POLICE BHAVAN KALABURAGI

POLICE BHAVAN KALABURAGI

31 July 2013

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:  ದಿನಾಂಕ 29-07-2013 ರಂದು ರಾತ್ರಿ 8 ಪಿಎಂಕ್ಕೆ ಶ್ರೀಮತಿ ಉಮಾಬಾಯಿ ಗಂಡ ದಿ:ಶಂಕರ ಭಟ್ಟ ಜೋಶಿ ಸಾ: ಹೂವಿನ ಹಳ್ಳಿ ತಾ:ಸಿಂಧಗಿ ಹಾ:ವ: ಪ್ಲಾಟ ನಂ 26 ಮಾಕಾ ಲೇ ಔಟ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನೀಡಿದ ಪಿರ್ಯಾದಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು ನನ್ನ ನೆಗಣಿಯ ಬಾಣತನ ಮಾಡಲು ಗುಲಬರ್ಗಾದ ಮಾಕಾಲೇಔಟದ ನನ್ನ ಮೈದುನ ಮನೆಗೆ ಬಂದಿದ್ದು. ಇಂದು ದಿನಾಂಕ 29-07-2013 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಗುಲಬರ್ಗಾದ ಮಾಕಾ ಲೇಔಟ ಬಡಾವಣೆಯಲ್ಲಿ ಮೈದುನ ಮನೆಯ ಮುಂದೆ ಕುಳಿತಾಗ ಯಾರೋ ಇಬ್ಬರು ಹುಡುಗರು ಒಂದು ಕಪ್ಪು ಬಣ್ಣದ ಮೋಟಾರ ಸೈಕಲ ಮೇಲೆ ಬಂದು ಮನೆಯ ಗೇಟ ಹತ್ತಿರ ಬಾಬಿ, ಬಾಬಿ ಎಂದು ಕರೆದರು ಆಗ ನಾನು ಗೇಟ ಹತ್ತಿರ ಹೋಗಿ ಯಾರೂ ಅಂತಾ ಕೇಳಿ ಗೇಟ ಮುಚ್ಚುತ್ತಿರುವಾಗ ಆ ಇಬ್ಬರು ಅಪರಿಚಿತ ಹುಡುಗರಲ್ಲಿ ಒಬ್ಬನು ನನ್ನ ಕೊರಳಲ್ಲಿ ಕೈ ಹಾಕಿ ಒಂದೂವರೆ ತೊಲೆಯ ಬಂಗಾರದ ಲಾಕೇಟ ಕಿತ್ತುಕೊಂಡು ಹೋಗಿರುತ್ತಾರೆ.  ಮೋಟಾರ ಸೈಕಲ ಮೇಲೆ ಹೋಗುವಾಗ ಸ್ಕ್ರೀಡ ಆಗಿ ಒಬ್ಬ ಹುಡುಗ ಬಿದ್ದಿದ್ದು ನಂತರ ಆ ಕಪ್ಪು ಬಣ್ಣದ ಮೋಟಾರ ಸೈಕಲ ಎತ್ತಿಕೊಂಡು ಗಾಡಿ ಚಾಲು ಮಾಡಿಕೊಂಡು ಹೋಗಿರುತ್ತಾರೆ .  ನನ್ನ ಬಂಗಾರದ ಲಾಕೇಟಿನ ಬೆಲೆ ಅಂದಾಜು 35,000/- ರೂ ಇರಬಹುದು.ಕಾರಣ ನನ್ನ ಬಂಗಾರದ ಲಾಕೇಟ  ಕಿತ್ತುಕೊಂಡು ಹೋಗಿದ್ದ ಇಬ್ಬರು ಹುಡುಗರು 20 ರಿಂದ 25 ವಯಸ್ಸಿನವರಿದ್ದು ಕಾಲೇಜ ಹುಡುಗರ ತರಹ ಕಾಣಿಸುತ್ತಾನೆ. ಅವರಿಗೆ ನೋಡಿದರೆ ಗುರ್ತಿಸುತ್ತೇನೆ ಆ ಮೋಟಾರ ಸೈಕಲ ನಂಬರ ಕಾಣಿಸಲಿಲ್ಲಾ ನನ್ನ ಬಂಗಾರದ ಲಾಕೇಟ ಕಿತ್ತುಕೊಂಡುಹೋಗಿದ್ದವರಿಗೆ ಪತ್ತೆ ಹಚ್ಚಿ ನನ್ನ ಬಂಗಾರ ಕೊಡಬೇಕು ಅಂತಾ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 110/2013 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:  ದಿನಾಂಕ 29.07.2013 ರಂದು ಸಾಯಾಂಕಾಲ 7 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀಮತಿ ಸೈಯ್ಯದಾ ವಾಜೀದಾ ಮುಬೀನ್ ಗಂಡ ಸೈಯ್ಯದ ತನ್ವೀರ್ ಅಹ್ಮದ ವಯ;26 ವರ್ಷ ಉ;ಮನೆಕೆಲಸ ಸಾ; ಬಿಜಾಪೂರ ಹಾ;ವ; ಮನೆ ನಂ 11-1067/ಎ ಎಂ.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 01.03.2013 ರಂದು ನನ್ನ ತಂದೆ ತಾಯಿಯವರು ಬಿಜಾಪೂರದ ಸೈಯ್ಯದ ತನ್ವೀರ್ ಅಹ್ಮದ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷೀಣೆ ವರೋಪಚಾರ ಅಂತಾ 25.000/-ರೂಪಾಯಿ ಮತ್ತು 7 ವರೆ ತೊಲೆ ಬಂಗಾರ,ಬೆಲೆ ಬಾಳುವ ಗ್ರಹಪಯೋಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ 8 ದಿವಸದಲ್ಲಿಯೇ ಗಂಡ ಸೈಯ್ಯದ ತನ್ವೀರ್ ಅಹ್ಮದ, ಅತ್ತೆ ಗೌಸಿಯಾಬೇಗಂ, ಮಾವ ಸೈಯ್ಯದ ಮೈನೋದ್ದೀನ್, ನಾದಿನಿಯರಾದ ವಾಜೀದಾ ತಬಸುಮ, ರೇಷ್ಮಾಬೇಗಂ ಮತ್ತು ರೇಷ್ಮಾ ಬೇಗಂ ಇವಳ ಗಂಡನಾದ ಮನೋವರ್ ಪಾಷಾ ಇವರೆಲ್ಲರೂ ಕೂಡಿ  ಅವ್ಯಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ ಮಾನಸಿಕ ದೈಹಿಕ ಕಿರುಕುಳ ಕೊಟ್ಟಿರುತ್ತಾರೆ. ದಿನಾಂಕ 24.04.2013 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ನನ್ನ ಗಂಡ ಸೈಯ್ಯದ ತನ್ವೀರ್ ಅಹ್ಮದ ಅತ್ತೆ ಗೌಸಿಯಾ ಬೇಗಂ ಮಾವ ಸೈಯ್ಯದ ಮೈನೋದ್ದೀನ ಇವರೆಲ್ಲರೂ ಕೂಡಿಕೊಂಡು ನನ್ನ ತವರು ಮನೆಗೆ ಬಂದು ನಿನಗೆ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ತವರು ಮನೆಯಲ್ಲಿಯೇ ಬಂದು ಕುಳಿತಿರುವಿಯಾ ಅಂತಾ ನನ್ನ ಗಂಡ ಅತ್ತೆ ಕೂಡಿ ಕೈಯಿಂದ ಹೊಡೆಬಡೆ ಮಾಡಿದ್ದು, ನನ್ನ ಮಾವ ಜೀವದ ಬೆದರಿಕೆ ಹಾಕಿರುತ್ತಾನೆ.ಕಾರಣ ನನಗೆ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ತವರು ಮನೆಯಿಂದ 2 ಲಕ್ಷ ರುಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಟ್ಟವರ ಮೆಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 48/2013 ಕಲಂ 498(ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.sಸದರಿ ಪ್ರಕರಣವು ಘೋರ ಪ್ರಕರಣವಾಗಿದ್ದರಿಂದ ಪಿ,ಐ ಬ್ರಹ್ಮಪೂರವರಿಗೆ ಮುಂದಿನ ತನಿಖೆ ಕೈಕೊಂಡಿದ್ದು ಇರುತ್ತದೆ. 

