POLICE BHAVAN KALABURAGI

POLICE BHAVAN KALABURAGI

15 March 2014

Gulbarga District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀ ಲಚ್ಚಪ್ಪ ತಂದೆ ಸಿದ್ರಾಮ ಜಮಾದಾರ ಸಾ|| ಅಫಜಲಪೂರ ರವರು ತಮ್ಮ ಶರಣಪ್ಪ ಇಬ್ಬರು ದಿನಾಂಕ 14-03-2014 ರಂದು ಸಾಯಂಕಾಲ 5:00 ಗಂಟೆಗೆ ತಮ್ಮ ಹಿರೊ ಹೊಂಡಾ ಸ್ಪೇಂಡರ ಮೋಟಾರ ಸೈಕಲ ನಂ ಕೆಎ-32 ವ್ಹಿ-9659  ನೇದ್ದರ ಮೇಲೆ ದುಧನಿಗೆ ಹೊಗಿರುತ್ತೆವೆ.     ನಾನು ಮತ್ತು ನನ್ನ ತಮ್ಮ ಶರಣಪ್ಪ ಇಬ್ಬರು ದುಧನಿಯಿಂದ ದ್ರಾಕ್ಷಿಗೆ ಹೊಡೆಯವುವ ಎಣ್ಣೆ ತಗೆದುಕೊಂಡು ದುಧನಿಯಿಂದ 8:00 ಪಿ ಎಮ್ ಕ್ಕೆ ಮರಳಿ ಅಫಜಲಪೂರಕ್ಕೆ ಹೊರಟಿರುತ್ತೆವೆಮೋಟಾರ ಸೈಕಲ ನನ್ನ ತಮ್ಮ ಶರಣಪ್ಪ ಈತನು ನಡೆಸುತ್ತಿದ್ದನು,  ಅಂದಾಜು ರಾತ್ರಿ 8:30 ಗಂಟೆ ಸಮಯಕ್ಕೆ ಅಫಜಲಪೂರದ  ದುಧನಿ ರೋಡಿಗೆ ಇರುವ ನಾಕೇದಾರ ಪೆಟ್ರೊಲ ಪಂಪ  ಹತ್ತಿರ ಬಂದಾಗ ಎದರುಗಡೆಯಿಂದ ಒಬ್ಬ ಮೋಟಾರ ಸೈಕಲ ಸಾವರನು ತನ್ನ ಮೋ/ಸೈ ಬೇಳಕನ್ನು ಕಣ್ಣೀಗೆ ಕುಕ್ಕುವಂತೆ ಹಾಕಿಕೊಂಡು ಅತಿವೇಗವಾಗಿ  ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬರುತ್ತಿದ್ದದನ್ನು ನೋಡಿ ನಾನು ನನ್ನ ತಮ್ಮನಿಗೆ ಸೈಡಿಗೆ ತಗೆದುಕೊಳ್ಳಲು ತಿಳಿಸಿದೆನುಆದರು ಎದುರಿನಿಂದ ಮೋ/ಸೈ ಚಾಲಕ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದನುಡಿಕ್ಕಿಯಿಂದ ನಾವು ಕೇಳಗೆ ಬಿದ್ದೆವುನಂತರ ನನ್ನ ತಮ್ಮನಿಗೆ ನೊಡಲಾಗಿ ನನ್ನ ತಮ್ಮನ ತಲೆಗೆ ಮತ್ತು ಹಣೆಗೆ ರಕ್ತಗಾಯ ಹಾಗೂ ಅವನ ಎದೆಗೆ ಮತ್ತು ಮೈ ಕೈಗೆ ಗುಪ್ತಗಾಯಗಳು ಆಗಿದ್ದವುಸದರಿ ನಮಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ ಸವಾರನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಾಬು ತಂದೆ ಬಿಲ್ಲು ಚವ್ಹಾಣ ಸಾ|| ಬಳೂರ್ಗಿ ತಾಂಡಾ ಎಂದು ತಿಳಿಸಿದನುಅಪಘಾತದಿಂದ  ನನಗೂ ಸಹ ಯಾವುದೆ ಗಾಯಗಳು ಆಗಿರುವುದಿಲ್ಲನಂತರ ನನ್ನ ತಮ್ಮನಾದ ಶರಣಪ್ಪ ಈತನನ್ನು ಗುಲಬರ್ಗಾದ ಸಿದ್ದಗಂಗಾ ಸಂಜೀವಿನಿ ಆಸ್ಪತ್ರೆಗೆ ಖಾಸಗಿ ಜೀಪಿನಲ್ಲಿ ಕಳಿಸಿಕೊಟ್ಟಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ :  ಶ್ರೀ ಸತೀಶಕುಮಾರ ತಂದೆ ಸದಾಶಿವ ಇವರು ದಿನಾಂಕ 13-02-2014 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿಯ ತನ್ನ ಮಾರುತಿ ಇಕೊ ವ್ಯಾನ ನಂಬರ ಕೆಎ-32 ಎನ್-3518 ನೇದ್ದನ್ನು ಆರ್.ಪಿ ಸರ್ಕಲದಿಂದ ಚಲಾಯಿಸಿಕೊಂಡು ಬಂದು ಕೇಂದ್ರ ಬಸ ನಿಲ್ದಾಣದ ಸಮೀಪ ರೋಡ ಮೇಲೆ ಶಾಂತಿ ನಗರ ಒಳಗೆ ಹೋಗುವ ರೋಡ ಕಡೆಗೆ ತಿರುಗಿಸುತ್ತಿದ್ದಾಗ ಎಮ್.ಎಸ್.