POLICE BHAVAN KALABURAGI

POLICE BHAVAN KALABURAGI

21 October 2013

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ನಿತೀನ್ ತಂದೆ ನಾರಾಯಣ ಗಿರಿ ಸಾ: ಚಕ್ರಿ ತಾ: ಹದಗಾಂವ ಜಿಲ್ಲಾ: ನಾಂದೇಡ ರವರು ಗೊವಿಂದ ಸಿಂದೆ ಸಾ:ರೊಹಿದಾನೂರ ಇವರ ಲಾರಿ ನಂ: ಎಮ್‌‌ಹೆಚ್-26 ಹೆಚ್-6597 ನೇದ್ದರ ಮೇಲೆ ಕ್ಲಿನರ್ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ದಿನಾಂಕ: 18-10-2013 ರಂದು ರಾತ್ರಿ ವೇಳೆಯಲ್ಲಿ ನಾಂದೇಡದಲ್ಲಿ ಇರುವ ಡ್ರಾಕಲ್  ಕಂಪನಿಯಲ್ಲಿ ಲಾರಿಯಲ್ಲಿ ಜಿಪಿ ಕ್ವಯಿಲ್ಸ್ ಅನ್ನು ಲೋಡ ಮಾಡಿಕೊಂಡು ಕಂಪನಿಯಿಂದ ರಾತ್ರಿ ಹೊರಗೆ ಬಂದು ನಾಂದೇಡ ನಗರದಲ್ಲಿ ಇದ್ದು, ನಿನ್ನೆ ದಿನಾಂಕ: 20-10-2013 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಬೆಂಗಳೂರಿನ ನೆಲಮಂಗಲಕ್ಕೆ ಹೊರಟ್ಟಿದ್ದು ಸದರಿ ಲಾರಿಯಲ್ಲಿ ನಾನು ಮತ್ತು ಗೊವಿಂದ ಸಿಂದ ಹಾಗೂ ಲಾರಿಯ ಚಾಲಕರಾದ ಲಕ್ಷ್ಮಣ ಕದಮ್, ಬಾಪುರಾವ ಸಿಂದೆ ಇವರುಗಳು ಇದ್ದು, ಲಾರಿಯನ್ನು ಬಾಪುರಾವ ಸಿಂದೆ ಈತನು ಚಲಾಯಿಸುತ್ತಿದ್ದನು. ದಿನಾಂಕ: 21-10-2013 ರಂದು ಗುಲಬರ್ಗಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 218 ರ ರ ಸ್ತೆಯ ಮೇಲೆ ಶಾಹಾಭಾದ ಕ್ರಾಸ ದಾಟಿ ಮುಂದೆ ಭೀಮಾ ಬ್ರಿಜ್ ಹತ್ತಿರ ಹೋಗುತ್ತಿರುವಾಗ ಲಾರಿಯ ಚಾಲಕನಾದ ಬಾಪುರಾವ ಸಿಂದೆ ಇತನು ಲಾರಿಯನ್ನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ಬೆಳಗ್ಗೆ 6-30 ಗಂಟೆಯ ಸುಮಾರಿಗೆ ಲಾರಿಯ ಮುಂದಿನ ಎರಡು ಗಾಲಿಯ ಟಾಯರಗಳು ಒಮ್ಮಲೇ ಬ್ಲಾಸ್ಟ ಆಗಿದ್ದರಿಂದ ಲಾರಿಯ ಆಯ ತಪ್ಪಿ ರೋಡಿನ ಬಲಭಾಗಕ್ಕೆ ತೆಗ್ಗಿನಲ್ಲಿ ಹೋಗಿದ್ದ ರಿಂದ ಲಾರಿಯಲ್ಲಿ ಲೋಡ ಮಾಡಿದ ಜಿಪಿ ಕ್ವಯಿಲ್ಸ್ ಟಿನಗಳು ಕ್ಯಾಬಿನ ಹರಿದು ಕ್ಯಾಬಿನಲ್ಲಿ ಬಂದು ಕ್ಯಾಬಿನಲ್ಲಿದ್ದ ಗೊವಿಂದ ಸಿಂದೆ ಈತನ ತಲೆಯ ಮೇಲೆ ಬಿದ್ದದ ರಿಂದ ತಲೆಯು ಪೂರ್ತಿಯಾಗಿ ಒಡೆದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಅಲ್ಲದೆ ಲಕ್ಷ್ಮಣ ಕದಮ್ ಈತನ ಮೈ ಮೇಲೆ ಬಿದ್ದು ಕುತ್ತಿಗೆಯ ಭಾಗಕ್ಕೆ, ಎದೆಯ ಭಾಗಕ್ಕೆ ಭಾರಿ ಒಳಪೆಟ್ಟಾಗಿ, ಹೊಟ್ಟೆಯ ಮೇಲೆ, ಎಡಗೈ ಮುಂಗೈ ಹತ್ತಿರ ಭಾರಿ ರಕ್ತಗಾಯವಾಗಿದ್ದಲ್ಲದೆ, ಪಾದಗಳಿಗೆ ಅಲ್ಲಿಲ್ಲ ತೆರಚಿದ ಗಾಯವಾಗಿ ಅವನು ಸಹ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಎಡಗೈ ಭುಜದ ಮುಳೆ ಮುರಿದಂತೆಯಾಗಿದ್ದು ಇರುತ್ತದೆ. ಲಾರಿ ಚಲಾಯಿಸುತ್ತಿದ್ದ ಭಾಪುರಾವ ಸಿಂದೆ ಇತನಿಗೆ ಎಡಗಾಲಿನ ಕಪ್ಪಗಂಡ ಮೊಳಕಾಲಿನ ಹತ್ತಿರ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಲಕ್ಷ್ಮಣ ತಂದೆ ಹಣಮಂತ ಮಂಜಳಕರ ಸಾ: 16 (ಎ) ಪೊಲೀಸ ಹೆಡ ಕ್ವಾಟರ್ಸ ಗುಲಬರ್ಗಾ ರವರು ದಿನಾಂಕ 20-10-2013 ರಂದು ರಾತ್ರಿ 11-30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 4271 ನೆದ್ದನ್ನು ಚಲಾಯಿಸಿ ಕೊಂಡು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಜಗತ ಸರ್ಕಲ್ ರೋಡ ಕಡೆಗೆ ಹೋಗುತ್ತಿದ್ದಾಗ ಎನ್.ಸಿ.ಸಿ. ಆಫೀಸ್ ಎದುರಿನ ರೋಡ ಮೇಲೆ ಮೋ/ಸೈಕಲ್ ನಂ: ಕೆಎ 36 ಜೆ 9846 ರ ಸವಾರನಾದ ಸಂಗಮನಾಥ ಈತನು ತನ್ನ ಮೋ/ಸೈಕಲನ್ನು ಎಸ್.ಬಿ.ಪೆಟ್ರೋಲ್ ಪಂಪ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತಾನು ಕೂಡಾ ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಯ್ಯಾ   ತಂದೆ ಚನ್ನಮಲ್ಲಯ್ಯಾ ಸ್ವಾಮಿ    ಸಾಮನೆ ನಂ: ಟಿ.ಆರ್.ಆರ್. 