POLICE BHAVAN KALABURAGI

POLICE BHAVAN KALABURAGI

02 July 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಸೇಡಂ ಠಾಣೆ : ಶ್ರೀ ರಾಚಪ್ಪಾ ತಂದೆ ರಾಮಲು ಕವಾಲಿ ಸಾ; ಲಿಂಗಮಪಲ್ಲಿ ರವರು ನಾನು ಮತ್ತು ನಮ್ಮ ದೊಡ್ಡಪ್ಪನ ಮಗನಾದ ಗೋಪಾಲ ಹಾಗು ಚನ್ನಪ್ಪಾ, ಬಾಲಪ್ಪಾ, ರಫೀಕ್ , ಮುತ್ತೇಪ್ಪಾ ಹಾಗು ಗುತ್ತೆದಾರನಾದ ಶಿವರಾಜ ಮಠಪತಿ ಎಲ್ಲರು ಕೂಡಿ ಬಿಬ್ಬಿಳ್ಳಿ ಗ್ರಾಮದಲ್ಲಿ ಕರೆಂಟ ಕಂಬಾ ಹಾಕಲು ನಮ್ಮೂರದಿಂದ ಬಿಬ್ಬಳ್ಳಿಗೆ ಟ್ಯಾಕ್ಟರ್ ಇಂಜಿನ ನಂ ಎಸ್.325-ಬಿ-90347 ನೇದ್ದರಲ್ಲಿ ಕುಳಿತುಕೊಂಡು ಕೊಂಡಗಲ-ಸೇಡಂ ಮುಖ್ಯ ರಸ್ತೆಯ ರಂಜೋಳ ಕ್ರಾಸ ಹತ್ತಿರ ಬರುತ್ತಿದ್ದಾಗ ಟ್ರಾಕ್ಟರ ಚಾಲಕ ವೆಂಕಟಪ್ಪಾ ನಾಡೇಪಲ್ಲಿ ಸಾ|| ಮುಧೋಳ ಇತನು ತನ್ನ ಟ್ಯಾಕ್ಟರನ್ನು ಅತೀವೇಗ ಹಾಗು ನಿಷ್ಖಾಳಜಿತನದಿಂದ ನಡೆಯಿಸಿ ಒಮ್ಮೇಲೆ ಬ್ರೇಕ್ ಹಾಕಿ ಕಟ್ ಹೊಡೆದರಿಂದ ಟ್ಯಾಕ್ಟರ್ ರಸ್ತೆಯ ಕೆಳಗೆ ತೆಗ್ಗಿನಲ್ಲಿ ಹೊಗಿದ್ದರಿಂದ ಟ್ಯಾಕ್ಟರ್ ನಲ್ಲಿ ಕುಳಿತ್ತಿದ್ದ ಗೋಪಾಲ ಇತನು ಟ್ಯಾಕ್ಟರ್ ದಿಂದ ಕೆಳಗೆ ಬಿದ್ದು ಏಡಗಡೆ ತೆಲೆಗೆ ಎಡಕಿವಿ ಹರಿದು ಬಾರಿ ರಕ್ತಗಾಯವಾಗಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡುವಷ್ಟರಲ್ಲಿ ಮೃತ್ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಕಮಲಾಪೂರ ಠಾಣೆ :
ಶ್ರೀ. ಚತರು ತಂದೆ ಪೋಮು ಪವಾರ ಸಾ:ಅಣಕಲ[ಬಿ] ತಾಂಡಾ ತಾ: ಚಿತ್ತಾಪೂರ ರವರು ನಾನು ಮತ್ತು ನನ್ನ ಹೆಂಡತಿ ವಾಲಾಬಾಯಿ ಕೂಡಿಕೊಂಡು ದಿನಾಂಕ: 01/07/2011 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಕವನಳ್ಳಿ ಗ್ರಾಮದ ದರ್ಗಾಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ಮರಳಿ ಗೋಗಿ[ಕೆ] ತಾಂಡಾದ ಮುಖಾಂತರ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ ಗೋಗಿ[ಕೆ] ತಾಂಡಾದ ಮಾರುತಿ ರಾಠೋಡ ಈತನು ನಮಗೆ ಅಡ್ಡಗಟ್ಟಿ ನಿಲ್ಲಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಹೊಲದಲ್ಲಿಂದ ಮಳೆ ನೀರು ನಮ್ಮ ಹೊಲದಲ್ಲಿ ಬರದಂತೆ ಒಡ್ಡು ಹಾಕಿಕೋಳ್ಳಿ ಅಂತಾ ಹೇಳಿದರೂ ಕೇಳುತ್ತಿಲ್ಲ, ಅಂತಾ ಅಂದಾಗ ನಾನು ಮಾರುತಿ ರಾಠೋಡ ಈತನಿಗೆ ಸದ್ಯ ನಾವು ನಮ್ಮ ಹೊಲಗಳನ್ನು ಪಾಲಮಾಡಿಕೊಂಡಿದ್ದೇವೆ, ನನ್ನ ಹೊಲದಿಂದ ನಿನ್ನ ಹೊಲಕ್ಕೆ ಮಳೆ ನೀರು ಹರಿದು ಬರುವುದಿಲ್ಲ. ಯಾರ ಹೊಲದಿಂದ ನೀರು ಹರಿದು ಬರುತ್ತದೆ ಅವರಿಗೆ ಕೇಳು ಅಂತಾ ಅಂದಿದ್ದಕ್ಕೆ ಮಾರುತಿ ರಾಠೋಡ ಈತನು ನನಗೆ ಎದುರು ಮಾತನಾಡುತಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIME

