POLICE BHAVAN KALABURAGI

POLICE BHAVAN KALABURAGI

17 May 2017

KALABURAGI DIST REPORTED CRIMES

ಹಲ್ಲೆ ಪ್ರಕರಣ:
ಅಫಜಲಪೂರ ಠಾಣೆ: ದಿನಾಂಕ 16-05-2017 ರಂದು ಶ್ರೀ  ಇಬ್ರಾಹಿಮ್ ತಂದೆ ಅಲ್ಲಾಬಾಕ್ಷ ಚೌದರಿ ಸಾ|| ಕರಜಗಿ ಇವರು ಠಾಣೆಗೆ ಇಂದು ನಾನು ಹೈದ್ರಾ ರೋಡಿಗೆ ಇರುವ ಹೊಲಕ್ಕೆ ಹೊದಾಗ, ಹೊಲದಲ್ಲಿ ನಾನು ಬೆಳದ ಮೆಕ್ಕೆಜೋಳದ ಬೆಳೆಯನ್ನು ನಮ್ಮೂರಿನ ಸಿದ್ದಪ್ಪ ತಂದೆ ಭೀಮಶಾ ಲಾಳಸಂಗಿ ಹಾಗೂ ನಾಸಿರ್ ತಂದೆ ಮಹ್ಮದಸಾಬ ಚೌದರಿ ಇವರು ಕಿತ್ತುತ್ತಿರುವುದನ್ನು ನೋಡಿ  ನನ್ನ ಹೊಲದಲ್ಲಿನ ಮೆಕ್ಕೆಜೋಳ ಯಾಕೆ ಕಿತ್ತುತ್ತಿದ್ದಿರಿ, ಎಂದು ಕೇಳಿದ್ದಕ್ಕೆ ಸಿದ್ದಪ್ಪನು ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕಿತ್ತಬೇಡ ಅನ್ನೊದಕ್ಕೆ ನೀನ್ಯಾರು, ನೀನು ಹೊಲ ಪಾಲಿಗೆ ಮಾಡಿರುವೆ ಅಷ್ಟೆ, ಹೊಲ ನಿನ್ನದಲ್ಲ ಎನ್ನುತ್ತಾ ಸಿದ್ದಪ್ಪನ ತಮ್ಮಂದಿರಾದ ಪುಂಡಲಿಕ, ಪರಶುರಾಮ @ ಪರಮೇಶ್ವರ ಇವರು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದನು, ಪುಂಡಲಿಕ ಮತ್ತು ಸಿದ್ದಪ್ಪ ಬಡಿಗೆ ತಗೆದುಕೊಂಡು ಕಾಲಿಗೆ ಹೊಡೆದಿದ್ದು,  ಸಿದ್ದಪ್ಪ, ಪುಂಡಲಿಕ, ಪರಶುರಾಮ @ ಪರಮೇಶ್ವರ ಹಾಗೂ ನಾಸಿರ್ 04 ಜನರು ಕೂಡಿ ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು, ಕೈಯಿಂದ ಹೊಡೆಯುವುದು ಮಾಡುತ್ತಿದ್ದಾಗ ರೋಡಿಗೆ ಹೊಗುತ್ತಿದ್ದ ನಬಿಲಾಲ್ ತಂದೆ ಕಮಲಸಾಬ ಮಸಳಿ, ಸೈಪನಸಾಬ ತಂದೆ ಮೋದಿನಸಾಬ ಚೌದರಿ, ಶಾಬುದ್ದಿನ್ ತಂದೆ ಖಾಸಿಂಸಾಬ ಚೌದರಿ ಸಾ|| ಎಲ್ಲರೂ ಕರಜಗಿ ಇವರು ನೋಡಿ ನನಗೆ ಹೊಡೆಯುವುದನ್ನು ಬಿಡಿಸಿದ್ದು. ಆಗ ಸದರಿಯವರು ನನಗೆ ಜೀವ ಭಯ ಹಾಕಿ ಬಡಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ. ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಬಡಿಗೆಯಿಂದ ಹೊಡೆದು, ಕಾಲಿನಿಂದ ಒದ್ದು ಬಾರಿ ಗುಪ್ತಗಾಯಗಳು ಹಾಗೂ ಬಾರಿ ರಕ್ತಗಾಯ ಪಡಿಸಿ ಜೀವ ಭಯ ಹಾಕಿದ 1) ಸಿದ್ದಪ್ಪ ತಂದೆ ಭೀಮಶಾ ಲಾಳಸಂಗಿ 2) ಪುಂಡಲಿಕ ತಂದೆ ಭೀಮಶಾ ಲಾಳಸಂಗಿ 3) ಪರಶುರಾಮ @ ಪರಮೇಶ್ವರ  ತಂದೆ ಭೀಮಶಾ ಲಾಳಸಂಗಿ 4) ನಾಸೀರ್ ತಂದೆ ಮಹ್ಮದಸಾಬ ಚೌದರಿ ಸಾ|| ಎಲ್ಲರೂ ಕರಜಗಿ ಗ್ರಾಮ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ:  ದಿನಾಂಕ:14.05.2017 ರಂದು ಶ್ರೀ  ಮಂಜುನಾಥ ತಂದೆ ಮಲ್ಲಿಕಾರ್ಜುನ ಪಾಟೀಲ ಸಾ:ಕಣ್ಣೂರ ಕಣ್ಣೂರ ಗ್ರಾಮಕ್ಕೆ ಸ್ಪ್ಲೆಂಡರ ಮೋಟರ ಸೈಕಲ ನಂ.ಕೆಎ.32 ಇಎಫ್.1828 ನೇದ್ದನ್ನು ತೆಗೆದುಕೊಂಡು ಕಲಬುರಗಿಯಿಂದ ಕಣ್ಣೂರಗೆ ಹೋಗಿ ನಂತರ ಡೋರಜಂಬಗಾ ಗ್ರಾಮದಲ್ಲಿದ್ದ ಸಂಭಂದಿಕರ ಮದುವೆ ಕಾರ್ಯಕ್ರಮಕಕಾಗಿ ನಾನು ಮತ್ತು ನಮ್ಮೂರ ಬಲವಂತರಾಯ ಪಾಟೀಲ ಇವರು ಕೂಡಿಕೊಂಡು ಮೇಲ್ಕಂಡ ನನ್ನ ಗೆಳೆಯನ ಮೋಟರ ಸೈಕಲ ಮೇಲೆ ಕಣ್ಣೂರನಿಂದ ನಾನೆ ಮೋಟರ ಸೈಕಲನ್ನು ನಡೆಸಿಕೊಂಡು ಬಲವಂತರಾಯನಿಗೆ ಹಿಂದೆ ಕೂಡಿಸಿಕೊಂಡು ನಾನು ಮೋ.ಸೈಕಲ ನಡೆಸಿಕೊಂಡು ಬರುತ್ತಿರುವಾಗ ಕಮಲಾಪೂರನಿಂದಹುಮನಾಬಾದ ಕಡೆಗೆ ಹೋಗುವ ಹೆದ್ದಾರಿಯ ಹತ್ತಿರ ನಮ್ಮ ಹಿಂದಿನಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೋ.ಸೈಕಲಗೆ ಹಿಂದಿನಿಂದ ಡಿಕ್ಕಿ ಹೋಡೆದಿದ್ದರಿಂದ ನಾವು ಮೋ.ಸೈಕಲ ಸಮೇತ ರೋಡಿನ ಮೇಲೆ ಬಿದ್ದಾಗ ಕಾರ ಚಾಲಕನು ತನ್ನ ಕಾರನ್ನು ಬಲವಂತರಾಯನ ಮೈಮೇಲೆ ಹಾಯಿಸಿಕೊಂಡು ಮುಂದೆ ಹೋಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಮೋ.ಸೈಕಲಗೆ ಅಪಘಾತ ಪಡಿಸಿದ್ದು ಇರುತ್ತದೆ. ನಂತರ ನಾನು ಎದ್ದು ನೋಡಲು ನನಗೆ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ಬಲವಂತರಾನಿಗೆ ನೋಡಲು ಆತ ಸ್ಥಳದಲ್ಲೆ ಮೃತಪಟ್ಟಿದ್ದನು. ನಂತರ ಅಪಘಾತಪಡಿಸಿದ ಕಾರ ನೋಡಲು ಅದು ಮಾರುತಿ ಸುಝುಕಿ ವ್ಯಾಗನೋರ ನಂ.ಕೆಎ.29 ಎಮ್.5907 ನೇದ್ದು ಇದ್ದು. ಅದರ ಚಾಲಕನ ಹೆಸರು ರಾಘವೇಂದ್ರ ಮು:ಇಲಕಲ ಅಂತಾ ಗೋತ್ತಾಗಿದ್ದು. ನಂತರ ಅಪಘಾತಕ್ಕೆ ಒಳಗಾದ ಮತ್ತೊಂದು ಮೋಟರ ಸೈಕಲ ನೋಡಲು ಅದು ಹಿರೊಹೊಂಡಾ ಫ್ಯಾಶನ ಪ್ರೋ ನಂ.ಕೆಎ.32 ಇಎಮ್.7247 ಇದ್ದು. ಅದನ್ನು ನಡೆಸಿಕೊಂಡು ಬರುತ್ತಿದ್ದವನ ಹೆಸರು ಅಬ್ದುಲಸಾಬ ಹಾಗೂ ಹಿಂದೆ ಕುಳಿತವನ ಹೆಸರು ಸಮೀರ ಅಂತಾ ಗೋತ್ತಾಗಿದ್ದು. ಅಪಘಾತದಲ್ಲಿ ಅವರಿಗೂ ಕೂಡಾ ಅಲ್ಲಲ್ಲಿ ಗಾಯಗಳಾಗಿದ್ದು. ಸದರಿ ಅಪಘಾತಕ್ಕೆ ಕಾರಣನಾದ ಮಾರುತಿ ಸುಝುಕಿ ವ್ಯಾಗನೋರ ನಂ.ಕೆಎ.29 ಎಮ್.5907 ನೇದ್ದರ ಚಾಲಕ ರಾಘವೇಂದ್ರ ಮು:ಇಲಕಲ ಈತನ ಮೇಲೆ ಮುಂದಿನ ಕಾನೂನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂಋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.