29 July 2013

GULBARGA DIST REPORTED CRIMES

ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  
ಮೈನುದ್ದೀನ ತಂದೆ ಮಹಿಬೂಬಸಾಬ ಸಂಧಿಮನಿ ಸಾ:ನಾಗೂರ ಹಾ:ವ:ರಾಮನಗರ ಗುಲಬರ್ಗಾ ಮತ್ತು ಶರಣು ಕೂಡಿ ಇಬ್ಬರು ಮೋಟಾರ ಸೈಕಲ ಮೇಲೆ ಅವರ ಅಣ್ಣ ಮೋಬಿನ ಇನ್ನೊಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಶಹಾಬಾದನಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮೋಬಿನನು ಮೋಟಾರ ಸೈಕಲ ಮೇಲೆ ಮುಂದೆ ಹೋಗುತ್ತಿದ್ದು ನಾವು ಹಿಂದೆ ಹೋಗುತ್ತಿರುವಾಗ ಮೋಬಿನನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಸುತ್ತಾ ದೇವನ ತೆಗನೂರ ಗ್ರಾಮದ ಬಸಸ್ಟಾಂಡ ಹತ್ತಿರ ಇರುವ ರೋಡ ಬ್ರೇಕ ಹತ್ತಿರ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕಿಡ್ಡಾಗಿ ಬಿದ್ದುಮೊಬಿನನ ಬಲಕಪಾಳಿಗೆ ತರಚಿದ ರಕ್ತಗಾಯ ಹಣೆಯ ಮಧ್ಯ ಭಾಗದಲ್ಲಿ ಭಾರಿ ರಕ್ತಗಾಯ & ತಲೆ ಬಲಭಾಗಕ್ಕೆ ಭಾರಿ  ಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  

ಜಗದೀಶ@ಜಗನ್ನಾಥ ಮತ್ತು ಪ್ರದೀಪ ಕುಮಾರ ತಂದೆ ಬಸಪ್ಪಾ ಕೂಡಿ ಹೀರೊ ಹೊಂಡಾ ಮೋಟಾರ ಸೈಕಲ ನಂ.ಕೆಎ-32, ಇಎ-7914 ನೇದ್ದರ ಮೇಲೆ ಹೊನಗುಂಟಾ-ಶಹಾಬಾದ ರಸ್ತೆಯ ಮರಗಮ್ಮಾ ಗುಡಿಯ ಹತ್ತಿರ ಹೋಗುತ್ತಿರುವಾಗ ಪ್ರದೀಪ ಕುಮಾರನು ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಹೋಗಿ ರಸ್ತೆ ಪಕ್ಕದ  ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದರಿಂದ ಹಿಂದೆ ಕುಳಿತ ಜಗದೀಶನಿಗೆ ಹಣೆಯ ಮಧ್ಯದಲ್ಲಿ ಭಾರಿ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲಿ ಇರುವದಿಲ್ಲಾ. ಕಾರಣ ಮೋ/ಸೈ ಸವಾರನಾದ ಪ್ರದೀಪ ಕುಮಾರನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಜಗದೀಶ@ಜಗನ್ನಾಥನ ತಂದೆ  ಸುಬ್ಬಣ್ಣಾ ತಂದೆ ಮಲ್ಲಣ್ಣಾ ಸಾ:ಹೊನಗುಂಟಾ  ಇವ್ರುಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

