POLICE BHAVAN KALABURAGI

POLICE BHAVAN KALABURAGI

31 October 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-10-2015 ರಂದು ಮಲ್ಲಾಬಾದ ಸೀಮಾಂತರದಲ್ಲಿರುವ ಸಂತೋಷ ರಂಗದಾಳೆ ರವರ  ಹೊಲದ ಹತ್ತಿರ ಕ್ಯಾನಲ್  ರೋಡಿನ ಬಾಜು ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ   ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸುರೇಶ ಬೆಂಡೆಗುಂಬಳ ಪಿಎಸ್ ಐ  ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಲ್ಲಾಬಾದ ಸೀಮಾಂತರದಲ್ಲಿ ಬರುವ ಸಂತೋಷ ರಂಗದಾಳೆ ರವರ ಹೊಲದ ಹತ್ತಿರ ಕ್ಯಾನಲ್ ರೋಡಿನ ಬಾಜು ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಮೋಬೈಲ ಬ್ಯಾಟರಿ ಬೆಳಕಿನಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿ ಐದು ಜನರನ್ನು ಹಿಡಿದಿದ್ದು ಒಬ್ಬನು ಓಡಿ ಹೋಗಿರುತ್ತಾನೆ. ಸದರಿ ಹಿಡಿದವರು  ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿಜಯಕುಮಾರ ತಂದೆ ಹಣಮಂತ ಬಗಲಿ 2) ಶರಣಬಸಪ್ಪ ತಂದೆ ಚಂದ್ರಕಾಂತ ಗಾಡಿ 3) ಶಿವಾನಂದ ತಂದೆ ಮಲ್ಲೇಶಪ್ಪ ಬಬಲೇಶ್ವರ 4) ಉಮಾಕಾಂತ ತಂದೆ ನಾಮದೇವ ಸೂರ್ಯವಂಶಿ 5) ಹಣಮಂತ ತಂದೆ ಬೆಳ್ಳೆಪ್ಪ ಪೂಜಾರಿ ಸಾ|| ಎಲ್ಲರು ಮಾತೋಳಿ ಅಂತಾ ತಿಳಿಸಿದ್ದು, ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 6) ಏಕನಾಥ ತಂದೆ ಬಾಬು ಆಲಮೇಲ ಸಾ|| ಮಾತೋಳಿ ಅಂತ  ತಿಳಿಸಿರುತ್ತಾರೆ. ಸದರಿ 6 ಜನರ  ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ ನಗದು ಹಣ ಒಟ್ಟು 3640/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 30.10.2015 ರಂದು ಜೇವರಗಿ ಪಟ್ಟಣದ ಜ್ಯೋತಿ ಹೋಟೆಲ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದು ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ. ಲಕ್ಷ್ಮಣ ಬಿರಾದಾರ ಎ.ಎಸ್.ಐ ಜೇವರಗಿ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮೂರುಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರ ವಿಚಾರಿಸಲು 1] ಸಂತೋಷ ತಂದೆ ಸಿದ್ದಣ್ಣ ಭಾವಿ ಸಾ|| ಲಕ್ಕಪ್ಪ ಲೇಔಟ್ ಜೇವರಗಿ   2] ಪ್ರಕಾಶ ತಂದೆ ಗಂಗಯ್ಯ ವಡ್ಡರ್ ಸಾ : ಜನತಾ ಕಾಲೋನಿ  ಜೇವರಗಿ   3] ಶಿವರಾಜ ತಂದೆ ಬಸವರಾಜ ಬಸವಪಟ್ಟಣ ಸಾ : ಶಾಂತನಗರ ಜೇರವಗಿ ಅಂತಾ ತಿಳಿಸಿದ್ದು ಅವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  1.555/- ರೂ 3 ಬಾಲ್‌ ಪೆನ್ ಮತ್ತು ಮೂರು ಮಟಕಾ ಚೀಟಿ ಮತ್ತು ಒಂದು ನೋಕಿಯಾ ಮೋಬಾಯಿಲ್ ಅಂ.