POLICE BHAVAN KALABURAGI

POLICE BHAVAN KALABURAGI

15 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸುಲೇಪೇಟ ಠಾಣೆ: ಸುಭದ್ರಮ್ಮಾ ತಂದೆ ರಾಜಪ್ಪ ತಳವಾರ ಸಾಃ ತೇಗಲತಿಪ್ಪಿ ರವರು ನಾನು ಮತ್ತು ತನ್ನ ತಾಯಿ ಶಂಕ್ರೇಮ್ಮಾ ಇವಳೊಂದಿಗೆ ದಿನಾಂಕಃ 15/02/2012 ರಂದು ಮುಂಜಾನೆ ಸುಲೇಪೇಟ ಗ್ರಾಮಕ್ಕೆ ಬಂದು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ತೇಗಲತಿಪ್ಪಿ ಗ್ರಾಮಕ್ಕೆ ಹೋಗುವ ಕುರಿತು ಸುಲೇಪೇಟ ಬಸ್ ನಿಲ್ದಾಣದ ಹತ್ತಿರ ಬಂದಾಗ ಮದ್ಯಾಹ್ನ ತೇಗಲತಿಪ್ಪಿ ಗ್ರಾಮದ ಶರಣಪ್ಪ ಹಳ್ಳಿ ಇತನು ಟಂಟಂ ನಂ. ಕೆಎ-32 ಎ-812 ನೇದ್ದನ್ನು ತೆಗೆದುಕೊಂಡು ಬಂದು ತೇಗಲತಿಪ್ಪಿ ಗ್ರಾಮಕ್ಕೆ ಹೋಗುತ್ತದೆ ಕುಳಿತುಕೊಳ್ಳಿರಿ ಅಂತಾ ಹೇಳಿದ್ದಾಗ ನಾನು ನನ್ನ ತಾಯಿ ಶಂಕ್ರೇಮ್ಮಾ ಮತ್ತು ನಮ್ಮ ಗ್ರಾಮದ ಅಂಬ್ರೇಶ ಪೆಂಚನಪಳ್ಳಿ ಕೂಡಿ ಟಂ ಟಂ ಟ್ರೈಲಿಯಲ್ಲಿ ಹತ್ತಿ ಕುಳಿತ್ತಾಗ ಟಂ ಟಂ ಚಾಲಕನು ಟಂ ಟಂ ಚಲಾಯಿಸಿಕೊಂಡು ಸುಲೇಪೇಟ ಗ್ರಾಮದ ಮೇಘರಾಜ ರಾಠೋಡ್ ಇವರ ಕಟ್ಟಿಗೆ ಅಡ್ಡದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಟಂಟಂ ನಂ. ಕೆಎ-32 ಎ-4409 ನೇದ್ದರ ಚಾಲಕ ಜಾಫರ ಸಾಃ ಭಂಟ್ನಳ್ಳಿ ಇತನು ತನ್ನ ಟಂಟಂ ಅತೀವೇಗ ಮತ್ತು ನಿಸ್ಕಾಳಜಿತನದಿಂದ ತಂದು ನಾವು ಕುಳಿತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದು ಟಂ ಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಟಂ ಟಂ. ಟ್ರೈಲಿಯಲ್ಲಿ ಕುಳಿತ ನನ್ನ ಎಡ ರಟ್ಟಿಗೆ ಮತ್ತು ಅಂಬ್ರೇಶನ ಎಡ ಮುಂಗೈ ಹಾಗೂ ಎಡಗೈ ರಟ್ಟಿಗೆ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 279, 337 ಐಪಿಸಿ & 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

ವರದಕ್ಷಿಣೆ ಪ್ರಕರಣ:

ಮಹಿಳಾ ಪೋಲಿಸ ಠಾಣೆ:ಶ್ರೀಮತಿ. ಶಿವಾನಿ @ ಶಿವಮ್ಮಾ ಗಂಡ ಸಾಯಿ ಪ್ರಸಾದ ವ: 31 ವರ್ಷ ಉ: ಕೈಗಾರಿಕ ವಿಸ್ತಾರಣಾ ಅಧಿಕಾರಿ ಅಫಜಲಪೂರ ರವರು ನನ್ನ ಮದುವೆಯು ದಿನಾಂಕ; 13.05.2009 ರಂದು ಸಚೀನ ತಂದೆ ಸುಭಾಶ ಸಾ|| ವಿದ್ಯಾ ನಗರ ಇತನೊಂದಿಗೆ ನೇರವೆರಿದ್ದು ಮದುವೆಯ ಸಮಯದಲ್ಲಿ 2 ಲಕ್ಷ ರೂಪಾಯಿ ನಗದು ಹಣ, 11 ತೊಲೆ ಹಾಗು ಇನ್ನಿತರ ಸಾಮಾನು ಕೊಟ್ಟಿದ್ದು, ಮದುವೆ ನಂತರ ಹೊಡೆ ಬಡೆ ಮಾಡೋದು, ನ್ನ ಸಂಬಳ ತೆಗೆದುಕೊಳ್ಳುವುದು, ಇನ್ನೂ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತವರು ಮನೆಗೆ ಕಳುಹಿಸಿದ್ದರು. ನನ್ನ ಗಂಡ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನೆ ಹಾಕಿದ್ದು, ನ್ಯಾಯಾಲಯ ನಿರಾಕರಿಸಿರುತ್ತದೆ. ಅದರ ಸಂ. ಎಮ್.