POLICE BHAVAN KALABURAGI

POLICE BHAVAN KALABURAGI

25 September 2015

KALABURAGI DISTRICT REPORTED CRIMES

ಮಟಕಾ ಜೂಜು ಕೋರರರ ಬಂಧನ :
 ದೇವಲಗಾಣಗಾಪುರ ಪೊಲೀಸ್ ಠಾಣೆ : ದಿನಾಂಕ 23-09-2015 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ  ದೇವಲ ಗಾಣಗಾಪುರರದ ಶಾಂತಿ ನಗರದ ಸಾರ್ವಜನಿಕ ಸ್ಥಳದಲ್ಲಿ ನಬಿಸಾಬ ತಂದೆ ಪಕೀರಸಾಬ @ ಅಬ್ಬಾಸಾಬ ತಾಂಬೋಳಿ ವಯ ; 55 ವರ್ಷ, ಸಾ|| ದೇವಲಗಾಣಗಾಪುರು ತಾ|| ಅಫಜಲಪೂರು, ಇತನು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಕಲಬುರಗಿ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ. ದಾಳಿ ಮಾಡಿ ಸದರಿಯವನಿಗೆ ಹಿಡಿದು ಅವನ ಕಡೆಯಿಂದ  ಮಟಕಾ ಅಂಕಿ ಸಂಖ್ಯೆ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 4950/- ರೂಪಾಯಿ ಹಣವನ್ನು ಜಪ್ತು ಮಾಡಿಕೊಂಡು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲಾಯಿಸಿದ್ದು ಇರುತ್ತದೆ.
ಇಸ್ಪೀಟ್ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಶ್ ಠಾಣೆ : ದಿನಾಂಕ 24-09-2015 ರಂದು ಮಾದಾಬಾಳ ತಾಂಡಾದ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರಾದ 1) ಜಗನ್ನಾಥ 2) ಸುರೇಶ 3) ಪಾಂಡುರಂಗ 4) ನಿಂಗಣ್ಣ ರವರನ್ನು ಸಂಗಡ ಕರೆದುಕೊಂಡು ದಾಳಿ ಮಾಡಲಾಗಿ ಜೂಜಾಡುತ್ತಿದ್ದ ನಾಲ್ಕು ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡಿ ಹೋಗಿದ್ದು , ಅವರಲ್ಲಿ ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಮಹಾಂತೇಶ ತಂದೆ ಸಿದ್ದಪ್ಪ ಜಮಾದಾರ ಸಾ||ಚಿಂಚೋಳಿ ತಾ||ಅಫಜಲಪೂರ  2) ಶ್ರೀಶೈಲ ತಂದೆ ಸಿದ್ರಾಮಪ್ಪ ಕಲಕೇರಿ ಸಾ|| ಅಫಜಲಪೂರ  ಅಂತಾ ತಿಳಿಸಿದ್ದು, ನಂತರ ಓಡಿ ಹೋದ ನಾಲ್ಕು ಜನರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಶಿವಾನಂದ ತಂದೆ ನಿಂಗರಾಜ ಬಿರಾದಾರ ಸಾ||ಅಫಜಲಪೂರ  2) ಶರಣು ತಂದೆ ಗಂಗಾಧರ ಕೂಡಮುಳೆ ಸಾ|| ಅಫಜಲಪೂರ 3) ಶ್ರೀಶೈಲ ತಂದೆ ಮಳೇಪ್ಪ ಅಂದೊಡಗಿ ಸಾ|| ಅಫಜಲಪೂರ 4) ಪ್ರಶಾಂತ ತಂದೆ ಶರಣಬಸಪ್ಪ ನಂದಿ ಸಾ|| ಅಫಜಲಪೂರ ಅಂತ  ತಿಳಿಸಿದ್ದು. ಇಸ್ಪೇಟ ಜೂಜಾಟಕ್ಕೆ ಒಟ್ಟು 1890/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 24/09/2015 ರಂದು ಶ್ರೀಮತಿ. ಅರ್ಚನಾ ಗಂಡ ಸುರೇಶ ಗಾಯಕವಾಡ ಸಾ: ವಿದ್ಯಾನಗರ ರವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಕೆಳಗಡೆ ವಾಸವಾಗಿರುವ   ನಮ್ಮ ಅಕ್ಕ ಗೊದಾವರಿ ರವರು ಊರಿಗೆ ಹೊಗಿರುತ್ತಾರೆ. ನಿನ್ನೆ ದಿನಾಂಕ 23/09/2015 ರಂದು ರಾತ್ರಿ 9-30 ಗಂಟೆಗೆ  ನನ್ನ ಪತಿ ಸುರೇಶ ರವರು ಡ್ಯೂಟಿಗೆ ಹೋದ ನಣತರ ನಾನು ಮನೆ ಬಾಗಿಲು ಮುಂದೆ ಮಾಡಿ ಮಲಗಿದ್ದು ದಿನಾಂಕ 24/09/2015 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೊಡಲು ನಮ್ಮ ಮನೆಯ ಬೇಡ ರೂಮ ಅಲಮಾರಾ ಬಾಗಿಲು ತೆರೆದಿದ್ದು  ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಅತಿಕ್ರಮ ಪ್ರವೇಶ ಮಾಡಿ  1) ಬಂಗಾರದ 20 ಗ್ರಾಂ ಲಾಕೇಟ  ಅದಕ್ಕೆ S ಆಕಾರದ ಪದಕವುಳ್ಳದ್ದು  ಅ:ಕಿ: 50,000/- ರೂ 2)  ಪರ್ಸದಲ್ಲಿದ್ದ  ನಗದು 2000/- ರೂಪಾಯಿ ಮತ್ತು 3) ಸ್ಯಾಮಸಂಗ ಮೊಬೈಲ ಹೀಗೆ ಒಟ್ಟು 60,000/- ರೂ ಮೌಲ್ಯದ ಬಂಗಾರ, ಮೊಬೈಲ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.