ಕಿ 300/- ರೂ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 30.10.2015 ರಂದು ಜೇವರಗಿ ಪಟ್ಟಣದ ರಿಲಾಯನ್ಸ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದು ಬಗ್ಗೆ  ಖಚಿತ ಬಾತ್ಮಿ ಮೇರೆಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಮೂರುಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರ ಹೆಸರು ವಿಚಾರಿಸಲು  1] ಶಿವಪುತ್ರ ತಂದೆ ಮಲ್ಕಪ್ಪ ನಲ್ಲೂಕರ್  ಸಾಃ ಬಸವೇಶ್ವರ ನಗರ ಜೇವರಗಿ   2] ಧರ್ಮರಾಜ ತಂದೆ ಸಿದ್ರಾಮಪ್ಪ ಚಿನ್ನಮಳ್ಳಿ  ಸಾ: ವಿದ್ಯಾನಗರ  ಜೇವರಗಿ   3] ಮಲ್ಲೇಶಪ್ಪ ತಂದೆ ಬಸಣ್ಣಾ  ಬಸವಪಟ್ಟಣ ಸಾಃ ಶಾಂತನಗರ ಜೇರವಗಿ ಅಂತಾ ತಿಳಿಸಿದ್ದು ಸದರಿಯವರ ವಶದಿಂದ ಜೂಜಾಟಕ್ಕೆ ಬಳಸಿದ ನಗದು ಹಣ  1.050/- ರೂ ಗಳು ನಗದು ಹಣ ಮತ್ತು 2 ಬಾಲ್‌ ಪೆನ್ ಮತ್ತು ಎರಡು ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಅನೀಲಕುಮಾರ @ ಕುಮಾರ ತಂದೆ ಸೂರ್ಯಕಾಂತ ಹವಾಣೆ ಸಾ|| ಭೂಸನೂರ ಇವರು ತನ್ನ ಹೊಲದಲ್ಲಿ ಕೊರಳ್ಳಿ ಗ್ರಾಮದ ನಿಜಲಿಂಗಪ್ಪ ತಂದೆ ಅಮೃತ ಗೊಬ್ಬೂರ ಇವನು ತನ್ನ ಬಿಟ್ಟಿದ್ದರಿಂದ ತಕರಾರು ಆಗಿತ್ತು, ಅದೇ ದ್ವೇಶದಿಂದ ದಿನಾಂಕ 30-102015 ರಂದು ಭೂಸನೂರ ಫ್ಯಾಕ್ಟರಿ ಹತ್ತಿರ ನಿಂತಾಗ 01] ಅಮೃತ ಗೊಬ್ಬೂರ, 02] ವಿಜಯಕುಮಾರ ಸಂಗೋಳಗಿ, 03] ಲಕ್ಕಪ್ಪ ದೇವ, 04] ಅಮೃತನ ಹಿರಿಯ ಮಗ ಸಾ|| ಎಲ್ಲರೂ ಕೊರಳ್ಳಿ. ಎಲ್ಲರು ಸೇರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ಗ್ರಾಮ ಪಮಚಾಯತಿಯ ಪಿ.ಡಿ.ಓ ರವರು ಗ್ರಾಮ ಸಬೆಯನ್ನು ಇಟ್ಟುಕೊಂಡಿದ್ದು, ಸದರಿ ಗ್ರಾಮ ಸಬೆಯನ್ನು ಗ್ರಾಮದ ಜನರಿಗೆ ತಿಳಿಸಿದೆ, ಡಂಗುರ ಬಾರಿಸದೆ ಏಕಾ ಏಕಿ ಗ್ರಾಮ ಸಭೆಯನ್ನು ಇಟ್ಟುಕೊಂಡಿರುತ್ತಾನೆ. ಸದರಿ ಗ್ರಾಮ ಸಭೆಯ ನಮ್ಮೂರಿನ ಹನುಮಂತ ದೆವರ ಗುಡಿಯ ಮುಂದೆ ಇಟ್ಟುಕೊಂಡ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಶರಣಪ್ಪ ತಂದೆ ರಾಮಚಂದ್ರ ಬಂಡಗಾರ, ಪರಮೇಶ್ವರ ತಂದೆ ರಾಮಚಂದ್ರ ಬಡಗಾರ, ನಮ್ಮ ತಂದೆ ಭೀಮಶಾ ತಂದೆ ಮಳಸಿದ್ದ ಕೋಕರೆ, ಹಾಗೂ ನಮ್ಮ ಕಾಕನ ಮಗಳು ಅನುಸುಬಾಯಿ ಗಂಡ ಶಿವಯೋಗೆಪ್ಪ ಬಂಡಗಾರ ಎಲ್ಲರೂ ಕೂಡಿ ಸದರಿ ಗ್ರಾಮ ಸಭೆಗೆ ಹೋಗಿರುತ್ತೇವೆ. ಸದರಿ ಗ್ರಾಮ ಸಭೆ ನಡೆದಿದ್ದಾಗ ನಾನು ಪಿ.