ಸಿ.ನಂ.171/2010 ಇದ್ದು, ದಿನಾಂಕ: 23.08.11 ರಂಧು ತೀರ್ಪು ನೀಡಿ ವಜಾ ಮಾಡಿರುತ್ತಾರೆ. ದಿನಾಂಕ: 14.02.2012 ರಂದು ಮುಂಜಾನೆ 8-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಅಫಜಲಪೂರ ಬಸ್ಸಿಗೆ ಕಾಯುತ್ತಿದ್ದಾಗ ನನ್ನ ಗಂಡ , ಮಾವ ಅತ್ತೆ, ನಾದಿನಿ ಇವರೆಲ್ಲರೂ ಸೇರಿ ಬಸ್ ನಿಲ್ದಾಣಕ್ಕೆ ಬಂದು ನನ್ನನ್ನು ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ವಿವಾಹ ವಿಚ್ಛೇಧನೆ ಬೇಡವಾಗಿದ್ದರೆ, 10 ಲಕ್ಷ ರೂಪಾಯಿ ವರದಕ್ಷೀಣೆ ತೆಗೆದುಕೊಂಡು ಬಾ ಅಂತಾ ಬೇದರಿಕೆ ಬೆರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 13/12 ಕಲಂ. 498(ಎ), 504,506, ಸಂ. 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣ: ದಿನಾಂಕ 15/02/2012 ರಂದು 1130 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಇರುವ ಮರೆಮ್ಮಾ ದೇವಿಯ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಶರಣಬಸಪ್ಪ ತಂದೆ ದುರ್ಗಪ್ಪ ಚಿಂಚನಸೂರ ವ|| 28 ವರ್ಷ, ಜಾ|| ಹರಿಜನ, || ಕೂಲಿ ಕೆಲಸ ಸಾ|| ನಿಂಬರ್ಗಾ ತಾ|| ಆಳಂದ ಇವನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟು ಜನರಿಗೆ ಮೋಸ ಮಾಡುತ್ತಿರುವಾಗ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿ ಶಿವರಾಯ, ಮಲ್ಲಿಕಾರ್ಜುನ, ಕಲ್ಲಪ್ಪ ರವವರೆಲ್ಲರೂ ಸೇರಿ ಮಟಕಾ ಜೂಜಾಟ ನಡೆಸುತ್ತಿದ್ದವನ ಮೇಲೆ ದಾಳಿ ಮಾಡಿ ಅವನನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 185/- ರೂ, ಪೆನ್ನು ಹಾಗೂ ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ. 