POLICE BHAVAN KALABURAGI

POLICE BHAVAN KALABURAGI

18 December 2015

Kalaburagi District Police

ಪತ್ರಿಕಾ ಪ್ರಕಟಣೆ

ದಿನಾಂಕ: 22-12-2015 ರಂದು ಕಲಬುರಗಿ ನಗರಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳು ಭಾರತ ಸರ್ಕಾರ ರವರು ಆಗಮಿಸುತ್ತಿದ್ದು ಅವರ ಸುರಕ್ಷತೆ ಹಿತದೃಷ್ಠಿಯಿಂದ ಕಲಬುರಗಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಕಂಡ ಮಾರ್ಗಗಳನ್ನು ಬದಲಾಯಿಸಲಾಗಿರುತ್ತದೆ.
       ಕಲಬುರಗಿ ಮಹಾನಗರದ ಸಾರ್ವಜನಿಕರಲ್ಲಿ ಕೋರುವದೇನೆಂದರೆ ದಿನಾಂಕ:22-12-2015 ರಂದು ಕಲಬುರಗಿ ನಗರಕ್ಕೆ ಗಣ್ಯಾತೀಗಣ್ಯರು ಆಗಮಿಸುತ್ತಿಲ್ಲಿದ್ದು,ಅವರ ಸುರಕ್ಷತೆ ಹಿತದೃಷ್ಠಿಯಿಂದ ನಗರದ ಈ ಕೆಳಕಂಡ ಮಾರ್ಗಗಳಲ್ಲಿನ ಸಂಚಾರವನ್ನು ಬದಲಾಯಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿರುತ್ತದೆ. ಸಾರ್ವಜನಿಕರು ಈ ಕೆಳಕಂಡ ಮಾರ್ಗಗಳಲ್ಲಿ ಆ ದಿನ ಬೆಳಿಗ್ಗೆ 10=00 ಗಂಟೆಯಿಂದ ಮಧ್ಯಾಹ್ನ 2=00 ಗಂಟೆವರೆಗೆ ಸಂಚರಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.

1)    ಹಳೆ ಎಸ್.ಪಿ. ಆಫೀಸ್ ಮಾರ್ಗ ದಿಂದ ಸರಕಾರಿ ಆಸ್ಪತ್ರೆಯ ಕ್ರಾಸ್ ಮಾರ್ಗದಲ್ಲಿ ಸಂಚರಿಸುವರು ಹಳೆ ಎಸ್.ಪಿ. ಆಫೀಸ್, ಕುಳಗೇರಿ ಕ್ರಾಸ್, ಬಿಗ್ ಬಜಾರ ಮುಖಾಂತರವಾಗಿ ಸಂಚರಿಸುವದು.
2)   ಸರಕಾರಿ ಆಸ್ಪತ್ರೆ ಕ್ರಾಸ್ ದಿಂದ ಆರ್.ಟಿ.ಓ. ಕ್ರಾಸ್ ದಿಂದ ರಾಜಾಪೂರ ಕಡೆಗೆ ಹೋಗುವವರು ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆ ಮಾರ್ಗದ ಮುಖಾಂತರವಾಗಿ ಸಂಚರಿಸಿ ರಾಜಾಪೂರ ಮತ್ತು ಶಹಾಬಾದ ಕಡೆಗೆ ಹೋಗ ಬಹುದಾಗಿರುತ್ತದೆ.
3)   ಸೇಡಂ, ಚಿತ್ತಾಪೂರ, ಮಳಖೇಡ ಕಡೆ ಸಂಚರಿಸುವ ವಾಹನಗಳು ಸಂತ್ರಾಸವಾಡಿ, ಎಮ್.ಜಿ.ರೋಡ . ರಿಂಗ ರೋಡ ,ಹಾಗರಗಾ ಕ್ರಾಸ್ , ಖಾಜಾ ಕೋಟನೂರ, ಶ್ರೀನಿವಾಸ ಸರಡಗಿ ಮುಖಾಂತರವಾಗಿ ಅಥವಾ ಬುದ್ದ ವಿಹಾರ ಗೇಟನಿಂದ ಕುಸನೂರ, ರಾಜಾಪೂರ ಮಾರ್ಗವಾಗಿ ನಗರದೋಳಗೆ ಬರುವದು ಮತ್ತು ಹೋಗುವದು  ಮಾಡಲು ಸೂಚಿಸಿದೆ.
4)   ಗುಬ್ಬಿ ಕಾಲೋನಿ, ಆದರ್ಶ ನಗರ, ಬಡೆಪೂರ, ಸುಂದರ ನಗರ, ಭರತ ನಗರ ತಾಂಡಾ ನಿವಾಸಿಗಳು ಎಮ್.ಜಿ. ರೋಡ ಮುಖಾಂತರವಾಗಿ ಸಂಚರಿಸುವದು.
5)  ಮೋ/ಸೈಕಲ್ ಸವಾರರು ಮತ್ತು ವಾಹನದ ಚಾಲಕರು ಜಯ ನಗರ, ಓಕಳಿ ಕ್ಯಾಂಪ, ಭಾಗ್ಯ ನಗರ, ಪೂಜಾ ಕಾಲೋನಿ, ಕುಸನೂರ ಮತ್ತು ಕ್ರೀಡಾಂಗಣ ಪಕ್ಕದಲ್ಲಿಯ ರೋಡ ದಿಂದ ನಗರದೋಳಗೆ ಸಂಚರಿಸುವದು.