ದರೋಡೆ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರು ತಂದೆ ಗುಂಡಪ್ಪ ಹೀರೆಗೌಡ ಮು: ಬೈರಾಮಡಗಿ ಸದ್ಯ ಗೋದುತಾಯಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 1/7/2011 ರಂದು ನಾನು ನನ್ನ ವೈನ ಶಾಪನಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಸುಮಾರಿಗೆ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು ವಯಸ್ಸು 20-25 ವರ್ಷದವನು ಇರಬಹುದು ಬಂದವನೇ ಮಚ್ಚು ಮತ್ತು ಒಂದು ಪಿಸ್ತೂಲನ್ನು ನನ್ನ ಎದೆಗೆ ಹಚ್ಚಿ ಪೈಸಾ ನಿಖಾಲೊ ಅನ್ನುತ್ತಾ ಇರುವಾಗ ನಾನು ಹಿಂದೇ ಮುಂದೆ ನೋಡುವಾಗ ಮಚ್ಚಿನಿಂದ ನನ್ನ ಎಡಗೈ ಮುಂಗೈ ಹತ್ತಿರ ಹೊಡೆದು ಬಾರಿ ಗಾಯ ಪಡಿಸಿ ಅದರಿಂದಲೇ ತಿರುಗಿಸಿ ನನ್ನ ಎಡಗೈ ಬುಜಕ್ಕೆ ಹೊಡೆದು ಗಾಯ ಪಡಿಸಿದ ಆಗ ನನ್ನ ಗಲ್ಲದಲ್ಲಿದ್ದ ನಗದು ಹಣ 8000/- ರೂ ಒಂದು ಮೋಬೈಲ ಅಂದಾಜು ಕಿಮ್ಮತ್ತ 2000/- ರೂ ಗಳನ್ನು ಜಬರ ದಸ್ತಿಯಿಂದ ಕಸಿದುಕೊಂಡನು ಹಾಗೂ ವೈನ ಶಾಪದ ಹತ್ತಿರ ಬರುತ್ತಿರುವ ಚನ್ನಬಸಪ್ಪ ತಂದೆ ಚಂದ್ರಶೇಖರ ಕಾಡಾದಿ ಇವರಿಗೂ ಕೂಡಾ ಪಿಸ್ತೂಲ ತೋರಿಸಿ ಅವರಿಂದ ಒಂದುವರೆ ತೋಲೆ ಬಂಗಾರದ ಲಾಕೇಟ ಅಂದಾಜು ಕಿಮ್ಮತ್ತು 30,000/- ರೂ ನಗದು ಹಣ 1130/- ರೂ ಹಾಗೂ 1 ನೋಕಿಯಾ ಮೋಬೈಲ ಹೀಗೆ ಒಟ್ಟು 43,130-00 ರೂ. ಮೌಲ್ಯದನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾನೆ, ಹೋಗುವಾಗ ವೈನಶಾಪದಲ್ಲಿ ಕೆಲಸ ಮಾಡುವ ಚಂದ್ರಕಾಂತ ದಿಕ್ಕಸಂಗಿ, ಮೈಲಾರಿ ಕನಗೂರ ಇವರಿಗೂ ಕೂಡ ಹೆದರಿಸಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.