12/2012 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಲ್ಲಿನಾಥ ತಂದೆ ಶಾಂತಪ್ಪ ಮಾಳಗೆ ಸಾ: ಸ್ವಾಮಿ ವಿವೇಕಾನಂದ ನಗರ ಆಳಂದ ರಸ್ತೆ ಗುಲಬರ್ಗಾರವರು ನಾನು ದಿಃ 14/2/12 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಹೀರಾಪೂರ ಕ್ರಾಸ ಆಳಂದ ಚೆಕ್ಕ ಪೋಸ್ಟ್ ಕಡೆಗೆ ಬರುವ ರಿಂಗ ರೋಡ ಎಡಬದಿಯಲ್ಲಿ ಆಟೋ ಕಾಯುತ್ತಾ ನಿಂತಾಗ ಹೀರಾಪೂರ ಗ್ರಾಮದಿಂದ ಕೆಎ 37 ಜೆ 8021 ನೇದ್ದರ ಮೋಟಾರ ಸೈಕಲ ಸವಾರ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತ ನನಗೆ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 279, 338 L¦¹ ಸಂ/ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತಗಳು
ಮಹಾಗಾಂವ ಪೊಲೀಸ್ ಠಾಣೆ:
ಶ್ರೀ ಹಣಮಂತ ತಂದೆ ಶಿವಪುತ್ರಪ್ಪಾ ಕುಂಬಾರ ಸಾ.ಕಣ್ಣೂರ ಜ್ಯಾತಿ: ಕುಂಬಾರ ಉಃ ಕೂಲಿ ಕೆಲಸ ಸಾಃ ಕಣ್ಣೂರ ತಾ.ಜಿ.ಗುಲಬರ್ಗಾರವರು ನಾನು ಮತ್ತು ನನ್ನ ತಂದೆ ಶಿವಪುತ್ರಪ್ಪ, ತಾಯಿ ಲಲಿತಾಬಾಯಿ ಹಾಗೂ ಗೆಳೆಯ ರೇವಣಸಿದ್ದ ವಾಪಸ್ ಊರಿಗೆ ಹೋಗುವ ಸಂಬಂಧ ನಿನ್ನೆ ದಿನಾಂಕ: 14/02/2012 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಮಹಗಾಂವ ಕ್ರಾಸ್ ದಲ್ಲಿ ನನ್ನ ಕೆಲಸ ಮುಗಿಸಿಕೊಂಡು ಕ್ರೂಸರ್ ಕುಳೀತಿದ್ದು, ಕುರಿಕೋಟಾ ಸೀಮಾಂತರದಲ್ಲಿ ರೋಡಿನ ಮೇಲೆ ನಾವು ಕುಳಿತ ಕ್ರೂಸರ್ ವಾಹನದ ಮುಂದೆ ಒಂದು ಲಾರಿ ಹೋಗುತ್ತಿದ್ದು ಆ ಲಾರಿಯ ಎದುರುಗಡೆ ಅಪಘಾತವಾಗಿದ್ದರಿಂದ ಲಾರಿ ಚಾಲಕನು ತನ್ನ ಲಾರಿಯ ಬ್ರೇಕ್ ಹಾಕಿದ್ದು , ನಮ್ಮ ಕ್ರೂಸರ್ ಲಾರಿಯ ಹಿಂದುಗಡೆ ಡಿಕ್ಕಿ ಹೊಡೆಯಿತು, ನಮ್ಮ ಹಿಂದುಗಡೆ ಒಂದು ಕಾರು ಬಂದು ನಮ್ಮ ಕ್ರೂಸರ್ ಗೆ ಡಿಕ್ಕಿ ಹೊಡೆಯಿತು. ನಾವು ಕೆಳಗೆ ಇಳಿದು ನೋಡಲು ನಮ್ಮೆಲ್ಲರಿಗೆ ಸಾದಾ & ಭಾರಿ ಪ್ರಮಾಣದ ರಕ್ತಗಾಯಗಳಾಗಿದ್ದವು. ಅಗ ಕ್ರೂಸರ್ ನಂಬರ ನೋಡಲು ಅದು ಕೆಎ-36-ಎಮ್-7319 ಇದ್ದು, ಲಾರಿ ನಂಬರ್ ನೋಡಲು ಕೆಎ-17-ಎ-9707 ಕ್ರೂಸರ್ ಗೆ ಹಿಂದುಗಡೆ ಢಿಕ್ಕಿ ಹೊಡೆದ ಕಾರು ನಂಬರ್ ನೋಡಲಾಗಿ ಕೆಎ-32-ಎಮ್-7610 ಇತ್ತು ಅದರೊಳಗೆ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಲಾರಿ ಎದುರುಗಡೆ ಹೋಗಿ ನೋಡಲು ಅಲ್ಲಿ ಟ್ರ್ಯಾಕ್ಟರ್ ಹಾಗೂ ಜೀಪ್ ಮುಖಾಮುಖಿಯಾಗಿ ಅಪಘಾತವಾಗಿದ್ದರಿಂದ ಜೀಪಿನ ಚಾಲಕನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆತನ ಹೆಸರು ವಿಳಾಸ ತಿಳಿದಿರುವದಿಲ್ಲಾ ಜೀಪಿನಲ್ಲಿದ್ದ ಹೆಣ್ಣು ಮಗಳಿಗೆ ಹಾಗೂ ಅವಳ ಪಕ್ಕದಲ್ಲಿದ್ದ ಎರಡು ಹೆಣ್ಣು ಕೂಸುಗಳಿಗೆ ಅಲ್ಲಲ್ಲಿ ಸಾದಾ & ಭಾರಿ ಪ್ರಮಾಣದ ರಕ್ತಗಾಯಗಳಾಗಿರುತ್ತವೆ. ಜೀಪ್ ನಂಬರ್ ನೋಡಲಾಗಿ ಅದು ಕೆಎ-36-ಎಮ್-1082 ಇದ್ದು ಅದಕ್ಕೆ ಅಪಘಾತಪಡಿಸಿದ ಟ್ರ್ಯಾಕ್ಟರ್ ನಂಬರ್ ನೋಡಲು ಅದರ ಇಂಜನ್ ನಂ:ಎ.