POLICE BHAVAN KALABURAGI

POLICE BHAVAN KALABURAGI

15 October 2017

KALBURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-10-2017 ಮಾಶಾಳ ಸಿಮಾಂತರ ಶಿವೂರ ಕ್ರಾಸ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೇಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಜೆ.ಎಚ್. ಇನಾಮದಾರ ಸಿ.ಪಿ.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಸಿಮಾಂತರ ಶಿವೂರ ಕ್ರಾಸ್ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಶಿವೂರ ಕ್ರಾಸ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 8 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿನಾಥ ತಂದೆ ಹಣಮಂತ ರೋಡಗಿ ಸಾ||ಹೈದ್ರಾ 2) ಪಾಂಡುರಂಗ ತಂದೆ ಸಿದ್ದಪ್ಪ ಕರಂಡೆ ಸಾ||ಉಪ್ಪಾರ 3) ಕಲ್ಯಾಣಸಿಂಗ್ ತಂದೆ ಭೀಮಸಿಂಗ್ ರಜಪೂತ 4) ಸೂರಜ್ ತಂದೆ ರಾವುಸಾಬ ಕರಂಡೆ ಸಾ||ಉಪ್ಪಾರ ಹಟ್ಟಿ 5) ರವಿ ತಂದೆ ಶಾಮರಾವ ಕರಂಡೆ ಸಾ||ಉಪ್ಪಾರ ಹಟ್ಟಿ 6) ಹಣಮಂತ ತಂದೆ ಸೀತಾರಾಮ ಕರಂಡೆ 7) ಮಹಿಬೂಬ ತಂದೆ ಅಲಾದಿನ್ ಶೇಖ್ ಸಾ||ಹೈದ್ರಾ. 8) ಅಹಮ್ಮದ್ ತಂದೆ ಮಹಿಬೂಬ ಚೌದ್ರಿ ಸಾ||ಕರಜಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  19,960/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅನೀಲಕುಮಾರ ತಂದೆ ಕಿಶನ್ ವಚ್ಹಾಣ ಶಾಖಾಧಿಕಾರಿ ಜೆಸ್ಕಾಂ ಇಲಾಖೆ ಶಹಾಬಾದ ಇವರು ದಿನಾಂಕ:14.10.2017 ರಂದು 3.00 ಪಿಎಂಕ್ಕೆ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ನಾಗರಾಜ, ರುಕ್ಮಯ್ಯಾ, ರವಿ ಹಾಗೂ ಇತರರೊಂದಿಗೆ ಶಹಾಬಾದದ ಗಾಂಧಿಚೌಕ್ ದಲ್ಲಿ ಬಾಕಿ ಇರುವ ವಿಧ್ಯೂತ್ ಸ್ತಾವರಗಳನ್ನು ಕಡಿತಗೊಳಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಬ್ಬಾಸ ಅಲಿ ಜವಾರಿ ಆತನ ಮಕ್ಕಳಾದ ಸಾಬೀರ್ ಹಾಗೂ ಇನ್ನೊಬ್ಬ ಕೂಡಿ ಬಂದು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ "ನಮ್ಮ ಅಂಗಡಿಯ ಕರೆಂಟ್ ಕ್ಯೂವ್ ನಿಕಾಲೆ ಸೀದಾ ಚಾಲು ಕರ್‌ ನಹಿತೋ ದೇಕ್ ಮಾಕೆ ಲೌಡೆ ಎಂದು ಬೈಯ್ಯುತ್ತಿದ್ದಾಗ ಅವರಿಗೆ ನಾನು ಯಾಕೇ ಬೈಯ್ಯುತ್ತಿರಿ ಮೊದಲಿಗೆ ಬಿಲ್ಲು ಕಟ್ಟಿ ಎಂದು ಹೇಳಿದಕ್ಕೆ ತೂ ಕ್ಯಾ ತೇರಿ ಸ್ಯಾಲರಿ ಮೇಸೆ ದೇತಾ ಆಗೆ ಭರೂಂಗಾ ಮೇರಿ ಮರ್ಜಿ ಬೇ" ಬೈಯ್ಯುತ್ತಿದ್ದಾಗ ಅವನ ಮಗ ಬಂದು "ಅಬೇ ತೂ ಕ್ಯಾ ಕರ್ತೆ ತೆರೇ ಮಾಕಾ ತೆರೆ ಜೂರು ಕೀ ಚೂತ್ ಮೇ ಸೇ ಲಾಕೆ ಭರೂಂ ಕ್ಯಾ" ಎಂದು ಅವಾಚ್ಚ ಶಬ್ದಗಳಿಂದ ಬೈದು ಅಬೇ ತೂ ಕ್ಯಾ ಲಂಬಾಣ್ಯಾಕಾ ತೂ ಕ್ಯಾ ಕರ್ತಾ ಬೇ ಜಾ" ಎಂದು ಜಾತಿ ನಿಂದನೆ ಮಾಡಿ ಸಾರ್ವಜನಿಕರ ಮುಂದೆ ನನಗೆ ಅವಮಾನ ಮಾಡುತ್ತಿರುವಾಗ ಸಂಗಡ ಇದ್ದ ಸಿಬ್ಬಂದಿ ಜನರು ಜಗಳ ಬಿಡಿಸಿದರು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಚವಾಗಿ ಬೈದು ಜಾತಿನಿಂದನೇ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