POLICE BHAVAN KALABURAGI

POLICE BHAVAN KALABURAGI

03 May 2014

Gulbarga District Reported Crimes


ಅನಧೀಕೃತವಾಗಿ ಇಟ್ಟುಕೊಂಡ ಪಿಸ್ತೂಲ ಜಪ್ತಿ ಬಂದನ :
ಬ್ರಹ್ಮಪೂರ ಠಾಣೆ : ದಿನಾಂಕ 02-05-2014 ರಂದು ಬ್ರಹ್ಮಪೂರ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಝಟ್-ಪಟ್ ಬಿಬಿ ದರ್ಗಾ ಹತ್ತಿರ ಆಕ್ರಮವಾಗಿ ಆಯುಧ ಇಟ್ಟುಕೊಂಡು ಸಂಸಯಾಸ್ಪದವಾಗಿ ನಿಂತಿದ್ದ ಟಿಪು ತಂದೆ ಖುರ್ಷಿದ ಅಲಿ ಶೇಖ ಸಾ|| ಹಜ್ ಕಮೀಟಿ ಹತ್ತಿರ ದರ್ಗಾ ಏರಿಯಾ ಗುಲಬರ್ಗಾ ಇವನನ್ನು ಖಚಿತ ಬಾತ್ಮಿ ಮೇರೆಗೆ  ಶ್ರೀ. ಅಮಿತ್ ಸಿಂಗ್ ಐ.ಪಿ.ಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಹಾಗು ಶ್ರೀ ಸವಿಶಂಕರ ನಾಯಕ ಡಿ.ಎಸ್.ಪಿ '''' ಉಪವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಶ್ರೀ ಕೆ,ಎಂ ಸತೀಶ ಪಿ.ಐವಿನಾಯಕ ಪಿಎಸ್ಐ ಮತ್ತು ಸಿಬ್ಬಂದಿಯವರೆಲ್ಲರೂ ಕೂಡಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈ ಬಗ್ಗೆ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ಬಂದಿತ ಟಿಪು  ಈತನ ಮೇಲೆ ಗುಲಬರ್ಗಾ ನಗರದ ಇತರೆ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಬಾಗಿಯಾಗಿದ್ದು ಕ್ರಿಮಿನಲ್ ಅಪರಾದ ಹಿನ್ನೆಲೆಯುಳ್ಳವರಾಗಿರುತ್ತಾರೆ. ಸದರಿಯವನಿಂದ ಒಂದು ನಾಡ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸುಚಿತ್ರ ಗಂಡ ದಯಾನಂದ ನಾಗನಹಳ್ಳಿ  ಸಾಃ ಪ್ಲಾಟ ನಂ. 91, ಗುರುಕೃಪಾ ಪ್ರಗತಿ ಕಾಲೋನಿ ಸೇಡಂ ರೋಡ್ ಗುಲಬರ್ಗಾ ಇವರಿಗೆ ಸುಮಾರು 16 ವರ್ಷಗಳಿಂದ ಹಿಂದೆ ದಯಾನಂದ ನಾಗನಹಳ್ಳಿ ಇವರೊಂದಿಗೆ ಹಿಂದು ಸಂಪ್ರದಾಯದಂತೆ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು ಇರುತ್ತದೆ. ನಂತರ ಕೆಲವು ವರ್ಷಗಳು ಗಂಡನ ಮನೆಯವರು ಚೆನ್ನಾಗಿ ನೋಡಿಕೊಳ್ಳುತ್ತಾ ಬಂದಿರುತ್ತಾರೆ. ಫಿರ್ಯಾದಿದಾರರಿಗೆ 01 ಹೆಣ್ಣು, 