28 July 2013

GULBARGA DIST REPORTED CRIMES

ಮಹಿಳಾ ಪೊಲೀಸ್ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ :   


            ಶ್ರೀಮತಿ ಪರವೀನ ಬೇಗಂ ಗಂಡ ಮಹ್ಮದ ಮುಸ್ತಾಕ ಖಾನ   ಸಾ; ಹುಸೇನಿ ಗಾರ್ಡನ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಸುಮಾರು 4 ವರ್ಷಗಳ ಹಿಂದೆ ಗುಲಬರ್ಗಾ ಹುಸೇನಿ ಗಾಡನದ ಮಹ್ಮದ ಮುಸ್ತಾಕ ಖಾನ ಇತನೊಂದಿಗೆ ಸಂಪ್ರದಾಯದಂತೆ ತಮ್ಮ ಮದುವೆ ಆಗಿದ್ದು ಯಾವಾಗಲೋ ನಮ್ಮ ತವ್ರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದು.  ದಿ: 21-07-2013 ರಂದು ನಮ್ಮ ತಾಯಿ ರಹಿಮುನ್ನಿಸಾ ಬೇಗಂ ಮತ್ತು ನನ್ನ ಅಕ್ಕಂದಿರಾದ ನಸ್ರೀನ್ ಬೇಗಂ, ಇಸ್ರತ್ ಬೇಗಂ ಇವರೆಲ್ಲರೂ ನನಗೆ ಮಾತನಾಡಿಸುವ ಕುರಿತು ಮನೆಗೆ ಬಂದಾಗ ನನ್ನ ಗಂಡ ಮಹ್ಮದ ಮುಸ್ತಾಕ, ಅತ್ತೆ ಖುಸ್ರೀದ್ ಬೇಗಂ ನಾದೀನಿಯರಾದ ಸಾಹೇರಾ ಬೇಗಂ, ಹಾಜೀ ಬೇಗಂ ನಸ್ರೀನ್ ಬೇಗಂ , ಕೌಸರ ಬೇಗಂ, ಶಾಹೀದಾ ಬೇಗಂ,ಇರ್ಫಾನ್ ಬೇಗಂ ಮತ್ತು ಮೈದುನನಾದ ಅಲ್ತಾಫ ಇವರೆಲ್ಲರೂ ಕೂಡಿ ನನ್ನ ತಾಯಿ ಮತ್ತು ನನ್ನ ಅಕ್ಕಂದಿರಿಗೆ ನಿವೇಲ್ಲ ನಮ್ಮ ಮನೆಗೆ ಯಾಕೆ? ಬಂದಿದ್ದೀರಿ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ಹಾಗೆ ಬಂದಿರುತ್ತೀರಿ ನೀವು 2 ಲಕ್ಷ ರೂಪಾಯಿ ಹಣ ಕೊಡದೇ ಇದ್ದರೆ ಪರವೀನ್ ಬೇಗಂ ಇವಳಿಗೆ ಕೊಲೆ ಮಾಡಿ ಮಹ್ಮದ ಮುಸ್ತಾಕ ಇವನಿಗೆ ಬೇರೆ ಮದುವೆ ಮಾಡುತ್ತೇವೆ. ಎಂದು ಜಗಳ ತೆಗೆದು ನನ್ನ ಗಂಡ ನನಗೆ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಾಯಿ ರಹಿಮುನ್ನೀಸಾ ಬೇಗಂ ಬಿಡಿಸಲು ಬಂದಾಗ ನನ್ನ ನಾದೀನಿಯರೆಲ್ಲರೂ ಕೂಡಿ ನನ್ನ ತಾಯಿಗೆ ಎಳೆದು ಹೊಡೆ ಬಡೆ ಮಾಡಿರುತ್ತಾರೆ. ಆಗ ನನಗೆ ನನ್ನ ಮಕ್ಕಳೊಂದಿಗೆ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಕಾರಣ ನನಗೆ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ದಿನಾಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಕೈಯಿಂದ ಹೊಡೆ ಬಡೆ ಮಾಡುತ್ತಿರುವ ನನ್ನ ಗಂಡ ,ಅತ್ತೆ, ನಾದೀನಿಯರು ಹಾಗೂ ನಾದೀನಿಯ ಗಂಡ, ಮತ್ತು ಮೈದುನ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆಯಲ್ಇಲಪ್ರಕ್ರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

27 July 2013

GULBARGA DIST REPORTED CRIME


ಶಹಾಬಾದ ನಗರ ಠಾಣೆ:
ಯು.ಡಿ.ಆರ್ ಪ್ರಕರಣ:
ದಿನಾಂಕ:25/07/2013 ರಂದು ಶ್ರೀ ನೀಲಕಂಠ ತಂದೆ ಸಿದ್ದಪ್ಪ ಪಾಣಿಗಾಂವ ಸಾ:ಗೋಳಾ (ಕೆ) ರವರು ಠಾಣೆಗೆ ಹಾಜರಾಗಿ ಬೆಳಗ್ಗೆ 10.30 ಎಎಂ ಸುಮಾರಿಗೆ ಮಾಲಗತ್ತಿ ಸೀಮಾಂತರದಲ್ಲಿರುವ ತಮ್ಮ ಹೊಲಕ್ಕೆ ಹೋದಾಗ ಅವರ ಹೊಲದಲ್ಲಿರುವ ಬನ್ನಿ ಗಿಡಕ್ಕೆ ಒಬ್ಬ ವ್ಯಕ್ತಿ ನೇತಾಡುತ್ತಿರುವದನ್ನು ನೋಡಿ ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ನೇಣು ಹಾಕಿ ಕೊಂಡಿದ್ದು ನೋಡಲಾಗಿ ಆತನು ಯಾರೋ ಅಪರಿಚಿತನಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಆತನ ವಯಸ್ಸು ಅಂದಾಜು 23/25 ವರ್ಷ ಇದ್ದು ಮೃತ ವ್ಯಕ್ತಿಯು ಬನ್ನಿ ಗಿಡದ ಮೇಲ್ಬಾಗದಲ್ಲಿ ಗುಲಾಬಿ ಬಣ್ಣದ ನೂಲಿನ ಹಗ್ಗ ಕಟ್ಟಿ ಅದಕ್ಕೆ ಕೆಳಭಾಗದಲ್ಲಿ ಕಪ್ಪು ವಾಯರ  ಹಗ್ಗ ಕಟ್ಟಿ ನೇಣು ಹಾಕಿಕೊಂಡಿರುತ್ತಾನೆ. ಸದರಿಯವನ ಮೈ ಮೇಲೆ ಒಂದು ಬಿಳಿ ಗೇರಿ-ಗೇರಿ ಶರ್ಟ ಮತ್ತು ಒಂದು ಚಾಕಲೇಟ ಬಣ್ಣದ ಚೌಕಡಿ ಲುಂಗಿ ಇರುತ್ತದೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕನಗರ ಠಾಣೆ:
ಕಳವು ಪ್ರಕರಣ:
ಶ್ರೀ. ಸಮೀರ  ತಂದೆ ರಶೀದ ಬಾಗವಾನ  ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ದಿನಾಂಕ 25/07/2013 ರಂದು ಬೆಳಿಗ್ಗೆ 3-30 ರಿಂದ 4 ಗಂಟೆ ಸುಮಾರಿಗೆ  ತಾವು ಮನೆಯಲ್ಲಿ ಮಲಗಿರುವ ಸಮಯದಲ್ಲಿ ಯಾರೋ ಕಳ್ಳರು ಕಂಪೌಂಡ ಹಾರಿ ಮನೆಯ ಕಿಟಕಿ ಮುರಿದು ಒಳಗಡೆ ಬಂದು  ಮನೆಯಲ್ಲಿದ್ದ ಒಂದು ಐ-ಫೋನ ಮೊಬೈಲ ಅದರ ಸೀಮ ನಂ 9611869999 ಮತ್ತು ಪ್ಯಾಂಟನ ಜೇಬಿನಲ್ಲಿದ್ದ 15,000/- ರೂಪಾಯಿಗಳನ್ನು ತೆಗೆದುಕೊಂಡು ಬೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೈಕೊಳ್ಳಲಾಗಿದೆ. 

25 July 2013

GULBARGA DIST REPORTED CRIME

ಮಹಿಳಾ ಪೊಲೀಸ್ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ:
ದಿನಾಂಕ 24.7.2013 ರಂದು ಶ್ರೀಮತಿ ಜ್ಯೋತಿ @ ಶರಣಮ್ಮಾ ಗಂಡ ವಿಶಾಲ ತಿಪರಾದಿ ಸಾ; ಬ್ಯಾಂಕ ಕಾಲನಿ ಇವರು ಠಾಣೆಗೆ ಹಾಜರಾಗಿ ದಿ 13.5.2013 ರಂದು ಪೂನಾದ ವಿಶಾಲ ಇತನೊಂದಿಗೆ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ತನ್ನ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ 12 ತೊಲೆ ಬಂಗಾರ ಮತ್ತು ಬೆಲೆ ಬಾಳುವ  ಗ್ರಹಬಳಕೆಯ ಸಾಮಾನುಗಳು ಕೊಟ್ಟಿದ್ದು, ಮದುವೆಯಾದ 3 ದಿನಗಳಲ್ಲಿಯೇ ನನ್ನ ಗಂಡ ಅತ್ತೆ ಬಾವ ಮನೆಯ ಸಣ್ಣಪುಟ್ಟ ವಿಷಯಕ್ಕೆ ಜಗಳ ತೆಗೆಯುವುದು ನನಗೆ ಸರಿಯಾಗಿ  ಅಡುಗೆ ಮಾಡಲು ಬರುವದಿಲ್ಲಾ ಅಂತಾ ಜಗಳ ತೆಗದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದು ಅಲ್ಲದೇ  ನಾವು ಪ್ಲಾಟ ಖರೀದಿ ಮಾಡುತ್ತಿದ್ದು ಅದಕ್ಕಾಗಿ ನಿಮ್ಮ ತಂದೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ನನ್ನ ತವರು ಮನೆಗೆ ತಂದು  ಬಿಟ್ಟಿರುತ್ತಾರೆ.

ದಿನಾಂಕ 16.6.2013 ರಂದು ನನ್ನ ಗಂಡ ವಿಶಾಲ ಅತ್ತೆ ಶೆಶಿಕಲಾ ಇವರು ಗುಲಬರ್ಗಾದ ಬ್ಯಾಂಕ ಕಾಲನಿಯಲ್ಲಿರುವ ನಮ್ಮ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಿನಗೆ 4 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ಬಂದು ಇಲ್ಲೇ ಕುಳಿತಿರುವಿಯಾ ಅಂತಾ ಕೈಯಿಂದ ಹೊಡೆಬಡೆ ಮಾಡಿದ್ದು. ನನ್ನ ಗಂಡ ವಿಶಾಲ ಅತ್ತೆ ಶೆಶಿಕಲಾ ಮತ್ತು ಭಾವ ವೈಭವ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು  ಸಾರಾಂಶದ  ಮೇಲಿಂದ ಮಹಿಳಾ ಪೊಲೀಸ್ ಠಾಣೇ ಗುಲಬರ್ಗಾದಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಸೇಡಂ ಪೊಲೀಸ ಠಾಣೆ.
ಕಳವು ಪ್ರಕರಣ:
ದಿನಾಂಕ:23-07-2013 ರಂದು ರಾತ್ರಿ ಅಂದಾಜು 01-00 ಗಂಟೆ ಸುಮಾರಿಗೆ ಬಿಚ್ಚಪ್ಪ ತಂದೆ ಶಿವಲಿಂಗಪ್ಪ ಮಾಡನೊರ ಸಾ: ಕೊಡ್ಲಾ ಇವರ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ 10,000/- ರೂಪಾಯಿ ಹಾಗೂ ಒಂದು ಮೊಬೈಲ್ ಸೆಟ್ ಅದರ ಸಿಮ್ ನಂ-9917553542 ಇದರ ಅಂದಾಜು ಕಿಮ್ಮತ್ತು 1200/- ರೂಪಾಯಿ ಹೀಗೆ ಒಟ್ಟು 11200/- ರೂಪಾಯಿ ಕಿಮ್ಮತ್ತಿನ ಮಾಲು ಮತ್ತು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ:
ದಿನಾಂಕ: 23/07/2013 ರಂದು ಸಾಯಂಕಾಲ ಲಕ್ಷ್ಮೀಣ ತಂದೆ ಸೋಮಣ್ಣಾ ಘೋಡಕೆ ಸಾ:ನಾಗಲೇಗಾಂವ ಇವರು ಸೂರ್ಯಕಾಂತ ತಂದೆ ರಾಮಚಂದ್ರ ಘೋಡಕೆ ರವರ ಹೊಲದಲ್ಲಿ ದನಗಳು ಬಿಟ್ಟು ಮೇಯಿಸುತ್ತಿರುವಾಗ ಸೂರ್ಯಕಾಂತನ ತಂದೆ ನಮ್ಮ ಹೊಲದಲ್ಲಿ ದನಗಳು ಬಿಟ್ಟು ಮೇಯಿಸಬೇಡ ಅಂತಾ ಹೇಳಿದಾಗ ಲಕ್ಷ್ಮಣನು ಸೂರ್ಯಕಾಂತನ ತಂದೆಯವರಿಗೆ ಅವಾಚ್ಯ ಶಬ್ದಗಳೀಂದ ಬಯ್ದು ಕಲ್ಲಿನಿಂದ ತಲೆಗೆ ಹೊಡೆದಿದ್ದು. ಬಿಡಿಸಲು ಹೋದ ಸೂರ್ಯಕಾಂತನಿಗೆ ಸಹ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

24 July 2013

GULBARGA DIST REPORTED CRIME

ಗುಲಬರ್ಗಾ ಗ್ರಾಮೀಣ ಠಾಣೆ:
ಅಪಘಾತ ಅಪರಿಚಿತ ಮೋ.ಸೈಕಲ್ ಸವಾರನ ಸಾವು

            ಇಂದು ದಿನಾಂಕ. 23-07-2013 ರಂದು 7-00 ಪಿ.ಎಂ.ಕ್ಕೆ ಅವರಾಧ ಸೀಮಾಂತರದ ದರ್ಮಾ ಹೊಡೆಲ ಇವರ ಹೊಲದ ಎದರುಗಡೆ ಘಟನಾ ಸ್ಥಳದಲ್ಲಿ  ಹಾಜರಿದ್ದ  ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ ವಯ;24 ವರ್ಷ ಜ್ಯಾತಿ;ಮುಸ್ಲಿಂ ಉ;ಕ್ರೋಜರ ಚಾಲಕ  ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ.ಇತನು ಕೋಟ್ಟ ಹೇಳಿಕೆ ಫಿರ್ಯಾದಿ ಸಾರಂಶ ವೆನೆಂದರೆ.
ದಿನಾಂಕ. 23-7-2013 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂ. ಎಂ.ಹೆಚ.13 ವಾಯ-189 ನೆದ್ದರ ಸವಾರನು ಗುಲಬರ್ಗಾದಿಂದ ಹುಮನಾಬಾದ ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕ್ರೋಜರ ಕೆ.ಎ.32 ಬಿ-2266 ನೆದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ  ಚಲಾಯಿಸುತ್ತಾ ಬಂದು ಮೋಟಾರ ಸೈಕಲ ಸವಾರನಿಗೆ ಅಪಘಾತಪಡಿಸಿದ ಪ್ರಯುಕ್ತ ಮೋ.ಸೈಕಲ್ ಸವಾರನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ ರವರು ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

