POLICE BHAVAN KALABURAGI

POLICE BHAVAN KALABURAGI

03 July 2015

Kalaburagi District Reported Crimes

ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಗೌರಮ್ಮಾ ವಾರ್ಡ ನಂ.23 ಶಹಾಬಜಾರ ಸ್ವಾದಿಗಲ್ಲಿ ಅಂಗನವಾಡಿ ಸಹಾಯಕಿ ಗೌರಮ್ಮ ತಂದೆ ದಿ. ಶ್ರೀವೀರ ಗಂದಿಗುಡಿ ಆಗಿದ್ದು, ನನಗೆ ಅಂಗನವಾಡಿ ಕೆಲಸದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಮತ್ತು ಇತರೆ 5 ಜನ ಮಹಿಳೆಯವರು ಸೇರಿ ಹಲ್ಲೆ ಮಾಡಿದ್ದಾರೆ. ನನ್ನ ಮೋಬೈಲನಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾಡಿರುವ ಕಿರುಕುಳದ ಬಗ್ಗೆ ರೇಕಾರ್ಡ ಮಾಡಲಾಗಿತ್ತು. ನನ್ನನ್ನು ಹೊಡೆದು ಮೆಮೋರಿ ಕಸಿದುಕೊಂಡಿದ್ದಾರೆ. ಈ ಘಟನೆ ಕುರಿತು ಚೌಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಠಾಣೆಗೆ ಹೋದಾಗ ನಮ್ಮ ದೂರನ್ನು ಸ್ವೀಕರಿಸಿರುವುದಿಲ್ಲಾ. ಈಗ ಅಂಗನವಾಡಿ ಕಾರ್ಯಕರ್ತೆ ಮತ್ತು ಅಲ್ಲಿನ 5 ಜನ ಮಹಿಳೆಯವರು ಸೇರಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಾ ಇಲ್ಲದಿದ್ದರೆ ನೌಕರಿ ಬಿಡು, ನೌಕರಿ ಬಿಡಲಿಲ್ಲ ಎಂದರೆ ನಿನ್ನ ಮಾನಭಂಗ ಮಾಡುತ್ತೇವೆ. ಎಂದು ಹೆದರಿಸುತ್ತಿದ್ದಾರೆ. ರಾತ್ರಿ ವೇಳೆ ನಿನ್ನ ಮನೆಗೆ ಗಂಡಸರಿಗೆ ಕಳುಹಿಸುತ್ತೇನೆ. ನಿನ್ನ ಮಾನ ತೆಗೆಯುತ್ತೇವೆ ಎಂದು ಭೀತಿ ನಿಡುತ್ತಿದ್ದಾರೆ. ದಿನಾಂಕ 22/06/2015 ರಂದು ನಾನು ಅಂಗನವಾಡಿ ಕೇಂದ್ರಕ್ಕೆ ಹೋದಾಗ ಅಲ್ಲಿಯ ಮಹಿಳೆ ಕಾಂತಬಾಯಿ ಕೋಗನೂರ ಎಂಬುವಳು ಮತ್ತು ಅಂಗನವಾಡಿ ಕಾರ್ಯಕರ್ತೆ ಸೇರಿ ನನ್ನನ್ನು ಅಂಗನವಾಡಿ ಒಳಗಿನಿಂದ ಕೊದಲು ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ಬಂದು ನನ್ನ ಮೋಬೈಲ ಕಸಿದುಕೊಂಡು ಚರಂಡಿಯಲ್ಲಿ ಹಾಕುವ ಪ್ರಯತ್ನ ಮಾಡಿದರು ಈ ಮೂದಲು ದಿನಾಂಕ 16/06/15 ರಂದು ಕೂಡಾ ಅಂಗನವಾಡಿ ಕಾರ್ಯಕರ್ತೆ ನನ್ನ ಮೋಬೈಲ್ ಕಸಿದುಕೊಂಡು ಅದರಲ್ಲಿಯೆ ಮೆಮೋರಿ ಕಾರ್ಡ ತೆಗೆದುಕೊಂಡು ಈರಮ್ಮ ಬೋಗುಂಡೆಯವರ ಕೈಯಲ್ಲಿ ಕೊಟ್ಟಿದ್ದಾಳೆ. ಇದಲ್ಲದೆ ಸ್ವತ: ತಾನೆ ಹೋಗಿ ನನ್ನ ಮೇಲೆ ಪೊಲೀಸ ದೂರು ನೀಡಿದ್ದಾರೆ. ಅದರಲ್ಲಿ 16 ಜನ ಮಹಿಳೆಯರ ಹೆಸರು ನಿಡಿದ್ದಾರೆ. ಎಲ್ಲರ ಹೆಸರಿನ ಮುಂದೆ ಒಬ್ಬರೆ ಸಹಿ ಮಾಡಿರುತ್ತಾರೆ. ಸ್ವಾದಿಗಲ್ಲಿ ಅಂಗನವಾಡಿಗೆ ಸರ್ವೆಯಲ್ಲಿ ಇಲ್ಲದ ಹೆಣ್ಣು ಮಕ್ಕಳ ಹೆಸರು ಸಹ ಇದರಲ್ಲಿ ಇವೆ. ಚೆನ್ನಮ್ಮ ಸಾಲಿಮಠ., ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಲಲ್ಲು ಗೌಳಿ, ನಿರ್ಮಲ ಕೋಣೆ, ಗಂಗಮ್ಮಾ ಮಂಗಶೆಟ್ಟಿ, ಇವರಗಳದು ಜೈಭೀಮ ನಗರ ವಿಜಯಲಕ್ಷ್ಮಿ ಅಂಗನವಾಡಿ ಕಾರ್ಯಕರ್ತೆ ಕೇಂದ್ರ ಸರ್ವೆಯಲ್ಲಿ ಬರುತ್ತಾರೆ. ಭಾರತಿ ತಂದೆ ಶಾಂತಯ್ಯಾ ಸ್ವಾಮಿ ಮಠಪತಿ ಇವರ ಹೆಸರು ಒತ್ತಾಯಪೂರ್ವಕವಾಗಿ ಬರೆಸಿರುತ್ತಾರೆ. ಇವಳು ಗಾಜಿಪೂರದವರು ಇದ್ದಾರೆ. ಅಂಗನವಾಡಿಗೆ ಸಂಬಂಧ ವಿಲ್ಲದ ಮಹಿಳೆಯವರು ಅಂಗನವಾಡಿಗೆ ಬರುತ್ತಾರೆ. ಅವರುಗಳ ಹೆಸರು ಈ ರೀತಿ ಇವೆ. ಕಾಂತಾಬಾಯಿ ಕೊಗನೂರ, ಚೆನ್ನಮ್ಮ ಸಾಲಿಮಠ, ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಮಹಾದೇವಿ ಚೆಟ್ಟಿ, ಈರಮ್ಮ ಬೋಗುಂಡೆ, ಶರನಮ್ಮಾ ಸ್ವಾದಿ, ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 30-06-2015 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಮಗಳಲಾದ ಮಾಲಾಶ್ರೀ ಇವಳು ನಮ್ಮ ಮನೆಯಿಂದ ಬಹರದೇಶೆಗೆ  ಹೋಗಿ ಬರುತ್ತನೆ ಅಂತಾ ಹೋದವಳು ಬಹಳ ಹೊತ್ತಾದರು ಮರಳಿ ಬಂದಿರುವುದಿಲ್ಲಾ  ನಾನು ನನ್ನ ಗಂಡ ಮಕ್ಕಳು ಬಹಿರದೇಶೆಗೆ ಹೋದ ಜಾಗಕ್ಕೆ ಹೋಗಿ ನೋಡಲು ಅಲ್ಲಿ ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಶ್ರೀಮತಿ ಶರಣಮ್ಮ ಗಂಡ ಶರಣಪ್ಪಾ ಮಾಂಗ ಸಾ : ಅಫಜಲಪೂರ ಠವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 09/07/2013 ರಂದು ಚೈಲ್ಡ್ ಲೈನ್ ಕಲಬುರಗಿ ಯಿಂದ ನಮ್ಮ ಸಂಸ್ಥೆಗೆ ಅಗ್ನಿ ತಂದೆ ಹಣಮಂತ ವಯಃ 16 ವರ್ಷ ಈತನು ದಾಖಲಾಗಿರುತ್ತಾನೆ. ಈತನು ದಿನಾಂಕಃ 01/07/2015 ರಂದು ಸರಕಾರಿ ಪ್ರೌಡ ಶಾಲೆ ಆದರ್ಶ ನಗರ ಕಲಬುರಗಿ ಶಾಲೆಗೆ ಇತರೆ ನಿವಾಸಿಗಳ ಜೊತೆಗೆ ಹೋಗಿ ಸಾಯಂಕಾಲ 