POLICE BHAVAN KALABURAGI

POLICE BHAVAN KALABURAGI

11 September 2013

ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ  ಲಾಲಪ್ಪಾ ತಂದೆ ಕಾಶಪ್ಪ ಕುರುಬರ್ ಸಾ: ಇಟಕಲ್ ಗ್ರಾಮ, ಇವರು ಇಟಕಲ ಗ್ರಾಮದ ಸೀಮಾಂತರದಲ್ಲಿರುವ ಜಮೀನು ಸರ್ವೇ ನಂ 122 ನೇದ್ದರಲ್ಲಿಯ ಜಮೀನಿನ ಬಗ್ಗೆ, ನನಗೆ ಮತ್ತು ಶೇಖರಯ್ಯಾ ತಂದೆ ಸೋಪಣಯ್ಯಾ ಸಾ: ಇಟಕಲ್ ಇವರ ನಡುವೆ ಸುಮಾರು 4 ವರ್ಷಗಳಿಂದ ವಿವಾದ  ನಡೆದು, ಕೊರ್ಟ ಕೇಸ ನಡೆದಿದ್ದು ನಮಗೆ ಮತ್ತು ಶೇಖರಯ್ಯಾ ಇವರಿಗೆ ವೈಮನಸ್ಸು ಬೆಳೆದಿರುತ್ತದೆ. ದಿನಾಂಕ: 09-09-2013 ರಂದು ಮಧ್ಯಾಹ್ನ 1330 ಗಂಟೆ ಸುಮಾರಿಗೆ ನಾನು ನನ್ನ ಕುರಿಗಳನ್ನು ವಿವಾದ ಇರುವ ಜಮೀನು ಸರ್ವೆ ನಂ 122 ನೇದ್ದರಲ್ಲಿಯ ಬೀಳದ ಹೊಲದಲ್ಲಿ ನನ್ನ ಕುರಿಗಳನ್ನು ಮೇಯಿಸುತ್ತಿದ್ದೇನು, ಆಗ ಇದನ್ನು ನೋಡಿ ನನ್ನ ಬಳಿಬಂದ ಶೇಖರಯ್ಯಾ ತಂದೆ ಸೋಪಣಯ್ಯಾ ಇಟಕಲ್ 2. ಶಂಬುಲಿಂಗಯ್ಯಾ ತಂದೆ ಸೋಪಣಯ್ಯಾ ಸಾ: ಇಟಕಲ್ ಇವರು ನನ್ನ ಬಳಿ ಬಂದು ಏ ಬೋಸಡಿ ಮಗನೆ ನನ್ನ ಹೊಲದಲ್ಲಿ ಬಂದು ಏಕೆ ಕುರಿತು ಮೇಯಿಸುತ್ತಿದ್ದಿ, ಅಂತಾ ಬೈಯುತ್ತಾ, ಇಬ್ಬರು ಕುಡಿ ಹೊಡೆಬಡೆ ಮಾಡಿ ಗುಪ್ತಗಾಯಗೊಳಿಸರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಕಲ್ಲಿನಾಥ ತಂದೆ ಸಿದ್ದಣ್ಣಾ ಸನಗುಂದಿ || 35 ವರ್ಷ, ಜಾ|| ಲಿಂಗಾಯತ,  || ಒಕ್ಕಲುತನ, ಸಾ|| ಹಿತ್ತಲಶಿರೂರತಾ|| ಆಳಂದ ರವರ  ಹೊಲ ಸರ್ವೆ ನಂ. 