ಕೆ ಮೀಲ ರೋಡ ಕಡೆಯಿಂದ ಲಾಲು ತನ್ನ ಕಾಂಕ್ರೇಟ ಮಿಕ್ಸರ ಟ್ಯಾಂಕರ ನಂ ಎಪಿ-05 ಟಿಟಿ-6421 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ವಾನಿಗೆ ಡಿಕ್ಕಿ ಪಡಿಸಿ ವ್ಯಾನ ಜಕಂಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 14-03-2014 ರಂದು ಮಧ್ಹಾನ 3.00 ಗಂಟೆಗೆ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಎಂ.ಎಸ್‌.ಕೆ ಮೀಲ್‌ ಬಡಾವಣೆಯ ಮದೀನಾ ಕಾಲೋನಿಯ ಗ್ರೀನ್‌ ಸರ್ಕಲ್‌ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಶಫೀಖಾನ ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿದ್ದು ಆತನಿಗೆ ಪಂಚರ ಸಮಕ್ಷಮದಲ್ಲಿ ಹಾಗೂ ಸಿಬ್ಬಂದಿಯವರೊಂದಿಗೆ ದಾಳಿಮಾಡಿ  ಆತನನ್ನು ಹಿಡಿದು ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1250/-ರೂ , 1 ಬಾಲಪೇನ ಹಾಗೂ,  2 ಮಟಕಾ ನಂಬರ ಬರೆದ ಚೀಟಿಗಳು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಠಾಣೆಗೆ ಬಂದು  ಸದರಿಯವನ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಆಸೀಫಾ ಸುಲ್ತಾನ ಗಂಡ ಅಬ್ದುಲ ಹಮೀದ ಸಾ;ಮನೆ ನಂ 7-1202/34 ಬಿಲಾಲಬಾದ ಕಾಲನಿ ಕೆ.ಬಿ.ಎನ್ ಕಾಲೇಜ ಹತ್ತಿರ ಇವರನ್ನು ಗುರು ಹಿರಿಯರು ಸೇರಿ ದಿನಾಂಕ 23.11.2008 ರಂದು ಯಾದುಲ್ಲಾ ಕಾಲನಿಯ ನಿವಾಸಿಯಾದ ಅಬ್ದುಲ ಹಮೀದ ಎಂಬುವವನ ಜೊತೆ ದರ್ಮದ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ 5 ಲಕ್ಷ ರೂಪಾಯಿ ವರದಕ್ಷಿಣೆ 7 ತೊಲೆ ಬಂಗಾರ ಬೆಳ್ಳಿ ಸಾಮಾನು,ಮೋಟಾರ ಸೈಕಲ ಮತ್ತು ಗೃಹಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿದ್ದು ಮದುವೆ ಆದ ಮೇಲೆ ಗಂಡನ ಮನೆಗೆ ನಡೆಯಲು ಹೋಗಿದ್ದು ಅವರಿಗೆ 4 ವರೆ ವರ್ಷದ ಗಂಡು ಮಗನಿದ್ದು ಇತ್ತಿಚೆಗೆ ಗಂಡನ ಮನೆಯಲ್ಲಿ ಗಂಡನ ಸಹೋದರಿಯರ ಮದುವೆ ಸಲುವಾಗಿ 5 ಲಕ್ಷ ರೂಪಾಯಿ ತರುವಂತೆ ಬೇಡಿಕೆ ಇಟ್ಟು ದಿನಾಲು ಬೈಯುವುದು ಹೊಡೆಬಡೆ ಮಾಡುವುದು ಮಾಡುತ್ತಾ ಬಂದು ಪಿರ್ಯಾದಿದಾರಳು ಅವಳ ಮಾತಿಗೆ ಬೆಲೆ ಕೊಡದೇ ಇದ್ದಾಗ ದಿನಾಂಕ 17.09.2013 ರಂದು ಬೆಳಗ್ಗೆ 9.30 ಗಂಟೆಯ ಸುಮಾರಿಗೆ ಖಾಸಗಿ ವೈದ್ಯರ ಹತ್ತಿರ ಕರೆದು ಕೊಂಡು  ಹೋಗಿ ಹೆದರಿಸಿ ಒತ್ತಾಯ ಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದು ಇದಾದ 3.4 ದಿವಸ ನಂತರ ಗಂಡ ಹಾಗೂ ಅತ್ತೆ ಮಾವ ಮತ್ತು ನಾದಿನಿಯರು ಸೇರಿ ಸರಿ ಉದ್ದೇಶಪುರ್ವಕವಾಗಿ ಜಗಳಕ್ಕೆ ಬಿದ್ದು ಹೊಡೆಬಡೆ ಮಾಡಿ ಕುತ್ತಿಗೆಗೆ ಒಡನಿ ಸುತ್ತಿ ಜಗ್ಗಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.