತಿಯಾದ ಕಸ್ತೂರಿಬಾಯಿ ಗಂಡ ಶಿವಶರಣ ಪೂಲಾರಿ ರವರು  ಕೂಡಿಕೊಂಡು ಬಂದು ನಮ್ಮ ಮನೆಯ ಹೊರಗೆ ನಿಂತು ಅವಾಚ್ಯವಾಗಿ ಬೈದು ಕೈ-ಯಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ಶ್ರೀಮತಿ.ಮುಕ್ತಾಬಾಯಿ ಗಂಡ ಶರಣಪ್ಪ ಪೂಲಾರಿ   ಸಾ:ಹಿರೋಳಿ ತಾ: ಆಳಂದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2013 ಕಲಂ: 323,354,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಡಿರುತ್ತಾರೆ. 

17 May 2013

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ; ಶ್ರೀಮತಿ.  ಕಾಶಿಬಾಯಿ ಗಂಡ ದತ್ತಾತ್ರೇಯ ಪುಲಾರಿ ವಯ:45 ವರ್ಷ ಉ: ಹೊಲ-ಮನೆ ಕೆಲಸ ಜಾತಿ:ಹೂಗಾರ ಸಾ:ಹಿರೋಳಿ ತಾ: ಆಳಂದ ರವರು ನಾನು ದಿನಾಂಕ:16/05/2013 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಮ್ಮ  ಹೊಲಕ್ಕೆ ಹೋಗಿದ್ದಾಗ ನಮ್ಮ ಹೊಲದಲ್ಲಿ ಗಡ್ಡೆಪ್ಪ ತಂದೆ ಚನ್ನಪ್ಪ ಪುಲಾರಿ ಇತನು ಗಳ್ಯಾ ಹೊಡೆಯುತ್ತಿದ್ದನು ನಾನು ಗಡ್ಡೆಪ್ಪನಿಗೆ ಹೊಲದಲ್ಲಿ ಗಳ್ಯಾ ಹೊಡೆಯಬೇಡ ಅಂತಾ ಹೇಳಿದಾಗ ಆತನು ಹಾಗೂ ಚನ್ನಪ್ಪ ತಂದೆ ಗಡ್ಡೆಪ್ಪ ಪುಲಾರಿ,ಸಂತೋಷ ತಂದೆ ಚನ್ನಪ್ಪ ಪುಲಾರಿ,ಕಾಶಪ್ಪ ತಂದೆ ಮಾರಿತಿ ಪುಲಾರಿ,ಸೋಮನಾಥ ತಂದೆ ಹಾವಣ್ಣಾ ಪುಲಾರಿ,ಪುಷ್ಪ ಗಂಡ ಸಂತೋಷ ಪುಲಾರಿ,ಗುಂಡಮ್ಮ ಗಂಡ ಮಾರುತಿ ಪುಲಾರಿ ರವರು ಎಲ್ಲರೂ ಕೂಡಿಕೊಂಡು ನಾನು ಗಳ್ಯಾ ಹೊಡೆದೆ ತಿರುತ್ತೆನೆ. ನೀನು ಏನು ಬೇಕಾದರು ಮಾಡಿಕೊ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ.ಚನ್ನಪ್ಪ ಪುಲಾರಿ ಇತನು ಬಡಿಗೆಯಿಂದ ನನ್ನ ಬೆನ್ನು ಮೇಲೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 41/2013 ಕಲಂ 143, 147, 323, 324, 341,447,354, 504,506, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

16 May 2013

GULBARGA DISTRICT REPORTED CRIME


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ, ಸುಶೀಲಬಾಯಿ ಗಂಡ ಬಸವಂತರಾಯ ಬಿಸಗೊಂಡ ವಯಾ||75 ಸಾ||ಪಟ್ಟಣ ತಾ||ಜಿ|| ಗುಲಬರ್ಗಾ ರವರು ನಮ್ಮ ಮಕ್ಕಳಾದ ಸತೀಶಕುಮಾರ ಮತ್ತು ಶಶಿಧರ ಇವರು 10-12 ವರ್ಷಗಳ ಹಿಂದೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ನನ್ನ ಗಂಡ ಬಸವಂತರಾಯನ ಹೆಸರಿನಲ್ಲಿದ್ದ 40 ಎಕರೆ ಜಮೀನು ಇದ್ದು, ನಮ್ಮ ಮಕ್ಕಳು ನಮಗೆ ನೋಡಿಕೊಳ್ಳಲಾರದಕ್ಕೆ 4 ಎಕರೆ ಜಮೀನು ನಾವು ಗಂಡ ಹೆಂಡತಿ ಇಟ್ಟುಕೊಂಡು ಹೊಲದಲ್ಲಿಯ ಕೊಂಪಿಯಲ್ಲಿ ವಾಸವಾಗಿರುತ್ತವೆ. ಉಳಿದ 36 ಎಕರೆ ಹೊಲದಲ್ಲಿ ಇಬ್ಬರು ಮಕ್ಕಳಿಗೆ ಸಮನಾಗಿ ತಲಾ 18 ಎಕರೆಯಂತೆ ಅವರಿಗೆ ಪಾಲು ಮಾಡಿ ಕೊಟ್ಟಿರುತ್ತೆವೆ. ಸತೀಶಕುಮಾರ ಇತನು ಕುಡಿತದ ಚಟದವನಾಗಿದ್ದರಿಂದ ಮತ್ತು ಸಾಲ ಮಾಡುತ್ತಾ ಬಂದಿದ್ದರಿಂದ ಅವನ ಪಾಲಿಗೆ ಹೊಲವನ್ನು  ಅವನ ಹೆಸರಿನಿಂದ ಮಾಡಿದರೆ ಮಾರಾಟ ಮಾಡುತ್ತಾನೆ ಅಂತಾ ತಿಳಿದು ಆತನ  ಹೆಸರಿಗೆ ಹೊಲ ನೊಂದಣಿ ಮಾಡಿಸಿರುವುದಿಲ್ಲಾ. ಸತೀಶಕುಮಾರ ಇತನು ತನ್ನ ಪಾಲಿಗೆ ಬಂದ ಹೊಲ ನನ್ನ ಹೆಸರಿಗೆ ಮಾಡಬೇಕು ಅಂತಾ ಹಲವು ಸಲ ಜಗಳಾವಾಡುತ್ತಾ ಬರುತ್ತಿದ್ದನು.ದಿನಾಂಕ 15-05-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಹೊಲದಲ್ಲಿಯ ಕೊಂಪಿಯಲ್ಲಿ ವಾಸವಾಗಿರುವ ನನ್ನ ಗಂಡನ ಜೋತೆಗೆ ಜಗಳಾ ತೆಗೆದು ಬಡಿಗೆಯಿಂದ ತಲೆಯ ಮೇಲೆ ಜೋರಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ಸುಶೀಲಬಾಯಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:242/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.