POLICE BHAVAN KALABURAGI

POLICE BHAVAN KALABURAGI

04 October 2013

ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಭೋಜು ಪವಾರ ಸಾಃ ನೇಳಕೂಡ ತಾಂಡಾ ಇವರು, ನಾನು, ಮತ್ತು ನಮ್ಮ ತಾಂಡಾದ 1. ದಿನೇಶ ತಂದೆ ಪೋಮು ಪವಾರ 2. ರಮೇಶ ತಂದೆ ಫೊಮು ಪವಾರ 3. ಕವಿತಾ ತಂದೆ ಫೊಮು ಪವಾರ ಎಲ್ಲರೂ ಕೂಲಿಕೆಲಸಕ್ಕೆ ಬಾಂಬೆಗೆ ಹೋಗಿ ಕೆಲಸ ಮಾಡುತ್ತಿದ್ದು. ಕೆಲಸ ಮಾಡಿದ ಹಣ ಕೊಡುವ ವಿಷಯದಲ್ಲಿ ಜಗಳವಾಗಿ, ವೈಮನಸ್ಸು ಬೆಳೆದಿರುತ್ತದೆ. ಹೀಗಿದ್ದು ಇಂದು ದಿನಾಂಕ: 03/10/2013 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ, ನಮ್ಮ ತಾಂಡಾದ ಸೇವಲಾಲ ಗುಡಿಯ ಕಟ್ಟೆಯ ಮೇಲೆ ಕುಳಿತಿರುವಾಗ ದಿನೇಶ ಪವಾರ, ರಮೇಶ ಪವಾರ ಮತ್ತು ಕವಿತಾ ಪವಾರ ಬಂದವರೇ ಲೇ ಭೋಸಡಿ ಮಗನೇ ಮುಂಬೈಯಲ್ಲಿ ನಮ್ಮ ಸಂಗಡ ಜಗಳ ಮಾಡಿದ್ದಿ ಈಗ ಮಾಡೋ ಮಗನೇ ಅಂತಾ ಬೈಯುತ್ತಾ ಕೈಗಳಿಂದ ಹೊಡೆಯ ತೊಡಗಿದರು. ದಿನೇಶನು ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಬಲಭಾಗದಲ್ಲಿ, ಎಡ ಕಾಲಿನ ಕಿರು ಬೆರಳು ಹತ್ತಿರ ಹೊಡೆದು ರಕ್ತಗಾಯಗೊಳಿಸಿದನು. ಅಲ್ಲದೇ ಮುಂದೆನಾದರೂ ನನ್ನ ತಂಗಿಗೆ ಕೆಣಕಿ ಅವಮಾನ ಮಾಡಿದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀಮತಿ.  ನಿಂಗಮ್ಮ ಗಂಡ ಶಿವಪುತ್ರಪ್ಪಾ ವಳದೊಡ್ಡಿ ಸಾ; ಅಂತಪನಾಳ ಮತ್ತು ಗಂಡ. ಮಗ. ಮಗಳು ಕೊಡಿಕೊಂಡು ಸುರೇಶ ಪಾಟೀಲ್ ಇವರ ಮನೆಗೆ ಹೋಗಿ ದನಗಳನು ಏಕೆ ಬಿಟ್ಟು ಬೆಳೆ ಹಾನಿ ಮಾಡಿದಿರಿ ಅಂತ ಹೇಳಿದಕ್ಕೆ ಮಹಾದೇವಿ ಗಂಡ ಸುರೇಶ ಪಾಟೀಲ ಸಂಗಡ 4 ಜನರು ಸಾಃ ಎಲ್ಲರೂ ಅಂತಪನಾಳ ಪಿಯಾದಿಗೆ ಮತ್ತು ಪಿರ್ಯಾದಿಯ ಗಂಡ ಮತ್ತು ಮಗ, ಮಗಳಿಗೆ ಅಡ್ಡಗಟ್ಟಿ ಅವಾಚ್ಯಾ ಶಭ್ದಗಳಿಂದ ಬೈದ್ದು, ಕೈಯಿಂದ ಮತ್ತು ಬಡಿಗಡಯಿಂದ ಹೋಡೆ ಬಡೆ ಮಾಡಿ ಗುಪ್ತಗಾಯಗೂಳಿಸಿ, ಕೂದಲು ಹಿಡಿದು ಎಳೆದಾಡಿ ಅವಮಾನಗೂಳಿಸಿದು ಅಲ್ಲದೆ  ಜೀವದ ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂಗಮೇಶ ತಂದೆ ಸಿದ್ದಪ್ಪ ದಾಸಪಳ್ಳಿ ಸಾ: ಮನೆ ನಂ. 11-1814/1ಎ ವಿದ್ಯಾನಗರ ಗುಲಬರ್ಗಾ ಇವರು ದಿನಾಂಕ: 24/09/2013 ರಂದು 6:30 ರಿಂದ 6-40 ಪಿ.ಎಂ.ದ ಅವಧಿಯಲ್ಲಿ ತನ್ನ ದ್ಚಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ ಪ್ಲಸ್ ನಂ:ಕೆಎ-32 ಕ್ಯೂ- 9949 ಚೆಸ್ಸಿ ನಂ: 05ಎಫ್16ಸಿ32507 ಇಂಜಿನ ನಂ: 05ಎಫ್15ಎಮ್32545 ನೇದ್ದು ನನ್ನ ಸ್ವಂತ ಕೆಲಸಕ್ಕಾಗಿ ಗುಲಬರ್ಗಾದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಪ್ರೀನ್ಸ್ ಲಾಡ್ಜ ಮುಂದುಗಡೆ ನಿಲ್ಲಿಸಿ ಎ.ಟಿ.ಎಮ್.ನಲ್ಲಿ ಹೋಗಿ ಹಣವನ್ನು ತೆಗೆದುಕೊಂಡು ಬರುವಷ್ಠರಲ್ಲಿ ನನ್ನ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಂತರ ಎಲ್ಲಾಕಡೆ ಹುಡುಕಾಡಿ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಎಲ್ಲಿಯು ನನ್ನ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಹಿರೊ ಹೊಂಡ ಸ್ಪ್ಲೆಂಡರ ಪ್ಲಸ್ ನಂ : ಕೆಎ-32 ಕ್ಯೂ -9949 ನೇದ್ದು ಅ.ಕಿ. 25000=00 ರೂ ಬೆಲೆಬಾಳುವ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.