245 ನೇದ್ದರಲ್ಲಿಯ ದಾರಿ ಸಂಭಂಧ ಕಲ್ಲಿನಾಥ ತಂದೆ ಭೀಮಶಾ ಸನಗುಂದಿ ಮಧ್ಯೆ ತಕರಾರು ಇದ್ದು ದಿನಾಂಕ 05-09-2013 ರಂದು 2200 ಗಂಟೆ ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದ ಬಂದಾರಿಯಲ್ಲಿ ನಿಂತಾಗ ಆರೋಪಿತರು ಬಂದಾರಿ ಮೇಲಿಂದ ಹಾಯ್ದು ಹೋಗುತ್ತಿರುವಾಗ ಫಿರ್ಯಾದಿಯು ನಮ್ಮ ಹೊಲದಲ್ಲಿ ದಾರಿ ಇಲ್ಲಾ ಯಾಕೆ ಇಲ್ಲಿ ಹಾಯ್ದು ಹೋಗುತ್ತಿರುವಿರಿ ಅಂತಾ  ಅಂದಿದಕ್ಕೆ ಆರೋಪಿತರು ಫಿರ್ಯಾದಿಗೆ ಸುತ್ತುಗಟ್ಟಿ ಎಲ್ಲಿಗೂ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಕಪಾಳ ಮೇಲೆ ಮತ್ತು ಬೆನ್ನಗೆ ಒದ್ದು ಬಾಯಿಂದ ಕಚ್ಚಿ ರಕ್ತಗಾಯಪಡಿಸಿದ್ದು ಈ ಬಗೆಗ ಮೊದಲು ನಿಂಬರರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮತ್ತೆ   ದಿನಾಂಕ 09-09-2013  ರಂದು  1. ಕಲ್ಲಿನಾಥ ತಂದೆ ಭೀಮಶಾ ಸನಗುಂದಿ,2. ಬಲವಂತಪ್ಪಾ ತಂದೆ ಭೀಮಶಾ ಸನಗುಂದಿ, 3.  ಭಿಮರಾಯ ತಂದೆ ಭೀಮಶಾ ಸನಗುಂದಿ,4. ಸುರ್ಯಕಾಂತ ತಂದೆ ಭೀಮಶಾ ಸನಗುಂದಿ,5. ಗುರಣ್ಣಾ ತಂದೆ ಸಿದ್ದಣ್ಣ ಸನಗುಂದಿ, 6. ಶರಣಬಸಪ್ಪ ತಂದೆ ಹಣಮಂತ್ರಾಯ ಸನಗುಂದಿ, 7. ಸಿದ್ದಣ್ಣಾ ತಂದೆ ಬಲವಂತಪ್ಪಾ ಸನಗುಂದಿ, 8. ರಾಜೇಂದ್ರ ತಂದೆ ಹಣಮಂತ್ರಾಯ ಸನಗುಂದಿ  ಎಲ್ಲರೂ ಸಾ|| ಹಿತ್ತಲಶಿರೂರ. ಹಿತ್ತಲಶಿರೂರು ಗ್ರಾಮ ಇವರು ನನಗೆ ಕೊಲೆ ಮಾಡುವ ಉದ್ದೆಶದಿಂದ ಕೈಯಲ್ಲಿ ಬಡಿಗೆ ಮತ್ತು ಕೊಡಲಿ ಹಿಡಿದುಕೊಂಡು ಬಂದು ಮಾನ್ಯ ನ್ಯಾಯಾಲಯದಲ್ಲಿ ಕೇಸು ನಡೆದಿದ್ದು ವಾಪಸ್ಸು ತೆಗೆದುಕೊಳ್ಳುಅಳತೆ ಮಾಡಿಸಿದಾಗ ಬಂದಿದ್ದ 20 ಗುಂಟೆ ಜಮೀನ ಕೇಳಬಾರದುಇಷ್ಟೆಲ್ಲಾ ಕೇಳುತ್ತಿ ನಿನಗೆ ಖಲಾಸ ಮಾಡಬೇಕು ಅಂತಾ ಬಂದಿದ್ದೇವೆ ಅಂತ ಅಂದು ಕೈಯಲ್ಲಿದ್ದ ಕೊಡಲಿ ಕಾವಿನಿಂದ ಮತ್ತು ಬಡಿಗೆಯಿಂದ ಎಡಗೈ ಮುಂಗೈ ಹತ್ತಿರ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.