POLICE BHAVAN KALABURAGI

POLICE BHAVAN KALABURAGI

11 November 2011

GULBARGA DIST REPORTED CRIMES


ಜೂಜಾಟ ಪ್ರಕರಣ :
ಚೌಕ ಪೊಲೀಸ್ ಠಾಣೆ :
ದಿನಾಂಕ 11.11.2011 ರಂದು 0100 ಗಂಟೆಗೆ ಚೌಕ ಠಾಣೆ ವ್ಯಾಪ್ತಿಯ ಬಾಂಡೆ ಬಜಾರ ಹಿಂಬಾಗದಲ್ಲಿರುವ ಕಲಾಯಿಗಲ್ಲಿಯಲ್ಲಿರುವ ಕಾಂಪ್ಲೇಕ್ಸಿನ ಎರಡನೆ ಅಂತಸ್ತಿನಲ್ಲಿಯ ಪಶ್ಚಿಮ ದಿಕ್ಕಿನಲ್ಲಿರುವ ಅಂಗಡಿಯಲ್ಲಿ ಸಚಿನ ತಂದೆ ಚಿಂತಾಮಣಿ ಪಾಟೀಲ ವ್ಯಾಪಾರ ಸಾಃ ಕಿರಾಣಾ ಬಜಾರ ಗುಲಬರ್ಗಾ, ಗಣೇಶ ತಂದೆ ರಾಮಚಂದ್ರ ಕಾಮಟಿ ಪಾರ ಸಾಃ ಪುಟಾಣಿ ಗಲ್ಲಿ, ಮದುಸುಧನ ತಂದೆ ಕಿಶನ ಚಮದ್ರಗಾದಿ ಸಾಃ ಗಂಜ ಕಾಲೋನಿ, ಸಂತೊಷ ತಂದೆ ಶಂಕರರಾವ ಕುಲಕರ್ಣಿ ಸಾಃ ಪುಟಾಣಿಗಲ್ಲಿ, ಪ್ರಕಾಶ ತಂದೆ ಬಾಬು ಪಾಟೀಲ ಸಾಃ ಜಗತ, ರಮೆಶ ತಂದೆ ಜಗನ್ನಾಥ ಬೆಲಸೂರೆ ಸಾಃ ಓಂನಗರ, ಸಂತೊಷ ತಂದೆ ಬನ್ಸಿಲಾಲ ತಿರುಮಲ ಸಾಃ ಶಹಾಬಜಾರ, ಚಂದ್ರಶೇಖರ ತಂದೆ ಸಿದ್ದಣ್ಣ ಪಾಟೀಲ ಸಾಃ ಜಗತ ಗುಲಬರ್ಗಾ, ಶ್ರೀಧರ ತಂದೆ ಬಾಬುರಾವ ಬಿರಾದಾರ ಸಾಃ ಬ್ರಹ್ಮಪೂರ, ರಾಜು ತಂದೆ ವಿಶ್ವನಾಥ ಶೇಟ್ಟಿ ಸಾಃ ಜಯನಗರ, ಸುನಿಲ ತಂದೆ ಚಂದ್ರನಾಥ ಡಾಂಗೆ ಸಾಃ ವಸಂತ ನಗರ ಎಲ್ಲರೂ ಗುಲಬರ್ಗಾದವರು ವಿದ್ಯುತ ಬೆಳಕಿನಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪೊಲೀ್ಸ ಇನ್ಸಪೇಕ್ಟರ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದವರನ್ನು ದಸ್ತಗಿರಿ ಮಾಡಿ ಅವರಿಂದ 52 ಇಸ್ಪೇಟ ಎಲೆಗೆಳು ಮತ್ತು 1,60,530-00, ಹಾಗು 11 ಮೋಬೈಲಗಳು, ಎರಡು ಮೊಟಾರ ಸೈಕಲಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 232/2011 ಕಲಂ 79, 80 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಉಡ ತನಿಖೆ ಕೈಕೊಳ್ಳಲಾಗಿದೆ.



ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ
: ಶ್ರೀ ಸ್ಟೆಫಿ ತಂದೆ ಸುರೇಶ ಭರಣಿ ವ: 20 ವರ್ಷ ಸಾ: ನವರಂಗ ಚಾಳ ಜಗತ ಗುಲಬರ್ಗಾ ರವರು ನಾನು ಗೆಳತಿಯಾದ ಆಶ್ವಿನಿ ತಂದೆ ಪರಮೇಶ್ವರ ಇವಳಿಗೆ ನನ್ನ ಹೊಂಡ ಎಕ್ಟಿವ್ ಕೆಎ 32 ಎಸ 32 ನೇದ್ದರ ಮೇಲೆ ಕೂಡಿಸಿಕೊಂಡು ವಿಶ್ವವಿದ್ಯಾಲಯ ಆವರಣದಲ್ಲಿರುವ ನನ್ನ ಗೆಳತಿಯಾದ ಸಭಾ ಅರಸಿಕೇರಿ ಇವಳಿಗೆ ಆರಾಮವಿಲ್ಲದ ಕಾರಣ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ಕ್ವಾಟರ್ಸಕ್ಕೆ ಹೋಗಿ ವಿಚಾರಿಸಿ ಮರಳಿ ನನ್ನ ಗಾಡಿಯ ಮೇಲೆ ಮನೆಗ ಹೋರಟಾಗ ವಿಶ್ವವಿದ್ಯಾಲಯದ ಮಟೆರಿಯಲ್ ಸೈನ್ಸ ವಿಭಾದ ಮುಂಭಾಗದ ರಸ್ತೆಯ ಮೇಲೆ ಯಾರೂ ಮೂವರು ಅಪರಿಚಿತರು ಒಂದು ಮೋಟಾರ ಸೈಕಲ ಮೇಲೆ ಬಂದು ನನ್ನ ಗಾಡಿಗೆ ಅಡ್ಡಗಟ್ಟಿ ನಿಲ್ಲಿಸಿ ಅವರಲ್ಲಿ ಇಬ್ಬರು ಕೆಳಗೆ ಇಳಿದು ನಮ್ಮಿಬ್ಬರಿಗೂ ಚಾಕು ತೋರಿಸಿ ಹೆದರಿಸಿ ನನ್ನ ಕೊರಳಲ್ಲಿಯ ಬಂಗಾರದ 5 ಗ್ರಾಂ ಚೈನು ನನ್ನ ಗೆಳತಿ ಅಶ್ವಿನಿ ಕೊರಳಲ್ಲಿದ್ದ 5- ಗ್ರಾಂ ಬಂಗಾರದ ಚೈನು ಹಾಗೂ ನನ್ನ ಪರ್ಸನಲ್ಲಿದ್ದ 2500/- ರೂ ಹಾಗೂ ನನ್ನ ಕೈಬೆರಳಲ್ಲಿದ್ದ 5 ಗ್ರಾಂನ ಬೆಳ್ಳಿಯ ಉಂಗುರ ನನ್ನ ಗೆಳತಿ ಅಶ್ವಿನಿ ಕೈಬೆರಳಲ್ಲಿದ್ದ 5 ಗ್ರಾಂನ 2 ಬೆಳ್ಳಿಯ ಉಂಗುರ ಹಾಗೂ ನನ್ನ ಹತ್ತಿರವಿದ್ದ ನೋಕಿಯಾ ಎನ್-8 ಮತ್ತು ನನ್ನ ಗೆಳತಿಯ ಹತ್ತಿರವಿದ್ದ ಸಿ-5 ನೊಕಿಯಾ ಮೋಬೈಲಗಳನ್ನು ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 256/11 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :

ಶ್ರೀ ಸಂತೋಷಕುಮಾರ ತಂದೆ ಹಣಮಂತರಾವ ಇಂಗಿನಶೆಟ್ಟಿ ಸಾಃಶಹಾಬಾದ ತಾಃ ಚಿತ್ತಾಪೂರ ಜಿಃ ಗುಲಬರ್ಗಾ ರವರು ನಾನು, ನನ್ನ ಗೆಳೆಯನಾದ ಶರಣಬಸಪ್ಪಾ ಬಿರಾಳ ಇಬ್ಬರು ಕೂಡಿಕೊಂಡು ಮನ್ನಾಖೇಳ್ಳಿ ಗ್ರಾಮದಲ್ಲಿ ಪ್ಲಾಟ ಖರಿದಿ ಮಾಡುವದಕ್ಕೆ ನಮ್ಮ ಕಾರಿನಲ್ಲಿ ಹೊರಟಿದ್ದು. ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ.218 ನೇದ್ದರ ರೋಡಿನ ಕಮಲಾಪೂರ ಕೆ.ಇ.ಬಿ ಆಫಿಸ್ ಹತ್ತಿರ ಅಂದಾಜು 1-45 ಪಿಎಂಕ್ಕೆ ನಾನು ಮೂತ್ರ ವಿರ್ಸಜನೆ ಮಾಡಲು ನನ್ನ ಕಾರನ್ನು ನಿಲ್ಲಿಸಿ, ಮೂತ್ರ ವಿರ್ಸಜನೆ ಮಾಡಿ, ಮಾತನಾಡುತ್ತಾ ನಿಂತುಕೊಂಡಾಗ ಹುಮನಾಬಾದ ಕಡೆಯಿಂದ ಪೂಜಾ ಟ್ರಾವೇಲ್ಸ ಬಸ್ಸ ನಂ. ಕೆಎ:39-7209 ನೇದ್ದರ ಚಾಲಕ ನಾಗಣ್ಣಾ ಉಚ್ಚಾ ಸಾಃನಾವದಗಿ ತಾಃಭಾಲ್ಕಿ ಈತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಮೇಲೆ ಹೋಗುತ್ತಿರುವ ಎಮ್ಮೆ ಕರುವಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಎಡದಿಂದ ಬಲಕ್ಕೆ ಹೋಗಿ, ಗುಲಬರ್ಗಾ ಕಡೆಯಿಂದ ಬರುತ್ತಿರುವ ನನ್ನ ಮಾವನಾದ ಬಸವರಾಜ ಹಾಜಪ್ಪನವರ ಇವರು ಮಾರುತಿ ಸ್ವೀಪ್ಟ್ ಕಾರ ನಂ ಕೆಎ:32,ಎನ್:184 ನೇದ್ದು ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿ ಕಾರಿನ ಮೇಲೆ ಹರಿದು ರೋಡಿನ ಬಲಗಡೆ ತಗ್ಗಿನಲ್ಲಿ ಕೆಡುವಿ ಅಪಘಾತ ಪಡಿಸಿದನು. ಆಗ ನಾನು, ಮತ್ತು ಶರಣಬಸಪ್ಪಾ ಇಬ್ಬರು ಓಡಿ ಹೋಗಿ ಅಪಘಾತಕ್ಕಿಡಾದ ಕಾರನ್ನು ನೋಡಲಾಗಿ, ನನ್ನ ಮಾವನವರು ಮತ್ತು ಹಿಂದೆ ಕುಳಿತ ಅಶೋಕ ಜಾಧವ ಕಾರಿನಲ್ಲಿಯೇ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಮಾವ ಬಸವರಾಜ ಇವರ ಗೆಳೆಯನಾದ ವಿಜಯಕುಮಾರ@ಬಾಬುರಾವ ಸೇರಿ ಈತನ ಬಲಗಾಲು ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ. ಬಲಕೈತೋಳಿಗೆ, ಬಲಕಣ್ಣಿಗೆ ಭಾರಿ ರಕ್ತಗಾಯವಾಗಿರುತ್ತದೆ. ಇವರು ಮಾತನಾಡುವ ಸ್ಥೀತಿಯಲ್ಲಿರಲ್ಲಿಲ್ಲಾ. ಇವರಿಗೆ ಉಪಚಾರ ಕುರಿತು 108 ಅಂಬುಲೇನ್ಸಗೆ ಫೋನ ಮಾಡಿ ಕರೆಯಿಸಿ, ಗುಲಬರ್ಗಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ ಅಪಘಾತ ಪಡಿಸಿದ ಬಸ್ಸಿನ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ. ಎಮ್ಮೆ ಕರು ಕೂಡಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 140/2011 ಕಲಂ. 279, 337, 338, 429, 304(ಎ) ಐಪಿಸಿ ಸಂ. 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ :
ಪಿರ್ಯಾದಿ ಶ್ರೀ. ಶಾಂತಪ್ಪ ತಂದೆ ಬೋಜಪ್ಪ ಜಮಾದಾರ ವಯ;35 ವರ್ಷ ಜಾತಿ: ಕಬ್ಬಲಿಗ್ ಉ; ಕೂಲಿ ಕೇಲಸ್ ಸಾ: ಮಾದನ ಹಿಪ್ಪರಗಾ ನಾನು ಮತ್ತು ನಮ್ಮೂರ ಬಸವರಾಜ ಶಾಸ್ತ್ರಿ ಇಬ್ಬರೂ ಕೂಡಿಕೊಂಡು ಆಳಂದಕ್ಕೆ ಹೋಗಲು ನಮ್ಮೂರ ಶಿವಲಿಂಗಪ್ಪ ರವರ ಮನೆಯ ಮುಂದಿನ ರಸ್ತೆಯಲ್ಲಿ ನಿಂತಾಗ ನಮ್ಮೂರ ಗುರಪಾದಪ್ಪ , ಬಸವಣ್ಣಪ್ಪ, ಖಂಡಪ್ಪ, ವಿಠ್ಠಲ, ಶರಣಪ್ಪ , ಬಸವರಾಜ , ಸಾತಪ್ಪ , ಶಿವಾನಂದ ಎಲ್ಲರೂ ಬಕರೆ ಸಾ: ಎಲ್ಲರೂ ಮಾದನ ಹಿಪ್ಪರಗಾ ಹಾಗೂ ಇನ್ನೂ 2-3 ಜನರು ಹೆಸರು ವಿಳಾಸ ಗೊತ್ತಿಲ್ಲಾ ನೋಡಿದರೆ ಗುರುತಿಸುತ್ತೆನೆ ಎಲ್ಲರೂ ಕುಡಿಕೊಂಡು ಕೈಯಲ್ಲಿ ಬಡಿಗೆ ಕಲ್ಲು ಹಿಡಿದುಕೊಂಡು ನಾವನಿದ್ದಲಿಗ್ಗೆ ಬಂದವರೆ ಅವಾಚ್ಯೆ ಶಬ್ದಗಳಿಂದ ಬೈಯುತ್ತಿತ್ತಾ ಗುರಪಾದಪ್ಪನು ಮತ್ತು ಇತರರು ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2011 ಕಲಂ 143,147,323,324,504,506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಅಪಘಾತ ಪ್ರರಕಣ:


ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸುರೇಶ ತಂದೆ ಮಾರುತಿ ಖಾಡೆ ವ: 60 ವರ್ಷ ಉ:ಚಾಲಕ ಸಾ: ಆನಂದವಾಡಿ ತಾ: ಜಾಮಖೇಡ ಜಿ; ಅಹ್ಮದನಗರ ಮಹಾರಾಷ್ಟ್ರ ರಾಜ್ಯ ಹಾ: ವ: ರಹೇಮತನಗರ ಗುಲಬರ್ಗಾ ರವರು ದಿನಾಂಕ: 10/11/2011 ರಂದು ಮುಂಜಾನೆ ಸುಮಾರಿಗೆ ಓಮೀನಿ ನಂ ಕೆಎ 32 ಎಮ್‌‌ 8159 ನೇದ್ದರ ವಾಹನದಲ್ಲಿ ಕುಳಿತುಕೊಂಡು ರಾಮಮಂದಿರ ಕಡೆಗೆ ಉದನೂರ ಕ್ರಾಸದಲ್ಲಿ ಹೋಗುತ್ತಿದ್ದಾಗ ಎದರುಗಡೆಯಿಂದ ಬಂದ ಟ್ರ್ಯಾಕ್ಟ್ರ ಚಾಲಕನ ಉದನೂರ ಕ್ರಾಸದಲ್ಲಿ ಯಾವುದೇ ಸಿಗ್ನಲ್‌ ತೋರಿಸಿದ ಅತಿವೇಗ & ಅಲಕ್ಷನತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 331/2011 ಕಲಂ 279,337, ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರರಕಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.