35/1 ಅಲಸ್ಟಮ ಕಾಲೋನಿ ಶಾಹಾಬಾದ ಮತ್ತು ಇವರು ದಿನಾಂಕ: 19-10-2013 ರಂದು ರಾತ್ರಿ 8=30 ಗಂಟೆಗೆ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ದಲ್ಲಿ ವಾಚ ಮೆನ ಕೆಲಸ ಮಾಡುವ ಕುರಿತು ಫಿರ್ಯಾದಿಯು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಕೇಂದ್ರ ಬಸ್ ನಿಲ್ದಾಣ ರೋಡ ಕಡೆಗೆ ನಡೆದುಕೊಂಡು ಹೋಗಿ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ಎದುರು ರೋಡ ದಾಟುತ್ತಿದ್ದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ರಾಹೂಲ ಈತನು ತನ್ನ ಮೋ/ಸೈಕಲ್  ನಂಬರ ಇಲ್ಲದ್ದು ಅದರ ENGINE NO: DHZCDD14886   CHESSI NO: NPPLKT 60-7 ನೆದ್ದನ್ನು ಅತಿವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಗಾತಮಾಡಿ ಭಾರಿಗಾಯಗೊಳಿಸಿ ತಾನೂ ಕೂಡಾ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ನಿಂಗಪ್ಪಾ ತಂದೆ ಕೇರೆಪ್ಪಾ ವಗ್ಗರ  ಸಾಫರಹತಾಬಾದ ತಾಜಿಗುಲಬರ್ಗಾ ಇವರ ಮಗನಾದ
ಮಂಜುನಾಥ, ಇತನು ಫರಹತಾಬಾದ ಬಸ ನಿಲ್ದಾಣದ ಹತ್ತಿರ ರೋಡಿನ  ಪಕ್ಕದಲ್ಲಿ ನಿಂತಾಗ  ಜೇವರ್ಗಿ  ಕಡೆಯಿಂದ ಒಬ್ಬ ಟವೇರಾ  ಕಾರ ಚಾಲಕನು  ತನ್ನ ಕಾರನು  ಅತಿವೇಗ  ಮತ್ತು ಅಲಕ್ಷತನದಿಂದ  ನಡೆಸಿಕೊಂಡು ಬಂದು ನನ್ನ ಮಗನಿಗೆ  ಡಿಕ್ಕಿ ಪಡಿಸಿರುತ್ತಾನೆ  ಇದ್ದರಿಂದ  ನನ್ನ ಮಗನಿಗೆ  ಹಣೆಯ  ಮೇಲೆ  ರಕ್ತಗಾಯ ಮತ್ತು  ಬಲಗಡೆ  ಕಿವಿಯಿಂದ ರಕ್ತ ಬರುತ್ತಿದ್ದು  ನಾನು ಗಾಬರಿಗೊಂಡು ಕೂಡಲೆ  ನಾನು  ಮತ್ತು  ನಮ್ಮ ತಾಯಿ  ಮಿಣಜಮ್ಮಾ  ಇಬ್ಬರು  ಕೂಡಿಕೊಂಡು ಫರಹತಾಬಾದ ಬಸ ನಿಲ್ದಾಣದ ಹತ್ತಿರ ಬಂದು ನೋಡಲಾಗಿ ಸದರಿ ನನ್ನ ಮಗನ ಹಣೆಯ  ಮೇಲೆ  ರಕ್ತಗಾಯವಾಗಿದ್ದು  ಬಲಗಡೆ ಕಿವಿಯಿಂದ ರಕ್ತ ಬರುತ್ತಿದ್ದು ಮತ್ತು ಮುಖಕ್ಕೆ ಚರಚಿದ ಗಾಯವಾಗಿದಲ್ಲದೆ  ಸೊಂಟಕ್ಕೆ ಒಳ  ಪೇಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ  ಶಿವಮ್ಮಾ ಗಂಡ ಹಣಮಂತರಾಯ ತುತಾರಿ ಸಾ;ಬೇಲೂರ(ಕೆ) ತಾ;ಜಿಗುಲಬರ್ಗಾ ರವರು ದಿನಾಂಕ 19-10-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಗೆ ಬೇಕಾದ ಕಿರಾಣಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗುವ ಸಲುವಾಗಿ ಓಕಳಿ ಕ್ರಾಸ ಹತ್ತಿರ ನಿಲ್ಲುವ ನಮ್ಮೂರ ಜೀಪಗಳ ಕಡೆಗೆ ಗುಲಬರ್ಗಾ-ಹುಮನಾಬಾದ ನೆ್.