POLICE BHAVAN KALABURAGI

POLICE BHAVAN KALABURAGI

13 September 2012

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ, ರಾಜಶೇಖರ ತಂದೆ ಛತ್ರಪ್ಪ ಪವಾಡಶೆಟ್ಟಿ ಉ|| ಲಾರಿ ಮಾಲಿಕ ಸಾ|| ಕಲ್ಯಾಣ ಗಡ್ಡಿ ಚಿಂಚೋಳಿ ರವರು ನಾನು ಬೀದರ ಜಿಲ್ಲೆಯ ಖಟಕ ಚಿಂಚೋಳಿಗೆ ದಿನಾಂಕ: 06-09-2012 ರಂದು ಹೋಗಿ ಪರ್ಸಿ ಕಲ್ಲುಗಳನ್ನು ಖಾಲಿ ಮಾಡಿಕೊಂಡು ಮಧ್ಯರಾತ್ರಿ 01-30 ಗಂಟೆಗೆ ಮರಳಿ ಚಿಂಚೋಳಿ ಪಟ್ಟಣಕ್ಕೆ ಬಂದು ಎಂದಿನಂತೆ ನನ್ನ ಅಶೋಕ ಲೇಲ್ಯಾಂಡ ಲಾರಿ ನಂ. ಕೆಎ.-32 ಬಿ.-2618 ನೇದ್ದನ್ನೂ ಚಿಂಚೋಳಿ ಪಟ್ಟಣದಲ್ಲಿರುವ (ಹಳೆಐ.ಬಿ.ಹತ್ತಿರವಿರುವ) ಭೋಗಾವತಿ ಪೆಟ್ರೋಲ್ ಬಂಕ ಎದುರುಗಡೆಯ ಚಿಂಚೋಳಿ ಚಂದಾಪೂರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಾನು ಮತ್ತು ಲಾರಿ ಚಾಲಕ  ನಾಗಮೂರ್ತಿ ಮನೆಗೆ ಹೋಗಿ ಮಲಗಿಕೊಂಡಿದ್ದು, ಅಂದೆ ದಿನಾಂಕ 06-09-2012 ರಂದು ಬೆಳಗ್ಗೆ 4-00 ಗಂಟೆ ಸುಮಾರಿಗೆ ನೋಡಲು ನಾವು ನಿಲ್ಲಿಸಿದ ಲಾರಿಯು ಆ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಲಾರಿಯ ಇಂಜಿನ ನಂ. ಸಿ.ಝೆಡ್.ಈ. 276350,ಮತ್ತು  ಚೆಸ್ಸಿಸ್ ನಂ. ಸಿ.ಜೆಡ್.ಈ. 387683 ಇರುತ್ತವೆ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.82/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ಸರ್ಕಾರಿ ಬಸ್ಸಿನ ಗಾಜು ಓಡೆದ ಬಗ್ಗೆ:
ಕಾಳಗಿ ಪೊಲೀಸ್ ಠಾಣೆ: ಶ್ರೀ ಗುರುನಾಥ ತಂದೆ ಶಿವಣ್ಣ ಹಡಪದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ಕಾಳಗಿ ಬಸ ಡಿಪೋ ರವರು ದಿನಾಂಕ: 13-09-2012 ರಂದು  1-00 ಪಿ.ಎಂ ಸುಮಾರಿಗೆ ಕೆಎ 32 ಎಫ್.1533 ನೇದ್ದನ್ನು  ಮಂಗಲಗಿಯಿಂದ ಸುಪರ ಮಾರ್ಕೆಟ ಗುಲಬರ್ಗಾಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ಮಾರ್ಗ ಮದ್ಯದ ಭರತನೂರ ಗ್ರಾಮದ ಹತ್ತಿರ ಅನೀಲ ಕುಮಾರ ತಂದೆ ನಾಗಿಂದ್ರಪ್ಪ ಬೆರ್ಜಿ ಸಾ: ಶ್ರೀನಿವಾಸ ಸರಡಗಿ ಬಸ್ಸ ಚಾಲಕ ಕಾಳಗಿ ಘಟಕ ಇತನು ಬಸ್ಸನ್ನು ತಡೆದು ನಿಲ್ಲಿಸಿ, ಇವತ್ತು ಯಾಕೇ ಬಸ್ಸು ಓಡುಸುತ್ತಿರಿ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ದೊಡ್ಡ ಗ್ಲಾಸಿಗೆ ಹೊಡೆದು ಅಂದಾಜು 10-12 ಸಾವಿರದಷ್ಟು ರೂಪಾಯಿಗಳಷ್ಟು ಹಾನಿ ಮಾಡಿದ್ದು, ಮತ್ತು ಚಿತ್ತಾಪೂರದಿಂದ ಕಾಳಗಿಗೆ ಬರುವ  ಬಸ್ಸ ನಂ ಕೆಎ 28 ಎಫ್-1613 ನೇದ್ದನ್ನು ಕೂಡ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ಗ್ಲಾಸಿಗೆ ಹೊಡೆದು ಅದಕ್ಕೂ ಸಹ ಅಂದಾಜು 10-12 ಸಾವಿರದಷ್ಟು ಹಾನಿ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 341, 504, 283, 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. ಮತ್ತು  ಆರೋಪಿತ ಅನೀಲಕುಮಾರ ಇತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ.

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಲಕ್ಷ್ಮಿಸಾಗರ ತಂದೆ ಹಣಮಂತಪ್ಪ ಚಿಣಮಗೇರಿ ಸಾ|| ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:12-09-2012 ರಂದು ರಾತ್ರಿ 10-30 ಗಂಟೆಗೆ ಊಟ ಮಾಡಿಕೊಂಡು, ನನ್ನ ಮನೆಯ ಮುಂದೆ ತಿರುಗಾಡುತ್ತಿದ್ದಾಗ, ಭಾಗೇಶ ತಂದೆ ಚಿದಂಬರ ಈತನ ಜೊತೆಗೆ ಶರಣು ತಂದೆ ಬಾಬುರಾವ ಸಂಗಡ ಇನ್ನೂ 4 ಜನರು ಕೂಡಿಕೊಂಡು ಬಂದು ಹೋದ ವರ್ಷ ನನ್ನ ವಿರುದ್ದ ಕೇಸು ಮಾಡಿದ್ದಿ, ಈಗ ನಿನ್ನ ಸುದ್ದಿ ಏನಂತದ ಅಂತ ಅಂದವನೇ ಕೈ ಮುಷ್ಠಿ ಮಾಡಿ ಮೂಗಿನ ಮೇಲೆ ಹೊಡೆದು ರಕ್ತಗಾಯಪಡಿಸಿದನು, ಅತನ ಜೊತೆಗಿದ್ದವರು  ಬಡಿಗೆಯಿಂದ ಹೊಡೆದು, ನೆಲಕ್ಕೆ ಕೆಡವಿ ಕಲ್ಲಿನಿಂದ ಹೊಡೆದು, ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಭಾಗೇಶ ಈತನು ನನ್ನ ಶರ್ಟದಲ್ಲಿದ್ದ ಮೊಬೈಲ್ ಹಾಗು 5000/-ರೂಪಾಯಿಗಳು ತೆಗೆದುಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ ಕುರಿತು:
ಸ್ಟೇಶನ ಬಜಾರ ಪೊಲೀಸ್ ಠಾಣೆ: ದಿನಾಂಕ:13-09-2012 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಿಬ್ಬಂದಿಯವರು ವೇತನ ರಿಷ್ಕರಣೆಗಾಗಿ ಹಾಗೂ ಕೈಗಾರಿಕಾ ಒಪ್ಪಂದ ಮಾಡಲು ಒತ್ತಾಯಿಸಿ ಮುಷ್ಕರ ಮಾಡುವರೆಂದು ಅಲ್ಲದೆ ಸಂಘಟನೆಗಳ ದುರಿಣರು ಸಂಸ್ಥೆಯ ನಿಷ್ಠಾವಂತ ಮತ್ತು ಪ್ರಮಾಣಿಕ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಅಡ್ಡಿಪಡಿಸುವ ಸಾಧ್ಯತೆ ಇರುವದರಿಂದ , ಅಲ್ಲದೆ ಸಂಸ್ಥೆಯ ಕೆಲಸ ಕಾರ್ಯಗಳನ್ನು ದಿನಾಂಕ:13-09-2012  ರಿಂದ ಸ್ಥಗಿತಗೊಳಿಸುವಂತೆ ಮತ್ತು  ಸಂಸ್ಥೆಯ ವಾಹನ ಹಾಗೂ ಆಸ್ತಿ ಪಾಸ್ತಿಗಳಿಗೆ ಹಾನಿ ಆಗುವ ಸಾದ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಧ್ರತಾ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಶ್ರೀ ಇನಾಯತ ಬಾಗವಾನ ವಿಭಾಗಿಯ ನಿಯಂತ್ರಣಾಧಿಕಾರಿ ...ಸಾ ಸಂಸ್ಥೆ ಗುಲಬಗಾ ವಿಭಾಗ-2  ಅಲ್ಲದೆ  .ಹೆಚ್.ನಾಗೇಶ ...ಸಾ. ಸಂಸ್ಥೆ ಗುಲಬರ್ಗಾ ವಿಭಾಗ -1 ಮತ್ತು ವಿಭಾಗಿಯ ನಿಯಂತ್ರಣ ಧಿಕಾರಿ ...ಸಾ ಸಂಸ್ಥೆ  ಗುಲಬರ್ಗಾ ವಿಭಾಗ -2 ರವರು ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋ ನಂ-01 ಮುಂದೆ ಹೋದಾಗ ಅಲ್ಲಿ  ನಾಲ್ಕು ಜನರು ಗುಂಪಾಗಿ ನಿಂತುಕೊಂಡಿದ್ದನ್ನು , ಗಮನಿಸಿ ಅವರನ್ನು ವಿಚಾರಿಸಿ ತಿಳಿದುಕೊಳ್ಳಲಾಗಿ ತಮ್ಮ ಹೆಸರು ಶೌಖತ ಅಲಿ ತಂದೆ ನಬಿಸಾಬ ಆಲೂರ || ಸಿ.