ಡಿ.ಓ ರವರಿಗೆ ಗ್ರಾಮ ಪಂಚಾಯತಿಯ ಕಾರ್ಯಾಲಯವನ್ನು ಖಾಸಗಿ ಸ್ಥಳದಲ್ಲಿ ಇಡಬೇಡಿ ಕಟ್ಟಡ ಆಗುವವರೆಗೆ ಯಾವುದಾರರು ಸರ್ಕಾರಿ ಜಾಗದಲ್ಲಿ ಇರಲಿ, ಹಾಗೂ ನೀವು ಸದರಿ ಗ್ರಾಮ ಸಭೆಯನ್ನು ಗ್ರಾಮದ ಯಾವುದೆ ಜನರಿಗೆ ತಿಳಸದೆ ನಡೆಸುತ್ತಿದ್ದರಿ, ನೀವು ಸಭೆಯನ್ನು ನಡೆಸಬೇಕಾದರೆ ಜನರಿಗೆ ಮಾಹಿತಿ ತಿಳಿಸಿ ಡಂಗುರ ಸಾರಿ ಸಭೆ ಇಟ್ಟಿರುವ ಬಗ್ಗೆ ತಿಳಿಸಬೇಕಾಗಿತ್ತು ಅಂತಾ ಕೇಳುತ್ತಿದ್ದೇನು, ಆಗ ಸದರಿ ಸಭೆಗೆ ಬಂದಿದ್ದ 1) ವಿಷ್ಣು ತಂದೆ ಮಾಣಿಕ ಬಂಡಗಾರ 2) ಮಾಣಿಕ ತಂದೆ ಮಲ್ಲಪ್ಪ ಬಂಡಗಾರ 3) ಮಾಹಾದೇವ ತಂದೆ ಜೀವಣ್ಣ ರೂಪನೂರ 4) ಬಸನಿಂಗ ತಂದೆ ಪಂಡಿತ ಬಂಡಗಾರ 5) ಯಶವಂತ ತಂದೆ ಪಂಡಿತ ಬಂಡಗಾರ 6) ಗುರಪ್ಪ ತಂದೆ ಪಂಡಿತ ಬಂಡಗಾರ 7) ಕೃಷ್ಣಾ ತಂದೆ ಮಾಣಿಕ ಬಂಡಗಾರ 8) ದತ್ತು ತಂದೆ ಮಲ್ಲಪ್ಪ ಬಂಡಗಾರ 9) ಪಂಡಿತ ತಂದೆ ಮಾರುತಿ ಬಂಡಗಾರ 10) ನಿರ್ಮಲಾ ಗಂಡ ಬಸನಿಂಗ ಬಂಡಗಾರ ಸಾ|| ಎಲ್ಲರೂ ರಾಮನಗರ ಇವರುಗಳು ಎದ್ದು ನಿಂತು ಏನೊ ಸೂಳಿ ಮಗನೆ ಇದನ್ನೇಲ್ಲಾ ಕೇಳೊದಕ್ಕೆ ನೀನು ಯಾರು ಸುಮ್ಮನ್ನೆ ಗ್ರಾಮ ಸಭೆಗೆ ಬಂದಿದಿ ಸುಮ್ಮ ಕುಳಿತು ನೋಡಬೇಕು ಏನಾದ್ರು ಕೇಳಿದರೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಎಲ್ಲರೂ ನನಗೆ ಬೈಯುವುದು ಮಾಡುತ್ತಿದ್ದರು, ಆಗ ನನ್ನ ಜೋತೆಗೆ ಬಂದ ಶರಣಪ್ಪ ಬಂಡಗಾರ, ಪರಮೇಶ್ವರ ಬಂಡಗಾರ, ನಮ್ಮ ತಂದೆ ಭೀಮಶಾ ಬಂಡಗಾರ ಇವರುಗಳು ಸದರಿಯವರಿಗೆ ನಾವು ಗ್ರಾಮದವರು ಇದ್ದಿವಿ ಕೇಳಬೇಕಾಗುತ್ತದೆ ಅಂತಾ ಹೇಳುತ್ತಿದ್ದರು, ಆಗ ಏಕಾ ಏಕಿ ವಿಷ್ಣು ಬಂಡಗಾರ ಈತನು ತನ್ನ ಕೈಯಲ್ಲಿ ತಲವಾರ ಹಿಡಿದುಕೊಂಡು, ಉಳಿದವರು ಚಾಕು, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಕಡೆಗೆ ಬಂದು ನಮಗೆಲ್ಲರಿಗೂ ಬೈಯುತ್ತಾ ಸೂಳೆ ಮಕ್ಕಳೆ ನಿಮಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ, ಖಲಾಸ ಮಾಡುತ್ತೇವೆ ಅಂತಾ ಎಲ್ಲರೂ ಕೂಡಿ ನಮಗೆಲ್ಲರಿಗೂ ಹೊಡೆಯುತ್ತಿದ್ದರು. ವಿಷ್ಣು ಈತನು  ಪರಮೇಶ್ವರನಿಗೆ ಮಗನೆ ನಿನ್ನ ಸಾವು ಇವತ್ತು ನನ್ನ ಕೈಯಲ್ಲೆ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಅವನ ಮುಖದ ಮೇಲೆ ಹೊಡೆದನು. ಸದರಿಯವರೆಲ್ಲರು ನಮಗೆ ಸುತ್ತುಗಟ್ಟಿ ಕೊಲೆ ಮಾಡಬೆಕೆಂದು ನಮಗೆ ತಮ್ಮ ಕೈಯಲ್ಲಿದ್ದ ತಲವಾರದಿಂದ, ಬಡಿಗೆಗಳಿಂದ ಚಾಕುವಿನಿಂದ, ಕಲ್ಲಗಳಿಂದ ಹೊಡೆಯುವುದು ಕಾಲಿನಿಂದ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ಶ್ರೀ ಬಸವರಾಜ ತಂದೆ ಭೀಮಶಾ ಕೋಕರೆ ಸಾ|| ರಾಮನಗರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಭೆ ಇದ್ದ ಮೇರೆಗೆ ಸದರಿ ಸಭೆಗೆ ನಾನು ಸಹ ಹೋಗಿರುತ್ತೇನೆ. ಮದ್ಯಾಹ್ನ 12:30 ಗಂಟೆ ಸುಮಾರಿಗೆ ಸಭೆ ನಡೆದಿದ್ದಾಗ ನಮ್ಮೂರಿನ ಬಸವರಾಜ ತಂದೆ ಭೀಮಶಾ ಕೋಕರೆ ಈತನು ಸಭೆಯಲ್ಲಿ ಎದ್ದು ನಿಂತು ಸಭೆ ನಡೆಸುತ್ತಿದ್ದ ಪಿ.ಡಿ.ಓ ರವರಿಗೆ ನೀವು ಯಾರಿಗೂ ಕೇಳದೆ ಯಾಕೆ ಸಭೆ ಇಟ್ಟಿರಿ, ನಿಮ್ಮ ಮನಸ್ಸು ಬಂದ ಹಾಗೆ ಮಾಡುತ್ತಿರಾ ಅಂತಾ ಸಭೆಯಲ್ಲಿ ಒದರಾಡುತ್ತಿದ್ದನು. ಆಗ ನಾನು ಮತ್ತು ನನ್ನಂತೆ ಕೃಷ್ಣಾ ತಂದೆ ಮಾಣಿಕ ಬಂಡಗಾರ, ಯಶವಂತ ತಂದೆ ಪಂಡಿತ ಬಂಡಗಾರ, ಗುರುಲಿಂಗ ತಂದೆ ಪಂಡಿತ ಬಂಡಗಾರ, ಬಸನಿಂಗ ತಂದೆ ಪಂಡಿತ ಬಂಡಗಾರ ಎಲ್ಲರೂ ಬಸವರಾಜನಿಗೆ ಯಾಕ ಕೂಗಾಡಿ ಸಭೆ ಹಾಳ ಮಾಡ್ತಿ ಅಂತಾ ಕೇಳುತ್ತಿದ್ದೇವು, ಆಗ ಸದರಿ 1) ಬಸವರಾಜ ತಂದೆ ಭೀಮಶಾ ಕೋಕರೆ ಮತ್ತು ಸಭೆಗೆ ಬಂದಿದ್ದ 2) ಭೀಮಶಾ ತಂದೆ ಮಳಸಿದ್ದ ಕೋಕರೆ 3) ದತ್ತು ತಂದೆ ಭೀಮಶಾ ಕೋಕರೆ 4) ಮನೋಹರ ತಂದೆ ಮಹಿಪತಿ ಡೊಂಬಳೆ 5) ಶರಣಪ್ಪ ತಂದೆ ಮಾಳಪ್ಪ ಕೋಕರೆ 6) ಶರಣು ತಂದೆ ರಾಮು ಬಂಡಗಾರ 7) ಪರಮೇಶ್ವರ ತಂದೆ ರಾಮ ಬಂಡಗಾರ 8) ಶಿವಯೋಗೆಪ್ಪ ತಂದೆ ರಾಮ ಬಂಡಗಾರ 9) ಯಲ್ಲಾಲಿಂಗ ತಂದೆ ರಾಮ ಬಂಡಗಾರ 10) ಅನುಸುಬಾಯಿ ಗಂಡ ಶಿವಯೋಗೆಪ್ಪ ಬಂಡಗಾರ ಸಾ|| ಎಲ್ಲರೂ ರಾಮನಗರ ಇವರೆಲ್ಲರೂ ಏನ್ರೋ ಸೂಳೆ ಮಕ್ಕಳೆ ಊರಾಗ ದಬ್ಬಾಳಿಕೆ ಮಾಡ್ತಿರಿ ಅಂತಾ ಎಲ್ಲರೂ ತಮ್ಮ ತಮ್ಮ  ಕೈಯಲ್ಲಿ ಲಾಂಗ, ಚಾಕು, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಕಡೆಗೆ ಬಂದು ನಮಗೆಲ್ಲರಿಗೂ ಬೈಯುತ್ತಾ ಸೂಳೆ ಮಕ್ಕಳೆ ನಿಮಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ, ಖಲಾಸ ಮಾಡುತ್ತೇವೆ ಅಂತಾ ಹೇಳಿ ಬಸವರಾಜನು ಮತ್ತು ಅವನ ತಂದೆ ಬೀಮಶಾ ಇಬ್ಬರು ನನ್ನ ಏದೆಯ ಮೇಲಿನ ಅಂಗಿ ಹಿಡಿದು ನನಗೆ ತಳ್ಳಾಡುವುದು ಮಾಡಿ ಹೊಡೆಯುತ್ತಿದ್ದರು. ಕೃಷ್ಣಾ ಈತನಿಗೆ ದತ್ತು ಕೋಕರೆ ಹಾಗೂ ಮನೋಹರ ಡೊಂಬಳೆ ಇಬ್ಬರು ಕೂಡಿ ಬಡಿಗೆಗಳಿಂದ ಹೊಡೆಯುತ್ತಿದ್ದರುಯಶವಂತನಿಗೆ ಶರಣಪ್ಪ ಕೋಕರೆ ಮತ್ತು ಶರಣು ಬಂಡಗಾರ ಇಬ್ಬರು ಕೂಡಿ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕಲ್ಲನಿಂದ ಹೊಡೆಯುವುದು