POLICE BHAVAN KALABURAGI

POLICE BHAVAN KALABURAGI

18 March 2013

GULBARGA DISTRICT REPORTED CRIME


ಜೂಜಾಟ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ಮಹಾಗಾಂವ ಠಾಣೆಯ ವ್ಯಾಪ್ತಿಯ ನಾಗೂರು ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಶ್ರೀ,ಎಸ್.ಎಸ ಹುಲ್ಲೂರು ಪೊಲೀಸ್ ಇನ್ಸಪೇಕ್ಟರ ಡಿ.ಸಿ.ಐ.ಬಿ ಘಟಕದ ಗುಲಬರ್ಗಾರವರು ಹಾಗೂ ಪಿ.ಎಸ್.ಐ ರವರಾದ ಮಹಾಂತೇಶ ಪಿ.ಎಸ್.ಐ ಡಿಸಿಆರ್.ಬಿ ಘಟಕ ಹಾಗೂ ಸಿಬ್ಬಂದಿಯವರಾದ ದತ್ತಾತ್ರೇಯ ಎ.ಎಸ್.ಐ, ಅಣ್ಣಾರಾವ ಅಣ್ಣಪ್ಪಬೆಳ್ಳಿ, ಶಿವಯೋಗಿ, ಪ್ರಕಾಶ, ವಿಜಯಕುಮಾರ, ಮಲ್ಲಣ್ಣ, ಸುರೇಶ,ಬಸವರಾಜ ಹೆಚ್.ಸಿ.ಗಳು ಹಾಗೂ ವೀರಣ್ಣ ಜೀಪ ಚಾಲಕ ಚಂದ್ರಕಾಂತ ಜೀಪ ಚಾಲಕ, ಹಾಗೂ ಮಹಾಗಾಂವ ಠಾಣೆಯ ಸಿಬ್ಬಂದಿಯವರಾದ ಯಶ್ವಂತ, ಖಂಡೇರಾವ ಪಿಸಿರವರು ದಿನಾಂಕ:17/03/2013 ರಂದು ಸಾಯಂಕಾಲ 4-20 ಗಂಟೆ ಸುಮಾರಿಗೆ  ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ರವಿ ತಂದೆ ದೇವಿಂದ್ರಪ್ಪ ಅಡವಿಕರ, ಶಂಕರ ತಂದೆ ಅಗ್ನು ಮೀನಗಾರ, ಮಹಾದೇವಪ್ಪ ತಂದೆ ಚನ್ನಪ್ಪ ಮಾಂಗ, ಹಮೀದ ತಂದೆ ಮಸ್ತಾನಸಾಬ ಮೋಮಿನ,ಬೀಮಶ್ಯಾ ತಂದೆ ನಾಗಪ್ಪ ಬೋವಿ, ದೇವಾ ತಂದೆ ಲಕ್ಷ್ಮಣ ಬಿರನವರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 4750-00 ರೂಪಾಯಿಗಳು ಹಾಗೂ ಇಸ್ಪೇಟ್ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:32/2013 ಕಲಂ: 87 ಕೆ.ಪಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಬಸವರಾಜ ತಂದೆ ಗುರಪ್ಪ ಮೂಲಗೆ ವಯಾ||50 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಉದನೂರರವರು ನಾನು ಮತ್ತು ನನ್ನ ಮಕ್ಕಳಾದ ಶರಣು, ಮಲ್ಲಿಕಾರ್ಜುನ,ಅಂಬಾರಾಯ ನಮ್ಮ ತೋಟದ ಮನೆಯ ಪಕ್ಕದಲ್ಲಿರುವ ನಮ್ಮ ಸೋದರ ಸಂಬಂಧಿಗಳಾದ ಶರಣಬಸಪ್ಪಾ,ಚಂದ್ರಶ್ಯಾ ರವರೆಲ್ಲರೂ ದಿನಾಂಕ:17/03/2013 ರಂದು ಸಾಯಾಂಕಾಲ 5:40 ಗಂಟೆ ಸುಮಾರಿಗೆ ಮನೆಯ ಹತ್ತಿರವಿರುವಾಗ ನಮ್ಮ ಗ್ರಾಮದಿಂದ ತಾಂಡಾ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಒಂದು ಆಟೋ ರಿಕ್ಷಾ ನಿಂತಿದ್ದು ಜಗಳವಾಡುವ ಮತ್ತು ಬಾಯಿ ಬಡಿಯುವ ಸಪ್ಪಳ ಕೇಳಿ ನಾವು ಅಲ್ಲಿಗೆ ಹೋಗಿ ನೋಡಲು ನಮ್ಮ ಅಣ್ಣನ ಮಗನಾದ ಸುರೇಶ ತಂದೆ ಜನಕರಾಜ ವಯಾ|| 30,ಇತನಿಗೆ ಅಮೀತ ತಂದೆ ವಿಜಯಕುಮಾರ,ಜೈಬೀಮ ತಂದೆ ಶಿವಲಿಂಗಪ್ಪಾ,ಶಿವಾ ಬಾದನಳ್ಳಿ, ಸುರೇಶ ತಂದೆ ಗುರಪ್ಪಾ ದೊಡ್ಡಮನಿ,ಪವನ ತಂದೆ ಶಿವಲಿಂಗಪ್ಪಾ,ಪಂಡಿತ ಬಾದನಳ್ಳಿ,ಶಿವಾ ತಂದೆ ಬಾಬು ಮಿಲಟರಿ,ಶ್ರೀಕಾಂತ ತಂದೆ ಲಕ್ಷ್ಮಣ,ಅಮಿತನ ಜೊತೆ ಇರುವ ಪ್ರಕಾಶ,ಗುರಪ್ಪಾ ದೊಡ್ಡಮನಿ ಇವರ ಮೊಮ್ಮಗ ಅಲ್ಲದೇ ಇನ್ನಿತರರು ಕೂಡಿ ಹರಿತವಾದ ಆಯುದಗಳನ್ನು ಹಿಡಿದುಕೊಂಡು ಸುರೇಶನಿಗೆ ಅವಾಚ್ಯವಾಗಿ ಬೈಯುತ್ತಾ ಈ ಹಿಂದೆ ನಮ್ಮ ತಂದೆಗೆ ಕೊಲೆ ಮಾಡಿ ಪೊಲೀಸ ಕೇಸಿನಲ್ಲಿ ಉಳಿದುಕೊಂಡಿರುತ್ತಿ ಈಗ ನಿನಗೆ ಬೀಡುವುದಿಲ್ಲಾ ಅಂತಾ ಮಚ್ಚು ಮತ್ತು ತಲವಾರಗಳಿಂದ  ಹೊಡೆಯುತ್ತಿದ್ದರು . ನಾವು ಹತ್ತಿರ ಹೋಗುತ್ತಿದ್ದಂತೆ ಸುರೇಶನಿಗೆ ಅಲ್ಲಿಯೇ ಬಿಟ್ಟು ಓಡಿ ಹೋದರು ನಮ್ಮ ಅಣ್ಣನ ಮಗ ಸುರೇಶ ಇತನು ಕೆಳಗೆ ಬಿದ್ದು ಒದ್ದಾಡುತ್ತಿದ್ದನು. ನೋಡಲು ಬಲ ಕಿವಿಗೆ,ಬಲಗಡೆ ಕಿವಿಯ ಕೆಳಗಡೆ ಕುತ್ತಿಗಿಗೆ,ಎಡ ಕಿವಿಗೆ,ಎಡ ಕಿವಿಯ ಕುತ್ತಿಗಿಗೆ,ತಲೆಯ ಹಿಂಬಾಗಕ್ಕೆ ಅಲ್ಲದೇ ಎಡಬಾಗ ಬೆನ್ನಿಗೆ, ಎಡಗಡೆ ಭುಜದ ಮೇಲೆ ಹರಿತವಾದ ಆಯುದದಿಂದ ಹೊಡೆದ ಭಾರಿ ಮಾರಾಣಾಂತಿಕ ರಕ್ತಗಾಯಗಳಾಗಿ ಬಿಕ್ಕುತ್ತಿದ್ದ ಅದನ್ನು ನೋಡಿ ನಾನು 108 ಅಂಬುನೆಸ್ಸಗೆ ಪೋನ ಮಾಡಲು ಅಂಬುಲೆನ್ಸ ಬರುವಷ್ಟರಲ್ಲಿ ಸುರೇಶನು ಮೃತಪಟ್ಟಿನು. ನಮ್ಮ ಅಣ್ಣನ ಮಗನಾದ ಸುರೇಶ ಇತನ ಕೊಲೆಗೆ ಕಾರಣರಾದ ಈ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:141/2013 ಕಲಂ 143 147 148 341 504 506 302 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಅಪಘಾತ ಪ್ರಕರಣ:
ಶಹಾಬಾದ ನಗರ ಠಾಣೆ:ಶ್ರೀ ಉಮಾಕಾಂತ ತಂದೆ ಗುರುಶಾಂತಪ್ಪಾ ಪಾಟೀಲ ವ:59 ಜಾ:ಲಿಂಗಾಯತ ಉ:ಕ್ಲರ್ಕ್ ಸಾ:ವಿಶ್ವರಾಧ್ಯ ಕಾಲೋನಿ ಆಳಂದ ರೋಡ ಗುಲಬರ್ಗಾ ರವರು ನಮ್ಮ ಸಂಬಂಧಿಕರಾದ ಮಲ್ಲಿಕಾರ್ಜನ ತಂದೆ ಬಸಣ್ಣಾ ಮತ್ತು ಶಿವಕುಮಾರ ತಂದೆ ಮಲ್ಕಾಜಪ್ಪಾ ಚೆಂಗಡಿ ಇವರು ಮೋಟಾರ ಸೈಕಲ್  ನಂ ಕೆಎ-32 ಎಸ್-5672 ನೇದ್ದರ ಮೇಲೆ ದಿನಾಂಕ 17/3/13 ರಂದು ಬೆಳಗ್ಗೆ 8-00 ಗಂಟೆ ಸುಮಾರಿಗೆ ಗುಲಬರ್ಗಾದಿಂದ ಶಹಾಬಾದಕ್ಕೆ ಪರ್ಶಿ ತರಲು ಹೋಗಿ ಮರಳಿ ಮಧ್ಯಾಹ್ನ ಗುಲಬರ್ಗಾಕ್ಕೆ ಬರುತ್ತಿರುವಾಗ ಭಂಕೂರ ವಾಡಾದ ಹತ್ತಿರ ಎದುರಗಡೆಯಿಂದ ಬರುತ್ತಿರುವ ಟಾಟಾ ಎ.ಸಿ.ಇ ಮ್ಯಾಜಿಕ ವಾಹನ ನಂ ಕೆಎ- 32 ಬಿ-2781 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಗಡೆ ಬರುತ್ತಿರುವ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ್ ಮತ್ತು ಮೋಟಾರ ಸೈಕಲ್ ಸವಾರರ ಸಮೇತ ರೋಡಿನ ಬಲಗಡೆ ಬ್ರೀಡ್ಜಗೆ ಎಳೆದುಕೊಂಡು ಹೋಗಿ ಡಿಕ್ಕಿ ಹೊಡೆದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಟಾಟಾ ಎ.ಸಿ.ಇ ವಾಹನದಲ್ಲಿ ಕುಳಿತ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿ ರಕ್ತಗಾಯಗಳಾಗಿರುತ್ತವೆ, ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಉಮಕಾಂತ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2013 ಕಲಂ, 279,337,338,304(ಎ) ಐಪಿಸಿ ಸಂ;187 ಐಎಮ್‌ವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.