POLICE BHAVAN KALABURAGI

POLICE BHAVAN KALABURAGI

22 May 2012

GULBARGA DIST REPORTED CRIMES


ದರೋಡೆ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ಹರ್ನಾಬಾಯಿ ಗಂ ದಿಃ ವಿಠಲ ಸರಾಫ ಸಾಃ ಮನೆ ನಂ 8-725 ಆಸೀಫ ಗಂಜ ಪೋರ್ಟರೋಡ ಗುಲಬರ್ಗಾರವರು ನಾನು ದಿನಾಂಕ 22.05.2012 ರಂದು 6-30 ಮುಂಜಾನೆ ನಮ್ಮ ಮನೆಯ ಮುಂದಿನ ಕಸ ಗುಡಿಸುತ್ತಿದ್ದಾಗ ಇಬ್ಬರು ಮೋಟಾರ ಸೈಕಲ ಮೇಲೆ ತಮ್ಮ ಮೊಟಾರ ಸೈಕಲ ನಿಲ್ಲಿಸಿ ನನಗೆ, ಇಲ್ಲಿ ಗುಪ್ತಾ ಟೀಚರ ಮನೆ ಎಲ್ಲಿ ಬರುತ್ತದೆ ಅಂತ ಕೇಳಿದರು. ನಾನು ಗೊತ್ತಿಲ್ಲ ಅಂತ ಹೇಳಿ ಮತ್ತೆ ನಾನು ಕಸ ಗುಡಿಸುತ್ತಿರುವಾಗ ಮೋಟಾರ ಸೈಕಲ ಹಿಂದುಗಡೆ ಕುಳಿತಿರುವನು ಕೆಳಗೆ ಇಳಿದು ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಲ್ಲಿರುವ 1 ½ ತೊಲೆ ಬಂಗಾದ ಚೈನ ಅಃಕಿಃ 30,000/- ರೂ. ಬೆಲೆಬಾಳುವ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಗ್ಯಾನಮ್ಮ ಗಂಡ ಗುಂಡಪ್ಪ ಹೊನ್ನೂರ ಸಾ: ಸರಡಗಿ ಹಾ||ವ||  ಎಸ್.ಜಿ ಕುಲಕರ್ಣಿ ಮನೆಯಲ್ಲಿ ಬಾಡಿಗೆ ನಿಸರ್ಗಾ ಹೊಟೆಲ ಎದರುಗಡೆ ಹಳೆ ಜೇವರ್ಗಿ ರಸ್ತೆ ಗಣೇಶ ನಗರ ಗುಲಬರ್ಗಾ ರವರು ನನ್ನ ಗಂಡನಾದ ಗುಂಡಪ್ಪಾ ಇತನು ಬಾಗಲಕೋಟ ಯು.ಕೆ.ಪಿ ಕಛೇರಿಯಲ್ಲಿ ಅಟೆಂಡರ ಕೆಲಸ ನಿರ್ವಹಿಸುತ್ತಿದ್ದು ಆಗಾಗ ಗುಲಬರ್ಗಾಕ್ಕೆ ಬಂದು ಹೋಗುತ್ತಿದ್ದನು. ನನ್ನ ಗಂಡನು ಚಂದಮ್ಮ ತಂದೆ ಯಮುನಪ್ಪ ಚಪ್ಪಟೆರ್ ಸಾ: ಡೊರನಳ್ಳಿ ಇವಳೊಂದಿಗೆ ಸುಮಾರು 20 ವರ್ಷಗಳಿಂದ ಅನೈತಿಕ ಸಂಬಂದ ಇಟ್ಟುಕೊಂಡಿದ್ದು ಚಂದಮ್ಮ ಇವಳು ಸುಮಾರು 5 ತಿಂಗಳ ಹಿಂದೆ ಮೃತಪಟ್ಟಿರುತ್ತಾಳೆ. ಅವಳಿಗೆ ದೇವಕಿ ಅಂತಾ ಮಗಳಿದ್ದು ಅವಳು ನಾಲ್ಕು ತಿಂಗಳಿಂದ ನನ್ನ ಗಂಡನ ಹೆಸರಿಗಿದ್ದ 6 ಎಕರೆ 16 ಗುಂಟೆ ಜಮೀನುದಲ್ಲಿ ನನಗೆ ನನ್ನ ತಾಯಿ ಚಂದಮ್ಮನ ಪಾಲು ಇರುತ್ತದೆ ನನಗೂ ಬೇಕು ಅಂತಾ  ಪರತಾಬಾದ ನಾಡ ತಹಸೀಲ್ದಾರ ಕಛೇರಿಯಲ್ಲಿ ದಾವೆ ಹೂಡಿರುತ್ತಾಳೆ.   