        ಮೃತ ಮೋ.ಸೈಕಲ್ ಸವಾರನು ಅಪರಿಚಿತನಾಗಿದ್ದು ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಮೃತನು ಅಂದಾಜು  25 ರಿಂದ 30 ವರ್ಷ ವಯಸ್ಸಿನವನಿದ್ದು. JvÀÛgÀ 5 ಅಡಿ 6  ಇಂಚು, ಗೋಧಿ ಮೈಬಣ್ಣಾ, ಕೋಲು  ಮುಖ, ನೇರವಾದ  ಮೂಗು ತೆಳ್ಳನೆಯ ಸದೃಡ ಮೈಕಟ್ಟು ಹೊಂದಿದ್ದು, ಮೈಮೇಲೆ ) ಒಂದು ಬಿಳಿ ಮತ್ತು ಕಪ್ಪು ಚುಕ್ಕೆವುಳ ಬೂದು ಬಣ್ಣದ ಜಾಕೇಟ , 2) ಒಂದು ಬಿಳಿ ಲೈನ್ಸವುಳ್ಳ ಶರ್ಟ3)  ಒಂದು  ಬಿಳಿ ಬಣ್ಣದ ಬನಿಯನ 3) ಒಂದು ಮೆಹೆಂದಿ ಬಣ್ಣದ ಪ್ಯಾಂಟ  ಧರಿಸಿರುತ್ತಾನೆ.ಮೃತನ ಬಗ್ಗೆ ಮತ್ತು ವಾರಸುದಾರರ ಬಗ್ಗೆ  ಎನಾದರೂ ಮಾಹಿತಿ ಸಿಕ್ಕಿಲ್ಲಿ ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ 9480803553,9986487025, ಸಿಪಿಐ ಗ್ರಾಮೀಣ 9480803530, ಡಿ.ಎಸ್.ಪಿ. (ಗ್ರಾ) ಉಪವಿಭಾಗ ಅಥವಾ ಪೊಲೀಸ್ ಕಂಟ್ರೋಲ ರೂಮ 08472-263604 ಗೆ ಮಾಹಿತಿ ಸಲ್ಲಿಸಲು ಕೋರಲಾಗಿದೆ . 

23 July 2013

GULBARGA DIST REPORTED CRIMES

ಗುಲಬರ್ಗಾ ಗ್ರಾಮೀಣ ಠಾಣೆ:
ಅಪಘಾತ ಪ್ರಕರಣ :
ದಿನಾಂಕ:-22/07/2013 ರಂದು ದಿಗಂಬರಾಯ ತಂದೆ ಸಿದ್ದರಾಮ ಬಿಲ್ಲಕಾರ ಸಾ:ನಿಲ್ಲೂರ ಹಾಗೂ ಸಾಯಿಬಣ್ಣಾ, ಹಾಗೂ ಶ್ರೀಧರ3 ಜನರು ಹೀರೋ ಹೊಂಡಾ ಸ್ಪ್ಲೇಡರ ಮೋ.ಸೈಕಲ ನಂ ಕೆಎ-36 ಎಸ್-212 ನೇದ್ದರ ಮೇಲೆ ನೀಲೂರದಿಂದ ಗುಲಬರ್ಗಾಕ್ಕೆ ಹೋಗುವಾಗ ಮೋಟಾರ ಸೈಕಲನ್ನು ಶ್ರೀಧರ ಚಲಾಯಿಸುತ್ತಿದ್ದು ಸಾವಳಗಿ ಸಿಮಾಂತರದ ಕಂಕರ ಮಶೀನ ಹತ್ತಿರ ಬರುವಾಗ ಎದುರಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ ನಂ ಕೆಎ-32 ಟಿ-ಎ-2461 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ಅಡ್ಡಾ-ತಿಡ್ಡಿಯಾಗಿ ಚಲಾಯಿಸುತ್ತಾ ಬಂದು ಮೋ.ಸೈಕಲಕ್ಕೆ ಅಪಘತಪಡಿಸಿದ್ದರಿಂದ ಮೋಟಾರ ಸೈಕಲ ನಡೆಸುತ್ತಿದ್ದ ಶ್ರೀಧರನಿಗೆ ಟ್ರ್ಯಾಕ್ಟರನ ಟ್ರ್ಯಾಲಿ ಬಡಿದು ತಲೆಗೆ ಬಾರಿ ಪೆಟ್ಟಾಗಿ ಮೂಗಿನಿಂದ, ಬಾಯಿಯಿಂದ ರಕ್ತ ಸ್ರಾವವಾಗಿ ಸ್ದಳದಲ್ಲಿಯೇ ಮೃತಪಟ್ಟಿದ್ದು ದಿಗಂಬರಾಯ ಹಾಗು ಸಾಯಿಬಣ್ಣಾರಿಗೊ ಸಹ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಸದರಿ ಘಟನೆ ನಂತರ ಟ್ಯಾಕ್ಟರ ಚಾಲಕ ಟ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ
ಶಹಾಬಾದ ನಗರ ಠಾಣೆ:
ಅಪಘಾತ ಪ್ರಕರಣ :
ದಿನಾಂಕ:21/07/2013 ರಂದು ಪ್ರಕಾಶ ತಂದೆ ಲಕ್ಷ್ಮಣ ಚವ್ಹಾಣ ಸಾ:ಲಕ್ಷ್ಮೀಪುರ ವಾಡಿ ಈತನು ಗುಲಬರ್ಗಾಕ್ಕೆ ಹೋಗಿ ಬರುವ ಕುರಿತು ಬಜಾಜ್‌‌ ಡಿಸ್ಕವರ ಮೋ. ಸೈಕಲ ನಂ.ಕೆಎ-32 ಇಎ-8211 ನೇದ್ದರ ಮೇಲೆ ಹೋಗಿ ಮರಳಿ ಗುಲಬರ್ಗಾದಿಂದ ಲಕ್ಷ್ಮೀಪುರ ವಾಡಿಗೆ ಹೋಗುತ್ತಿರುವಾಗ ಮರತೂರಿನ ವಿಜ್ಞಾನೇಶ್ವರ ಭವನದ ಹತ್ತಿರ ಪ್ರಕಾಶನ ಮೋಟಾರ ಸೈಕಲಗೆ ಎದರುಗಡೆಯಿಂದ ಬರುತ್ತಿದ್ದ ಕ್ರುಶರ ಜೀಪ ನಂ.ಕೆಎ-32 ಎ-3036 ನೇದ್ದರ ಚಾಲಕ ಅತಿವೇಗವಾಗಿ ಶಹಾಬಾದ ಕಡೆಯಿಂದ ಬಂದು ಪ್ರಕಾಶನ ಮೋಟರ ಸೈಕಲಗೆ ಅಪಘಾತ ಪಡಿಸಿ ವಾಹನ ನಿಲ್ಲಿಸದೆ ವಾಹನದ ಸಮೇತ ಓಡಿ ಹೋಗಿ ಪ್ರಕಾಶನಿಗೆ ಅಲ್ಲಿದ್ದವರು 108 ಅಂಬುಲೇನ್ಸನಲ್ಲಿ ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದು ಪ್ರಕಾಶನ  ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಬರುತ್ತಿದ್ದು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟ ಬಗ್ಗೆ ಪ್ರಕಾಶನ ಸಹೋದರ ಕಾಶಿನಾಥ ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಳಲಾಗಿದೆ.



22 July 2013

GULBARGA DIST REPORTED CRIME

ಮಳಖೇಡ ಪೊಲೀಸ್ ಠಾಣೆ
ಅಪರಿಚಿತ ವ್ಯೆಕ್ತಿಯ ಶವ ಪತ್ತೆ:
            ದಿನಾಂಕ 21-07-2013 ರಂದು ಹೋಡಾ (ಬಿ) ಗ್ರಾಮದ ರಾಜೇಂದ್ರ ತಂ. ಸತ್ಯನಾರಾಯಣ ರವರು ಸೌತ ಇಂಡಿಯಾ ಸಿಮೇಂಟ್ ಕಂಪನಿಗೆ ಹೋಗುವ ರಸ್ತೆಯಲ್ಲಿರುವ ಮಾನಸಿಂಗ್ ರವರ ಹೊಲದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು ಆತನ ಮೈಮೇಲೆ ಯಾವುದೇ ಬಟ್ಟಗಳು ಇರುವುದಿಲ್ಲ ಹಾಗೂ ಶವದ ಎಡೆಯ ಭಾಗ ಮತ್ತು ಬಲಗೈ ಭುಜದಿಂದ ಅಂತೈವರೆಗೆ ಯಾವುದೋ ಕಾಡುಪ್ರಾಣಿಗಳು ತಿಂದಂತೆ ಕಾಣುತ್ತಿದ್ದು. ಮೃತನು ಅಂದಾಜು 50-60 ವರ್ಷದವನಿದ್ದು. ಸುಮಾರಿ 4-5 ದಿವಸಗಳ ಹಿಂದೆ ಮೃತಪಟ್ಟಿರಬಹುದೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

21 July 2013

GULBARGA DIST REPORTED CRIMES

ಸೇಡಂ ಪೊಲೀಸ್ ಠಾಣೆ:-
ಅಪಘಾತ ಪ್ರಕರಣ:
ದಿ:20-07-2013 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಕ್ರಿಷ್ಣಾ ತಂದೆ ಹಣಮಂತ ರಂಗವಾರ ಸಾ:ಮಾಧವಾರ ಅವರ ಚಿಕ್ಕಮ್ಮ ನೀಲಮ್ಮ ಗಂಡ ಬಸಪ್ಪ ರಂಗವಾರ ಇಬ್ಬರೂ ಚಿಕ್ಕಮ್ಮನ ತಾಯಿಯವರಿಗೆ ಮಾತನಾಡಿಸಲು ಮಾದವಾರದಿಂದ ಇವಣಿ ಗ್ರಾಮಕ್ಕೆ ಮೋಟಾರು ಸೈಕಲ್ ನಂ-ಕೆ..32.ವಿ.5644 ನೇದ್ದರ ಮೇಲೆ ಹೋಗುತ್ತಿರುವಾಗ ಬಟಗೆರಾ(ಬಿ) ಕ್ರಾಸ್ ಹತ್ತಿರ ಹಿಂದುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮೋಟಾರು ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಕ್ರಿಷ್ಣಾ ತಂದೆ ಹಣಮಂತ ಮತ್ತು ನೀಲಮ್ಮ ಇಬ್ಬರೂ ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು. ನೀಲಮ್ಮಳು ರೋಡಿನ ಬಲಭಾಗಕ್ಕೆ ಬಿದ್ದಿದ್ದರಿಂದ ಅವಳ ಮೈಮೇಲೆ ಲಾರಿ ಹಾಯ್ದು ಹೋಗಿದ್ದು ತನಗೆ ಎಡಗಣ್ಣಿನ ಹತ್ತಿರ, ಎಡಗಲ್ಲಕ್ಕೆ, ಎಡಗೈ ಮೊಣಕೈಗೆ, ಎರಡೂ ಮೊಣಕಾಲಿಗೆ ರಕ್ತ ಗಾಯ ಹಾಗೂ ಗುಪ್ತಗಾಯಗಳಾಗಿದ್ದು ಎದ್ದು ನೀಲಮ್ಮಳನ್ನು ನೋಡಲು ಎದೆಗೆ ಹಾಗೂ ಬೆನ್ನಿಗೆ ಭಾರಿ ರಕ್ತಗಾಯವಾಗಿ ಎರಡೂ ಕಾಲುಗಳು ಮುರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಅಷ್ಟರಲ್ಲಿ ಅಲ್ಲಿಯೇ ಇದ್ದ ಜನರು ಸಹ ಬಂದಿದ್ದು ಅಪಘಾತಪಡಿಸಿದ ಲಾರಿ ನಂಬರ್ ನೋಡಲಾಗಿ .ಪಿ.22.ಡಬ್ಲೂ.1599 ದ್ದು. ಅಪಘಾತಪಡಿಸಿದ ಲಾರಿ ಚಾಲಕನನ್ನು ಅಲ್ಲಿದ್ದ ಬಿಚ್ಚಾರೆಡ್ಡಿ ಮತ್ತು ಮಹೇಶ ರವರು ವಿಚಾರಿಸಲಾಗಿ ಆತನು ತನ್ನ ಹೆಸರು ಅಪ್ಸರ ತಂದೆ ಮಕ್ಬೂಲ್ ಸಾ:ರಾವಲಪಲ್ಲಿ ಎಂದು ತಿಳಿಸಿದ್ದು. ಅಷ್ಟರಲ್ಲಿ ಅಪಘಾತದ ವಿಷಯ ಗೊತ್ತಾಗಿ ಪೊಲೀಸರು ಸ್ಥಳಕ್ಕೆ ಬಂದಿದ್ದು ಲಾರಿ ಚಾಲಕ ತನ್ನ ಲಾರಿ ಬಿಟ್ಟು ಹೋಗಿದ್ದು. ಸದರಿ ಅಪಘಾತಪಡಿಸಿದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಲಲಾಗಿದೆ.


ಗುಲಬರ್ಗಾ ಗ್ರಾಮೀಣ ಠಾಣೆ:
ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:

 ದಿನಾಂಕ 20-07-2013 ರಂದು 10-30 .ಎಂ.ಕ್ಕೆ. ಗಂಟೆಗೆ ಫಿರ್ಯಾದಿ ರಾಜು ತಂದೆ ಶಾಂತಪ್ಪಾ ಕಡಗಂಚಿ ಮು:ಹೀರಾಪೂರ ತಾ;ಜಿ;ಗುಲಬರ್ಗಾ  ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಸಾರಂಶವೇನೆಂದರೆ  ಜಾಫರಬಾದ ಸೀಮೆಯ ತಮ್ಮ ತೋಟದ ಹೊಲದಲ್ಲಿ ತೋಗರಿ ಹೊಟ್ಟನ್ನು ದನಕ್ಕೆ ಹಾಕುವ ಸಲುವಾಗಿ ಗುಂಪಿ ಮಾಡಿ ಇಟ್ಟಿದ್ದು  ದಿನಾಂಕ. 20-7-2013 ರಂದು ಬೆಳಗಿನ 7-00 ಗಂಟೆ ಸುಮಾರಿಗೆ ಮನೆಯಿಂದ ದನಗಳಿಗೆ ತೊಗರಿ ಹೊಟ್ಟು ಒಯ್ಯುವ ಕುರಿತು ತಮ್ಮ ಹೊಲಕ್ಕೆ ಹೋಗಿ ತೊಗರಿ ಹೊಟ್ಟನ್ನು ಗೋಣಿ ಚಿಲದಲ್ಲಿ ತುಂಬವ ಕಾಲಕ್ಕೆ ಹೊಟ್ಟಿನ ಒಳಗಡೆ ಒಬ್ಬ ಮನುಷ್ಯನ ಶವದ ಮೊಳಕಾಲು ಕಾಣಿಸಿದ್ದು ಅದಕ್ಕೆ ಆತನು ಗಾಬರಿಹೊಂಡು  ಮನೆಗೆ ಹೋಗಿ ವಿಷಯ ತನ್ನ ತಂದೆ ಶಾಂತಪ್ಪಾ ಮತ್ತು ಸುಭಾಶ ಅವರಿಗೆ ತಿಳಿಸಿ ಎಲ್ಲರೂ ಕೂಡಿ ಪುನಾ; ಹೊಲಕ್ಕೆ ಬಂದು ನೋಡಲಾಗಿ ಹೊಟ್ಟಿನಲ್ಲಿ ಒಬ್ಬ ಗಂಡು ಮನುಷ್ಯನ  ಶವ ಇದ್ದು ಸದರಿ ಶವಪೂರ್ತಿ ಕೊಳೆತಿದ್ದು ಯಾವುದೆ ಗುರುತುಗಳು ಕಂಡು ಬರುತ್ತಿಲ್ಲಾ ಶವದ ಮೇಲೆ ಒಂದು ಕೆಂಪು ಬಣ್ಣದ ಶಾಂಡೋ ಬನಿಯಾನ, ಒಂದು ನಿಲಿ ಮತ್ತು ಬಿಳಿ ಬಣ್ಣದ ಚೌಕಡಿವುಳ ಲುಂಗಿ ಕಟ್ಟಿರುತ್ತದೆ. ಅಂದಾಜು 35-40 ವರ್ಷ ವಯಸ್ಸಿನ ಶವವು ಪೂರ್ತಿ ಕೊಳೆತಿದ್ದು. ಯಾರೋ ದುಷ್ಕರ್ಮಿಗಳುಯಾವುದೋ ಕಾರಣಕ್ಕಾಗಿ ಕೊಲೆ ಮಾಡಿ ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಸದರಿ ಶವವನ್ನು ತೊಗರಿ ಹೊಟ್ಟಿನ ಲ್ಲಿ ಮುಚ್ಚಿ ಹಾಕಿರುತ್ತಾರೆ. ಕೊಲೆ ಸುಮಾರು 15 ದಿವಸಗಳ ಹಿಂದೆ ಆಗಿರಬಹದು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.