POLICE BHAVAN KALABURAGI

POLICE BHAVAN KALABURAGI

14 June 2014

Gulbarga District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅಬ್ದುಲಬೀ ಶೇಖ ಗಂಡ ರಮಮಾನ ಅಲಿ ಸಾ|| ಪ್ಲಾ ನಂ 96ಮದೀನಾ ಕಾಲೋನಿ ಸೋಯಿ ಗುಮ್ಮಜ ಹತ್ತಿರ ಗುಲಬರ್ಗಾ ರವರ  ಗಂಡನ ಊರ ಸುರಪೂರ ಇದ್ದು ನಾವು ಮಕ್ಕಳೊಂದಿಗೆ ಮಹಾರಾಷ್ಟ ರಾಜ್ಯದ ಮುಂಬೈಯಲ್ಲಿ ಕೆಲಸ ಮಾಡಿಕೊಂಡು ಉಪಜೀವಿ ಸುತ್ತೆವೆ ಸುಮಾರು 10 ವರ್ಷ ಗಳ ಹಿಂದೆ ಅರೀಫ ಕಲ್ಯಾಣಿ ಎಂಬುವರ ಕಡೆಯಿಂದ ಪ್ಲಾಟ  ನಂ 96, ಖರೀದಿಸಿ ನನ್ನ ತಂದೆಯವರಾದ ಸೈಯದ ಹುಸೇನಿ ಇವರ ಹೆಸರಿನಲ್ಲಿ ಕಾಗದ ಪತ್ರಗಳು ಇರುತ್ತದೆ, ಖರೀದಿಸಿದ ಪ್ಲಾಟ್ ನಲ್ಲಿ ಅಲ್ಪ ಸ್ವಲ್ಪ ಕಟ್ಟಡ ಮಾಡಿಸಿಕೊಂಡಿದ್ದು ಈಗ ಒಂದು ತಿಂಗಳ ಹಿಂದೆ ಗುಲಬರ್ಗಾ ಕ್ಕೆ ಬಂದಿದ್ದು ನಾನು ನನ್ನ ಗಂಡ ಸೇರಿ ಕಟ್ಟಡದ ಕಾಮಗಾರಿ ಮಾಡುತ್ತಿದ್ದೆವೆ ದಿನಾಂಕ|| 03-06-2014 ರಂದು ಮಂಗಳವಾರ ದಿವಸ ನಾನು ಮತ್ತು ನನ್ನ ಗಂಡ ಇಬ್ಬರು ಮಣ್ಣು ತೆಗೆಯುತ್ತ ಕೆಲಸದಲ್ಲಿ ತೊಡೆಗಿದ್ದೆವೆ ಸುಮಾರು ಬೆಳಗ್ಗೆ 10-45 ಗಂಟೆಗೆ ಪಕ್ಕದ ಮನೆ ಫುರಖಾನ ಅಲಿ ಮತ್ತು ಇವರ ಮಗ ರೀಜವಾನ ಸಡಕ್ ಫಾರುಕ ಈ ಮೂರು ಜನರು ಸೇರಿ ನಾವು ಮಣ್ಣು ತೆಗೆಯುವದನ್ನು ನೋಡಿ ನಮ್ಮ ಜೊತೆಯಲ್ಲಿ ಜಗಳಕ್ಕೆ ಬಿದ್ದರು ಮತ್ತು ನನ್ನಗೆ ಅವಾಚ್ಯ ಶಬ್ದಗಳಿಂದ ಬೈಹತ್ತಿದರು ನಮ್ಮಗೂ ಅವರಿಗೂ ಬಾಯಿ ಮಾತಿನ ಜಗಳ ಸೂರು ಆಯಿತು  ಆಗ ಫೂರಖಾನ್ ಅಲಿ ಈತನು ಸ್ವಲ್ಪ ಹೊತ್ತು ತಡಿರಿ ನಿಮಗೆ ಒಂದು ಕೈ ತೊರಿಸುತ್ತೇನೆ ಅಂತಾ ಹೇಳಿ ಹೋಗಿ 15  ನಿಮಿಷದಲ್ಲಿ ಮಾಜಿ ಕಾರ್ಪೊರೆಟರ್ ಸಜ್ಜಾದ ಅಲಿ ಇವರನ್ನು ಮತ್ತು ಇನ್ನು 2-3  ಜನರನ್ನು ಕರೆದುಕೊಂಡು ಬಂದರು ಆಗ ನಮ್ಮ ತಮ್ಮ ಮೀರ ಅಲಿ ಜಮಾದಾರ ಈತನು ನಮ್ಮ ಹತ್ತಿರ ಬಂದಿದ್ದು  ಆಗ ಪೂರಕಾನ್ ಅಲಿ ಈತನು ನಮಗೆ ಅವಾಚ್ಯವಾಗಿ ಚಿನಾಲ್ ರಾಂಡಾಕಾ ಬೋಸಡಿಕೆ ಅಂತಾ ಬೈಯುತ್ತಾ ನನ್ನ ಮೇಲೆ ಏರಿ ಬಂದು ಚೀರಾಗಿ ದಬ್ಬಿಕೊಟ್ಟನು ಆಗ ನಾನು ಮೈಮುಟ್ಟಿ ದಬ್ಬಿದ್ದರಿಂದ ನಾನು ನೆಲಕ್ಕೆ ಬಿದ್ದುಬಿಟ್ಟೆ ಅದೇ ಸಿಟ್ಟಿನಿಂದ ಕಲ್ಲು ತೆಗೆದುಕೊಂಡು ಅವನಿಗೆ ಹೊಡೆದಿರುತ್ತೇನೆ ಆಗ ಎಲ್ಲರೂ  ಸೇರಿ ನಮ್ಮೊಂದಿಗೆ ಜಗಳಕ್ಕೆ ಬಿದ್ದು ಫುರಕಾನ ಈತನು ನನ್ನ ತಲೆ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆ ಬಡೆ ಮಾಡಿದನು ನನ್ನ ಗಂಡನಿಗೆ ರೀಜ್ವಾನ್ ಈತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ . ಬಸವರಾಜ  ತಂದೆ ನಾಗಪ್ಪ ಕುಂಬಾರ  ಸಾ:ಕೋಟನೂರ (ಡಿ) ತಾ:ಜಿ:ಗುಲಬರ್ಗಾ  ಮತ್ತು ರಘುನಾಥ ತಂದೆ ನಾಗಪ್ಪ ಕುಂಬಾರ  ಇಬ್ಬರು ಕೋಟನೂರ (ಡಿ) ಗ್ರಾಮದಿಂದ ಶೆಳ್ಳಗಿ ಗ್ರಾಮದಲ್ಲಿ ನಮ್ಮ ಅಣ್ಣ ತಮ್ಮಕೀಯ ಶಿವಪ್ಪ ಕುಂಬಾರ ಇವರು ಯಲ್ಲಮ್ಮಾ ದೇವರ ಕೊಡಾ ಕಾರ್ಯಕ್ರಮಕ್ಕೆ ಹಾಜರಾಗಲು ತಮ್ಮ ಬಸವರಾಜನ ಟಿ.ವಿ.ಎಸ್ ಎಕ್ಸಎಲ್ ಹೇವಿ ಡೂಟಿ ಕೆಎ-32 ಇಸಿ-7452 ಮೇಲೆ ಹೋಗಿದ್ದು ದೇವರ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ  ಮಹಾಗಾಂವ ಕ್ರಾಸ ಮುಖಾಂತರ ಹೊರಟಿದ್ದು ಸಂಜೆ 05:00 ಗಂಟೆ ುಮಾರಿಗೆ ಕುರಿಕೋಟಾ ಗ್ರಾಮದ ದಾಟಿ ಬ್ರೀಜ ಸಮೀಪ ಬಂದಾಗ ಆಗ ನಮ್ಮ ಹಿಂದಿನಿಂದ ಅಂದರೆ ಮಹಾಗಾಂವ ಕ್ರಾಸ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ಅತೀವೆಗದಿಂದ ಮತ್ತು ನಿಕ್ಷಾಜಿತನದಿಂದ ನಡೆಸುತ್ತಾ ನಮ್ಮ ಮೋಟಾರ ಸೈಕಲಿಗೆ ಓವರ ಟೇಕ ಮಾಡಿ ಸ್ವಲ್ಪ ಮುಂದೆ ಹೋಗಿ ಕುರಿಕೋಟಾ ಬ್ರೀಡ್ಜ  ರೋಡಿನ ಮೇಲೆ ವೇಗದಲ್ಲಿ ಯಾವುದೇ ಮುನ್ಸೂಚನೇ ನೀಡದೇ ಒಮ್ಮಿಂದ ಒಮ್ಮಲೇ ಬ್ರೇಕ ಹಾಕಿ ನಿಲ್ಲಿಸಿದಾಗ ಹಿಂದೆ ಹೊರಟ ನನ್ನ ತಮ್ಮ ಬಸವರಾಜ ಟಿಪ್ಪರಕ್ಕೆ ಡಿಕ್ಕಿ ಹೊಡೆಯಲು ನಾವಿಬ್ಬರು ರೋಡಿಗೆ ಬಿದ್ದೇವು ಇದರಿಂದಾಗಿ ನನಗೆ ಮೈಮೇಲೆ ಅಲ್ಲಲ್ಲಿ ಮತ್ತು ಬಲ ಕುಂಡಿ ದಡಿಗೆ ಗುಪ್ತಗಾಯವಾಗಿದ್ದು ಎದ್ದು ನನ್ನ ತಮ್ಮ ಬಸವರಾಜನಿಗೆ ನೋಡಲಾಗಿ ಅವನ ಗದ್ದದ ಕೆಳೆಗೆ ಹರಿದ ರಕ್ತಗಾಯವಾಗಿದ್ದು ಮುಖಕ್ಕೆ ಮತ್ತು ಎಡಗಣ್ಣಿಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ರಘುನಾಥ ತಂದೆ. ನಾಗಪಗಪ್ಪಾ ಕುಂಬಾರ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.