ಮಾಡುತ್ತಿದ್ದರು. ಗುರುಲಿಂಗನಿಗೆ ಯಲ್ಲಾಲಿಂಗ ಮತ್ತು ಅನುಸುಬಾಯಿ ಇವರು ಹೊಡೆ ಬಡೆ ಮಾಡುತ್ತಿದ್ದರು. ಬಸನಿಂಗನಿಗೆ ಪರಮೇಶ್ವರ ಮತ್ತು ಶಿವಯೋಗೆಪ್ಪ ಇವರು ಚಾಕುವಿನಿಂದ ಹಾಗೂ ಬಡಗೆಗಳಿಂದ ಹೊಡೆಯುವುತ್ತಿದ್ದರು, ನನಗೆ ಬಸವರಾಜ ನಡೆದ ಜಗಳದ ಗಲಾಟೆಯಲ್ಲಿ ಚಾಕುವಿನಂದ ನನ್ನ ಕೈಗೆ ಹೊಡೆದನು, ಆಗ ನಾನು ಕೆಳಗೆ ಬಿದ್ದೇನು, ಸದರಿಯವನು ನನಗೆ ಹೊಡೆದರಿಂದ ಜಾಸ್ತಿ ಹೋಗಿ ನಾನು ಕೆಳಗೆ ಬಿದ್ದಾಗ ಹೇಗೆ ಖಲಾಸ ಮಾಡಿದೆವು ಅಂತಾ ಎಲ್ಲರೂ ಕೂಡಿ ನಮಗೆ ಸುತ್ತುಗಟ್ಟಿ ಕೊಲೆ ಮಾಡಬೆಕೆಂದು ನಮಗೆ ತಮ್ಮ ಕೈಯಲ್ಲಿದ್ದ ಲಾಂಗದಿಂದ, ಬಡಿಗೆಗಳಿಂದ ಚಾಕುವಿನಿಂದ, ಕಲ್ಲುಗಳಿಂದ ಹೊಡೆಯುವುದು ಕಾಲಿನಿಂದ ಒದ್ದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಿಜಲಿಂಗಪ್ಪ ತಂದೆ ಅಮೃತ ಗೊಬ್ಬೂರ ಸಾ|| ಕೊರಹಳ್ಳಿ ಇವರು ದಿನಾಂಕ ಭೂಸನೂರ ಗ್ರಾಮ ಸೀಮಾಂತರದ ಹಳ್ಳದಲ್ಲಿ ಕುರಿ ಕಾಯುತ್ತಿರುವಾಗ 01] ಸೂರ್ಯಕಾಂತ ತಂದೆ ಬಸಣ್ಣ ಹವಾಣೆ, 02] ಕುಮಾರ ತಂದೆ ಸೂರ್ಯಕಾಂತ ಹವಾಣೆ ಸಾ|| ಇಬ್ಬರೂ ಭೂಸನೂರ ರವರು ಅಲ್ಲಿಗೆ ಬಂದು ತಮಗೆ ಕುರಿ ಹಾಲು ಹಿಂಡಿಕೊಡಲು ಕೇಳಿದ್ದು ಅದಕ್ಕೆ ಫಿರ್ಯಾದಿಯು ಕುರಿ ಗಬ್ಬ ಇದ್ದು ಹಾಲು ಬರುವದಿಲ್ಲ ಅಂತ ಅಂದಿದ್ದಕ್ಕೆ ಆಪಾದಿತರಿಬ್ಬರೂ ತಡೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬಡಿಗೆಯಿಂದ ಮನಸ್ಸಿಗೆ ಬಂದಂತೆ ಬೆನ್ನ ಮೇಲೆ ಹೊಡೆದು ಜೀವ ಭಯಪಡಿಸಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ[್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಲಕ್ಷ್ಮಣ ನಾಗಾಬಾರ ಸಾ : ದೇಸಾಯಿ ಕಲ್ಲೂರ ರವರ ಗಂಡ ಲಕ್ಷ್ಮಣ ತಂದೆ ಮಲಕಪ್ಪ ನಾಗಬಾರ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ನಮಗೆ ಒಟ್ಟು 2 ಜನ ಗಂಡು ಮಕ್ಕಳು 3 ಜನ ಹೆಣ್ಣು ಮಕ್ಕಳು ಇರುತ್ತಾರೆ. ನಮಗೆ ಸ್ವಂತ ಹೊಲ ಇಲ್ಲದ ಕಾರಣ ನನ್ನ ಗಂಡ ನಮ್ಮೂರಿನ ಶ್ರೀಮಂತ ತಂದೆ ವಿಠೋಬಾ ಕೋಳಿ ಇವರ ಹೊಲ ಸ ನಂ 9 ನೇದ್ದನ್ನು ಪಾಲಿಗೆ ಮಾಡಿರುತ್ತಾನೆ. ಸದರಿ ಹೊಲವು ನಮ್ಮೂರಿನಿಂದ ಆನೂರ ರೋಡಿಗೆ ಇರುತ್ತದೆ. ನಮ್ಮ ಧನ ಕರುಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿಯೆ ಕಟ್ಟುತ್ತಿದ್ದರಿಂದ ನನ್ನ ಗಂಡ ದಿನಾಲು ಹೊಲದಲ್ಲಿಯೆ ಮಲಗುತ್ತಾನೆ. ಈಗ ಸದರಿ ಹೊಲದಲ್ಲಿ 3 ಎಕರೆ ಕಬ್ಬಿನ ಬೇಳೆ ಇದ್ದು ಉಳಿದ ಜಮೀನು ಮಳೆ ಬರದೆ ಇದ್ದ ಕಾರಣ ಏನು ಬಿತ್ತನೆ ಮಾಡದೆ ಹಾಗೆ ಬಿಟ್ಟಿರುತ್ತಾನೆ. ನಾವು ಮೊದಲಿನಿಂದಲೂ ಇದೆ ರೀತಿ ಬೇರೆಯವರ ಹೊಲವನ್ನು ಪಾಲಿಗೆ ಮಾಡಿ ಅದರಲ್ಲೆ ಜೀವನ ಸಾಗಿಸುತ್ತಿರುತ್ತೇವೆ. ಈಗ ಸುಮಾರು 4-5 ವರ್ಷಗಳಿಂದ ನಾವು ಪಾಲಿಗೆ ಮಾಡಿದ ಹೊಲಗಳು ಸರಿಯಾಗಿ ಬೇಳೆಯದೆ ಕಾರಣದಿಂದ ನನ್ನ ಗಂಡ ಊರ ಮನೆಯಲ್ಲಿ ಸುಮಾರು 4-5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುತ್ತಾನೆ. ನನ್ನ ಗಂಡ ಯಾರ ಯಾರ ಹತ್ತಿರ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ನನಗೆ ತಿಳಿಸಿರುವುದಿಲ್ಲ, ಆದರೆ 5-6 ಲಕ್ಷ ಸಾಲ ಇದೆ ಎಂದು ನನಗೆ ಹೇಳಿ ಅದರಲ್ಲಿಯೆ ಚಿಂತೆ ಮಾಡುತ್ತಿರುತ್ತಾನೆ. ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಇದ್ದ ಕಾರಣ ಕಬ್ಬು ಸಹ ಒಣಗಿದ್ದು ನಾನು ಸಾಲ ಹೇಗೆ ತಿರಿಸಲಿ ಎಂದು ಚಿಂತೆ ಮಾಡುತ್ತಿರುತ್ತಾನೆ. ನಾನು ನನ್ನ ಗಂಡನಿಗೆ ಆಗಾಗ ಏನು ಆಗಲ್ಲ ಮುಂದೆ ಬೇಳೆದಾವು ಅಂತಾ ಹೇಳಿರುತ್ತೇನೆ. ದಿನಾಂಕ 29-10-2015 ರಂದು ರಾತ್ರಿ ನನ್ನ ಗಂಡ ಮನೆಯಲ್ಲಿ ಊಟ ಮಾಡುತ್ತಿದ್ದಾಗ ನನಗೆ ಏನು ಮಾಡೋದು ಮಳೆನು ಇಲ್ಲ ಬೇಳೆನು ಇಲ್ಲ, ಮಾಡಿದ ಸಾಲದ ಬಡ್ಡಿ ಜಾಸ್ತಿ ಆಗುತ್ತಾನೆ ಇದೆ, ಇದೆ ರೀತಿ ಆದರೆ ನಾನು ಸಾಲ ಹೇಗೆ ತಿರಿಸಲಿ ಅಂತಾ ಹೇಳುತ್ತಿದ್ದಾಗ ನಾನು ಎಂದಿನಂತೆ ನನ್ನ ಗಂಡನಿಗೆ ಸಮಾದಾನ ಮಾಡಿದೆನು. ನಂತರ ನನ್ನ ಗಂಡ ಊಟ ಮಾಡಿ ಹೊಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೊದರು. ಇಂದು ದಿನಾಂಕ 30-10-2015 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನನ್ನ ಗಂಡ ದಿನಾಲು ಬೆಳಿಗ್ಗೆ 06:00 ಗಂಟೆಗೆ ಮನೆಗೆ ಬರುವವರು ಇಂದು ಬರದೆ ಇದ್ದ ಕಾರಣ ನಾನು ಸದರಿ ನಾವು ಮಾಡಿದ ಹೊಲಕ್ಕೆ ಹೋಗಿ ನೋಡಲು ನನ್ನ ಗಂಡನು ಹೊಲದಲ್ಲಿದ್ದ ಮನೆಯ ಮುಂದೆ ಬಯಲಿನಲ್ಲಿ ಮಲಗಿಕೊಂಡಿದ್ದನು, ನನ್ನ ಗಂಡನ ಪಕ್ಕದಲ್ಲಿಯೆ ಒಂದು ಬೇಳೆಗೆ ಹೊಡೆಯುವ ಒಂದು ವಿಷದ ಬಾಟಲಿ ಬಿದ್ದತ್ತು, ನಾನು ಗಾಬರಿಯಾಗಿ ನನ್ನ ಗಂಡನ ಹತ್ತಿರ ಹೋಗಿ ನೋಡಿದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ಸೊನ್ನ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸುರೇಶ ಬೆಂಡೆಗುಂಬಳ ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ  ಹತ್ತಿರ ಹೊಗುತ್ತಿದ್ದಾಗ ನಮ್ಮ ಎದುರಿನಿಂದ ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪ ನೋಡಿ ತನ್ನ ಟ್ರಾಕ್ಟರನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸದರಿ ಟ್ಯಾಕ್ಟರದಲ್ಲಿ  ಮರಳು ತುಂಬಿದ್ದು ಇದ್ದು ಅದರ  ನಂಬರ ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ನಂ ಕೆಎ-32 ಟಿಎ-8002 ಅಂತ ಇದ್ದು . ಸದರಿ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಅಫಜಲಪೂರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 31-10-2015 ರಂದು  ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸುರೇಶ ಬೆಂಡೆಗುಂಬಳೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಟಿಪ್ಪರ ಬರುತ್ತಿದ್ದು. ಸದರಿ ಟಿಪ್ಪರ ಚಾಲಕನು ನಮ್ಮ ಪೊಲೀಸ್ ಜೀಪ ನೋಡಿ ತನ್ನ ವಶದಲ್ಲಿದ್ದ ಟಿಪ್ಪರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು ಅದರ ನಂಬರ ಟಿಪ್ಪರ ನಂ ಜಿಎ-01, ಡಬ್ಲೂ-7034 ಅಂತ ಇದ್ದು ,ಸದರಿ ಟಿಪ್ಪರಲ್ಲಿನ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆ ಸದರ ವಾಹನದೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 27-10-2015 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಮರಮಂಚಿ ತಾಂಡಾದ ನಮ್ಮ ಸಂಭಂದಿಕನಾದ ಸಂಜು ಈತನು ನಮ್ಮ ಮನೆಗೆ ಬಂದು ತನ್ನ ತಂದೆಯಾದ ಗೋಪಾಲ ರಾಠೋಡ ಇವರಿಗೆ ಲಕುವಾ ಆಗಿದ್ದು ಅವರಿಗೆ ಆರಾಮ ಇರುವದಿಲ್ಲ ಅಂತ ತಿಳಿಸಿದ್ದು ಉಪಚಾರ ಕುರಿತ ಎಲ್ಲಿಗೆ ಕರೆದುಕೊಂಡು ಹೋಗಬೇಕು ಅಂತ ವಿಚಾರಿಸಿದ್ದು ಆಗ ನಮ್ಮ ತಂದೆಯಾದ ಸಕ್ಕು ನನಗೆ ನಾವು ಮರಮಂಚಿ ತಾಂಡಕ್ಕೆ ಹೋಗಿ ಗೋಪಾಲ ರಾಠೋಡನೊಂದಿಗೆ ಮಾತನಾಡಿ ಬರೊಣ ನಡೆ ಅಂತ ಹೇಳಿದ್ದು ಅದಕ್ಕೆ ನಾನು ಒಪ್ಪಿಕೊಂಡಿದ್ದು ನಂತರ ನಾನು ನಮ್ಮ ತಂದೆ ಸಕ್ಕು ರಾಠೋಡ ಮತ್ತು ನಮ್ಮ ಸಂಬಂದಿಕನಾದ ಸಂಜು ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ನಂ ಎಮ್.ಹೆಚ್-02-ಇಎ-9613 ನೇದ್ದು ತೆಗೆದುಕೊಂಡು ನಮ್ಮ ತಾಂಡಾದಿಂದ ಮರಮಂಚಿ ತಾಂಡಾಕ್ಕೆ ಹೊಗುವ ಕುರಿತು ಹೊರಟಿದ್ದು ಸಂಜು ಇತನು ನಮ್ಮ ಮೋಟಾರ ಸೈಕಲ ಚಲಾಯಿಸುತ್ತಿದ್ದು ಅಂದು ಮಧ್ಯಾನ 12 ಗಂಟೆಯ ಸುಮಾರಿಗೆ ಪಟವಾದ ಗ್ರಾಮ ದಿಂದ ಸೊಂತ ಗ್ರಾಮದ ಕಡೆಗೆ ಹೊರುವ ರಸ್ತೆಯ ಮೇಲೆ ಹೊಗುತ್ತಿದ್ದಾಗ ಅದೆ ವೇಳೆಗೆ ನಮ್ಮ ಎದರುಗಡೆಯಿಂದ 2-3 ಮೋಟಾರ ಸೈಕಲಗಳು ಬರುತ್ತಿದ್ದ ಆಗ ಸಂಜು ಇತನು ನಮ್ಮ ಮೋಟಾರ ಸೈಕಲ್ ರಸ್ತೆಯ ಎಡಗಡೆಯಿಂದ ನಡೆಯಿಸಿಕೊಂಡು ಹೋಗುತ್ತಿದ್ದ ಎದುರಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲಗಳಲ್ಲಿ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಎದುರಗಡೆ ಇರುವ ಮೋಟಾರ ಸೈಕಲಗಳ ಓವರ ಟೇಕ್ ಮಾಡಿ ಅದೆ ವೇಗದಲ್ಲಿ ಬಂದು ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ನಮಗೆ ಅಪಘಾತ ಪಡಿಸಿದ್ದು, ಅಪಘಾತ ಪಡಿಸಿದ ಪರಿಣಾಮ ನಾವು 3 ಜನರು ಮೋಟಾರ ಸೈಲ್ ಸಮೇತ ರಸ್ತೆಯ ಪಕ್ಕದಲ್ಲಿ ಬಿದಿದ್ದು, ನಮಗೆ ಡಿಕ್ಕಿ ಕೊಟ್ಟ ಮೋಟಾರ ಸೈಕಲ ಸವಾರನು ಮೋಟಾರ ಸೈಕಲ ಸಮೇತ ಅಲ್ಲೆ ಬಿದ್ದಿದ್ದು ಸದರಿಯವನು ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ ಹೊಗಿದ್ದು, ಸದರಿಯವನಿಗೆ ನೋಡಿದರೆ ಗುರುತಿಸುತ್ತೇನೆ. ನಾವು ಬಿದ್ದು ಪರಿಣಾಮ ನನ್ನ ಎಡಗಾಲು ತೊಡೆಗೆ ಎಡಗಾಲ ಪಾದದ ಮೇಲೆ, ಎಡಗಾಲ ಮಳಕಾಲ ಮೇಲೆ ಭಾರಿರಕ್ತಗಾಯವಾಗಿ ಕಾಲು ಮುರಿದಿದ್ದು ನಮ್ಮ ತಂದೆ ಸಕ್ಕು ಇವರಿಗೆ ಎರಡು ಕಾಲುಗಳ ಮೇಲೆ ಭಾರಿ ರಕ್ತಗಾಯವಾಗಿದ್ದು ತಲೆಗೆ ಭಾರಿ ಒಳಪೆಟ್ಟಾಗಿದು ಸಂಜು ಇತನು ಹಾರಿ ಬಿದ್ದಿದ್ದರಿಂದ ಅವನ ಎಡಗೈ ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಅವನಿಗೆ ಅಷ್ಠೆನು ಗಾಯವಾಗಿರುವದಿಲ್ಲ. ನಂತರ ನಾನು ನಮಗೆ ಡಿಕ್ಕಿ ಕೊಟ್ಟ ಮೋಟಾರ ಸೈಕಲ್ ನಂ ನೋಡಲು ಕೆಎ-32-ಕೆ-4853 ಅಂತಾ ಇದ್ದು, ನಂತರ ನಾನು ನಮ್ಮ ಸಂಭಂದಿಕರಾದ  ಪಾಂಡುರಂಗ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿ ಪಾಂಡುರಂಗ ಮತ್ತು ಹಾಗೂ ನಮ್ಮ ಸಂಬಂದಿಕರಾದ ಶಾಮು ಇವರು ಸ್ಥಳಕ್ಕೆ ಬಂದು ನನಗೆ ಮತ್ತು ತಂದೆಗೆ ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ದಿನಾಂಕ 27.10.2015 ರಂದು ರಾತ್ರಿ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ, ನಮ್ಮ ತಂದೆ ಸಕ್ಕು ಇವರಿಗೆ ಬಾರಿರಕ್ತಗಾಯ ಪಡಿಸಿ ದು:ಖಾಪತ ಗೊಳಿಸಿದ ಸದರಿ ಮೋಟಾರ ಸೈಕಲ್ ನಂ. ಕೆಎ-32-ಕೆ-4853  ನೇದ್ದರ ಚಾಲಕ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಕ್ಕು ರಾಠೋಡ ಈತನು ಉಪಚಾರ ಫಲಿಸದೆ ದಿನಾಂಕ:27-10-2015 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳಿಂದ ಉಪಚಾರ ಫಲಿಸದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.