ಪಿ-05-ಎಕೆ-7315 ಹಾಗೂ ಟ್ರ್ಯಾಲಿ ನಂ.ಕೆಎ-32-ಟಿ-0274 ಅಂತಾ ಇದ್ದವು. ಅಪಘಾತಪಡಿಸಿದ್ದ ಟ್ರ್ಯಾಕ್ಟರ್ ಚಾಲಕನು ಅತಿವೇಗ & ಅಲಕ್ಷತನದಿಂದ ಚಲಾಯಿಸಿ ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಜರುಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 279.337,338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ನೇಲೋಗಿ ಠಾಣೆ:
ಶ್ರೀ ದತ್ತಾತ್ರೆಯ ತಂದೆ ಅಣ್ಣರಾವ ಮಾಲಿ ಪಾಟೀಲ ಸಾ: ಇಟಗಾ ರವರು ನಮ್ಮ ಹೊಲವು ಗಾಣಾಗಾಪೂರ ಹತ್ತಿರದ ಬೀಮಾ ನದಿಗೆ ಅಡ್ಡಲಾಗಿ ಕಟ್ಟಿದ ಬ್ಯಾರೇಜ ಕಮ್ ಬ್ರಿಡ್ಜ ಹತ್ತಿರ ಇರುತ್ತದೆ. ಬ್ರಿಜಿನ ದಕ್ಷಿಣದ ದಂಡೆಗೆ ಯಾವದೊ ಒಂದು ಗಂಡಸಿನ ಶವ ಹತ್ತಿದೆ ಅಂತಾ ರೋಡಿನ ಮೇಲೆ ಹೋಗಿ ಬರುವ ಜನರು ಮಾತಡುವದನ್ನು ಕೇಳಿ ನಾನು ದಿನಾಂಕ 11/02/2012 ರಂದು ಮದ್ಯಾನ್ಹ 01 ಗಂಟೆ ಸುಮಾರಿಗೆ ನಾನು ಕೂಡಾ ಅಲ್ಲಿಗೆ ಹೋಗಿ ನೋಡಿದೆನು ಒಬ್ಬ ಗಂಡಸಿನ ಶವ ನೀರಿ ಮೇಲೆ ಬಾರಲಾಗಿ ತೆಲಿತ್ತು ಕೈಗಳು ಮತ್ತು ಕಾಲುಗಳು ಜಲಚರಗಳು ತಿಂದು ಚರ್ಮ ಹೋಗಿ ಬೆಳ್ಳಗೆ ಕಾಣುತಿತ್ತು ಮೈಮೇಲೆ ಕೆಂಪು ಟೀ ಶರ್ಟ ಒಂದು ಕ್ಪಪು ಬಣ್ಣದ ಪ್ಯಾಂಟ ಇತ್ತು ಸದರಿಯವನ ವಯಸ್ಸು 30 ರಿಂದ 32 ಇರಬಹುದು ಸದರಿ ಮನುಷ್ಯ ಯಾರು ಎಲ್ಲಿಯವನು ಅನ್ನುವದು ಗೊತ್ತಿಲ್ಲಾ ಅವನ ಶವ ನೋಡಿದಲ್ಲಿ 3-4 ದಿನಗಳ ಹಿಂದೆ ಸತ್ತಿರಬಹುದು ಅನಿಸುತ್ತಿದೆ ಸದರಿಯವನು ನದಿಯಲ್ಲಿ ಸ್ನಾನ ಮಾಡಲೂ ಹೋಗಿ ಈಜಲು ಬಾರದಿದ್ದರಿಂದ ಸತ್ತಿರುತ್ತಾನೊ. ಅಥವಾ ಆಕಸ್ಮಿಕ ಕಾಲು ಜಾರಿ ನದಿಯಲ್ಲಿ ಮುಳಗಿ ಸತ್ತಿದ್ದಾನೂ ಅನ್ನೂವದು ಗೊತ್ತಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ ಆರ್ ನಂ 04/2012 ಕಲಂ 174 ಸಿ ಆರ್ ಪಿ ಸಿ ಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಮೃತನ ಚಹರೆ ಪಟ್ಟಿ ಸುಮಾರು 30 -32 ವಯಸ್ಸು, ಎತ್ತರ 5’6” ಕೆಂಪು ಬಣ್ಣದ ಟೀ ಶರ್ಟ, ಕಪ್ಪು ಬಣ್ಣದ ಬಿಳಿ ಪ್ಯಾಂಟ ಧರಿಸಿರುತ್ತಾನೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಪಿಐ ಜೇವರ್ಗಿ ರವರ ಮೋಭಾಯಿಲ್ ನಂ: 9480803533 ಅಥವಾ ಪೊಇ.ಎಸ.ಐ ನೇಲೋಗಿ ಠಾಣೆ ರವರು ಮೋಬಾಯಿಲ್ ನಂ: 9480803562 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.