ಪಿ. ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಮತ್ತು ವಕರ್ಸ ಫೇಡರೇಶನ್ ಜೆಂಟಿ ಕಾರ್ಯದರ್ಶಿ, ಮೋಹಲ್ಲಾ ಮುಲ್ಲಾ ತಂದೆ ದಾವಲಸಾಬ || ಸಿ.ಪಿ. ಜಿಲ್ಲಾ ಕಾರ್ಯದರ್ಶಿ ಸಾ|| ಆಳಂದ, ಶರಣಪ್ಪ ತಂದೆ ಮಲ್ಲಪ್ಪ ಯಕಂಚಿ ವರ್ಷ || ಕೆ.ಎಸ್.ಆರ್.ಟಿ.ಸಿ ಚಾಲಕ ಸಾ|| ಪ್ಲಾಟ ನಂ:23 ಆರ್,ಜಿ. ನಗರ ಗುಲಬರ್ಗಾ, ಸಿದ್ದಣ್ಣ ತಂದೆ ಭೀಮರಾಯ ರಾಜವಾಳ ವರ್ಷ || ಸಿ.ಪಿ. ಜಿಲ್ಲಾ ಸಹಾಯಕ ಕಾರ್ಯದರ್ಶೀ ಸಾ|| ಎಮ್..ಜಿ-31 ಹೌಸಿಂಗ್ ಬೋರ್ಡ ಕಾಲೋನಿ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ  ಅಂತಾ ಹೇಳಿದ್ದು  ನಾಳೆ ದಿನಾಂಕ:13-09-2012 ರಂದು ನಡೆಯುವ ಮುಷ್ಕರದ ಪ್ರಯುಕ್ತ  ಇವರು ಇಂದು ದಿನಾಂಕ:12-09-2012 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹೀಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಮುಂಜಾಗೃತ ಕ್ರಮ ಕುರಿತು  ಮೇಲ್ಕಂಡವರನ್ನು ವಶಕ್ಕೆ ತೆಗೆದುಕೊಂಡು ನಂತರ, ಕ.ರಾ.ರ.ಸಾ.ಸಂಸ್ಥೆ ವಿಭಾಗೀಯ ಕಛೇರಿಯ ಆವರಣದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯವರಾದ ಬಸವರಾಜ ತಂದೆ ಗುಂಡಪ್ಪ ಯಾಧವ || ಕೆ.ಎಸ್.ಆರ್.ಟಿ.ಸಿ ಡಿಪೋ ನಂ:2 ಮೇಕ್ಯಾನಿಕ್ ಸಾ|| ರೋಳ ವಾಡಿ ತಾ|| ಬಸವ ಕಲ್ಯಾಣ, ಗಣಪತರಾವ ತಂದೆ ಗುಂಡೆರಾವ ದೂದ ಕವಡೆ ವರ್ಷ || ಕೆ.ಎಸ್.ಆರ್.ಟಿ.ಸಿ ಡಿಪೋ ನಂ-2 ಹೇಡ್ ಮೇಕ್ಯಾನಿಕ್ ಸಾ|| ಪ್ಲಾಟ ನಂ:51 ನಿಯರ್ ಕೆ..ಬಿ ಪವರ ಹೌಸ ಶಿವಾಜಿ ನಗರ ಗುಲಬರ್ಗಾ, ಗುರು ತಂದೆ ಶೆಟ್ಟೆಪ್ಪಾ ದೋಡ್ಡಮನಿ ವರ್ಷ || ಕೆ.ಎಸ್.ಆರ್..ಟಿ,ಸಿ ಡಿಪೋ ನಂ:01 ರಲ್ಲಿ ಕಂಡೇಕ್ಟರ್  ಸಾ|| ಕಾಚಾಪೂರ ತಾ|| ಜೇವರ್ಗಿ ಅಂತಾ ಹೇಳಿದ್ದು, ನಾಳೆ ನಡೆಯಲ್ಲಿರುವ ಮುಷ್ಕರದ ಪ್ರಯುಕ್ತವಾಗಿ ಇವರು ಸಹ  ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹಿಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಶ್ರೀ ವಿಜಯಕುಮಾರ ಪಿ.ಎಸ್. (.ವಿ)  ಸ್ಟೇಷನ ಬಜಾರ ಪೊಲೀಸ ಠಾಣೆ  ಗುಲಬರ್ಗಾ ವರು ಸರಕಾರಿ ತರ್ಫೇಯಾಗಿ  ಠಾಣೆ ಗುನ್ನೆ ನಂ:117/2012 ಕಲಂ 107, 151 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.