POLICE BHAVAN KALABURAGI

POLICE BHAVAN KALABURAGI

23 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ವಿಶ್ವವಿದ್ಯಾಲಯ ಪೊಲೀಸ ಠಾಣೆ: ಶ್ರೀ ಕಲ್ಯಾಣಪ್ಪಾ ತಂದೆ ವೀರಬದ್ರಪ್ಪ ಗೋದಿ ಸಾ|| ಭೊಪಾಲ ತೆಗನೂರ ಗ್ರಾಮ ರವರು ನಾನು ನಮ್ಮ ತೋಟಕ್ಕೆ ಬೆಳಿಗ್ಗೆ ಹೋಗಿ ನೋಡಲಾಗಿ ಬೋರವೆಲ್ ದಿಂದ ಬೋರ್ಡಿಗೆ ಹಾಕಿದ 30 ಫೀಟ ಕೇಬಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ಪ್ರಕರಣ :

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಬಸಮ್ಮಾ ಗಂಡ ನಾಗಣ್ಣಾ ಹೊರಗಿನಮನಿ ರವರು ನನ್ನ ಮಗನಾದ ಅನೀಲ ಇತನೊಂದಿಗೆ ಸಲೀಮ ತಂದೆ ಮೊದಿನಸಾಬ ಇತನ ಮಗನಾಧ ಅಕ್ಬರನ ಜೋತೆಗೆ ಶಾಲೆಯಲ್ಲಿ ಜಗಳ ತೆಗೆದು ಬಾಯಿ ತಕರಾಗಿದ್ದು, ಸಲೀಮ ಇತನು ನಮ್ಮ ಮನಗೆ ಬಂದು ನಿನ್ನ ಮಗನು ನನ್ನ ಮಗನಿಗೆ ಹೊಡೆದಿದ್ದಾನೆ ಯಾಕೆ ಅಂತಾ ಕೇಳಿ ಕೈಯಿಂದ ಕಪಾಳಕ್ಕೆ ಹೊಡೆದು ಸೀರೆ ಹಿಡಿದು ಏಳೆದಾಡಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರಮ ಸೀಮೆ ಎಣ್ಣೆ ಮಾರಾಟ :

ರಾಘವೇಂದ್ರ ನಗರ ಪೊಲೀಸ್ ಠಾಣೆ:
ಶ್ರೀ ಲಿಂಬಾಜಿ ಅಹಾರ ನಿರೀಕ್ಷಕರು ವಾರ್ಡ ನಂ 9-11 (ಪಡಿತರ ಪ್ರದೇಶ) ಗುಲಬರ್ಗಾ ರವರು ನಾನು ದಿನಾಂಕ 23-08-2011 ರಂದು ಸಾಯಂಕಾಲ ಪರೀಶಿಲನೆ ಮಾಡಲು ಹೋದಾಗ ಮಲ್ಲಿಕಾರ್ಜುನ ರಂಗಂಪೇಠ ಲೈಸನ್ಸ್ ನಂ 149/87 ಸಾ|| ಚನ್ನವೀರ ನಗರ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ಇವರು ಚಿಲ್ಲರೆ ಸೀಮೆ ಎಣ್ಣೆ ವರ್ತಕರು ಇದ್ದು, ಬೋರಾಬಾಯಿ ನಗರ ಬಡಾವಣೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 233 ನೇದ್ದರ ಅನಿಲ ರಹಿತ ಪಡಿತರ ಚೀಟಿಗಳಿಗೆ ಸರಬರಾಜು ಮಾಡಬೇಕಾದ 2726 ಲಿಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 56,263-00 ರೂಪಾಯಿಗಳದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾ ದುರುಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಜೂಜಾಟ ಪ್ರಕರಣ :