05:30 ಗಂಟೆಯವರೆಗೆ ಮರಳಿ ಸಂಸ್ಥೆಗೆ ಬಂದಿಲ್ಲ. ಶಾಲಾ ನಿವಾಸಿಗಳನ್ನು ವಿಚಾರಿಸಿದಾಗ ಅಗ್ನಿ 09 ನೇ ತರಗತಿ ಈತನು ಶಾಲೆಯಿಂದ ಓಡಿ ಹೋಗಿರುತ್ತಾನೆ ಎಂದು ಮಕ್ಕಳು ತಿಳಿಸಿರುತ್ತಾರೆ. ಸಾಯಂಕಾಲ 05:30 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸ್ಥಳೀಯ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಲು ಪ್ರಯತ್ನಿಸಲಾಗಿರುತ್ತದೆ. ಆದರೆ ಈತನು ಸಿಕ್ಕಿರುವುದಿಲ್ಲಾ. ಅಂತಾ ಶ್ರೀ ಸೈಯದ ಹಮೀದ ಅಲಿ, ಅಧೀಕ್ಷಕರು ಸರಕಾರಿ ಬಾಲಕರ ಬಾಲ ಮಂದಿರ ಪ್ರಗತಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಂಆಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 03-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಮೂರು ಟ್ರ್ಯಾಕ್ಟರಗಳ್ಳಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಡಿಗ್ರಿ ಕಾಲೇಜ ಕ್ರಾಸ ಹತ್ತಿರ ಇದ್ದಾಗ ಎದುರುಗಡಯಿಂದ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಮೂರು ಟ್ರ್ಯಾಕ್ಟರ ಚಾಲಕರು ನಮ್ಮ ವಾಹನವನ್ನು ನೋಡಿ ತಮ್ಮು ಟ್ರ್ಯಾಕ್ಟರಗಳನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಮೂರು ಟ್ರ್ಯಾಕ್ಟರಗಳು ಚಕ್ಕ ಮಾಡಲು ಟ್ರ್ಯಾಕ್ಟರಗಳಲ್ಲಿ ಮರಳು ಇತ್ತು, ಮತ್ತು ಸದರಿ ಟ್ರ್ಯಾಕ್ಟರಗಳ ನಂ ನೋಡಲಾಗಿ 1] ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ 43-3008SSA01932, 2] ಅರ್ಜುನ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ-32/ಟಿ.ಎ-6673, 3] ಅರ್ಜುನ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ NNHY06327 ಅಂತಾ ಇದ್ದವು, ಸದರಿ ಮೂರು ಟ್ರ್ಯಾಕ್ಟರಗಳಲ್ಲಿದ್ದ ಮರಳಿನ ಅಂದಾಜ ಕಿಮ್ಮತ 9,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಮರಳು ತುಂಬಿದ ಮೂರು ಟ್ರ್ಯಾಕ್ಟರಗಳೊಂದಿಗೆ ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.