ಹೆಚ್-218 ನೇದರ ರಸ್ತೆಯ ಎಡಮಗ್ಗಲಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಕಮಲಾಪುರ ಬಸ ನಿಲ್ದಾಣ ದಾಟಿ ಮುಂದೆ ಹೋಗುತ್ತಿದ್ದಾಗ ರೇವಣಸಿದ್ದಪ್ಪಾನ ಹೋಟೆಲಿನ ಎದುರೆಗಡೆ ನನು ರಸ್ತೆ ದಾಟುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಮೋಟಾರ ಸೈಕಲ್  ಸವಾರನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಮದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ ನನಗೆ ಡಿಕ್ಕಿ ಹೊಡೆದು ಅಫಘಾತ ಪಡಿಸಿದನುಆಗ ನಾನು ರಸ್ತೆಯ ಮೇಲೆ ಬಿದ್ದಿದ್ದು ಅಷ್ಟರಲ್ಲಿ ಕಮಲಾಪೂರ ಬಸ ನಿಲ್ದಾಣದ ಹತ್ತಿರ ನಿಂತಿದ್ದ ನಮ್ಮೂರ ಪ್ರಕಾಶ ಇವನ ಮಗನಾದ ಮಹೇಶ ಪಾಟೀಲ್ ಇವರು ಓಡಿಬಂದು ರಸ್ತೆಯ ಮೇಲೆ ಬಿದ್ದಿದ್ದ ನನಗೆ ಎಬ್ಬಿಸಿ ನೋಡಲಾಗಿ ನನ್ನ ಬಲಗೈ ಹಸ್ತದ ಮೇಲೆ ಗುಪ್ತಗಾಯವಾಗಿದ್ದು ಬಲಗಾಲಿನ ಮೊಳಕಾಲಿಗೆ ,ತೆಲೆಯ ಹಿಂದುಗಡೆ ಗುಪ್ತಗಾಯವಾಗಿತ್ತು ನಂತರ ನನಗೆ ಅಪಘಾತ ಪಡಿಸಿದ ಮೋಟರ. ಸೈಕಲ್ ನಂಬರ ನೋಡಲಾಗಿ ಕೆಎ-32-ಇಎ-5070 ನೇದ್ದು ಇದ್ದು,ಅದರ ಚಾಲಕನ ಹೆಸರು ವಿಚಾರಿಸಲಾಗಿ ಆತನು ತನ್ನ ಹೆಸರು ಸಂತೋಷ ತಂದೆ ಅಂಬರಾಯ ಮೂಲಗೆ ವಯ; 21 ವರ್ಷ ಸಾಬೇಟ್ಟ ಜೇವರ್ಗಿ ತಾಆಳಂದ ಅಂತ ತಿಳಿಸಿದನುನಾವು ಗಾಬರಿಯಲ್ಲಿ ಕೂಗಾಡುತ್ತಿದ್ದರಿಂದ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿದ್ದಾಗ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲೋಗಿ ಠಾಣೆ : ದಿನಾಂಕ 19-10-2013 ರಂದು ಮುಂಜಾನೆ 10.00 ಎ ಎಮ್ ಕ್ಕೆ ಶ್ರೀ ಗುರುಬಸಪ್ಪ ಹೆಚ್ ಸಿ 125 ನೆಲೋಗಿ ಪೊಲೀಸ್ ಠಾಣೆ  ಮತ್ತು ಪ್ರಕಾಶ ನೆಲ್ಲಗಿ ಕೂಡಿ ಸೈಕಲ ಮೋಟಾರ್ ನಂ ಕೆಎ-32 ಯು-7083 ನೇದ್ದರ ಮೇಲೆ ಮತ್ತು  ನಮ್ಮೂರ ಸಾಹೇಬಗೌಡ ದರಿಗೊಂಡ ಹಾಗೂ ಅವರ ಸಂಬಂಧಿಕ ನೇದಲಗಿ ಸಿದ್ದಣ್ಣ ಬಿರೆದಾರ ಇವರು ಕೂಡಾ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದರ ಮೇಲೆ ಸಿಂದಗಿಗೆ ಬಂದಿದ್ದರು. ನಂತರ ಕೆಲಸ ಮುಗಿಸಿಕೊಂಡು ನಾನು ಪ್ರಕಾಶ ಕೂಡಿ ನಮ್ಮ ಸೈಕಲ್ ಮೋಟಾರ್ ಮೇಲೆ 06.00 ಪಿ ಎಮ್ ಕ್ಕೆ ಸಿಂದಗಿಯಿಂದ ನಮ್ಮೂರಗೆ ಹೊರಟೇವು. ಅಲ್ಲೆ ಇದ್ದ ಸಿದ್ದಣ್ಣ ಹಾಗೂ ಸಾಹೇಬಗೌಡ ದರಿಗೊಂಡ ಇವರಿಗೆ ಊರಿಗೆ ಯಾವಾಗ ಬರುತ್ತೀರಿ ಅಂತಾ ಕೇಳಿದೇವು. ಇನ್ನೂ 10 ನಿಮಿಷದಲ್ಲಿ ಇಲ್ಲಿಂದ ಬಿಡುತ್ತೇವೆ, ನೀವು ನಡಿರಿ ಎಲ್ಲರೂ ಜೇರಟಗಿ ದಾಬಾದಲ್ಲಿ ಊಟ ಮಾಡಿ ಊರಿಗೆ ಹೊಗೋಣ ಅಂತಾ ಹೇಳಿದರು. ನಾವು ಮುಂದೆ ಬಂದು ಜಗದೇವಪ್ಪ ಚಾಂದಕೊಟೆ ಇವರ ದಾಬಾದಲ್ಲಿ ಬಂದು ಕುಳಿತೇವು. ಅರ್ದ ಗಂಟೆಯಾದರು ಬರದೇ ಇದ್ದ ಕಾರಣ ನಾನು ಮತ್ತು ಪ್ರಕಾಶ ಕೂಡಿ ಹೊರಗೆ ಬಂದು ಫೋನ ಮಾಡುತ್ತಾ ನಿಂತಿದ್ದೇವು. ಸ್ವಲ್ಪ ಸಮಯದಲ್ಲಿ ಸಾಹೇಬಗೌಡ ದರಿಗೊಂಡ ಹಾಗೂ ಸಿದ್ದಣ್ಣ ಬಿರೆದಾರ ತಾನು ನಡೆಸುತ್ತಿದ್ದ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದು ಅತೀ ವೇಗ ಹಾಗೂ ನಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೇ ರೋಡಿನ ಮೇಲೆ ನಿಂತ ಪ್ರಕಾಶನಿಗೆ ಢಿಕ್ಕಿ ಹೊಡೆದಾಗ ಅವನು ಕೆಳಗೆ ಬಿದ್ದನು. ಆಗ ಅವನ ತಲೆಗೆ ಭಾರೀ ಒಳ ಪೆಟ್ಟಾಗಿ ಬಲಕಿನ ಕಿವಿಯಲ್ಲಿ ರಕ್ತ ಸೋರ ಹತ್ತಿತು. ಸಿದ್ದಣ್ಣ ಬಿರೆದಾರ ಹಾಗೂ ಸಾಹೇಬಗೌಡ ದರಿಗೊಂಡ ಇವರು ಮುಂದೆ ಹೋಗಿ ಸೈಕಲ್ ಮೋಟಾರ್ ನಿಲ್ಲಿಸಿ ಬಂದರು. ನಂತರ 108 ಅಂಬ್ಯುಲೆನ್ಸಗೆ ಫೋನ ಮಾಡಿ ತರಿಸಿ ಅದರಲ್ಲಿ ಪ್ರಕಾಶನನ್ನು ಹಾಕಿಕೊಂಡು ಜೇವರಗಿಯಲ್ಲಿ ಉಪಚಾರ ಪಡಿಸಿ, ನಂತರ ಇಲ್ಲಿ ಚಿರಾಯು ಆಸ್ಪತ್ರೆಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.