ಸುಲೇಪೇಟ ಠಾಣೆ : ದಿನಾಂಕ: 22-08-2011 ರಂದು ಮಧ್ಯಾಹ್ನ ಗ್ರಾಮ ಬೇಟ್ಟಿ ಕುರಿತು ಪಿ.ಎಸ.ಐ ರವರು ಹೊಡೆಬಿರನಳ್ಳೀ ಹೋದಾಗ ಫಕೀರ ಕಟ್ಟೆಯ ಮೇಲೆ ಸಂಜಿವಕುಮಾರ ತಂದೆ ಹುಸನಪ್ಪಾ ಖೈತಾಪೂರ ಸಂಗಡ ಇನ್ನೂ 5 ಜನರು ಸಾ|| ಎಲ್ಲರೂ ಹೊಡೆಬಿರನಳ್ಳೀ ರವರು ಅಂದಾರ ಬಾಹರ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 930-00 ರೂ ಹಾಘು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ಷದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಸೇಡಂ ಪೊಲೀಸ ಠಾಣೆ: ದಿನಾಂಕ: 22-8 -2011 ರಂದು ಸಾಯಾಂಕಾಲ ದುಗನೂರ ಗ್ರಾಮದ ಸರಕಾರಿ ಹೊಸ ಶಾಲೆಯ ಕಟ್ಟದ ಹತ್ತಿರ 1] ಜಗನಾಥ ತಂದೆ ಮಾಣಿಕಪ್ಪ ಕಾವಲ್ ಸಂಗಡ 4 ಜನರು ಸಾ|| ದುಗನೂರ ಗ್ರಾಮದವರು ಇಸ್ಪೀಟ ಆಡುತ್ತಿದ್ದಾಗ ದಾಳಿ ಅವರಿಂದ ನಗದು ಹಣ 7500 -0 ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನ ಕಿರುಕುಳ :

ಗ್ರಾಮೀಣ ಠಾಣೆ:
ಶ್ರೀಮತಿ ಜ್ಯೋತಿಶ್ರೀ ಗಂಡ ನಾಗಪ್ಪಾ ಭಕ್ತಂಪಳ್ಳಿ ಉ
;ಕಿರಿಯ ಆರೋಗ್ಯ ಸಹಾಯಕಿ ವಿಳಾಸ; ನಾಗರಾಳ ತಾ:ಚಿಂಚೋಳಿ ಸದ್ಯ ತಾವರಗೇರ ತಾ: ಗುಲ್ಬರ್ಗಾ ರವರು ನನ್ನ ಮದುವೆಯು ನಾಗಪ್ಪಾ ಭಕ್ತಂಪಳ್ಳಿಯವರೊಂದಿಗೆ ಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮೂರು ವಷ್ದ ಮಗನಿರುತ್ತಾನೆ ನನಗೆ ಮದುವೆಯಾದ ಮೇಲೆ ನನಗೆ ಒಂದಿಲ್ಲಾ ಒಂದು ಕಾರಣ ಕೊಟ್ಟು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಾ ಬಂದಿರುತ್ತಾರೆ. ಒಂದು ವರ್ಷದಿಂದ ನನ್ನ ಗಂಡ ನಾಗಪ್ಪಾ ಭಕ್ತಂಪಳ್ಳಿ ಇವರು ನೌಕರಿಯಿಂದ ಅಮಾನತ್ತಿನಲ್ಲಿದ್ದು ಮನೆಯಲ್ಲಿಯೇ ಇರುತ್ತಾರೆ. ದಿನಾಲು ಹಣ ಕೋಡು ಅಂತಾ ಪೀಡಿಸುತ್ತಿರುತ್ತಾರೆ ದಿನಾಂಕ. 21-08-2011 ರಂದು ರವಿವಾರ ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ ನಾಗಪ್ಪಾ ಇವರು ಸರಾಯಿ ಕುಡಿಯುವದಕ್ಕೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದರು ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದಿದಕ್ಕೆ ಅವ್ಯಾಚವಾಗಿ ಬೈದು ಹೊಡೆಬಡೆ ಮಾಡಿ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.