POLICE BHAVAN KALABURAGI

POLICE BHAVAN KALABURAGI

13 June 2014

Gulbarga District Reported Crimes

ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 11-06-2014 ರಂದು ರಾತ್ರಿ 11-00 ಗಂಟೆಗೆ ಶ್ರೀ,ಸಿದ್ರಾಮಪ್ಪ ಎ.ಎಸ್.ಐ  ಮತ್ತುಶ್ರೀ.ಕತಲಸಾ ಸಿಪಿಸಿ 310 , ವೆಂಕಟ ಸಿಪಿಸಿ 329 ರವರೊಂದಿಗೆ ರಾತ್ರಿ ಗಸ್ತು ಮೇಲ್ವಿಚಾರಣೆ ಮತ್ತು ಹೆದ್ದಾರಿ ಗಸ್ತು ಮಾಡುತ್ತಾ ದಿನಾಂಕ:  12-06-2014 ರಂದು ಬೆಳೆಗ್ಗೆ 04-30 ಗಂಟೆಯ ಸುಮಾರಿಗೆ ಕುದುರೆಮುಖ ಹೊಡ್ಡಿನ ಮೂಲಕ ಮರಗುತ್ತಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಕುದುರೆಮುಖ ಹೊಡ್ಡಿನ ರಸ್ತೆಯಲ್ಲಿ ಗೊಬ್ಬರದ ಕಾಳುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು   ಗಮನಿಸುತ್ತಾ ಹಾಗೇಯೇ ಮರಗುತ್ತಿ ಕ್ರಾಸ್ ಹತ್ತಿರ ಬಂದಾಗ ಒಬ್ಬ ಕ್ರೂಜರ್ ಜೀಪ್ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಕ್ರೂಜರ್ ಜೀಪನ್ನು ಪಕ್ಕಕ್ಕೆ ಹಚ್ಚಿ ಜೀಪ್ ಕೆಟ್ಟಿರುವಂತೆ ಜೀಪಿನ ಬೈನೆಟ್ ತೆಗೆದು ದುರಸ್ತಿ ಮಾಡುವಂತೆ ನಟಿಸುತ್ತಿದ್ದಾಗ ನಾವು ಆತನ ಮೇಲೆ ಸಂಶಯಗೊಂಡು ಕ್ರೂಜರ್ ಜೀಪ್ ಒಳಗಡೆ ನೋಡಲಾಗಿ ಅದರಲ್ಲಿ ಒಬ್ಬನು ಕುಳಿತಿದ್ದು ಅಲ್ಲದೇ ಜೀಪಿನ ಹಿಂದುಗಡೆ ಸೀಟಿನಲ್ಲಿ ಎರಡು ಗೊಬ್ಬರದ ಚೀಲಗಳು ಇದ್ದವು. ಆಗ ನಾವು ಸಂಶಯಗೊಂಡು ಅವರನ್ನು ವಿಚಾರಿಸಲಾಗಿ ಅವರು ತಮ್ಮ ಹೆಸರು 1. ವಿಜಯ ತಂದೆ ಭೀಮರಾವ ಪವಾರ ಸಾ;ಶಖಾಪೂರ ತಾಂಡಾ ತಾ;ಆಳಂದ ಜಿ;ಗುಲಬರ್ಗಾ 2. ಜಗನ್ನಾಥ ತಂದೆ ಚಂದ್ರಪ್ಪ @ ಚಂದುರಾಯ ಶೇಳಕೆ ಸಾ:ಇಕ್ಕಳಕಿ ತಾ;ಆಳಂದ ಜಿ: ಗುಲಬರ್ಗಾ ಅಂತಾ ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಇನ್ನೂ ನಾಲ್ಕು ಜನರು ಓಡಿ ಹೋಗಿರುತ್ತಾರೆ. ಅವರನ್ನು ವಿಚಾರಿಸಲಾಗಿ ತಾವು ಆರು ಜನರು ಕೂಡಿಕೊಂಡು  ಕುದುರೆಮುಖ ಹೊಡ್ಡಿನ ಹತ್ತಿರ ಹೊಡ್ಡು ಏರುತ್ತಿದ್ದ ಲಾರಿಯನ್ನು ಹಿಂದಿನಿಂದ ಏರಿ ತಾಡಪತ್ರಿಯನ್ನು ಹರಿದು ಅದರಲ್ಲಿದ್ದ ಗೊಬ್ಬರದ ಚೀಲಗಳನ್ನು ಕಳ್ಳತನ ಮಾಡಿರುತ್ತೇವೆ ಅಂತಾ ತಿಳಿಸಿರುತ್ತಾರೆ .ಇಬ್ಬರನ್ನು ಹಿಡಿದು ದಸ್ತಗಿರಿ ಮಾಡಿದ್ದು, ಉಳಿದ ನಾಲ್ಕು ಜನರು ಓಡಿ ಹೋಗಿರುತ್ತಾರೆ. ಕಳ್ಳತನ ಮಾಡಿದ ಅಂದಾಜು 7425=00 ರೂಪಾಯಿ ಕಿಮ್ಮತ್ತಿನ ಒಟ್ಟು 11 ಗೊಬ್ಬರದ ಚೀಲಗಳು ಮತ್ತು  ಈ ಕಳ್ಳತನಕ್ಕೆ ಉಪಯೋಗಿಸಿದ ಒಂದು ಕ್ರೂಜರ್ ಜೀಪ್ ನಂಬರ್: ಎಂ.ಹೆಚ್. 