POLICE BHAVAN KALABURAGI

POLICE BHAVAN KALABURAGI

25 April 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಅಮೃತ ತಂದೆ ಶ್ರೀಮಂತ ಕಂಬಾರ ಸಾ|| ಜಿಡಗಾ ಇವರು ದಿನಾಂಕ 22/04/2015 ರಂದು ನೀಲೂರದಿಂದ ಮೋಟಾರ ಸೈಕಲ ನಂ. ಕೆ.ಎ 32, ಎಕ್ಸ 2624 ನೇದ್ದರ ಮೇಲೆ ದುತ್ತರಗಾಂವ ಗ್ರಾಮಕ್ಕೆ ನಾನು ಹಾಗೂ ಈರಣ್ಣಾ ತಂದೆ ದೇವೆಂದ್ರಪ್ಪಾ ಕಂಬಾರ ಸಾ|| ನೀಲೂರ ಮತ್ತು ಆತನ ಗೆಳೆಯನಾದ ಸೈಬಣ್ಣ ಹಾಳೋಳ್ಳಿ ಸಾ|| ನೀಲೂರ ಎಲ್ಲರೂ ಸೇರಿ ಈರಣ್ಣಾ ತಂದೆ ದೇವೆಂದ್ರಪ್ಪಾ ಕಂಬಾರ ಇತನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಹೊರಟಿದ್ದು ಮಧ್ಯಾಹ್ನ ದುತ್ತರಗಾಂವ ಗ್ರಾಮ 01 ಕೀ.ಮಿ ದೂರ ಇರುವಾಗ ಎದುರುಗಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32, ಇಇ 7639 ನೇದ್ದರ ಸವಾರನಾದ ರಮೇಶ ತಂದೆ ಶಿವಲಿಂಗಪ್ಪ ಮಲಶೇಟ್ಟಿ ಸಾ|| ಧುತ್ತರಗಾಂವ ಇತನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಎರಡು ಮೋಟಾರ ಸೈಕಲ ಸವಾರರು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಡಿಕ್ಕಿಪಡಿಸಿ ಅಪಘಾತಪಡಿಸಿ ಡಾಂಬರ ರಸ್ತೆಯ ಮೇಲೆ ಬಿದ್ದು ನಮಗೆಲ್ಲರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಸುಮಾರು 10-15 ದಿವಸಗಳ ಹಿಂದೆ ಒಬ್ಬ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಪುರುಷನು ಎಲ್ಲಿಂದಲೊ ಜೇವರಗಿ ಪಟ್ಟಣದ ಎಪಿ.ಎಮ್‌.ಸಿ ಗೆ ಬಂದು ಬಿಕ್ಷೆ ಬೇಡುತ್ತ ತಿರುಗಾಡಿ ಯಾವುದೋ ಒಂದು ರೋಗದಿಂದ ಬಳಲಿ ಅಶಕ್ತನಾಗಿ ಹಾಗು ಬೇಸಿಗೆ ಬಿಸಿಲಿನ ತಾಪದಿಂದ ಬಳಲಿ ದಿನಾಂಕ 22.04.2015 ರಂದು ರಾತ್ರಿ ವೇಳೆಯಲ್ಲಿ ಜೇವರ್ಗಿ ಪಟ್ಟಣದ ಎ.ಪಿ.ಎಮ್.ಸಿ ಯಾರ್ಡನ ತರಕಾರಿ ಮಾರುಕಟ್ಟೆ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಈರಣ್ಣ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಬಿರಾದಾರ್ ಸಾ|| ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಡಿವಾಳಪ್ಪ ತಂದೆ ಬಸಣ್ಣ ಮಡಿವಾಳ ಸಾ:ಕಲಕಂಬಾ ಗ್ರಾಮ ಹಾ.ವ:ದೊಡ್ಡ ಅಗಸಿ ಸೇಡಂ ಇವರು ದಿನಾಂಕ:22-04-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ  ನನ್ನ ಮಗನಾದ ನಂದಪ್ಪ ಇತನು ನಮ್ಮ ಮನೆಯ ಮುಂದೆ ಬಂದು ನಿಂತು ಬಾಯಿಗೆ ಬಂದಂತೆ ಬೈಯುತ್ತಾ ನನ್ನ ಸೊಸೆಯಾದ ಜಗದೇವಿ ಇವಳೊಂದಿಗೆ ಕಿರಿಕಿರಿ ಮಾಡುತ್ತಿದ್ದನು ಆಗ ನಾನು ನಂದಪ್ಪ ಇತನಿಗೆ ಸುಮ್ಮನೆ ಯಾಕೆ ಕಿರಿಕಿರಿ ಮಾಡುತ್ತಿ ಅಂತಾ ಕೇಳಲು ಹೋಗಿದ್ದಕ್ಕೆ ನನ್ನೊಂದಿಗೆ ಕುಸ್ತಿಗೆ ಬಿದ್ದು ಸೂಳೆ ಮಗನೆ ನನ್ನ ಹೆಂಡತಿಗೆ ನಾನು ಹೊಡಿತಿನಿ ಅದು ನೀಏನ್ ಕೇಳತೀ ರಂಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಕೈಯಿಂದ ಬಲಗೈ ಮುಂಡಿಗೆ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಗೋಡೆಗೆ ನನ್ನ ಬಲಗೈ ತಾಕಿದ್ದರಿಂದ ಬಲಗೈ ಮೊಳಕೈಗೆ ತರಚಿದ ಗಾಯ ಪಡಿಸಿದ್ದು  ಅಲ್ಲದೆ  ನಂದಪ್ಪ ಈತನು ನನಗೆ ಯಾಕೋ ನಿಂದು ಬಹಾಳೇ ಆಗ್ಯಾದ ನಿನಗೆ ಕೊಂದೆ ಬಿಡ್ತಿನಲೇ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕೊರಳಲ್ಲಿಯ ಎರಡು ಎಳೆಯ ಕರಿ ಬಣ್ಣದ ದಾರದ ಕಾಶಿದಾರ ಎಳೆದು ಒತ್ತಿ ಹಿಡಿದು ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ:
ಅಫಜಲಪೂರ ಠಾಣೆ: ಶ್ರೀ ಬಸವರಾಜ ತಂದೆ ಕಲ್ಲಪ್ಪ ಕಂಬಾರ ಸಾ: ಅಳ್ಳಗಿ (ಬಿ) ಇವರು  ತಮ್ಮ ಹಿರೋ ಸ್ಪೇಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಬಿ-8791 ಅಂತಾ ಇದ್ದು, ಚೆಸ್ಸಿ ನಂಬರ:- MBLHA10AMC9G04361 ಇಂಜೆನ ನಂಬರ:- HA10EJC9G13124 ಅಂತಾ ಇದ್ದು, ಅಂದಾಜು 25,000/- ರೂ ಕಿಮ್ಮತ್ತಿನದನ್ನು ದಿನಾಂಕ 09-04-2015 ಮದ್ಯಾಹ್ನ 2:30 ಪಿ ಎಮ್ ಕ್ಕೆ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ನಿಲ್ಲಿಸಿ ಒಳಗೆ ಜಾತಿ ಗಣತಿಯ ಬಗ್ಗೆ ಮಾಹಿತಿ ಕೇಳಲು ಹೋಗಿ ಜಾತಿ ಗಣತಿಯ ಮಾಹಿತಿಯನ್ನು ಪಡೆದುಕೊಂಡು ನಂತರ 3:00 ಪಿ ಎಮ್ ಕ್ಕೆ ತಹಸಿಲ ಕಾರ್ಯಾಲಯದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.