ನನ್ನ ಮಗನಾದ ಮಲ್ಲಿಕಾರ್ಜುನ ಇತನಿಗೆ ಸುಮಾರು ದಿವಸಗಳಿಂದ ಮೈಯಲ್ಲಿ ಆರಾಮವಿಲ್ಲದರಿಂದ ದಿನಾಂಕ 19/05/2012 ರಂದು ನನ್ನ ಮಗನಿಗೆ ಕರೆದುಕೊಂಡು ನನ್ನ ತವರು ಮನೆಯಾದ ಬಿರಾಳ ತಾ: ಜೇವರ್ಗಿಗೆ ಹೋಗಿದ್ದೆನು. ನನ್ನ ಗಂಡ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ದಿನಾಂಕ 20/05/2012 ರಂದು ಪರತಾಬಾದ ನಾಡ ತಹಸೀಲ್ದಾರ ಕಛೇರಿಯಲ್ಲಿ ಪೇಶಿ ಇದ್ದ ಪ್ರಯುಕ್ತ ಬಾಗಲಕೋಟದಿಂದ ಗುಲಬರ್ಗಾಕ್ಕೆ ಬಂದು ಮಗಳಾದ ನಾಗಮ್ಮ ಇವಳ ಮನೆಯಲ್ಲಿ ರಾತ್ರಿ ಉಳಿದು ದಿನಾಂಕ 21/05/2012 ರಂದು ಅಳಿಯನಾದ ಶಾಮರಾವ ಇತನೊಂದಿಗೆ ಪರತಾಬಾದಕ್ಕೆ ಹೋಗಿ ಪೇಶಿ ಮುಗಿಸಿಕೊಂಡು ನಮ್ಮ ಮನೆಗೆ ಹೋರಟಿದ್ದೆನೆ ಮನೆಯಲ್ಲಿದ್ದು,  ಬೆಳಿಗ್ಗೆ ಬಾಗಲಕೋಟಕ್ಕೆ ಹೋಗುತ್ತೇನೆ ಅಂತಾ ತಿಳಿಸಿದ್ದನು. ದಿನಾಂಕ 22/05/12 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ನನ್ನ ಅಳಿಯನಾದ ಶಾಮರಾಯ ನಾಟಿಕಾರ ಇತನು ನನಗೆ ಪೋನ ಮಾಡಿ ಗುಂಡಪ್ಪ ಮಾವನ ಮೈ ಸುಟ್ಟಿದ್ದರಿಂದ ಮನೆಯ ಮುಂದಿನ ಪರ್ಸಿ ಕಲ್ಲುಗಳ ಮೇಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ಬಂದು ನೋಡಲು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ  ಮೇಲಿಂದ ಠಾಣಾ ಗುನ್ನೆ ನಂ 75/12 ಕಲಂ 302201 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾಜಿ ಕಾರ್ಯದರ್ಶಿ, ಸೇವಾ ಸಂಘಗಳಿಗೆ ಮೋಸ ಮಾಡಿ ಹಣ ದುರಪಯೋಗ ಪಡಿಸಿಕೊಂಡ ಬಗ್ಗೆ  
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಸುಭಾಶ್ಚಂದ್ರ ತಂದೆ ವೀರಪ್ಪಾ ಚೆಂಗಟಾ ಮಾಜಿ ಕಾರ್ಯದರ್ಶಿ ಸಾಃ ಮುನಿಮ ಸಂಘ ಗುಲಬರ್ಗಾ ಇವರು ಸೊಂತ ಗ್ರಾಮದ ವ್ಯವಸಾಯ ಸಹಕಾರ ಸೇವಾ ಸಂಘ ನಿಯಮಿತದಲ್ಲಿ(ವಿ.ಎಸ್.ಎಸ್.ಎಸ್.ಎನ್)  ಸುಮಾರು13ವರ್ಷಗಳಿಂದ(ದಿಃ01/10/1993 ರಿಂಧ 07/03/2006 ರವರೆಗೆ) ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಸಂಘಗಳಿಗೆ ಮತ್ತು ರೈತರಿಗೆ ಸಾಲಕೊಟ್ಟು ಸಾಲ ವಸೂಲಿ ಮಾಡಿದ ಬಗ್ಗೆ ರಸಿದಿ ಕೆಲವರಿಗೆ ಕೊಡದೇ ಅಮಾಯಕ ಜನರ ಹೆಸರ ಮೇಲೆ ಮತ್ತು ಸಂಘಗಳ ಹೆಸರುಗಳ ಮೇಲೆ ತಾನೆ ಸ್ವತಃ ಸಾಲ ಪಡೆದು ಬೇರೆಯವರ ಹೆಸರು ಬರೆದು ಜನರಿಗೆ ಸಾಲದ ಹಣ ಕೊಡಿಸುತ್ತೇನೆ ಅಂತಾ ಹೇಳಿ ಸಹಿ ಪಡೆದು ಸಂಘಗಳಿಂದ ಸುಮಾರು ಒಟ್ಟು 608242-00 ರೂ. (ಆರು ಲಕ್ಷ ಎಂಟು ಸಾವಿರದ ಎರಡುನೂರಾ ನಲವತ್ತೇರಡು ರೂಪಾಯಿ) ಸಾಲ ಪಡೆದು ತನ್ನ ಸ್ವಂತ ಬಳಕೆಗಾಗಿ ಹಣ ಬಳಸಿಕೊಂಡು ಬ್ಯಾಂಕಿಗೆ, ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿರುತ್ತಾನೆ ಅಂತಾ ಶ್ರೀ ಕ್ರೀಷ್ಣಮೂರ್ತಿ ತಂದೆ ಬಸಪ್ಪಾ ಉಃ ಗುಲಬರ್ಗಾ ಸಹಕಾರ ಸಂಘದ ನಿರೀಕ್ಷಕರು ಸಾಃ ಸಹಾಯಕ ನಿಬಂಧಕ ಗುಲಬರ್ಗಾ ಉಪ ವಿಭಾಗ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2012 ಕಲಂ 406, 409, 420, 468, 471 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಶಿವಕುಮಾರ ತಂದೆ ಸಿದ್ರಾಮಪ್ಪ ರಾಂಪೂರೆ ಸಾ: ಡೊಂಗರಗಾಂವ ಹಾ||ವ||ಭವಾನಿ ನಗರ ಸಿದ್ದಲಿಂಗೇಶ್ವರ ಗುಡಿಯ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ 21-05-2012 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಗಂಜ್ ದಿಂದ ಹುಮನಾಬಾದ ರಿಂಗ್ ರೋಡ ಕಡೆಗೆ ನನ್ನ ಮೋಟಾರ ಸೈಕಲ ನಂಬರ  ಕೆಎ 32 ಇಎ 3699 ನೇದ್ದರ ಮೇಲೆ ವೀರೇಶ ಈತನಿಗೆ ನನ್ನ ಹಿಂದೆ ಕೂಡಿಸಿಕೊಂಡು ಹೊರಟಾಗ ಲಾಹೋಟಿ ಪೆಟ್ರೋಲ್ ಪಂಪನಲ್ಲಿ ಪೆಟ್ರೋಲ್ ಹಾಕಿಸುವ ಕುರಿತು ಪೆಟ್ರೋಲ್ ಪಂಪ ಮುಂದಿನ ರೋಡಿನ ಮೇಲೆ ಮೋಟಾರ ಸೈಕಲ ಬಲಗಡೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 32 ಆರ್ 8220 ನೇದ್ದರ ಸವಾರನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮಹ್ಮದ ಮಗದುಮ ತಂದೆ ಮಹ್ಮದ ಇಬ್ರಾಹಿಂ ಹರಸೂರ  ಸಾ: ಹರಸೂರ ಗ್ರಾಮ  ಹಾ:ವ: ಆಜಾದಪೂರ ರೋಡ ಉಮರ ಕಾಲನಿ ಗುಲಬರ್ಗಾ  ರವರು ನನ್ನ ಅಣ್ಣ ಮತ್ತು ಅಣ್ಣನ ಮಗ ಕೂಡಿಕೊಂಡು  ದಿನಾಂಕ 21-05-12 ರಂದು ಮಧ್ಯಾಹ್ನ 4-15  ಗಂಟೆ ಸುಮಾರಿಗೆ  ಮೋಟಾರ ಸೈಕಲ ಕೆಎ 32 ಜೆ 3672 ನೇದ್ದರ ಮೇಲೆ ಹುಮನಾಬಾದ ರಿಂಗ ರೋಡ ಕಡೆಯಿಂದ ಬರುವಾಗ  ಮುಂದೆ ಹೊರಟ  ಟಾಟಾ ಎಸಿಇ ನಮೊನೆಯ ವಾಹನಕ್ಕೆ(ನಂಬರ ಗೊತ್ತಿಲ್ಲಾ ನೇದ್ದರ ) ಅಲಕ್ಷತನದಿಂದ  ನಡೆಸುತ್ತಾ ಹೋಗುವ ಕಾಲಕ್ಕೆ  ಯಾವುದೇ ಮುನ್ಸೂಚನೆ  ನೀಡದೇ ಟಾಟಾ ಎಸಿಇ ಚಾಲಕ ಒಮ್ಮಿಂದ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ ಟಾಟಾ ಎಸಿಇ ನಮೊನೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಹ್ಮದ ಅಬ್ದುಲ ನಬೀ  ಇತನಿಗೆ ಬಲಮೆಲಕಿನ, ಬಲಗಣ್ಣಿನ, ಭಾರಿ ರಕ್ತಗಾಯವಾಗಿ ತಲೆಗೆ ಒಳಪೆಟ್ಟಾಗಿದರಿಂದ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಮತ್ತು ಆತನ ಮಗನಾದ ಮಹಮದ ಅಬ್ದುಲ್ ನದೀಮ 4 ವರ್ಷ ಇತನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ: 162/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪ್ರಭು ತಂದೆ ಸಿದ್ರಾಮ ಹೊಸಮನಿ ಸಾ||ಬೋಮ್ಮನಹಳ್ಳಿ ತಾ: ಆಳಂದ ಜಿ: ಗುಲಬರ್ಗಾರವರು ನಾನು ದಿನಾಂಕ;20/5/2012 ರಂದು ಮಧ್ಯಾಹ್ನ 2:30 ಪಿಎಮ ಸುಮಾರಿಗೆ ಪಟ್ಟಣ್ಣ ಕ್ರಾಸ ಹತ್ತಿರ ಬಸ್ಸಿಗಾಗಿ ಕಾಯುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಂದು ಮಿನಿ ಲಾರಿ ನಂ ಎಮ್‌ಹೆಚ್ 16 ಎಇ 8326 ನೇದ್ದರ ಚಾಲಕ ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಗಾಯಗೊಳಿಸಿ ತನ್ನ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 163/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.