23 -- 4493 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತು ಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷತನದಿಂದ ವಾಹನ ಚಲಾಯಿಸಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ  ಗೋವಿಂದ ಎ,ಎಸ್, ಪೆಟ್ರೊಲಿಂಗ ಕರ್ತವ್ಯ ಮಾಡುತ್ತಾ ಬರುತ್ತಿದ್ದಾಗ ನಾವದಗಿ ಕ್ರಾಸ ಹತ್ತಿರ  1.30 ಪಿ,ಎಮ್,ಕ್ಕೆ ಹೋದಾಗ ಅದೆ ವೇಳೆಗೆ ಹುಮನಾಬಾದ ಕಡೆಯಿಂದ ಒಬ್ಬ ಕ್ರೂಸರ ಚಾಲಕನು ತನ್ನ ವಾಹನದಲ್ಲಿ ಮಾನವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಪ್ರಯಾಣಿಕರನ್ನು ಒಳಗಡೆ  ಕೂಡಿಸಿಕೊಂಡು ತನ್ನ ವಶದಲ್ಲಿದ್ದ ವಾಹನವು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದಲ್ಲದೆ ನಾವು  ಕ್ರೋಜರ ಚಾಲಕನಿಗೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಕ್ರೋಜರ ಚಾಲಕ ನಿಲ್ಲಿಸದೆ ಹಾಗೆ ಮುಂದೆ ಹೋಗಿದ್ದಾಗ ನಮ್ಮ ಜೀಪಿನ ಸಹಾಯದಿಂದ ಮಹಾಗಾಂವ ಕ್ರಾಸದಲ್ಲಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಿದ್ದಾಗ ಅದು ಕ್ರೂಸರ ಜೀಪ ನಂ ಕೆ,, 39, 7260 ಅಂತಾ ಇದ್ದು ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದ್ದಾಗ ತನ್ನ ಹೆಸರು ನಾಗರಾಜ  ಸಾ|| ಶೆಳಗಿ ಅಂತಾ ತಿಳಿಸಿದ್ದು ಸದರಿ ವಾಹನದ ಪರಿಮೀಟ ಹಾಜರಪಡಿಸಿರುವುದಿಲ್ಲಾ ಮತ್ತು ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹಾಕಿ ಸ್ಟೇಜ ಕ್ಯಾರಿಯೆಜ ಮಾಡುತ್ತಾ ಪರಿಮೀಟ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ವಿ.ಸಿ..ಎಫ್. ಕಂಪನಿಯಲ್ಲಿ ಕಾರ್ಮಿಕ ಬಿದ್ದು ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಸುನಿತಾ ಗಂಡ ಲಕ್ಷ್ಮಣ ಇವರ ಗಂಡ ನಾದ ಲಕ್ಷ್ಮಣ ಇವರು ದಿನಾಂಕ 12-06-2014 ರಂದು ಪ್ರತಿದಿವಸದಂತೆ ಗಂಡ ಲಕ್ಷ್ಮಣ ಹಾಗೂ ಮಗ ದಿನೇಶ ಇಬ್ಬರೂ ಕೂಡಿ ವಿ.ಸಿ.ಎಫ್ ಕಂಪನಿಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ನಂತರ ನನ್ನ ಮಗ ಫೋನ ಮೂಲಕ ಅಳುತ್ತಾ ತಿಳಿಸಿದ್ದೇನೆಂದರೆ, 2ನೇ ಸಿಮೆಂಟ್ ಪ್ಲಾಂಟಿನ ಸಿಮೆಂಟಿನ ಸೈಲೊದಲ್ಲಿ ಬ್ಯಾಗಗಳನ್ನು ಬದಲಾಯಿಸುವ ಕುರಿತು ತಂದೆಯವರು ಕೆಲಸ ಮಾಡುವದಾಗ ಅಂದಾಜು 11-30 ಗಂಟೆಯ ಸುಮಾರಿಗೆ ಸಿಮೆಂಟ್ ಬ್ಯಾಗಿಗೆ ಇರುವ ಬೊಲ್ಟಿಗೆ ಪಾನಾ ಹಚ್ಚಿ ಬೊಲ್ಟ ಬಿಚ್ಚುವಾಗ ಪಾನಾ ಸ್ಲಿಪ್ ಆಗಿ ಆಯ ತಪ್ಪಿ ಹಿಂದೆ ಸಿಮೆಂಟ್ ಸೈಲೊ ಮೇಲಿಂದ ಕೆಳಗಡೆ ಬಿದ್ದಿದ್ದು ಆಗ ನಾನು ಗಾಭರಿಯಾಗಿ ಕೆಳಗಡೆ ಬಂದು ನೋಡಲು ನಮ್ಮ ತಂದೆಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.  ಸದರ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.