02 ಗಂಡು ಮಕ್ಕಳಿರುತ್ತಾರೆ. ಗಂಡನಾದ ದಯಾನಂದ ಈತನು ಫಿರ್ಯಾದಿದಾರಳ ಮೇಲೆ ಸಂಶಯ ಪಟ್ಟು ಏ ರಂಡಿ ನೀನು ಫೋನಿನಲ್ಲಿ ಯಾರಿಗೆ ಮಾತಾಡುತ್ತೀ ಏಕೆ ಮಾತಾಡುತ್ತೀ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಇದ್ದು ನನ್ನ ಗಂಡ ಸುಧಾರಿಸಬಹುದು ಅಂತಾ ಸಂಸಾರ ಬೇಕು ಅಂತಾ ಸಹಿಸಿಕೊಂಡು ಬಂದಿರುತ್ತೇನೆ. ಹಿರಿಯರ ಸಮಕ್ಷಮದಲ್ಲಿ ಫಿರ್ಯಾದಿದಾರಳಿಗೆ ಪ್ರತಿ ತಿಂಗಳು ಮನೆ ಖರ್ಚಿಗಾಗಿ 10 ಸಾವಿರ ರೂಪಾಯಿ ಮನೆ ಬಾಡಿಗೆ ವಿದ್ಯುತ್ ಬಿಲ್ಲು ಕೊಡುವಂತೆ ಮಾತಾಗಿದ್ದು ಅದರಂತೆ ಫಿರ್ಯಾದಿದಾರಳ ಗಂಡ ಹಣ ಕೊಡುತ್ತಾ ಬಂದಿದ್ದು ಈಗ ಸುಮಾರು 03 ತಿಂಗಳಿಂದ ಮನೆಯ ಖರ್ಚಿಗಾಗಿ ಹಣ ಕೊಡದೇ ಮನೆ ಬಾಡಿಗೆ ಕಟ್ಟದೇ ಇದ್ದಾಗ ದಿನಾಂಕಃ 11/02/2014 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡನಿಗೆ ನೀನು ಈ ರೀತಿ ಮಾಡುವುದು ಸರಿ ಅಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಸಂಸಾರಕ್ಕೆ ಹಣ ಕೊಡು ಅಂತ ಕೇಳಿದಕ್ಕೆ ಗಂಡನಾದ ದಯಾನಂದ ಇತನು ಭೋಸಡಿ ಮೊದಲು ನೀನು ಸರಿಯಾಗಿ ಇರುವುದನ್ನು ಕಲಿ, ನಾನು ಇಲ್ಲದ ಸಮಯದಲ್ಲಿ ಬೇರೆಯವರಿಗೆ ಫೋನ್ ಮಾಡುತ್ತಿ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಇನ್ನು ಮುಂದೆ ನನಗೆ ಹಣ ಕೇಳಿದರೆ ನಿನಗೆ ಮತ್ತು ಮಕ್ಕಳಿಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 02-05-2014 ರಂದು 5-45 ಎಮ್ ಸುಮಾರಿಗೆ ಮೃತ ಭಾರತಿ @ ಶಿವಲಿಂಗಮ್ಮ ಹಾಗೂ ಅವಳ ಗಂಡನಾದ ಮಲ್ಲಿಕಾರ್ಜುನ ಇವರು ಬೆಳಗಿನ ವಾಯು ವಿಹಾರ (ವಾಕಿಂಗ್) ಮಾಡುತ್ತಾ ಆಳಂದ ಚೆಕ್ ಪೋಸ್ಟದಿಂದ ಡಬರಾಬಾದ ಕ್ರಾಸ್ ಕಡೆಗೆ ರೋಡಿನ ಎಡ ಬದಿಯಿಂದ ನಡೆದುಕೊಂಡು ಚೋರ ಗುಂಬಜ್ ಹತ್ತೀರ ಬರುವಾಗ ಅದೆ ವೇಳೆಗೆ ಹಿಂದಿನಿಂದ ಅಂದರೆ ಆಳಂದ ಚೆಕ್ ಪೋಸ್ಟ ಕಡೆಯಿಂದ ಇನೋವಾ ಕಾರ್ ನಂ: ಕೆಎ-32-ಎಮ್-6811 ನೇದ್ದರ ಚಾಲಕನಾದ  ಅಹೆಮದ್ ಪಾಷಾ ತಂದೆ ಅಬ್ದುಲ ರಶೀದ ಸಾ|| ಖದೀರ ಚೌಕ ಎಂ,ಎಸ್,ಕೆ,ಮಿಲ್ ಗುಲಬರ್ಗಾ ಈತನು ತನ್ನ ನೋವಾ ಕಾರನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಯಿಸಿಕೊಂಡು ಬಂದು ಭಾರತಿ @ ಶಿವಲಿಂಗಮ್ಮ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವಳ ಬಲ ತೆಲೆಗೆ ಭಾರಿ ರಕ್ತಗಾಯವಾಗಿ ಎಡ ಕಣ್ಣಿನ ಹತ್ತೀರ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ  ಆಸ್ಪತ್ರೆಗೆ ತೆಗದುಕೊಂಡು ಹೋದಾಗ ಸದರಿಯವಳು ಮೃತ ಪಟ್ಟಿರುತ್ತಾಳೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ : ಶ್ರೀ ರಾಜಕುಮಾರ ತಂದೆ ಸೂರ್ಯಕಾಂತ ಭಜಂತ್ರಿ ಸಾ:ಚಿಂಚನಸೂರ ರವರು  ದಿನಾಂಕ 30/04/2014 ರಂದು ನಮ್ಮ ಮಾವನಾದ ಮಾರುತಿ ಇವರು ತಮ್ಮ ಊರಾದ ಕರಹರಿ ಗ್ರಾಮದಲ್ಲಿ ಹಣಮಂತರಾಯ ಕಬ್ಬಲುಗಾ ಇವರ ಮನೆಯಲ್ಲಿ ಮಂಗಳ ಕಾರ್ಯಕ್ರಮವಿದ್ದು ದಿನಾಂಕ 01/05/2014 ರಂದು ಕರಹರಿಗೆ ಬರಲು ತಿಳಿಸಿದ್ದು ಅದರಂತೆ ನಾನು ಮತ್ತು ನಮ್ಮ ತಂದೆ ಕೂಡಿ ನಮ್ಮ ಸಾಮಾನುಗಳನ್ನು ತೆಗೆದುಕೊಂಡು ಸಾಯಂಕಾಲ 6-00 ಗಂಟೆಗೆ ಕರಹರಿ ಗ್ರಾಮಕ್ಕೆ ತಲುಪಿ ನಮ್ಮ ಮಾವನವರೊಂದಿಗೆ ಕೂಡಿದೇವು ಆಗ ಅದೆ ಗ್ರಾಮದ ಲಿಂಗಾಯತ ಜನಾಂಗದ ಪರಮೇಶ್ವರ ಧನ್ನೂರ ಇವರು ನಮ್ಮ ಹತ್ತಿರ ಬಂದು ನಾವೆಲ್ಲರೂ ನಮ್ಮ ಮಾವನ ಮನೆಯ ಮುಂದೆ ರೋಡಿನ ಮೇಲೆ ಕುಳಿತಾಗ ನಮ್ಮ ತಂದೆಗೆ ಪರಮೇಶ್ವರ ಇವರು ನನಗೆ ಕುಡಿಯಲಿಕ್ಕೆ ಒಂದು ಕ್ವಾಟರ್ ತರಿಸು ಅಂತಾ ಹೇಳಿದಾಗ ನಮ್ಮ ತಂದೆ ನಮ್ಮ ಹತ್ತಿರ  ದುಡ್ಡು ಇಲ್ಲಾ ಎಲ್ಲಿಂದ ಸಾರಾಯಿ ತರಿಸಲಿ ಅಂತಾ ಹೇಳಿದಾಗ ಪರಮೇಶ್ವರ ಇತನು ಲೇ ಕೊರವೇ ಸುಳ್ಯಾ ಮಗನೆ ಇಷ್ಟು ಬಾಜಿ ಬಾರಿಸುವ ಹಣ ಬರುತ್ತದೆ. ಕುಡಿಸುಂದರೆ  ಸೊಕ್ಕು ಬಹಳ ಬಂದಿದೆ ಅಂತಾ ಬೈಯುತ್ತಾ ಅಲ್ಲದೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ನಮ್ಮ ತಂದೆಯ ತಲೆಯ ಎಡಭಾಗಕ್ಕೆ ಹೊಡೆದನು. ಇದ್ದರಿಂದ ರಕ್ತಗಾಯವಾಯಿತ್ತು. ಮತ್ತು ನಿನಗೆ ಖಲ್ಲಾಸ್ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.